ತಪ್ಪು ಮಾಡಿದ್ರೆ ದಂಡ ಹಾಕಿ, ಕೈ ಮಾಡುವ ಹಕ್ಕಿಲ್ಲ: ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ ಟ್ರಾಫಿಕ್ ಪೊಲೀಸರ ದೌರ್ಜನ್ಯ – Kannada News | Bangalore Police Misconduct: When Can Traffic Cops Use Force? Legal Limits Explained

ಬೆಂಗಳೂರು, ಮೇ.1: ವಾಹನ ತಪಾಸಣೆಯ ಸಂದರ್ಭದಲ್ಲಿ ಸಂಚಾರಿ ಪೊಲೀಸರು ಸಾರ್ವಜನಿಕರ ಮೇಲೆ ಹಲ್ಲೆ ಮಾಡುವ ಅಥವಾ ಅನುಚಿತವಾಗಿ ವರ್ತಿಸುವ ಘಟನೆಗಳು ಆಗಾಗ್ಗೆ ವರದಿಯಾಗುತ್ತಿರುತ್ತವೆ. ಆದರೆ, ಭಾರತೀಯ ಮೋಟಾರು ವಾಹನ ಕಾಯ್ದೆ 1988 ರ ಅಡಿಯಲ್ಲಿ ಯಾವುದೇ ಪೊಲೀಸ್ ಅಧಿಕಾರಿ ಅಥವಾ ಕಾನ್‌ಸ್ಟೆಬಲ್‌ಗೆ ನಾಗರಿಕರ ಮೇಲೆ ದೈಹಿಕವಾಗಿ ಹಲ್ಲೆ ಮಾಡುವ ಅಧಿಕಾರವಿಲ್ಲ ಎಂಬುದು ಕಾನೂನುಬದ್ಧ ಸತ್ಯ. ಆದರೆ ಬೆಂಗಳೂರಿನಲ್ಲಿ ಪೊಲೀಸರು ಕಾನೂನು ವಿರೋಧವಾಗಿ ನಡೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆಟೋ ಚಾಲಕನೊಬ್ಬನಿಗೆ ಟ್ರಾಫಿಕ್​​ ಪೊಲೀಸರು ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಆಟೋ ಚಾಲಕ ಪ್ರಶ್ನೆ ಮಾಡಿದ್ದಕ್ಕೆ ಎಳೆದಾಡಿದ್ದಾರೆ. ಇನ್ನೊಂದು ಕಡೆ ಲಾರಿ ಡ್ರೈವರ್​​​ಗೆ ಕಪಾಳಮೋಕ್ಷ ಮಾಡಿದ್ದಾರೆ. ಇದೀಗ ಈ ವಿಡಿಯೋವನ್ನು @KarnatakaPortfolio ಎಕ್ಸ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಪೊಲೀಸರಿಗೆ ದಾಖಲೆಗಳ ಪರಿಶೀಲನೆಗಾಗಿ ವಾಹನವನ್ನು ನಿಲ್ಲಿಸುವ ಅಧಿಕಾರವಿದೆ. ಚಾಲನಾ ಪರವಾನಗಿ (DL), ಆರ್‌ಸಿ (RC), ವಿಮೆ ಮತ್ತು ಪಿಯುಸಿ (PUC) ದಾಖಲೆಗಳನ್ನು ಕೇಳುವುದು, ನಿಯಮ ಉಲ್ಲಂಘನೆಯಾದಲ್ಲಿ ಚಲನ್ ನೀಡುವುದು ಅಥವಾ ದಂಡ ವಿಧಿಸುವುದು. ಗಂಭೀರ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ವಾಹನವನ್ನು ವಶಕ್ಕೆ ಪಡೆಯುವ ಅಧಿಕಾರ ಪೊಲೀಸರಿಗೆ ಇದೆ. ಯಾವುದೇ ಸಂದರ್ಭದಲ್ಲಿ ಪೊಲೀಸರು ಬಲಪ್ರಯೋಗ ಮಾಡುವುದು ಕೇವಲ ಆತ್ಮರಕ್ಷಣೆಗಾಗಿ ಅಥವಾ ಗಂಭೀರ ಅಪರಾಧವನ್ನು ತಡೆಯಲು ಮಾತ್ರ ಸೀಮಿತವಾಗಿದೆ. ಅನಗತ್ಯ ಹಲ್ಲೆಯು ಭಾರತೀಯ ದಂಡ ಸಂಹಿತೆ (IPC) ಅಡಿಯಲ್ಲಿ ಅಪರಾಧವಾಗುತ್ತದೆ ಮತ್ತು ಇದು ಪೊಲೀಸ್ ಸೇವಾ ನಿಯಮಗಳ ಉಲ್ಲಂಘನೆಯೂ ಹೌದು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇರಾನ್ ಸಮರ ಅಂತ್ಯ: ಟ್ರಂಪ್ ಆಡಳಿತದ ದಿಢೀರ್ ಘೋಷಣೆ, ಸಂಸತ್ತಿನ ಹಸ್ತಕ್ಷೇಪಕ್ಕೆ ಬೀಳಲಿದೆಯೇ ಬ್ರೇಕ್? – Kannada News | US Iran Conflict: Trump’s Declaration and Congressional War Powers Battle

ಡೊನಾಲ್ಡ್​ ಟ್ರಂಪ್ Image Credit source: Observer Research Foundation

ವಾಷಿಂಗ್ಟನ್, ಮೇ 1: ಅಮೆರಿಕ ಮತ್ತು ಇರಾನ್(Iran) ನಡುವಿನ ಉದ್ವಿಗ್ನತೆಯ ಮಧ್ಯೆ, ಟ್ರಂಪ್ ಆಡಳಿತವು ಮಧ್ಯಪ್ರಾಚ್ಯದ ಸಂಘರ್ಷದ ಕುರಿತು ಮಹತ್ವದ ರಾಜತಾಂತ್ರಿಕ ಮತ್ತು ಕಾನೂನು ನಿಲುವನ್ನು ಪ್ರಕಟಿಸಿದೆ. ಕಳೆದ ತಿಂಗಳು ಜಾರಿಗೆ ಬಂದ ಕದನ ವಿರಾಮದ ಹಿನ್ನೆಲೆಯಲ್ಲಿ ಇರಾನ್ ವಿರುದ್ಧದ ಯುದ್ಧವು ‘ಮುಕ್ತಾಯಗೊಂಡಿದೆ’ ಎಂದು ಟ್ರಂಪ್ ಆಡಳಿತ ಘೋಷಿಸಿದೆ. ಈ ಘೋಷಣೆಯು ಕೇವಲ ಯುದ್ಧದ ನಿಲ್ಲಿಸುವುದಷ್ಟೇ ಅಲ್ಲದೆ, ಅಮೆರಿಕದ ಸಂಸತ್ತಾದ ಕಾಂಗ್ರೆಸ್‌ನಿಂದ ಪಡೆಯಬೇಕಾದ ಕಡ್ಡಾಯ ಅನುಮೋದನೆಯನ್ನು ತಪ್ಪಿಸುವ ಒಂದು ಕಾರ್ಯತಂತ್ರ ಎಂದು ಹೇಳಲಾಗುತ್ತಿದೆ.

