ಸೆಮಿಫೈನಲ್​ಗೂ ಮುನ್ನ ಭಾರತಕ್ಕೆ ‘ಫೈನಲ್’ ಮ್ಯಾಚ್ – Kannada News | India vs West indies Must Win Game in T20 World Cup 2026

T20 World Cup 2026: ಟಿ20 ವಿಶ್ವಕಪ್​ನ ಸೂಪರ್-8 ಸುತ್ತಿನ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಇಂಗ್ಲೆಂಡ್ ಹಾಗೂ ಸೌತ್ ಆಫ್ರಿಕಾ ತಂಡಗಳು ಸೆಮಿಫೈನಲ್​ಗೇರಿದರೆ, ಶ್ರೀಲಂಕಾ ಮತ್ತು ಝಿಂಬಾಬ್ವೆ ತಂಡಗಳು ಎಲಿಮಿನೇಟ್ ಆಗಿದೆ. ಇನ್ನು ಭಾರತ, ಪಾಕಿಸ್ತಾನ್, ವೆಸ್ಟ್ ಇಂಡೀಸ್ ಹಾಗೂ ನ್ಯೂಝಿಲೆಂಡ್ ತಂಡಗಳು ಸೆಮಿಫೈನಲ್ ರೇಸ್​ನಲ್ಲಿದೆ. ಆದರೆ ಇನ್ನುಳಿದಿರುವುದು ಕೇವಲ 2 ಮ್ಯಾಚ್​ಗಳು ಮಾತ್ರ.

‘ಫೈನಲ್’ ಮ್ಯಾಚ್

ಈ ಎರಡು ಪಂದ್ಯಗಳಲ್ಲಿ 4 ತಂಡಗಳ ಸೆಮಿಫೈನಲ್ ಭವಿಷ್ಯ ನಿರ್ಧಾರವಾಗಲಿದೆ. ಅದರಲ್ಲೂ ಮಾರ್ಚ್ 1 ರಂದು ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಸೂಪರ್-8 ಸುತ್ತಿನ ಕೊನೆಯ ಪಂದ್ಯದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್​ ತಂಡಗಳು ಮುಖಾಮುಖಿಯಾಗಲಿದೆ.

ಈ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಸೆಮಿಫೈನಲ್​ಗೆ ಪ್ರವೇಶಿಸಲಿದೆ. ಅಂದರೆ ಸೂಪರ್-8 ಸುತ್ತಿನ ಕೊನೆಯ ಪಂದ್ಯ​ ಭಾರತ ಮತ್ತು ವೆಸ್ಟ್ ಇಂಡೀಸ್​ ತಂಡಗಳಿಗೆ  ‘ಫೈನಲ್’ ಮ್ಯಾಚ್​ ಆಗಿ ಮಾರ್ಪಟ್ಟಿದೆ. ಇದರಲ್ಲಿ ಗೆದ್ದ ತಂಡವು ಸೆಮಿಫೈನಲ್​ಗೇರುವುದರಿಂದ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ರಣರೋಚಕ ಪೈಪೋಟಿಯನ್ನು ನಿರೀಕ್ಷಿಸಬಹುದು.

ಪಾಕಿಸ್ತಾನ್/ನ್ಯೂಝಿಲೆಂಡ್

ಮತ್ತೊಂದೆಡೆ ಪಾಕಿಸ್ತಾನ್ ಹಾಗೂ ಶ್ರೀಲಂಕಾ ನಡುವೆ ಇಂದು (ಫೆ.28) ನಡೆಯಲಿರುವ ಪಂದ್ಯದಲ್ಲಿ ಪಾಕಿಸ್ತಾನ್ ಹಾಗೂ ನ್ಯೂಝಿಲೆಂಡ್ ತಂಡಗಳ ಸೆಮಿಫೈನಲ್​ ಭವಿಷ್ಯ ನಿರ್ಧಾರವಾಗಲಿದೆ. ಅಂದರೆ ಶ್ರೀಲಂಕಾ ವಿರುದ್ಧ ಪಾಕಿಸ್ತಾನ್ ತಂಡ ಸೋತರೆ ನ್ಯೂಝಿಲೆಂಡ್ ತಂಡವು ನೇರವಾಗಿ ಸೆಮಿಫೈನಲ್​​ಗೇರಲಿದೆ.

ಒಂದು ವೇಳೆ ಪಾಕಿಸ್ತಾನ್ ತಂಡವು ಶ್ರೀಲಂಕಾ ನೀಡುವ ಗುರಿಯನ್ನು ನಿರ್ದಿಷ್ಟ ಓವರ್​ಗಳಲ್ಲಿ ಅಥವಾ ಇಂತಿಷ್ಟು ಎಸೆತಗಳನ್ನು ಉಳಿಸಿ ಚೇಸ್ ಮಾಡಿದರೆ ನೆಟ್ ರನ್ ರೇಟ್ ನೆರವಿನೊಂದಿಗೆ ಸೆಮಿಫೈನಲ್​ಗೆ ಅರ್ಹತೆ ಪಡೆಯಬಹುದು. ಹೀಗಾಗಿ ಪಾಕಿಸ್ತಾನ್ ಪಾಲಿಗೂ ಇಂದಿನ ಪಂದ್ಯವು ‘ಫೈನಲ್’ ಮ್ಯಾಚ್​ ಎಂದರೆ ತಪ್ಪಾಗಲಾರದು.

‘ಸೆಮಿ’ ಎದುರಾಳಿಗಳು

ಒಂದು ವೇಳೆ ಪಾಕಿಸ್ತಾನ್ ಅಥವಾ ನ್ಯೂಝಿಲೆಂಡ್ ತಂಡಗಳು ಸೆಮಿಫೈನಲ್​ಗೇರಿದರೆ ಗ್ರೂಪ್-1 ರಲ್ಲಿ ಅಗ್ರಸ್ಥಾನ ಪಡೆದಿರುವ ಸೌತ್ ಆಫ್ರಿಕಾ ತಂಡವನ್ನು ಎದುರಿಸಲಿದೆ.

