ಮಳೆಗೆ ಮುಳುಗಿದ ಬೆಂಗಳೂರು: ನಗರದ ಮೂಲಸೌಕರ್ಯದ ಬಗ್ಗೆ ಪ್ರಶ್ನಿಸಿದ ಅಸ್ಸಾಂ ಯುವತಿ – Kannada News | Bengaluru Rain Floods: Assam Based Woman Questions City Infrastructure and Civic Woes

ಬೆಂಗಳೂರಿನ ಮೂಲಸೌಕರ್ಯದ ಬಗ್ಗೆ ಪ್ರಶ್ನಿಸಿದ ಅಸ್ಸಾಂ ಯುವತಿ
Image Credit source: Hindustan Times

ಬೆಂಗಳೂರು, ಮೇ 01: ಮೊನ್ನೆ ನಗರದಲ್ಲಿ ಸುರಿದ ಮಳೆಯಿಂದಾದ ಅನಾಹುತಗಳಿಂದ ಸರಿಯಾಗಿ ಸುಧಾರಿಸಿಕೊಳ್ಳಲು ಬೆಂಗಳೂರಿನ ಜನರಿಗೆ ಇನ್ನೂ ಆಗಿಲ್ಲ. ಈ ನಡುವೆ ಮಳೆ ಮುಂದುವರಿದಿದ್ದು, ಮಳೆಯ ನಂತರ ನಗರದ ದುಸ್ಥಿತಿಯ ಬಗ್ಗೆ ಅಸ್ಸಾಂ ಮೂಲದ ಮತ್ತು ಹಾಲಿ ಬೆಂಗಳೂರಿನ ನಿವಾಸಿ ಅಸ್ಮಿತಾ ಗುಪ್ತಾ ಎಂಬವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಚ್‌ಎಸ್‌ಆರ್ ಲೇಔಟ್ ಪ್ರದೇಶದಲ್ಲಿ ಮಾತ್ರ ಮಳೆಯಾದರೂ ರಸ್ತೆ ನೀರಿನಿಂದ ತುಂಬುವ ಜೊತೆಗೆ ಕಸದ ರಾಶಿಯೇ ತೇಲಿಬರುವ ಕಾರಣ ಸಂಚಾರವೇ ಕಷ್ಟಕರವಾಗಿದೆ ಎಂದು ಅವರು ಹೇಳಿದ್ದಾರೆ.

ಹೆಚ್ಚಿನ ಮಟ್ಟದ ತೆರಿಗೆಗಳನ್ನು ಪಾವತಿಸುವ ಬೆಂಗಳೂರಿಗರು ಕಳಪೆ ಗುಣಮಟ್ಟದ ರಸ್ತೆಗಳ ಮೇಲೆ ಸಂಚರಿಸುತ್ತಿದ್ದಾರೆ. ಒಂದು ಮಳೆ ಬಂದರೆ ಸಾಕು, ಗುಂಡಿಗಳು, ಟ್ರಾಫಿಕ್ ಜಾಮ್ ಮತ್ತು ಅವ್ಯವಸ್ಥೆ ಮತ್ತೆ ಮರುಕಳಿಸುತ್ತವೆ. ಆರ್ಥಿಕತೆಗೆ ಬೆನ್ನೆಲುಬಾದ ನಗರಕ್ಕೆ ಮೂಲಸೌಕರ್ಯ ಒದಗಿಸುವುದು ಅಷ್ಟು ಕಷ್ಟವೇ? ಎಂದು ಅಸ್ಮಿತಾ ಪ್ರಶ್ನಿಸಿದ್ದಾರೆ. ಸಾಲದ್ದಕ್ಕೆ ಮಳೆಯ ಸಮಯದಲ್ಲಿ ಕ್ಯಾಬ್‌ಗಳ ಡೈನಾಮಿಕ್ ಪ್ರೈಸಿಂಗ್‌ ಬಗ್ಗೆ ಕೂಡ ಅವರು ಆಕ್ರೋಶ ವ್ಯಕ್ತಪಡಿಸಿದ್ದು, 500-600 ಮೀಟರ್ ದೂರಕ್ಕೆ 240-250 ರೂಪಾಯಿಗಳ ವರೆಗೆ ದರ ಕೇಳುವುದು ಮಾನವೀಯತೆಯಲ್ಲ. ಕ್ಯಾಬ್​​ನಲ್ಲಿ 500 ಮೀಟರ್ ದೂರ ಹೋಗಲು ನನಗೆ 240 ರೂಪಾಯಿಗಳ ದರ ತೋರಿಸುತ್ತಿತ್ತು ಎಂದವರು ದೂರಿದ್ದಾರೆ.

ಇದನ್ನೂ ಓದಿ: ಮಳೆ ಬಂದು ನಿಂತರೂ 2 ದಿನದಿಂದ ನಡೆಯುತ್ತಲೇ ಇದೆ ಅಂಡರ್ ಪಾಸ್ ಕ್ಲೀನ್ ಕಾರ್ಯ

ಅವರ ಈ ಪೋಸ್ಟ್​​ಗೆ ಪ್ರತಿಕ್ರಿಯಿಸಿದ ಹಲವರು ನಡೆದು ಹೋಗಲಿಲ್ಲವೇ ಎಂದು ಪ್ರಶ್ನಿಸಿದ್ದು, ಇದಕ್ಕೆ ಉತ್ತರಿಸಿರುವ ಅಸ್ಮಿತಾ ರಸ್ತೆಯೇ ಇಲ್ಲದಿದ್ದಾಗ ಹೇಗೆ ನಡೆದು ಹೋಗುವುದು? ನೀರು ತುಂಬಿ ಗುಂಡಿಗಳು ಕಾಣಿಸದ ಸ್ಥಿತಿ ಉದ್ಭವವಾಗಿತ್ತು. ವಿದ್ಯುತ್ ಶಾಕ್ ಅಪಾಯವೂ ಇತ್ತು. ಅಲ್ಲದೆ ಇಂತಹ ಅಶುದ್ಧ ನೀರಿನಲ್ಲಿ ನಡೆಯುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದಿದ್ದಾರೆ.

