ದಲಿತ ಸಿಎಂ ಅಸ್ತ್ರ ಪ್ರಯೋಗಿಸಿದ ಸಿದ್ದರಾಮಯ್ಯ: ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದು ಬಾಣ! – Kannada News | Only Congress Can Make a Dalit CM’: Siddaramaiah’s Statement Sparks Fresh Leadership Debate in Karnataka

ಬೆಂಗಳೂರು, ಫೆಬ್ರವರಿ 23: ಸಿಎಂ ಸಿದ್ದರಾಮಯ್ಯ (Siddaramaiah) ಮಾಡಿದ್ದ ಸರಣಿ ಎಕ್ಸ್ ಸಂದೇಶಗಳ ಬಗ್ಗೆ ನಾನಾ ರೀತಿಯಲ್ಲಿ ಚರ್ಚೆ ನಡೆದಿತ್ತು. ವಿಪಕ್ಷ ನಾಯಕರಂತೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಉದ್ದೇಶಿಸಿಯೇ ಸಿದ್ದರಾಮಯ್ಯ ಸರಣಿ ಸಂದೇಶಗಳನ್ನು ಪ್ರಕಟಿಸಿದ್ದಾರೆ ಎಂದು ತಿರುಗು ಬಾಣ ಬಿಟ್ಟಿದ್ದರು. ಇದರಿಂದ ಅಲರ್ಟ್ ಆದ ಸಿದ್ದರಾಮಯ್ಯ, ಎಕ್ಸ್ ಸಂದೇಶಗಳ ಬಗ್ಗೆ ತಾವೇ ಸಮರ್ಥನೆ ನೀಡಿದ್ದಾರೆ. ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿಗೆ ತಿರುಗೇಟು ನೀಡುತ್ತಾ, ದಲಿತ ಸಿಎಂ ದಾಳ ಉರುಳಿಸಿದ್ದಾರೆ. ಕುಮಾರಸ್ವಾಮಿ ಹಾಗೂ ಅವರ ತಂದೆ ಹೆಚ್​ಡಿ ದೇವೇಗೌಡರು, ಸ್ವಜಾತಿ ವಿರೋಧಿಗಳು. ಕುಟುಂಬವಾದಿಗಳು ಎಂದು ಎಕ್ಸ್ ಸಂದೇಶ ಪ್ರಕಟಿಸಿರುವ ಸಿಎಂ, ಮುಂದೆ ದಲಿತರು ಮುಖ್ಯಮಂತ್ರಿ ಆದರೆ ಅದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಬಿಜೆಪಿ ಜೆಡಿಎಸ್‌ನವರು ದಲಿತರನ್ನು ಸಿಎಂ ಮಾಡುತ್ತಾರಾ ಎಂದು ಪ್ರಶ್ನಿಸಿದ್ದಾರೆ.

ಆದರೆ, ಸಿದ್ದರಾಮಯ್ಯ ಎಕ್ಸ್ ಸಂದೇಶಕ್ಕೆ ಮತ್ತೆ ತಿರುಗೇಟು ಕೊಟ್ಟ ಕೇಂದ್ರ ಸಚಿವ ಕುಮಾರಸ್ವಾಮಿ, ಸಿಎಂ ಕುರ್ಚಿ ಉಳಿಸಿಕೊಳ್ಳಲು ಜಾತಿ ದಾಳ ಉರುಳಿಸಿದ್ದಾರೆ ಎಂದು ವ್ಯಾಖ್ಯಾನಿಸಿದ್ದಾರೆ. ಸಿದ್ದರಾಮಯ್ಯ ಎಕ್ಸ್ ಸಂದೇಶಗಳ ಬಗ್ಗೆ ಬಿಜೆಪಿ ನಾಯಕರು ಕೂಡ ವ್ಯಂಗ್ಯವಾಡಿದ್ದು, ಕಾಂಗ್ರೆಸ್​ ಪಕ್ಷದೊಳಗಿನ ಬೆಳವಣಿಗೆ ಬಗ್ಗೆಯೇ ಉಲ್ಲೇಖಿಸಿದ್ದಾರೆ ಎಂದು ಕಾಲೆಳೆದಿದ್ದಾರೆ.

ದಲಿತರು ಕಾಂಗ್ರೆಸ್ ಬೆನ್ನೆಲುಬು, ದಲಿತರು ಸಿಎಂ ಆಗ್ಬೇಕು: ಮಹದೇವಪ್ಪ

ದಲಿತ ಸಿಎಂ ದಾಳ ಉರುಳಿಸಿದ ಸಿದ್ದರಾಮಯ್ಯ ಬಾಣಕ್ಕೆ, ಅವರ ಆಪ್ತ ಸಚಿವ ಮಹದೇವಪ್ಪ ದನಿಗೂಡಿಸಿದ್ದಾರೆ. ಸದ್ಯ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಮುಂದೆ ದಲಿತರು ಸಿಎಂ ಆಗಬೇಕು. ಇದು ಹೈಕಮಾಂಡ್ ಗಮನದಲ್ಲಿದೆ ಎಂದಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ಬಜೆಟ್ ಆದಮೇಲೂ ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆ ಎಂದಿದ್ದಾರೆ.

ಕುಮಾರಸ್ವಾಮಿ, ಪರಮೇಶ್ವರ್ ಭೇಟಿ

ಏತನ್ಮಧ್ಯೆ, ಗೃಹ ಸಚಿವ ಪರಮೇಶ್ವರ್ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಕೇಂದ್ರ ಸಚಿವ ಕು‌ಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದು, ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿಕೆಶಿವಕುಮಾರ್, ಕ್ಷೇತ್ರದ ಕೆಲಸಗಳ ಬಗ್ಗೆ ಚರ್ಚಿಸಲು ಭೇಟಿ ಮಾಡಿರಬೇಕು ಎಂದಿದ್ದಾರೆ.

ಇದನ್ನೂ ಓದಿ: ವಿವಾದದ ಬೆನ್ನಲ್ಲೇ ಸರಣಿ ಎಕ್ಸ್​​ ಪೋಸ್ಟ್​​ ಬಗ್ಗೆ ಸಿಎಂ ಸ್ಪಷ್ಟನೆ: ಹೆಚ್​​ಡಿಕೆಗೂ ತಿವಿದ ಸಿದ್ದರಾಮಯ್ಯ

ಒಟ್ಟಿನಲ್ಲಿ, ಕಾಂಗ್ರೆಸ್ ಕೋಟೆಯಲ್ಲಿ ನಾಯಕತ್ವ ಬದಲಾವಣೆ ಕಿಚ್ಚು ಕಾವೇರಿದೆ. ಸಿಎಂ ಹಾಗೂ ಡಿಸಿಎಂ ಬಣಗಳ ನಡುವೆ ತಂತ್ರ, ರಣತಂತ್ರ ಜೋರಾಗಿ ನಡೆಯುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿನ ಭವಿಷ್ಯ: ಇಂದು ಈ ರಾಶಿಯವರಿಂದ ಏನು ಪಡೆದರೂ ಸಂತೋಷ, ಲಾಭ – Kannada News | Horoscope 23 Monday 2026; Dina Rashi Bhavishya Today, Checkout the details here

ಮೇಷ ರಾಶಿ:

ಮಹತ್ತ್ವದ ಯೋಜನೆಯು ಮಸುಕಾಗಿದ್ದು ಮುಂದಿನ ದಾರಿ ಸರಿಯಾಗಿ ಗೊತ್ತಾಗದೇ ಇರಬಹುದು. ಪ್ರೇಮಿಯನ್ನು ಭೇಟಿಯಾಗಲು ದೂರದ ಊರಿಗೆ ಪ್ರಯಾಣ ಮಾಡಬೇಕಾಗುವುದು. ಹೂಡಿಕೆಯ ಬಗ್ಗೆ ತಜ್ಞರಿಂದ ಮಾಹಿತಿ ಪಡೆದು ಮುಂದುವರಿಯಿರಿ. ಸಾಮಾಜಿಕ ಮುಖಂಡರು ಸಂಘಟನೆಯಲ್ಲಿ ತೊಡಗುವರು. ಗೊಂದಲಗಳಿಂದ ಏನನ್ನೂ ಮಾಡಲಾಗದ ಸ್ಥಿತಿಯು ಬರಲಿದೆ. ಅಲಂಕಾರಿಕ ವಸ್ತುಗಳ ಖರೀದಿಯಿಂದ ಲಾಭವಾಗಲಿದೆ. ಮಾತುಗಳನ್ನು ಕಡಿಮೆ ಆಡುವಿರಿ. ಸಂಪತ್ತಿನ ನಿರ್ವಹಣೆಯಲ್ಲಿ ಸೋಲಬಹುದು.