ಹಾಗೆಯೇ ಭಾರತ ಅಥವಾ ವೆಸ್ಟ್ ಇಂಡೀಸ್ ತಂಡಗಳು ಸೆಮಿಫೈನಲ್​ಗೆ ಪ್ರವೇಶಿಸಿದರೆ ಗ್ರೂಪ್-2 ನಲ್ಲಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಇಂಗ್ಲೆಂಡ್ ತಂಡ ವಿರುದ್ಧ ಕಣಕ್ಕಿಳಿಯಬೇಕಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ಹೀನಾಯ ಸೋಲುಂಡ ಟೀಮ್ ಇಂಡಿಯಾ

ಹೀಗಾಗಿ ಇಂಗ್ಲೆಂಡ್ ಹಾಗೂ ಸೌತ್ ಆಫ್ರಿಕಾ ತಂಡಗಳು ತಮ್ಮ ಎದುರಾಳಿಗಳನ್ನು ಎದುರು ನೋಡುತ್ತಿದ್ದಾರೆ. ಅದರಂತೆ ಭಾರತ, ವೆಸ್ಟ್ ಇಂಡೀಸ್, ನ್ಯೂಝಿಲೆಂಡ್ ತಂಡಗಳಲ್ಲಿ ನಾಕೌಟ್ ಹಂತಕ್ಕೇರುವವರು ಯಾರು ಎಂಬದು ಇಂದು ಮತ್ತು ನಾಳೆ ನಿರ್ಧಾರವಾಗಲಿದೆ. ಇದರೊಂದಿಗೆ 20 ತಂಡಗಳೊಂದಿಗೆ ಶುರುವಾದ ಟೂರ್ನಿಯು 4 ತಂಡಗಳ ಕದನವಾಗಿ ಮಾರ್ಪಡಲಿದೆ. ಈ ನಾಲ್ಕು ತಂಡಗಳಲ್ಲಿ 2 ತಂಡವು ಮಾರ್ಚ್ 8 ರಂದು ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.

Source link

ಬೈಕ್​​ಗೆ ಲಾರಿ ಡಿಕ್ಕಿ: ಹಿಟ್​​ ಆ್ಯಂಡ್​​ ರನ್​​ಗೆ ಮೂವರು ಯುವಕರು ಬಲಿ

ರಾಯಚೂರು, ಫೆಬ್ರವರಿ 28: ಬೈಕ್​​ ಮತ್ತು ಟ್ರಕ್​ ನಡುವೆ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿದ್ದ ಮೂವರು ಯುವಕರು ಮೃತಪಟ್ಟಿರುವ ಆಘಾತಕಾರಿ ಘಟನೆ ರಾಯಚೂರು ನಗರದ ಬಸವೇಶ್ವರ ವೃತ್ತದಲ್ಲಿ ನಡೆದಿದೆ. ಮೊಹಮ್ಮದ್​​ ಅಲಿ(24), ನೂರ್ ಮೊಹಮ್ಮದ್(19) ಮತ್ತಯ ಫಯಾಜ್(26) ಮೃತ ದುರ್ದೈವಿಗಳಾಗಿದ್ದಾರೆ. ಮೃತ ಮೂವರೂ ರಾಯಚೂರುನಗರದ ಸುಖಾಣಿ ಕಾಲೋನಿಯ ನಿವಾಸಿಗಳು ಎಂಬುದು ತಿಳಿದುಬಂದಿದೆ.

ಬಸವೇಶ್ವರ ವೃತ್ತದಿಂದ ಚಂದ್ರಮೌಳೇಶ್ವರ ವೃತ್ತದ ಕಡೆ ತೆರಳುತ್ತಿದ್ದ ಬೈಕ್​​ಗೆ ಹೈದರಾಬಾದ್​​​​ ಮಾರ್ಗದಿಂದ ಮಂತ್ರಾಲಯದ ಕಡೆ ಹೊರಟಿದ್ದ ಟ್ರಕ್ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಬೈಕ್​​ನಲ್ಲಿದ್ದ ಮೂವರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಅಪಘಾತದ ಬಳಿಕ ಟ್ರಕ್ ಸಮೇತ ಚಾಲಕ ಪರಾರಿಯಾಗಿದ್ದು, ಸ್ಥಳಕ್ಕೆ ರಾಯಚೂರು ಟ್ರಾಫಿಕ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

(ಮಾಹಿತಿ ಅಪ್ಡೇಟ್​​ ಆಗುತ್ತಿದೆ)

Source link

ಮತ್ತೊಂದು ದೊಡ್ಡ ಅವಕಾಶ ಕಳೆದುಕೊಂಡ ದೀಪಿಕಾ ಪಡುಕೋಣೆ – Kannada News | Deepika Padukone’s Career Crossroads: Motherhood and Lost Film Opportunities

ನಟಿ ದೀಪಿಕಾ ಪಡುಕೋಣೆ ಅವರು ದೊಡ್ಡ ದೊಡ್ಡ ಅವಕಾಶವನ್ನು ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಅವರು ಹಾಕುವ ಷರತ್ತು ಎಂದರೂ ತಪ್ಪಾಗಲಿಕ್ಕಿಲ್ಲ. ಅವರು ಇತ್ತೀಚೆಗೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ‘ಕಲ್ಕಿ 2898 ಎಡಿ 2’ ಚಿತ್ರದಿಂದ ಹಾಗೂ ‘ಸ್ಪಿರಿಟ್’ ಚಿತ್ರದಿಂದ ಹೊರ ಹೋದರು. ಈಗ ಅವರಿಗೆ ಮತ್ತೊಂದು ಅವಕಾಶ ಕಳೆದು ಹೋಗಿದೆ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ದೀಪಿಕಾ ಪಡುಕೋಣೆ ಅವರು ಸಿನಿಮಾದಲ್ಲಿ ನಟಿಸಲು ತಮ್ಮದೇ ಆದ ಷರತ್ತು ಹೊಂದಿದ್ದಾರೆ. ಮಗುವನ್ನು ಸಾಕುವ ಜವಾಬ್ದಾರಿ ಅವರಿಗೆ ಇರುವುದರಿಂದ ಅವರು ದಿನದಲ್ಲಿ 8 ಗಂಟೆ ಮಾತ್ರ ಕೆಲಸ ಮಾಡೋದಾಗಿ ಹೇಳಿದ್ದಾರೆ. ಈ ಕಾರಣದಿಂದಲೇ ಅವರು ‘ಕಲ್ಕಿ 2898 ಎಡಿ’ ಹಾಗೂ ‘ಸ್ಪಿರಿಟ್ ಚಿತ್ರದಿಂದ ಹೊರ ಹೋದರು. ಅವರಿಗೆ ಈ ಮಧ್ಯೆ ಒಂದು ಹಾಲಿವುಡ್ ಆಫರ್ ಕೂಡ ಕೈ ತಪ್ಪಿತ್ತು.

