ವಿಜಯ್-ಸಂಗೀತಾ ಪ್ರೇಮಕಥೆ; ಅಭಿಮಾನಿಯಿಂದ ಪತ್ನಿಯಾದ ಕಥೆ – Kannada News | Tamil Nadu CM Vijay and Wife Sangeetha Reconcile as Divorce Petition Withdrawn: A Look at Their Love Story

ತಮಿಳು ಚಿತ್ರರಂಗದ ನಟ ಇತ್ತೀಚೆಗೆ ರಾಜಕೀಯ ಪ್ರವೇಶಿಸಿ, ತಮಿಳುನಾಡು ರಾಜಕಾರಣದಲ್ಲೂ ಸಕ್ರಿಯರಾಗಿದ್ದಾರೆ. ಅವರು ಸಿಎಂ ಆಗಿದ್ದಾರೆ. ಪ್ರಪಂಚದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ವಿಜಯ್, ತಮ್ಮ ವೃತ್ತಿಜೀವನ ಮಾತ್ರವಲ್ಲದೆ ವೈಯಕ್ತಿಕ ಜೀವನದ ವಿಷಯಗಳಿಗಾಗಿಯೂ ಸುದ್ದಿಯಲ್ಲಿದ್ದಾರೆ.

ಇತ್ತೀಚೆಗೆ ತಮಿಳುನಾಡು ಚುನಾವಣೆಗೆ ಮುನ್ನ, ವಿಜಯ್ ಅವರ ಪತ್ನಿ ಸಂಗೀತಾ ಚೆಂಗಲ್ಪಟ್ಟು ಕುಟುಂಬ ಕಲ್ಯಾಣ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಕೆಲ ಭಿನ್ನಾಭಿಪ್ರಾಯಗಳಿಂದಾಗಿ ದಂಪತಿ ಈ ನಿರ್ಧಾರಕ್ಕೆ ಬಂದಿದ್ದರು ಎನ್ನಲಾಗಿದ್ದು, ಈ ಸುದ್ದಿ ಭಾರೀ ಸಂಚಲನ ಮೂಡಿಸಿತ್ತು. ಆದರೆ, ಇತ್ತೀಚಿನ ವಿಚಾರಣೆ ವೇಳೆ ಸಂಗೀತಾ ತಮ್ಮ ವಿಚ್ಛೇದನ ಅರ್ಜಿಯನ್ನು ಹಿಂತೆಗೆದುಕೊಳ್ಳುವುದಾಗಿ ಪ್ರಕಟಿಸಿದರು. ಇದರಿಂದಾಗಿ ನ್ಯಾಯಾಲಯವು ಪ್ರಕರಣವನ್ನು ಸಂಪೂರ್ಣವಾಗಿ ಮುಕ್ತಾಯಗೊಳಿಸಿದೆ. ವಿಜಯ್ ಮತ್ತು ಸಂಗೀತಾ ಮತ್ತೆ ಒಂದಾಗಿರುವುದು ಅವರ ಅಪಾರ ಅಭಿಮಾನಿ ಬಳಗಕ್ಕೆ ಅತಿಯಾದ ಸಂತಸ ತಂದಿದೆ.

ಅಭಿಮಾನಿಯಿಂದ ಹೆಂಡತಿಯಾದ ಕಥೆ

ಶ್ರೀಲಂಕಾದ ಮೂಲ ಹೊಂದಿದ್ದ ತಮಿಳು ಕುಟುಂಬದ ಸಂಗೀತಾ, ತಂದೆಯ ಉದ್ಯಮದ ಹಿನ್ನೆಲೆಯಲ್ಲಿ ಲಂಡನ್‌ನಲ್ಲಿ ನೆಲೆಸಿದ್ದರು. ವಿಜಯ್ ಅಭಿನಯದ ‘ಪೂವೆ ಉನಕ್ಕಾಗ’ ಸಿನಿಮಾ ವೀಕ್ಷಿಸಿದ ಸಂಗೀತಾ, ಅವರ ನಟನೆಯಿಂದ ಆಕರ್ಷಿತರಾಗಿ ನಟನ ದೊಡ್ಡ ಅಭಿಮಾನಿಯಾದರು. ನೆಚ್ಚಿನ ನಟನನ್ನು ಭೇಟಿಯಾಗಲೇಬೇಕೆಂಬ ಹಠದಿಂದ ತಮ್ಮ ಸಹೋದರಿಯೊಂದಿಗೆ ಲಂಡನ್‌ನಿಂದ ಭಾರತಕ್ಕೆ ಬಂದರು. ಹಲವು ಪ್ರಯತ್ನಗಳ ನಂತರ ವಿಜಯ್ ಅವರ ಭೇಟಿಯಾಯಿತು. ವಿದೇಶದಿಂದ ತನ್ನನ್ನು ನೋಡಲು ಬಂದ ಅಭಿಮಾನಿಯ ಪ್ರೀತಿಗೆ ವಿಜಯ್ ಆಶ್ಚರ್ಯಚಕಿತರಾದರು.

ನಂತರ ವಿಜಯ್ ತಮ್ಮ ಮನೆಗೆ ಸಂಗೀತಾ ಅವರನ್ನು ಭೋಜನಕ್ಕೆ ಆಹ್ವಾನಿಸಿದರು. ಅಲ್ಲಿ ವಿಜಯ್ ಅವರ ಪೋಷಕರಿಗೂ ಸಂಗೀತಾ ಪರಿಚಯವಾಯಿತು. ಚೆನ್ನೈನಲ್ಲೇ ಕೆಲ ದಿನಗಳ ಕಾಲ ಉಳಿದುಕೊಂಡಿದ್ದ ಸಂಗೀತಾ, ಚಿತ್ರೀಕರಣದ ಸ್ಥಳಗಳಿಗೂ ಭೇಟಿ ನೀಡುತ್ತಿದ್ದರು. ಸಂಗೀತಾ ಅವರ ಶಾಂತ ಸ್ವಭಾವ ಮತ್ತು ಉನ್ನತ ಗುಣಗಳನ್ನು ಗಮನಿಸಿದ ವಿಜಯ್ ತಂದೆ, ಪ್ರಸಿದ್ಧ ನಿರ್ದೇಶಕ ಎಸ್.ಎ. ಚಂದ್ರಶೇಖರ್, ನೇರವಾಗಿಯೇ ‘ನನ್ನ ಮಗನನ್ನು ಮದುವೆಯಾಗುತ್ತೀರಾ?’ ಎಂದು ಕೇಳಿದರು. ನೆಚ್ಚಿನ ನಟನ ಕುಟುಂಬದಿಂದಲೇ ಬಂದ ಈ ಆಫರ್‌ಗೆ ಸಂಗೀತಾ ತಕ್ಷಣವೇ ಒಪ್ಪಿಗೆ ನೀಡಿದರು.

ತಂದೆ-ತಾಯಿಯ ನಿರ್ಧಾರಕ್ಕೆ ಗೌರವ ನೀಡಿದ ವಿಜಯ್ ಕೂಡ ಮದುವೆಗೆ ಸಮ್ಮತಿಸಿದರು. ನಂತರ, ವಿಜಯ್ ಕುಟುಂಬಸ್ಥರು ಲಂಡನ್‌ಗೆ ತೆರಳಿ ಸಂಗೀತಾ ಪೋಷಕರನ್ನು ಭೇಟಿಯಾಗಿ ಮದುವೆ ನಿಶ್ಚಯಿಸಿದರು. ಆಗಸ್ಟ್ 25, 1999 ರಂದು ಹಿಂದೂ ಸಂಪ್ರದಾಯದಂತೆ ವಿಜಯ್ ಮತ್ತು ಸಂಗೀತಾ ಅವರ ವಿವಾಹ ಅದ್ಧೂರಿಯಾಗಿ ನೆರವೇರಿತು.

ಇದನ್ನೂ ಓದಿ: ತಮಿಳುನಾಡು ಸಿಎಂ ವಿಜಯ್ ವಿರುದ್ಧದ ವಿಚ್ಛೇದನ ಅರ್ಜಿ ವಾಪಾಸ್ ಪಡೆದ ಪತ್ನಿ ಸಂಗೀತಾ; ಕೇಸ್ ಮುಕ್ತಾಯ

ಈ ಸುಂದರ ದಂಪತಿಗೆ 2000 ರಲ್ಲಿ ಸಂಜಯ್ ಹಾಗೂ 2005ರಲ್ಲಿ ದಿವ್ಯ ಸಶಾ ಜನಿಸಿದರು. ವಿಶೇಷವೆಂದರೆ, ‘SANJAY’ ಎಂಬ ಹೆಸರು ‘SAN’githa ಮತ್ತು Vi’JAY’ ಹೆಸರುಗಳ ಮಿಲನವಾಗಿದೆ. ವಿಜಯ್ ಅವರು ತಮ್ಮ ಪತ್ನಿಯನ್ನು ಪ್ರೀತಿಯಿಂದ ‘ಗೀತ್’ ಎಂದು ಕರೆಯುತ್ತಾರೆ. ಇದೀಗ ಮನಸ್ತಾಪಗಳನ್ನು ಮರೆತು ಒಂದಾಗಿರುವ ಈ ದಂಪತಿ ಎಂದೆಂದಿಗೂ ಸಂತೋಷವಾಗಿರಲಿ ಎಂಬುದೇ ಅಭಿಮಾನಿಗಳ ಹಾರೈಕೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 11:00 am, Sat, 8 August 26