ವೃಷಭ ರಾಶಿ:

ಕಾರ್ಯ ಮಾಡುವ ಸುಲಭದ ಉಪಾಯಗಳು ನಿಮ್ಮ ಬುದ್ಧಿಗೆ ತೋಚದೇ ಹೋಗಬಹುದು. ಒಂದಕ್ಕಿಂತಲೂ ಹೆಚ್ಚು ಕಾರ್ಯವನ್ನು ಒಮ್ಮೆಲೇ ಮಾಡುವ ಸಂದರ್ಭವು ಬರಬಹುದು. ಕುಟುಂಬವು ನಿಮಗೆ ಕೊಡುವ ಕಿಮ್ಮತ್ತು ಕಡಿಮೆ ಆಗಿದೆ ಎಂದು ಅನ್ನಿಸುವುದು. ಮನಸ್ಸಿನಲ್ಲಿ ಯಾವುದೋ ಆತಂಕವು ಇರಲಿದ್ದು ಹೊರಹಾಕಲು ಪ್ರಯತ್ನಿಸುವಿರಿ. ಸಂಗಾತಿಯಿಂದ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ. ಕಾರ್ಯದ ನಿಮಿತ್ತ ಓಡಾಟವು ಹೆಚ್ಚಾಗುವುದು. ಬಂಧುಗಳಿಂದ ಸಲ್ಲದ ಮಾತುಗಳನ್ನು ಕೇಳುವಿರಿ. ಆಲಸ್ಯದಿಂದ ನಿಮ್ಮ ಎಲ್ಲ ಕಾರ್ಯಗಳೂ ಉಳಿಯಬಹುದು.

ಮಿಥುನ ರಾಶಿ:

ಮನೆಯ ಖರೀದಿಗೆ ಹಣ ಒಟ್ಟಾಗುವುದು ಕಷ್ಟ. ಕಲಿಕೆಯ ಬಗ್ಗೆ ಆಸಕ್ತಿ ಉಂಟಾಗಬಹುದು. ಒಂದೇ ರೀತಿಯ ಕೆಲಸವನ್ನು ಮಾಡಿ ಬೇಸರವಾದೀತು. ಹೊಸ ವಸ್ತುಗಳನ್ನು ಕಳೆದುಕೊಳ್ಳುವಿರಿ. ಕುಟುಂಬದಲ್ಲಿ ಸಂತೋಷದ ವಾತಾವರಣವು ಇದ್ದು ಉತ್ಸಾಹದಿಂದ ಇರುವಿರಿ. ಸೌಜನ್ಯದಿಂದ ಮಾತನಾಡಿ, ಸಂತೋಷಪಡಿಸುವಿರಿ. ನಿಮ್ಮ ಬಗ್ಗೆ ನೀವು ಹೇಳಿಕೊಳ್ಳದೇ ಇರುವ ಹಲವು ವಿಚಾರಗಳು ಸ್ನೇಹಿತರು ಹೇಳುವರು.

ಕರ್ಕಾಟಕ ರಾಶಿ:

ಅತಿವೇಗದ ಮಾತು ಇತರರಿಗೆ ಸ್ಪಷ್ಟವಾಗದೇ ಹೋಗಬಹುದು. ನಿಮ್ಮ ಸುರಕ್ಷಿತ ತಾಣವನ್ನು ನೀವೇ ಆರಿಸಿಕೊಳ್ಳಿ. ಸಾಲದ ಕಾರಣಕ್ಕೆ ತಲೆ ಮರೆಸಿಕೊಳ್ಳಬಹುದು. ದಾಂಪತ್ಯ ಜೀವನದಲ್ಲಿ ಕೆಲವು ಅನಿರೀಕ್ಷಿತ ತಿರುವುಗಳು ಬರಲಿದ್ದು ಅದಕ್ಕೆ ಹೊಂದಿಕೊಳ್ಳುವುದು ಅನಿವಾರ್ಯವಾದೀತು. ಬಂಧುಗಳ ಆಗಮನವು ನಿಮಗೆ ಸಂತೋಷವನ್ನು ಕೊಡುವುದು. ತಾಯಿಯ ಮೇಲೆ ನಿಮ್ಮ ಕೋಪವನ್ನು ತೋರಿಸುವಿರಿ. ಇಕ್ಕಟ್ಟಿನಿಂದ ಹೊರಬರಲು ಮನಸ್ಸು ಮಾಡುವಿರಿ. ಆದರೂ ಕಷ್ಟವಾದೀತು.

ಸಿಂಹ ರಾಶಿ:

ಆಪ್ತರ‌ ಜೊತೆ ಮಾಡುವ ಸಮಾಲೋಚನೆಯಿಂದ ಅನೇಕ ವಿಚಾರಕ್ಕೆ ತೆರೆಬೀಳುವುದು. ವಸ್ತುಗಳ ಖರೀದಿಗೆ ಉತ್ಸಾಹವು ಅಧಿಕವಾಗಿರಲಿದೆ. ಯಾರ ಮಾತನ್ನೂ ಕೇಳುವ ವ್ಯವಧಾನವೂ ನಿಮ್ಮಲ್ಲಿ ಇರದು. ಸಹೋದರನ ಕುಟುಂಬದಲ್ಲಿ ನಿಮ್ಮ ಮಧ್ಯಪ್ರವೇಶವು ಆಗಬೇಕಾಗಬಹುದು. ಧಾರ್ಮಿಕ ಕಾರ್ಯದಲ್ಲಿ ನಿಮ್ಮ ತೊಡಗುವಿಕೆ ಹೆಚ್ಚಿರುವುದು. ಶಿಕ್ಷಣಕ್ಷೇತ್ರದಲ್ಲಿ ಯಶಸ್ಸು ಸಿಗುವುದು. ಧಾರ್ಮಿಕ ಮುಖಂಡರಿಗೆ ಅಪವಾದ ಬರುವ ಸಾಧ್ಯತೆ ಇದೆ. ಸಕಾಲಕ್ಕೆ ಆರ್ಥಿಕ ನೆರವು ಸಿಗಲಿದ್ದು ಸ್ವಲ್ಪ ನೆಮ್ಮದಿ ಸಿಗುವುದು.

ಕನ್ಯಾ ರಾಶಿ:

ನಿಮ್ಮ ನೆಚ್ಚಿನ ವ್ಯಕ್ತಿಗಳ ಸಂಪರ್ಕ ಸಾಧ್ಯವಾಗುವುದು. ಮನೆಯ ಖರ್ಚನ್ನು ಕಡಿಮೆ ಮಾಡುವ ಚಿಂತನೆಯಲ್ಲಿ ಇರುವಿರಿ. ಸರಳತೆಯೇ ನಿಮ್ಮ ಪ್ರಶಂಸೆಗೆ ಕಾರಣವಾಗುವುದು. ಕೆಟ್ಟ ಆಲೋಚನೆಗಳು ಬಂದರೂ ಅದನ್ನು ದೂರ ಮಾಡಿಕೊಳ್ಳುವ ತಂತ್ರವನ್ನು ತಿಳಿಯಿರಿ. ವಕೀಲವೃತ್ತಿಯವರಿಗೆ ಹೆಚ್ಚಿನ ಕಾರ್ಯವು ಬರಲಿದ್ದು ನಿಭಾಯಿಸುವ ಕಲೆಯನ್ನು ಕಲಿತಿರುವಿರಿ. ಮನಸ್ಸಿನಲ್ಲಿ ಹತಾಶೆಯ ಭಾವವು ಪುನಃ ಪುನಃ ಬರಲಿದೆ.