ಅವರಿಗೆ ಇಂಗ್ಲಿಷ್​​ನ ಕಾಮಿಡಿ ಸೀರಿಸ್ ‘ವೈಟ್ ಲೋಟಸ್’ ಆಫರ್ ಬಂದಿತ್ತು. ಮಗು ಜನಿಸಿದ ತಕ್ಷಣವೇ ಈ ಆಫರ್ ಬಂದಿತ್ತು. ಹೀಗಾಗಿ, ಅವರಿಗೆ ಆಡಿಷನ್​​ಗೆ ತೆರಳು ಸಾಧ್ಯವಾಗಿಲ್ಲ. ಅಮೆರಿಕದ ಪ್ರಸಿದ್ಧ ಬ್ಲ್ಯಾಕ್ ಕಾಮಿಡಿ ಸರಣಿ ಇದಾಗಿದೆ. ಮೈಕ್ ವೈಟ್ ಇದನ್ನು ನಿರ್ದೇಶನ ಮಾಡುತ್ತಿದ್ದಾರೆ.

ದೀಪಿಕಾ ಪಡುಕೋಣೆ ಮಗು ಜನಿಸುವುದಕ್ಕೂ ಮೊದಲು ಯಾವುದೇ ಷರತ್ತು ಇಲ್ಲದೆ ಕೆಲಸ ಮಾಡುತ್ತಾ ಸಾಗುತ್ತಿದ್ದರು. ಅವರು ಈಗ ಅಲ್ಲು ಅರ್ಜುನ್ ಹಾಗೂ ಅಟ್ಲಿ ಸಿನಿಮಾಗೆ ನಾಯಕಿ ಆಗಿದ್ದಾರೆ. ಪ್ಲ್ಯಾನ್ ಪ್ರಕಾರವೇ ಎಲ್ಲವೂ ನಡೆದರೆ ದೀಪಿಕಾ ಅವರು ಈ ಚಿತ್ರದ ಮೂಲಕ ದೊಡ್ಡ ಕಂಬ್ಯಾಕ್ ಮಾಡಲಿದ್ದಾರೆ. ಅವರು ದೊಡ್ಡ ಬ್ರೇಕ್ ತೆಗದುಕೊಂಡಿದ್ದು, ಅವರಿಗಾಗಿ ಎಲ್ಲರೂ ಕಾಯುತ್ತಿದ್ದಾರೆ.

ಇದನ್ನೂ ಓದಿ: ಪೌರಾಣಿಕ ಸಿನಿಮಾನಲ್ಲಿ ದೀಪಿಕಾ ಪಡುಕೋಣೆ, ನಾಯಕ ಯಾರು?

ಎಲ್ಲ ನಟಿಯರ ಕರಿಯರ್​​ನಲ್ಲೂ ಏರಿಳಿತ ಸಾಮಾನ್ಯ. ಅದೇ ರೀತಿ ದೀಪಿಕಾ ಪಡುಕೋಣೆ ಜೀವನದಲ್ಲೂ ಬಂದಿದೆ ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ. ಅವರು ಸದ್ಯ ಮಗುವಿನ ಆರೈಕೆಯಲ್ಲಿ ಬ್ಯುಸಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೀಗ ಹಾಕಿದ್ದ ಮನೆಯಿಂದ ಬರ್ತಿತ್ತು ದುರ್ನಾಥ: ಬಾಗಿಲು ತೆರೆದು ನೋಡಿದ್ರೆ ಕಂಡಿದ್ದು ಯುವಕನ ಬೆತ್ತಲೆ ಶವ! – Kannada News | Murder Mystery: Unidentified Decomposed Body Found in Rental Home; Tenants Missing

ಶವ ಪತ್ತೆಯಾಗಿರುವ ಮನೆImage Credit source: Tv9 Kannada

ನೆಲಮಂಗಲ, ಫೆಬ್ರವರಿ 28: ಯುವಕನೋರ್ವನ ಕೈಕಾಲು ಕಟ್ಟಿ, ಬಾಯಿಗೆ ಟೇಪ್ ಸುತ್ತಿ, ರಾಡ್​​ನಿಂದ ಹಲ್ಲೆ ಮಾಡಿದ್ದಲ್ಲದೆ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬಾಗಲಗುಂಟೆ ಪೊಲೀಸ್ ಠಾಣಾವ್ಯಾಪ್ತಿಯ ವಿಜಯಲಕ್ಷ್ಮೀ ಬಡಾವಣೆಯಲ್ಲಿ ನಡೆದಿದೆ. ನಟರಾಜ್​​ ಎಂಬವರು ಬಾಡಿಗೆಗೆ ನೀಡಿದ್ದ ಮನೆಯಿಂದ ದುರ್ನಾಥ ಬರುತ್ತಿದ್ದ ಹಿನ್ನೆಲೆ ಪರೀಕ್ಷಿಸಿದಾಗ ನಾಲ್ಕೈದು ದಿನಗಳ ಹಿಂದೆಯೇ ಕೊಲೆ ಮಾಡಿರುವ ಕಾರಣ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಮೃತ ವ್ಯಕ್ತಿ ಯಾರೆಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

ಮೃತದೇಹ ಪತ್ತೆಯಾಗಿರುವ ಈ ಮನೆಯನ್ನು ಮಾಲಿಕ ನಟರಾಜ್​​ ಅವರ ಬಳಿ ಎರಡು ತಿಂಗಳ ಹಿಂದೆ ಮೋಹನ್ ಕೃಷ್ಣ ಮತ್ತು ಊರ್ವಶಿ ಎಂಬುವವರು ಬಾಡಿಗೆ ಗೆ ಪಡೆದಿದ್ದರು. ಊರ್ವಶಿ ನಾನು ಸಿನೆಮಾ ಸಹ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದೆನೆ ಅಂತ ಮನೆ ಮಾಲಿಕರ ಬಳಿ ಪರಿಚಯಿಸಿಕೊಂಡಿದ್ದಳು ಎನ್ನಲಾಗಿದೆ. ಬಾಡಿಗೆ ಸಂಬಂಧ ಇನ್ನೇನು ಅಗ್ರಿಮೆಂಟ್ ಮಾಡಿಸಬೇಕು ಅಂದುಕೊಳ್ಳುವಷ್ಟರಲ್ಲಿ ಮುಂದಿನ ತಿಂಗಳು ಮನೆ ಖಾಲಿ ಮಾಡಿಬಿಡ್ತೀವಿ ಎಂದು ಇವರು ತಿಳಿಸಿದ್ದರಂತೆ. ಹೀಗಾಗಿ ಮತ್ತೇನಕ್ಕೆ ಅಗ್ರಿಮೆಂಟ್​​ ಮಾಡಿಸೋದು ಎಂದು ಭಾವಿಸಿ ಮನೆ ಮಾಲಿಕ ನಟರಾಜ್​​ ಕೂಡ ಸುಮ್ಮನಾಗಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಜ್ಯೋತಿಷಿ ಭವಿಷ್ಯಕ್ಕೆ ಹೆದರಿ ಟೆಕ್ಕಿ ಆತ್ಮಹತ್ಯೆ? ಹಸೆಮಣೆ ಏರಬೇಕಿದ್ದವಳ ದಾರುಣ ಅಂತ್ಯ

