ಬೆಂಗಳೂರು, ಏಪ್ರಿಲ್ 30: ಬೆಂಗಳೂರಿನಲ್ಲಿ ಬುಧವಾರ ಸುರಿದ ಭಾರಿ ಮಳೆಗೆ ಕೆಆರ್ ಸರ್ಕಲ್ ಅಂಡರ್‌ಪಾಸ್ ಮತ್ತೆ ಜಲಾವೃತಗೊಂಡಿದೆ. ಅಂಡರ್‌ಪಾಸ್‌ನಲ್ಲಿ ನೀರು ತುಂಬಿ ನಿಂತಿರುವ ಕಾರಣ ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದಾರೆ. 2023ರ ಮೇಯಲ್ಲಿ ಇದೇ ಅಂಡರ್‌ಪಾಸ್‌ನಲ್ಲಿ ಕಾರು ಮುಳುಗಿ ಯುವತಿಯೊಬ್ಬರು ಸಾವನ್ನಪ್ಪಿದ್ದರು. ದುರಂತ ನಡೆದು ಸುಮಾರು ಎರಡು-ಮೂರು ವರ್ಷಗಳೇ ಕಳೆದರೂ, ಅಂಡರ್‌ಪಾಸ್‌ನಲ್ಲಿ ನೀರಿನ ಹರಿವಿಗೆ ಯಾವುದೇ ಸೂಕ್ತ ವ್ಯವಸ್ಥೆ ಮಾಡಿಲ್ಲ. ರಾತ್ರಿ ಸುರಿದ ಧಾರಾಕಾರ ಮಳೆಗೆ ಅಂಡರ್‌ಪಾಸ್ ಸುಮಾರು 10 ಅಡಿಯಷ್ಟು ನೀರು ತುಂಬಿದೆ. ಬೆಳಗ್ಗೆಯಾದರೂ ನೀರು ಇಳಿದಿಲ್ಲ. ವಿಧಾನಸೌಧದಿಂದ ಕೂಗಳತೆ ದೂರದಲ್ಲಿರುವ, ಸಚಿವರು ಮತ್ತು ಶಾಸಕರು ಪ್ರತಿನಿತ್ಯ ಸಂಚರಿಸುವ ಈ ಮಾರ್ಗದಲ್ಲಿ ಇಂತಹ ಅವ್ಯವಸ್ಥೆ ಮುಂದುವರಿದಿರುವುದು ಆಡಳಿತದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಂಡರ್‌ಪಾಸ್ ಬಂದ್ ಆಗಿರುವುದರಿಂದ ಪೀಕ್ ಅವರ್‌ನಲ್ಲಿ ಕೆಆರ್ ಸರ್ಕಲ್‌ನಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಇದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ವಾಷಿಂಗ್ಟನ್, ಏಪ್ರಿಲ್ 30: ಇರಾನ್(Iran) ಮತ್ತು ಅಮೆರಿಕ-ಇಸ್ರೇಲ್ ಪಡೆಗಳ ನಡುವಿನ ಯುದ್ಧವು ಈಗ ಅತ್ಯಂತ ಅಪಾಯಕಾರಿ ಘಟ್ಟಕ್ಕೆ ತಲುಪಿದೆ. ಅಮೆರಿಕದ ದಿಗ್ಬಂಧನಗಳನ್ನು ತೆಗೆದುಹಾಕುವ ಬದಲಾಗಿ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವ ಮತ್ತು ಪರಮಾಣು ಮಾತುಕತೆಗಳನ್ನು ಮುಂದೂಡುವ ಇರಾನ್‌ನ ಪ್ರಸ್ತಾವನೆಯನ್ನು ಡೊನಾಲ್ಡ್ ಟ್ರಂಪ್ ಕಡಾಖಂಡಿತವಾಗಿ ತಿರಸ್ಕರಿಸಿದ್ದಾರೆ. ಇರಾನ್ ನೌಕಾಪಡೆಯ ಕಮಾಂಡರ್ ರಿಯರ್ ಅಡ್ಮಿರಲ್ ಶಹರಾಮ್ ಇರಾನಿ ಅವರು ಶತ್ರು ಪಡೆಗಳಿಗೆ ತೀವ್ರ ಭೀತಿ ಹುಟ್ಟಿಸುವ ಹೊಸ ಆಯುಧವನ್ನು ಬಳಸುವುದಾಗಿ ಘೋಷಿಸಿದ್ದಾರೆ.
ಅದು ಅವರ ಪಕ್ಕದಲ್ಲೇ ಇದೆ, ಅವರಿಗೆ ಹೃದಯಾಘಾತವಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಅಣಕಿಸುವ ಮೂಲಕ ಅಮೆರಿಕನ್ ಪಡೆಗಳಿಗೆ ಎಚ್ಚರಿಕೆ ನೀಡಿದ್ದಾರೆ. ಅಮೆರಿಕದ ವಿಮಾನವಾಹಕ ನೌಕೆ ‘ಅಬ್ರಹಾಂ ಲಿಂಕನ್’ ವಿರುದ್ಧ ಇರಾನ್ ಕನಿಷ್ಠ ಏಳು ಕ್ಷಿಪಣಿ ಕಾರ್ಯಾಚರಣೆಗಳನ್ನು ನಡೆಸಿದೆ ಎಂದು ಇರಾನಿ ಹೇಳಿಕೊಂಡಿದ್ದಾರೆ.
ಇದರಿಂದಾಗಿ ಅಮೆರಿಕದ ವಿಮಾನಗಳು ಆ ವಾಹಕ ನೌಕೆಯಿಂದ ಕಾರ್ಯಾಚರಣೆ ನಡೆಸದಂತೆ ತಡೆಯಲಾಗಿದೆ ಎಂಬುದು ಅವರ ವಾದ. ಅಮೆರಿಕ ಮತ್ತು ಇಸ್ರೇಲಿ ಗುರಿಗಳ ಮೇಲೆ ಈಗಾಗಲೇ 100ಕ್ಕೂ ಹೆಚ್ಚು ಯಶಸ್ವಿ ಪ್ರತೀಕಾರದ ಅಲೆಗಳನ್ನು ನಡೆಸಿರುವುದಾಗಿ ಇರಾನ್ ತಿಳಿಸಿದೆ.
ವಿಶ್ವದ ಒಟ್ಟು ಕಚ್ಚಾ ತೈಲದ ಶೇಕಡಾ 20 ರಷ್ಟು ಸಾಗುವ ಕಾರ್ಯತಂತ್ರದ ಹಾರ್ಮುಜ್ ಜಲಸಂಧಿಯನ್ನು ಇರಾನ್ ಸಂಪೂರ್ಣವಾಗಿ ಮುಚ್ಚಿದೆ. ಅಮೆರಿಕನ್ನರು ಸೊಮಾಲಿ ಕಡಲ್ಗಳ್ಳರಿಗಿಂತ ಕೆಟ್ಟದಾಗಿ ವರ್ತಿಸುತ್ತಿದ್ದಾರೆ ಮತ್ತು ಇರಾನಿನ ಹಡಗುಗಳನ್ನು ವಶಪಡಿಸಿಕೊಂಡು ಸಿಬ್ಬಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ ಎಂದು ಇರಾನಿ ಟೀಕಿಸಿದ್ದಾರೆ.