Source link

Nandi Worship: ತ್ರಯೋದಶಿಯಂದು ನಂದೀಶ್ವರನ ಪೂಜೆ ಏಕೆ ಮಾಡಬೇಕು? ಶಿವನ ಆಶೀರ್ವಾದ ಪಡೆಯಲು ಹೀಗೆ ಪೂಜಿಸಿ – Kannada News | Why Worship Nandi on Trayodashi? Know the Spiritual Significance and Puja Benefits

ಹಿಂದೂ ಧಾರ್ಮಿಕ ಪರಂಪರೆಯಲ್ಲಿ ನಂದೀಶ್ವರನಿಗೆ ವಿಶೇಷ ಸ್ಥಾನವಿದೆ. ಶಿವನ ವಾಹನ ಮಾತ್ರವಲ್ಲದೆ, ಶಿವನ ಪರಮ ಭಕ್ತನಾಗಿಯೂ ನಂದಿಯನ್ನು ಪೂಜಿಸಲಾಗುತ್ತದೆ. ವಿಶೇಷವಾಗಿ ಪ್ರದೋಷ ಕಾಲದಲ್ಲಿ ಶಿವನೊಂದಿಗೆ ನಂದೀಶ್ವರನನ್ನು ಪೂಜಿಸುವುದು ಅತ್ಯಂತ ಶುಭವೆಂದು ಭಕ್ತರು ನಂಬುತ್ತಾರೆ. ತ್ರಯೋದಶಿ ತಿಥಿಯಂದು ಶಿವನ ಆರಾಧನೆ ಮಾಡುವುದರಿಂದ ಪಾಪಗಳು ದೂರವಾಗಿ ಕುಟುಂಬದಲ್ಲಿ ಶಾಂತಿ, ಆರೋಗ್ಯ ಮತ್ತು ಸಮೃದ್ಧಿ ನೆಲೆಸುತ್ತದೆ ಎಂಬ ಧಾರ್ಮಿಕ ನಂಬಿಕೆಯಿದೆ. ಆಗಸ್ಟ್ 10ರಂದು ತ್ರಯೋದಶಿ ತಿಥಿಯೊಂದಿಗೆ ಶಿವನಿಗೆ ಸಂಬಂಧಿಸಿದ ಆರ್ದ್ರಾ ನಕ್ಷತ್ರವೂ ಇರುವುದರಿಂದ ಈ ದಿನದ ನಂದೀಶ್ವರ ಪೂಜೆಗೆ ವಿಶೇಷ ಮಹತ್ವವಿದೆ ಎಂದು ಭಕ್ತರು ಪರಿಗಣಿಸುತ್ತಾರೆ.

ಕೌಟುಂಬಿಕ ಸಮಸ್ಯೆಗಳು ದೂರ:

ಕುಟುಂಬದಲ್ಲಿ ಪದೇಪದೇ ಜಗಳ, ಮನಸ್ತಾಪ ಅಥವಾ ಅಶಾಂತಿ ಉಂಟಾಗುತ್ತಿರುವವರು ತ್ರಯೋದಶಿಯಂದು ಶಿವನ ದೇವಸ್ಥಾನಕ್ಕೆ ತೆರಳಿ ಶಿವ ಮತ್ತು ನಂದೀಶ್ವರನನ್ನು ಭಕ್ತಿಯಿಂದ ಪೂಜಿಸುವುದು ಶುಭವೆಂದು ಕೆಲವು ಧಾರ್ಮಿಕ ಪರಂಪರೆಗಳು ಹೇಳುತ್ತವೆ. ಶಿವನ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ದೊರೆತು ಕುಟುಂಬದಲ್ಲಿ ಶಾಂತಿಯ ವಾತಾವರಣ ನಿರ್ಮಾಣವಾಗುತ್ತದೆ ಎಂಬುದು ಭಕ್ತರ ನಂಬಿಕೆ.

ವಿವಾಹಕ್ಕೆ ಸಂಬಂಧಿಸಿದ ಅಡೆತಡೆಗಳು ನಿವಾರಣೆ:

ವಿವಾಹ ವಿಳಂಬವಾಗುತ್ತಿರುವವರು ತ್ರಯೋದಶಿಯಂದು ಶಿವ ಮತ್ತು ನಂದೀಶ್ವರನನ್ನು ಭಕ್ತಿಯಿಂದ ಪೂಜಿಸುವುದು ಶುಭವೆಂದು ಕೆಲವು ಆಧ್ಯಾತ್ಮಿಕ ಸಂಪ್ರದಾಯಗಳು ಹೇಳುತ್ತವೆ. ಶಿವ-ಪಾರ್ವತಿಯ ಆರಾಧನೆಯೊಂದಿಗೆ ನಂದೀಶ್ವರನ ಪೂಜೆಯನ್ನು ಮಾಡುವುದರಿಂದ ವಿವಾಹಕ್ಕೆ ಸಂಬಂಧಿಸಿದ ಅಡೆತಡೆಗಳು ದೂರವಾಗಿ ಉತ್ತಮ ವೈವಾಹಿಕ ಜೀವನ ದೊರೆಯುತ್ತದೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಪೂಜೆ:

ಶಿವನಿಗೆ ಅಭಿಷೇಕ ಮಾಡುವುದರಿಂದ ಆರೋಗ್ಯ, ನೆಮ್ಮದಿ ಮತ್ತು ದೀರ್ಘಾಯುಷ್ಯ ದೊರೆಯುತ್ತದೆ ಎಂಬ ನಂಬಿಕೆ ಹಿಂದೂ ಧಾರ್ಮಿಕ ಪರಂಪರೆಯಲ್ಲಿ ಕಂಡುಬರುತ್ತದೆ. ಸಾಂಪ್ರದಾಯಿಕವಾಗಿ ಶಿವಲಿಂಗಕ್ಕೆ ನೀರು, ಹಾಲು, ಮೊಸರು ಮತ್ತು ಜೇನುತುಪ್ಪ ಸೇರಿದಂತೆ ವಿವಿಧ ದ್ರವ್ಯಗಳಿಂದ ಅಭಿಷೇಕ ಮಾಡಲಾಗುತ್ತದೆ. ಆದರೆ ದೇವಾಲಯಗಳಲ್ಲಿ ಅನುಸರಿಸುವ ಪೂಜಾ ನಿಯಮಗಳು ವಿಭಿನ್ನವಾಗಿರುವುದರಿಂದ ಅಲ್ಲಿನ ಸಂಪ್ರದಾಯಕ್ಕೆ ಅನುಗುಣವಾಗಿ ಪೂಜೆ ಮಾಡುವುದು ಸೂಕ್ತ.

ತ್ರಯೋದಶಿಯಂದು ನಂದೀಶ್ವರನನ್ನು ಹೇಗೆ ಪೂಜಿಸಬೇಕು?

  • ತ್ರಯೋದಶಿಯಂದು ಬೆಳಗ್ಗೆ ಸ್ನಾನ ಮಾಡಿ ಶುದ್ಧರಾಗಿ ಶಿವನ ದೇವಸ್ಥಾನಕ್ಕೆ ತೆರಳಬಹುದು.
  • ಮೊದಲು ನಂದೀಶ್ವರನ ದರ್ಶನ ಪಡೆದು ಪ್ರಾರ್ಥಿಸಬಹುದು.
  • ದೇವಾಲಯದ ನಿಯಮಗಳು ಅನುಮತಿಸಿದರೆ ನಂದೀಶ್ವರನಿಗೆ ಅಭಿಷೇಕ ಅಥವಾ ಪೂಜೆಯನ್ನು ಮಾಡಬಹುದು.
  • ಬಳಿಕ ಶಿವಲಿಂಗಕ್ಕೆ ಬಿಲ್ವಪತ್ರೆ ಅರ್ಪಿಸಬಹುದು.
  • ‘ಓಂ ನಮಃ ಶಿವಾಯ’ ಮಂತ್ರವನ್ನು ಭಕ್ತಿಯಿಂದ ಜಪಿಸಬಹುದು.
  • ಪ್ರದೋಷ ಕಾಲದಲ್ಲಿ ಶಿವನ ಆರಾಧನೆ ಮಾಡುವುದು ವಿಶೇಷವೆಂದು ಪರಿಗಣಿಸಲಾಗುತ್ತದೆ.
  • ತಮ್ಮ ಇಷ್ಟಾರ್ಥಗಳನ್ನು ಶಿವನ ಮುಂದೆ ಪ್ರಾರ್ಥಿಸಬಹುದು.