ಅಮೆರಿಕದ ಕಾನೂನಿನ ಪ್ರಕಾರ, ಅಧ್ಯಕ್ಷರು ಯಾವುದೇ ಸೇನಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ 60 ದಿನಗಳ ಒಳಗೆ ಕಾಂಗ್ರೆಸ್‌ನ ಅನುಮೋದನೆ ಪಡೆಯುವುದು ಕಡ್ಡಾಯ. ಆದರೆ, ಏಪ್ರಿಲ್ 7 ರಿಂದ ಅಮೆರಿಕ ಮತ್ತು ಇರಾನ್ ಪಡೆಗಳ ನಡುವೆ ಯಾವುದೇ ಗುಂಡಿನ ಚಕಮಕಿ ನಡೆದಿಲ್ಲ ಎಂದು ಯುದ್ಧ ಕಾರ್ಯದರ್ಶಿ ಪೀಟ್ ಹೆಗ್ಸೆತ್ ವಾದಿಸಿದ್ದಾರೆ. ಕದನ ವಿರಾಮ ಜಾರಿಯಲ್ಲಿರುವುದರಿಂದ ಈ 60 ದಿನಗಳ ಕಾಲಮಿತಿಯು ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತದೆ ಅಥವಾ ನಿಲ್ಲುತ್ತದೆ ಎಂಬುದು ಶ್ವೇತಭವನದ ವಾದವಾಗಿದೆ.

ಟ್ರಂಪ್ ಆಡಳಿತದ ಈ ಹೊಸ ವ್ಯಾಖ್ಯಾನವನ್ನು ಡೆಮೋಕ್ರಾಟ್‌ಗಳು ತೀವ್ರವಾಗಿ ತಿರಸ್ಕರಿಸಿದ್ದಾರೆ. ಸೆನೆಟರ್ ಟಿಮ್ ಕೈನೆ ಮಾತನಾಡಿ, ಕಾನೂನಿನ ಚೌಕಟ್ಟಿನಲ್ಲಿ ಈ ವಾದಕ್ಕೆ ಮಾನ್ಯತೆ ಇಲ್ಲ ಮತ್ತು ಇದು ಯುದ್ಧದ ಕುರಿತು ಗಂಭೀರ ಕಾನೂನು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಎಚ್ಚರಿಸಿದ್ದಾರೆ. ಅಮೆರಿಕದ ಜನರ ಮೇಲೆ ಈ ಯುದ್ಧವನ್ನು ಅನಗತ್ಯವಾಗಿ ಹೇರಲಾಗಿದೆ ಎಂದು ವಿರೋಧ ಪಕ್ಷದ ನಾಯಕರು ಕಿಡಿಕಾರಿದ್ದಾರೆ.

ಮತ್ತಷ್ಟು ಓದಿ: ಹೃದಯಾಘಾತವಾಗಬಹುದು, ಟ್ರಂಪ್ ಶಾಂತಿ ಪ್ರಸ್ತಾವನೆ ತಿರಸ್ಕರಿಸಿದ ಬೆನ್ನಲ್ಲೇ ಇರಾನ್‌ನಿಂದ ಹೊಸ ಮಹಾಸ್ತ್ರ ಪ್ರಯೋಗ

ಕಾಂಗ್ರೆಸ್ ತನ್ನ ಅಧಿಕಾರವನ್ನು ಸೀಮಿತಗೊಳಿಸುತ್ತಿರುವುದನ್ನು ಆಗಾಗ ಟೀಕಿಸುವ ಅಧ್ಯಕ್ಷ ಟ್ರಂಪ್, ಮುಂದಿನ ಮಿಲಿಟರಿ ಆಯ್ಕೆಗಳ ಕುರಿತು ಶೀಘ್ರದಲ್ಲೇ ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಇರಾನ್ ಜೊತೆ ರಹಸ್ಯವಾಗಿ ಮಾತುಕತೆಗಳು ನಡೆಯುತ್ತಿವೆ ಮತ್ತು ಆ ದೇಶದ ಆರ್ಥಿಕತೆಯು ಅಮೆರಿಕದ ದಿಗ್ಬಂಧನದಿಂದಾಗಿ ಕುಸಿಯುತ್ತಿದೆ ಎಂದು ಟ್ರಂಪ್ ಪುನರುಚ್ಚರಿಸಿದ್ದಾರೆ.

ಶ್ವೇತಭವನ ಮತ್ತು ಕಾಂಗ್ರೆಸ್ ನಡುವಿನ ಈ ಕಾನೂನು ಸಂಘರ್ಷವು ಅಮೆರಿಕದ ವಿದೇಶಾಂಗ ನೀತಿಯಲ್ಲಿ ಹೊಸ ಬಿಕ್ಕಟ್ಟನ್ನು ಸೃಷ್ಟಿಸಿದ್ದು, ಇರಾನ್ ಜೊತೆಗಿನ ಶಾಂತಿ ಒಪ್ಪಂದವು ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದು ಇಡೀ ಜಗತ್ತಿನ ಕುತೂಹಲಕ್ಕೆ ಕಾರಣವಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

GT vs RCB: ಜಿಟಿ ಮಾಸ್ಟರ್ ಪ್ಲ್ಯಾನ್ ರಿವೀಲ್: ಗಿಲ್ ಟಾರ್ಗೆಟ್ ಮಾಡಿದ್ದು ಆರ್​ಸಿಬಿಯ ಈ ಒಬ್ಬ ವ್ಯಕ್ತಿಯನ್ನು – Kannada News | Gujarat Titans Master Plan Revealed Gill Targets josh hazlewood from RCB

ಬೆಂಗಳೂರು (ಮೇ. 01): ಐಪಿಎಲ್ 2026 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಪರ ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹ್ಯಾಜಲ್‌ವುಡ್ ಅದ್ಭುತ ಬೌಲಿಂಗ್ ಮಾಡುತ್ತಿದ್ದರು. ಹೊಸ ಚೆಂಡಿನಲ್ಲಿ ಅವರ ವಿರುದ್ಧ ರನ್ ಗಳಿಸುವುದು ಸುಲಭವಲ್ಲ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಹಿಂದಿನ ಪಂದ್ಯದಲ್ಲಿ ಅವರು ಎಂಟು ರನ್‌ಗಳಿಗೆ ಆರು ವಿಕೆಟ್‌ಗಳನ್ನು ಕಬಳಿಸಿದರು. ಆದರೆ, ಗುಜರಾತ್ ಟೈಟಾನ್ಸ್ ವಿರುದ್ಧ ಹಾಗಾಗಲಿಲ್ಲ. ಗುಜರಾತ್ ಆಕ್ರಮಣಕಾರಿ ಮನಸ್ಥಿತಿಯಲ್ಲಿ ಮೈದಾನಕ್ಕೆ ಇಳಿದು ಜೋಶ್ ಹ್ಯಾಜಲ್‌ವುಡ್ ಅನ್ನು ನೇರವಾಗಿ ಗುರಿಯಾಗಿಸಿಕೊಂಡಿತು.

