Headlines

ಮನೆಯಲ್ಲಿದ್ದ ಚಿನ್ನಾಭರಣ ಸಮೇತ ಪತ್ನಿ ಎಸ್ಕೇಪ್: ಮಕ್ಕಳಿಬ್ಬರನ್ನು ಸಾಯಿಸಿ ತಾನೂ ನೇಣಿಗೆ ಶರಣಾದ ಪತಿ! – Kannada News | Kunigal Tragedy: Father Kills Two Sons and Commits Suicide Over Wife’s affair

ಮಕ್ಕಳಿಬ್ಬರನ್ನು ಸಾಯಿಸಿ ತಾನೂ ನೇಣಿಗೆ ಶರಣಾದ ಪತಿ! Image Credit source: google Gemini ತುಮಕೂರು, ಮೇ 02: ಚಿನ್ನಾಭರಣ ಸಹಿತ ಪರಾರಿಯಾದ ಹೆಂಡತಿಯ (Wife) ನಡತೆಯಿಂದ ಬೇಸತ್ತ ವ್ಯಕ್ತಿಯೊಬ್ಬ ತನ್ನಿಬ್ಬರು ಪುಟ್ಟ ಮಕ್ಕಳನ್ನೂ ಕೊಲೆ ಮಾಡಿ, ತಾನೂ ನೇಣಿಗೆ ಶರಣಾಗಿರುವ ಅಮಾನವೀಯ ಘಟನೆ ತುಮಕೂರು (Tumkuru) ಜಿಲ್ಲೆಯ ಕುಣಿಗಲ್ ತಾಲೂಕಿನ ಆಲ್ಕೆರೆ ಗ್ರಾಮದಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ಈ ಭೀಕರ ಕೃತ್ಯ ನಡೆದಿದ್ದು, ಇಂದು ಬೆಳಗ್ಗೆ ಅಕ್ಕಪಕ್ಕದ ಮನೆಯವರು ಗಮನಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಈ…

Read More

ತಾತನಾದ ಡಿ.ಕೆ. ಶಿವಕುಮಾರ್​​: ಗಮನಸೆಳೆದ BJP ಸಂಸದ ತೇಜಸ್ವಿ ಸೂರ್ಯ ಶುಭಾಶಯದ ಪೋಸ್ಟ್​​ – Kannada News | Tejasvi Surya Congratulates DK Shivakumar on Becoming Grandfather

ತಾತನಾದ ಡಿಕೆಶಿಗೆ ಶುಭಕೋರಿದ ತೇಜಸ್ವಿ ಸೂರ್ಯ ಬೆಂಗಳೂರು, ಮೇ 02: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​​ ಅವರ ಪುತ್ರಿ ಪುತ್ರಿ ಐಶ್ವರ್ಯ ಹೆಗ್ಡೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ಡಿಕೆಶಿ ಖುಷಿಯಲ್ಲಿ ಆಸ್ಪತ್ರೆಗೆ ಬಂದು ಮೊಮ್ಮಗಳನ್ನು ಮುದ್ದಾಡುವ ಜೊತೆಗೆ ಮಗಳ ಆರೋಗ್ಯ ವಿಚಾರಿಸಿದ್ದರು. ವಿಶೇಷ ಅಂದ್ರೆ ಕಾರ್ಮಿಕ ದಿನಾಚರಣೆ, ಕರ್ನಾಟಕದ ರಾಜಕೀಯ ಮುತ್ಸದ್ಧಿ ಎಸ್.ಎಂ.ಕೃಷ್ಣ ಜನ್ಮದಿನ ಹಾಗೂ ಶುಭ್ರ ಪೂರ್ಣಿಮೆಯ ದಿನವೇ ತಾತನಾಗಿ ಡಿಸಿಎಂ ಭಡ್ತಿ ಪಡೆದಿದ್ದು, ಮಾಧ್ಯಮದವರ ಪ್ರಶ್ನೆಗೆ ಮುಗುಳ್ನಕ್ಕಿ ಸಂತಸ ವ್ಯಕ್ತಪಡಿಸಿದ್ದರು. ಈ…