ಇತ್ತ ಟ್ರಂಪ್ ಅವರು ಇರಾನ್‌ನ ಶಾಂತಿ ಪ್ರಸ್ತಾವನೆಯನ್ನು ತಿರಸ್ಕರಿಸುತ್ತಾ, ದಿಗ್ಬಂಧನವು ಬಾಂಬ್ ದಾಳಿಗಿಂತ ಹೆಚ್ಚು ಪರಿಣಾಮಕಾರಿ, ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಶಸ್ತ್ರಾಸ್ತ್ರ ಹೊಂದಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಯುದ್ಧದಲ್ಲಿ ಮಡಿದವರ ರಕ್ತದ ಕೊನೆಯ ಹನಿಯವರೆಗೆ ಸೇಡು ತೀರಿಸಿಕೊಳ್ಳುವುದಾಗಿ ಮತ್ತು ಶತ್ರುಗಳಿಗೆ ವಿಷಾದಕರ ಹೊಡೆತ ನೀಡುವುದಾಗಿ ಇರಾನ್ ಪ್ರತಿಜ್ಞೆ ಮಾಡಿದೆ. ಫೆಬ್ರವರಿ 28 ರಂದು ಆರಂಭವಾದ ಈ ಯುದ್ಧವು ಈಗ ಜಾಗತಿಕ ಮಟ್ಟದಲ್ಲಿ ತೈಲ ಬಿಕ್ಕಟ್ಟು ಮತ್ತು ಪ್ರಾದೇಶಿಕ ಅಸ್ಥಿರತೆಗೆ ಕಾರಣವಾಗುವ ಲಕ್ಷಣಗಳನ್ನು ತೋರುತ್ತಿದೆ.
IPL 2026: ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಐಪಿಎಲ್ 2026ರ ಹೈ-ವೋಲ್ಟೇಜ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡವು ಮುಂಬೈ ಇಂಡಿಯನ್ಸ್ (MI) ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಮುಂಬೈ ನೀಡಿದ್ದ 244 ರನ್‌ಗಳ ಬೃಹತ್ ಮೊತ್ತವನ್ನು ಇನ್ನು 8 ಎಸೆತಗಳು ಬಾಕಿ ಇರುವಂತೆಯೇ ಬೆನ್ನಟ್ಟುವ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ಐತಿಹಾಸಿಕ ರನ್ ಚೇಸ್ ದಾಖಲಿಸಿದೆ.
ಈ ಗೆಲುವಿನ ಬಳಿಕ ಮಾತನಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್, “ನಮ್ಮ ಬ್ಯಾಟಿಂಗ್ ಲೈನಪ್ ಮತ್ತು ಪಿಚ್‌ನ ಗುಣಮಟ್ಟ ನೋಡಿದರೆ ಎಂತಹ ಗುರಿಯನ್ನೂ ಬೆನ್ನಟ್ಟಬಹುದು ಎಂಬ ನಂಬಿಕೆ ನನಗಿತ್ತು. ನಮ್ಮ ಆರಂಭಿಕ ಆಟಗಾರರು ಯಾವುದೇ ಭಯವಿಲ್ಲದೆ ಆಡುತ್ತಿದ್ದಾರೆ. ಅವರಲ್ಲಿ ಅದೆಷ್ಟು ವೈವಿಧ್ಯಮಯ ಶಾಟ್‌ಗಳಿವೆ ಎಂದರೆ, ಅವರಿಗೆ ಬೌಲಿಂಗ್ ಮಾಡುವ ಪರಿಸ್ಥಿತಿ ನನಗೆ ಬರದಿರುವುದಕ್ಕೆ ನಾನು ದೇವರಿಗೆ ಧನ್ಯವಾದ ಅರ್ಪಿಸುತ್ತೇನೆ!” ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಯುವ ಆಟಗಾರರ ಬೆಂಬಲ:
ತಂಡದ ಯುವ ಆಟಗಾರರಾದ ಸಲಿಲ್ ಅರೋರಾ ಅವರಂತಹ ಪ್ರತಿಭೆಗಳ ಬಗ್ಗೆ ಮಾತನಾಡುತ್ತಾ, ಕೋಚಿಂಗ್ ಸ್ಟಾಫ್ ಯುವಕರಲ್ಲಿ ತುಂಬಿರುವ ‘ನಿರ್ಭೀತ ಮನೋಭಾವ’ವೇ ತಂಡದ ಯಶಸ್ಸಿನ ಗುಟ್ಟು ಎಂದಿದ್ದಾರೆ. “ಈ ಯುವ ಆಟಗಾರರಿಗೆ ತಾವು ಎಷ್ಟು ಸಮರ್ಥರು ಎಂಬುದು ಅವರಿಗೇ ತಿಳಿದಿಲ್ಲ, ಅದು ಅವರ ದೊಡ್ಡ ಶಕ್ತಿ,” ಎಂದು ಕಮ್ಮಿನ್ಸ್ ಅಭಿಪ್ರಾಯಪಟ್ಟಿದ್ದಾರೆ.
ಬೌಲರ್‌ಗಳಿಗೆ ಹೊಸ ಸವಾಲು:
ಹೆಚ್ಚಿನ ರನ್ ಬಿಟ್ಟುಕೊಡುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಮ್ಮಿನ್ಸ್, “ಖಂಡಿತವಾಗಿಯೂ ಚಿಂತೆಯಾಗುತ್ತದೆ. ಆದರೆ ನಾವು ವಾಸ್ತವವನ್ನು ಒಪ್ಪಿಕೊಳ್ಳಬೇಕು. ಐದು ವರ್ಷಗಳ ಹಿಂದಿನ ಐಪಿಎಲ್‌ಗೂ ಈಗಿನದ್ದಕ್ಕೂ ದೊಡ್ಡ ವ್ಯತ್ಯಾಸವಿದೆ. ಹಿಂದೆ 200 ರನ್ ಬೆನ್ನಟ್ಟುವುದು ಕಷ್ಟವಾಗಿತ್ತು, ಆದರೆ ಈಗ ಓವರ್‌ಗೆ 12 ರನ್ ಬೇಕಿದ್ದರೂ ಬ್ಯಾಟರ್‌ಗಳು ಅದನ್ನು ಸುಲಭವಾಗಿ ಚೇಸ್ ಮಾಡುತ್ತಿದ್ದಾರೆ. ಹೀಗಾಗಿ ಬೌಲರ್‌ಗಳು ತಮ್ಮ ನಿರೀಕ್ಷೆಗಳನ್ನು ಬದಲಿಸಿಕೊಳ್ಳಬೇಕಿದೆ,” ಎಂದಿದ್ದಾರೆ.
