ಯಶ್ ‘ಟಿಕೆಟ್’ ಲುಕ್ ಎಐ ಎಂದವರಿಗೆ ಸಿಕ್ತು ಉತ್ತರ; ಯಶ್ ಮೇಕೋವರ್ ನೋಡಿ – Kannada News | Yash’s ‘Toxic’ Ticket Look: Real Makeover Confirmed, Not AI See Hairdresser’s Video

‘ಟಾಕ್ಸಿಕ್’ ಚಿತ್ರದ (Toxic Movie) ಮೂಲಕ ಯಶ್ ಅವರು ಜನರ ಎದುರು ಬರಲು ರೆಡಿ ಆಗಿದ್ದಾರೆ. ಈ ಚಿತ್ರದ ಟೀಸರ್ ಗಮನ ಸೆಳೆದಿದೆ. ಈ ಸಿನಿಮಾದಲ್ಲಿ ಯಶ್ ಅವರು ಎರಡು ಲುಕ್ ಅಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ರಾಯ ಮತ್ತೊಂದು ಟಿಕೆಟ್. ಈ ಲುಕ್​​ ಅಲ್ಲಿ ಯಶ್ ಯಂಗ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಲುಕ್ ಗಮನ ಸೆಳೆಯೋ ರೀತಿಯಲ್ಲಿ ಇದೆ. ಇದನ್ನು ಎಐ ಮೂಲಕ ಮಾಡಲಾಗಿದೆ ಎಂದು ಹೇಳಲಾಗಿತ್ತು. ಇದಕ್ಕೆ ಉತ್ತರ ಸಿಕ್ಕಿದೆ.

ಯಶ್ ಅವರು ಪರ್ಫೆಕ್ಷನಿಸ್ಟ್. ಏನೇ ಮಾಡಿದರೂ ಪರ್ಫೆಕ್ಟ್ ಆಗಿ ಮಾಡಬೇಕು ಎಂದು ಬಯಸುತ್ತಾರೆ. ‘ಕೆಜಿಎಫ್’, ‘ಕೆಜಿಎಫ್ 2’ ಚಿತ್ರಗಳಲ್ಲಿ ಇದು ಕಾಣಿಸಿದೆ. ‘ಟಾಕ್ಸಿಕ್’ ಸಿನಿಮಾದಲ್ಲಿ ಅವ ಜವಾಬ್ದಾರಿ ಹೆಚ್ಚಿದೆ. ಅವರು ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ನಿರ್ಮಾಪಕರಲ್ಲಿ ಅವರೂ ಒಬ್ಬರು. ಹೀಹಾಗಿ, ಸಿನಿಮಾ ಮೇಕಿಂಗ್ ವಿಷಯದಲ್ಲಿ ಅವರೂ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ‘ಟಾಕ್ಸಿಕ್’ ಚಿತ್ರದಲ್ಲಿ ಬರೋ ಟಿಕೆಟ್ ಪಾತ್ರವನ್ನು ಅವರೇ ನಿಂತು ಮಾಡಿಸಿದ್ದಾರೆ ಎನ್ನಲಾಗುತ್ತಿದೆ.

ಯಶ್ ಅವರ ಲುಕ್​​ನ ಹೇಗೆ ಬದಲಾಯಿಸಲಾಯಿತು ಎಂಬುದಕ್ಕೆ ಸೆಲೆಬ್ರಿಟಿ ಹೇರ್​ಸ್ಟೈಲಿಸ್ಟ್ ಅಲೆಕ್ಸ್ ವಿಜಯ್ ಕಾಂತ್ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಯಶ್ ಮೇಕೋವರ್ ತೋರಿಸಲಾಗಿದೆ. ಹೇರ್ ಕಟಿಂಗ್, ಗಡ್ಡ ಟ್ರಿಮ್ ಮಾಡಿ ಬಳಿಕ ಯಶ್ ಅವರು ಸಖತ್ ಯಂಗ್ ಆಗಿ ಕಾಣಿಸಿದ್ದಾರೆ. ಈ ಲುಕ್ ಗಮನ ಸೆಳೆಯೋ ರೀತಿಯಲ್ಲಿ ಇದೆ.

ಇದನ್ನೂ ಓದಿ: ರಿಲೀಸ್​​ಗೂ ಮೊದಲೇ ದೊಡ್ಡ ಲಾಭ ಕಂಡ ‘ಟಾಕ್ಸಿಕ್’; ‘ಧುರಂಧರ್ 2’ ಹಿಂದಿಕ್ಕಿದ ಯಶ್ ಚಿತ್ರ

‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಅವರ ಈ ಲುಕ್ ಐಡಿಯಾ ಯಾರಿಗೆ ಬಂದಿದ್ದು ಎಂಬುದು ಇನ್ನೂ ರಿವೀಲ್ ಆಗಿಲ್ಲ. ಈ ವಿಷಯದಲ್ಲಿ ಮುಂದಿನ ದಿನಗಳಲ್ಲಿ ಮಾಹಿತಿ ನೀಡುವ ಸಾಧ್ಯತೆ ಇದೆ. ‘ಟಾಕ್ಸಿಕ್ ’ ಸಿನಿಮಾಗೆ ಭರ್ಜರಿ ಈವೆಂಟ್ ಆಯೋಜನೆ ಮಾಡವ ಸಾಧ್ಯತೆ ಇದೆ. ಇದಕ್ಕಾಗಿ ಫ್ತಾನ್ಸ್ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 11:12 am, Mon, 23 February 26

Source link

“ಬೆಂಗಳೂರನ್ನು ಮತ್ತೆ ಶ್ರೇಷ್ಠ ನಗರವನ್ನಾಗಿಸೋಣ”: ಈ ಬದಲಾವಣೆಯಾದರೆ ಸಿಲಿಕಾನ್ ಸಿಟಿ ವಿಶ್ವ ದರ್ಜೆಯ ನಗರ ಆಗುವುದು ಖಂಡಿತ – Kannada News | Bangalore Climate Praised: Can Silicon City Overcome Pollution and Infrastructure Woes?