ಈ ಫಲಿತಾಂಶಗಳೆಲ್ಲವೂ ಧಾರ್ಮಿಕ ಮತ್ತು ಸಾಂಪ್ರದಾಯಿಕ ನಂಬಿಕೆಗಳನ್ನು ಆಧರಿಸಿವೆ. ಪೂಜಾ ವಿಧಾನಗಳು ದೇವಾಲಯ ಮತ್ತು ಪ್ರಾದೇಶಿಕ ಸಂಪ್ರದಾಯಕ್ಕೆ ಅನುಗುಣವಾಗಿ ಬದಲಾಗಬಹುದು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಹಿಮಾಚಲ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: ಕಂದಕಕ್ಕೆ ಉರುಳಿದ ಬಸ್, 7 ಪ್ರಯಾಣಿಕರು ಸಾವು – Kannada News | Chamba Bus Tragedy: 7 Lives Lost as Private Bus Falls into Gorge

ಶಿಮ್ಲಾ , ಆ.08: ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಖಾಸಗಿ ಬಸ್‌ಯೊಂದು ಚಾಲಕನ ನಿಯಂತ್ರಣ ತಪ್ಪಿ ಆಳವಾದ ಪ್ರಪಾತಕ್ಕೆ ಉರುಳಿಬಿದ್ದ ಪರಿಣಾಮ ಏಳು ಪ್ರಯಾಣಿಕರು ದುರ್ಮರಣಕ್ಕೀಡಾಗಿದ್ದಾರೆ. ಈ ಭೀಕರ ದುರಂತವು ಬೈರಾಗಢ-ಚಂಬಾ ಮಾರ್ಗದ ದೇವಿಕೋಠಿ ಬಳಿ ಸಂಭವಿಸಿದೆ. ಬೈರಾಗಢದಿಂದ ಚಂಬಾಗೆ ತೆರಳುತ್ತಿದ್ದ ಖಾಸಗಿ ಬಸ್, ದೇವಿಕೋಠಿ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ದಿಢೀರನೆ ಕಂದಕಕ್ಕೆ ಉರುಳಿಬಿದ್ದಿದೆ. ಅಪಘಾತ ಸಂಭವಿಸಿದ ವೇಳೆ ಬಸ್‌ನಲ್ಲಿ ಒಟ್ಟು 22 ಪ್ರಯಾಣಿಕರಿದ್ದರು. ಈ ಪೈಕಿ 7 ಜನರು ಸ್ಥಳದಲ್ಲೇ ಮೃತಪಟ್ಟಿದ್ದು, ಉಳಿದ ಹಲವು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ, ಗಾಯಾಳುಗಳನ್ನು ಪ್ರಪಾತದಿಂದ ಮೇಲೆತ್ತಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಲವರ ಸ್ಥಿತಿ ಚಿಂತಾಜನಕವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು: ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಭರ್ಜರಿ ಕಾರ್ಯಾಚರಣೆ, 40 ಮಂದಿ ವಶಕ್ಕೆ – Kannada News | Bengaluru Police Raid 30 Locations in Whitefield to Detect Illegal Bangladeshi Immigrants, 40 Detained

ವೈಟ್‌ಫೀಲ್ಡ್ ವಿವಿಧ ಪ್ರದೇಶಗಳಲ್ಲಿರುವ ಶೆಡ್‌ಗಳಲ್ಲಿ ಪೊಲೀಸರಿಂದ ತಪಾಸಣೆImage Credit source: tv9

ಬೆಂಗಳೂರು, ಆಗಸ್ಟ್ 8: ಅಕ್ರಮ ಬಾಂಗ್ಲಾದೇಶಿ ವಲಸಿಗರ ಪತ್ತೆಗಾಗಿ ಬೆಂಗಳೂರಿನ (Bengaluru) ವೈಟ್‌ಫೀಲ್ಡ್ ವಿಭಾಗದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಆರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಒಟ್ಟು 30 ಕಡೆ ದಾಳಿ ನಡೆಸಿ, ಅನುಮಾನಾಸ್ಪದವಾಗಿ ಕಂಡುಬಂದ ಸುಮಾರು 40 ಮಂದಿಯನ್ನು ವಶಕ್ಕೆ ಪಡೆದು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ವರ್ತೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿರುವ ಶೆಡ್‌ಗಳಲ್ಲಿ ಪೊಲೀಸರು ತಪಾಸಣೆ ನಡೆಸಿದ್ದಾರೆ. ನೂರಕ್ಕೂ ಹೆಚ್ಚು ಶೆಡ್‌ಗಳಿರುವ ಪ್ರದೇಶಗಳಲ್ಲೂ ಕಾರ್ಯಾಚರಣೆ ಕೈಗೊಂಡಿದ್ದು, ಅಲ್ಲಿರುವ ಪ್ರತಿಯೊಬ್ಬ ವ್ಯಕ್ತಿ ಹಾಗೂ ಮಹಿಳೆಯರ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.

ವಶಕ್ಕೆ ಪಡೆದವರ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ ಸೇರಿದಂತೆ ವಿವಿಧ ದಾಖಲೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ದಾಖಲೆಗಳಲ್ಲಿ ಅಥವಾ ಮಾಹಿತಿ ನೀಡುವಲ್ಲಿ ಗೊಂದಲ ಕಂಡುಬಂದಿರುವವರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ.

ದಾಖಲೆಗಳ ಪರಿಶೀಲಿಸಿ ಕ್ರಮ

ಮುಖ್ಯವಾಗಿ ಎಸ್‌ಐಆರ್ (SIR) ಮಾಹಿತಿ ಸೇರಿದಂತೆ ಅವರ ಸ್ವಂತ ಊರು, ಪೋಸ್ಟ್ ಆಫೀಸ್ ಹಾಗೂ ಸ್ಥಳೀಯ ಪೊಲೀಸ್ ಠಾಣೆಯ ವಿವರಗಳನ್ನು ಪೊಲೀಸರು ಕೇಳುತ್ತಿದ್ದಾರೆ. ದಾಖಲೆಗಳಲ್ಲಿರುವ ಮಾಹಿತಿಗೂ ವ್ಯಕ್ತಿಗಳು ನೀಡುವ ಮಾಹಿತಿಗೂ ಹೊಂದಾಣಿಕೆ ಇದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.

ಅನುಮಾನ ಕಂಡುಬಂದರೆ FRROಗೆ ಹಾಜರು

ಪೊಲೀಸ್ ಕಮಿಷನರ್ ಸೂಚನೆ ಮೇರೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಸೈದುಲು ಅಡಾವತ್ ತಿಳಿಸಿದ್ದಾರೆ. ಕಾರ್ಯಾಚರಣೆ ವೇಳೆ ವಿದೇಶಿ ಪ್ರಜೆಗಳು ಪತ್ತೆಯಾದರೆ ಅವರ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ದಾಖಲೆಗಳಲ್ಲಿ ಅನುಮಾನ ಕಂಡುಬಂದಲ್ಲಿ ಹೆಚ್ಚಿನ ಪರಿಶೀಲನೆ ನಡೆಸಿ, ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (Foreigners Regional Registration Office/FRRO) ಮುಂದೆ ಹಾಜರುಪಡಿಸಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹಾವನೂರು ಬಡಾವಣೆ ಮನೆಯೊಂದರಲ್ಲಿ ಅಸ್ಥಿಪಂಜರ ಪತ್ತೆ!

ಅಗತ್ಯ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಕ್ರಮವಾಗಿ ನೆಲೆಸಿರುವುದು ದೃಢಪಟ್ಟ ವಿದೇಶಿ ಪ್ರಜೆಗಳನ್ನು ಅವರ ದೇಶಕ್ಕೆ ವಾಪಸ್ ಕಳುಹಿಸುವ (ಡಿಪೋರ್ಟ್) ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಏಕದಿನ ವಿಶ್ವಕಪ್‌ಗೆ ಆಫ್ಘಾನಿಸ್ತಾನ್ ಎಂಟ್ರಿ: 2 ತಂಡಗಳು ಔಟ್..! – Kannada News | Afghanistan Qualify for 2027 ODI World Cup; Two Major Teams Forced into Qualifiers

ಇನ್ನುಳಿದಂತೆ ಐಸಿಸಿ ರ‍್ಯಾಂಕಿಂಗ್‌ ಮೂಲಕ ಅರ್ಹತೆ ಪಡೆದ ತಂಡಗಳೆಂದರೆ… ಭಾರತ, ಆಸ್ಟ್ರೇಲಿಯಾ, ನ್ಯೂಝಿಲೆಂಡ್, ಪಾಕಿಸ್ತಾನ್, ಇಂಗ್ಲೆಂಡ್, ಶ್ರೀಲಂಕಾ, ಬಾಂಗ್ಲಾದೇಶ್ ಮತ್ತು ಅಫ್ಘಾನಿಸ್ತಾನ್. ಅಂದರೆ ಈ 8 ತಂಡಗಳ ಜೊತೆ ಸೌತ್ ಆಫ್ರಿಕಾ ಮತ್ತು ಝಿಂಬಾಬ್ವೆ ತಂಡಗಳು 2027ರ ಏಕದಿನ ವಿಶ್ವಕಪ್​ಗೆ ಕಣಕ್ಕಿಳಿಯುವುದು ಖಚಿತವಾಗಿದೆ. (PC: ICC)

Source link

Quit India Movement Day: ಬ್ರಿಟೀಷರೇ ಭಾರತ ಬಿಟ್ಟು ತೊಲಗಿ; ಕ್ವಿಟ್‌ ಇಂಡಿಯಾ ಚಳವಳಿಯ ಕ್ರಾಂತಿ ಹೇಗಿತ್ತು? – Kannada News | Quit India Movement Day 2026: How important was the Quit India movement in the freedom struggle?