ಬೌಲರ್‌ಗಳಿಗೆ ಎದುರಾಗಿರುವ ಇಂತಹ ಸವಾಲುಗಳ ನಡುವೆ ಈಶಾನ್ ಮಾಲಿಂಗ ಅವರ ಬೌಲಿಂಗ್ ದಾಳಿಯೇ ನಮ್ಮ ಗೆಲುವಿಗೆ ಕಾರಣ. ಏಕೆಂದರೆ ಹೈ ಸ್ಕೋರಿಂಗ್ ಪಂದ್ಯದಲ್ಲಿ ಈಶಾನ್ 4 ಓವರ್‌ಗಳಲ್ಲಿ ನೀಡಿದ್ದು ಕೇವಲ 29 ರನ್ ಮಾತ್ರ. ಹೀಗಾಗಿ ನಮ್ಮ ಗೆಲುವಿಗೆ ಈಶಾನ್ ಮಾಲಿಂಗ ಕಾರಣ ಎಂದೇ ಹೇಳಬೇಕು.
ಕೊನೆಯಲ್ಲಿ ನೀವು ಹಾಕುವ ಒಂದು ಅತ್ಯುತ್ತಮ ಯಾರ್ಕರ್ ಪಂದ್ಯದ ಗತಿಯನ್ನೇ ಬದಲಿಸಬಹುದು. ಈಶಾನ್ ಮಾಲಿಂಗ ಅವರಂತಹ ಬೌಲರ್‌ಗಳು ನಮ್ಮ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಪ್ಯಾಟ್ ಕಮಿನ್ಸ್, ಶ್ಲಾಘಿಸಿದ್ದಾರೆ.
ಒಟ್ಟಾರೆಯಾಗಿ, ಬ್ಯಾಟಿಂಗ್ ಸ್ನೇಹಿ ಪಿಚ್‌ಗಳ ನಡುವೆಯೂ ಈಶಾನ್ ಮಾಲಿಂಗ 4 ಓವರ್‌ಗಳಲ್ಲಿ ಕೇವಲ 29 ರನ್ ಮಾತ್ರ ನೀಡಿದ್ದಾರೆ. ಪರಿಣಾಮ 250 ರ ಗಡಿದಾಟಬೇಕಿದ್ದ ಮುಂಬೈ ಇಂಡಿಯನ್ಸ್ ಸ್ಕೋರ್ 243 ರಲ್ಲೇ ನಿಂತಿದೆ. ಈ ಗುರಿ ಬೆನ್ನತ್ತಿ ಸನ್‌ರೈಸರ್ಸ್ ಹೈದರಾಬಾದ್ 6 ವಿಕೆಟ್ ಗಳ ವಿಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಸನ್‌ರೈಸರ್ಸ್ ಹೈದರಾಬಾದ್ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.
ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ್ ವಿವಾಹ ಆಗಿ ಹಾಯಾಗಿ ಜೀವನ ನಡೆಸುತ್ತಿದ್ದಾರೆ. ಸಮಂತಾ ವಿಚ್ಛೇದನದ ಬಳಿಕ ನಾಗ ಚೈತನ್ಯ ಬಾಳಲ್ಲಿ ಶೋಭಿತಾ ಬಂದರು. ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಚ್ಯಾಟ್ ಮಾಡಿಕೊಂಡರು. ಆ ಬಳಿಕ ಎದುರು ಭೇಟಿ ಆಗಿ, ಗೆಳೆತನ ಮೂಡಿ, ಅದು ಪ್ರೀತಿಗೆ ತಿರುಗಿ ಈಗ ವಿವಾಹ ಆಗಿದ್ದಾರೆ. ಈಗ ನಾಗಚೈತನ್ಯ ಅವರು ಶೋಭಿತಾ ಬಗ್ಗೆ ಮಾತನಾಡಿದ್ದಾರೆ. ಶೋಭಿತಾ ಅವರನ್ನು ನೋಡಿದರೆ ಬೇಸರವಾಗುತ್ತದೆ ಎಂದಿದ್ದಾರೆ.
ಸಮಂತಾ ಜೊತೆಗಿನ ವಿಚ್ಛೇದನದ ಬಳಿಕ ಕೆಲ ಸಮಯ ನಾಗ ಚೈತನ್ಯ ಒಂಟಿಯಾಗೇ ಇದ್ದರು. ಈ ಒಂಟಿತನವನ್ನು ದೂರ ಮಾಡಿದ್ದು ಶೋಭಿತಾ. ಹಲವು ಸಮಯ ಇಬ್ಬರೂ ಒಟ್ಟಿಗೆ ಸುತ್ತಾಡಿದರು. ಆ ಬಳಿಕ ಮದುವೆ ಆಗುವ ನಿರ್ಧಾರಕ್ಕೆ ಬಂದರು. ಈ ಬೆನ್ನಲ್ಲೇ ಶೋಭಿತಾ ಸಾಕಷ್ಟು ಹೇಟ್ ಕಮೆಂಟ್ ಅನುಭವಿಸಬೇಕಾಯಿತು. ‘ನಾಗ ಚೈತನ್ಯ ಹಾಗೂ ಸಮಂತಾ ದೂರ ಆಗಲು ನೀವು ಕಾರಣ’ ಎಂದು ಅನೇಕರು ಶೋಭಿತಾ ಮೇಲೆ ಆರೋಪ ಹೊರಿಸಿದರು.
#NagaChaitanya speaks from the heart about his second marriage ❤️
I genuinely feel bad for her. Sobhita Dhulipala has no fault here. We met naturally on Instagram and built something real over time.
ಈ ವಿಷಯವಾಗಿ ನಾಗ ಚೈತನ್ಯ ಅವರು ಓಪನ್ ಆಗಿ ಮಾತನಾಡಿದ್ದು ಕಡಿಮೆ. ಈಗ ಅವರು ಈ ಬಗ್ಗೆ ಮೌನ ಮುರಿದಿದ್ದಾರೆ. ಅವರಿಗೆ ಶೋಭಿತಾ ಅವರ ಪರಿಸ್ಥಿತಿ ನೋಡಿ ಸಂಕಟವಾಗುತ್ತಿದೆ. ಶೋಭಿತಾ ತಮ್ಮನ್ನು ಅರ್ಥೈಸಿಕೊಳ್ಳುತ್ತಿರುವ ರೀತಿ ನೋಡಿ ಖುಷಿ ಕೂಡ ಇದೆ.