ಬೆಂಗಳೂರು, ಫೆ. 23: ಸಿಲಿಕಾನ್​​ ಸಿಟಿಯ ಹವಾಮಾನ ( Bangalore infrastructure) ದಿನದಿಂದ ದಿನಕ್ಕೆ ಬದಲಾವಣೆ ಆಗುತ್ತ ಇರುತ್ತದೆ. ಅದರಲ್ಲೂ ಗಾಳಿಯ ಮಟ್ಟದಲ್ಲಿ ಪ್ರತಿದಿನ ಬದಲಾವಣೆಗಳು ಇರುತ್ತದೆ. ಒಂದು ವೇಳೆ ಕೆಲವು ಬದಲಾವಣೆಗಳನ್ನು ತಂದರೆ ಖಂಡಿತ ಬೆಂಗಳೂರಿನ ಹವಾಮಾನ ಉತ್ತಮವಾಗಿರುತ್ತದೆ ಎಂದು ಹೇಳಿರುವ ಪೋಸ್ಟ್​​ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಇದೀಗ ಬೆಂಗಳೂರಿನ ಹವಮಾನದ ಬಗ್ಗೆ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. “ನೀವೇನಾದರೂ ವಿದೇಶಗಳಲ್ಲಿ ವಾಸವಿದ್ದರೆ, ಬೆಂಗಳೂರಿನ ಹವಾಮಾನ ಎಷ್ಟು ಶ್ರೇಷ್ಠ ಎಂಬುದು ನಿಮಗೆ ಅರಿವಾಗುತ್ತದೆ. ಇದು ನಿಜಕ್ಕೂ ವಿಶ್ವದರ್ಜೆಯ ಹವಾಮಾನ,” ಎಂದು ಬೆಂಗಳೂರಿನ ನಿವಾಸಿ ಅಮರನಾಥ್ ಶಿವಶಂಕರ್ ಅವರು ಎಕ್ಸ್ (X) ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಸೋಶಿಯಲ್​​ ಮೀಡಿಯಾದಲ್ಲಿ ನೆಟ್ಟಿಗರ ಕೂಡ ಕಮೆಂಟ್​​ ಮಾಡಿದ್ದಾರೆ.

ಅಮರನಾಥ್ ಅವರು ತಮ್ಮ ವಿದೇಶಿ ಜೀವನದ ಅನುಭವವನ್ನು ಬೆಂಗಳೂರಿನ ಜೀವನಕ್ಕೆ ಹೋಲಿಸುತ್ತಾ, “ನಾವು ಮಾಲಿನ್ಯವನ್ನು ನಿಯಂತ್ರಿಸಿ, ರಸ್ತೆಗಳನ್ನು ಸರಿಪಡಿಸಿ, ಸಾರ್ವಜನಿಕ ಸಾರಿಗೆಯನ್ನು ಹೆಚ್ಚಿಸಿ ಮತ್ತು ಮಳೆನೀರು ಕಾಲುವೆಗಳನ್ನು ಸರಿಪಡಿಸಿದರೆ, ಬೆಂಗಳೂರು ಜಗತ್ತಿನ ಅತ್ಯುತ್ತಮ ನಗರಗಳಲ್ಲಿ ಒಂದಾಗಲಿದೆ. ‘ಮೇಕ್ ಬೆಂಗಳೂರು ಗ್ರೇಟ್ ಅಗೈನ್’ (ಬೆಂಗಳೂರನ್ನು ಮತ್ತೆ ಶ್ರೇಷ್ಠ ನಗರವನ್ನಾಗಿಸೋಣ),” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಚಾಮುಂಡಿ ಬೆಟ್ಟದ ಮೂಲ ದೇವರು ಯಾರು? ಮಹಾಬಲೇಶ್ವರ ದೇವಾಲಯದ ನಿಗೂಢ ಸತ್ಯ ಇಲ್ಲಿದೆ ನೋಡಿ

ವೈರಲ್​​ ಪೋಸ್ಟ್​:

ಈ ಪೋಸ್ಟ್​​ ಸುಮಾರು 29,000ಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಈ ಪೋಸ್ಟ್‌ಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಬೆಂಗಳೂರಿನಲ್ಲಿ 5 ವರ್ಷ ಜೀವನ ಮಾಡಿದ್ದೇನೆ. ಇದೀಗ ಮತ್ತೆ ಬರಬೇಕು ಎಂದು ಅನ್ನಿಸುತ್ತಿದೆ ಎಂದು ಒಬ್ಬರು ಕಮೆಂಟ್​ ಮಾಡಿದ್ದಾರೆ. ಹವಾಮಾನ ಸರಿ ಇದೆ, ಆದರೆ ಫುಟ್‌ಪಾತ್‌ಗಳ ಕಥೆಯೇನು? ಪಾದಚಾರಿ ಮಾರ್ಗಗಳನ್ನು ಮೊದಲು ಸರಿಪಡಿಸಬೇಕು ಎಂದು ಒಬ್ಬರು ಮೂಲಸೌಕರ್ಯದ ಬಗ್ಗೆ ಮಾತನಾಡಿದ್ದಾರೆ. ಮರಗಳನ್ನು ಕಡಿದು ಕಾಂಕ್ರೀಟ್ ಜಂಗಲ್ ಮಾಡುತ್ತಿದ್ದರೆ, ಹವಾಮಾನ ಶೀಘ್ರವೇ ಹದಗೆಡಲಿದೆ. ಕಡಿದ ಮರಗಳ ಬದಲಿಗೆ ಹೊಸ ಗಿಡಗಳನ್ನು ನೆಡಲೇಬೇಕು ಎಂದು ಮತ್ತೊಬ್ಬರು ಹೇಳಿದ್ದಾರೆ. ಬೆಂಗಳೂರಿನ ಹಳೆಯ ಕಾಲದ ಆಕರ್ಷಣೆಯನ್ನು ಮರಳಿ ತರುವುದು ಬಹಳ ಕಷ್ಟ. ಅಭಿವೃದ್ಧಿಯ ಹೆಸರಿನಲ್ಲಿ ನಗರವನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಮತ್ತೊಬ್ಬರು ಹೇಳಿದ್ದಾರೆ.

ಬೆಂಗಳೂರಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಭಾರತದ ಅಸುರಕ್ಷಿತ ರಸ್ತೆಗಳಲ್ಲಿ ಓಡಾಡುವ ಬಗ್ಗೆ ಕಳವಳ ವ್ಯಕ್ತಪಡಿಸಿದ ವ್ಯಕ್ತಿ – Kannada News | Indian man returns to india from australia after eight years raises concerns about road safety

ಇತ್ತೀಚೆಗಿನ ದಿನಗಳಲ್ಲಿ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಭಾರತದ ರಸ್ತೆಗಳಲ್ಲಿನ ಅಸ್ತವ್ಯಸ್ತವಾದ ಸಂಚಾರ, ಅತಿಯಾದ ವೇಗ ಮತ್ತು ಸಂಚಾರ ನಿಯಮಗಳ ಉಲ್ಲಂಘನೆಗಳು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಎಂಟು ವರ್ಷಗಳ ಬಳಿಕ ಆಸ್ಟ್ರೇಲಿಯಾದಿಂದ (Australia) ಭಾರತಕ್ಕೆ ಮರಳಿದ ವ್ಯಕ್ತಿಯೊಬ್ಬರು (Indian) ರಸ್ತೆ ಸುರಕ್ಷತೆ ಬಗ್ಗೆ ಮಾತನಾಡಿದ್ದಾರೆ. ಭಾರತೀಯ ರಸ್ತೆಗಳು ಓವರ್‌ಲೋಡ್ ವಾಹನಗಳಿಂದ ತುಂಬಿ ಹೋಗಿವೆ. ಕಳಪೆ ಬೆಳಕಿನಲ್ಲಿರುವ ಸಂಚಾರ ಪರಿಸ್ಥಿತಿಗಳನ್ನು ತೋರಿಸುವ ವಿಡಿಯೋ ಹಂಚಿಕೊಂಡು ಯುದ್ಧಕ್ಕೆ ಹೋದಂತಹ ಅನುಭವ ಆಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ವ್ಯಕ್ತಿಯ ಮಾತನ್ನು ಒಪ್ಪಿಕೊಂಡಿದ್ದಾರೆ.