ಅಲ್ಲದೆ, ಇಂತಹ ಸಮಸ್ಯೆಗಳ ಬಗ್ಗೆ ಮಾತನಾಡಿದಾಗ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಉತ್ತರ-ದಕ್ಷಿಣ ವಿವಾದಕ್ಕೆ ತಿರುಗಿಸಲಾಗುತ್ತಿದೆ. ನಾವು ಪ್ರಶ್ನೆ ಕೇಳಿದರೆ ನಿಮ್ಮ ಊರಿಗೆ ಹಿಂತಿರುಗಿ ಎಂದು ಹೇಳುತ್ತಾರೆ. ನಾವು ಈ ನಗರಕ್ಕೆ ಕೆಲಸಕ್ಕಾಗಿ ಬಂದಿದ್ದರೂ, ಇಲ್ಲಿ ವಾಸಿಸುವವರೇ. ಮೂಲಸೌಕರ್ಯ ಸುಧಾರಣೆಗಾಗಿ ಕೇಳುವುದು ತಪ್ಪಲ್ಲ ಎಂದು ಅವರು ತಮ್ಮ ಮಾತನ್ನು ಸಮರ್ಥಿಸಿಕೊಂಡಿದ್ದಾರೆ. ಜೊತೆಗೆ ಟಯರ್​​ 1 ನಗರವಾಗಿರುವ ಬೆಂಗಳೂರಲ್ಲಿ ಜನರಿಗೆ ಅಷ್ಟು ಮಟ್ಟದ ಮೂಲಸೌಕರ್ಯ ಸಿಗಬೇಕು ಎಂಬುದು ನಮ್ಮ ಆಶಯ ಎಂದು ಅವರು ತಿಳಿಸಿರೋದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Bangalore Rain: ಬೆಂಗಳೂರಿನಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ – Kannada News | Bengaluru Rain News: Heavy Showers Hit City, Check Latest Weather Updates

ಬೆಂಗಳೂರು, ಮೇ 01: ಸಂಜೆಯಾಗುತ್ತಿದ್ದಂತೆ ಬೆಂಗಳೂರಿನಾದ್ಯಂತ ವರುಣನ ಆರ್ಭಟ ಜೋರಾಗಿದೆ. ಎಂ.ಜಿ. ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಶಿವಾಜಿನಗರ, ಟ್ರಿನಿಟಿ ವೃತ್ತ, ಮೆಜೆಸ್ಟಿಕ್, ಸಿಟಿ ಮಾರ್ಕೆಟ್, ಕೆ.ಆರ್. ಮಾರ್ಕೆಟ್, ಕಾರ್ಪೊರೇಷನ್, ಶಾಂತಿನಗರ ಮತ್ತು ರಿಚ್ಮಂಡ್ ಟೌನ್ ಪ್ರದೇಶಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ. ಕೆಲಸ ಮುಗಿಸಿ ಮನೆಗೆ ಮರಳುವ ಹೊತ್ತಿನಲ್ಲೇ ಸುರಿದ ಮಳೆಗೆ ಸಿಟಿ ಮಂದಿ ಶಾಪ ಹಾಕುವಂತಾಗಿದೆ.

ಮತ್ತಷ್ಟು ಮಾಹಿತಿ ಅಪ್​ಡೇಟ್​ ಆಗಲಿದೆ.

Source link

ಭಾರತ ಸರ್ಕಾರದ ವಿರುದ್ಧ ಹೋರಾಡುತ್ತೇವೆ ಎಂದಿದ್ದ ರಾಹುಲ್ ಗಾಂಧಿಗೆ ಅಲಹಾಬಾದ್ ಹೈಕೋರ್ಟ್​ನಿಂದ ಬಿಗ್ ರಿಲೀಫ್ – Kannada News | Big relief for rahul gandhi allahabad high court dismisses plea seeking fir against him over 2025 remark

ಲಕ್ನೋ, ಮೇ 1: ಮಾಜಿ ಕಾಂಗ್ರೆಸ್ ಅಧ್ಯಕ್ಷ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ವಿವಾದಾತ್ಮಕ ‘ಭಾರತದ ವಿರುದ್ಧ ಹೋರಾಡುತ್ತೇವೆ’ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಇಂದು ತಿರಸ್ಕರಿಸಿದೆ. ಹೈಕೋರ್ಟ್ ನ್ಯಾಯಮೂರ್ತಿ ವಿಕ್ರಮ್ ಡಿ. ಚೌಹಾಣ್ ಅವರನ್ನೊಳಗೊಂಡ ಏಕ ಸದಸ್ಯ ಪೀಠವು ಮುಕ್ತ ನ್ಯಾಯಾಲಯದಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸಿತು. ಅಲ್ಲದೆ, ರಾಹುಲ್ ಗಾಂಧಿಯವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು.

2025ರಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಅಲಹಾಬಾದ್ ಹೈಕೋರ್ಟ್ ನಿರಾಕರಿಸಿದೆ. ಅರ್ಜಿದಾರರು ಮಂಡಿಸಿದ ವಾದಗಳನ್ನು ಪರಿಶೀಲಿಸಿದ ನಂತರ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸಲ್ಲಿಸಲಾದ ದೂರಿಗೆ ಸಂಬಂಧಿಸಿದ ಹಿಂದಿನ ಆದೇಶಗಳನ್ನು ಪ್ರಶ್ನಿಸಿದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಕೋರ್ಟ್ ನಿರಾಕರಿಸಿತು.

ಇದನ್ನೂ ಓದಿ: ದ್ವಿಪೌರತ್ವ ಪ್ರಕರಣ; ರಾಹುಲ್ ಗಾಂಧಿ ವಿರುದ್ಧ ಕೇಸ್ ದಾಖಲಿಸಲು ಅಲಹಾಬಾದ್ ಹೈಕೋರ್ಟ್ ಆದೇಶ

ಜನವರಿ 15, 2025ರಂದು ರಾಹುಲ್ ಗಾಂಧಿ ನೀಡಿದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಈ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ ಹೇಳಿಕೆಯ ಕುರಿತು ಎಫ್‌ಐಆರ್ ದಾಖಲಿಸಬೇಕೆಂದು ಅರ್ಜಿದಾರರು ವಾದಿಸಿದ್ದರು. ಆದರೆ, ಕೆಳ ನ್ಯಾಯಾಲಯವು ಈ ಬೇಡಿಕೆಯನ್ನು ತಿರಸ್ಕರಿಸಿದ ನಂತರ ಈ ವಿಷಯವು ಹೈಕೋರ್ಟ್‌ಗೆ ತಲುಪಿತ್ತು. ಏಪ್ರಿಲ್ 8ರಂದು ಹೈಕೋರ್ಟ್ ವಿಚಾರಣೆಯನ್ನು ಪೂರ್ಣಗೊಳಿಸಿ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಈಗ ಆದೇಶ ನೀಡಿದೆ.