‘ಅವಳನ್ನು ನೋಡಿದ್ರೆ ಬೇಸರವಾಗುತ್ತದೆ. ಇದರಲ್ಲಿ ಅವಳ ತಪ್ಪೇನು ಇಲ್ಲ. ಸೋಶಿಯಲ್ ಮೀಡಿಯಾ ಚ್ಯಾಟ್ ಮೂಲಕ ಇಬ್ಬರೂ ಪರಿಚಯ ಆಗಿ, ಹಂತ ಹಂತವಾಗಿ ನಮ್ಮ ಸಂಬಂಧ ಬೆಳೆಯಿತು. ನನ್ನ ಹಿಂದಿನ ಜೀವನಕ್ಕೂ ಅವಳಿಗೂ ಯಾವುದೇ ಸಂಬಂಧ ಇಲ್ಲ. ಅವಳಿಗೆ ಸಾಕಷ್ಟು ಧನ್ಯವಾದ ಹೇಳಬೇಕು. ಪ್ರಬುದ್ಧವಾಗಿ ವರ್ತಿಸಿದ್ದಾರೆ. ಅವರು ನಿಜವಾದ ಹೀರೋ’ ಎಂದಿದ್ದಾರೆ ನಾಗ ಚೈತನ್ಯ.
ಬೆಂಗಳೂರು (ಏ. 30): ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ (Riyan Parag) ಡ್ರೆಸ್ಸಿಂಗ್ ರೂಮ್‌ನಲ್ಲಿ ವಾಪಿಂಗ್ ಮಾಡುತ್ತಿರುವುದನ್ನು ತೋರಿಸುವ ವಿಡಿಯೋ ವೈರಲ್ ಆದ ನಂತರ, ಕ್ರಿಕೆಟ್ ಜಗತ್ತಿನ ಅನುಭವಿಗಳು ಇದರ ಬಗ್ಗೆ ಪ್ರತಿಕ್ರಿಯಿಸಲು ಪ್ರಾರಂಭಿಸಿದ್ದಾರೆ. ಈ ವಿಷಯಕ್ಕೆ ಪ್ರತಿಕ್ರಿಯಿಸಿದ ಮಾಜಿ ಅಂತರರಾಷ್ಟ್ರೀಯ ಅಂಪೈರ್ ಅನಿಲ್ ಚೌಧರಿ, ಆಟಗಾರರಿಗೆ ಶಿಸ್ತು ಮತ್ತು ಕ್ಯಾಮೆರಾಗಳ ಉಪಸ್ಥಿತಿಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಶೌಚಾಲಯ ಹೊರತುಪಡಿಸಿ ಎಲ್ಲೆಡೆ ಕ್ಯಾಮೆರಾಗಳಿವೆ: ಅನಿಲ್ ಚೌಧರಿ
ಈ ಘಟನೆಯ ಹಿನ್ನೆಲೆಯಲ್ಲಿ ಆಟಗಾರರು ಜಾಗರೂಕರಾಗಿರಬೇಕೆಂದು ಅನಿಲ್ ಚೌಧರಿ ಸಲಹೆ ನೀಡಿದರು. ಇಂದು ತಂತ್ರಜ್ಞಾನವು ಎಷ್ಟು ಮುಂದುವರೆದಿದೆ ಎಂದರೆ ಕ್ಯಾಮೆರಾಗಳು ಮೈದಾನದಿಂದ ಡ್ರೆಸ್ಸಿಂಗ್ ಕೋಣೆಯವರೆಗೆ ಎಲ್ಲೆಡೆ ಇರುತ್ತವೆ. ಹಾಸ್ಯಮಯ ಆದರೆ ಗಂಭೀರವಾದ ಸ್ವರದಲ್ಲಿ, ಚೌಧರಿ, “ಇತ್ತೀಚಿನ ದಿನಗಳಲ್ಲಿ ಕ್ಯಾಮೆರಾಗಳು ಎಲ್ಲಿ ಬೇಕಾದರೂ ಹೋಗಬಹುದು, ಆದ್ದರಿಂದ ಆಟಗಾರರು ಬಹಳ ಜಾಗರೂಕರಾಗಿರಬೇಕು. ಇವರು ಚಿಕ್ಕ ಹುಡುಗರು, ಶೌಚಾಲಯವನ್ನು ಹೊರತುಪಡಿಸಿ ಬೇರೆಲ್ಲಿ ಬೇಕಾದರೂ ಅವರನ್ನು ಕ್ಯಾಮೆರಾ ಮೂಲಕ ಸೆರೆ ಹಿಡಿಯಬಹುದು ಎಂದು ಅವರಿಗೆ ತಿಳಿದಿರುವುದಿಲ್ಲ. ಆದ್ದರಿಂದ, ಹುಡುಗರು ಶಿಸ್ತಿನ ಬಗ್ಗೆ ಜಾಗರೂಕರಾಗಿರಬೇಕು” ಎಂದು ಹೇಳಿದರು.
ಕಾನೂನು ಕ್ರಮದ ಬಗ್ಗೆ ಕೇಳಿದಾಗ, ಚೌಧರಿ ಇದನ್ನು ಸಂಪೂರ್ಣವಾಗಿ ಆಡಳಿತಾತ್ಮಕ ವಿಷಯ ಎಂದು ವಿವರಿಸಿದರು. ಕಾನೂನು ಪರಿಣಾಮಗಳ ಬಗ್ಗೆ ತನಗೆ ತಿಳಿದಿಲ್ಲ, ಆದರೆ ಯಾವುದೇ ನಿರ್ಧಾರವನ್ನು ಸರ್ಕಾರಿ ನಿಯಮಗಳು ಮತ್ತು ನಿಬಂಧನೆಗಳ ಆಧಾರದ ಮೇಲೆ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು. ಯಾವುದೇ ಕ್ರಮವು ಅಸ್ತಿತ್ವದಲ್ಲಿರುವ ನೀತಿಗಳು ಮತ್ತು ಮಾರ್ಗಸೂಚಿಗಳನ್ನು ಅವಲಂಬಿಸಿರುತ್ತದೆ ಎಂದು ಅವರು ಸೂಚಿಸಿದರು.
ಅನಿಲ್ ಚೌಧರಿ ಅವರು ಕ್ರಿಕೆಟ್ ಪ್ರಸಾರದ ಪ್ರಾಥಮಿಕ ಉದ್ದೇಶ ಆಟವನ್ನು ಆನಂದಿಸುವುದಾಗಿರಬೇಕು, ಮೈದಾನದ ಹೊರಗೆ ವಿವಾದಗಳಿಗೆ ಗಮನ ಕೊಡಬೇಡಿ ಎಂದು ಒತ್ತಿ ಹೇಳಿದರು. ಟಿವಿ ಆಟದಿಂದ ಗಮನವನ್ನು ಬೇರೆಡೆಗೆ ಸೆಳೆಯುವ ವಿವಾದಗಳ ಮೇಲೆ ಕೇಂದ್ರೀಕರಿಸುವ ಬದಲು ಆಟದ ಸಕಾರಾತ್ಮಕ ಅಂಶಗಳ ಮೇಲೆ ಕೇಂದ್ರೀಕರಿಸಬೇಕು ಎಂಬುದು ಅವರ ಮಾತು.