ಹ್ಯಾಜಲ್‌ವುಡ್‌ನ ಅತ್ಯಂತ ದುಬಾರಿ ಐಪಿಎಲ್ ಓವರ್

ಎರಡನೇ ಓವರ್‌ನಲ್ಲಿ, ಶುಭ್‌ಮನ್ ಗಿಲ್ ಜೋಶ್ ಹ್ಯಾಜಲ್‌ವುಡ್ ಮೇಲೆ ಸ್ಫೋಟಕ ದಾಳಿ ನಡೆಸಿದರು. ಮೊದಲ ಎರಡು ಎಸೆತಗಳಲ್ಲಿ ಎರಡು ಬೌಂಡರಿಗಳನ್ನು ಬಾರಿಸಿದ ಗಿಲ್, ನಾಲ್ಕನೇ ಎಸೆತವನ್ನು ಲಾಂಗ್-ಆನ್‌ನಲ್ಲಿ ಸಿಕ್ಸರ್‌ಗೆ ಅಟ್ಟಿದರು. ನಂತರ ಮುಂದಿನ ಎರಡು ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿ, ಆ ಓವರ್‌ನಲ್ಲಿ 24 ರನ್ ಗಳಿಸಿದರು. ಇದು ಐಪಿಎಲ್‌ನಲ್ಲಿ ಹ್ಯಾಜಲ್‌ವುಡ್ ಅವರ ಜಂಟಿ ಅತ್ಯಂತ ದುಬಾರಿ ಓವರ್ ಆಗಿದೆ. 2022 ರಲ್ಲಿ ಬ್ರಾಬೋರ್ನ್ ಕ್ರೀಡಾಂಗಣದಲ್ಲಿ ಅವರು 24 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು.

ಇದು ಜೋಶ್ ಹ್ಯಾಜಲ್‌ವುಡ್ ಅವರ ಐಪಿಎಲ್ ವೃತ್ತಿಜೀವನದ ಎರಡನೇ ಅತ್ಯಂತ ದುಬಾರಿ ಸ್ಪೆಲ್ ಆಗಿದೆ. ಅವರು ತಮ್ಮ 4 ಓವರ್‌ಗಳ ಸ್ಪೆಲ್‌ನಲ್ಲಿ 56 ರನ್‌ಗಳನ್ನು ಬಿಟ್ಟುಕೊಟ್ಟರು. ಆರ್‌ಸಿಬಿ ಗುಜರಾತ್‌ಗೆ 156 ರನ್‌ಗಳ ಗುರಿಯನ್ನು ನೀಡಿತ್ತು. ಇದರರ್ಥ ಗುಜರಾತ್ ಜೋಶ್ ಹ್ಯಾಜಲ್‌ವುಡ್ ಎಸೆದ ಕೇವಲ 24 ಎಸೆತಗಳಲ್ಲಿ ತಮ್ಮ ರನ್‌ಗಳಲ್ಲಿ ಸುಮಾರು 36 ಪ್ರತಿಶತವನ್ನು ಗಳಿಸಿತು. ಮೊದಲ ಓವರ್‌ನಲ್ಲಿ 24 ರನ್‌ಗಳನ್ನು ಬಿಟ್ಟುಕೊಟ್ಟ ನಂತರ, ಅವರು ಎರಡನೇ ಓವರ್‌ನಲ್ಲಿ 13 ರನ್‌ಗಳು, ಮೂರನೇ ಓವರ್‌ನಲ್ಲಿ 12 ರನ್‌ಗಳು ಮತ್ತು ನಾಲ್ಕನೇ ಓವರ್‌ನಲ್ಲಿ 7 ರನ್‌ಗಳನ್ನು ಬಿಟ್ಟುಕೊಟ್ಟರು. ಇದಕ್ಕೂ ಮೊದಲು, ಆರ್‌ಸಿಬಿ ಪರ ಆಡುವಾಗ, ಅವರು ಪಂಜಾಬ್ ಕಿಂಗ್ಸ್ ವಿರುದ್ಧ ನಾಲ್ಕು ಓವರ್‌ಗಳಲ್ಲಿ 64 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಈ ಮೂಲಕ ಜಿಟಿ ನೇರವಾಗಿ ಜೋಶ್ ಅವರನ್ನು ಟಾರ್ಗೆಟ್ ಮಾಡಿತು.

GT vs RCB, IPL 2026: ಮುಲಾಜಿಲ್ಲದೆ ಸೋಲಿಗೆ ಯಾರು ಕಾರಣ ಎಂದು ಖಡಕ್ ಆಗಿ ಹೇಳಿದ ರಜತ್ ಪಾಟಿದಾರ್

ಗಿಲ್ ಕೇವಲ 18 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 43 ರನ್ ಗಳಿಸಿದರು. ಜೋಸ್ ಬಟ್ಲರ್ 19 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಮತ್ತು ಎರಡು ಬೌಂಡರಿಗಳೊಂದಿಗೆ 39 ರನ್ ಗಳಿಸಿದರು. ಗುಜರಾತ್‌ನ ಗೆಲುವು ಖಚಿತವೆನಿಸಿದರೂ, ಅಲ್ಲಿಂದ ಗುಜರಾತ್‌ನ ವಿಕೆಟ್‌ಗಳು ಪತನವಾಗುತ್ತಲೇ ಇದ್ದವು. ವಾಷಿಂಗ್ಟನ್ ಸುಂದರ್ (12), ಶಾರುಖ್ ಖಾನ್ (8), ಮತ್ತು ಜೇಸನ್ ಹೋಲ್ಡರ್ (12) ನಿರ್ಗಮಿಸಿದರು. ಆದಾಗ್ಯೂ, ರಾಹುಲ್ ತೆವಾಟಿಯಾ ಅಜೇಯ 27 ರನ್‌ಗಳೊಂದಿಗೆ ತಮ್ಮ ತಂಡಕ್ಕೆ ಪಂದ್ಯವನ್ನು ಮುಗಿಸಿದರು. ಆರ್‌ಸಿಬಿ ಪರ ಭುವನೇಶ್ವರ್ ಕುಮಾರ್ (3) ಮತ್ತು ರೊಮಾರಿಯೊ ಶೆಫರ್ಡ್ (2) ಎರಡು ವಿಕೆಟ್‌ಗಳನ್ನು ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಂಡ್ಯ ಜಿಲ್ಲೆಯಲ್ಲಿ 1,354 ಬಾಲಗರ್ಭಿಣಿಯರು ಪತ್ತೆ: ಲೋಕಾಯುಕ್ತ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು! – Kannada News | Mandya Child Pregnancy Crisis: 1,354 Cases Reported in 5 Years; Lokayukta Exposes Illegal Scanning Racket

ಮಂಡ್ಯ ಜಿಲ್ಲೆಯಲ್ಲಿ ಬಾಲಗರ್ಭಿಣಿಯರ ಸಂಖ್ಯೆ ದಿನೇ ದಿನೇ ಏರಿಕೆImage Credit source: tv9

ಮಂಡ್ಯ, ಮೇ 1: ಮಂಡ್ಯ (Mandya) ಜಿಲ್ಲೆಯಲ್ಲಿ ಬಾಲಗರ್ಭಿಣಿಯರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿರುವುದು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ಆರೋಗ್ಯ ಇಲಾಖೆಯ ಆರ್‌ಸಿಎಚ್ (RCH) ಪೋರ್ಟಲ್ ನೀಡಿರುವ ಅಂಕಿಅಂಶಗಳ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ ಬರೋಬ್ಬರಿ 1,354 ಬಾಲಗರ್ಭಿಣಿ ಪ್ರಕರಣಗಳು ವರದಿಯಾಗಿವೆ. ಇದು ಜಿಲ್ಲೆಯ ಸಾಮಾಜಿಕ ಆರೋಗ್ಯದ ಮೇಲೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

ಅನೇಕ ಪೋಕ್ಸೋ ಪ್ರಕರಣಗಳಲ್ಲಿ ದಾಖಲಾಗಿಲ್ಲ ಕೇಸ್!