Read More

13ನೇ ವಯಸ್ಸಿಗೆ ವಿವಾಹ, ಇಸ್ಲಾಂಗೆ ಮತಾಂತರ: ಸರೋಜ್ ಖಾನ್ ಜೀವನದ ಕರಾಳ ಸತ್ಯ – Kannada News | Saroj Khan: Iconic Choreographer’s Life of Struggle and Triumph

ಬಾಲಿವುಡ್‌ನ ಐಕಾನಿಕ್ ಹಾಡುಗಳಾದ ‘ಏಕ್ ದೋ ತೀನ್’ ಮತ್ತು ‘ಡೋಲಾ ರೇ ಡೋಲಾ’ ಹಾಡುಗಳಿಗೆ ನೃತ್ಯ ಸಂಯೋಜಿಸಿ ಗಮನ ಸೆಳೆದವರು ಸರೋಜ್ ಖಾನ್. ತೆರೆಯ ಮೇಲೆ ಬಣ್ಣದ ಲೋಕವನ್ನು ಸೃಷ್ಟಿಸಿದ ಅವರ ವೈಯಕ್ತಿಕ ಜೀವನ ಮಾತ್ರ ಕಣ್ಣೀರಿನ ಕಥೆಯಂತಿತ್ತು. ಬಾಲ್ಯವಿವಾಹ, ಮೋಸ ಮತ್ತು ಜೀವನದ ಸಂಘರ್ಷಗಳ ನಡುವೆಯೇ ಅವರು ಬೆಳೆದು ಬಂದ ಹಾದಿ ನಿಜಕ್ಕೂ ರೋಚಕ. 1948 ರಲ್ಲಿ ಮುಂಬೈನಲ್ಲಿ ನಿರ್ಮಲಾ ನಾಗಪಾಲ್ ಆಗಿ ಜನಿಸಿದ ಇವರು, ಬಡತನದ ಕಾರಣದಿಂದ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದರು. ಕೇವಲ 13…

Read More

ಕುಟುಂಬದ ತಂಟೆಗೆ ಹೊಡೆದುರುಳಿಸ್ತೀನಿ: ಹೆನ್ರಿಕ್ ಕ್ಲಾಸೆನ್ ಧಮ್ಕಿ! – Kannada News | Heinrich Klaasen Warns Fan for Breaching Family Privacy

ಮೈದಾನದಲ್ಲಿ ಸಿಕ್ಸರ್‌ಗಳ ಸುರಿಮಳೆಗೈಯುವ ಸನ್ ರೈಸರ್ಸ್ ಹೈದರಾಬಾದ್ (SRH) ತಂಡದ ಸ್ಟಾರ್ ಆಟಗಾರ ಹೆನ್ರಿಕ್ ಕ್ಲಾಸೆನ್ (Heinrich Klaasen), ರಿಯಲ್ ಲೈಫ್‌ನಲ್ಲಿ ಕೆಂಡಾಮಂಡಲವಾಗಿದ್ದಾರೆ. ತಮ್ಮ ಪತ್ನಿ ಮತ್ತು ಮಗುವಿನ ಖಾಸಗಿತನಕ್ಕೆ ಧಕ್ಕೆ ತಂದ ಅಭಿಮಾನಿಯೊಬ್ಬನಿಗೆ, “ಕುಟುಂಬದ ತಂಟೆಗೆ ಬಂದರೆ, ಹೊಡೆದುರುಳಿಸ್ತೀನಿ” ಎಂದು ನೇರವಾಗಿಯೇ ಧಮ್ಕಿ ಹಾಕಿದ್ದಾರೆ! ಏನಿದು ಘಟನೆ? ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯ ಮುಗಿಸಿ ಸನ್​ರೈಸರ್ಸ್​ ಹೈದರಾಬಾದ್ ತಂಡ ಹೋಟೆಲ್‌ನಿಂದ ವಿಮಾನ ನಿಲ್ದಾಣಕ್ಕೆ ಹೊರಡುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕ್ಲಾಸೆನ್ ತಮ್ಮ ಪತ್ನಿ ಮತ್ತು…