ಅನಿಮಿಶ್ ಅಗರ್ವಾಲ್ (animish__aggarwal) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಅತಿಯಾದ ಹೊರೆಗಳನ್ನು ಹೊತ್ತ ಟ್ರಕ್‌ಗಳು ಮತ್ತು ಸಾಕಷ್ಟು ಬೆಳಕು, ಸುರಕ್ಷತಾ ಕ್ರಮಗಳಿಲ್ಲದೆ ವಾಹನಗಳು ಚಲಿಸುವ ದೃಶ್ಯಗಳನ್ನು ಕಾಣಬಹುದು. ಈ ವಿಡಿಯೋದ ಶೀರ್ಷಿಕೆಯಲ್ಲಿ ಭಾರತೀಯ ವ್ಯಕ್ತಿಯೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಎಂಟು ವರ್ಷಗಳ ಕಾಲ ಆಸ್ಟ್ರೇಲಿಯಾದಲ್ಲಿ ವಾಸಿಸಿ ಈಗ ನನ್ನ ಸ್ವಂತ ದೇಶಕ್ಕೆ ಹಿಂತಿರುಗಿದ ನಂತರದಲ್ಲಿ ಭಾರತೀಯ ರಸ್ತೆಗಳು ಎಷ್ಟು ಅಸುರಕ್ಷಿತವಾಗಿವೆ ಎಂದು ನನಗೆ ಅರಿವಾಯಿತು. ವಿಶೇಷವಾಗಿ ರಾತ್ರಿಯ ಸಮಯದಲ್ಲಿ ಚಾಲನೆ ಮಾಡುವುದು. ಈ ಓವರ್‌ಲೋಡ್ ಟ್ರಕ್‌ಗಳನ್ನು ದಾಟುವುದು ಬಂದೂಕು ಇಲ್ಲದೇ ಯುದ್ಧಕ್ಕೆ ಹೋಗುವುದಕ್ಕಿಂತ ಕಡಿಮೆಯೇನಿಲ್ಲ. ನೀವು ಮೊದಲ ಹಂತವನ್ನು ದಾಟಬಹುದು ಎಂದು ನೀವು ಭಾವಿಸಿದರೆ ಮುಂದಿನ ಸವಾಲು ನಿಮಗಾಗಿ ಕಾಯುತ್ತಿದೆ, ಅಲ್ಲಿ ನೀವು ಟೈಲ್ ಲೈಟ್‌ಗಳಿಲ್ಲದ ವಾಹನಗಳನ್ನು ನೋಡುತ್ತೀರಿ. ಈ ಹೆಚ್ಚಿನವು ವಾಹನಗಳ ಹಿಂಭಾಗದಲ್ಲಿ ಪ್ರತಿಫಲಕಗಳನ್ನು ಸಹ ಹೊಂದಿರುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

ವೈರಲ್‌ ವಿಡಿಯೋ ಇಲ್ಲಿದೆ

ಇಲ್ಲಿ 80% ವಾಹನಗಳು ಸಂಚಾರಿಸುವಾಗ ಸೂಚಕಗಳನ್ನು ಬಳಸುವುದಿಲ್ಲ. ಸೂಚಕಗಳನ್ನು ಬಳಸುತ್ತಿರುವ ಉಳಿದವರು ಅವುಗಳನ್ನು ಅನುಸರಿಸುವುದಿಲ್ಲ. 2026 ರಲ್ಲಿ ನಾವೆಲ್ಲರೂ ನಮ್ಮ ಸ್ವಂತ ಮತ್ತು ಕುಟುಂಬಗಳ ಸುರಕ್ಷತೆಗಾಗಿ ರಸ್ತೆ ನಿಯಮಗಳನ್ನು ಅನುಸರಿಸಲು ಪ್ರಾರಂಭಿಸಬೇಕು ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: 2.9 ಕೋಟಿ ರೂ ಸಂಬಳದ ಉದ್ಯೋಗ ತೊರೆದು ಅಮೆರಿಕದಿಂದ ಭಾರತಕ್ಕೆ ಬರಲು ನಿರ್ಧರಿಸಿದ ಅನಿವಾಸಿ ಭಾರತೀಯ

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ಒಬ್ಬ ಬಳಕೆದಾರ ಓವರ್‌ಲೋಡ್ ಮಾಡಿದ ಟ್ರಕ್‌ಗಳು ಮತ್ತು ಟೈಲ್ ಲೈಟ್‌ಗಳಿಲ್ಲದಿರುವುದು ಹೆದ್ದಾರಿಗಳಲ್ಲಿ ದೊಡ್ಡ ಅಪಾಯ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನಿಮ್ಮ ಮಾತು ನಿಜ, ಆದರೆ ಸುರಕ್ಷತೆಯ ಬಗ್ಗೆ ಗಮನ ಕೊಡದಿರುವುದೇ ಅಪಘಾತ ಹೆಚ್ಚಾಗಲು ಪ್ರಮುಖ ಕಾರಣ ಎಂದು ಹೇಳಿದ್ದಾರೆ. ಇನ್ನೊಬ್ಬರು, ವಿದೇಶದಿಂದ ಬಂದ ಬಳಿಕ ನಾನು ಅದೇ ವಿಷಯವನ್ನು ಅರಿತುಕೊಂಡೆ ಎಂದು ವ್ಯಂಗ್ಯವಾಡಿದ್ದಾರೆ.

ಇನ್ನಷ್ಟು ವೈರಲ್‌ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Source link

Tejas Aircraft Crash: ತೇಜಸ್ ವಿಮಾನ ಇದ್ದಕ್ಕಿದ್ದಂತೆ ಪತನವಾಗಿದ್ಹೇಗೆ? 3 ವರ್ಷಗಳಲ್ಲಿ 3 ಪ್ರಮುಖ ಅಪಘಾತಗಳ ಬಗ್ಗೆ ಇಲ್ಲಿದೆ ಮಾಹಿತಿ – Kannada News | Tejas Fighter Jet Goes Down Mid Flight; Pilot Ejects Safely