ಮಂಗಳವಾರ ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ಪಂದ್ಯ ನಡೆಯುತ್ತಿರುವ ಸಂದರ್ಭ ನೇರ ಪ್ರಸಾರದ ಸಮಯದಲ್ಲಿ ಪರಾಗ್ ಡ್ರೆಸ್ಸಿಂಗ್ ಕೋಣೆಯೊಳಗೆ (ಇ-ಸಿಗರೇಟ್) ವೇಪ್ ಮಾಡುತ್ತಿರುವುದು ಕಂಡುಬಂದಿದೆ. ಈ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಬಿಸಿಸಿಐ ಮತ್ತು ಕ್ರೀಡಾ ಜಗತ್ತಿನಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ರಾಜಸ್ಥಾನ್ ರಾಯಲ್ಸ್ ತಂಡದ ಇನ್ನಿಂಗ್ಸ್‌ನ 16 ನೇ ಓವರ್‌ನಲ್ಲಿ ಈ ಘಟನೆ ನಡೆದಿದ್ದು, ಡ್ರೆಸ್ಸಿಂಗ್ ರೂಮ್ ದೃಶ್ಯವನ್ನು ಲೈವ್ ಕ್ಯಾಮೆರಾ ಸೆರೆಹಿಡಿದಿದೆ. ರಿಯಾನ್ ಪರಾಗ್ ಸಹ ಆಟಗಾರರಾದ ಧ್ರುವ್ ಜುರೆಲ್ ಮತ್ತು ಯಶಸ್ವಿ ಜೈಸ್ವಾಲ್ ಅವರ ಸಮ್ಮುಖದಲ್ಲಿ ವೇಪ್ ಬಳಸುತ್ತಿರುವುದನ್ನು ದೃಶ್ಯಗಳು ತೋರಿಸಿವೆ. ನಿಯಮಗಳ ಪ್ರಕಾರ, ಕ್ರೀಡಾಂಗಣದ ಆವರಣ ಮತ್ತು ಡ್ರೆಸ್ಸಿಂಗ್ ರೂಮ್‌ಗಳಲ್ಲಿ ಧೂಮಪಾನವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇದಲ್ಲದೆ, ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ ಕಾಯ್ದೆ (PECA) 2019 ರ ಅಡಿಯಲ್ಲಿ ಭಾರತದಲ್ಲಿ ವೇಪ್‌ಗಳ ಉತ್ಪಾದನೆ, ಮಾರಾಟ ಮತ್ತು ಬಳಕೆ ಕಾನೂನುಬಾಹಿರವಾಗಿದ್ದು, ಉಲ್ಲಂಘನೆಗಳಿಗೆ ಭಾರೀ ದಂಡ ಮತ್ತು ಜೈಲು ಶಿಕ್ಷೆ ವಿಧಿಸಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಏಪ್ರಿಲ್ 30: ನಗರದಲ್ಲಿ ಸುರಿದ ಭಾರೀ ಮಳೆಯ ಪರಿಣಾಮ ಬೌರಿಂಗ್ ಆಸ್ಪತ್ರೆಯ ತಡೆಗೋಡೆ ಕುಸಿದು ಏಳು ಜನರು ಮೃತಪಟ್ಟಿರುವ ದಾರುಣ ಘಟನೆ ನಡೆದಿದ್ದು, ಸುಮಾರು 15 ಜನರು ಗಾಯಗೊಂಡಿದ್ದಾರೆ. ಆಸ್ಪತ್ರೆ ಆವರಣದ ಖಾಲಿ ಜಾಗದಲ್ಲಿ ಮಣ್ಣನ್ನು ಅಗೆದು ಗೋಡೆಯ ಅಂಚಿಗೆ ಸುರಿದಿದ್ದು, ಅಲ್ಲದೆ ಗೋಡೆಯ ಸುತ್ತಲೂ ಗಿಡಗಳನ್ನು ನೆಟ್ಟಿರುವುದು ಗೋಡೆಯನ್ನು ದುರ್ಬಲಗೊಳಿಸಿತ್ತು ಎಂದು ತಿಳಿದುಬಂದಿದೆ. ಇದರ ಪರಿಣಾಮವಾಗಿ, ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದ ನೀರು ಗೋಡೆಯ ಮೇಲೆ ಒತ್ತಡ ಹೇರಿದ್ದರಿಂದ ಗೋಡೆ ಕುಸಿದಿದೆ. ಗೋಡೆಯ ಪಕ್ಕದಲ್ಲಿ ಆಶ್ರಯ ಪಡೆದಿದ್ದ ಜನರು ಮತ್ತು ರಸ್ತೆಯಲ್ಲಿ ವ್ಯಾಪಾರ ಮಾಡುತ್ತಿದ್ದ ಕೆಲವು ವ್ಯಾಪಾರಿಗಳು ಈ ದುರಂತಕ್ಕೆ ಬಲಿಯಾಗಿದ್ದಾರೆ. ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು (ಯುಡಿಆರ್) ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.
IPL 2026: ಐಪಿಎಲ್ 2026ರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ತಂಡದ ಆಟಗಾರರು ತೋಳಿಗೆ ಕಪ್ಪು ಪಟ್ಟಿ (Black Armband) ಧರಿಸಿ ಮೈದಾನಕ್ಕಿಳಿಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇದರ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ಕಪ್ಪು ಪಟ್ಟಿ ಧರಿಸಲು ಕಾರಣವೇನು? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತ್ತು.
ಕಪ್ಪು ಪಟ್ಟಿ ಧರಿಸಲು ಕಾರಣವೇನು?
ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಬೆಂಬಲ ಸಿಬ್ಬಂದಿಯೊಬ್ಬರ ಮಗಳು ಅಕಾಲಿಕವಾಗಿ ನಿಧನರಾಗಿದ್ದಾರೆ. ಈ ದುಃಖದ ಸಮಯದಲ್ಲಿ ತಮ್ಮ ಸಿಬ್ಬಂದಿಯ ಕುಟುಂಬದೊಂದಿಗೆ ನಾವಿದ್ದೇವೆ ಎಂಬ ಒಗ್ಗಟ್ಟನ್ನು ಪ್ರದರ್ಶಿಸಲು ಫ್ರಾಂಚೈಸಿಯು ಈ ನಿರ್ಧಾರ ತೆಗೆದುಕೊಂಡಿದೆ.
ತಂಡದ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಎಂಐ ಮ್ಯಾನೇಜ್‌ಮೆಂಟ್, “ನಮ್ಮ ಬೆಂಬಲ ಸಿಬ್ಬಂದಿಯ ಮಗಳ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ, ಅವರ ಕುಟುಂಬದ ಪರವಾಗಿ ಮತ್ತು ಅಗಲಿದ ಆತ್ಮದ ಸ್ಮರಣಾರ್ಥವಾಗಿ ಇಂದು ಮುಂಬೈ ಇಂಡಿಯನ್ಸ್ ಆಟಗಾರರು ಕಪ್ಪು ಪಟ್ಟಿ ಧರಿಸುತ್ತಿದ್ದಾರೆ” ಎಂದು ತಿಳಿಸಿದೆ.