ಆ ಬಳಿಕ ನಟರಾಜ್​​ ಮನೆ ಬಳಿ ಬಂದಾಗೆಲ್ಲ ಬಾಗಿಲಿಗೆ ಬೀಗ ಹಾಕಿರೋದು ಕಂಡುಬರುತ್ತಿತ್ತು. ಈ ನಡುವೆ ಅಕ್ಕಪಕ್ಕದ ಮನೆಯವರು ನಟರಾಜ್ ಮಗನಿಗೆ ಫೋನ್ ಮಾಡಿ ನಿಮ್ಮ ಮನೆಯಿಂದ ಏನೋ ಕೆಟ್ಟ ವಾಸನೆ ಬರ್ತಿದೆ ಎಂದು ತಿಳಿಸಿದ್ದಾರೆ.  ರವಿಕಿರಣ್ ಮನೆಗೆ ಬಂದು ನೋಡಿದಾಗ ಕೊಲೆಯಾದ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತ ಕೂಡಲೇ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಭೇಟಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕೊಲೆಗೂ ಮುನ್ನ ಮನೆಯಲ್ಲಿ ಪಾರ್ಟಿ ನಡೆದಿರುವ ಬಗ್ಗೆಯೂ ಸಂಶಯ ವ್ಯಕ್ತವಾಗಿದ್ದು, ಮೃತದೇಹವನ್ನು ಶಿಫ್ಟ್​​ ಮಾಡಲಾಗಿದೆ.

ಇನ್ನು ಕೊಲೆಯಾಗಿರುವ ವ್ಯಕ್ತಿ ಯಾರೆಂಬ ಬಗ್ಗೆ ಗುರುತು ಪತ್ತೆಯಾಗಿಲ್ಲ. ಘಟನೆ ನಡೆದು ನಾಲ್ಕೈದು ದಿನಗಳಾಗಿರುವ ಹಿನ್ನೆಲೆ ದೇಹ ಗುರುತು ಸಿಗದಷ್ಟು ಕೊಳೆತಿದ್ದು, ಈ ವ್ಯಕ್ತಿ ಯಾರೆಂಬುದು ಗೊತ್ತಾಗಿಲ್ಲ. ಮನೆ ಬಾಡಿಗೆಗೆ ಪಡೆದಿದ್ದ ಊರ್ವಶಿ ಮತ್ತು ಮೋಹನ ಕೃಷ್ಣ ಗಂಡ ಹೆಂಡತಿನಾ ಎಂಬ ಅನುಮಾನ ಕೂಡ ಇದ್ದು, ಕೊಲೆಯಾದ ವ್ಯಕ್ತಿ ಯಾರು ಎಂಬ ಪ್ರಶ್ನೆಗೆ ಬೀಗ ಹಾಕಿಕೊಂಡು ಹೋಗಿರುವ ಇವರ ಬಂಧನದ ನಂತರವೇ ಉತ್ತರ ಸಿಗಬೇಕಿದೆ.

ಮಂಜುನಾಥ್ ಟಿವಿ9 ನೆಲಮಂಗಲ

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Bengaluru Air Quality: ಬೆಂಗಳೂರಿನೊಂದಿಗೆ ಬೆಳಗಾವಿಯ ಏರ್ ಕ್ವಾಲಿಟಿಯಲ್ಲಿಯೂ ಕುಸಿತ! – Kannada News | Bangalore Air Pollution Crisis: Bengaluru and Belagavi’s Air quality is dropping fast

ಬೆಂಗಳೂರಿನೊಂದಿಗೆ ಬೆಳಗಾವಿಯ ಏರ್ ಕ್ವಾಲಿಟಿಯಲ್ಲಿಯೂ ಕುಸಿತ!

ಬೆಂಗಳೂರು, ಫೆಬ್ರವರಿ 28: ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಹಲವೆಡೆಯ ಏರ್ ಕ್ವಾಲಿಟಿ (Bengaluru Air Quality) ಹದಗೆಡುತ್ತಿದ್ದು, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ನಗರಗಳ ಗಾಳಿಯ ಗುಣಮಟ್ಟ, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಇಂದೂ ಸಹ ಬೆಳಗಾವಿ, ಕಲಬುರ್ಗಿ ಸೇರಿದಂತೆ ವಿವಿಧೆಡೆ ಗಾಳಿಯ ಗುಣಮಟ್ಟ ನೆಲಕಚ್ಚಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 172ಕ್ಕೆ ತಲುಪಿದೆ. ಹಲವು ದಿನಗಳಿಂದ ವಿಪರೀತ ಏರಿಕೆ ಕಾಣುತ್ತಿರುವ ಬೆಳಗಾವಿಯ ಏರ್ ಕ್ವಾಲಿಟಿ ಇಂದು 156 ಆಗಿದ್ದು, 200ರ ಗಡಿ ತಲುಪಿರುವುದು ಆತಂಕಕಾರಿಯಾಗಿದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –172
  • ಮಂಗಳೂರು-106
  • ಮೈಸೂರು –143
  • ಬೆಳಗಾವಿ – 156
  • ಕಲಬುರ್ಗಿ-126
  • ಶಿವಮೊಗ್ಗ – 85
  • ಬಳ್ಳಾರಿ – 154
  • ಹುಬ್ಬಳ್ಳಿ- 132
  • ಉಡುಪಿ –100
  • ವಿಜಯಪುರ –126

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಧುರಂಧರ್ 2 Vs ಟಾಕ್ಸಿಕ್; ಯಶ್-ರಣವೀರ್ ಸಿಂಗ್ ಪೈಕಿ ಯಾರ ಸಿನಿಮಾ ಬಜೆಟ್ ಹೆಚ್ಚು? – Kannada News | Yash vs Ranveer: Toxic and Dhruvandhar 2 Box Office Clash! Who Wins