ಭಾರತ ಬಿಟ್ಟು ತೊಲಗಿ ಚಳುವಳಿImage Credit source: Instagram

ಆಗಸ್ಟ್‌ 15 ಭಾರತದ ಪಾಲಿಗೆ ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ದಿನ. ಅದೇ ರೀತಿ ಆಗಸ್ಟ್ 8 ರ ದಿನವು ಸಹ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗಿದೆ. 1942 ರ ಈ ಐತಿಹಾಸಿಕ ದಿನದಂದು, ಮಹಾತ್ಮ ಗಾಂಧಿಯವರು ಬ್ರಿಟಿಷ್ ಆಳ್ವಿಕೆಯ ವಿರುದ್ಧ ದೇಶದ ಅತಿದೊಡ್ಡ ಚಳುವಳಿಯಾದ ‘ಕ್ವಿಟ್ ಇಂಡಿಯಾ ಚಳುವಳಿ’ಯ (Quit India movement) ಕಹಳೆ ಊದಿದರು. ಬ್ರಿಟಿಷರೇ ಭಾರತ ಬಿಟ್ಟು ತೊಳಗಿ, ಮಾಡು ಇಲ್ಲವೇ ಪಡಿ ಎಂಬ ಘೋಷಣೆಯೊಂದಿಗೆ ಚಳುವಳಿ ಆರಂಭವಾಯಿತು. ಈ ಚಳುವಳಿಯನ್ನು ಆಗಸ್ಟ್‌ ಕ್ರಾಂತಿ ಎಂದೂ ಕರೆಯಲಾಗುತ್ತದೆ. ಈ ಚಳುವಳಿ ಭಾರತ ಸ್ವಾತಂತ್ರ್ಯ ಗಳಿಸಲು ಬಲವಾದ ಅಡಿಪಾಯವನ್ನು ಹಾಕಿತು. ಈ ಮಹತ್ವದ ಘಟನೆ ನಡೆದು ಇಂದಿಗೆ 84 ವರ್ಷಗಳಾಗಿದ್ದು, ಕ್ವಿಟಿ ಇಂಡಿಯಾ ಚಳುವಳಿಯ ಇತಿಹಾಸವನ್ನು ಮೆಲುಕು ಹಾಕೋಣ.

ಕ್ವಿಟ್‌ ಇಂಡಿಯಾ ಚಳುವಳಿ ಏಕೆ ಪ್ರಾರಂಭವಾಯಿತು?

ಆಗಸ್ಟ್ ಕ್ರಾಂತಿ ಎಂದೂ ಕರೆಯಲ್ಪಡುವ ಕ್ವಿಟ್ ಇಂಡಿಯಾ ಚಳುವಳಿಯನ್ನು ಆಗಸ್ಟ್ 8, 1942 ರಂದು ಎರಡನೇ ಮಹಾಯುದ್ಧದ ಸಮಯದಲ್ಲಿ ಪ್ರಾರಂಭಿಸಲಾಯಿತು. ಈ ಚಳುವಳಿಯ ಉದ್ದೇಶವು ಬ್ರಿಟಿಷ್ ಸಾಮ್ರಾಜ್ಯವನ್ನು ಭಾರತದಿಂದ ಕೊನೆಗೊಳಿಸುವುದಾಗಿತ್ತು. ಇದು ಭಾರತವನ್ನು ತಕ್ಷಣವೇ ಸ್ವತಂತ್ರಗೊಳಿಸಲು ಬ್ರಿಟಿಷ್ ಆಳ್ವಿಕೆಯ ವಿರುದ್ಧದ ನಾಗರಿಕ ಅಸಹಕಾರ ಚಳುವಳಿಯಾಗಿತ್ತು.

1942 ರಲ್ಲಿ, ಬ್ರಿಟಿಷ್ ಸರ್ಕಾರದ ಕ್ರಿಪ್ಸ್ ಮಿಷನ್ ಭಾರತಕ್ಕೆ ತಕ್ಷಣದ ಸ್ವಾತಂತ್ರ್ಯವನ್ನು ನೀಡುವಲ್ಲಿ ವಿಫಲವಾಯಿತು. ಇದಲ್ಲದೆ, ಬ್ರಿಟನ್ ಭಾರತೀಯ ನಾಯಕರನ್ನು ಸಂಪರ್ಕಿಸದೆ ದೇಶವನ್ನು ಎರಡನೇ ಮಹಾಯುದ್ಧದಲ್ಲಿ ತೊಡಗಿಸಿಕೊಂಡಿತು. ಹಣದುಬ್ಬರ, ಆಹಾರದ ಕೊರತೆ ಮತ್ತು ನಿರುದ್ಯೋಗವು ಯುದ್ಧದ ಸಮಯದಲ್ಲಿ ಸಾಮಾನ್ಯ ಜನರ ಕಷ್ಟಗಳನ್ನು ಉಲ್ಬಣಗೊಳಿಸಿತು. ಬ್ರಿಟಿಷ್ ಸರ್ಕಾರದ ಬಂಧನಗಳು, ಸೆನ್ಸಾರ್ಶಿಪ್ ಮತ್ತು ಕಠಿಣ ನೀತಿಗಳು ಸಾರ್ವಜನಿಕ ಕೋಪವನ್ನು ಮತ್ತಷ್ಟು ಹೆಚ್ಚಿಸಿದವು. ಇಂತಹ ಪರಿಸ್ಥಿತಿಯಲ್ಲು ದೇಶಕ್ಕೆ ಸಂಪೂರ್ಣ ಸ್ವಾತಂತ್ರ್ಯದ ಅಗತ್ಯವಿದೆ ಎಂದು ಮಹಾತ್ಮಾ ಗಾಂಧಿಯವರು ಬ್ರಿಟಿಷ್ ಆಳ್ವಿಕೆಯಿಂದ ಸಂಪೂರ್ಣ ಸ್ವಾತಂತ್ರ್ಯವನ್ನು ಸಾಧಿಸಲು ಅಂತಿಮ ಮತ್ತು ನಿರ್ಣಾಯಕ ಹೋರಾಟವನ್ನು ನಡೆಯಲು ನಿರ್ಧರಿಸಿದರು. ಅದುವೇ ಕ್ವಿಟ್‌ ಇಂಡಿಯಾ ಚಳುವಳಿ.

ಕ್ವಿಟ್ ಇಂಡಿಯಾ ಚಳುವಳಿ ಯಾವಾಗ ಪ್ರಾರಂಭವಾಯಿತು?

ಕ್ವಿಟ್ ಇಂಡಿಯಾ ಚಳುವಳಿ ಆಗಸ್ಟ್ 8, 1942 ರಂದು ಪ್ರಾರಂಭವಾಯಿತು.ಮಹಾತ್ಮ ಗಾಂಧಿ ಇದರ ನೇತೃತ್ವ ವಹಿಸಿದ್ದರು. ಅವರು ಆಗಸ್ಟ್ 8, 1942 ರಂದು ಬಾಂಬೆ (ಈಗ ಮುಂಬೈ) ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (AICC) ಅಧಿವೇಶನದಲ್ಲಿ ಚಳುವಳಿಯನ್ನು ಪ್ರಾರಂಭಿಸಿದರು. ಕ್ವಿಟ್ ಇಂಡಿಯಾ ಚಳುವಳಿಯು ದೇಶದ ಜನರ ಮೇಲೆ ಆಳವಾದ ಪ್ರಭಾವ ಬೀರಿತು. ಈ ಚಳುವಳಿಯ ಸಮಯದಲ್ಲಿ ಮಹಾತ್ಮ ಗಾಂಧಿಯವರು “ಮಾಡು ಇಲ್ಲವೇ ಮಡಿ” ಎಂಬ ಘೋಷಣೆಯನ್ನು ನೀಡಿದರು. “ಮಾಡು ಇಲ್ಲವೇ ಮಡಿ” ಎಂಬ ಘೋಷಣೆಯು ಜನರನ್ನು ಎಷ್ಟು ಬಲವಾಗಿ ಪ್ರಭಾವಿಸಿತು ಎಂದರೆ ಬ್ರಿಟಿಷರು ಭಾರತವನ್ನು ತೊರೆಯಬೇಕಾಯಿತು. ಚಳುವಳಿಯನ್ನು ಪ್ರಾರಂಭಿಸಿದ ಗಾಂಧಿಯವರು, ಬ್ರಿಟಿಷರು ತಕ್ಷಣ ಭಾರತವನ್ನು ತೊರೆಯಬೇಕೆಂದು ಘೋಷಿಸಿದರು.

ಚಳುವಳಿಯನ್ನು ಹತ್ತಿಕ್ಕಲು ಬ್ರಿಟಿಷ್‌ ಸರ್ಕಾರವು ತಕ್ಷಣವೇ ಆಪರೇಷನ್ ಥಂಡರ್ಬೋಲ್ಟ್ ಅನ್ನು ಪ್ರಾರಂಭಿಸಿತು. ಆಗಸ್ಟ್ 9 ರಂದು ಸೂರ್ಯೋದಯಕ್ಕೆ ಮುಂಚೆಯೇ, ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಮೌಲಾನಾ ಅಬುಲ್ ಕಲಾಂ ಆಜಾದ್ ಸೇರಿದಂತೆ ಎಲ್ಲಾ ಉನ್ನತ ಕಾಂಗ್ರೆಸ್ ನಾಯಕರನ್ನು ಬಂಧಿಸಲಾಯಿತು. ಗಾಂಧಿಯನ್ನು ಪುಣೆಯ ಆಗಾ ಖಾನ್ ಅರಮನೆಯಲ್ಲಿ ಗೃಹಬಂಧನದಲ್ಲಿ ಇರಿಸಲಾಯಿತು, ಇತರ ನಾಯಕರನ್ನು ಅಹ್ಮದ್‌ನಗರ (ಈಗ ಅಹಲ್ಯಾನಗರ) ಕೋಟೆಯಲ್ಲಿ ಬಂಧನದಲ್ಲಿ ಇರಿಸಲಾಯಿತು.