ಒಗ್ಗಟ್ಟಿನ ಸಂದೇಶ:
ಮುಂಬೈ ಇಂಡಿಯನ್ಸ್ ತಂಡವು ತನ್ನ ಸಿಬ್ಬಂದಿ ಮತ್ತು ಆಟಗಾರರನ್ನು ಒಂದು ‘ದೊಡ್ಡ ಕುಟುಂಬ’ (One Family) ಎಂದು ಪರಿಗಣಿಸುತ್ತದೆ. ಮೈದಾನದಲ್ಲಿ ಎಷ್ಟೇ ಒತ್ತಡದ ಪಂದ್ಯವಿದ್ದರೂ, ಮೈದಾನದ ಹೊರಗಿನ ನೋವಿನಲ್ಲಿ ಭಾಗಿಯಾಗುವ ಮೂಲಕ ತಂಡವು ಮಾನವೀಯತೆ ಮೆರೆದಿದೆ. ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಈ ನಡೆಯನ್ನು ಶ್ಲಾಘಿಸಿದ್ದು, ಶೋಕತಪ್ತ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಪಂದ್ಯದ ಮುಖ್ಯಾಂಶ:
ಈ ಭಾವುಕ ಕ್ಷಣಗಳ ನಡುವೆಯೂ ನಡೆದ ಪಂದ್ಯದಲ್ಲಿ ರಯಾನ್ ರಿಕೆಲ್ಟನ್ ಅವರ ಸ್ಫೋಟಕ ಶತಕದ (123*) ನೆರವಿನಿಂದ ಮುಂಬೈ ಇಂಡಿಯನ್ಸ್ 243 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು. ಆದರೆ, ಸನ್‌ರೈಸರ್ಸ್ ಹೈದರಾಬಾದ್ ತಂಡವು ಗುರಿ ಬೆನ್ನಟ್ಟಿ ,6 ವಿಕೆಟ್ ಗಳ ಜಯ ಸಾಧಿಸಿದೆ.
ಬೆಂಗಳೂರು, ಏಪ್ರಿಲ್ 30: ತೀವ್ರ ಸೆಕೆಯಿಂದ ಬೆಂದು ಹೋಗಿದ್ದ ನಗರಕ್ಕೆ ನಿನ್ನೆ ವರುಣ ತಂಪೆರೆದಿದ್ದಾನೆ ಎಂದು ಖುಷಿ ಪಡಬೇಕೋ ಅಥವಾ ಮಳೆಯ ಅಬ್ಬರಕ್ಕೆ ಉಂಟಾಗಿರುವ ಸಾಲು ಸಾಲು ಅನಾಹುತಗಳಿಗೆ ದುಃಖ ಪಡಬೇಕೋ ಎನ್ನುವ ಸ್ಥಿತಿಯಲ್ಲಿ ಸದ್ಯ ರಾಜ್ಯ ರಾಜಧಾನಿ ಬೆಂಗಳೂರಿನ ನಿವಾಸಿಗಳಿದ್ದಾರೆ. ಗಾಳಿ ಮತ್ತು ಗುಡುಗಿನ ಸಹಿತ ಸುರಿದ ಭಾರಿ ಆಲಿಕಲ್ಲು ಮಳೆಗೆ ಸಾಲು ಸಾಲು ಅನಾಹುತಗಳೇ ನಡೆದಿದ್ದು, ಪ್ರತ್ಯೇಕ ಘಟನೆಗಳಲ್ಲಿ ಒಟ್ಟು 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ತೀವ್ರ ಗಾಳಿಗೆ ನಗರದ ಹಲವೆಡೆ ಮರಗಳು ಧರೆಗುರುಳಿದ್ದರೆ, ಅಂಡರ್ ಪಾಸ್ ಸೇರದಂತೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿರುವ ಕಾರಣ ಸಂಚಾರ ಸಮಸ್ಯೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹೀಗಾಗಿ ಬೆಂಗಳೂರು ನಗರ ಸಂಚಾರ ಪೊಲೀಸರು ಹಂಚಿಕೊಂಡಿರುವ ಕೆಲ ಮಹತ್ವದ ಮಾಹಿತಿ ಇಲ್ಲಿದೆ.
ಅಂಡರ್‌ಪಾಸ್‌ನಲ್ಲಿ ನೀರು ನಿಂತು ಸಂಚಾರಕ್ಕೆ ಸಮಸ್ಯೆ
“ಸಂಚಾರಸಲಹೆ”
ಲೌರಿ ಅಂಡರ್‌ಪಾಸ್‌ನಲ್ಲಿ ಮಳೆ ನೀರು ನಿಂತಿರುವುದರಿಂದ ಮಹದೇವಪುರ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.
“Traffic advisory”
Due to water lagging at Lowry underpass towards Mahadevpura is having slow-moving traffic.@GBA_officepic.twitter.com/L4pfIMWqOO
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) April 30, 2026
ನಿನ್ನೆಯ ಮಳೆ ಅಬ್ಬರಕ್ಕೆ ಕೆಲ ಪ್ರದೇಶಗಳಲ್ಲಿ ತುಂಬಿದ್ದ ನೀರು ಹಾಗೆಯೇ ಇಂದು ಕೂಡ ಉಳಿದುಕೊಂಡಿದೆ. ಲೌರಿ ಅಂಡರ್‌ಪಾಸ್‌ನಲ್ಲಿ ಮಳೆ ನೀರು ನಿಂತಿರುವುದರಿಂದ ಸುಗಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಮಹದೇವಪುರ ಕಡೆಗೆ ನಿಧಾನಗತಿಯ ಸಂಚಾರವಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಕೆ.ಆರ್.ಸರ್ಕಲ್ ಅಂಡರ್ ಪಾಸ್ ಕೂಡ ಜಲಾವೃತವಾಗಿದ್ದು, ಬ್ಯಾರಿಕೇಡ್ ಹಾಕಿ ಪೊಲೀಸರು ಅಂಡರ್ ಪಾಸ್ ಬಂದ್ ಮಾಡಿದ್ದಾರೆ.
“ಸಂಚಾರಸಲಹೆ”
ಭಾಷ್ಯಂ ವೃತ್ತದ ಬಳಿ ಮರ ಬಿದ್ದಿರುವುದರಿಂದ ಕಾವೇರಿ ಥಿಯೇಟರ್ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.