ನವದೆಹಲಿ, ಫೆಬ್ರವರಿ 23: ಭಾರತೀಯ ವಾಯುಪಡೆ(IAF) ಮತ್ತೊಂದು ಹಿನ್ನಡೆ ಅನುಭವಿಸಿದೆ. ತೇಜಸ್ ಲೈಟ್ ಕಾಂಬ್ಯಾಟ್ ಏರ್​ಕ್ರಾಫ್ಟ್( Tejas Aircraft)​​ ವಿಮಾನ ಅಪಘಾತಕ್ಕೀಡಾಗಿದೆ. ಆದರೆ ಒಳ್ಳೆ ಸುದ್ದಿ ಎಂದರೆ ಪೈಲಟ್ ಸುರಕ್ಷಿತವಾಗಿ ಹೊರ ಜಿಗಿದಿದ್ದಾರೆ.  ತಿಂಗಳ ಆರಂಭದಲ್ಲಿ ಘಟನೆ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ವಿಮಾನವು ಲ್ಯಾಂಡಿಂಗ್ ಸಮಯದಲ್ಲಿ ಗಂಭೀರ ಹಾನಿಯನ್ನು ಅನುಭವಿಸಿತ್ತು. ಪರಿಣಾಮವು ತೀವ್ರವಾಗಿದ್ದರಿಂದ ವಿಮಾನವು ತುಸು ಹೆಚ್ಚಾಗಿಯೇ ಹಾನಿಗೊಳಗಾಗಿದೆ. ಪೈಲಟ್ ಸಕಾಲದಲ್ಲಿ ಜಿಗಿದ ಕಾರಣ ಅವರ ಜೀವ ಉಳಿದಿತ್ತು. ವಾಯುಪಡೆಯು ಸಮಸ್ಯೆಗಳನ್ನು ಕಂಡುಕೊಳ್ಳಲು ನೌಕಾಪಡೆಯಲ್ಲಿರುವ ಎಲ್ಲಾ ತೇಜಸ್ ವಿಮಾನಗಳ ಸಮಗ್ರ ತನಿಖೆ ಪ್ರಾರಂಭಿಸಿದೆ.ಬ್ರೇಕ್ ವೈಫಲ್ಯದಿಂದ ಅಪಘಾತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

ಮಾರ್ಚ್ 2024: ಫೈರ್‌ಪವರ್ ಡೆಮೊ ಮುಗಿಸಿ ಹಿಂತಿರುಗುತ್ತಿದ್ದಾಗ ಜೈಸಲ್ಮೇರ್ ಬಳಿ ತೇಜಸ್ ವಿಮಾನ ಪತನಗೊಂಡಿತ್ತು. ಪೈಲಟ್ ಯಶಸ್ವಿಯಾಗಿ ಹೊರಕ್ಕೆ ಹಾರಿದರು ಮತ್ತು ಸುರಕ್ಷಿತವಾಗಿದ್ದರು.

ನವೆಂಬರ್ 2025: ದುಬೈ ಏರ್ ಶೋನಲ್ಲಿ ನಡೆದ ವೈಮಾನಿಕ ಪ್ರದರ್ಶನದ ಸಮಯದಲ್ಲಿ ತೇಜಸ್ ವಿಮಾನ ಅಪಘಾತಕ್ಕೀಡಾಯಿತು. ಪೈಲಟ್‌ಗಳು ಹೊರಕ್ಕೆ ಹೊರಬರಲು ಸಾಧ್ಯವಾಗಲಿಲ್ಲ ಮತ್ತು ದುರಂತವಾಗಿ ಸಾವನ್ನಪ್ಪಿದ್ದರು. ತನಿಖಾ ವರದಿ ಇನ್ನೂ ಮುಂದುವರೆದಿದೆ.

ಈ ಘಟನೆಗಳು ತೇಜಸ್ ತಾಂತ್ರಿಕ, ಕಾರ್ಯಾಚರಣೆ ಅಥವಾ ನಿರ್ವಹಣಾ ಸವಾಲುಗಳನ್ನು ಹೊಂದಿದೆ ಎಂದು ತೋರಿಸುತ್ತವೆ, ಆದರೆ ಎಜೆಕ್ಷನ್ ವ್ಯವಸ್ಥೆಯು ಎರಡು ಸಂದರ್ಭಗಳಲ್ಲಿ ಪೈಲಟ್‌ಗಳ ಜೀವಗಳನ್ನು ಉಳಿಸಿದೆ.

ಮತ್ತಷ್ಟು ಓದಿ: ಎಚ್​ಎಎಲ್​ಗೆ ಹೊಸ ಜಿಇ-404 ಎಂಜಿನ್; ಭಾರತೀಯ ಸೇನೆಗೆ ಸದ್ಯದಲ್ಲೇ ಹೊಸ ತೇಜಸ್ ಎಂಕೆ1ಎ ಯುದ್ಧವಿಮಾನಗಳು

ತೇಜಸ್ ಎಂದರೇನು?

ತೇಜಸ್ ಭಾರತದ ಸ್ಥಳೀಯ ಹಗುರ ಯುದ್ಧ ವಿಮಾನವಾಗಿದ್ದು, ಇದನ್ನು HAL ಅಭಿವೃದ್ಧಿಪಡಿಸಿದೆ, ಇದು ಬಹು-ಪಾತ್ರ (ವಾಯು ಯುದ್ಧ, ನೆಲದ ದಾಳಿ ಮತ್ತು ವಿಚಕ್ಷಣ) ಸಾಮರ್ಥ್ಯ ಹೊಂದಿದೆ. ಇದು ಆಧುನಿಕ ರಾಡಾರ್, ಶಸ್ತ್ರಾಸ್ತ್ರಗಳು ಮತ್ತು ಏವಿಯಾನಿಕ್ಸ್‌ಗಳಿಂದ ಸಜ್ಜುಗೊಂಡಿದೆ. ತೇಜಸ್ ಕಾರ್ಯಕ್ರಮವು ಸ್ವಾವಲಂಬಿ ಭಾರತವನ್ನು ಉದಾಹರಣೆಯಾಗಿ ತೋರಿಸುತ್ತದೆ, ವಿದೇಶಿ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ರಫ್ತು ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ಉತ್ಪಾದನಾ ವಿಳಂಬಗಳು ಮತ್ತು ಈ ಅಪಘಾತಗಳು ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ.

ಮುಂದೇನು?

ಈ ಘಟನೆಯಿಂದ IAF ಮತ್ತು HAL ಪಾಠ ಕಲಿಯುತ್ತಿವೆ ಮತ್ತು ಸುರಕ್ಷತಾ ಶಿಷ್ಟಾಚಾರಗಳನ್ನು ಬಲಪಡಿಸುತ್ತಿವೆ. ಪೈಲಟ್ ತರಬೇತಿ, ನಿರ್ವಹಣೆ ಮತ್ತು ತಾಂತ್ರಿಕ ತಪಾಸಣೆಗಳ ಮೇಲೆ ಹೆಚ್ಚಿನ ಗಮನ ಹರಿಸಬಹುದು. ತೇಜಸ್ ನೌಕಾಪಡೆಯ ಸನ್ನದ್ಧತೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ, ಏಕೆಂದರೆ ಇದು ಭವಿಷ್ಯದ ವಾಯು ಶಕ್ತಿಯ ಮೂಲಾಧಾರವಾಗಿದೆ.