ಇದನ್ನೂ ಓದಿ: ಭಾರತದ ಪ್ರಮುಖ ಕೈಮಗ್ಗ ತಾಣಗಳು

ನಾಯಕರಿಲ್ಲದ ಚಳುವಳಿ ಜನಸಾಮಾನ್ಯರ ಕ್ರಾಂತಿಯಾಯಿತು:

ಬ್ರಿಟಿಷರು ಉನ್ನತ ನಾಯಕರನ್ನು ಬಂಧಿಸುವುದರಿಂದ ಚಳುವಳಿ ಕೊನೆಗೊಳ್ಳುತ್ತದೆ ಎಂದು ನಂಬಿದ್ದರು, ಆದರೆ ಪರಿಸ್ಥಿತಿ ಹಾಗಿರಲಿಲ್ಲ ನಾಯಕತ್ವದ ಅನುಪಸ್ಥಿತಿಯಲ್ಲಿ, ದೇಶದ ಜನರು ತಾವೇ ನಾಯಕರಾಗಿ ಚಳುವಳಿಯಲ್ಲಿ ಭಾಗಿಯಾದರು. ಆಗಸ್ಟ್ 9 ರ ಬೆಳಿಗ್ಗೆ, ಮುಂಬೈನ ಗೋವಾಲಿಯಾ ಟ್ಯಾಂಕ್ ಮೈದಾನದಲ್ಲಿ, ಧೈರ್ಯಶಾಲಿ ಮಹಿಳೆ ಅರುಣಾ ಆಸಿಫ್ ಅಲಿ ಕಟ್ಟುನಿಟ್ಟಾದ ಕರ್ಫ್ಯೂ ಮತ್ತು ಪೊಲೀಸ್ ಉಪಸ್ಥಿತಿಯ ನಡುವೆ ತ್ರಿವರ್ಣ ಧ್ವಜವನ್ನು ಹಾರಿಸಿ, ಚಳುವಳಿಗೆ ಚಾಲನೆ ನೀಡಿದರು. ನಂತರ ಈ ಚಳುವಳಿ ಮುಂಬೈನಿಂದ ಇಡೀ ದೇಶಕ್ಕೆ ಕಾಡ್ಗಿಚ್ಚಿನಂತೆ ಹರಡಿತು. ವೈದ್ಯರು, ಎಂಜಿನಿಯರ್‌ಗಳು, ಕಾರ್ಮಿಕರು, ರೈತರು ಮತ್ತು ಲಕ್ಷಾಂತರ ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬ ಭಾರತೀಯರೂ ಬ್ರಿಟಿಷ್ ಆಳ್ವಿಕೆಯನ್ನು ಪ್ರಶ್ನಿಸಲು ಬೀದಿಗಿಳಿದರು.

ಮಹಾತ್ಮಾ ಗಾಂಧಿಯವರು ಸಂಪೂರ್ಣವಾಗಿ ಅಹಿಂಸಾತ್ಮಕ ಚಳುವಳಿಗಾಗಿ ಜನರಿಗೆ ಮನವಿ ಮಾಡಿದ್ದರು. ಆದರೆ, ಬಹುತೇಕ ಎಲ್ಲಾ ಉನ್ನತ ನಾಯಕರು ಜೈಲಿನಲ್ಲಿದ್ದರಿಂದ, ಚಳುವಳಿ ಅನೇಕ ಸ್ಥಳಗಳಲ್ಲಿ ಸ್ವಯಂಪ್ರೇರಿತವಾಗಿ ಉಲ್ಬಣಗೊಂಡಿತು ಮತ್ತು ಸಾರ್ವಜನಿಕರ ಕೋಪವು ಹಿಂಸಾತ್ಮಕ ಘಟನೆಗಳಾಗಿ ಉಲ್ಬಣಗೊಂಡಿತು. ಅನೇಕ ಪ್ರದೇಶಗಳಲ್ಲಿ ರೈಲ್ವೆ ಮಾರ್ಗಗಳನ್ನು ಕಿತ್ತುಹಾಕಲಾಯಿತು, ಟೆಲಿಗ್ರಾಫ್ ಮತ್ತು ದೂರವಾಣಿ ಕೇಬಲ್‌ಗಳನ್ನು ಕತ್ತರಿಸಲಾಯಿತು ಮತ್ತು ಅಂಚೆ ಕಚೇರಿಗಳು, ರೈಲ್ವೆ ನಿಲ್ದಾಣಗಳು ಮತ್ತು ಸರ್ಕಾರಿ ಕಟ್ಟಡಗಳನ್ನು ಗುರಿಯಾಗಿಸಲಾಯಿತು. ಈ ಕ್ರಮಗಳು ಬ್ರಿಟಿಷ್ ಆಡಳಿತದ ಸಂವಹನ ಮತ್ತು ಆಡಳಿತವನ್ನು ಅಡ್ಡಿಪಡಿಸುವ ಗುರಿಯನ್ನು ಹೊಂದಿದ್ದವು. ದೇಶದ ವಿವಿಧ ಭಾಗಗಳಲ್ಲಿ ಮುಷ್ಕರಗಳು ಮತ್ತು ರಹಸ್ಯ ಚಟುವಟಿಕೆಗಳು ಮುಂದುವರೆದವು. ಚಳುವಳಿಯನ್ನು ಹತ್ತಿಕ್ಕಲು ಬ್ರಿಟಿಷ್ ಸರ್ಕಾರ ಬಂಧನಗ ಮತ್ತು ಕಠಿಣ ಕ್ರಮಗಳನ್ನು ಜಾರಿಗೊಳಿಸಿತು. ಆದರೆ ಇದು ಜನರ ಹೋರಾಟದ ಕಿಚ್ಚನ್ನು ತಡೆಯಲು ಸಾಧ್ಯವಾಗಲಿಲ್ಲ. 1942 ರ ಈ ಕ್ರಾಂತಿಯು 1947 ರಲ್ಲಿ ಸ್ವಾತಂತ್ರ್ಯದ ಹಾದಿಯಲ್ಲಿ ಒಂದು ಪ್ರಮುಖ ತಿರುವನ್ನೇ ಪಡೆದುಕೊಂಡಿತು.

ಸಮಾನಾಂತರ ಸರ್ಕಾರಗಳು ರಚನೆಯಾದವು:

ಕ್ವಿಟ್ ಇಂಡಿಯಾ ಚಳವಳಿಯ ಅತ್ಯಂತ ಗಮನಾರ್ಹ ಬೆಳವಣಿಗೆಗಳಲ್ಲಿ ಒಂದೆಂದರೆ ಸಮಾನಾಂತರ ಸರ್ಕಾರಗಳ ರಚನೆ. ಬ್ರಿಟಿಷ್ ಆಡಳಿತವು ಅನೇಕ ಪ್ರದೇಶಗಳಲ್ಲಿ ದುರ್ಬಲಗೊಳ್ಳಲು ಪ್ರಾರಂಭಿಸಿದಾಗ, ಸ್ಥಳೀಯ ಜನರು ತಮ್ಮದೇ ಆದ ಆಡಳಿತವನ್ನು ವಹಿಸಿಕೊಳ್ಳಲು ಪ್ರಾರಂಭಿಸಿದರು.

  • ‘ಪ್ರತಿ ಸರ್ಕಾರ್’ ಅನ್ನು ಮಹಾರಾಷ್ಟ್ರದ ಸತಾರಾದಲ್ಲಿ ರಚಿಸಲಾಯಿತು, ಇದು ಅತ್ಯಂತ ದೀರ್ಘಕಾಲ ಸಕ್ರಿಯವಾಗಿತ್ತು.
  • ಬಂಗಾಳದ ತಮ್ಲುಕ್ (ಮಿಡ್ನಾಪುರ) ನಲ್ಲಿ ‘ತಮ್ರಲಿಪ್ಟ್ ರಾಷ್ಟ್ರೀಯ ಸರ್ಕಾರ’ ರಚನೆಯಾಯಿತು.
  • ಉತ್ತರ ಪ್ರದೇಶದ ಬಲ್ಲಿಯಾದಲ್ಲಿಯೂ ಸಹ, ಸ್ಥಳೀಯ ಜನರು ಸ್ವಲ್ಪ ಸಮಯದವರೆಗೆ ಆಡಳಿತವನ್ನು ವಹಿಸಿಕೊಂಡರು.

ಈ ಸಮಾನಾಂತರ ಸರ್ಕಾರಗಳು ನ್ಯಾಯ, ಪರಿಹಾರ ಕಾರ್ಯ, ಸಾರ್ವಜನಿಕ ಸೇವೆಗಳು ಮತ್ತು ಸ್ಥಳೀಯ ಆಡಳಿತಕ್ಕೆ ಸಂಬಂಧಿಸಿದ ವಿವಿಧ ಕಾರ್ಯಗಳನ್ನು ನಿರ್ವಹಿಸಿದವು. ಇದು ಭಾರತೀಯರು ಸ್ವಾತಂತ್ರ್ಯವನ್ನು ಮಾತ್ರವಲ್ಲದೆ ಆಡಳಿತ ನಡೆಸುವ ಸಾಮರ್ಥ್ಯವನ್ನೂ ಹೊಂದಿದ್ದಾರೆ ಎಂಬ ಸಂದೇಶವನ್ನು ರವಾನಿಸಿತು. ಹೀಗೆ ಭಾರತ ಬಿಟ್ಟು ತೊಲಗಿ ಚಳುವಳಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ತಿರುವು ನೀಡಿತು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:11 am, Sat, 8 August 26

Source link

ರಾಜ್ಯ ಕಾಂಗ್ರೆಸ್‌ನಲ್ಲಿ ಸಂಪುಟ ವಿಸ್ತರಣೆ ಕಿಚ್ಚು: ರಾಹುಲ್ ಗಾಂಧಿಗೆ ನಿಷ್ಠಾವಂತ ಕಾರ್ಯಕರ್ತರ ಪತ್ರ – Kannada News | Cabinet Expansion Sparks Karnataka Congress Crisis: High Command Name Misuse Alleged