ವರದಿಯಾಗಿರುವ 1,354 ಪ್ರಕರಣಗಳ ಪೈಕಿ ಪೋಕ್ಸೋ (POCSO) ಕೇಸ್​ಗಳ ಸಂಖ್ಯೆ ಕೇವಲ ಕೇವಲ 674. ಅಂದರೆ ಅರ್ಧಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಾಗಿಲ್ಲ ಎಂಬ ಕಹಿ ಸತ್ಯ ಬಯಲಾಗಿದೆ. ಬಾಲ್ಯ ವಿವಾಹ, ಪ್ರೀತಿಯ ಜಾಲ, ಮತ್ತು ಲೈಂಗಿಕ ದೌರ್ಜನ್ಯದಂತಹ ಕಾರಣಗಳಿಂದಾಗಿ 14 ರಿಂದ 18 ವರ್ಷದೊಳಗಿನ ಬಾಲಕಿಯರು ಗರ್ಭಿಣಿಯರಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಲೋಕಾಯುಕ್ತ ದಾಳಿ ವೇಳೆ ಬಯಲಾಯ್ತು ಸ್ಕ್ಯಾನಿಂಗ್ ದಂಧೆ

ಇತ್ತೀಚೆಗೆ ಕೆಆರ್ ಪೇಟೆಯ ಎರಡು ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್‌ಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದಾಗ ಮತ್ತಷ್ಟು ಆಘಾತಕಾರಿ ವಿಷಯಗಳು ಹೊರಬಂದಿವೆ. ಈ ಕೇಂದ್ರಗಳಲ್ಲಿ ನಿಯಮ ಬಾಹಿರವಾಗಿ 31 ಬಾಲಗರ್ಭಿಣಿಯರಿಗೆ ಸ್ಕ್ಯಾನಿಂಗ್ ನಡೆಸಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಸ್ಕ್ಯಾನಿಂಗ್ ದಂಧೆಯ ಜಾಲ ಎಷ್ಟು ಆಳವಾಗಿ ಹರಡಿದೆ ಎಂಬುದು ಸಾಬೀತಾಗಿದೆ.

ಇದನ್ನೂ ಓದಿ: ಕರ್ನಾಟಕವನ್ನು ಬೆಚ್ಚಿಬೀಳಿಸಿದ್ದ ಕೇಸ್​ ಬೇಧಿಸಿದ ಖಾಕಿ: ಮಂಡ್ಯದಲ್ಲಿ ಹೆಣ್ಣು ಭ್ರೂಣ ಪತ್ತೆ, ಹತ್ಯೆಯ ಕಿಂಗ್‌ಪಿನ್ ಬಂಧನ

ಈ ಹಿಂದೆ ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣದಲ್ಲಿ ಮಂಡ್ಯ ಜಿಲ್ಲೆ ಕರ್ನಾಟಕವನ್ನೇ ಬೆಚ್ಚಿಬೀಳಿಸಿತ್ತು. ಮಂಡ್ಯದ ಆಲೆಮನೆ, ಹೆಲ್ತ್ ಕ್ವಾರ್ಟರ್ಸ್​, ತೋಟದ ಮನೆಗಳಲ್ಲಿ ಅವ್ಯಾಹತವಾಗಿ ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ನಡೆದಿರುವುದು ರಾಜ್ಯಾದ್ಯಂತ ಸಂಚಲಕ್ಕೆ ಕಾರಣವಾಗಿತ್ತು. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಸಿದ ಪೊಲೀಸರಿಗೆ, ಹೆಣ್ಣು ಭ್ರೂಣ ಹತ್ಯೆಯ ಕಬಂಧಬಾಹು ಮೈಸೂರಿನ ವರೆಗೆ ವಿಸ್ತರಿಸುವುರುವುದು ಗೊತ್ತಾಗಿತ್ತು. ಕೊನೆಯಲ್ಲಿ ಘಟನೆಯ ಕಿಂಗ್​ಪಿನ್​ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಇದೀಗ ಮಂಡ್ಯದಲ್ಲಿ ಬಾಲಗರ್ಭಿಣಿಯರ ಸಂಖ್ಯೆ ಹೆಚ್ಚಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೈಲೆಂಟ್ ಆಗಿ ಮದುವೆ ಆದ ಸ್ಟಾರ್ ನಟ – Kannada News | Bellamkonda Sai Sreenivas Weds Kavya Reddy: Viral Photos, Love Story and Age Gap Revealed

ಟಾಲಿವುಡ್‌ನ ಯುವ ನಟ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ವಿವಾಹ ಆಗಿದ್ದಾರೆ. ಬ್ಯಾಚುಲರ್ ಜೀವನಕ್ಕೆ ವಿದಾಯ ಹೇಳಿ ಕಾವ್ಯ ರೆಡ್ಡಿ ಎಂಬುವವರಿಗೆ ತಾಳಿ ಕಟ್ಟಿದ್ದಾರೆ. ಬುಧವಾರ (ಏಪ್ರಿಲ್ 29) ತಿರುಮಲದಲ್ಲಿ ವಿವಾಹ ನಡೆಯಿತು. ಕುಟುಂಬ ಸದಸ್ಯರು, ಸಂಬಂಧಿಕರು, ಸ್ನೇಹಿತರು ಮತ್ತು ಆಪ್ತರೊಂದಿಗೆ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು. ಅನೇಕ ಚಲನಚಿತ್ರ ಮತ್ತು ರಾಜಕೀಯ ಗಣ್ಯರು ಸಹ ನವವಿವಾಹಿತರನ್ನು ಆಶೀರ್ವದಿಸಿದರು. ಈ ಸಂದರ್ಭದಲ್ಲಿ, ಬೆಲ್ಲಂಕೊಂಡ ಶ್ರೀನಿವಾಸ್- ಕಾವ್ಯ ರೆಡ್ಡಿ ಅವರ ವಿವಾಹ ಸಮಾರಂಭಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವೀಡಿಯೊಗಳು ಈಗ ಇಂಟರ್ನೆಟ್‌ನಲ್ಲಿ ವೈರಲ್ ಆಗಿವೆ.

ಶ್ರೀನಿವಾಸ್- ಕಾವ್ಯ ರೆಡ್ಡಿ ಅವರನ್ನು ನೋಡಿದ ನೆಟ್ಟಿಗರು ನವ ಜೋಡಿಗೆ ಅಭಿನಂದನೆ ಮತ್ತು ಶುಭಾಶಯ ಕೋರುತ್ತಿದ್ದಾರೆ. ಮೇ 01 ರಂದು ಹೈದರಾಬಾದ್‌ನಲ್ಲಿ ಟಾಲಿವುಡ್ ಸೆಲೆಬ್ರಿಟಿಗಳಿಗಾಗಿ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ವಿವಾಹ ಸಮಾರಂಭದ ಸಂದರ್ಭದಲ್ಲಿ, ಕಾವ್ಯ ರೆಡ್ಡಿ ಯಾರು? ಅವರು ಬೆಲ್ಲಂಕೊಂಡ ಶ್ರೀನಿವಾಸ್ ಅವರನ್ನು ಹೇಗೆ ಭೇಟಿಯಾದರು? ಇದು ಪ್ರೇಮ ವಿವಾಹವೇ? ಅಥವಾ ಇದು ಅರೇಂಜ್ ಮ್ಯಾರೇಜ್ ಆಗಿತ್ತೇ? ನೆಟ್ಟಿಗರು ಇದನ್ನು ಹುಡುಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾವ್ಯ ಬಗ್ಗೆ ಕೆಲವು ಆಸಕ್ತಿದಾಯಕ ವಿಷಯಗಳು ಬೆಳಕಿಗೆ ಬಂದಿವೆ.