ವಾಯುಪಡೆಯು ಸರಿಸುಮಾರು 30 ಸಿಂಗಲ್-ಸೀಟರ್ ತೇಜಸ್ ವಿಮಾನಗಳನ್ನು ಹೊಂದಿದೆ. ತೇಜಸ್ ಒಂದು ಸಿಂಗಲ್-ಎಂಜಿನ್, ಬಹು-ಪಾತ್ರದ ಯುದ್ಧ ವಿಮಾನವಾಗಿದೆ. ಇದು ಹೆಚ್ಚು ದುರ್ಬಲ ವಾಯುಪ್ರದೇಶದಲ್ಲಿಯೂ ಸಹ ಹೆಚ್ಚಿನ ಸರಾಗವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.

ಫೆಬ್ರವರಿ 2021 ರಲ್ಲಿ, ರಕ್ಷಣಾ ಸಚಿವಾಲಯವು ವಾಯುಪಡೆಗೆ 83 ತೇಜಸ್ Mk-1A ಜೆಟ್‌ಗಳನ್ನು ಖರೀದಿಸಲು HAL ಜೊತೆ 48,000 ಕೋಟಿ ರೂ. ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Virat Kohli: ವಿರಾಟ್ ಕೊಹ್ಲಿ ಇರಬೇಕಿತ್ತು..! – Kannada News | Virat Kohli was the highest individual scorer in India successfull chase

ಟಿ20 ವಿಶ್ವಕಪ್​ ಇತಿಹಾಸದಲ್ಲಿ ಟೀಮ್ ಇಂಡಿಯಾ 150 ಕ್ಕಿಂತ ಹೆಚ್ಚಿನ ಸ್ಕೋರ್ ಬೆನ್ನತ್ತಿ ಗೆದ್ದಿರುವುದು ಕೇವಲ 3 ಬಾರಿ ಮಾತ್ರ. ಈ ಮೂರು ಗೆಲುವಿನ ರೂವಾರಿ ವಿರಾಟ್ ಕೊಹ್ಲಿ. ಹೀಗಾಗಿ ಸೌತ್ ಆಫ್ರಿಕಾ ವಿರುದ್ಧದ ಹೀನಾಯ ಸೋಲಿನ ಬೆನ್ನಲ್ಲೇ ವಿರಾಟ್ ಕೊಹ್ಲಿ ಇರಬೇಕಿತ್ತು ಎಂಬ ಮಾತುಗಳು ಕೇಳಿ ಬರಲಾರಂಭಿಸಿದೆ.

ಭಾರತ ತಂಡವು ಮೊದಲ ಬಾರಿಗೆ ಟಿ20 ವಿಶ್ವಕಪ್​ನಲ್ಲಿ 150+ ಸ್ಕೋರ್ ಚೇಸ್ ಮಾಡಿ ಗೆದ್ದಿದ್ದು 2014 ರಲ್ಲಿ. ಶೇರೆ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದಿದ್ದ 2014ರ ಟಿ20 ವಿಶ್ವಕಪ್​ನ ಸೆಮಿಫೈನಲ್​ನಲ್ಲಿ ಸೌತ್ ಆಫ್ರಿಕಾ ನೀಡಿದ 173 ರನ್​ಗಳನ್ನು ಟೀಮ್ ಇಂಡಿಯಾ ಚೇಸ್ ಮಾಡಿ ಗೆದ್ದಿತ್ತು. ಈ ಭರ್ಜರಿ ಗೆಲುವಿನ ರೂವಾರಿ ವಿರಾಟ್ ಕೊಹ್ಲಿ. ಈ ಪಂದ್ಯದಲ್ಲಿ ಕೇವಲ 44 ಎಸೆತಗಳನ್ನು ಎದುರಿಸಿದ್ದ ಕೊಹ್ಲಿ ಅಜೇಯ 72 ರನ್ ಬಾರಿಸಿ ಮಿಂಚಿದ್ದರು.

ಟೀಮ್ ಇಂಡಿಯಾ ಟಿ20 ವಿಶ್ವಕಪ್​ನಲ್ಲಿ ಎರಡನೇ ಬಾರಿ 150+ ಸ್ಕೋರ್ ಚೇಸ್ ಮಾಡಿದ್ದು 2016 ರಲ್ಲಿ. ಆಸ್ಟ್ರೇಲಿಯಾ ವಿರುದ್ಧದ ಈ ಪಂದ್ಯದಲ್ಲಿ ಕಿಂಗ್ ಕೊಹ್ಲಿ 51 ಎಸೆತಗಳಲ್ಲಿ ಅಜೇಯ 82 ರನ್ ಬಾರಿಸಿದ್ದರು. ಕೊಹ್ಲಿಯ ಈ ಭರ್ಜರಿ ಬ್ಯಾಟಿಂಗ್ ನೆರವಿನೊಂದಿಗೆ ಟೀಮ್ ಇಂಡಿಯಾ 161 ರನ್​ಗಳ ಗುರಿ ಬೆನ್ನತ್ತಿ 6 ವಿಕೆಟ್​ಗಳ ಜಯ ಸಾಧಿಸಿತ್ತು.

ಭಾರತ ತಂಡವು ಮೂರನೇ ಬಾರಿ 150 ಕ್ಕಿಂತ ಹೆಚ್ಚಿನ ರನ್ ಚೇಸ್ ಮಾಡಿರುವುದು 2022ರ ಟಿ20 ವಿಶ್ವಕಪ್​ನಲ್ಲಿ. ಅಂದು ಪಾಕಿಸ್ತಾನ್ ತಂಡ ನೀಡಿದ 160 ರನ್​ಗಳ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ಇದಾಗ್ಯೂ ಏಕಾಂಗಿಯಾಗಿ ಹೋರಾಟ ಮುಂದುವರೆಸಿದ ವಿರಾಟ್ ಕೊಹ್ಲಿ 53 ಎಸೆತಗಳಲ್ಲಿ ಅಜೇಯ 82 ರನ್ ಬಾರಿಸಿ ಭಾರತ ತಂಡಕ್ಕೆ 4 ವಿಕೆಟ್​ಗಳ ಭರ್ಜರಿ ಗೆಲುವು ತಂದು ಕೊಟ್ಟಿದ್ದರು.

ಅಂದರೆ ಟೀಮ್ ಇಂಡಿಯಾ ಟಿ20 ವಿಶ್ವಕಪ್​ನಲ್ಲಿ 150+ ರನ್ ಚೇಸ್ ಮಾಡಿ ಗೆದ್ದಾಗೆಲ್ಲಾ ವಿರಾಟ್ ಕೊಹ್ಲಿ ಅಜೇಯರಾಗಿ ಉಳಿದಿದ್ದರು. ಅಜೇಯರಾಗಿಯೇ ಭಾರತ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಆದರೆ ಈ ಬಾರಿ ಕಿಂಗ್ ಕೊಹ್ಲಿ ಇರಲಿಲ್ಲ.

ಇದನ್ನೂ ಓದಿ: ಸೌತ್ ಆಫ್ರಿಕಾ ಮನಸ್ಸು ಮಾಡಿದ್ರೆ ಭಾರತ ಡೈರೆಕ್ಟ್ ಸೆಮಿಫೈನಲ್​ಗೆ!