ಇದನ್ನೂ ಓದಿ: ರಾಹುಲ್ ಗಾಂಧಿ ವಿಪಕ್ಷ ನಾಯಕನಾಗಲು ಯೋಗ್ಯರಲ್ಲ; ಚಿರಾಗ್ ಪಾಸ್ವಾನ್ ಟೀಕೆ

ಏನಿದು ಪ್ರಕರಣ?:

2025ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ರಾಹುಲ್ ಗಾಂಧಿ ಮಾತನಾಡುವಾಗ “ನಾವು ಬಿಜೆಪಿ, ಆರ್‌ಎಸ್‌ಎಸ್ ಮತ್ತು ಭಾರತ ಸರ್ಕಾರದ ವಿರುದ್ಧ ಹೋರಾಡುತ್ತಿದ್ದೇವೆ” ಎಂದು ಹೇಳಿದ್ದರು. ಅರ್ಜಿದಾರರ ಪ್ರಕಾರ, ಈ ಹೇಳಿಕೆಯು ದೇಶಾದ್ಯಂತ ಸಾರ್ವಜನಿಕ ಭಾವನೆಗಳಿಗೆ ನೋವುಂಟು ಮಾಡಿದೆ ಮತ್ತು ಇದು ದೇಶದ್ರೋಹಕ್ಕೆ ಸಮಾನವಾಗಿದೆ. ಈ ಪದಗಳು ದೇಶವನ್ನು ಅಸ್ಥಿರಗೊಳಿಸುವ ಉದ್ದೇಶವನ್ನು ಹೊಂದಿವೆ. ಆದ್ದರಿಂದ ರಾಹುಲ್ ಗಾಂಧಿ ವಿರುದ್ಧ ತಕ್ಷಣ ಕ್ರಿಮಿನಲ್ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಅವರು ವಾದಿಸಿದ್ದರು. ಆದರೆ, ಇಂದು ಹೈಕೋರ್ಟ್ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮನೆ ಲಾಕ್ ಮಾಡಿಕೊಂಡು ಊರಿಗೆ ಹೋಗುತ್ತಿದ್ದೀರಾ? ಕಳ್ಳತನ ತಪ್ಪಿಸಲು ಈ ಕ್ರಮಗಳನ್ನು ಪಾಲಿಸಿ – Kannada News | Shivamogga police introduce locked house monitoring system

ಶಿವಮೊಗ್ಗ, (ಮೇ 01): ಪ್ರವಾಸ, ಮದುವೆ ಸೇರಿದಂತೆ ಇತರೆ ಕೆಲಸ ಕಾರ್ಯಗಳ ನಿಮಿತ್ತ ಬೇರೆ ಊರಿಗೆ ಹೋಗುವಾಗ ಇನ್ನು ಮುಂದೆ ಪಕ್ಕದ ಮನೆಯವರಿಗೆ ಮನೆ ನೋಡಿಕೊಳ್ಳಿ ಎಂದು ಹೇಳಬೇಕಿಲ್ಲ. ಪೊಲೀಸರಿಗೆ ಮಾಹಿತಿ ನೀಡಿದರೆ ಸಾಕು, ಪೊಲೀಸರ ಕ್ಯಾಮೆರಾ ನಿಮ್ಮ ಮನೆ ಕಾಯಲಿದೆ. ಹೌದು… ಮನೆ ಕಳ್ಳತನ (house theft) ಪ್ರಕರಣಗಳು ಹೆಚ್ಚಳವಾಗಬಾರದು ಎನ್ನುವ ದೃಷ್ಟಿಯಿಂದ ಶಿವಮೊಗ್ಗ (Shivamogga) ಜಿಲ್ಲಾ ಪೊಲೀಸ್ ವತಿಯಿಂದ ಲಾಕ್ಡ್ ಹೌಸ್ ಬೀಟ್ ಸಿಸ್ಟಮ್-ಎಲ್‍ಹೆಚ್‍ಬಿಎಸ್ ಜಾರಿಗೆ ತರಲಾಗಿದ್ದು, ಪೊಲೀಸರೇ ನಿಮ್ಮ ನೋಡಿಕೊಳ್ಳುವ ಮನೆ ಜವಾಬ್ದಾರಿ ತೆಗೆದುಕೊಳ್ಳಲಿದ್ದಾರೆ. ಆದ್ರೆ, ಊರಿಗೆ ಹೋಗುವ ಮುನ್ನ ಕೆಲ ಮಾಹಿತಿಯನ್ನು ಪೊಲೀಸರಿಗೆ ನೀಡಬೇಕು.

ಪೊಲೀಸರಿಗೆ ನೀಡಬೇಕು ಮಾಹಿತಿ

ಬೀಗ ಹಾಕಿದ ಮನೆಗಳ ಸುರಕ್ಷತೆ ಸಂಬಂಧ ಪೊಲೀಸ್ ವತಿಯಿಂದ ನೂತನ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದ್ದು, ಮನೆಯವರೆಲ್ಲಾ ಪ್ರಯಾಣಕ್ಕೆ ಹೊರಟರೆ ಮೂರು ಪ್ರಮುಖ ಅಂಶಗಳನ್ನು ಪೊಲೀಸ್ ಗಮನಕ್ಕೆ ತರಬೇಕು. ಹೊರಗೆ ಹೋಗುವ ಮತ್ತು ಮರಳಿ ಬರುವ ದಿನಾಂಕ, ಮನೆಯ ವಿಳಾಸ ಮತ್ತು ಲೋಕೇಷನ್ ಮತ್ತು ತಮ್ಮದೇ ಮನೆಯ ಮುಂದೆ ನಿಂತು ಸೆಲ್ಫಿ ತೆಗೆದು ವಾಟ್ಸ್ ಅಪ್ ಮೂಲಕ ಎಲ್‍ಹೆಚ್‍ಬಿಎಸ್‍ನ ಕಂಟ್ರೋಲ್ ರೂಂ/ಸಹಾಯ ವಾಣಿ ಸಂಖ್ಯೆ-8277982901ಕ್ಕೆ ಅಪ್‍ಲೋಡ್ ಮಾಡಿದರೆ ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್‍ಮಾಡಿ ಮಾಹಿತಿ ನೀಡಿದರೆ ನಿಮ್ಮ ಮನೆಯ ಸುರಕ್ಷತೆಯ ಜವಾಬ್ದಾರಿಯನ್ನು ಪೊಲೀಸರು ತೆಗೆದುಕೊಳ್ಳಲಿದ್ದಾರೆ.

ಇದನ್ನೂ ಓದಿ: ಮನೆ ಬಾಗಿಲು ಹಾಕಲು ಮರೆತು ಹೋದ ಯುವತಿ, ಪಾರ್ಸೆಲ್ ಡೆಲಿವರಿಗೆಂದು ಬಂದ ವ್ಯಕ್ತಿ ಮಾಡಿದ್ದೇನು?