ತುಲಾ ರಾಶಿ:

ಚಿಂತನೆ ವಿಶಾಲವಾಗಲು ಸಣ್ಣ ತಪ್ಪುಗಳನ್ನು ಪಾಠವಾಗಿಸಿಕೊಳ್ಳುವಿರಿ. ಹಿತಮಿತವಾದ ಮಾತುಗಾರಿಕೆಯಿಂದ ಎಲ್ಲರಿಗೂ ಹಿತವಾಗುವುದು. ಆರೋಗ್ಯವನ್ನು ಹೆಚ್ಚಿಸಿಕೊಳ್ಳಲು ಬೇಕಾದ ಕ್ರಮಗಳನ್ನು ಮಾಡಿಕೊಳ್ಳಿ. ಸಮಯಪ್ರಜ್ಞೆಯಿಂದ ಆಗುವ ತಪ್ಪನ್ನು ಸರಿ ಮಾಡಿಕೊಳ್ಳುವಿರಿ. ಬೇಕಾದಷ್ಟು ಇದ್ದರೂ ಅದನ್ನು ವ್ಯಯಿಸಲು ದಾರಿ ಕಾಣದು. ಮಂದಗತಿಯಲ್ಲಿ ಸಾಗುವ ನಿಮ್ಮ ಕೆಲಸದಿಂದ ಸಹೋದ್ಯೋಗಿಗಳು ಆಡಿಕೊಳ್ಳುವರು. ಬಂಧುಗಳ ಆಶ್ರಯದಲ್ಲಿ ಇಂದು ನೀವು ಇರಬೇಕಾದೀತು.

ವೃಶ್ಚಿಕ ರಾಶಿ:

ವಿವಾದಗಳಿಂದ ದೂರವಿರಬೇಕೆಂದರೂ ಅದು ನಿಮ್ಮನ್ನೇ ಬಂದು ಸೇರುವುದು. ನಿಮ್ಮ ಪ್ರಭಾವ ಹೆಚ್ಚಾಗಿ ಇರುವುದರಿಂದ ಶತ್ರುಗಳು ದೂರ ಹೋಗುತ್ತಾರೆ ಮತ್ತು ದೀರ್ಘ ಕಾಲದಿಂದ ಬಾಕಿ ಉಳಿದಂತಹ ಯೋಜನೆ ಪೂರ್ಣಗೊಳ್ಳುವುವು. ಆರ್ಥಿಕ ಸಮಸ್ಯೆಯನ್ನು ಹೆಚ್ಚಿಸಿಕೊಳ್ಳುವಿರಿ. ಸಂಶೋಧನೆಯ ವಿದ್ಯಾರ್ಥಿಗಳು ಉತ್ಸಾಹದಿಂದ ಕಾರ್ಯದಲ್ಲಿ ಪ್ರವೃತ್ತರಾಗುವರು. ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಯಶಸ್ಸು ಸಿಗುವುದು. ನಿಮ್ಮನ್ನು ಅನುಕರಣೆ ಮಾಡಬಹುದು.

ಧನು ರಾಶಿ:

ಇಂದು ಮನೆಯ ಹಿರಿಯರನ್ನು ಕಳೆದುಕೊಳ್ಳಬೇಕಾದೀತು. ವ್ಯವಹಾರದಲ್ಲಿ ಅಸಾಧ್ಯವನ್ನು ಸಾಧಿಸುವ ಛಲ ಬೇಡ. ವಿದ್ಯಾರ್ಥಿಗಳು ತಮಗೆ ಬೇಕಾದುದನ್ನು ಯಾರಿಂದಲಾದರೂ ಪಡೆಯುವರು. ಹಲವು ಪ್ರಯತ್ನದ ಬಳಿಕ ಮಾನಸಿಕ ಕಿರಿಕಿರಿಯನ್ನು ನೀವು ದೂರ ಮಾಡಿಕೊಳ್ಳುವಿರಿ. ವ್ಯಾಪಾರದಲ್ಲಿ ಚಾಣಕ್ಷತೆಯಿಂದ ಲಾಭವನ್ನು ಪಡೆಯುವಿರಿ. ನಿಮ್ಮ ವರ್ತನೆಯನ್ನು ಬದಲಿಸಿಕೊಳ್ಳಬೇಕು ಎನಿಸುವುದು. ಸಹೋದರಿಯ ಜವಾಬ್ದಾರಿಯೂ ನಿಮಗೆ ಬರಲಿದ್ದು ನಿಮ್ಮ ಜವಾಬ್ದಾರಿ ಹೆಚ್ಚಾಗುವುದು.

ಮಕರ ರಾಶಿ:

ನಿಮ್ಮ ಪ್ರೀತಿ ಮತ್ತು ವಿಶ್ವಾಸ ಭದ್ರವಾಗಿರುವುದು. ಏಕಾಂತದಲ್ಲಿ ಇರುವುದು ನಿಮಗೆ ಇಷ್ಟವಾಗುವುದು. ಸಹೋದರಿಯ ನಡುವೆ ವಾಗ್ವಾದ ಮಾಡುವಿರಿ. ಇಂದು ವ್ಯಾಪಾರಿಗಳಿಗೆ ದುಡಿಮೆಗೆ ತಕ್ಕ ಪ್ರತಿಫಲ ಸಿಗಲಿದೆ. ಹೊಸ ಉದ್ಯೋಗವನ್ನು ಉತ್ಸಾಹದಿಂದ ಮಾಡುವಿರಿ. ಬಯಸಿದ್ದನ್ನು ಪಡೆದುಕೊಳ್ಳುವ ಅರ್ಹತೆ ನಿಮಗೆ ಬರಲಿದೆ. ಶಿಸ್ತನ್ನು ಬಿಡದೇ ಪಾಲಿಸುವುದು ನಿಮಗೆ ಗೌರವವನ್ನು ತಂದು ಕೊಡುವುದು. ಶಿಸ್ತುಬದ್ಧವಾದ ವ್ಯವಹಾರದಿಂದ ನಿಮಗೆ ಹೊಗಳಿಕೆ ಸಿಗುವುದು.

ಕುಂಭ ರಾಶಿ:

ನಿಮ್ಮ ವಿವಾಹದ ಕುರಿತು ಬಂಧುಗಳಲ್ಲಿ ಚರ್ಚೆಯಾಗುವುದು. ಆಪ್ತರಿಗಾಗಿ ಸಮಯವನ್ನು ಇಡುವಿರಿ. ನಿಮಗಾಗಿ ಅನುಕೂಲಕರ ವಾತಾವರಣವನ್ನು ಸಿದ್ಧ ಮಾಡುವರು. ಪ್ರೀತಿಯಲ್ಲಿ ಇಂದು ಸಮಯ ಸರಿಯುವುದೇ ಗೊತ್ತಾಗದು. ಇಂದು ನಡೆಯುವ ತಪ್ಪಿಗೆ ನೀವೇ ಕಾರಣರಾಗುವಿರಿ. ನಿಮ್ಮ ಒರಟಾದ ಮಾತು ಇನ್ನೊಬ್ಬರಿಗೆ ಬೇಸರವನ್ನು ಕೊಡುವುದು. ವಸ್ತುಗಳ ಖರೀದಿಗೆ ಹಣವನ್ನು ಖರ್ಚು ಮಾಡಬಹುದು. ಕುಟುಂಬ ಜೀವನ ಸಾಮಾನ್ಯವಾಗಿರುತ್ತದೆ.

ಮೀನ ರಾಶಿ:

ಶ್ರಮ‌ ಮಾತ್ರ ನಿಮ್ಮದು, ಫಲವು ತಾನಾಗಿಯೇ ಬರುತ್ತದೆ. ಇಂದು ನಿಮ್ಮ ಆದಾಯವನ್ನು ಇಮ್ಮಡಿಗೊಳಿಸಿಕೊಳ್ಳಬಹುದು. ಮಕ್ಕಳಿಗೆ ಬೇಕಾದ ವಿದ್ಯಾಭ್ಯಾಸವನ್ನು ಕೊಡಲು ಸಾಲ ಮಾಡಬೇಕಾದೀತು. ಆದಾಯದ ಮೂಲವು ಬದಲಾಗಬಹುದು. ಕಾನೂನಿಗೆ ಸಂಬಂಧಿಸಿದಂತೆ ಹೆಚ್ಚಿನ ಓಡಾಟವಾಗಬಹುದು. ಆಸ್ತಿ ವ್ಯವಹಾರದಲ್ಲಿ ಹಿನ್ನಡೆಯಾದಂತೆ ಅನ್ನಿಸಬಹುದು. ನ್ಯೂನತೆಗಳನ್ನು ಮರೆತು ಮುಂದಡಿ ಇಡಬೇಕು‌. ಬರಬೇಕಾದ ಹಣವನ್ನು ನೀವು ಬಹಳ ಶ್ರಮದಿಂದ ಪಡೆಯಬೇಕಾಗಬಹುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಕುಂಭ, ಮಹಾನಕ್ಷತ್ರ : ಶತಭಿಷಾ, ವಾರ : ಸೋಮ, ಪಕ್ಷ : ಶುಕ್ಲ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಭರಣೀ, ಯೋಗ : ಬ್ರಹ್ಮ, ಕರಣ :ತೈತಿಲ, ಸೂರ್ಯೋದಯ – 06 – 45 am, ಸೂರ್ಯಾಸ್ತ – 06 – 20 pm, ಇಂದಿನ ಶುಭಾಶುಭ ಕಾಲ : ರಾಹು 08:14 – 09:42, ಯಮಗಂಡ ಕಾಲ 11:10 – 12:38, ಗುಳಿಕ ಕಾಲ 14:06 – 15:34