ಧುರಂಧರ್ 2 Vs ಟಾಕ್ಸಿಕ್ (Toxic) ಟಾಕ್ ಜೋರಾಗಿದೆ. ರಣವೀರ್ ಸಿಂಗ್ ಅವರ ‘ಧುರಂಧರ್ 2’ ಚಿತ್ರ ಮತ್ತು ಯಶ್ ಅವರ ‘ಟಾಕ್ಸಿಕ್’ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಪರಸ್ಪರ ಕ್ಲ್ಯಾಶ್ ಆಗುತ್ತಿವೆ. ಈ ಎರಡು ಚಿತ್ರಗಳಲ್ಲಿ ಯಾವುದು ಹೆಚ್ಚು ಹಣ ಗಳಿಸುತ್ತದೆ ಎಂಬ ಕುತುಹೂಲ ಮೂಡಿದ್ದು, ಬಿಡುಗಡೆಯಾದ ಬಳಿಕ ಆ ಬಗ್ಗೆ ತಿಳಿಯಲಿದೆ. ಹಾಗಾದರೆ ಯಾವ ಚಿತ್ರದ ಬಜೆಟ್ ಹೆಚ್ಚಿದೆ? ಆ ಬಗ್ಗೆ ಇಲ್ಲಿ ನೋಡೋಣ.

ಮಾರ್ಚ್ ತಿಂಗಳು ಸಿನಿಮಾ ಪ್ರಿಯರಿಗೆ ಸುಗ್ಗಿಯೇ ಸರಿ. ಏಕೆಂದರೆ ಮಾರ್ಚ್ 19ರಂದು ಎರಡು ದೊಡ್ಡ ಚಿತ್ರಗಳು ಬಿಡುಗಡೆಯಾಗಲಿವೆ. ಧುರಂಧರ್ 2 ಚಿತ್ರದಲ್ಲಿ ರಣವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ಇನ್ನೊಂದು ಟಾಕ್ಸಿಕ್. ಇದರಲ್ಲಿ ರಾಕಿಂಗ್ ಸ್ಟಾರ್ ಯಶ್ ಇದ್ದಾರೆ. ‘ಧುರಂಧರ್ 2’ ಮತ್ತು ‘ಟಾಕ್ಸಿಕ್’ ಎರಡೂ ಚಿತ್ರಗಳು ಮಾರ್ಚ್ 19ರಂದು ಒಂದೇ ದಿನ ಬಿಡುಗಡೆಯಾಗಲಿವೆ. ಈ ಎರಡೂ ಚಿತ್ರಗಳ ಮಧ್ಯೆ ಕ್ಲ್ಯಾಶ್ ಏರ್ಪಡಲಿದೆ. ಈ ಎರಡೂ ಚಿತ್ರಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಎರಡೂ ಚಿತ್ರಗಳು ದೊಡ್ಡ ಬಜೆಟ್​​ನ್ಲಿ ನಿರ್ಮಾಣವಾಗಿವೆ.

ಯಶ್ ಮತ್ತು ರಣವೀರ್ ನಡುವೆ ಬಾಕ್ಸ್ ಆಫೀಸ್ ಅಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಸದ್ಯದ ಚರ್ಚೆ. ಗೀತು ಮೋಹನ್ ದಾಸ್ ನಿರ್ದೇಶನದ ‘ಟಾಕ್ಸಿಕ್’ ಚಿತ್ರದಲ್ಲಿ ಯಶ್ ಜೊತೆಗೆ ಕಿಯಾರಾ ಅಡ್ವಾಣಿ, ನಯನತಾರಾ, ತಾರಾ ಸುತಾರಿಯಾ, ಹುಮಾ ಖುರೇಷಿ ಮುಂತಾದ ದೊಡ್ಡ ನಟಿಯರು ನಟಿಸಿದ್ದಾರೆ. ವರದಿಗಳ ಪ್ರಕಾರ, ಈ ಚಿತ್ರದ ಬಜೆಟ್ ಸುಮಾರು 500 ಕೋಟಿ ರೂ.

‘ಧುರಂಧರ್ 2’ ಚಿತ್ರದ ಬಜೆಟ್ ‘ಟಾಕ್ಸಿಕ್’ ಚಿತ್ರಕ್ಕೆ ಹೋಲಿಸಿದರೆ ಕಡಿಮೆ. ‘ಧುರಂಧರ್ 2’ ಚಿತ್ರದ ಬಜೆಟ್ ಬಗ್ಗೆ ಯಾವುದೇ ನಿರ್ದಿಷ್ಟ ಮಾಹಿತಿ ಇಲ್ಲ. ಏಕೆಂದರೆ ಇದನ್ನು ಮೊದಲ ಭಾಗದ ಜೊತೆಗೆ ಚಿತ್ರೀಕರಿಸಲಾಗಿದೆ. ವರದಿಗಳ ಪ್ರಕಾರ, ಎರಡೂ ಭಾಗಗಳಿಗೆ 300-350 ಕೋಟಿ ರೂ. ಖರ್ಚು ಮಾಡಲಾಗಿದೆ.

ಇದನ್ನೂ ಓದಿ: ಟಾಕ್ಸಿಕ್ ಅಲರ್ಟ್​: ಮೊದಲ ಹಾಡಿನಲ್ಲಿ ಯಶ್, ಕಿಯಾರಾ ಅಡ್ವಾನಿ ರೊಮ್ಯಾನ್ಸ್

ಯಶ್ ನಟನೆಯ ‘ಟಾಕ್ಸಿಕ್’ ಚಿತ್ರವೇ ಗೆಲ್ಲಬಹುದು ಎಂಬುದು ಅಭಿಮಾನಿಗಳ ಊಹೆ. ನಿಜವಾದ ಸಿನಿಪ್ರಿಯರು ಎರಡೂ ಸಿನಿಮಾ ಗೆಲ್ಲಲಿ ಎಂದು ಬಯಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರ್ನಾಟಕ ಹವಾಮಾನ ವರದಿ: ರಾಜ್ಯದೆಲ್ಲೆಡೆ ಇನ್ನು ಕೆಲ ದಿನ ಶುಷ್ಕ ಹವೆ; ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ – Kannada News | Bengaluru temperature: Heat wave alert in Bengaluru, cloudy sky in Bengaluru

ರಾಜ್ಯದೆಲ್ಲೆಡೆ ಇನ್ನು ಕೆಲ ದಿನ ಶುಷ್ಕ ಹವೆ; ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ

ಬೆಂಗಳೂರು, ಫೆಬ್ರವರಿ 27: ರಾಜ್ಯದಲ್ಲಿ ಹಲವು ದಿನಗಳಿಂದ ತಾಪಮಾನ ಹೆಚ್ಚಿದ್ದು, ಕೆಲ ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗಿರುವುದೂ ಕಂಡುಬಂದಿದೆ. ಆದರೆ ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಣ ಹವೆ (Weather Forecast) ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರಿನಲ್ಲಿ ಸಂಜೆಯ ಹೊತ್ತಿಗೆ ಮೋಡ ಮುಸುಕಿದ ವಾತಾವರಣವಿರಲಿದೆ ಎಂದು ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ ಒಣ ಹವೆ?