ಬೆಂಗಳೂರು, ಆ. 08: ರಾಜ್ಯದಲ್ಲಿ ಇತ್ತೀಚೆಗೆ ನಡೆದ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದೊಳಗೆ ಅಸಮಾಧಾನ ಭುಗಿಲೆದ್ದಿದೆ. ಒಂದು ಕಾಂಗ್ರೆಸ್​​​ನ ಹಿರಿಯ ನಾಯಕರು ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಕೋಪವಿದ್ದರೆ,  ಇನ್ನೊಂದು ಕಡೆ ಕಾರ್ಯಕರ್ತರು ನಾಯಕರ ವಿರೋಧ ಅಸಮಾಧನಗೊಂಡಿದ್ದಾರೆ.  ಪಕ್ಷದ ಹೈಕಮಾಂಡ್ ಹೆಸರನ್ನು ದುರ್ಬಳಕೆ ಮಾಡಿಕೊಂಡು ನಾಯಕರು ರಾಜಕೀಯ ಲಾಭ ಪಡೆಯುತ್ತಿದ್ದಾರೆ ಹಾಗೂ ನಿಷ್ಠಾವಂತರಿಗೆ ಅನ್ಯಾಯ ಎಸಗುತ್ತಿದ್ದಾರೆ ಎಂದು ಆರೋಪಿಸಿ ‘ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತರು’ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಪತ್ರವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಮುಂದೆ ರಾಜ್ಯದಲ್ಲಿ ಪಕ್ಷ ಮತ್ತು ಸರ್ಕಾರಕ್ಕೆ ಅಸ್ತಿತ್ವವೇ ಇರುವುದಿಲ್ಲ ಎಂದು ಕಾರ್ಯಕರ್ತರು ಎಚ್ಚರಿಸಿದ್ದಾರೆ.

ಪತ್ರದಲ್ಲಿ ಏನಿದೆ?:

“ರಾಹುಲ್ ಜೀ, ನೀವು ಕೇಂದ್ರ ಸರ್ಕಾರದ ಭ್ರಷ್ಟಾಚಾರ ವಿರುದ್ಧ ನಿರಂತರ ಹೋರಾಡುತ್ತಿದ್ದೀರಿ. ಆದರೆ ದುರಂತವೆಂದರೆ ಕರ್ನಾಟಕದಲ್ಲಿ ಅನೇಕ ನಾಯಕರು ನಿಮ್ಮ ಹಾಗೂ ಹೈಕಮಾಂಡ್‌ ಹೆಸರನ್ನು ಬಳಸಿಕೊಂಡು ಸ್ವಂತ ರಾಜಕೀಯ ಲಾಭ ಪಡೆಯುತ್ತಿದ್ದಾರೆ. ಈ ವಂಚನೆಯನ್ನು ತಕ್ಷಣವೇ ನಿಲ್ಲಿಸಬೇಕು” ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

ಹಿರಿಯರಿಗೆ ಅನ್ಯಾಯ, ನಿಷ್ಠದ್ರೋಹಿಗಳಿಗೆ ಸಂಪುಟ ಸ್ಥಾನ:

ಇತ್ತೀಚೆಗೆ ನಡೆದ ಸಂಪುಟ ವಿಸ್ತರಣೆಯಲ್ಲಿ ಪಕ್ಷಕ್ಕಾಗಿ ದುಡಿದ ಹಿರಿಯ ನಾಯಕರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಪಕ್ಷಕ್ಕೆ ದ್ರೋಹ ಬಗೆದವರು ಮತ್ತು ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವವರನ್ನು ಸಚಿವರನ್ನಾಗಿ ಮಾಡಿರುವುದು ದುರದೃಷ್ಟಕರ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ. ಭ್ರಷ್ಟಾಚಾರದ ಆರೋಪ ಹೊತ್ತಿರುವ ಹಾಗೂ ಸಚಿವ ಸ್ಥಾನದಿಂದ ವೈಯಕ್ತಿಕ ಲಾಭ ಮಾಡಿಕೊಂಡಿರುವ ಶಾಸಕರನ್ನು ತಕ್ಷಣವೇ ಸಂಪುಟದಿಂದ ತೆಗೆದುಹಾಕಬೇಕು ಎಂದು ನಿಷ್ಠಾವಂತ ನಾಯಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಕೊಪ್ಪಳದಲ್ಲಿ ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರೀ ಗೋಲ್ ಮಾಲ್: ಮೃತಪಟ್ಟವರ ಖಾತೆಗೆ ಹಣ, 86 ಲಕ್ಷ ರೂ. ರಿಕವರಿ

ಜಾತಿ, ಹಣದ ಪ್ರಭಾವಕ್ಕೆ ಬ್ರೇಕ್ ಹಾಕಿ:

ಜಾತಿ ಮತ್ತು ಹಣಬಲದಿಂದ ಹೈಕಮಾಂಡ್‌ ಹೆಸರಿನಲ್ಲಿ ಅಧಿಕಾರ ಹಿಡಿಯುವವರನ್ನು ಬದಿಗೊತ್ತಿ, ಸಾಮಾನ್ಯ ಕಾರ್ಯಕರ್ತರ ಹಾಗೂ ಪಕ್ಷದ ಧ್ವನಿಯಾಗಿ ಹೋರಾಡುವ ಶಾಸಕರನ್ನು ಸಚಿವರನ್ನಾಗಿ ಪರಿಗಣಿಸಬೇಕು ಎಂದು ಪತ್ರದಲ್ಲಿ ಮನವರಿಕೆ ಮಾಡಿಕೊಡಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:12 am, Sat, 8 August 26

Source link

Garuda Purana: ಸೂರ್ಯಾಸ್ತದ ನಂತರ ಅಂತ್ಯಕ್ರಿಯೆ ಏಕೆ ಮಾಡಬಾರದು? ಗರುಡ ಪುರಾಣ ಹೇಳುವುದೇನು? – Kannada News | Why Are Hindu Funerals Avoided After Sunset? What Does Garuda Purana Say?

ಹಿಂದೂ ಧರ್ಮದಲ್ಲಿ ಅಂತ್ಯಕ್ರಿಯೆಗಳಿಗೆ ವಿಶೇಷ ಮಹತ್ವವಿದೆ. ವಿಶೇಷವಾಗಿ ಗರುಡ ಪುರಾಣದಲ್ಲಿ ಸಾವು, ಆತ್ಮದ ಮರಣದ ನಂತರದ ಪ್ರಯಾಣ ಹಾಗೂ ಅಂತ್ಯಕ್ರಿಯೆಗೆ ಸಂಬಂಧಿಸಿದ ಹಲವು ಧಾರ್ಮಿಕ ನಂಬಿಕೆಗಳು ಮತ್ತು ವಿಧಿವಿಧಾನಗಳ ಬಗ್ಗೆ ವಿವರಿಸಲಾಗಿದೆ. ಅವುಗಳಲ್ಲಿ ಸೂರ್ಯಾಸ್ತದ ನಂತರ ಅಂತ್ಯಕ್ರಿಯೆ ನಡೆಸದಿರುವ ಸಂಪ್ರದಾಯವೂ ಒಂದು. ಹಾಗಾದರೆ ಇದರ ಹಿಂದಿರುವ ಧಾರ್ಮಿಕ ನಂಬಿಕೆಗಳೇನು?

ಸೂರ್ಯಾಸ್ತದ ನಂತರ ಅಂತ್ಯಕ್ರಿಯೆ ಏಕೆ ಮಾಡಬಾರದು?

ಹಿಂದೂ ಧಾರ್ಮಿಕ ಸಂಪ್ರದಾಯಗಳ ಪ್ರಕಾರ, ಸಾಧ್ಯವಾದರೆ ಸೂರ್ಯಾಸ್ತದ ನಂತರ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಮರುದಿನ ಸೂರ್ಯೋದಯದ ಬಳಿಕ ನೆರವೇರಿಸುವ ಪದ್ಧತಿ ಕೆಲವು ಸಮುದಾಯಗಳಲ್ಲಿ ಇದೆ. ರಾತ್ರಿ ವೇಳೆ ದಹನ ಸಂಸ್ಕಾರ ನಡೆಸುವುದನ್ನು ಸಾಮಾನ್ಯವಾಗಿ ಶುಭವೆಂದು ಪರಿಗಣಿಸಲಾಗುವುದಿಲ್ಲ. ಪೌರಾಣಿಕ ನಂಬಿಕೆಗಳ ಪ್ರಕಾರ, ಸೂರ್ಯಾಸ್ತದ ನಂತರ ಅಂತ್ಯಕ್ರಿಯೆ ನಡೆಸಿದರೆ ಮೃತರ ಆತ್ಮದ ಮರಣೋತ್ತರ ಪ್ರಯಾಣಕ್ಕೆ ಅಡ್ಡಿಯಾಗಬಹುದು ಎಂಬ ನಂಬಿಕೆಯಿದೆ. ಹೀಗಾಗಿ ಸೂರ್ಯೋದಯದ ಬಳಿಕ ಅಂತ್ಯಕ್ರಿಯೆ ನೆರವೇರಿಸುವುದು ಶ್ರೇಯಸ್ಕರ ಎಂದು ಕೆಲವು ಧಾರ್ಮಿಕ ಪರಂಪರೆಗಳು ಹೇಳುತ್ತವೆ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ಸೂರ್ಯನಿಗೆ ಏಕೆ ವಿಶೇಷ ಮಹತ್ವ?