ಕೆಲ ಕಡೆಗಳಲ್ಲಿ ಯಶಸ್ವಿಯಾಗಿ ಜಾರಿಯಾಗಿರುವ ‘ಲಾಕ್ಡ್‌ ಹೌಸ್‌ ಮಾನಿಟರಿಂಗ್‌ ಸಿಸ್ಟಂ’ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಶಿವಮೊಗ್ಗ ಜಿಲ್ಲಾ ಪೊಲೀಸ್‌ ಮುಂದಾಗಿದ್ದು, ಶೀಘ್ರವೇ ಜಿಲ್ಲೆಯಾದ್ಯಂತ ಈ ವ್ಯವಸ್ಥೆ ಅನುಷ್ಠಾನಗೊಳಿಸಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಈಗಾಗಲೇ ಮನೆಕಳ್ಳತನ ಪ್ರಕರಣಗಳ ನಿಯಂತ್ರಣಕ್ಕೆ ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಂಡಿರುವ ಜಿಲ್ಲಾಪೊಲೀಸರು, ಸಾರ್ವಜನಿಕರ ನಿರ್ಲಕ್ಷ್ಯದಿಂದಾಗಿ ಆಗುವಂತಹ ಮನೆಕಳ್ಳತನ ಮರುಕಳಿಸದಂತೆ ಕ್ರಮಕೈಗೊಳ್ಳಲು ಎಲ್‌ಎಚ್‌ಎಂಎಸ್‌ ವ್ಯವಸ್ಥೆ ತರಲು ನಿರ್ಧರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 6:30 pm, Fri, 1 May 26

Source link

‘ವಸುದೇವ ಕುಟುಂಬ’ ಧಾರಾವಾಹಿ ನಿರ್ಮಾಪಕರ ಮೇಲೆ ಉರಿದು ಬಿದ್ದ ನಟಿ ಹಂಸ – Kannada News | Actress Hamsa lambasted on Vasudeva Kutumba serial producer

ಬಿಗ್​​ಬಾಸ್ (Bigg Boss) ಮಾಜಿ ಸ್ಪರ್ಧಿ, ನಟಿ ಹಂಸ ‘ವಸುದೇವ ಕುಟುಂಬ’ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಇದೀಗ ಧಾರಾವಾಹಿ ನಿರ್ಮಾಪಕರ ಮೇಲೆ ಉರಿದು ಬಿದ್ದಿದ್ದಾರೆ. ಧಾರಾವಾಹಿಯ ನಿರ್ಮಾಪಕರು ತಮ್ಮ ಸಂಭಾವನೆ ಕೊಡದೆ ಸತಾಯಿಸಿದ್ದು, ಯೂನಿಟ್ ಅನ್ನು ಸಹ ಸರಿಯಾಗಿ ನೋಡಿಕೊಂಡಿಲ್ಲ ಎಂದು ಹಂಸ ವಾಗ್ದಾಳಿ ನಡೆಸಿದ್ದಾರೆ. ಇಂದು (ಮೇ 1) ಧಾರಾವಾಹಿ ನಿರ್ಮಾಪಕರು ಇದ್ದ ಸ್ಥಳಕ್ಕೇ ಹೋಗಿ ನಿರ್ಮಾಪಕರನ್ನು ತರಾಟೆಗೆ ತೆಗೆದುಕೊಂಡ ನಟಿ, ಬಳಿಕ ಟಿವಿ9 ಜೊತೆಗೆ ಮಾತನಾಡಿ, ನಿರ್ಮಾಪಕರ ವಿರುದ್ಧ ಬೆಂಕಿ ಉಗುಳಿದ್ದಾರೆ. ‘ನನ್ನ ಹಣ ಹೋದರೆ ಹೋಗಲಿ, ಈ ವ್ಯಕ್ತಿಯ ಮುಖವಾಡ ಬಯಲು ಮಾಡದೇ ಬಿಡೆನು’ ಎಂದು ಅಬ್ಬರಿಸಿದ್ದಾರೆ ನಟಿ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

‘ರಾಜ ಶಿವಾಜಿ’ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅಬ್ಬರ: ಜೀವಾ ಮಹಾಲಾ ಪಾತ್ರ ಕಂಡು ಫ್ಯಾನ್ಸ್ ಫಿದಾ – Kannada News | Salman Khan cameo as Jiva Mahala in Raja Shivaji movie fans reaction

ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ (Salman Khan) ಮತ್ತೊಮ್ಮೆ ದೊಡ್ಡ ಪರದೆ ಮೇಲೆ ಮಿಂಚಿದ್ದಾರೆ. ರಿತೇಶ್ ದೇಶ್ಮುಖ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ‘ರಾಜ ಶಿವಾಜಿ’ (Raja Shivaji) ಬಿಡುಗಡೆ ಆಗಿದ್ದು, ಇದರಲ್ಲಿ ಸಲ್ಮಾನ್ ಖಾನ್ ಅವರ ಸರ್ಪ್ರೈಸ್ ಎಂಟ್ರಿ ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಐತಿಹಾಸಿಕ ಕಥಾಹಂದರ ಇರುವ ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅವರು ಜೀವಾ ಮಹಾಲಾ ಎಂಬ ವೀರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಫೋಟೋ ಮತ್ತು ವಿಡಿಯೋಗಳು ಎಕ್ಸ್ (ಟ್ವಿಟರ್) ಹಾಗೂ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿವೆ.

ಕೇಸರಿ ಪೇಟ, ಕುರ್ತಾ ಧರಿಸಿ, ಕೈಯಲ್ಲಿ ಮರಾಠಾ ಖಡ್ಗ ಹಿಡಿದು ಸಲ್ಮಾನ್ ಖಾನ್ ಸ್ಕ್ರೀನ್ ಮೇಲೆ ಬರುತ್ತಿದ್ದಂತೆಯೇ ಚಿತ್ರಮಂದಿರಗಳಲ್ಲಿ ಶಿಳ್ಳೆ-ಚಪ್ಪಾಳೆಗಳ ಸುರಿಮಳೆಯಾಗಿದೆ. ಸಲ್ಮಾನ್ ಅವರ ಈ ಲುಕ್ ಸಿನಿಮಾದ ಹೈಲೈಟ್ ಎನ್ನಲಾಗುತ್ತಿದೆ. ‘ಇಡೀ ಸಿನಿಮಾ ಒಂದು ಕಡೆಯಾದರೆ, ಸಲ್ಮಾನ್ ಖಾನ್ ಅವರ ಎಂಟ್ರಿಯೇ ಒಂದು ಕಡೆ’ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಸಲ್ಮಾನ್ ಅವರ ಈ ಲುಕ್ ನೋಡಿ ಅವರ ಹಳೆಯ ‘ವೀರ್’ ಸಿನಿಮಾವನ್ನು ನೆನಪಿಸಿಕೊಳ್ಳುತ್ತಿದ್ದಾರೆ.

ಈ ವಿಶೇಷ ಪಾತ್ರ ಸಲ್ಮಾನ್ ಅವರಿಗೆ ಸಿಕ್ಕಿದ್ದರ ಹಿಂದೆ ಒಂದು ಕುತೂಹಲಕಾರಿ ಕಥೆಯಿದೆ. ನಿರ್ದೇಶಕ ರಿತೇಶ್ ದೇಶ್ಮುಖ್ ಇತ್ತೀಚೆಗೆ ಇದನ್ನು ಹಂಚಿಕೊಂಡಿದ್ದರು.