ಪರಿಣಾಮ ಸೌತ್ ಆಫ್ರಿಕಾ ತಂಡ ನೀಡಿದ 188 ರನ್​ಗಳ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಕೇವಲ 111 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ ಬರೋಬ್ಬರಿ 76 ರನ್​ಗಳಿಂದ ಸೋಲೊಪ್ಪಿಕೊಂಡಿದೆ. ಈ ಸೋಲಿನ ಬೆನ್ನಲ್ಲೇ ಕೇಳಿ ಬಂದಿದ್ದೇ… ವಿರಾಟ್ ಕೊಹ್ಲಿ ಇರಬೇಕಿತ್ತು!

Published On – 10:30 am, Mon, 23 February 26

Source link

ಯುವ ಉದ್ಯಮಿ ಜೊತೆ ಮಲೈಕಾ ಡೇಟಿಂಗ್; ಇಬ್ಬರ ಮಧ್ಯೆ ಇದೆ 19 ವರ್ಷಗಳ ಅಂತರ – Kannada News | Malaika Arora and Harsh Mehta: New Love, Viral Photos and 19 Year Age Gap Explored

ನಟಿ ಮಲೈಕಾ ಅರೋರಾ (Malaika Arora) ಅವರ ವೈಯಕ್ತಿಕ ಜೀವನ ತೆರೆದ ಪುಸ್ತಕದಂತಿದೆ. ನಟ ಅರ್ಬಾಜ್ ಖಾನ್ ಅವರಿಂದ ವಿಚ್ಛೇದನ ಪಡೆದ ನಂತರ, ಅವರು ತಮಗಿಂತ 12 ವರ್ಷ ಕಿರಿಯ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಇಬ್ಬರೂ ಸುಮಾರು 6 ವರ್ಷಗಳ ಕಾಲ ಸಂಬಂಧದಲ್ಲಿದ್ದರು. ಇಷ್ಟು ದೊಡ್ಡ ವಯಸ್ಸಿನ ಅಂತರದ ಹೊರತಾಗಿಯೂ, ಅರ್ಜುನ್-ಮಲೈಕಾ ಅವರ ಕೆಮಿಸ್ಟ್ರಿ ಮತ್ತು ಜೋಡಿಯು ಅನೇಕರಿಗೆ ಇಷ್ಟವಾಯಿತು. ಅರ್ಜುನ್ ಜೊತೆಗಿನ ಸಂಬಂಧ ಮುರಿದುಬಿದ್ದ ನಂತರ, ಮಲೈಕಾ ಅವರ ಹೆಸರು ನಿರಂತರವಾಗಿ ಯಾರೊಂದಿಗಾದರೂ ಸಂಬಂಧ ಹೊಂದಿತ್ತು. ಅದೇ ರೀತಿ, ಮುಂಬೈನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ, ಮಲೈಕಾ ಯುವ ಉದ್ಯಮಿಯೊಂದಿಗೆ ಕಾಣಿಸಿಕೊಂಡರು. ಅವರು ಯಾರು ಎಂಬ ಚರ್ಚೆ ಶುರುವಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಈ ಫೋಟೋದಲ್ಲಿ, ಮಲೈಕಾ ಹರ್ಷ್ ಮೆಹ್ತಾ ಎಂಬ ಯುವಕನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವುದು ಕಾಣಿಸಿದೆ. ಮಲೈಕಾ ಮತ್ತು ಹರ್ಷ್ ಪ್ರೇಮಿಗಳ ದಿನದಂದು ವಿದೇಶದಲ್ಲಿ ತಮ್ಮ ರಜಾದಿನಗಳನ್ನು ಆನಂದಿಸುತ್ತಿದ್ದರು ಎಂಬ ಮಾತು ಕೇಳಿಬರುತ್ತಿದೆ. ಮಲೈಕಾ ಮತ್ತು ಹರ್ಷ್ ನಡುವಿನ ವಯಸ್ಸಿನ ವ್ಯತ್ಯಾಸದ ಬಗ್ಗೆ ಇನ್ನೂ ಹೆಚ್ಚಿನ ಚರ್ಚೆ ನಡೆಯುತ್ತಿದೆ.

ಹರ್ಷ್ ಮಲೈಕಾಗಿಂತ 19 ವರ್ಷ ಚಿಕ್ಕವರು. ಅವರಿಗೆ ಪ್ರಸ್ತುತ 33 ವರ್ಷ ಮತ್ತು ಮಲೈಕಾಗೆ 52 ವರ್ಷ. ಹರ್ಷ್ ಮೆಹ್ತಾ ವಜ್ರದ ವ್ಯಾಪಾರಿ ಮತ್ತು ಹರ್ಷ್ ಸಂಕಾಸ್ ಮ್ಯಾನೇಜ್ಮೆಂಟ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು. ಅವರು ಪ್ರಸಿದ್ಧ ಉದ್ಯಮಿ. ಅವರು ಕೋಟಿಗಟ್ಟಲೆ ಮೌಲ್ಯದ ಸಂಪತ್ತನ್ನು ಹೊಂದಿದ್ದಾರೆ, ಅದರ ನಿಖರ ಮೊತ್ತ ಇನ್ನೂ ತಿಳಿದಿಲ್ಲ.

ಹರ್ಷ್ ಮತ್ತು ಮಲೈಕಾ ಇಟಲಿಯಲ್ಲಿ ಪ್ರೇಮಿಗಳ ದಿನವನ್ನು ಆಚರಿಸುತ್ತಿದ್ದಾರೆ ಎಂಬ ಸುದ್ದಿ ಒಂದು ಫೋಟೋ ವೈರಲ್ ಆದ ನಂತರ ಬೆಳಕಿಗೆ ಬಂದಿತು. ವೈರಲ್ ಆಗಿರುವ ಫೋಟೋದಲ್ಲಿ, ಇಬ್ಬರೂ ಇಟಲಿಯ ಪ್ರಸಿದ್ಧ ಟ್ರೆವಿ ಫೌಂಟೇನ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವುದು ಕಂಡು ಬಂದಿದೆ. ಇದಕ್ಕೂ ಮೊದಲು, ಇಬ್ಬರೂ ವಿಮಾನ ನಿಲ್ದಾಣದಲ್ಲಿಯೂ ಕಾಣಿಸಿಕೊಂಡಿದ್ದರು. ಆದರೆ ಆ ಸಮಯದಲ್ಲಿ ಅವರು ಒಟ್ಟಿಗೆ ತೆರಳುವುದನ್ನು ತಪ್ಪಿಸಿದರು. ಮಲೈಕಾ ಅಥವಾ ಹರ್ಷ್ ತಮ್ಮ ಸಂಬಂಧದ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: ಮಸ್ತ್ ಮಲೈಕಾ ಹಾಡಿಗೆ ಮೈಚಳಿ ಬಿಟ್ಟು ಡ್ಯಾನ್ಸ್ ಮಾಡಿದ ಜಾನ್ವಿ