ಹಿಂದೂ ಧರ್ಮದಲ್ಲಿ ಸೂರ್ಯನನ್ನು ಬೆಳಕು, ಜೀವಶಕ್ತಿ ಮತ್ತು ಚೈತನ್ಯದ ಸಂಕೇತವಾಗಿ ಪರಿಗಣಿಸಲಾಗುತ್ತದೆ. ಸೂರ್ಯನಾರಾಯಣನನ್ನು ದೇವರ ರೂಪದಲ್ಲಿ ಪೂಜಿಸುವ ಪರಂಪರೆಯೂ ಇದೆ. ಈ ಕಾರಣದಿಂದ ಹಗಲು ಹೊತ್ತಿನಲ್ಲಿ, ವಿಶೇಷವಾಗಿ ಸೂರ್ಯನ ಸಾಕ್ಷಿಯಲ್ಲಿ ನಡೆಸುವ ಅಂತಿಮ ಸಂಸ್ಕಾರವು ಮೃತರ ಆತ್ಮದ ಮುಂದಿನ ಪ್ರಯಾಣಕ್ಕೆ ಶುಭಕರ ಎಂಬ ನಂಬಿಕೆ ಕೆಲವು ಧಾರ್ಮಿಕ ಸಂಪ್ರದಾಯಗಳಲ್ಲಿ ಕಂಡುಬರುತ್ತದೆ. ಆದರೆ ಇವು ಧಾರ್ಮಿಕ ಮತ್ತು ಪೌರಾಣಿಕ ನಂಬಿಕೆಗಳಾಗಿದ್ದು, ವೈಜ್ಞಾನಿಕವಾಗಿ ಸಾಬೀತಾದ ಸಂಗತಿಗಳಲ್ಲ ಎಂಬುದನ್ನು ಗಮನಿಸುವುದು ಮುಖ್ಯ.

ರಾತ್ರಿ ಅಂತ್ಯಕ್ರಿಯೆ ಮಾಡಿದರೆ ಏನಾಗುತ್ತದೆ ಎಂಬ ನಂಬಿಕೆ?

ಕೆಲವು ಪೌರಾಣಿಕ ನಂಬಿಕೆಗಳ ಪ್ರಕಾರ, ರಾತ್ರಿ ದಹನ ಸಂಸ್ಕಾರ ನಡೆಸುವುದರಿಂದ ಮೃತರ ಆತ್ಮದ ಮರಣದ ನಂತರದ ಪ್ರಯಾಣಕ್ಕೆ ತೊಂದರೆ ಉಂಟಾಗಬಹುದು ಎಂದು ಹೇಳಲಾಗುತ್ತದೆ. ಸೂರ್ಯಾಸ್ತದ ಬಳಿಕ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತದೆ ಎಂಬ ನಂಬಿಕೆಯೂ ಕೆಲವು ಧಾರ್ಮಿಕ ಪರಂಪರೆಗಳಲ್ಲಿ ಇದೆ. ಇಂತಹ ನಂಬಿಕೆಗಳ ಹಿನ್ನೆಲೆಯಲ್ಲಿ ಸೂರ್ಯೋದಯದ ಬಳಿಕ ಅಂತ್ಯಕ್ರಿಯೆ ನಡೆಸುವ ಪದ್ಧತಿ ರೂಪುಗೊಂಡಿದೆ ಎಂದು ಧಾರ್ಮಿಕ ವ್ಯಾಖ್ಯಾನಗಳಲ್ಲಿ ಹೇಳಲಾಗುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 9:57 am, Sat, 8 August 26

Source link

ಹಾವನೂರು ಬಡಾವಣೆ ಮನೆಯೊಂದರಲ್ಲಿ ಅಸ್ಥಿಪಂಜರ ಪತ್ತೆ! – Kannada News | Bengaluru: Womans Skeleton Discovered in Havanur Layout Home After 1.5 Years

ಬೆಂಗಳೂರು, ಆಗಸ್ಟ್ 08: ಹಾವನೂರು ಬಡಾವಣೆ ಮನೆಯೊಂದರಲ್ಲಿ ಮಹಿಳೆಯ ಅಸ್ಥಿಪಂಜರ ಪತ್ತೆಯಾಗಿದ್ದು, ಆಶ್ಚರ್ಯ ಮೂಡಿಸಿದೆ. ಮೃತಪಟ್ಟು ಸುಮಾರು ಒಂದೂವರೆ ವರ್ಷದ ಬಳಿಕ ಅಸ್ಥಿಪಂಜರ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಬೆಂಗಳೂರು ಉತ್ತರ ತಾಲೂಕಿನ ಹಾವನೂರು ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ದಾಕ್ಷಾಯಿಣಿ ಎಂಬ ಮಹಿಳೆ ಸಾವನ್ನಪ್ಪಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಒಂದೂವರೆ ವರ್ಷದ ಹಿಂದೆಯೇ ದಾಕ್ಷಾಯಿಣಿ ಮೃತಪಟ್ಟಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಘಟನೆ ನಡೆದ ಮನೆಯ ಬಾಗಿಲು ಸಂಜೆ ತೆರೆದಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಕಳವು ಮಾಡುವ ಉದ್ದೇಶದಿಂದ ಯಾರೋ ಮನೆಗೆ ನುಗ್ಗಿರಬಹುದು ಎಂದು ಶಂಕಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮನೆಗೆ ಬಂದು ಪರಿಶೀಲಿಸಿದಾಗ ಬಾತ್‌ರೂಂನಲ್ಲಿ ದಾಕ್ಷಾಯಿಣಿ ಅವರ ಅಸ್ಥಿಪಂಜರ ಪತ್ತೆಯಾಗಿದೆ. ಸದ್ಯ ಅಸ್ಥಿಪಂಜರವನ್ನು ಹೆಚ್ಚಿನ ವಿಧಿವಿಜ್ಞಾನ ಪರೀಕ್ಷೆಗಾಗಿ ಎಫ್‌ಎಸ್‌ಎಲ್‌ಗೆ ರವಾನಿಸಲಾಗಿದೆ. ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೇಗಿರಲಿದೆ ಟೀಮ್ ಇಂಡಿಯಾದ ಹೊಸ ಫಿಟ್​ನೆಸ್ ಟೆಸ್ಟ್? ಇಲ್ಲಿದೆ ಮಾಹಿತಿ – Kannada News | How is Team India’s New Fitness Test? Here is the Complete details

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟೀಮ್ ಇಂಡಿಯಾ ಆಟಗಾರರ ಫಿಟ್​ನೆಸ್​ ವಿಚಾರದಲ್ಲಿ ಅತ್ಯಂತ ಕಠಿಣ ನಿರ್ಧಾರ ಕೈಗೊಂಡಿದೆ. ಇತ್ತೀಚಿನ ಇಂಗ್ಲೆಂಡ್ ಹಾಗೂ ಐರ್ಲೆಂಡ್ ಪ್ರವಾಸಗಳ ವೇಳೆ ಆಟಗಾರರಲ್ಲಿ ಕಂಡುಬಂದ ಮೈದಾನದ ನಿಧಾನಗತಿ, ಕಳಪೆ ಫೀಲ್ಡಿಂಗ್ ಹಾಗೂ ಅತಿಯಾದ ಸ್ನಾಯು ಸೆಳೆತದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ, ಆಯ್ಕೆ ಪ್ರಕ್ರಿಯೆಯಲ್ಲಿ ಹೊಸ ಫಿಟ್​ನೆಸ್​ ನಿಯಮಗಳನ್ನು ಜಾರಿಗೆ ತರಲು ಸಜ್ಜಾಗಿದೆ.

ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (NCA) ನೂತನ ‘ಸೆಂಟರ್ ಆಫ್ ಎಕ್ಸಲೆನ್ಸ್’ (CoE) ಈ ಹೊಸ ಫಿಟ್​ನೆಸ್​ ನಿಯಮಾವಳಿಗಳನ್ನು ರೂಪಿಸಿದೆ. ಇದುವರೆಗೆ ಇದ್ದ ಯೋ-ಯೋ (Yo-Yo) ಟೆಸ್ಟ್ ಮಾದರಿಯನ್ನು ಬದಿಗೊತ್ತಿ, ಇನ್ನೂ ಕಠಿಣವಾದ ಎರಡು ಹಂತದ ಪರೀಕ್ಷೆಗಳನ್ನು ಕಡ್ಡಾಯಗೊಳಿಸಲಾಗಿದೆ.

ಏನಿದು ಹೊಸ ಫಿಟ್​ನೆಸ್ ಸೂತ್ರ?

ಇನ್ಮುಂದೆ ಭಾರತ ತಂಡಕ್ಕೆ ಆಯ್ಕೆಯಾಗಬೇಕಾದರೆ ಆಟಗಾರರು ಬ್ಯಾಕ್-ಟು-ಬ್ಯಾಕ್ ಎರಡು ಕಠಿಣ ದೈಹಿಕ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಆ ಟೆಸ್ಟ್​ಗಳೆಂದರೆ…

  1. ಬ್ರಾಂಕೋ ಟೆಸ್ಟ್
  2. 2K ರನ್ ಟೆಸ್ಟ್​

ಹೇಗಿರಲಿದೆ ಫಿಟ್​ನೆಸ್ ಟೆಸ್ಟ್?