ಬೆಲ್ಲಂಕೊಂಡ ಶ್ರೀನಿವಾಸ್ ಅವರನ್ನು ಮದುವೆಯಾಗಲಿರುವ ಕಾವ್ಯ ರೆಡ್ಡಿಗೆ ಚಿತ್ರರಂಗದಲ್ಲಿ ಯಾವುದೇ ಸಂಬಂಧವಿಲ್ಲ. ಅವರು ಒಬ್ಬ ಪ್ರಮುಖ ವಕೀಲರ ಮಗಳು. ಇಬ್ಬರೂ ಕೆಲವು ಸಮಯದಿಂದ ಪ್ರೀತಿಸುತ್ತಿದ್ದರು ಮತ್ತು ಎರಡೂ ಕುಟುಂಬಗಳ ಹಿರಿಯರನ್ನು ಮನವೊಲಿಸಿದ ನಂತರ ಮದುವೆಯಾಗಿದ್ದಾರೆ.

ಇದನ್ನೂ ಓದಿ: ಗರ್ಲ್​​​ಫ್ರೆಂಡ್​​ನ ಅಭಿಮಾನಿಗಳಿಗೆ ಪರಿಚಯಿಸಿದ ಸ್ಟಾರ್ ನಟ

ನೆಟ್ಟಿಗರು ಸಾಯಿ ಶ್ರೀನಿವಾಸ್ ಮತ್ತು ಕಾವ್ಯ ರೆಡ್ಡಿ ನಡುವಿನ ವಯಸ್ಸಿನ ಅಂತರದ ಬಗ್ಗೆ ಚರ್ಚಿಸುತ್ತಿದ್ದಾರೆ. 1993 ರಲ್ಲಿ ಜನಿಸಿದ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಅವರಿಗೆ ಪ್ರಸ್ತುತ 33 ವರ್ಷ. ಆದರೆ, ಕಾವ್ಯ ರೆಡ್ಡಿ ನಾಯಕನಿಗಿಂತ ಸುಮಾರು ನಾಲ್ಕರಿಂದ ಐದು ವರ್ಷ ಚಿಕ್ಕವರು ಎಂದು ವರದಿಯಾಗಿದೆ. ಇದರರ್ಥ ಅವರು ಸುಮಾರು 28 ವರ್ಷ ವಯಸ್ಸಿನವರಾಗಿರಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇದೇ ಮಾದರಿಯ ಕ್ಯಾಚ್ ಅಂದು ನಾಟ್​​ ಔಟ್, ಇಂದು ಔಟ್; ಇದೆಂತಹ ನ್ಯಾಯ? – Kannada News | Rajat Patidar’s Controversial Catch Sparks Debate – Starc’s Not Out vs Today’s Out

ಗುಜರಾತ್ ಟೈಟನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಆರ್​​​ಸಿಬಿ ಕ್ಯಾಪ್ಟನ್ ರಜತ್ ಪಟಿದಾರ್ ಅವರ ಕ್ಯಾಚ್ ಈಗ ಚರ್ಚೆಯ ಕೇಂದ್ರ ಬಿಂದು ಆಗಿದೆ. ಕೆಲವರು ಇದನ್ನು ನಾಟೌಟ್​ ಎಂದರೆ ಇನ್ನೂ ಕೆಲವರು ಔಟ್ ಎನ್ನುತ್ತಿದ್ದಾರೆ. ಹೀಗಿರುವಾಗಲೇ ಈ ಮೊದಲು ಮಿಚೆಲ್ ಸ್ಟಾರ್ಕ್​ ಅವರು ಅಂತಾರಾಷ್ಟ್ರೀಯ ಪಂದ್ಯದಲ್ಲಿ ಇದೇ ಮಾದರಿಯ ಕ್ಯಾಚ್ ಹಿಡಿದಿದ್ದರು. ಇದನ್ನು ನಾಟೌಟ್ ಎಂದು ಕೊಡಲಾಗಿತ್ತು. ಆದರೆ, ಇದೇ ಮಾದರಿಯ ಕ್ಯಾಚ್​​ ಅನ್ನು ಔಟ್ ಎಂದು ಕೊಡಲಾಗಿದೆ.

ರಜತ್ ಪಟಿದಾರ್ ಅವರು ಸಿಕ್ಸ್ ಹೊಡೆಯುವ ಪ್ರಯತ್ನ ಮಾಡಿದರು. ಆದರೆ, ಬಾಲ್ ಬೌಂಡರಿ ಗಡಿ ದಾಟಲು ವಿಫಲವಾಯಿತು. ಈ ವೇಳೆ ಓಡೋಡಿ ಬಂದ ಹೋಲ್ಡರ್ ಅವರು, ಕ್ಯಾಚ್​​​ಅನ್ನು ಹಿಡಿದೇ ಬಿಟ್ಟರು. ಬಾಲ್ ಅವರ ಕೈಯಲ್ಲಿ ಕುಳಿತಿತ್ತು ನಿಜ, ಆದರೆ, ನಂತರ ಬಾಲ್ ನೆಲಕ್ಕೆ ತಿಕ್ಕಿತ್ತು. ಆದಾಗ್ಯೂ ಥರ್ಡ್​ ಅಂಪೈರ್ ಔಟ್ ಎಂದರು ಕೊಟ್ಟರು.

ಮಿಚೆಲ್ ಸ್ಟಾರ್ಕ್ 2023ರ ಆಶಸ್ ಸರಣಿಯಲ್ಲಿ ಬೆನ್ ಡಕೆಟ್ ಅವರ ಕ್ಯಾಚ್ ಹಿಡಿದಿದ್ದರು. ಅಲ್ಲಿ ಸ್ಟಾರ್ಕ್ ಚೆಂಡನ್ನು ಹಿಡಿದ ನಂತರ ನೆಲಕ್ಕೆ ಉಜ್ಜುತ್ತಾ ಹೋದರು. ಆದರೆ ಅವರು ಚೆಂಡಿನ ಮೇಲೆ ‘ಸಂಪೂರ್ಣ ನಿಯಂತ್ರಣ’ (Complete Control) ಹೊಂದಿಲ್ಲ ಎಂದು ನಿರ್ಧರಿಸಿ ಅಂಪೈರ್ ಅದನ್ನು ‘ನಾಟ್ ಔಟ್’ ನೀಡಿದ್ದರು. ಈಗ ಅದನ್ನು ಔಟ್ ಎಂದು ಕೊಡಲಾಗಿದೆ. ಈ ಬಗ್ಗೆ ಒಬ್ಬರು ಒಂದೊಂದು ಅಭಿಪ್ರಾಯ ಹೊರಹಾಕುತ್ತಿದ್ದಾರೆ.