‘ಹೊಸ ವರ್ಷದ ಸಂಭ್ರಮಾಚರಣೆಯ ವೇಳೆ ಸಲ್ಮಾನ್ ಈ ಸಿನಿಮಾದ ಬಗ್ಗೆ ಕೇಳಿದರು. ಚಿತ್ರದಲ್ಲಿ ತಮಗೇನು ಪಾತ್ರವಿದೆ ಎಂದು ಪ್ರಶ್ನಿಸಿದರು. ನಾನು ಅವರಿಗೆ ಯಾವುದೇ ಪಾತ್ರ ಇನ್ನು ಯೋಚಿಸಿಲ್ಲ ಎಂದಾಗ, ‘ನನ್ನನ್ನು ಬಿಟ್ಟು ನೀನು ಈ ಸಿನಿಮಾ ಮಾಡಲು ಸಾಧ್ಯವಿಲ್ಲ, ನಾನೂ ಇದರಲ್ಲಿ ಇರಲೇಬೇಕು’ ಅಂತ ಸಲ್ಮಾನ್ ಪಟ್ಟು ಹಿಡಿದರು’ ಎಂದು ರಿತೇಶ್ ಸ್ಮರಿಸಿದ್ದಾರೆ. ಸಲ್ಮಾನ್ ಅವರ ಈ ಪ್ರೀತಿ ಮತ್ತು ಸಿನಿಮಾದ ಮೇಲಿರುವ ಗೌರವದಿಂದಾಗಿ ಅವರಿಗಾಗಿ ‘ಜೀವಾ ಮಹಾಲಾ’ ಪಾತ್ರವನ್ನು ಸೃಷ್ಟಿಸಲಾಯಿತು.

ಇದನ್ನೂ ಓದಿ: ಸಲ್ಮಾನ್ ಖಾನ್ ಹೊಸ ಸಿನಿಮಾಗೆ ಸಂಕಷ್ಟ: ಕಥೆ ಬದಲಾದರೂ ತಪ್ಪದ ‘ಮಾತೃಭೂಮಿ’ ವಿವಾದ

‘ಜಿಯೋ ಸ್ಟುಡಿಯೋಸ್’ ಮತ್ತು ‘ಮುಂಬೈ ಫಿಲ್ಮ್ ಕಂಪನಿ’ ಜೊತೆಯಾಗಿ ನಿರ್ಮಾಣದ ‘ರಾಜ ಶಿವಾಜಿ’ ಸಿನಿಮಾವು ಛತ್ರಪತಿ ಶಿವಾಜಿ ಮಹಾರಾಜರ ಆರಂಭಿಕ ಜೀವನ ಮತ್ತು ಸ್ವರಾಜ್ಯ ಸ್ಥಾಪನೆಯ ಹೋರಾಟದ ಮೇಲೆ ಬೆಳಕು ಚೆಲ್ಲುತ್ತದೆ. ರಿತೇಶ್ ದೇಶ್ಮುಖ್ ಅವರು ಶಿವಾಜಿ ಮಹಾರಾಜರ ಪಾತ್ರದಲ್ಲಿ ನಟಿಸಿದ್ದು, ಸಂಜಯ್ ದತ್, ಅಭಿಷೇಕ್ ಬಚ್ಚನ್, ವಿದ್ಯಾ ಬಾಲನ್, ಭಾಗ್ಯಶ್ರೀ, ಮಹೇಶ್ ಮಂಜ್ರೇಕರ್ ಮತ್ತು ಬೋಮನ್ ಇರಾನಿ ಅವರಂತಹ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೋಲಾರ ಹಾಲು ಒಕ್ಕೂಟದಲ್ಲಿ ಕೋಟ್ಯಂತರ ರೂ ಹಗರಣ ಆರೋಪ: ರಾಜಕೀಯ ಕೆಸರೆರೆಚಾಟಕ್ಕೆ ವೇದಿಕೆಯಾದ ರೈತರ ಸಂಸ್ಥೆ – Kannada News | KOMUL Faces Multi Crore Scam Allegations; Farmers Body Turns Political Battleground

ಕೋಲಾರ, ಮೇ 01: ರೈತರ ಶ್ರಮದಿಂದ ಕಟ್ಟಿಬೆಳೆಸಿರುವ ಕೋಲಾರ ಹಾಲು ಒಕ್ಕೂಟವು (Kolar Milk Union) ಇಂದು ಕೆಲ ರಾಜಕೀಯ ನಾಯಕರ ಹಗರಣಗಳ (Scam) ಕೇಂದ್ರಬಿಂದುವಾಗಿ ಮಾರ್ಪಟ್ಟಿದೆ. ಒಕ್ಕೂಟದಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ಕೇಂದ್ರ ಮತ್ತು ರಾಜ್ಯದ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿದ್ದು, ಈ ಹಗರಣವೇ ಇದೀಗ ಸ್ಥಳೀಯ ರಾಜಕೀಯ ಕೆಸರೆರೆಚಾಟಕ್ಕೂ ಕಾರಣವಾಗಿದೆ.

ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಇನ್ನು ಎರಡು ವರ್ಷ ಬಾಕಿ ಇರುವಾಗಲೇ ಮಾಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಹಾಲಿ ಶಾಸಕ ಕೆ.ವೈ. ನಂಜೇಗೌಡ ಮತ್ತು ಬಿಜೆಪಿ ಮಾಜಿ ಶಾಸಕ ಕೆ.ಎಸ್. ಮಂಜುನಾಥಗೌಡ ಅವರ ನಡುವಿನ ವಾಕ್ಸಮರ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿದ್ದ ಮಾಜಿ ಶಾಸಕ ಮಂಜುನಾಥಗೌಡ, ಶಾಸಕ ನಂಜೇಗೌಡ ಒಕ್ಕೂಟದ ಅಧ್ಯಕ್ಷರಾದ ನಂತರ ಸುಮಾರು 300 ಕೋಟಿ ರೂಪಾಯಿಯಷ್ಟು ಹಗರಣ ನಡೆದಿದೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ: ಕೋಲಾರದಲ್ಲಿ ಕಲಬೆರಕೆ ಹಾಲು: ವರದಿಯಲ್ಲಿ ಆಘಾತಕಾರಿ ಅಂಶ; ಬೆಚ್ಚಿಬಿದ್ದ ಜನ

ಅಲ್ಲದೆ, ನೇಮಕಾತಿ ಪ್ರಕ್ರಿಯೆ, ಸೋಲಾರ್ ಪ್ಲಾಂಟ್ ನಿರ್ಮಾಣ ಮತ್ತು ಎಂವಿಕೆ ಗೋಲ್ಡನ್ ಡೈರಿ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ದೂರಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ತನಿಖೆ ನಡೆಸಿದ್ದು, ಇದೀಗ ಲೋಕಾಯುಕ್ತ ಸಂಸ್ಥೆಯೂ ತನಿಖೆ ಕೈಗೊಂಡಿದೆ ಎಂದು ಅವರು ತಿಳಿಸಿದ್ದರು.