ಬ್ರಾಂಕೋ ಟೆಸ್ಟ್: ಇದು ರಗ್ಬಿ ಆಟಗಾರರು ಬಳಸುವ ಅತ್ಯಂತ ಕಠಿಣ ರನ್ನಿಂಗ್ ಟೆಸ್ಟ್ ಆಗಿದೆ.

  • ವಿಧಾನ: ಆಟಗಾರರು ಒಂದೇ ಸಮನೆ 20 ಮೀಟರ್, 40 ಮೀಟರ್ ಮತ್ತು 60 ಮೀಟರ್ ದೂರಕ್ಕೆ ಓಡಿ, ಮತ್ತೆ ವಾಪಸ್ ಬರಬೇಕು. ಇದರಲ್ಲಿ ಆಟಗಾರನು ಆರಂಭಿಕ ಗೆರೆಯಿಂದ ಹೊರಟು ಮೊದಲು 20 ಮೀಟರ್ ಓಡಿ ವಾಪಸ್ ಬರಬೇಕು, ತಕ್ಷಣವೇ 40 ಮೀಟರ್ ಓಡಿ ವಾಪಸ್ ಬರಬೇಕು ಮತ್ತು ಕೊನೆಯದಾಗಿ 60 ಮೀಟರ್ ಓಡಿ ವಾಪಸ್ ಬರಬೇಕಾಗುತ್ತದೆ. ಹೀಗೆ ಒಂದು ಸೆಟ್​ನಲ್ಲಿ ಒಟ್ಟು 240 ಮೀಟರ್‌ಗಳ ಓಟವನ್ನು ಪೂರ್ಣಗೊಳಿಸಬೇಕು.
  • ಯಾಕಾಗಿ ಈ ವಿಧಾನ: ಇಲ್ಲಿ ಪ್ರತಿ 20, 40, ಮತ್ತು 60 ಮೀಟರ್ ತಲುಪಿದಾಗಲೂ ವೇಗವನ್ನು ತಗ್ಗಿಸಿ, ತಕ್ಷಣ ತಿರುಗಿ, ಮತ್ತೆ ವೇಗವನ್ನು ಹೆಚ್ಚಿಸಬೇಕಾಗುತ್ತದೆ. ಇದರಿಂದ ಆಟಗಾರರ ಶ್ವಾಸಕೋಶದ ಸಾಮರ್ಥ್ಯ ಮತ್ತು ಕಾಲಿನ ಸ್ನಾಯುಗಳ ಬಲ ತೀವ್ರವಾಗಿ ಪರೀಕ್ಷಿಸಲ್ಪಡುತ್ತದೆ.
  • ದೂರ: ಹೀಗೆ ಒಟ್ಟು 5 ಸೆಟ್‌ಗಳಲ್ಲಿ 1,200 ಮೀಟರ್ ದೂರವನ್ನು ಓಡಬೇಕು.
  • ಸಮಯದ ಮಿತಿ: ಈ ಹಿಂದೆ ಇದ್ದ 6 ನಿಮಿಷಗಳ ಸಮಯವನ್ನು ಕಡಿತಗೊಳಿಸಲಾಗಿದ್ದು, ಈಗ ಕೇವಲ 5 ನಿಮಿಷ 15 ಸೆಕೆಂಡ್‌ನಿಂದ 5 ನಿಮಿಷ 20 ಸೆಕೆಂಡ್ ಒಳಗಡೆ ಇದನ್ನು ಪೂರ್ಣಗೊಳಿಸುವುದು ಕಡ್ಡಾಯ.

2 ಕಿಲೋಮೀಟರ್ ಓಟ: ಬ್ರಾಂಕೋ ಟೆಸ್ಟ್ ಮುಗಿಸಿದ ತಕ್ಷಣವೇ ಆಟಗಾರರು ಈ ರನ್ನಿಂಗ್ ಟೆಸ್ಟ್‌ನಲ್ಲಿ ಭಾಗವಹಿಸಬೇಕು.

  • ವಿಧಾನ: ಟ್ರ್ಯಾಕ್‌ನಲ್ಲಿ ಸತತವಾಗಿ 2 ಕಿಲೋಮೀಟರ್ ದೂರವನ್ನು ಓಡಬೇಕು.
  • ಯಾಕಾಗಿ ಈ ವಿಧಾನ: ಬ್ರಾಂಕೊ ಟೆಸ್ಟ್ ಆಟಗಾರನ ತಕ್ಷಣದ ವೇಗ ಮತ್ತು ಚುರುಕುತನವನ್ನು ಪರೀಕ್ಷಿಸಿದರೆ, 2 ಕಿಲೋಮೀಟರ್ ಓಟವು ಆಟಗಾರನ ಒಟ್ಟಾರೆ ಸಾಮರ್ಥ್ಯವನ್ನು ಅಳೆಯುತ್ತದೆ. ಅಂದರೆ, ಸುದೀರ್ಘ ಸಮಯದವರೆಗೆ ಆಟಗಾರನು ದಣಿಯದೆ ಮೈದಾನದಲ್ಲಿ ಹೇಗೆ ಶ್ರಮ ಹಾಕಬಲ್ಲ ಎಂಬುದನ್ನು ಇದು ತೋರಿಸುತ್ತದೆ.
  • ದೂರ: 2 ಕಿಲೋ ಮೀಟರ್ ಓಟ.
  • ಸಮಯದ ಮಿತಿ: ಆಟಗಾರರು 2 ಕಿಲೋ ಮೀಟರ್​ ಓಟದ ದೂರವನ್ನು 9 ರಿಂದ 10 ನಿಮಿಷಗಳ ಒಳಗಾಗಿ ಕ್ರಮಿಸಬೇಕು.

ಹೊಸ ನಿಯಮದ ಪ್ರಮುಖ ಅಂಶಗಳು:

  • ಯಾರಿಗೂ ವಿನಾಯಿತಿ ಇಲ್ಲ: ಹಿರಿಯ ಆಟಗಾರರು ಅಥವಾ ಸ್ಟಾರ್ ಆಟಗಾರರು ಎಂಬ ಕಾರಣಕ್ಕೆ ಯಾರಿಗೂ ಫಿಟ್​ನೆಸ್ ಟೆಸ್ಟ್‌ನಿಂದ ರಿಯಾಯಿತಿ ಸಿಗುವುದಿಲ್ಲ.
  • ತೇರ್ಗಡೆ ಕಡ್ಡಾಯ: ಟೆಸ್ಟ್‌ನಲ್ಲಿ ಫೇಲ್ ಆದ ಆಟಗಾರರನ್ನು ಯಾವುದೇ ಕಾರಣಕ್ಕೂ ಟೀಮ್ ಇಂಡಿಯಾ ಆಯ್ಕೆಗೆ ಪರಿಗಣಿಸುವುದಿಲ್ಲ.
  • ಸರಣಿಗೂ ಮುನ್ನ ಟೆಸ್ಟ್: ಪ್ರತಿ ಅಂತರರಾಷ್ಟ್ರೀಯ ಸರಣಿ ಆರಂಭವಾಗುವ ಮುನ್ನ ಆಟಗಾರರು ಈ ದೈಹಿಕ ಸಾಮರ್ಥ್ಯ ಪರೀಕ್ಷೆಯನ್ನು ಪಾಸ್ ಮಾಡುವುದು ಕಡ್ಡಾಯವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಿಸಿಸಿಐನ ಈ ಕಠಿಣ ಹೆಜ್ಜೆಯು ಟೀಮ್ ಇಂಡಿಯಾವನ್ನು ಜಾಗತಿಕ ಕ್ರಿಕೆಟ್‌ನಲ್ಲಿ ಅತ್ಯಂತ ಫಿಟ್ ಮತ್ತು ಬಲಿಷ್ಠ ತಂಡವನ್ನಾಗಿ ರೂಪಿಸುವ ಸ್ಪಷ್ಟ ಮುನ್ಸೂಚನೆಯಾಗಿದೆ. ಮುಂಬರುವ ಸರಣಿಗಳಲ್ಲಿ ಕೇವಲ ಆಟಗಾರರ ರನ್ ಮತ್ತು ವಿಕೆಟ್‌ಗಳು ಮಾತ್ರವಲ್ಲದೆ, ಅವರ ದೈಹಿಕ ಸಾಮರ್ಥ್ಯವೂ ತಂಡದಲ್ಲಿನ ಸ್ಥಾನವನ್ನು ನಿರ್ಧರಿಸಲಿದೆ.

ಇದನ್ನೂ ಓದಿ: ಬುಮ್ರಾ ಮುಂಬೈ ಇಂಡಿಯನ್ಸ್ ಆಟಗಾರ: ಅಪರೂಪಕ್ಕೊಮ್ಮೆ ಭಾರತದ ಪರ ಆಡ್ತಾರೆ!

ಸ್ಟಾರ್ ಆಟಗಾರರಾಗಿದ್ದರೂ ಫಿಟ್ನೆಸ್ ಇಲ್ಲದಿದ್ದರೆ ಹೊರಗುಳಿಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿರುವುದರಿಂದ, ಪ್ರತಿಯೊಬ್ಬ ಆಟಗಾರನೂ ಈಗ ಮೈದಾನದ ಪ್ರದರ್ಶನದಷ್ಟೇ ತಮ್ಮ ದೈಹಿಕ ಫಿಟ್​ನೆಸ್​ ಮೇಲೂ ತೀವ್ರ ನಿಗಾ ವಹಿಸಬೇಕಾಗಿದೆ.

Source link

Exit mobile version