Read More

ಬಾಲಿವುಡ್​​ನಲ್ಲಿ ನಡೆಯದ ಸಾಯಿ ಪಲ್ಲವಿ ಕಮಾಲ್; ತಪ್ಪು ಮಾಡಿದ್ರಾ ಆಮಿರ್ ಖಾನ್? – Kannada News | Sai Pallavi’s ‘Ek Din’ Bollywood Debut: Poor Box Office Collection and Future Impact

ಸಾಯಿ ಪಲ್ಲವಿ (Sai Pallavi) ಅವರಿಗೆ ದಕ್ಷಿಣ ಭಾರತದಲ್ಲಿ ಸಾಕಷ್ಟು ಬೇಡಿಕೆ ಇದೆ. ಅವರ ಸಿನಿಮಾಗಳು ಇಲ್ಲಿ ಅದ್ಭುತ ಕಲೆಕ್ಷನ್ ಮಾಡುತ್ತವೆ. ಈಗ ಅವರು ಬಾಲಿವುಡ್​​ಗೆ ಕಾಲಿಟ್ಟಿದ್ದಾರೆ. ಆಮಿರ್ ಖಾನ್ ಮಗ ಜುನೈದ್ ಖಾನ್ ಅವರ ‘ಏಕ್ ದಿನ್’ ಚಿತ್ರಕ್ಕೆ ಅವರು ನಾಯಕಿ. ಈ ಸಿನಿಮಾ ಮೇ 1ರಂದು ರಿಲೀಸ್ ಆಯಿತು. ಈ ಸಿನಿಮಾ ಕಮಾಲ್ ಮಾಡಲು ವಿಫಲವಾಗಿದೆ. ಈ ಚಿತ್ರ ಡಲ್​ ಓಪನಿಂಗ್ ಕಂಡಿದೆ. ‘ಏಕ್ ದಿನ್’ ರೊಮ್ಯಾಂಟಿಕ್ ಡ್ರಾಮಾ ಶೈಲಿಯ ಸಿನಿಮಾವಾಗಿದ್ದು, ಜಪಾನ್‌ ಅಲ್ಲಿ…

Read More

ಬತ್ತಿದ ಬೋರ್​​ವೆಲ್​​ಗಳು: ರಾಜ್ಯದ 652 ಹಳ್ಳಿಗಳಲ್ಲಿ ನೀರಿಗೆ ಬರ; ಯಾವೆಲ್ಲ ಜಿಲ್ಲೆಗಳು ಭಾದಿತ? – Kannada News | Karnataka villages grapple with dry borewells and severe water shortage

ಬೆಂಗಳೂರು, ಮೇ 02: ರಾಜ್ಯದಲ್ಲಿ ಬಿಸಿಲಿನ ಅಬ್ಬರದ ಹಿನ್ನೆಲೆ ನೀರಿಗೆ ಬರ ಆರಂಭವಾಗಿದೆ. ರಾಜ್ಯದಲ್ಲಿರುವ 1.23 ಲಕ್ಷಕ್ಕೂ ಹೆಚ್ಚು ಬೋರ್‌ವೆಲ್​​ಗಳ ಪೈಕಿ, ವಿವಿಧ ಜಿಲ್ಲೆಗಳಲ್ಲಿನ 1,010 ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಭಾರಿ ಕುಸಿದಿದೆ. ರಾಯಚೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚಿನ ಸಮಸ್ಯೆಯಾಗಿದೆ. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಕಾರ, ಉತ್ತರ ಕನ್ನಡ, ತುಮಕೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿಯೂ ನೀರಿನ ಸಮಸ್ಯೆ ಉಲ್ಬಣವಾಗಿದೆ. ರಾಯಚೂರು ಜಿಲ್ಲೆಯಲ್ಲಿ 198 ಗ್ರಾಮಗಳು, ಶಿವಮೊಗ್ಗದಲ್ಲಿ 196, ಉತ್ತರ ಕನ್ನಡದಲ್ಲಿ 184,…