ಆರೋಪ ಸಾಬೀತಾದರೆ ರಾಜಕೀಯದಿಂದಲೇ ನಿವೃತ್ತಿ ಎಂದ ಶಾಸಕ ಕೆ.ವೈ. ನಂಜೇಗೌಡ

ಈ ಆರೋಪಗಳಿಗೆ ತಿರುಗೇಟು ನೀಡಿರುವ ಶಾಸಕ ಕೆ.ವೈ. ನಂಜೇಗೌಡ, ತಮ್ಮ ಅವಧಿಯಲ್ಲಿ ಯಾವುದೇ ಹಗರಣ ನಡೆದಿಲ್ಲ, ಬದಲಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ ಎಂದು ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ಆರೋಪಗಳನ್ನು ತಳ್ಳಿಹಾಕಿರುವ ಅವರು, ತಮ್ಮ ಮೇಲಿರುವ ಹಗರಣದ ಆರೋಪ ಸಾಬೀತಾದರೆ ರಾಜಕೀಯದಿಂದಲೇ ನಿವೃತ್ತಿ ಹೊಂದುವುದಾಗಿ ಸವಾಲು ಹಾಕಿದ್ದಾರೆ.

300 ಕೋಟಿ ಅಲ್ಲ, ಅದು 512 ಕೋಟಿ ರೂ ಹಗರಣ ಎಂದ ದೂರುದಾರ 

ಈ ನಡುವೆ, ಪ್ರಕರಣದ ದೂರುದಾರ ಗೂಳಿಗಾನಹಳ್ಳಿ ನಾಗರಾಜ್ ಪತ್ರಿಕಾಗೋಷ್ಠಿ ನಡೆಸಿ ಹೊಸ ಬಾಂಬ್ ಸಿಡಿಸಿದ್ದಾರೆ. ಕೋಲಾರ ಹಾಲು ಒಕ್ಕೂಟದಲ್ಲಿ ನಡೆದಿರುವ ಹಗರಣದ ಮೊತ್ತ 300 ಕೋಟಿ ಅಲ್ಲ, ಅದು 512 ಕೋಟಿ ರೂ ಎಂದು ಆರೋಪಿಸಿದ್ದಾರೆ. ನೇಮಕಾತಿ ಪ್ರಕ್ರಿಯೆಯಲ್ಲಿಯೇ ಅಧ್ಯಕ್ಷರು 9 ಕೋಟಿ ರೂ ಹಣ ಪಡೆದಿದ್ದಾರೆ ಮತ್ತು ಪರೀಕ್ಷೆಯಲ್ಲಿ ಓಎಂಆರ್ (OMR) ಶೀಟ್‌ಗಳನ್ನು ಅದಲುಬದಲು ಮಾಡುವ ಮೂಲಕ ಅಕ್ರಮ ಎಸಗಲಾಗಿದೆ ಎಂದು ಅವರು ದೂರಿದ್ದಾರೆ.

ಒಟ್ಟು 75 ಹುದ್ದೆಗಳ ಪೈಕಿ 27 ಹುದ್ದೆಗಳಲ್ಲಿ ಅಕ್ರಮ ನಡೆದಿದ್ದು, ಪರೀಕ್ಷಾರ್ಥಿಗಳ ಎರಡೆರಡು ಓಎಂಆರ್ ಶೀಟ್‌ಗಳು ಪತ್ತೆಯಾಗಿವೆ ಎಂಬ ಅಂಶ ಲೋಕಾಯುಕ್ತ ತನಿಖೆಯಿಂದ ಬಹಿರಂಗವಾಗಿದೆ. ಜೊತೆಗೆ, ಒಕ್ಕೂಟದ ನಿರ್ದೇಶಕರುಗಳು ರೈತರ ಹಣದಲ್ಲಿ ಧಾರ್ಮಿಕ ದತ್ತಿ ನಿಧಿಯ ಮೂಲಕ ತಲಾ ಒಂದು ಚಿನ್ನದ ನಾಣ್ಯವನ್ನು ಪಡೆದುಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಹೀಗೆ ಹಾಲು ಒಕ್ಕೂಟದಲ್ಲಿ ನಂಜೇಗೌಡ ಅಧ್ಯಕ್ಷರಾದ ನಂತರ ಹಲವು ಹಗರಣಗಳು ನಡೆದಿವೆ. ಸದ್ಯದಲ್ಲೇ ಲೋಕಾಯುಕ್ತ ಹಾಗೂ ಇ.ಡಿ ತನಿಖೆಯ ವರದಿಗಳು ಬಂದ ಬಳಿಕ ಸತ್ಯಾಸತ್ಯಗಳು ಹೊರಬೀಳಲಿವೆ ಎಂದರು.

ಇದನ್ನೂ ಓದಿ: ನಂದಿನಿ ಸೇರಿ ಹಲವು ಕಂಪನಿಗಳ ನಕಲಿ ಹಾಲು ತಯಾರಿಕಾ ಜಾಲ ಪತ್ತೆ

ಒಟ್ಟಾರೆ ರೈತರ ಶ್ರಮದಲ್ಲಿ ಕಟ್ಟಲಾಗಿರುವ ಹಾಲು ಒಕ್ಕೂಟದಲ್ಲಿ ರಾಜಕೀಯ ನಾಯಕರು ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳಲು ಕೋಟ್ಯಂತರ ರೂ ಹಗರಣದ ಆರೋಪ-ಪ್ರತ್ಯಾರೋಪ ಮಾಡುತ್ತಿದ್ದು, ತನಿಖಾ ಸಂಸ್ಥೆಗಳ ವರದಿ ಹೊರಬಂದ ನಂತರವಷ್ಟೇ ಸತ್ಯಾಸತ್ಯತೆಗಳು ಹೊರಬೀಳಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IPL 2026: ಮುಂಬೈ ತಂಡದ ಸ್ಟಾರ್ ಆಟಗಾರ ತಿಂಗಳ ಕಾಲ ಕ್ರಿಕೆಟ್​ನಿಂದ ದೂರ – Kannada News | Mitchell Santner IPL Injury: Out for Month, Major Blow to New Zealand Cricket