ಕ್ರಿಕೆಟ್‌ನಲ್ಲಿ ಇದು ಸದಾ ವಿವಾದಕ್ಕೆ ಗುರಿಯಾಗುವ ವಿಷಯ. ಅಂಪೈರ್ ದೃಷ್ಟಿಯಲ್ಲಿ ಫೀಲ್ಡರ್ ಚೆಂಡನ್ನು ಹಿಡಿದು ‘ನಿಯಂತ್ರಣ’ ಸಾಧಿಸಿದ್ದಾರೆಯೇ ಅಥವಾ ಇಲ್ಲವೇ ಎಂಬ ಜಡ್ಜ್‌ಮೆಂಟ್ ಮೇಲೆ ಇದು ನಿರ್ಧಾರವಾಗುತ್ತದೆ. ಸ್ಟಾರ್ಕ್ ಪ್ರಕರಣದಲ್ಲಿ ಅವರು ಚೆಂಡಿನ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವ ಮೊದಲೇ ನೆಲಕ್ಕೆ ತಗುಲಿತ್ತು ಎಂಬುದು ಅಂಪೈರ್ ವಾದವಾಗಿತ್ತು.

ನಿಯಮ ಏನು ಹೇಳುತ್ತದೆ?

ಎಂಸಿಸಿ (ಮೆರಿಲಿಬೋನ್ ಕ್ರಿಕೆಟ್ ಕ್ಲಬ್) ನಿಯಮ 33.2.1 ರ ಪ್ರಕಾರ, ಒಬ್ಬ ಫೀಲ್ಡರ್ ಕ್ಯಾಚ್ ಹಿಡಿದಾಗ ಆತ ತನ್ನ ಶರೀರದ ಚಲನೆ ಮತ್ತು ಚೆಂಡಿನ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದರೆ, ಆನಂತರ ಚೆಂಡು ನೆಲಕ್ಕೆ ತಗುಲಿದರೂ ಅದನ್ನು ‘ಔಟ್’ ಎಂದೇ ಪರಿಗಣಿಸಲಾಗುತ್ತದೆ ಎಂದಿದೆ. ಈ ನಿಯಮದ ಅಡಿ ಔಟ್ ಕೊಟ್ಟಿರಬಹುದು ಎನ್ನಲಾಗಿದೆ.

ಮತ್ತಷ್ಟು ಕ್ರಿಕೆಟ್ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ..

Published On – 7:47 am, Fri, 1 May 26

Source link

ತುಮಕೂರಿನಲ್ಲಿ ಹಕ್ಕಿ ಜ್ವರದ ಆತಂಕ: ನವಿಲುಗಳ ಸಾವಿಗೆ ‘H5N1’ ಸೋಂಕು ಕಾರಣ! – Kannada News | Bird Flu Alert in Tumakuru: H5N1 Virus Confirmed in Peacock Deaths; RRT Formed

ನವಿಲುಗಳ ಸಾವಿಗೆ ‘H5N1’ ಸೋಂಕು ಕಾರಣ ಎಂಬುದು ದೃಢ!

ತುಮಕೂರು, ಮೇ 01: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸರಣಿಯಾಗಿ ಸಂಭವಿಸುತ್ತಿದ್ದ ನವಿಲುಗಳ ನಿಗೂಢ ಸಾವಿನ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮೃತಪಟ್ಟ ನವಿಲುಗಳ ರಕ್ತ ಹಾಗೂ ಅಂಗಾಂಗಗಳ ಮಾದರಿಯನ್ನು FSL (ವಿಧಿ ವಿಜ್ಞಾನ ಪ್ರಯೋಗಾಲಯ) ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿಯಲ್ಲಿ H5N1 (ಹಕ್ಕಿ ಜ್ವರ) ಸೋಂಕು ಇರುವುದು ದೃಢಪಟ್ಟಿದೆ.

ಬಿಸಿಲಿನ ತಾಪ ಎಂಬ ಶಂಕೆ

ಕಳೆದ ಏಪ್ರಿಲ್ 16ರಿಂದ ತುಮಕೂರು ತಾಲೂಕಿನಾದ್ಯಂತ ನವಿಲುಗಳ ಸರಣಿ ಸಾವು ಆರಂಭವಾಗಿತ್ತು. ಕೇವಲ 11 ದಿನಗಳಲ್ಲಿ ಬರೋಬ್ಬರಿ 44 ನವಿಲುಗಳು ಮೃತಪಟ್ಟಿದ್ದವು. ಆರಂಭದಲ್ಲಿ ಜಿಲ್ಲೆಯಲ್ಲಿ ತಾಪಮಾನ ಏರುತ್ತಿದ್ದ ಕಾರಣ, ಅತಿಯಾದ ಶಾಖ ಮತ್ತು ನಿರ್ಜಲೀಕರಣದಿಂದ ಈ ಸಾವುಗಳು ಸಂಭವಿಸಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದರು. ಪ್ರಮುಖವಾಗಿ ತುಮಕೂರು ಹೊರವಲಯದ ಬೊಮ್ಮನಹಳ್ಳಿ ಮತ್ತು ಮಾಚೇನಹಳ್ಳಿ ಸುತ್ತಮುತ್ತಲಿನ 1 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಾವುಗಳು ವರದಿಯಾಗಿದ್ದವು.

ಸಾವುಗಳ ಅಸಲಿ ಕಾರಣ ಬಯಲು

ಪ್ರಾಥಮಿಕ ತನಿಖೆಯಲ್ಲಿ ಹಕ್ಕಿ ಜ್ವರದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು. ಅದರಂತೆ ಮೃತ ನವಿಲುಗಳ ಮಾದರಿಯನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು. ಈಗ ಲಭ್ಯವಾಗಿರುವ ವರದಿಯು ನವಿಲುಗಳಲ್ಲಿ H5N1 ವೈರಸ್ ಇರುವುದನ್ನು ದೃಢಪಡಿಸಿದ್ದು, ಇದು ಸಾರ್ವಜನಿಕರಲ್ಲಿ ಮತ್ತು ರೈತರಲ್ಲಿ ಆತಂಕ ಮೂಡಿಸಿದೆ. ಹಕ್ಕಿ ಜ್ವರ ದೃಢಪಟ್ಟ ಬೆನ್ನಲ್ಲೇ ಪಶುಸಂಗೋಪನಾ ಇಲಾಖೆ ಮತ್ತು ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿದೆ.

ಇದನ್ನೂ ಓದಿ ತುಮಕೂರಿನಲ್ಲಿ 35 ನವಿಲುಗಳು ಸಾವು! ಸುಡುವ ಬಿಸಿಲಿನ ಪರಿಣಾಮವೋ? ಹಕ್ಕಿ ಜ್ವರವೋ?

ಜಿಲ್ಲಾಡಳಿತದಿಂದ ಕೈಗೊಂಡ ಮುನ್ನೆಚ್ಚರಿಕಾ ಕ್ರಮಗಳು

ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ರ್ಯಾಪಿಡ್ ರೆಸ್ಪಾನ್ಸ್ ಟೀಮ್ (RRP) ತಂಡಗಳನ್ನು ರಚಿಸಲಾಗಿದೆ. ಐದು ಹಳ್ಳಿಗಳಿಗೆ ಪ್ರತ್ಯೇಕವಾಗಿ 5 ತಂಡಗಳನ್ನು ನಿಯೋಜಿಸಲಾಗಿದ್ದು, ಪ್ರತಿಯೊಂದು ತಂಡದಲ್ಲಿ ಒಬ್ಬ ಪಿಡಿಒ, ಇಬ್ಬರು ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಮತ್ತು ಇಬ್ಬರು ಅರಣ್ಯ ಇಲಾಖೆ ಅಧಿಕಾರಿಗಳು ಇರಲಿದ್ದಾರೆ. ನವಿಲುಗಳು ಮೃತಪಟ್ಟ ಊರ್ಡಿಗೆರೆ, ಗೂಳೂರು, ಬೊಮ್ಮನಹಳ್ಳಿ, ಟಿ.ಜಿ.ಪಾಳ್ಯ ಸುತ್ತಮುತ್ತಲಿನ 10 ಕಿ.ಮೀ ವ್ಯಾಪ್ತಿಯನ್ನು ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ. ಈ ವ್ಯಾಪ್ತಿಯಲ್ಲಿ ಬರುವ 33 ಹಳ್ಳಿಗಳ ಮೇಲೆ ನಿಗಾ ಇರಿಸಲಾಗಿದ್ದು, ಸೋಂಕು ಹರಡದಂತೆ ಡಿಸ್‌ಇನ್‌ಫೆಕ್ಟ್ ಸ್ಪ್ರೇ ಮಾಡಲು ಸೂಚಿಸಲಾಗಿದೆ.