-ಲೋಹಿತ ಹೆಬ್ಬಾರ್ – 8762924271 (what’s app only)

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 23ರ ದಿನಭವಿಷ್ಯ

ಸಾಯಿ ಬಾಬ ಮಂದಿರಕ್ಕೆ ತೆರಳಿ ದರ್ಶನವನ್ನು ಮಾಡಿ. ಶಿಕ್ಷಣ, ಉದ್ಯೋಗ ಹೀಗೆ ಯಾವುದಾದರೂ ಉದ್ದೇಶದಿಂದ ನೀವಿರುವ ಸ್ಥಳದಿಂದ ಬೇರೆ ಕಡೆಗೆ ಹೋಗಬೇಕು ಎಂದುಕೊಳ್ಳುತ್ತಾ ಇದ್ದಲ್ಲಿ ಅದಕ್ಕೆ ಸಂಬಂಧಿಸಿದಂತೆ ಅಡೆತಡೆಗಳು ದೂರ ಆಗಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಮನೆಯಲ್ಲಿ ಖುಷಿಯ ವಾತಾವರಣ ಇರುತ್ತದೆ. ಅಲಂಕಾರದ ದೃಷ್ಟಿಯಿಂದ ಏನೇನು ಬದಲಾವಣೆ ಮಾಡಬೇಕು ಅಂದುಕೊಂಡಿರುತ್ತೀರೋ ಆ ಎಲ್ಲವನ್ನು ಮಾಡಲು ಸಾಧ್ಯ ಆಗಲಿದೆ. ನಿಮಗೆ ಇರುವಂಥ ಬದ್ಧತೆಯನ್ನು ಸಾಬೀತು ಮಾಡಿಸಿಕೊಳ್ಳಲು ಅವಕಾಶಗಳು ಉದ್ಭವ ಆಗಲಿವೆ. ಕೆಲವು ಹಣಕಾಸಿನ ವಿಚಾರದ ನಿರ್ಧಾರಗಳು ಮುಂದಕ್ಕೆ ಹಾಕಿಕೊಳ್ಳಬೇಕಾಗುತ್ತದೆ. ಮೆಡಿಕಲ್ ಶಾಪ್ ನಡೆಸುತ್ತಾ ಇರುವವರು ಇದಕ್ಕೆ ಪೂರಕವಾಗಿ ಕೆಲವು ಹೊಸ ವ್ಯವಹಾರ ನಡೆಸುವ ಚಿಂತನೆ ನಡೆಸುತ್ತೀರಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಉದ್ಯೋಗ ಸ್ಥಳದಲ್ಲಿ ನೀವು ಯಾವುದನ್ನು ಕೊನೆ ಆಯ್ಕೆ ಎಂದು ಭಾವಿಸಿರುತ್ತೀರೋ ಅದನ್ನೇ ಆರಿಸಿಕೊಳ್ಳುವಂತೆ ಆಗಲಿದೆ. ನಾಲಗೆ ಹುಣ್ಣು, ಗಂಟಲು ನೋವಿನ ಸಮಸ್ಯೆ ಈ ದಿನ ವಿಪರೀತ ಬಾಧಿಸಬಹುದು. ಆಹಾರ ಪಥ್ಯವನ್ನು ಯಾವುದೇ ಕಾರಣಕ್ಕೂ ತಪ್ಪಿಸಬೇಡಿ. ಆಕಸ್ಮಿಕವಾಗಿ ನಿಮಗೆ ಸಿಗುವಂಥ ಅವಕಾಶಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಕಡೆಗೆ ಗಮನ ನೀಡಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ನಿಮ್ಮ ಪಾಲಿನ ಜವಾಬ್ದಾರಿಯನ್ನು ಶ್ರದ್ಧೆಯಿಂದ ಮಾಡಿದ್ದರ ಉತ್ತಮ ಫಲಿತವನ್ನು ಪಡೆದುಕೊಳ್ಳಲಿದ್ದೀರಿ. ನಿಮ್ಮಲ್ಲಿ ಕೆಲವರು ಹೆಚ್ಚಿನ ಬಡ್ಡಿದರಕ್ಕೆ ತಂದಿದ್ದ ಸಾಲವನ್ನು ಹಿಂತಿರುಗಿಸುವುದಕ್ಕೆ ಪ್ರಯತ್ನ ಮಾಡಲಿದ್ದೀರಿ. ಮಿನರಲ್ ವಾಟರ್ ವಿತರಣೆಯ ವ್ಯವಹಾರ ಮಾಡುತ್ತಾ ಇರುವವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ಉದ್ಯೋಗ ಸ್ಥಳದಲ್ಲಿ ಸವಾಲು ಎನಿಸಿದಂ ಕೆಲವು ಕೆಲಸಗಳನ್ನು ನೀವಾಗಿಯೇ ಮುಂದೆ ಹೋಗಿ ವಹಿಸಿಕೊಳ್ಳಲಿದ್ದೀರಿ.

ಲೇಖನ- ಸ್ವಾತಿ ಎನ್.ಕೆ.