ಐಪಿಎಲ್ (IPL) ಪಂದ್ಯದ ವೇಳೆ ಫಿಲ್ಡಿಂಗ್ ಮಾಡುವಾಗ ನೆಲಕ್ಕೆ ಬಿದ್ದು ಭುಜಕ್ಕೆ ಗಾಯ ಮಾಡಿಕೊಂಡಿದ್ದ ಮುಂಬೈ ಇಂಡಿಯನ್ಸ್ (Mumbai Indians) ತಂಡದ ಸ್ಟಾರ್ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ (Mitchell Santner) ಐಪಿಎಲ್​ನಿಂದಲೇ ಹೊರಬಿದ್ದಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ತವರಿನ ಪಂದ್ಯದಲ್ಲಿ ಬೌಂಡರಿಯ ಬಳಿ ಕ್ಯಾಚ್ ಹಿಡಿಯಲು ಪ್ರಯತ್ನಿಸುವಾಗ ಸ್ಯಾಂಟ್ನರ್ ಅವರ ಭುಜಕ್ಕೆ ಗಾಯವಾಗಿತ್ತು. ಇದೀಗ ಅವರ ಗಾಯದ ಬಗ್ಗೆ ಪ್ರಮುಖ ಮಾಹಿತಿ ಹೊರಬಿದ್ದಿದ್ದು, ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯಲ್ಲಿ ಕಳವಳವನ್ನು ಹುಟ್ಟುಹಾಕಿದೆ. ವಾಸ್ತವವಾಗಿ ಸ್ಯಾಂಟ್ನರ್ ಅವರ ಗಾಯವು ತುಂಬಾ ಗಂಭೀರವಾಗಿದ್ದು, ಅವರನ್ನು ಕ್ರಿಕೆಟ್​ನಿಂದ ತಿಂಗಳ ಕಾಲ ದೂರವಿಡಲಿದೆ.

ಮಿಚೆಲ್ ಸ್ಯಾಂಟ್ನರ್​ಗೆ ಗಂಭೀರ ಗಾಯ

ಗಾಯದಿಂದ ಬಳಲುತ್ತಿರುವ ನ್ಯೂಜಿಲೆಂಡ್ ವೈಟ್-ಬಾಲ್ ನಾಯಕ ಮಿಚೆಲ್ ಸ್ಯಾಂಟ್ನರ್ ಕನಿಷ್ಠ ಒಂದು ತಿಂಗಳ ಕಾಲ ಆಟದಿಂದ ಹೊರಗುಳಿಯಲಿದ್ದಾರೆ. ಗ್ರೇಡ್ 3 ಎಸಿಎಲ್ ಭುಜದ ಗಾಯದಿಂದ ಬಳಲುತ್ತಿರುವ ಸ್ಯಾಂಟ್ನರ್, ಈಗಾಗಲೇ ನ್ಯೂಜಿಲೆಂಡ್‌ಗೆ ಮರಳಿದ್ದು, ಸ್ಕ್ಯಾನ್ನಿಂಗ್​ ಒಳಗಾಗಿದ್ದಾರೆ. ಸ್ಕ್ಯಾನ್ನಿಂಗ್ ವರದಿಯ ಪ್ರಕಾರ ಸ್ಯಾಂಟ್ನರ್​ಗೆ ವೈದ್ಯರು ಕನಿಷ್ಠ ಒಂದು ತಿಂಗಳ ವಿಶ್ರಾಂತಿ ಮತ್ತು ರಿಹ್ಯಾಬ್​ಗೆ ಒಳಗಾಗುವಂತೆ ಸೂಚಿಸಿದ್ದಾರೆ, ಇದರಿಂದಾಗಿ ಅವರು ಮುಂಬರುವ ದಿನಗಳಲ್ಲಿ ಹಲವಾರು ಪ್ರಮುಖ ಪಂದ್ಯಗಳಿಂದ ಹೊರಗುಳಿಯಬೇಕಾಗಬಹುದು.

ಸ್ಯಾಂಟ್ನರ್ ಎಷ್ಟು ಪಂದ್ಯಗಳಿಗೆ ಅಲಭ್ಯ?

ಈ ಗಾಯದಿಂದಾಗಿ ಸ್ಯಾಂಟ್ನರ್ ಮೇ ತಿಂಗಳ ಅಂತ್ಯದಲ್ಲಿ ನಡೆಯಲಿರುವ ಐರ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಮತ್ತು ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಎರಡನೇ ಮತ್ತು ಮೂರನೇ ಟೆಸ್ಟ್ ಪಂದ್ಯಗಳಿಗೆ ಅವರ ಲಭ್ಯತೆಯನ್ನು ನಂತರ ನಿರ್ಧರಿಸಲಾಗುತ್ತದೆ. ಸಮಯಕ್ಕೆ ಸರಿಯಾಗಿ ಸ್ಯಾಂಟ್ನರ್ ಫಿಟ್ ಆಗದಿದ್ದರೆ, ಅವರು ಇಂಗ್ಲೆಂಡ್ ಸರಣಿಯನ್ನು ಸಹ ತಪ್ಪಿಸಿಕೊಳ್ಳಬಹುದು.
ಟಿ20 ವಿಶ್ವಕಪ್ ನಂತರ ವೈಯಕ್ತಿಕ ಕಾರಣಗಳಿಗಾಗಿ ಕ್ರಿಕೆಟ್​ನಿಂದ ದೂರ ಉಳಿದಿದ್ದ34 ವರ್ಷದ ಸ್ಯಾಂಟ್ನರ್ ಸಾಕಷ್ಟು ತಡವಾಗಿ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದರು. ಮುಂಬೈ ಪರ ನಾಲ್ಕು ಪಂದ್ಯಗಳನ್ನು ಆಡಿದ್ದ ಸ್ಯಾಂಟ್ನರ್ ಐದು ವಿಕೆಟ್‌ಗಳನ್ನು ಪಡೆದು 26 ರನ್‌ ಕೂಡ ಕಲೆಹಾಕಿದ್ದರು.

18 ಎಸೆತಗಳಲ್ಲಿ 10 ಬೌಂಡರಿ, ಸಿಕ್ಸರ್‌..! ವಿಂಡೀಸ್ ವಿರುದ್ಧ ಸ್ಯಾಂಟ್ನರ್ ಏಕಾಂಗಿ ಹೋರಾಟ ವ್ಯರ್ಥ

ಸ್ಯಾಂಟ್ನರ್ ಗಾಯವು ನ್ಯೂಜಿಲೆಂಡ್ ಕ್ರಿಕೆಟ್‌ಗೆ ದೊಡ್ಡ ಆಘಾತ ನೀಡಿದೆ. ಏಕೆಂದರೆ ಅವರು ವೈಟ್-ಬಾಲ್ ಸ್ವರೂಪದಲ್ಲಿ ಪ್ರಮುಖ ಆಲ್‌ರೌಂಡರ್ ಮತ್ತು ನಾಯಕರಾಗಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ತಂಡವು ಈಗ ತನ್ನ ಯೋಜನೆಯನ್ನು ಬದಲಾಯಿಸಬೇಕಾಗುತ್ತದೆ. ಇತ್ತೀಚೆಗೆ, ಸ್ಯಾಂಟ್ನರ್ ನಾಯಕತ್ವದಲ್ಲಿ ನ್ಯೂಜಿಲೆಂಡ್ ಟಿ20 ವಿಶ್ವಕಪ್‌ನ ಫೈನಲ್ ತಲುಪಿತ್ತು. ಇದೀಗ ಗಾಯದಿಂದ ಬಳಲುತ್ತಿರುವ ಸ್ಯಾಂಟ್ನರ್ ಜುಲೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಏಕದಿನ ಮತ್ತು ಟಿ20 ಸರಣಿಗೆ ಲಭ್ಯವಾಗುವ ನಿರೀಕ್ಷೆಯಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೊಜ್ತಬಾ ಖಮೇನಿ ವಿರುದ್ಧ ಶತ್ರುಗಳು ವದಂತಿ ಹರಡುತ್ತಿದ್ದಾರೆ; ಇರಾನ್​ನಿಂದ ಸುಪ್ರೀಂ ನಾಯಕನ ಆರೋಗ್ಯದ ಬಗ್ಗೆ ಸ್ಪಷ್ಟನೆ – Kannada News | Enemies spreading rumours Mojtaba Khamenei is perfectly healthy Iran Supreme Leaders key aide clarifies

