ಮಳೆಗೆ ಮುಳುಗಿದ ಬೆಂಗಳೂರು: ನಗರದ ಮೂಲಸೌಕರ್ಯದ ಬಗ್ಗೆ ಪ್ರಶ್ನಿಸಿದ ಅಸ್ಸಾಂ ಯುವತಿ – Kannada News | Bengaluru Rain Floods: Assam Based Woman Questions City Infrastructure and Civic Woes
ಬೆಂಗಳೂರಿನ ಮೂಲಸೌಕರ್ಯದ ಬಗ್ಗೆ ಪ್ರಶ್ನಿಸಿದ ಅಸ್ಸಾಂ ಯುವತಿ Image Credit source: Hindustan Times ಬೆಂಗಳೂರು, ಮೇ 01: ಮೊನ್ನೆ ನಗರದಲ್ಲಿ ಸುರಿದ ಮಳೆಯಿಂದಾದ ಅನಾಹುತಗಳಿಂದ ಸರಿಯಾಗಿ ಸುಧಾರಿಸಿಕೊಳ್ಳಲು ಬೆಂಗಳೂರಿನ ಜನರಿಗೆ ಇನ್ನೂ ಆಗಿಲ್ಲ. ಈ ನಡುವೆ ಮಳೆ ಮುಂದುವರಿದಿದ್ದು, ಮಳೆಯ ನಂತರ ನಗರದ ದುಸ್ಥಿತಿಯ ಬಗ್ಗೆ ಅಸ್ಸಾಂ ಮೂಲದ ಮತ್ತು ಹಾಲಿ ಬೆಂಗಳೂರಿನ ನಿವಾಸಿ ಅಸ್ಮಿತಾ ಗುಪ್ತಾ ಎಂಬವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಚ್ಎಸ್ಆರ್ ಲೇಔಟ್ ಪ್ರದೇಶದಲ್ಲಿ ಮಾತ್ರ ಮಳೆಯಾದರೂ ರಸ್ತೆ…