“Traffic advisory”
Due toTree Fall at, Bhasyam Junction towards Cauvery Theatre junction is having slow-moving traffic.@GBA_officepic.twitter.com/Apu0rOOSQq
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) April 30, 2026
ಗಾಳಿ ಮಳೆಯ ಅಬ್ಬರಕ್ಕೆ ನಗರದ ವಿವಿಧೆಡೆ ಹಲವು ಮರಗಳು ಮತ್ತು ರೆಂಬೆಗಳು ಧರೆಗೆ ಉರುಳಿವೆ. ರಾತ್ರಿಯಿಂದಲೇ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಇವುಗಳ ತೆರವು ಮಾಡಿ, ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆಯಾದರೂ ಕೆಲವೆಡೆ ತೆರವು ಕಾರ್ಯ ಇನ್ನೂ ಮುಂದುವರಿದಿದೆ. ಭಾಷ್ಯಂ ವೃತ್ತದ ಬಳಿ ಮರ ಬಿದ್ದಿರುವುದರಿಂದ ಕಾವೇರಿ ಥಿಯೇಟರ್ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರ ಕಂಡುಬಂದಿದೆ. ಬಸವನಗುಡಿಯಲ್ಲಿಯೂ ಬೃಹತ್ ಮರ ಬಿದ್ದು ಅವಾಂತರ ಸೃಷ್ಟಿಯಾಗಿದೆ. ವಿದ್ಯಾಪೀಠ ಸರ್ಕಲ್-ಬಸವನಗುಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಡ್ಡಲಾಗಿ ಬೃಹತ್ ಮರ ಬಿದ್ದಿದ್ದು, ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ. ಸ್ಥಳಕ್ಕೆ ಬಾರದ ಜಿಬಿಎ ಅಧಿಕಾರಿಗಳ ವಿರುದ್ಧ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆಯಲ್ಲೇ ಕೆಟ್ಟುನಿಂತ ವಾಹನ
“ಸಂಚಾರ ಸಲಹೆ”
ಬೊಮ್ಮನಹಳ್ಳಿ ಜಂಕ್ಷನ್ ಬಳಿ ವಾಹನ ಕೆಟ್ಟು ನಿಂತಿರುವುದರಿಂದ ರೂಪೇನ ಅಗ್ರಹಾರ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.
“Traffic advisory”
Due to a vehicle breakdown near Bommanahalli Junction towards Rupena Agrahara, is having slow-moving traffic. pic.twitter.com/9yKv3cPfSz
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) April 30, 2026
ಬೊಮ್ಮನಹಳ್ಳಿ ಜಂಕ್ಷನ್ ಬಳಿ ರಸ್ತೆಯಲ್ಲಿವೇ ವಾಹನ ಕೆಟ್ಟು ನಿಂತಿರುವುದರಿಂದ ರೂಪೇನ ಅಗ್ರಹಾರ ಕಡೆಗೆ ನಿಧಾನಗತಿಯ ಸಂಚಾರವಿರೋದಾಗಿ ಎಕ್ಸ್ ಪೋಸ್ಟ್ ಮೂಲಕ ಬೆಂಗಳೂರು ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ.
90ರ ದಶಕದಲ್ಲಿ ಬಾಲಿವುಡ್‌ನ ಟಾಪ್ ನಟಿಯಾಗಿ ಮೆರೆದವರು ಮಮತಾ ಕುಲಕರ್ಣಿ. ಸಲ್ಮಾನ್ ಖಾನ್, ಶಾರುಖ್ ಖಾನ್ ಅವರಂತಹ ಸ್ಟಾರ್ ನಟರ ಜೊತೆ ಸ್ಕ್ರೀನ್ ಹಂಚಿಕೊಂಡಿದ್ದ ಈ ನಟಿ, ತಮ್ಮ ಸೌಂದರ್ಯ ಮತ್ತು ಧೈರ್ಯವಂತ ನಿರ್ಧಾರಗಳಿಂದಲೇ ಸುದ್ದಿಯಲ್ಲಿದ್ದರು. ಆದರೆ, ಉತ್ತುಂಗದಲ್ಲಿದ್ದಾಗಲೇ ಚಿತ್ರರಂಗದಿಂದ ಮಾಯವಾದ ಮಮತಾ, ದಶಕಗಳ ಕಾಲ ವಿದೇಶದಲ್ಲಿ ನೆಲೆಸಿದ್ದರು.
ಅಧ್ಯಾತ್ಮದ ಹಾದಿ ಮತ್ತು ಮಹಾಕುಂಭ ಮೇಳದ ಸಂಚಲನ: 2025ರಲ್ಲಿ ಭಾರತಕ್ಕೆ ಮರಳಿದ ಮಮತಾ ಕುಲಕರ್ಣಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದು ತಮ್ಮ ಬದಲಾದ ಜೀವನಶೈಲಿಯಿಂದ. ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ಕಾಣಿಸಿಕೊಂಡ ಅವರು, ಅಧ್ಯಾತ್ಮದ ಹಾದಿ ಹಿಡಿದು ‘ಕಿನ್ನರ್ ಅಖಾಡ’ದ ಮಹಾಮಂಡಲೇಶ್ವರಿಯಾಗಿ ನೇಮಕಗೊಂಡರು. ತಮ್ಮ ಹಳೆಯ ಜೀವನಕ್ಕೆ ವಿದಾಯ ಹೇಳಿ ‘ಶ್ರೀ ಯಮಯಿ ಮಮತಾ ನಂದ ಗಿರಿ’ ಎಂಬ ಹೊಸ ಹೆಸರನ್ನು ಪಡೆದರು. ಆದರೆ, ಈ ಆಧ್ಯಾತ್ಮಿಕ ಪಯಣ ಸುಗಮವಾಗಿರಲಿಲ್ಲ; ಭೂಗತ ಲೋಕದೊಂದಿಗಿನ ಹಳೆಯ ಕೊಂಡಿಗಳ ಆರೋಪದ ಮೇಲೆ ಅವರನ್ನು ಅಖಾಡದಿಂದ ಉಚ್ಚಾಟಿಸಲಾಯಿತು.
ವಿವಾದಗಳ ಸುಳಿ ಮತ್ತು ಡ್ರಗ್ಸ್ ಪ್ರಕರಣ: ಮಮತಾ ಅವರ ಜೀವನ ತಿರುವು ಪಡೆದಿದ್ದು 2015ರಲ್ಲಿ. 2000 ಕೋಟಿ ರೂಪಾಯಿಗಳ ಬೃಹತ್ ಅಂತರಾಷ್ಟ್ರೀಯ ಡ್ರಗ್ಸ್ ಜಾಲದಲ್ಲಿ ಅವರ ಹೆಸರು ಕೇಳಿಬಂದಿತ್ತು. ಅವರ ಪಾಲುದಾರ ವಿಕ್ಕಿ ಗೋಸ್ವಾಮಿ ಈ ಪ್ರಕರಣದ ಕಿಂಗ್‌ಪಿನ್ ಎಂದು ಆರೋಪಿಸಲಾಗಿತ್ತು. ಆದರೆ, 2024ರಲ್ಲಿ ಬಾಂಬೆ ಹೈಕೋರ್ಟ್ ಈ ಎಲ್ಲಾ ಆರೋಪಗಳನ್ನು ವಜಾಗೊಳಿಸಿ, ಮಮತಾ ಅವರಿಗೆ ದೊಡ್ಡ ರಿಲೀಫ್ ನೀಡಿತು.
