ರಾಜ್ಯದಲ್ಲಿ ವಿದ್ಯುತ್ ಬಳಕೆ ಭಾರೀ ಪ್ರಮಾಣದಲ್ಲಿ ಏರಿಕೆ: ಕಾರಣ ಇಲ್ಲಿದೆ – Kannada News | Karnataka Power Consumption Soars 20 percent in April: Heatwave and Gas Crisis Drive Surge
ಬೆಂಗಳೂರು, ಏಪ್ರಿಲ್ 30: ಪ್ರಸಕ್ತ ತಿಂಗಳಲ್ಲಿ ರಾಜ್ಯದಲ್ಲಿ ವಿದ್ಯುತ್ ಬಳಕೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಏಪ್ರಿಲ್ 1ರಿಂದ 26ರವರೆಗೆ 9,101 ಮಿಲಿಯನ್ ಯೂನಿಟ್ (MU) ವಿದ್ಯುತ್ ಬಳಕೆಯಾಗಿದೆ. ಕಳೆದ ಐದು ವರ್ಷಗಳಲ್ಲಿ ಇದುವರೆಗೆ ಕಂಡುಬಂದ ಅತ್ಯಧಿಕ ಬಳಕೆ ಇದಾಗಿದೆ ಎನ್ನಲಾಗಿದ್ದು, 2025ರ ಇದೇ ಅವಧಿಗೆ ಹೋಲಿಸಿದರೆ ಶೇ.20ಕ್ಕಿಂತ ಹೆಚ್ಚಿನ ಏರಿಕೆ ಕಂಡುಬಂದಿದೆ. ಹಿಂದಿನ ಕೆಲವು ವರ್ಷಗಳಲ್ಲಿ ಇದೇ ಅವಧಿಯಲ್ಲಿನ ವಿದ್ಯುತ್ ಬಳಕೆ ಬಳಕೆ 7,500ರಿಂದ 8,000 ಮಿಲಿಯನ್ ಯೂನಿಟ್ಗಳ ನಡುವೆಯೇ ಇತ್ತು. ಆದರೆ ಈ ಬಾರಿ ನಾನಾ…