Read More

Birth Date and Marriage: ನಿಮ್ಮ ಜನ್ಮ ದಿನಾಂಕದಲ್ಲೇ ಅಡಗಿದೆ ಮದುವೆಯ ರಹಸ್ಯ; ನಿಮಗಾಗುವುದು ಪ್ರೇಮ ವಿವಾಹವೋ ಅಥವಾ ಅರೇಂಜ್ ಮ್ಯಾರೇಜ್? – Kannada News | Birth Date and Marriage: Understanding Love vs Arranged Marriages Through Numerology

ನಿಮ್ಮ ಜನ್ಮ ದಿನಾಂಕವು ನಿಮ್ಮ ಜೀವನದ ಅನೇಕ ಅಂಶಗಳ ಮೇಲೆ ಪ್ರಭಾವ ಬೀರಬಹುದು. ವಿಶೇಷವಾಗಿ, ಮದುವೆಯಂತಹ ಮಹತ್ವದ ವಿಷಯದಲ್ಲಿ ನಿಮ್ಮ ಜನ್ಮ ಸಂಖ್ಯೆಯು ಪ್ರೇಮ ವಿವಾಹ ಅಥವಾ ಅರೇಂಜ್ ಮ್ಯಾರೇಜ್ ಆಯ್ಕೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಸಂಖ್ಯಾಶಾಸ್ತ್ರ ವಿವರವಾಗಿ ತಿಳಿಸುತ್ತದೆ. ಈ ವಿಶ್ಲೇಷಣೆಯು ಒಂದು ದಿನಾಂಕದಲ್ಲಿ ಜನಿಸಿದವರ ಸಂಖ್ಯೆಯ ಆಧಾರದ ಮೇಲೆ, ಅವರ ಅದೃಷ್ಟ ಮತ್ತು ದುರಾದೃಷ್ಟದ ಪ್ರಭಾವವನ್ನು ಅರಿಯಲು ಸಹಾಯ ಮಾಡುತ್ತದೆ. ಒಂದು ದಿನಾಂಕವು ಒಂದೇ ಸಂಖ್ಯೆಗೆ ಸೇರಿದ್ದರೂ (ಉದಾಹರಣೆಗೆ 1, 10,…

Read More

ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ಬರುವ ಮುನ್ನ ಫ್ಯಾನ್ ಹಿಡಿದುಕೊಂಡೇ ಬನ್ನಿ! ತಿಂಗಳಿಗೆ ಸಾವಿರ ಹೆರಿಗೆಯಾಗುವ ಆಸ್ಪತ್ರೆಯಲ್ಲಿ ಬಾಣಂತಿಯರಿಗಿಲ್ಲ ಎಸಿ ವ್ಯವಸ್ಥೆ – Kannada News | Hosapete Govt Hospital Crisis: No AC or Fans for Newborns and Mothers Amid Heatwave

ತಿಂಗಳಿಗೆ ಸಾವಿರ ಹೆರಿಗೆಯಾಗುವ ಆಸ್ಪತ್ರೆಯಲ್ಲಿ ಬಾಣಂತಿಯರಿಗಿಲ್ಲ ಎಸಿ ವ್ಯವಸ್ಥೆ ವಿಜಯನಗರ, ಮೇ 02: ಜಿಲ್ಲೆಯಲ್ಲಿ ಬಿಸಿಲಿನ ತಾಪ (Weather) ಹೆಚ್ಚಾಗಿದ್ದು, ಜನರ ಅವಸ್ಥೆ ಹೇಳಲು ಅಸಾಧ್ಯವಾಗಿದೆ. ಇದರ ನಡುವೆ ಹೊಸಪೇಟೆ ನಗರದ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಗಂಭೀರ ಅವ್ಯವಸ್ಥೆ ಬೆಳಕಿಗೆ ಬಂದಿದೆ. ಹೆರಿಗೆ ವಾರ್ಡ್‌ನಲ್ಲಿ ಎಸಿ ಹಾಗೂ ಫ್ಯಾನ್‌ಗಳು ಕಾರ್ಯನಿರ್ವಹಿಸದೆ ಇರುವುದರಿಂದ ಬಾಣಂತಿಯರು ಮತ್ತು ನವಜಾತ ಶಿಶುಗಳು ಬೇಸಿಗೆಯ ಬಿಸಿಗೆ ತತ್ತರಿಸುತ್ತಿದ್ದಾರೆ. ಫ್ಯಾನ್​, ಎಸಿಗಳು ಇಲ್ಲಿ ಶೋ ಕೇಸ್ ವಸ್ತುಗಳಷ್ಟೆ! ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ…