ಸುತ್ತಮುತ್ತಲಿನ ಕೋಳಿ ಫಾರ್ಮ್‌ಗಳಲ್ಲಿನ ನಾಟಿ ಕೋಳಿಗಳ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲು ನಿರ್ಧರಿಸಲಾಗಿದೆ. ಕೋಳಿಗಳಲ್ಲೂ ಸೋಂಕು ಕಾಣಿಸಿಕೊಂಡರೆ ಪರಿಸ್ಥಿತಿ ಗಂಭೀರವಾಗುವ ಸಾಧ್ಯತೆ ಇದೆ. ಕೋಳಿ ಫಾರ್ಮ್‌ಗಳಿಗೆ ಅಪರಿಚಿತರ ಪ್ರವೇಶ ನಿಷೇಧಿಸಲಾಗಿದೆ. ಯಾವುದೇ ಕೋಳಿಗಳು ಮೃತಪಟ್ಟರೆ ತಕ್ಷಣ ಮಾಹಿತಿ ನೀಡುವಂತೆ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರೆಗ್ನೆನ್ಸಿ ಸುದ್ದಿ ಘೋಷಿಸಿದ ‘ರತ್ನನ್ ಪ್ರಪಂಚ’ ನಟಿ ರೆಬಾ – Kannada News | Reba Monica John Announces Pregnancy! Ratnan Prapancha Actress Shares Viral Baby Bump Photos

ಕನ್ನಡದಲ್ಲಿ ರತ್ನನ್ ಪ್ರಪಂಚ ಸಿನಿಮಾದಲ್ಲಿ ನಟಿಸಿದ್ದ ರೇಬಾ ಮೋನಿಕಾ ಜಾನ್, ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಅವರು ಶೀಘ್ರದಲ್ಲೇ ತಾಯಿಯಾಗಲಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ, ಅವರು ತಮ್ಮ ಪತಿ ಜೋಮನ್ ಜೋಸೆಫ್ ಜೊತೆಗಿನ ಫೋಟೋ ಹಂಚಿಕೊಂಡಿದ್ದು, ಬೇಬಿ ಬಂಪ್ ಫೋಟೋಗಳು ಗಮನ ಸೆಳೆದಿವೆ. ರೇಬಾ ಮೋನಿಕಾ ಜಾನ್ ಹಂಚಿಕೊಂಡ ಈ ಫೋಟೋ ಶೂಟ್ ಪ್ರಸ್ತುತ ವೈರಲ್ ಆಗುತ್ತಿದೆ.

Source link

Viral Video: ಚರಂಡಿ ನೀರಲ್ಲಿ ಸ್ನಾನ ಮಾಡಿ, ಅದೇ ನೀರಿನಲ್ಲಿ ಆಹಾರ ಅದ್ದಿ ತಿಂದ ಪುನೀತ್ ಸೂಪರ್‌ಸ್ಟಾರ್ – Kannada News | Views Over Hygiene Puneet Superstar Sparks Outrage After Dipping Food in Sewage Water

ನವದೆಹಲಿ, ಮೇ 01: ಫೇಮಸ್ ಆಗಲು ಜನ ಏನೇನೆಲ್ಲಾ ಸಾಹಸಗಳನ್ನು ಮಾಡುವುದನ್ನು ನೋಡಿದ್ದೇವೆ ಆದರೆ ಈ ವ್ಯಕ್ತಿ ಚರಂಡಿ ನೀರೊಳಗೆ ಸ್ನಾನ ಮಾಡುವ ವಿಡಿಯೋ ವೈರಲ್ ಆಗಿದೆ. ಅಷ್ಟೇ ಅಲ್ಲದೆ ಅದೇ ನೀರಿನಲ್ಲಿ ಆಹಾರವನ್ನು ಅದ್ದಿ ತಿನ್ನುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಜನಪ್ರಿಯ ಇನ್ಫ್ಲುಯೆನ್ಸರ್ ಪುನೀತ್ ಸೂಪರ್‌ಸ್ಟಾರ್ ಈ ವಿಡಿಯೋದಲ್ಲಿದ್ದು, ವ್ಯೂಸ್‌ಗಳಿಗಾಗಿ ಅವರು ಮಾಡಿರುವ ಕೆಲಸ ಎಲ್ಲರನ್ನು ಬೆಚ್ಚಿಬೀಳಿಸಿದೆ.

ಈ ವೈರಲ್ ಕ್ಲಿಪ್‌ನಲ್ಲಿ ಪುನೀತ್ ಅವರು ತಾವು ಇರುವ ಜಾಗವನ್ನು ನಾಲಾ ಕೆಫೆ ಎಂದು ಕರೆದಿದ್ದಾರೆ, ಇಂದು ನಾನು ನಾಲಾ ಕೆಫೆಗೆ ಬಂದಿದ್ದೇನೆ ಮತ್ತು ಚೋಲೆ ಕುಲ್ಚೆ ತಿನ್ನುತ್ತಿದ್ದೇನೆ ಎಂದು ಹೇಳುತ್ತಾ, ಚರಂಡಿ ನೀರಿನಲ್ಲಿ ಮುಳುಗೆದ್ದು, ಅದೇ ನೀರಿನಲ್ಲಿ ಆಹಾರವನ್ನು ಅದ್ದಿ ತಿಂದಿರುವ ವಿಡಿಯೋವನ್ನು ಕಂಡು ಜನರು ಹೌಹಾರಿದ್ದಾರೆ.

ವಿಡಿಯೋ ಹರಡುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳ ಸುರಿಮಳೆಯೇ ಹರಿದುಬಂದಿದೆ. ಈ ವ್ಯಕ್ತಿ ಕೇವಲ ಹಣ ಮತ್ತು ಪ್ರಚಾರಕ್ಕಾಗಿ ದೇಶದ ವರ್ಚಸ್ಸನ್ನು ಜಗತ್ತಿನ ಮುಂದೆ ವಿರೂಪಗೊಳಿಸುತ್ತಿದ್ದಾರೆ ಎಂದು ಹಲವರು ಕಿಡಿಕಾರಿದ್ದಾರೆ. ಈ ಚರ್ಚೆಯು ಕೆಲವು ಹಂತಗಳಲ್ಲಿ ರಾಜಕೀಯ ಮತ್ತು ಧಾರ್ಮಿಕ ದೃಷ್ಟಿಕೋನಗಳಿಗೂ ತಿರುಗಿ ಮತ್ತಷ್ಟು ವಿವಾದವನ್ನು ಹುಟ್ಟುಹಾಕಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರಜತ್ ಕ್ಯಾಚ್ ಔಟೋ-ನಾಟೌಟೋ? ನಿಯಮ ಏನು ಹೇಳುತ್ತೆ? – Kannada News | Jason Holder’s Controversial Catch: MCC Law 33.2.1 Explains Patidar’s GT vs RCB Dismissal