ಇಂದಿನಿಂದ ಕೆಲ ದಿನ ರಾಜ್ಯದಲ್ಲಿ ಶುಷ್ಕ ವಾತಾವರಣವೇ ಇರಲಿದೆ ಎಂದು ಇಲಾಖೆ ತಿಳಿಸಿದ್ದು, ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಾರ್ಚ್​ ಎರಡನೇ ವಾರದಲ್ಲಿ ತಾಪಮಾನ ಹೆಚ್ಚಳ

ನಗರದಲ್ಲಿ ಮಾರ್ಚ್ ಎರಡನೇ ವಾರದ ಬಳಿಕ ಬಿಸಿಲಿನ ತೀವ್ರತೆ ಇನ್ನಷ್ಟು ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕೂಡ ಅಲರ್ಟ್ ಆಗಿದೆ. ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಅನಗತ್ಯವಾಗಿ ಹೊರಗೆ ಹೋಗದಂತೆ ಸೂಚನೆ ನೀಡಲಾಗಿದೆ. ಹೀಟ್ ಸ್ಟ್ರೋಕ್ ಹಾಗೂ ಡಿಹೈಡ್ರೇಶನ್ ಅಪಾಯ ಇರುವುದರಿಂದ ವೃದ್ಧರು, ಗರ್ಭಿಣಿಯರು, ಮಕ್ಕಳು ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವವರು ವಿಶೇಷ ಎಚ್ಚರಿಕೆ ವಹಿಸಬೇಕು.

ಹೆಚ್ಚಾಗಿ ನೀರು, ತಂಪು ಪಾನೀಯಗಳು ಹಾಗೂ ಹಣ್ಣುಗಳನ್ನು ಸೇವಿಸಿ ದೇಹದ ತಾಪಮಾನ ನಿಯಂತ್ರಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ, ಈ ವರ್ಷವೂ ಬೆಂಗಳೂರು ಮಂದಿಗೆ ಕಠಿಣ ಬೇಸಿಗೆ ಎದುರಾಗುವ ಸೂಚನೆಗಳಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರಶ್ಮಿಕಾ ಮಂದಣ್ಣ-ವಿಜಯ್ ಧರಿಸಿದ್ದ ಚಿನ್ನದ ಬೆಲೆ ಎಷ್ಟು ಕೋಟಿ ರೂಪಾಯಿ? – Kannada News | Rashmika Mandanna Vijay Devarakonda Wedding: Rs 7 Crore Jewelry Stuns! See Royal Gold and Diamond Details

ನಟಿ ರಶ್ಮಿಕಾ ಮಂದಣ್ಣ (Rashmika) ಹಾಗೂ ವಿಜಯ್ ದೇವರಕೊಂಡ ಮದುವೆ ಅದ್ದೂರಿಯಾಗಿ ನಡೆದಿದೆ. ಈ ವಿವಾಹದ ಥೀಮ್ ರಾಜರ ಶೈಲಿಯಲ್ಲಿ ಇತ್ತು. ಈ ಕಾರಣದಿಂದಲೇ ವಿಜಯ್ ದೇವರಕೊಂಡ ಅವರು ರಾಜನ ಲುಕ್​​ನಲ್ಲಿ ಗಮನ ಸೆಳೆದಿದ್ದಾರೆ. ಇನ್ನು, ರಶ್ಮಿಕಾ ಮಂದಣ್ಣ ಅವರು ಥೇಟ್ ಯುವರಾಣಿಯಂತೆ ಗಮನ ಸೆಳೆದಿದ್ದಾರೆ. ಈ ಮಧ್ಯೆ ಇವರು ಧರಿಸಿದ ಚಿನ್ನದ ಬೆಲೆ ಎಷ್ಟಿರಬಹುದು ಎಂಬ ಬಗ್ಗೆ ಚರ್ಚೆ ನಡೆದಿದೆ.

ಸಾಮಾನ್ಯವಾಗಿ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಳ್ಳುವಾಗ ಅದ್ದೂರಿಯಾಗಿಯೇ ಮದುವೆ ಆಗುತ್ತಾರೆ. ಇದಕ್ಕೆ ರಶ್ಮಿಕಾ-ವಿಜಯ್ ಕೂಡ ಹೊರತಾಗಿಲ್ಲ. ತಮ್ಮ ಮದುವೆಗೆ ಅವರು ಉದಯಪುರವನ್ನು ಆಯ್ಕೆ ಮಾಡಿಕೊಂಡಾಗಲೇ ಅಭಿಮಾನಿಗಳಿಗೆ ಕುತೂಹಲ ಮೂಡಿತ್ತು. ಈ ಕುತೂಹಲ ದಿನ ಕಳೆದಂತೆ ಹೆಚ್ಚುತ್ತಲೇ ಬಂತು. ಮದುವೆ ಅದ್ದೂರಿಯಾಗಿ ನಡೆದಿದೆ ಎಂಬ ಸೂಚನೆ ಅಭಿಮಾನಿಗಳಿಗೆ ಇತ್ತು. ಆದರೆ, ಎಷ್ಟು ಅದ್ದೂರಿಯಾಗಿ ನಡೆದಿದೆ ಎಂಬ ಕಲ್ಪನೆ ಇರಲಿಲ್ಲ. ಕೊನೆಗೂ ಅದಕ್ಕೆ ಉತ್ತರ ಸಿಕ್ಕಿದೆ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರು ಫೋಟೋ ಹಂಚಿಕೊಳ್ಳುವ ಮೂಲಕ ಮದುವೆಯ ಅದ್ದೂರಿತನ ಹೇಗಿತ್ತು ಎಂಬುದನ್ನು ಅಭಿಮಾನಿಗಳಿಗೂ ತೋರಿಸಿದ್ದರು. ಈ ವೇಳೆ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಧರಿಸಿದ ಚಿನ್ನದ ಸರ, ಚಿನ್ನದ ಬಳೆಗಳು ಗಮನ ಸೆಳೆದವು. ರಶ್ಮಿಕಾ ಒಬ್ಬರೇ 1.5-2 ಕೆಜಿ ಚಿನ್ನ ಧರಿಸಿದ್ದರು ಎನ್ನಲಾಗಿದೆ. ವಿಜಯ್ ಕೂಡ ಸಾಕಷ್ಟು ಚಿನ್ನ ಧರಿಸಿದ್ದರು.