ಮಲೈಕಾ 2018 ರಲ್ಲಿ ನಟ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಕಳೆದ ವರ್ಷ ಇಬ್ಬರೂ ಬೇರ್ಪಟ್ಟರು. ಅದಕ್ಕೂ ಮೊದಲು, ಅವರು ನಟ ಅರ್ಬಾಜ್ ಖಾನ್ ಅವರನ್ನು ವಿವಾಹವಾದರು. ಮಲೈಕಾ 2017 ರಲ್ಲಿ ವಿಚ್ಛೇದನ ಪಡೆದರು. ಅರ್ಬಾಜ್ ಮತ್ತು ಮಲೈಕಾಗೆ ಒಬ್ಬ ಮಗನಿದ್ದಾನೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಂಡ್ಯ: ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮುಸ್ಲಿಂ ದಂಪತಿ! – Kannada News | Mandya: Muslim Couple Welcomes Triplets ,1 Girl, 2 Boys in Akkihebbalu

ಮಂಡ್ಯ, ಫೆಬ್ರವರಿ 23: ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಅಪ್ತಾಬ್ ಮತ್ತು ಆರೀಫಾ ಎಂಬ ಮುಸ್ಲಿಂ ದಂಪತಿಗೆ ತ್ರಿವಳಿ ಮಕ್ಕಳ ಜನನವಾಗಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಒಂದು ಹೆಣ್ಣು ಮತ್ತು ಎರಡು ಗಂಡು ಮಕ್ಕಳಿಗೆ ಆರೀಫಾ ಭಾನು ಜನ್ಮ ನೀಡಿದ್ದು, ವೈದ್ಯರ ಆರೈಕೆಯಿಂದ ತಾಯಿ ಮತ್ತು ಮೂವರು ಶಿಶುಗಳು ಸುರಕ್ಷಿತವಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಸಾಮಾನ್ಯವಾಗಿ ಒಂದು ಮಗುವನ್ನು ಸಾಕುವುದೇ ಕಷ್ಟಕರ ಎನಿಸುವ ಈ ದಿನಗಳಲ್ಲಿ, ದಂಪತಿಗೆ ಒಂದೇ ಬಾರಿಗೆ ಮೂರು ಮಕ್ಕಳಾಗಿದ್ದು, ಕುಟುಂಬಸ್ಥರಲ್ಲಿ ಸಂತಸ ಮನೆಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Bengaluru Air Quality: ಬೆಳಗಾವಿಯ ಗಾಳಿಯೂ ಆರೋಗ್ಯಕ್ಕೆ ಮಾರಕ! – Kannada News | Bangalore Air Pollution Crisis: Belagavi’s Air quality is getting worse

ಬೆಳಗಾವಿಯ ಗಾಳಿಯೂ ಆರೋಗ್ಯಕ್ಕೆ ಮಾರಕ!

ಬೆಂಗಳೂರು, ಫೆಬ್ರವರಿ 23: ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಬೆಳಗಾವಿ, ಮಂಗಳೂರು ಮತ್ತು ಉಡುಪಿಯ ವಾಯು ಗುಣಮಟ್ಟವೂ (Bengaluru Air Quality) ಹದಗೆಟ್ಟಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ನಗರಗಳ ಗಾಳಿಯ ಗುಣಮಟ್ಟ, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಇಂದೂ ಸಹ ಹಲವೆಡೆ ಕಳಪೆ ಏರ್ ಕ್ವಾಲಿಟಿ ದಾಖಲಾಗಿದ್ದು, ಬೆಳಗಾವಿಯ AQI ಇನ್ನಷ್ಟು ಹದಗೆಟ್ಟಿದೆ.

ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 88ಕ್ಕೆ ತಲುಪಿದೆ. ಅದಕ್ಕಿಂತ ಹೆಚ್ಚಾಗಿ ಶಿವಮೊಗ್ಗದ ಏರ್ ಕ್ವಾಲಿಟಿ 126 ಆಗಿದೆ. ಹಲವು ದಿನಗಳಿಂದ ವಿಪರೀತ ಏರಿಕೆ ಕಾಣುತ್ತಿರುವ ಬೆಳಗಾವಿಯ ಏರ್ ಕ್ವಾಲಿಟಿ ಇಂದು 200ರ ಗಡಿ ತಲುಪಿರುವುದು ಆತಂಕಕಾರಿಯಾಗಿದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –88
  • ಮಂಗಳೂರು-156
  • ಮೈಸೂರು –130
  • ಬೆಳಗಾವಿ – 163
  • ಕಲಬುರ್ಗಿ-111
  • ಶಿವಮೊಗ್ಗ – 126
  • ಬಳ್ಳಾರಿ – 108
  • ಹುಬ್ಬಳ್ಳಿ- 156
  • ಉಡುಪಿ –164
  • ವಿಜಯಪುರ –124

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಚಾಮುಂಡಿ ಬೆಟ್ಟದ ಮೂಲ ದೇವರು ಯಾರು? ಮಹಾಬಲೇಶ್ವರ ದೇವಾಲಯದ ನಿಗೂಢ ಸತ್ಯ ಇಲ್ಲಿದೆ ನೋಡಿ – Kannada News | Chamundi Hills’ True Origin: Mahabaleshwara Temple’s Ancient Legacy in Mysore

ಮೈಸೂರಿನ ಚಾಮುಂಡಿ ಬೆಟ್ಟ (Chamundi Hills history) ಇಂದು ವಿಶ್ವಪ್ರಸಿದ್ಧ ಪ್ರವಾಸಿ ತಾಣ ಹಾಗೂ ಧಾರ್ಮಿಕ ಕೇಂದ್ರ. ಆದರೆ, ಇತಿಹಾಸದ ಪುಟಗಳನ್ನು ತಿರುವಿ ನೋಡಿದಾಗ ಈ ಬೆಟ್ಟದ ಮೂಲ ಸ್ವರೂಪವೇ ಬೇರೆಯಾಗಿತ್ತು. ಅಚ್ಚರಿಯ ವಿಷಯವೆಂದರೆ, ಸಾವಿರಾರು ವರ್ಷಗಳ ಹಿಂದೆ ಈ ಬೆಟ್ಟವನ್ನು ‘ಮಹಾಬಲಾದ್ರಿ’ ಅಥವಾ ‘ಮಹಾಬಲ ಬೆಟ್ಟ’ ಎಂದು ಕರೆಯಲಾಗುತ್ತಿತ್ತು. ಇಲ್ಲಿನ ಮೂಲ ದೇವರು ಚಾಮುಂಡೇಶ್ವರಿಯಲ್ಲ, ಬದಲಾಗಿ ಮಹಾಬಲೇಶ್ವರ (ಶಿವ) ಕ್ರಿ.ಶ. 950ರ ಸುಮಾರಿನ ಶಾಸನಗಳ ಪ್ರಕಾರ, ಈ ಬೆಟ್ಟದ ಪ್ರಮುಖ ದೇವರು ಮಹಾಬಲೇಶ್ವರ ಸ್ವಾಮಿ. ಚಾಮುಂಡೇಶ್ವರಿ ದೇವಿಯನ್ನು ಆಗ ‘ಮಬ್ಬಲದ ದೇವಿ’ ಅಥವಾ ‘ಮಹಾಲಕ್ಷ್ಮಿ’ ಎಂದು ಕರೆಯಲಾಗುತ್ತಿತ್ತು ಮತ್ತು ಆಕೆ ಈ ಶಿವನ ದೇವಸ್ಥಾನದ ಪಾರ್ಶ್ವದೇವತೆಯಾಗಿದ್ದಳು.