ಟೆಹ್ರಾನ್, ಮೇ 1: ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರ ಆರೋಗ್ಯ ತೀರಾ ಹದಗೆಟ್ಟಿದೆ ಎಂದು ಅಮೆರಿಕ ಆಗಾಗ ಆರೋಪ ಮಾಡುತ್ತಲೇ ಇತ್ತು. ಇದಕ್ಕೆ ಇರಾನ್ ಪ್ರತಿಕ್ರಿಯೆ ನೀಡಿದೆ. ಇರಾನ್​ನ (Iran) ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಅವರ ಆಪ್ತ ಅಯತೊಲ್ಲಾ ಮೊಹ್ಸೆನ್ ಕೋಮಿ ಇಂದು ಅಮೆರಿಕದ ಹೇಳಿಕೆಗಳನ್ನು ತಳ್ಳಿಹಾಕಿದ್ದಾರೆ. ಸುಪ್ರೀಂ ನಾಯಕ ಪರಿಪೂರ್ಣವಾಗಿ ಆರೋಗ್ಯವಾಗಿದ್ದಾರೆ, ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶತ್ರು ದೇಶಗಳು ವದಂತಿಗಳನ್ನು ಹರಡಲು ಇಂತಹ ತಂತ್ರಗಳನ್ನು ಬಳಸುತ್ತದೆ ಎಂದು ಕೋಮಿ ಹೇಳಿದ್ದಾರೆ.

ಮೊಜ್ತಾಬಾ ಖಮೇನಿ ಅಮೆರಿಕದಿಂದ ಬಾಂಬ್ ದಾಳಿಗೊಳಗಾದ ಕಟ್ಟಡದಲ್ಲಿದ್ದರು. ಆದರೆ ಅವರನ್ನು ರಕ್ಷಿಸಲಾಯಿತು ಎಂದು ಕೋಮಿ ದೃಢಪಡಿಸಿದ್ದಾರೆ. “ಅವರು ಬಾಂಬ್ ದಾಳಿಗೊಳಗಾದ ಕಟ್ಟಡದಲ್ಲೇ ಇದ್ದರು ಎಂಬುದು ನಿಜ. ಅಲ್ಲಿದ್ದ ಇತರರು ಹುತಾತ್ಮರಾದರು. ಸ್ಫೋಟಕ್ಕೆ ಕೆಲವೇ ನಿಮಿಷಗಳ ಮೊದಲು ದೇವರ ಇಚ್ಛೆಯಿಂದ ಅವರು ಅಂಗಳಕ್ಕೆ ಹೋಗಿದ್ದರು. ದೇವರು ಅವರನ್ನು ರಕ್ಷಿಸಬೇಕೆಂದು ಬಯಸಿದ್ದರು” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಇರಾನ್​ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ರಷ್ಯಾದಲ್ಲಿದ್ದಾರಾ? ರಾಯಭಾರಿ ಹೇಳಿದ್ದೇನು?

“ಸದ್ಯಕ್ಕೆ ಅವರು ಪರಿಪೂರ್ಣವಾಗಿ ಆರೋಗ್ಯವಾಗಿದ್ದಾರೆ ಮತ್ತು ಅವರೇ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ, ವಿವಿಧ ಪರಿಸ್ಥಿತಿಗಳಲ್ಲಿ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು ಅವರು ನಿರ್ದಿಷ್ಟ ಸೂಚನೆಗಳನ್ನು ಸಹ ನೀಡಿದ್ದಾರೆ. ಅವರು ಪರಿಸ್ಥಿತಿಯ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದಾರೆ” ಎಂದು ಕೋಮಿ ಹೇಳಿದ್ದಾರೆ ಎಂದು ಫಾರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Video: ಶಾಲಾ ಬಸ್‌ನಿಂದ ಇಳಿದು ರಸ್ತೆ ದಾಟುತ್ತಿದ್ದ ಮಗುವಿಗೆ ಬೈಕ್ ಡಿಕ್ಕಿ; ಭೀಕರ ದೃಶ್ಯ ಸಿಸಿಟಿಯಲ್ಲಿ ಸೆರೆ – Kannada News | Hoshiarpur School Bus Accident: Child Safety Alert, Road Crossing Dangers

ಪಂಜಾಬ್‌ನ ಹೋಶಿಯಾರ್‌ಪುರದ ಬಳಿ ಶಾಲಾ ಬಸ್ಸಿನಿಂದ ಇಳಿದು ರಸ್ತೆ ದಾಟುತ್ತಿದ್ದ ಮಗುವಿಗೆ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದ ಭೀಕರ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಶಾಲಾ ಬಸ್ ಮಗುವಿನ ಮನೆಯ ಸಮೀಪವೇ ನಿಲ್ಲಿಸಿದ್ದರೂ ಸಹ, ಮಗು ಬಸ್ಸಿನ ಹಿಂದಿನಿಂದ ರಸ್ತೆ ದಾಟಲು ಪ್ರಯತ್ನಿಸಿದಾಗ ವೇಗವಾಗಿ ಬಂದ ಬೈಕ್ ಬಲವಾಗಿ ಡಿಕ್ಕಿ ಹೊಡೆದಿದ್ದು, ಅಪಘಾತದ ತೀವ್ರತೆಗೆ ಮಗು ಗಂಭೀರವಾಗಿ ಗಾಯಗೊಂಡಿದೆ. ಸದ್ಯ ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಘಟನೆಯು ಶಾಲಾ ವಾಹನ ಚಾಲಕರು, ಸಹಾಯಕರು ಮತ್ತು ಪೋಷಕರು ರಸ್ತೆ ಸುರಕ್ಷತೆಯ ಬಗ್ಗೆ ಮಕ್ಕಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಾದ ಮತ್ತು ರಸ್ತೆ ದಾಟುವಾಗ ಅತೀವ ಎಚ್ಚರಿಕೆ ವಹಿಸಬೇಕಾದ ಅಗತ್ಯವನ್ನು ನೆನಪಿಸಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version