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 23ರ ದಿನಭವಿಷ್ಯ

ಉದ್ಯೋಗ ಬದಲಾವಣೆಗೆ ಪ್ರಯತ್ನ ಮಾಡುತ್ತಾ ಇರುವವರು, ಹೊಸ ವ್ಯವಹಾರ- ವ್ಯಾಪಾರದಲ್ಲಿ ವರ್ಕಿಂಗ್ ಕ್ಯಾಪಿಟಲ್ ಹೊಂದಿಸಲು ತೊಂದರೆ ಎದುರಿಸುತ್ತಾ ಇರುವವರು ಹೀಗೆ ಇತರ ಯಾವುದೇ ಸಮಸ್ಯೆಗೆ ಸಿಟ್ರಿನ್ ಸ್ಟೋನ್ ಉಂಗುರವನ್ನು ಧರಿಸಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಕೃಷಿಯಲ್ಲಿ ತೊಡಗಿಕೊಂಡವರು ಜಮೀನಿನಲ್ಲಿ ಕೆಲವು ದೀರ್ಘಾವಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲು ಯೋಜನೆ ರೂಪಿಸಲಿದ್ದೀರಿ. ಕೊಟ್ಟಿಗೆ, ಗೋದಾಮು, ಇತರೆ ನಿಮ್ಮ ಚಟುವಟಿಕೆಗೆ ಅನುಕೂಲ ಆಗುವ ರೀತಿ ಯೋಜನೆ ಮಾಡಿಕೊಳ್ಳಲಿದ್ದೀರಿ. ಕುಟುಂಬ ಸದಸ್ಯರು ನಿಮ್ಮ ಆಲೋಚನೆಗಳಿಗೆ ಆರ್ಥಿಕವಾಗಿ ನೆರವು ನೀಡಲಿದ್ದಾರೆ. ತಕ್ಷಣಕ್ಕೆ ಬೇಡ ಅಂದುಕೊಂಡಂಥ ಕೆಲವು ಕೆಲಸಗಳನ್ನು ನಿರ್ಧಾರ ಬದಲಿಸಿ, ಆರಂಭ ಮಾಡಿಬಿಡುತ್ತೀರಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಇತರರ ವೈಯಕ್ತಿಕ ಅಭಿಪ್ರಾಯಗಳನ್ನು ತೆಗೆದುಹಾಕಲು ಹೋಗಬೇಡಿ. ಉದ್ಯೋಗ, ವೃತ್ತಿ- ವ್ಯವಹಾರಗಳಲ್ಲಿ ನೀಡುವಂಥ ಎಚ್ಚರಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಿ. ದೂರ ಪ್ರಯಾಣಕ್ಕೆ ಅಚಾನಕ್ ಆಗಿ ತೆರಳಲೇ ಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಹಳೇ ಒಪ್ಪಂದಗಳನ್ನು ಮುಂದುವರಿಸುವುದು ಬೇಡ ಎಂದುಕೊಳ್ಳಲಿದ್ದೀರಿ. ತರಕಾರಿ- ಹಣ್ಣುಗಳ ಸರಬರಾಜು ವಾಹನವನ್ನು ಚಾಲನೆ ಮಾಡುವವರು ಇದ್ದಲ್ಲಿ ಅದರದೇ ವ್ಯಾಪಾರವನ್ನು ಶುರು ಮಾಡುವ ಆಲೋಚನೆ ಮೂಡಲಿದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಯಶಸ್ಸು ಹಾಗೂ ಭವಿಷ್ಯದಲ್ಲಿ ಬಡ್ತಿ ದೊರೆಯುವುದು ಇತ್ಯಾದಿ ವಿಷಯಗಳಿಗೆ ಅನುಕೂಲ ಒದಗಿ ಬರುತ್ತದೆ. ಸಾದ್ಯಂತವಾಗಿ ಪರೀಕ್ಷೆ ಮಾಡದ ಹೊರತು ಯಾವುದೇ ಮುಖ್ಯ ಕಾಗದ- ಪತ್ರಗಳಿಗೆ ಸಹಿ ಮಾಡುವುದಕ್ಕೆ ಹೋಗಬೇಡಿ. ಅಣ್ಣ- ತಮ್ಮ, ಅಕ್ಕ- ತಂಗಿಯರ ಮಕ್ಕಳ ಮದುವೆಗಾಗಿ ಹಣಕಾಸಿನ ನೆರವು ಕೇಳಿಕೊಂಡು ಬರಲಿದ್ದಾರೆ. ನಿಮ್ಮ ಒಳಮನಸ್ಸಿಗೆ ಹೇಗೆ ನಡೆದುಕೊಳ್ಳಬೇಕು ಅನ್ನಿಸುತ್ತದೆಯೋ ಅದರಂತೆಯೇ ನಡೆದುಕೊಳ್ಳಿ.

ಲೇಖನ- ಸ್ವಾತಿ ಎನ್.ಕೆ.

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 23ರ ದಿನಭವಿಷ್ಯ

ಶಿವ ಅಷ್ಟಕವನ್ನು ಶ್ರವಣ ಮಾಡುವುದು ಅಥವಾ ಪಠಣ ಮಾಡುವುದು ಅಥವಾ ಈಶ್ವರನ ದೇವಸ್ಥಾನದಲ್ಲಿ ಕ್ಷೀರಾಭಿಷೇಕ ಮಾಡುವುದರಿಂದ ನಿಮ್ಮ ವರ್ಚಸ್ಸಿಗೆ ಹಾನಿ ಮಾಡುವ ಪ್ರಯತ್ನಗಳು ವಿಫಲವಾಗುತ್ತವೆ. ಹೊಸದಾಗಿ ವಹಿಸಿಕೊಂಡ ಜವಾಬ್ದಾರಿಗಳಲ್ಲಿ ಯಶಸ್ಸು ಸಾಧಿಸುತ್ತೀರಿ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ದುಡಿಮೆಯು ನಿರೀಕ್ಷೆ ಮಟ್ಟದಲ್ಲಿ ಇಲ್ಲ ಎಂಬುದು ಬಹಳವಾಗಿ ಕೊರೆಯಲು ಆರಂಭವಾಗುತ್ತದೆ. ಸ್ನೇಹಿತರ ಪೈಕಿ ಕೆಲವರು ನಿಮ್ಮ ಉದ್ದೇಶಕ್ಕೆ ಕೈ ಜೋಡಿಸಲು ಮುಂದೆ ಬರಲಿದ್ದಾರೆ. ಒಂದು ಕೆಲಸವನ್ನು ಮುಗಿಸುವುದಕ್ಕೆ ಇತರರಿಗೆ ಒಪ್ಪಿಸುವುದರಿಂದ ಅವರಿಗೆ ಸಲಹೆ- ಸೂಚನೆ, ಮಾರ್ಗದರ್ಶನ ನೀಡುವುದಕ್ಕೆ ಹೆಚ್ಚಿನ ಸಮಯವನ್ನು ಮೀಸಲಿಡುವಂತೆ ಆಗಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಈ ದಿನ ಚಂಚಲತೆ ವಿಪರೀತ ಕಾಡುತ್ತದೆ. ಆತುರದಲ್ಲಿ ನಿಮ್ಮ ಯಾವುದೇ ತೀರ್ಮಾನ ಹೇಳುವುದಕ್ಕೆ ಹೋಗಬೇಡಿ. ಇನ್ನು ನಿಮ್ಮ ಬಳಿ ಇರುವ ಹಣಕ್ಕೆ ಎಷ್ಟು ಅಷ್ಟಕ್ಕೆ ಮಾತ್ರ ಯೋಜನೆ ಹಾಕಿಕೊಳ್ಳಿ. ಏನನ್ನಾದರೂ ದಕ್ಕಿಸಿಕೊಳ್ಳ ಬಲ್ಲೆ ಎಂಬ ಆಲೋಚನೆ ಅಪಾಯಕಾರಿ ಆಗಲಿದೆ. ಸರ್ಕಾರಿ ಮಟ್ಟದಲ್ಲಿ ಆಗಬೇಕಾದ ಕೆಲಸಗಳನ್ನು ಮುಗಿಸಿಕೊಳ್ಳುವುದಕ್ಕೆ ಎಲ್ಲ ಪ್ರಯತ್ನ ಮಾಡಿದ ನಂತರವೂ ಕೊನೆ ಹಂತದಲ್ಲಿ ಅದು ನಿಂತು ಬಿಡಲಿದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಬೆನ್ನು ನೋವು ವಿಪರೀತವಾಗಿ ಕಾಡಬಹುದು. ಅದರಲ್ಲಿಯೂ ದ್ವಿಚಕ್ರ ವಾಹನವನ್ನು ಹೆಚ್ಚಾಗಿ ಬಳಸುತ್ತೀರಿ ಅಂತಾದಲ್ಲಿ ವೈದ್ಯರ ಬಳಿ ತೆರಳಿ, ಸಲಹೆ ತೆಗೆದುಕೊಳ್ಳುವುದು ಕ್ಷೇಮ. ಯಾವುದಕ್ಕೂ ಇರಲಿ ಎಂದುಕೊಂಡು, ಬಹಳ ಹಿಂದೆ ಸಣ್ಣ ಪ್ರಮಾಣದಲ್ಲಿ ಮಾಡಿದ್ದ ಹೂಡಿಕೆಯೊಂದು ಈಗ ಭಾರೀ ದೊಡ್ಡ ಲಾಭ ತಂದುಕೊಡಲಿದೆ ಎಂಬುದು ನಿಮ್ಮ ಗಮನಕ್ಕೆ ಬರಲಿದೆ. ಆದರೆ ಈ ಬಗ್ಗೆ ಎಲ್ಲ ಕಡೆ ಹೇಳಿಕೊಂಡು ಬರಬೇಡಿ.

ಲೇಖನ- ಸ್ವಾತಿ ಎನ್.ಕೆ.

Source link

IND vs SA: ದಕ್ಷಿಣ ಆಫ್ರಿಕಾ ವಿರುದ್ಧ 76 ರನ್​ಗಳಿಂದ ಸೋತ ಟೀಂ ಇಂಡಿಯಾ – Kannada News | 2026 T20 World Cup: India’s Unbeaten Streak Ends with Super 8 Defeat to SA

2026 ರ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಅಜೇಯ ಓಟಕ್ಕೆ ಬ್ರೇಕ್ ಬಿದ್ದಿದೆ. ಹಾಲಿ ಚಾಂಪಿಯನ್ಸ್ ಭಾರತ ತಂಡವು ಟೂರ್ನಮೆಂಟ್‌ನ ಸೂಪರ್ 8 ಸುತ್ತಿನ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್‌ಗಳ ಹೀನಾಯ ಸೋಲು ಅನುಭವಿಸಿದೆ. ಫೆಬ್ರವರಿ 22 ರ ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 187 ರನ್‌ಗಳನ್ನು ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಆಫ್ರಿಕಾದ ಬೌಲಿಂಗ್ ದಾಳಿಯ ವಿರುದ್ಧ ತತ್ತರಿಸಿ ಕೇವಲ 111 ರನ್‌ಗಳಿಗೆ ಆಲೌಟ್ ಆಯಿತು.