ಜಿಟಿ vs ಆರ್​​ಸಿಬಿ ಪಂದ್ಯದಲ್ಲಿ ಜೇಸನ್ ಹೋಲ್ಡರ್ ಹಿಡಿದ ರಜತ್ ಪಟಿದಾರ್ ಅವರ ಕ್ಯಾಚ್ ಈಗ ಚರ್ಚೆಗೆ ಕಾರಣ ಆಗಿದೆ. ರಜತ್ ಅವರು ಸಿಕ್ಸ್ ಬಾರಿಸುವ ಪ್ರಯತ್ನದಲ್ಲಿ ಇದ್ದರು. ಈ ವೇಳೆ ಚೆಂಡು ಹೋಲ್ಡರ್ ಕೈ ಸೇರಿತು. ಆ ಬಳಿಕ ಅವರು ಬಾಲ್​ ಅನ್ನು ನೆಲಕ್ಕೆ ಉಜ್ಜಿಕೊಂಡು ಹೋದರು. ಈ ಕ್ಯಾಚ್ ಬಗ್ಗೆ ಚರ್ಚೆ ಶರುವಾಗಿದೆ. ಹಾಗಾದರೆ ನಿಯಮದ ಪ್ರಕಾರ ನೋಡೋದಾದರೆ ಈ ಕ್ಯಾಚ್ ಔಟೋ ಅಥವಾ ಇಲ್ಲವೋ? ಆ ಬಗ್ಗೆ ಇಲ್ಲಿದೆ ವಿವರ.
ಜೇಸನ್ ಹೋಲ್ಡರ್ ಹಿಡಿದ ಕ್ಯಾಚ್​​ ಬಗ್ಗೆ ವಿವಾದ ಆಗಿದೆ. ಜೇಸನ್ ಹೋಲ್ಡರ್ ಅವರು ಬಾಲ್​ ಅನ್ನೇ ನೋಡುತ್ತಾ ಬಂದು, ಅದನ್ನು ಕೈಗೆ ತೆಗೆದುಕೊಂಡರು. ನಂತರ ನೆಲಕ್ಕೆ ಬಿದ್ದರು. ಬಾಲ್ ಅವರ ಕೈಯಲ್ಲೇ ಇದ್ದರೂ ಅದು ನೆಲಕ್ಕೆ ಉಜ್ಜುತ್ತಾ ಹೋಯಿತು. ನಂತರ ಅವರು ಬಾಲ್ ಹಿಡಿದ ಕೈಯನ್ನೇ ಊರಿ ಮೇಲಕ್ಕೆ ಎದ್ದರು. ಎಲ್ಲರೂ ಇದನ್ನು ನಾಟೌಟ್ ಕೊಡುತ್ತಾರೆ ಎಂದು ಭಾವಿಸಿದ್ದರು. ಆದರೆ, ಔಟ್ ಕೊಡಲಾಯಿತು. ಇದು ನಾಟೌಟ್ ಎಂದು ಭಾರತ ತಂಡ ಮಾಜಿ ಬೌಲರ್ ಹಾಗೂ ಕಮೆಂಟೇಟರ್ ಇರ್ಫಾನ್ ಪಠಾಣ್ ಟ್ವೀಟ್ ಮಾಡಿದ್ದಾರೆ.

ನಿಯಮ ಏನು ಹೇಳುತ್ತದೆ?

ಅಂಪೈರ್​​​ಗಳು ಔಟ್ ಕೊಟ್ಟಿದ್ದು ನಿಯಮಗಳನ್ನು ಆಧರಿಸಿಯೇ. ಮೆರಿಲಿಬೋನ್ ಕ್ರಿಕೆಟ್ ಕ್ಲಬ್ ರಚಸಿದ ನಿಯಮ 33.2.1ರ ಪ್ರಕಾರ ಅಂಪೈರ್ ಔಟ್ ಕೊಟ್ಟಿದ್ದಾರೆ. ಓರ್ವ ಫೀಲ್ಡರ್ ಕ್ಯಾಚ್ ಹಿಡಿದ ನಂತರ ಆತ ತನ್ನ ಶರೀರದ ಚಲನೆ ಮತ್ತು ಚೆಂಡಿನ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರಬೇಕು. ಆನಂತರ ಚೆಂಡು ನೆಲಕ್ಕೆ ತಗುಲಿದರೂ ಅದನ್ನು ‘ಔಟ್’ ಎಂದೇ ಪರಿಗಣಿಸಲಾಗುತ್ತದೆ.

ಜೇಸನ್ ಕ್ಯಾಚ್ ಹಿಡಿದಾಗ ದೇಹದ ಚಲನೆ ಹಾಗೂ ಬೌಲ್ ಮೇಲೆ ಅವರಿಗೆ ಸಂಪೂರ್ಣ ನಿಯಂತ್ರ ಇದೆ ಎಂದೇ ಥರ್ಡ್​ ಅಂಪೈರ್ ಪರಿಗಣಿಸಿರಬಹುದು. ಹೀಗಾಗಿ, ಇದನ್ನು ಔಟ್ ಎಂದು ಕೊಟ್ಟಿದ್ದಾರೆ. ಫೀಲ್ಡರ್ ಚೆಂಡನ್ನು ಸುರಕ್ಷಿತವಾಗಿ ಕೈಯಲ್ಲಿ ಹಿಡಿದು, ತಾವು ಸಮತೋಲನ ಕಳೆದುಕೊಳ್ಳದೆ ನಿಯಂತ್ರಣದಲ್ಲಿದ್ದಾರೆ ಎಂದು ಖಚಿತವಾದ ಮೇಲೆ ಚೆಂಡು ನೆಲಕ್ಕೆ ತಗುಲಿದೆ ಎಂಬುದು ಥರ್ಡ್​ ಅಂಪೈರ್ ವಾದ. ಆದರೆ, ಹೋಲ್ಡರ್ ನಿಯಂತ್ರಣದಲ್ಲಿ ಇರಲಿಲ್ಲ ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿತ್ತು.

ಇದನ್ನೂ ಓದಿ: ಇದೇ ಮಾದರಿಯ ಕ್ಯಾಚ್ ಅಂದು ನಾಟ್​​ ಔಟ್, ಇಂದು ಔಟ್; ಇದೆಂತಹ ನ್ಯಾಯ?

1787ರಲ್ಲಿ ಸ್ಥಾಪನೆಯಾದ ಮೇರಿಲ್‌ಬೋನ್ ಕ್ರಿಕೆಟ್ ಕ್ಲಬ್ (MCC), ವಿಶ್ವದ ಅತ್ಯಂತ ಸಕ್ರಿಯ ಕ್ರಿಕೆಟ್ ಕ್ಲಬ್. ಇದು ಲಂಡನ್‌ನಲ್ಲಿರುವ ಲಾರ್ಡ್ಸ್ ಕ್ರಿಕೆಟ್ ಮೈದಾನದ ಮಾಲೀಕರು ಆಗಿದ್ದಾರೆ. ಪ್ರಪಂಚದಾದ್ಯಂತ ಬಳಸಲಾಗುವ ಎಲ್ಲಾ ಕ್ರಿಕೆಟ್ ನಿಯಮಗಳನ್ನು ಇವರು ರಚಿಸುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:18 am, Fri, 1 May 26

Source link

Exit mobile version