ಸದ್ಯ ಒಂದು ಕೆಜಿ ಚಿನ್ನ ಒಂದೂವರೆ ಕೋಟಿ ರೂಪಾಯಿ ಬೆಲೆ ಬಾಳುತ್ತದೆ. ಆದರೆ, ರಶ್ಮಿಕಾ ಹಾಗೂ ವಿಜಯ್ ಧರಿಸಿದ ಆಭರಣಗಳಿಗೆ ಕೇವಲ ಚಿನ್ನದ ಬೆಲೆ ಮಾತ್ರ ಅನ್ವಯ ಆಗೋದಿಲ್ಲ. ಇವನ್ನು ಮಾಡಲು ಸಾಕಷ್ಟು ಶ್ರಮ ಬೇಕು. ಅಲ್ಲದೆ, ಇದರಲ್ಲಿ ಸಾಕಷ್ಟು ಡೈಮಂಡ್​​​ಗಳ ಬಳಕೆ ಮಾಡಲಾಗಿದೆ. ಈ ಎಲ್ಲಾ ಕಾರಣದಿಂದ ಇಬ್ಬರೂ ಧರಿಸಿದ ಆಭರಣಗಳ ಬೆಲೆ 7 ಕೋಟಿ ರೂಪಾಯಿಗೂ ಅಧಿಕವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಮದುವೆ ಮುಗಿಸಿ ಕೈ-ಕೈ ಹಿಡಿದುಕೊಂಡು ಹೊರಟ ವಿಜಯ್-ರಶ್ಮಿಕಾ: ವಿಡಿಯೋ

ರಶ್ಮಿಕಾ ಧರಿಸಿದ ಆಭರಗಣ ಬೆಲೆ ಸುಮಾರು ಐದು ಕೋಟಿ ರೂಪಾಯಿ ಹಾಗೂ ವಿಜಯ್ ದೇವರಕೊಂಡ ಧರಿಸಿದ ಆಭರಣಗಳ ಬೆಲೆ 2 ಕೋಟಿ ರೂಪಾಯಿ ಎಂದು ಹೇಳಲಾಗುತ್ತಾ ಇದೆ. ಈ ಬಗ್ಗೆ ದಂಪತಿ ಕಡೆಯಿಂದ ಯಾವುದೇ ಮಾಹಿತಿ ಸಿಕ್ಕಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗದಗದಲ್ಲಿ ಸರ್ಕಾರದಿಂದಲೇ ಕ್ಷೌರದಂಗಡಿ ಆರಂಭ: ಕಾರಣ ಕೇಳಿದ್ರೆ ಅಚ್ಚರಿ ಪಡ್ತೀರ! – Kannada News | Barbers Refuse to Serve Dalits; Government Opens Salon in Singatalur Village, Gadag

ಸರ್ಕಾರದಿಂದಲೇ ಕ್ಷೌರದಂಗಡಿ ಆರಂಭImage Credit source: Google

ಗದಗ, ಫೆಬ್ರವರಿ 28: ದಲಿತರಿಗೆ ಕ್ಷೌರ ಸೇವೆ ನೀಡಲು ನಿರಾಕರಿಸಿದ ಹಿನ್ನೆಲೆ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಸಿಂಗಟಾಲೂರ ಗ್ರಾಮದಲ್ಲಿ ಸರ್ಕಾರದಿಂದಲೇ ಕ್ಷೌರದಂಗಡಿ ಆರಂಭ ಮಾಡಲಾಗಿದೆ. ಸಾಮಾಜಿಕ ಕಲ್ಯಾಣ ಇಲಾಖೆ, ಗ್ರಾಮ ಪಂಚಾಯಿತಿ ಹಾಗೂ ಆದಾಯ ಇಲಾಖೆ ಅಧಿಕಾರಿಗಳತ್ವದಲ್ಲಿ ಸಲೂನ್​​ ಶುರುವಾಗಿದ್ದು, ಗ್ರಾಮದಲ್ಲಿ ವರ್ಷಗಳಿಂದ ಮುಂದುವರಿದಿದ್ದ ಜಾತಿ ಆಧಾರಿತ ಭೇದಭಾವವನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಗ್ರಾಮದ ದೈವವಾದ ವೀರಭದ್ರೇಶ್ವರನ ಭಕ್ತರಾಗಿರುವ ಹಡಪದ ಕುಟುಂಬಗಳು ಪರಂಪರೆ ಹೆಸರಿನಲ್ಲಿ ದಲಿತರಿಗೆ ಕ್ಷೌರ ಸೇವೆ ನೀಡುವುದನ್ನು ನಿರಾಕರಿಸುತ್ತಿದ್ದವು. ಅಚ್ಚರಿ ಎಂಬಂತೆ ಇದಕ್ಕೆ ದಲಿತ ಸಮುದಾಯದವರ ಮೌನದ ಸಮಮತವೂ ಪೀಳಿಗೆಗಳಿಂದಲೂ ಇತ್ತು ಎನ್ನಲಾಗಿದೆ.