ಮಿಲ್ಲರ್- ಬ್ರೆವಿಸ್ ಜೊತೆಯಾಟ

2024 ರ ಟಿ20 ವಿಶ್ವಕಪ್ ಫೈನಲ್‌ನ ಮರುಕಳಿಕೆಯಂತೆ ಕಾಣುತ್ತಿದ್ದ ಈ ಪಂದ್ಯದಲ್ಲಿ, ಟೀಂ ಇಂಡಿಯಾ ಪ್ರಾಬಲ್ಯ ಸಾಧಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಟಾಸ್ ಸೋತು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ನಂತರ, ಒಂದು ಕ್ಷಣ ಹಾಗೆಯೇ ಅನಿಸಿತು. ಇದಕ್ಕೆ ಪೂರಕವಾಗಿ ದಕ್ಷಿಣ ಆಫ್ರಿಕಾದ ಅಗ್ರ ಮೂವರು ಬ್ಯಾಟ್ಸ್‌ಮನ್‌ಗಳು ನಾಲ್ಕನೇ ಓವರ್‌ನಲ್ಲಿ ಕೇವಲ 20 ರನ್‌ಗಳಿಗೆ ಔಟಾದರು. ಆದರೆ ಆ ನಂತರ ಡೇವಿಡ್ ಮಿಲ್ಲರ್ ಮತ್ತು ಡೆವಾಲ್ಡ್ ಬ್ರೆವಿಸ್ ಜೊತೆಯಾಟವು ಟೀಂ ಇಂಡಿಯಾವನ್ನು ಹಿನ್ನಡೆಯಲ್ಲಿ ಸಿಲುಕಿಸಿತು. ಈ ಇಬ್ಬರು ನಾಲ್ಕನೇ ವಿಕೆಟ್‌ಗೆ 97 ರನ್‌ಗಳ ಜೊತೆಯಾಟ ನಡೆಸಿದರು.

ಇದೇ ವೇಳೆ ಮಿಲ್ಲರ್ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಆದಾಗ್ಯೂ, 13 ನೇ ಓವರ್‌ನಲ್ಲಿ ಬ್ರೆವಿಸ್ ಔಟಾದ ನಂತರ, ಟೀಂ ಇಂಡಿಯಾ ಮತ್ತೆ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಮಧ್ಯಂತರವಾಗಿ ವಿಕೆಟ್‌ಗಳನ್ನು ಪಡೆದು ದಕ್ಷಿಣ ಆಫ್ರಿಕಾವನ್ನು 200 ರನ್‌ಗಳ ಒಳಗೆ ಸೀಮಿತಗೊಳಿಸಿತು. ಆದಾಗ್ಯೂ, ಟ್ರಿಸ್ಟಾನ್ ಸ್ಟಬ್ಸ್ ಅದ್ಭುತ ಇನ್ನಿಂಗ್ಸ್ ಆಡಿ ತಂಡವನ್ನು 187 ರನ್‌ಗಳಿಗೆಕೆ ಕೊಂಡೊಯ್ದರು. ಟೀಂ ಇಂಡಿಯಾ ಪರ, ಬುಮ್ರಾ ಮೂರು ವಿಕೆಟ್‌ ಪಡೆದರೆ, ಅರ್ಷದೀಪ್ ಸಿಂಗ್ ಎರಡು ವಿಕೆಟ್‌ಗಳನ್ನು ಪಡೆದರು.

ಭಾರತಕ್ಕೆ ಕಳಪೆ ಆರಂಭ

ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಮತ್ತೊಮ್ಮೆ ಕಳಪೆ ಆರಂಭ ಪಡೆದುಕೊಂಡಿತು. ಮೊದಲ ಓವರ್​ನಲ್ಲಿಯೇ ಇಶಾನ್ ಕಿಶನ್ 0 ರನ್ ಗಳಿಸಿ ಔಟಾದರು. ಆ ಬಳಿಕ ಬಂದ ತಿಲಕ್ ವರ್ಮಾ ಕೂಡ ಎರಡನೇ ಓವರ್‌ನ ಮೊದಲ ಎಸೆತದಲ್ಲಿ ಔಟಾದರು. ಅಭಿಷೇಕ್ ತಮ್ಮ ಖಾತೆಯನ್ನು ಬೌಂಡರಿ ಮೂಲಕ ತೆರೆದು, ಆ ನಂತರ ಎರಡು ಬೌಂಡರಿಗಳನ್ನು ಬಾರಿಸಿದರು. ಆದರೆ ದೊಡ್ಡ ಹೊಡೆತಗಳನ್ನು ಹೊಡೆಯಲು ಯತ್ನಿಸಿ ನಾಲ್ಕನೇ ಓವರ್‌ನಲ್ಲಿ ಔಟಾದರು. ದಕ್ಷಿಣ ಆಫ್ರಿಕಾದಂತೆ, ಟೀಂ ಇಂಡಿಯಾ ಕೂಡ 26 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಆದಾಗ್ಯೂ, ಮಿಲ್ಲರ್ ಮತ್ತು ಬ್ರೆವಿಸ್‌ಗಿಂತ ಭಿನ್ನವಾಗಿ, ಟೀಂ ಇಂಡಿಯಾ ಜೊತೆಯಾಟವನ್ನು ರೂಪಿಸಲು ಸಾಧ್ಯವಾಗಲಿಲ್ಲ.

111 ರನ್‌ಗಳಿಗೆ ಆಲೌಟ್

ನಾಯಕ ಸೂರ್ಯಕುಮಾರ್ ಯಾದವ್ ಮತ್ತು ವಾಷಿಂಗ್ಟನ್ ಸುಂದರ್ ವೇಗವಾಗಿ ರನ್ ಗಳಿಸಲು ಅಥವಾ ದೊಡ್ಡ ಪಾಲುದಾರಿಕೆಯನ್ನು ರಚಿಸಲು ಸಾಧ್ಯವಾಗಲಿಲ್ಲ. 10 ನೇ ಓವರ್‌ನಲ್ಲಿ ಕೇವಲ 51 ರನ್‌ಗಳಿಗೆ ಐದು ವಿಕೆಟ್‌ಗಳು ಬಿದ್ದವು. ಕಾರ್ಬಿನ್ ಬಾಷ್ ಸತತ ಓವರ್‌ಗಳಲ್ಲಿ ಇಬ್ಬರನ್ನೂ ಔಟ್ ಮಾಡಿದರು. ಇದರ ನಂತರ, ಜವಾಬ್ದಾರಿ ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ಅವರ ಮೇಲಿತ್ತು, ಅವರು ಸ್ವಲ್ಪ ಸಮಯದವರೆಗೆ ಹಿಡಿತ ಸಾಧಿಸಿದರು. ಆದಾಗ್ಯೂ, 15 ನೇ ಓವರ್‌ನಲ್ಲಿ, ಸ್ಪಿನ್ನರ್ ಕೇಶವ್ ಮಹಾರಾಜ್ ಹಾರ್ದಿಕ್, ರಿಂಕು ಸಿಂಗ್ ಮತ್ತು ಅರ್ಶ್‌ದೀಪ್ ಸಿಂಗ್ ಅವರ ವಿಕೆಟ್‌ಗಳನ್ನು ಕಬಳಿಸಿ ಪಂದ್ಯವನ್ನು ಕೊನೆಗೊಳಿಸಿದರು. ನಂತರ ಶಿವಂ ದುಬೆ ಕೆಲವು ಬೌಂಡರಿಗಳನ್ನು ಬಾರಿಸಿ ತಂಡವನ್ನು 100 ರನ್​ಗಳ ಗಡಿ ದಾಟಿಸಿದರು, ಆದರೆ ಅದು ತುಂಬಾ ತಡವಾಗಿತ್ತು. 19 ನೇ ಓವರ್‌ನಲ್ಲಿ, ಯಾನ್ಸನ್, ದುಬೆ ಸೇರಿದಂತೆ ಕೊನೆಯ ಎರಡು ವಿಕೆಟ್‌ಗಳನ್ನು ಪಡೆದು ಭಾರತದ ಇನ್ನಿಂಗ್ಸ್ ಅನ್ನು ಕೇವಲ 111 ರನ್‌ಗಳಿಗೆ ಮುಗಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮದುವೆಗೆ ಅಭಿಮಾನಿಗಳು ಸೂಚಿಸಿದ ಹೆಸರಿಟ್ಟ ರಶ್ಮಿಕಾ: ಕೊನೆಗೂ ಅಧಿಕೃತ ಘೋಷಣೆ – Kannada News | Vijay Deverakonda and Rashmika Mandanna dedicate their wedding to fans, calling it The Wedding of Virosh

ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ಮದುವೆ ಸುದ್ದಿ ಕಳೆದ ಕೆಲ ತಿಂಗಳುಗಳಿಂದಲೂ ನಡೆಯುತ್ತಲೇ ಇದೆ. ಕಳೆದ ಕೆಲ ವರ್ಷಗಳಿಂದಲೂ ಪರಸ್ಪರ ಪ್ರೀತಿಯಲ್ಲಿದ್ದ ಈ ಜೋಡಿ ಕಳೆದ ವರ್ಷ ಅಕ್ಟೋಬರ್​​ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಸುದ್ದಿ ಹರಿದಾಡಿತು. ಬಳಿಕ ಇಬ್ಬರೂ ಬ್ಯಾಚುಲರ್ ಪಾರ್ಟಿ, ವಿದೇಶಗಳಲ್ಲಿ ಶಾಪಿಂಗ್ ಇತ್ಯಾದಿಗಳೆಂದು ಸುತ್ತಾಡಿದರು. ಇದೀಗ ಈ ಜೋಡಿ ಮದುವೆ ಆಗುತ್ತಿದ್ದು, ಇತ್ತೀಚೆಗಷ್ಟೆ ಇವರ ಮದುವೆ ರಿಸೆಪ್ಷನ್​​ನ ಆಮಂತ್ರಣ ಪತ್ರಿಕೆಯ ವಿಡಿಯೋ ಸಹ ವೈರಲ್ ಆಗಿತ್ತು. ಇಷ್ಟೆಲ್ಲ ಆದರೂ ಸಹ ಈ ಜೋಡಿ ತಮ್ಮ ಮದುವೆ ಬಗ್ಗೆ ಈ ವರೆಗೆ ಬಹಿರಂಗವಾಗಿ ಬಾಯ್ಬಿಟ್ಟಿರಲಿಲ್ಲ. ಆದರೆ ಕೊನೆಗೂ ನಟಿ ರಶ್ಮಿಕಾ ಇಂದು (ಫೆಬ್ರವರಿ 22) ಮೌನ ಮುರಿದಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ತಮ್ಮ ಮದುವೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ವಿಶೇಷವೆಂದರೆ ಅವರು ತಮ್ಮ ಹಾಗೂ ವಿಜಯ್ ದೇವರಕೊಂಡ ಅವರ ಮದವೆಗೆ ಹೆಸರೊಂದನ್ನು ಇರಿಸಿದ್ದಾರೆ. ಆ ಹೆಸರನ್ನು ಸೂಚಿಸಿರುವುದು ಅವರ ಅಭಿಮಾನಿಗಳೇ ಎಂಬುದು ಮತ್ತೊಂದು ವಿಶೇಷ. ಏನು ಆ ಹೆಸರು? ಇಲ್ಲಿದೆ ಓದಿ ಮಾಹಿತಿ…

ರಶ್ಮಿಕಾ ಅವರು ತಮ್ಮ ಹಾಗೂ ವಿಜಯ್ ದೇವಕರೊಂಡ ಮದುವೆಗೆ ‘ದಿ ವೆಡ್ಡಿಂಗ್ ಆಫ್ ವಿರೋಷ್’ ಎಂದು ಹೆಸರಿಟ್ಟಿದ್ದಾರೆ. ಅಸಲಿಗೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರನ್ನು ಒಟ್ಟಿಗೆ ‘ವಿರೋಷ್’ ಎಂದು ಅವರ ಅಭಿಮಾನಿಗಳು ಕರೆಯುತ್ತಿದ್ದರು. ಅಭಿಮಾನಿಗಳ ಮೇಲಿನ ಪ್ರೀತಿಯ ಕಾರಣಕ್ಕೆ ತಮ್ಮ ಮದುವೆಗೆ ಇದೀಗ ‘ದಿ ವೆಡ್ಡಿಂಗ್ ಆಫ್ ವಿರೋಷ್’ ಎಂದು ರಶ್ಮಿಕಾ ಹೆಸರಿಟ್ಟಿದ್ದಾರೆ ಮಾತ್ರವಲ್ಲದೆ, ತಮ್ಮ ಇನ್​​ಸ್ಟಾಗ್ರಾಂ ಪೋಸ್ಟ್​​ನಲ್ಲಿ ತಮ್ಮ ಅಭಿಮಾನಿಗಳನ್ನು ಮೆಚ್ಚಿ ಕೊಂಡಾಡಿ, ಅವರಿಗೆ ಧನ್ಯವಾದ ಸಹ ಹೇಳಿದ್ದಾರೆ.

ಇದನ್ನೂ ಓದಿ:ಮದುವೆಗೂ ಮುನ್ನ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಗಡಿಬಿಡಿ; ವಿಡಿಯೋ ವೈರಲ್

ನಮ್ಮ ಅತ್ಯಂತ ಪ್ರೀತಿಯ ಪ್ರೀತಿಪಾತ್ರರೇ, ನಾವು ಯಾವುದೇ ಯೋಜನೆಗಳನ್ನು ಮಾಡುವ ಮೊದಲು,
ನಮಗಾಗಿ ಏನನ್ನಾದರೂ ಆಯ್ಕೆ ಮಾಡುವ ಮೊದಲು- ನೀವು ಈಗಾಗಲೇ ಅಲ್ಲಿರುತ್ತಿದ್ದಿರಿ. ಎಷ್ಟೊಂದು ಪ್ರೀತಿಯಿಂದ, ನೀವು ನಮಗೆ ಒಂದು ಹೆಸರನ್ನು ನೀಡಿದ್ದೀರಿ. ನೀವು ನಮ್ಮನ್ನು ‘ವಿರೋಶ್’ ಎಂದು ಕರೆದಿದ್ದೀರಿ.
ಆದ್ದರಿಂದ ಇಂದು ಪೂರ್ಣ ಹೃದಯದಿಂದ, ನಿಮ್ಮ ಗೌರವಾರ್ಥವಾಗಿ, ನಮ್ಮ ಒಗ್ಗೂಡುವಿಕೆಗೆ ಹೆಸರಿಸುತ್ತಿದ್ದೇವೆ.
ನಾವು ಅದಕ್ಕೆ ಹೆಸರಿಸಲು ಇಷ್ಟಪಡುತ್ತೇವೆ, ‘ದಿ ವೆಡ್ಡಿಂಗ್ ಆಫ್ ವಿರೋಶ್’. ಇಷ್ಟೊಂದು ಪ್ರೀತಿಯಿಂದ ನಮ್ಮನ್ನು ಪ್ರೀತಿಸಿದ್ದಾಕ್ಕಾಗಿ ಧನ್ಯವಾದಗಳು. ನೀವು ನಮ್ಮ ಒಂದು ಭಾಗ, ಯಾವಾಗಲೂ, ಅತ್ಯಂತ ದೊಡ್ಡ ಅಪ್ಪುಗೆಗಳು ಮತ್ತು ಪ್ರೀತಿ’ ಎಂದು ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ.