Read More

GT vs RCB ಪಂದ್ಯದಲ್ಲಿ ಕೃನಾಲ್ ಪಾಂಡ್ಯ ಬೌಲಿಂಗ್ ಮಾಡದಿರಲು ಇದುವೇ ಕಾರಣ! – Kannada News | Why Krunal Pandya Did Not Bowl in GT vs RCB Match

ಇದಾಗ್ಯೂ ಆರ್​ಸಿಬಿ ನಾಯಕ ಸ್ಪಿನ್ನರ್​ ಸುಯಶ್ ಶರ್ಮಾ ಅವರಿಗೆ ಚೆಂಡು ನೀಡಿದ್ದರು. ಇದಕ್ಕೆ ಮುಖ್ಯ ಕಾರಣ ಸುಯಶ್ ಮಿಸ್ಟ್ರಿ ಸ್ಪಿನ್ನರ್ ಆಗಿರುವುದು. ಅದೇ ಕೃನಾಲ್ ಪಾಂಡ್ಯ ರನ್​ ಗತಿಯನ್ನು ನಿಯಂತ್ರಿಸಬಲ್ಲ ಬೌಲರ್​. ಈ ಪಂದ್ಯದಲ್ಲಿ ರನ್ ಗತಿಯನ್ನು ನಿಯಂತ್ರಿಸುವುದಕ್ಕಿಂತ ಹೆಚ್ಚಾಗಿ ಆರ್​ಸಿಬಿ ತಂಡಕ್ಕೆ ವಿಕೆಟ್​ಗಳ ಅಗತ್ಯವಿತ್ತು. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಜೋಶ್ ಹೇಝಲ್​ವುಡ್​, ಭುವನೇಶ್ವರ್ ಕುಮಾರ್, ರೊಮಾರಿಯೊ ಶೆಫರ್ಡ್ ಹಾಗೂ ಸುಯಶ್ ಶರ್ಮಾ ಅವರನ್ನು ಮಾತ್ರ ಬಳಸಿಕೊಂಡಿದ್ದರು. ಇದಾಗ್ಯೂ ಈ ಪಂದ್ಯದಲ್ಲಿ ಆರ್​ಸಿಬಿ ತಂಡ…

Read More

ಪಶ್ಚಿಮ ಬಂಗಾಳದ 15 ಬೂತ್​ಗಳಲ್ಲಿ ಬಿಗಿ ಭದ್ರತೆಯಲ್ಲಿ ಮರು ಮತದಾನ – Kannada News | Repolling Underway at 15 West Bengal Booths Amidst Tight Security

ಕೋಲ್ಕತ್ತಾ, ಮೇ 02: ಪಶ್ಚಿಮ ಬಂಗಾಳದ 15 ಬೂತ್​ಗಳಲ್ಲಿ ಬೆಳಗ್ಗೆ ಏಳು ಗಂಟೆಯಿಂದ ಮರು ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ಈ ಮತಗಟ್ಟೆಗಳಲ್ಲಿ ಬಿಗಿ ಭದ್ರತಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದ್ದು, ಸಾರ್ವಜನಿಕರು ಯಾವುದೇ ಆತಂಕವಿಲ್ಲದೆ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ವಿಶೇಷವಾಗಿ ದಕ್ಷಿಣ 24 ಪರಗಣ ಜಿಲ್ಲೆಯ 15 ಸ್ಥಳಗಳಲ್ಲಿ ಮರು ಮತದಾನ ನಡೆಯುತ್ತಿದ್ದು, ಸರತಿ ಸಾಲಿನಲ್ಲಿ ನಿಂತು ಜನರು ಉತ್ಸಾಹದಿಂದ ಮತ ಚಲಾಯಿಸುತ್ತಿರುವುದು ಕಂಡುಬಂದಿದೆ. ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ. Source link

Read More