ಯದುವಂಶದ ಅರಸರು (ಮೈಸೂರು ಒಡೆಯರು) ಚಾಮುಂಡೇಶ್ವರಿ ದೇವಿಯನ್ನು ತಮ್ಮ ಕುಲದೇವತೆಯಾಗಿ ಸ್ವೀಕರಿಸಿದ ನಂತರ, ದೇವಿಯ ಮಹಿಮೆ ಹೆಚ್ಚಾಯಿತು. 17ನೇ ಶತಮಾನದ ನಂತರ ‘ಮಹಾಬಲ ಬೆಟ್ಟ’ ಎಂಬ ಹೆಸರು ಮರೆಯಾಗಿ ‘ಚಾಮುಂಡಿ ಬೆಟ್ಟ’ ಎಂಬ ಹೆಸರು ಪ್ರಸಿದ್ಧಿಗೆ ಬಂತು. ಚಾಮುಂಡೇಶ್ವರಿ ದೇವಸ್ಥಾನದ ಅತ್ಯಂತ ಸಮೀಪದಲ್ಲೇ ಇರುವ ಮಹಾಬಲೇಶ್ವರ ದೇವಸ್ಥಾನ ಚಾಮುಂಡಿ ಬೆಟ್ಟದ ಅತ್ಯಂತ ಹಳೆಯ ದೇವಾಲಯವಾಗಿದೆ. ಜತೆಗೆ ಇದು ಚಾಮುಂಡೇಶ್ವರಿ ದೇವಾಲಯಕ್ಕಿಂತಲೂ ಮಹಾಬಲೇಶ್ವರ ದೇವಾಲಯ ಹಳೆಯದು. ಇದು ಹೊಯ್ಸಳ ಮತ್ತು ಗಂಗರ ಕಾಲದ ವಾಸ್ತುಶಿಲ್ಪವನ್ನು ಹೊಂದಿದೆ.

ತಾಂತ್ರಿಕ ಮತ್ತು ಧಾರ್ಮಿಕ ದೃಷ್ಟಿಯಿಂದ ‘ಶಿವ’ ಮತ್ತು ‘ಶಕ್ತಿ’ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಚಾಮುಂಡೇಶ್ವರಿ (ಶಕ್ತಿ) ಮಹಿಷಾಸುರನನ್ನು ಸಂಹರಿಸಿದ ನಂತರ ಈ ಬೆಟ್ಟದಲ್ಲಿ ನೆಲೆಸಿದಳು ಎಂಬುದು ಪುರಾಣ. ಆದರೆ, ಕ್ಷೇತ್ರ ದೇವತೆಯಾಗಿ ಮೊದಲಿದ್ದದ್ದು ಶಿವನೇ (ಮಹಾಬಲೇಶ್ವರ). ಇಂದಿಗೂ ಅನೇಕ ಸಂಪ್ರದಾಯಸ್ಥರು ಮೊದಲು ಮಹಾಬಲೇಶ್ವರನ ದರ್ಶನ ಪಡೆದು, ನಂತರ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯುವುದು ಪದ್ಧತಿ.

ಇದನ್ನೂ ಓದಿ: ಪ್ರವಾಸಿಗರೇ ಮೈಸೂರಿಗೆ ಹೋದ್ರೆ ‘ಮಧುವನ’ ಕ್ಕೆ ಭೇಟಿ ನೀಡಲೇಬೇಕು: ಇಲ್ಲಿ ಏನಿದೆ ಗೊತ್ತಾ?

ಸ್ಕಂದ ಪುರಾಣದ ಪ್ರಕಾರ, ಈ ಬೆಟ್ಟವನ್ನು ‘ತ್ರಯಂಬಕ ಶಿಖರ’ ಎಂದೂ ಕರೆಯಲಾಗುತ್ತಿತ್ತು. ಇಲ್ಲಿ ಆದಿಶಕ್ತಿಯು ಚಾಮುಂಡಿಯ ಅವತಾರ ತಾಳಿ ಬೆಟ್ಟದ ಮೇಲಿದ್ದ ರಾಕ್ಷಸರನ್ನು ಸಂಹರಿಸಿದಳು. ಅವಳ ವೀರಾವೇಶವನ್ನು ಕಂಡು ದೇವತೆಗಳು ಪ್ರಾರ್ಥಿಸಿದಾಗ, ಭಕ್ತರ ರಕ್ಷಣೆಗಾಗಿ ಆಕೆ ಅಲ್ಲೇ ನೆಲೆಸಿದಳು. ಒಡೆಯರ್ ರಾಜವಂಶದ ಪ್ರಥಮ ದೊರೆ ಯದುರಾಯರಿಗೆ ಚಾಮುಂಡೇಶ್ವರಿ ದೇವಿ ಕನಸಿನಲ್ಲಿ ಬಂದು ಮಾರ್ಗದರ್ಶನ ನೀಡಿದಳು ಎಂಬ ನಂಬಿಕೆ ಇದೆ, ಅಲ್ಲಿಂದ ಈ ದೇವಾಲಯ ರಾಜಮನೆತನದ ಆಶ್ರಯದಲ್ಲಿ ವಿಜೃಂಭಿಸಿತು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​​ ಮಾಡಿ

Source link

ಹೊಸ ಹಾಡಿನ ಮೂಲಕ ಗಮನ ಸೆಳೆದ ಮಾಳು; ಯುವ ರಾಜನ ಗೆಟಪ್ – Kannada News | Bigg Boss Kannada Malu New Song Kuniyuve fans likes a lot

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಸ್ಪರ್ಧಿ ಮಾಳು ಅವರು ವೃತ್ತಿಯಲ್ಲಿ ಸಿಂಗರ್. ಅನೇಕ ಹಾಡುಗಳನ್ನು ಅವರೇ ಹಾಡಿದ್ದಾರೆ. ಬಿಗ್ ಬಾಸ್ ಬಳಿಕ ಈಗ ಅವರು ಆಲ್ಬಂ ಹಾಡೊಂದನ್ನು ರಿಲೀಸ್ ಮಾಡುತ್ತಿದ್ದಾರೆ. ಇದರ ಪ್ರೋಮೋ ರಿಲೀಸ್ ಆಗಿದೆ. ಈ ಹಾಡಿನಲ್ಲಿ ಅವರು ರಾಜನ ಗೆಪಟ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ‘ಕುಣಿಯುವೆ..’ ಅನ್ನೋದು ಹಾಡಿನ ಹೆಸರು. ಈ ಪ್ರೋಮೋ ಗಮನ ಸೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version