ಮೂಲಗಳ ಪ್ರಕಾರ ಇಂದು (ಫೆಬ್ರವರಿ 22) ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆಯ ಮೊದಲ ದಿನವಂತೆ. ಕೆಲವು ಶಾಸ್ತ್ರಗಳನ್ನು ಇಂದು ಮಾಡಲಾಗುತ್ತಿದ್ದು, ಇಬ್ಬರ ಮೆಹಂದಿ ಶಾಸ್ತ್ರ ಫೆಬ್ರವರಿ 24 ಕ್ಕೆ ನಡೆಯಲಿದೆ. ಬಳಿಕ 25ಕ್ಕೆ ಹಳದಿ ಶಾಸ್ತ್ರ ನಡೆಯಲಿದೆ. ಫೆಬ್ರವರಿ 26ಕ್ಕೆ ಈ ಜೋಡಿಯ ಮದುವೆ ನಡೆಯಲಿದೆ. ಮಾರ್ಚ್ 04ಕ್ಕೆ ಹೈದರಾಬಾದ್​​ನ ತಾಜ್ ಕೃಷ್ಣನಲ್ಲಿ ಅದ್ಧೂರಿ ರಿಸೆಪ್ಷನ್ ಅನ್ನು ಈ ಜೋಡಿ ಆಯೋಜನೆ ಮಾಡಿಕೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs SA: ಟಿ20 ವಿಶ್ವಕಪ್​ನಲ್ಲಿ ಹೊಸ ದಾಖಲೆ ಬರೆದ ಜಸ್ಪ್ರೀತ್ ಬುಮ್ರಾ – Kannada News | Jasprit Bumrah’s T20 WC Masterclass: Surpasses Ashwin, Sets New Bowling Economy Record

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಟಿ20 ವಿಶ್ವಕಪ್​ನ ಸೂಪರ್ 8 ಸುತ್ತಿನ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಭಾರತದ ಪರ ಬೌಲಿಂಗ್​ನಲ್ಲೊ ಮಿಂಚಿದ ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ ತಮ್ಮ ಖೋಟಾದ 4 ಓವರ್​ಗಳಲ್ಲಿ 15 ರನ್​ ನೀಡಿ ಪ್ರಮುಖ 3 ವಿಕೆಟ್ ಕಬಳಿಸಿದರು. ಈ ಮೂಲಕ ಟಿ20 ವಿಶ್ವಕಪ್​ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್​ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಮೂರು ವಿಕೆಟ್​ ಪಡೆಯುವ ಮೂಲಕ ಬುಮ್ರಾ, ಅಶ್ವಿನ್ ಅವರ ದಾಖಲೆಯನ್ನು ಸಹ ಮುರಿದಿದ್ದಾರೆ. ಆರ್​. ಅಶ್ವಿನ್ ಟಿ20 ವಿಶ್ವಕಪ್ ಇತಿಹಾಸದಲ್ಲಿ ಆಡಿದ್ದ 24 ಪಂದ್ಯಗಳ 24 ಇನ್ನಿಂಗ್ಸ್‌ಗಳಲ್ಲಿ 17.25 ಸರಾಸರಿಯಲ್ಲಿ 32 ವಿಕೆಟ್‌ಗಳನ್ನು ಕಬಳಿಸಿದ್ದರು.

ಇದೀಗ ಜಸ್ಪ್ರೀತ್ ಬುಮ್ರಾ 2026 ರ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕಾರ್ಬಿನ್ ಬಾಷ್ ವಿಕೆಟ್ ಪಡೆಯುವ ಮೂಲಕ ಅಶ್ವಿನ್ ಅವರ ದಾಖಲೆಯನ್ನು ಮುರಿದರು. ಜಸ್ಪ್ರೀತ್ ಬುಮ್ರಾ ಈಗ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಆಗಿದ್ದಾರೆ. ಆಡಿರುವ 22 ಪಂದ್ಯಗಳ 22 ಇನ್ನಿಂಗ್ಸ್‌ಗಳಲ್ಲಿ 13.36 ಸರಾಸರಿಯಲ್ಲಿ ಬುಮ್ರಾ 33 ವಿಕೆಟ್‌ಗಳನ್ನು ಪಡೆದಿದ್ದಾರೆ.

ಜಸ್ಪ್ರೀತ್ ಬುಮ್ರಾ ಅಶ್ವಿನ್ ದಾಖಲೆಯನ್ನು ಮುರಿದಿದ್ದಲ್ಲದೆ, ತಮ್ಮ ಬೌಲಿಂಗ್ ಸ್ಪೆಲ್‌ಗೆ ಸಂಬಂಧಿಸಿದ ದಾಖಲೆಯನ್ನೂ ಮುರಿದರು. ಬುಮ್ರಾ 4 ಓವರ್‌ಗಳಲ್ಲಿ 15 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಬಳಿಸಿದರು. ಟಿ20 ವಿಶ್ವಕಪ್‌ನಲ್ಲಿ 4 ಓವರ್‌ಗಳ ಪೂರ್ಣ ಕೋಟಾ ಬೌಲಿಂಗ್ ಮಾಡಿದ ನಂತರ ಅವರು ಈಗ ಅತಿ ಹೆಚ್ಚು ಬಾರಿ 15 ಅಥವಾ ಅದಕ್ಕಿಂತ ಕಡಿಮೆ ರನ್‌ಗಳನ್ನು ಬಿಟ್ಟುಕೊಟ್ಟ ಬೌಲರ್ ಎನಿಸಿಕೊಂಡಿದ್ದಾರೆ.

ಈ ವಿಚಾರದಲ್ಲಿ ಬುಮ್ರಾ, ವೆಸ್ಟ್ ಇಂಡೀಸ್‌ನ ಸ್ಯಾಮ್ಯುಯೆಲ್ ಬದ್ರಿ, ಶ್ರೀಲಂಕಾದ ಅಜಂತಾ ಮೆಂಡಿಸ್ ಮತ್ತು ನ್ಯೂಜಿಲೆಂಡ್‌ನ ಟಿಮ್ ಸೌಥಿ ಅವರ ದಾಖಲೆಗಳನ್ನು ಮುರಿದರು. ಟಿ20 ವಿಶ್ವಕಪ್ ಪಂದ್ಯದಲ್ಲಿ 4 ಓವರ್‌ಗಳ ಪೂರ್ಣ ಕೋಟಾ ಬೌಲಿಂಗ್ ಮಾಡಿದ ನಂತರ ಇವರೆಲ್ಲರೂ ತಲಾ ನಾಲ್ಕು ಬಾರಿ 15 ಅಥವಾ ಅದಕ್ಕಿಂತ ಕಡಿಮೆ ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಆದರೀಗ ಬುಮ್ರಾ ಐದನೇ ಬಾರಿಗೆ ಈ ಸಾಧನೆ ಮಾಡಿದ್ದಾರೆ.

Published On – 10:40 pm, Sun, 22 February 26

Source link

IND vs SA: ಟಿ20 ವಿಶ್ವಕಪ್​ನಲ್ಲಿ ಹೊಸ ದಾಖಲೆ ಬರೆದ ಜಸ್ಪ್ರೀತ್ ಬುಮ್ರಾ – Kannada News | Jasprit bumrah t20 worldcup record highest wickets india

ಈ ವಿಚಾರದಲ್ಲಿ ಬುಮ್ರಾ, ವೆಸ್ಟ್ ಇಂಡೀಸ್‌ನ ಸ್ಯಾಮ್ಯುಯೆಲ್ ಬದ್ರಿ, ಶ್ರೀಲಂಕಾದ ಅಜಂತಾ ಮೆಂಡಿಸ್ ಮತ್ತು ನ್ಯೂಜಿಲೆಂಡ್‌ನ ಟಿಮ್ ಸೌಥಿ ಅವರ ದಾಖಲೆಗಳನ್ನು ಮುರಿದರು. ಟಿ20 ವಿಶ್ವಕಪ್ ಪಂದ್ಯದಲ್ಲಿ 4 ಓವರ್‌ಗಳ ಪೂರ್ಣ ಕೋಟಾ ಬೌಲಿಂಗ್ ಮಾಡಿದ ನಂತರ ಇವರೆಲ್ಲರೂ ತಲಾ ನಾಲ್ಕು ಬಾರಿ 15 ಅಥವಾ ಅದಕ್ಕಿಂತ ಕಡಿಮೆ ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಆದರೀಗ ಬುಮ್ರಾ ಐದನೇ ಬಾರಿಗೆ ಈ ಸಾಧನೆ ಮಾಡಿದ್ದಾರೆ.

Source link

IND vs SA: ಸೊನ್ನೆ ಸುಳಿಯಿಂದ ಹೊರಬಂದರೂ ಪ್ರಯೋಜನಕ್ಕೆ ಭಾರದ ಅಭಿಷೇಕ್ ಶರ್ಮಾ

Source link

Exit mobile version