ಇನ್ನು ಗ್ರಾಮದಲ್ಲಿದ್ದ ಏಕೈಕ ಕ್ಷೌರದಂಗಡಿಗೆ ದಲಿತ ಯುವಕರು ಭೇಟಿ ನೀಡಲು ಆರಂಭಿಸಿದ್ದರು. ಸಲೂನ್​​ನ ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದು ಆರಂಭಿಸಿದ್ದೀರಿ. ಹೀಗಾಗಿ ಎಲ್ಲ ಸಮುದಾಯದವರಿಗೂ ಸೇವೆ ನೀಡಬೇಕು ಎಂದು  ಯುವಕರು ಒತ್ತಾಯಿಸಿದ್ದರು. ಈ ಬೆನ್ನಲ್ಲೇ ಇತ್ತೀಚೆಗೆ ಶಾಪ್​​ನ ಮುಚ್ಚಲಾಗಿತ್ತು. ಹೀಗಾಗಿ ಜನರು ಹೇರ್​​ ಕಟಿಂಗ್​​, ಶೇವಿಂಗ್​​ ಮಾಡಿಸಿಕೊಳ್ಳಬೇಕಿದ್ದಲ್ಲಿ ನೆರೆಯ ಗ್ರಾಮಗಳಿಗೆ ತೆರಳಬೇಕಾದ ಸ್ಥಿತಿ ಉದ್ಭವಿಸಿತ್ತು. ಸಾಮಾಜಿಕ ಕಲ್ಯಾಣ ಮತ್ತು ಆದಾಯ ಇಲಾಖೆ ಅಧಿಕಾರಿಗಳು ಹಡಪದ ಸಮುದಾಯದವರನ್ನು ಮನವೊಲಿಸಿ ಅಂಗಡಿಗಳನ್ನು ತೆರೆಯಲು ಹಾಗೂ ಎಲ್ಲಾ ಸಮುದಾಯದವರಿಗೆ ಸೇವೆ ನೀಡಲು ಪ್ರಯತ್ನಿಸಿದ್ದರು. ಆದರೆ ಯತ್ನ ಫಲಿಸದ ಹಿನ್ನೆಲೆಯಲ್ಲಿ ಕ್ಷೌರ ಮಾಡಲು ಒಪ್ಪದವರಿಗೆ ನೋಟಿಸ್​​ಗಳನ್ನು ನೀಡಿದರೂ, ಅವರು ತಮ್ಮ ಹಠ ಬಿಟ್ಟಿಲ್ಲ. ಕೊನೆಗೆ ಅನಿವಾರ್ಯವಾಗಿ ಅಧಿಕಾರಿಗಳು ಸರ್ಕಾರಿ ಕ್ಷೌರದಂಗಡಿ ತೆರೆದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಬಿಜೆಪಿ ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ? ಸ್ವಾಮೀಜಿ ಆಡಿಯೋ ವೈರಲ್

ಫೆಬ್ರವರಿ 26ರಂದು ತಹಶೀಲ್ದಾರ್ ಎರ್ರಿಸ್ವಾಮಿ ಹಾಗೂ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಗ್ರಾಮದಲ್ಲಿ ಹೊಸ ಕ್ಷೌರ ಅಂಗಡಿಯನ್ನು ಉದ್ಘಾಟಿಸಲಾಗಿದೆ. ಪಕ್ಕದ ತಿಪ್ಪಾಪೂರ ಗ್ರಾಮದ ಬಸವರಾಜ್ ಹಡಪದ ಅವರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಅಂಗಡಿ ನೀಡಿ ಕ್ಷೌರ ಮಾಡಲು ಅನುವು ಮಾಡಿಕೊಡಲಾಗಿದೆ. ಆ ಮೂಲಕ ಗ್ರಾಮದಲ್ಲಿ ಎಲ್ಲ ಸಮುದಾಯದವರಿಗೂ ಕ್ಷೌರ ಮಾಡಿಸಕೊಳ್ಳಲು ಅಧಿಕಾರಿಗಳು ನೆರವಾಗಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Daily Devotional: ಅತೀರಥ ಮಹಾರಥರು ಅಂದರೆ ಯಾರು ಗೊತ್ತಾ? – Kannada News | Daily Devotional: Decoding the Significance of Athiratha and Maharatha in Ancient Texts

ಬೆಂಗಳೂರು, ಫೆಬ್ರವರಿ​ 28: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಅತೀರಥ ಮಹಾರಥರು ಅಂದರೆ ಯಾರು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ನಮ್ಮ ನಿತ್ಯ ಜೀವನದಲ್ಲಿ ನಾವು ಬಳಸುವ ಮಾತುಗಳು ಕೆಲವೊಮ್ಮೆ ವ್ಯಂಗ್ಯದಿಂದ ಅಥವಾ ಹೊಗಳಿಕೆಯಿಂದ ಕೂಡಿರುತ್ತವೆ. ಅತಿರಥ ಮಹಾರಥ ಎಂಬ ಪದಗಳೂ ಇವುಗಳಲ್ಲಿ ಸೇರಿವೆ. ಆದರೆ, ಈ ಪದಗಳ ಆಳವಾದ ಮತ್ತು ನಿಜವಾದ ಅರ್ಥವನ್ನು ಅನೇಕರು ತಿಳಿದಿಲ್ಲ. ಇವು ಕೇವಲ ಆಡುಭಾಷೆಯ ಭಾಗವಾಗಿರದೆ, ಪ್ರಾಚೀನ ಇತಿಹಾಸ ಮತ್ತು ಪುರಾಣಗಳಲ್ಲಿ ಯುದ್ಧದಲ್ಲಿ ಯೋಧರ ಸಾಮರ್ಥ್ಯವನ್ನು ವಿವರಿಸಲು ಬಳಸಲಾಗುವ ಪ್ರಮುಖ ಶ್ರೇಣಿಗಳಾಗಿವೆ.

ಕುರುಕ್ಷೇತ್ರ ಯುದ್ಧ, ರಾಮಾಯಣದಂತಹ ಮಹಾಕಾವ್ಯಗಳಲ್ಲಿ ಈ ಪದಗಳು ಪ್ರಮುಖ ಪಾತ್ರ ವಹಿಸುತ್ತವೆ. ಯೋಧನೊಬ್ಬ ಏಕಕಾಲದಲ್ಲಿ ಎಷ್ಟು ಜನರೊಂದಿಗೆ ಯುದ್ಧ ಮಾಡುವ ಸಾಮರ್ಥ್ಯ ಹೊಂದಿದ್ದಾನೆ ಎಂಬುದರ ಆಧಾರದ ಮೇಲೆ ಈ ಶ್ರೇಣಿಗಳನ್ನು ನಿರ್ಧರಿಸಲಾಗುತ್ತದೆ. ಈ ಶ್ರೇಣಿಗಳು ರಥ, ಅತಿರಥ, ಮಹಾರಥ, ಅತಿಮಹಾರಥ ಮತ್ತು ಮಹಾಮಹಾರಥ ಎಂದು ಐದು ವಿಭಾಗಗಳನ್ನು ಒಳಗೊಂಡಿವೆ. ಇವು ಕೇವಲ ಪದಗಳಲ್ಲ, ಬದಲಿಗೆ ಮಹಾ ವ್ಯಕ್ತಿಗಳ ಅಗಾಧ ಶಕ್ತಿ ಮತ್ತು ಸಾಮರ್ಥ್ಯದ ಪ್ರತೀಕಗಳಾಗಿವೆ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.

Source link

Exit mobile version