ದಾವುದ್ ಇಬ್ರಾಹಿಂ ಕುರಿತು ವಿವಾದಾತ್ಮಕ ಹೇಳಿಕೆ: ಇತ್ತೀಚಿನ ಸಂದರ್ಶನವೊಂದರಲ್ಲಿ ಮಮತಾ ಕುಲಕರ್ಣಿ ಅವರು ಭೂಗತ ಪಾತಕಿ ದಾವುದ್ ಇಬ್ರಾಹಿಂ ಕುರಿತು ನೀಡಿದ ಹೇಳಿಕೆ ಭಾರಿ ವಿವಾದ ಸೃಷ್ಟಿಸಿತ್ತು. “ದಾವುದ್ ಭಯೋತ್ಪಾದಕನಲ್ಲ” ಎಂಬರ್ಥದಲ್ಲಿ ಮಾತನಾಡಿದ ಅವರು, ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಅಥವಾ ಬಾಂಬ್ ಸ್ಫೋಟಗಳಲ್ಲಿ ಆತನ ಪಾತ್ರವಿಲ್ಲ ಎಂದು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದರು.
ಈಗ ಎಲ್ಲಿದ್ದಾರೆ? ಸದ್ಯ ಗ್ಲಾಮರ್ ಲೋಕದಿಂದ ದೂರವೇ ಉಳಿದಿರುವ ಮಮತಾ ಕುಲಕರ್ಣಿ, ಇತ್ತೀಚೆಗೆ ‘ಲಾಫ್ಟರ್ ಚೆಫ್ಸ್’ (Laughter Chefs) ಕಾರ್ಯಕ್ರಮದಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಸದ್ಯಕ್ಕೆ ಅವರ ಕೈಯಲ್ಲಿ ಯಾವುದೇ ದೊಡ್ಡ ಪ್ರಾಜೆಕ್ಟ್‌ಗಳಿಲ್ಲದಿದ್ದರೂ, ಅವರ ಜೀವನದ ಒಂದೊಂದೇ ರಹಸ್ಯಗಳು ಇಂದಿಗೂ ಕುತೂಹಲ ಮೂಡಿಸುತ್ತಿವೆ.
IPL 2026: ಐಪಿಎಲ್ 2026ರ ಸೀಸನ್ನಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (MI) ತಂಡವು ಅತ್ಯಂತ ಕಠಿಣ ಹಂತವನ್ನು ಎದುರಿಸುತ್ತಿದೆ. ಸೋಲಿನ ಸುಳಿಯಿಂದ ಹೊರಬರಲು ಮತ್ತು ಗೆಲುವಿನ ಲಯ ಕಂಡುಕೊಳ್ಳಲು ಮುಂಬೈ ಮ್ಯಾನೇಜ್‌ಮೆಂಟ್ ಈವರೆಗೆ ಒಟ್ಟು 22 ಆಟಗಾರರನ್ನು ಮೈದಾನಕ್ಕಿಳಿಸಿದೆ. ಈ ಮೂಲಕ ಪ್ರಸಕ್ತ ಸೀಸನ್ನಲ್ಲಿ ಅತಿ ಹೆಚ್ಚು ಆಟಗಾರರನ್ನು ಬಳಸಿಕೊಂಡ ತಂಡ ಎಂಬ ಅಚ್ಚರಿಯ ದಾಖಲೆಗೆ ಮುಂಬೈ ಪಾತ್ರವಾಗಿದೆ.
ಯಾವುದೇ ತಂಡ ಯಶಸ್ವಿಯಾಗಲು ಸ್ಥಿರವಾದ 'ಪ್ಲೇಯಿಂಗ್ ಇಲೆವೆನ್' ಅತ್ಯಗತ್ಯ. ಆದರೆ ಮುಂಬೈ ಈ ಬಾರಿ ಪ್ರತಿ ಪಂದ್ಯದಲ್ಲೂ ಒಂದಿಲ್ಲೊಂದು ಬದಲಾವಣೆ ಮಾಡುತ್ತಲೇ ಸಾಗಿದೆ. ಆರಂಭಿಕ ಬ್ಯಾಟರ್ಗಳಿಂದ ಹಿಡಿದು ಫಿನಿಶರ್ಗಳವರೆಗೆ ಎಲ್ಲೂ ಸ್ಥಿರತೆ ಕಾಣುತ್ತಿಲ್ಲ. ತಂಡವು ಈವರೆಗೆ ಸುಮಾರು 5 ವಿಭಿನ್ನ ಆರಂಭಿಕ ಜೋಡಿಗಳನ್ನು ಕಣಕ್ಕಿಳಿಸಿರುವುದು ತಂಡದ ಅಸ್ಥಿರತೆಗೆ ಸಾಕ್ಷಿಯಾಗಿದೆ.
ಸತತ ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ಅಲ್ಲಾ ಗಜನ್ಫರ್, ಮಯಾಂಕ್ ಮಾರ್ಕಾಂಡೆ ಅವರಂತಹ ಸ್ಪಿನ್ನರ್ಗಳನ್ನು ಪದೇ ಪದೇ ಅದಲು ಬದಲು ಮಾಡುತ್ತಿದೆ. ಅಲ್ಲದೆ, ಶರ್ಫೇನ್ ರದರ್ಫೋರ್ಡ್, ರಾಬಿನ್ ಮಿಂಝ್ ಮತ್ತು ಮಯಾಂಕ್ ರಾವತ್ ಅವರಂತಹ ಯುವ ಆಟಗಾರರನ್ನು ಗೆಲುವಿನ ಸೂತ್ರವಾಗಿ ಬಳಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಆದರೆ, ಈ ನಿರಂತರ ಬದಲಾವಣೆಗಳು ಆಟಗಾರರಲ್ಲಿ ಆತ್ಮವಿಶ್ವಾಸದ ಕೊರತೆಯನ್ನು ಉಂಟುಮಾಡುತ್ತಿವೆ ಎಂಬುದಕ್ಕೆ ಬ್ಯಾಕ್ ಟು ಬ್ಯಾಕ್ ಸೋಲುಗಳೇ ಸಾಕ್ಷಿ.
ಸೋಲಿಗೆ ಕಾರಣವೇನು? ತಂಡದ ಪ್ರಮುಖ ಆಟಗಾರರ ಫಾರ್ಮ್ ಕೊರತೆ ಮತ್ತು ಬೌಲಿಂಗ್ ವಿಭಾಗದಲ್ಲಿನ ದೌರ್ಬಲ್ಯ ಮುಂಬೈ ಪಾಲಿಗೆ ಮುಳುವಾಗಿದೆ. ಒಂದು ಗೆಲುವಿಗಾಗಿ ಇಷ್ಟೊಂದು ಆಟಗಾರರನ್ನು ಬದಲಿಸುತ್ತಿರುವುದು ತಂಡದ ಸಂಯೋಜನೆಯನ್ನು ಹಾಳುಮಾಡುತ್ತಿದೆ. ಇದಾಗ್ಯೂ ಹಾರ್ದಿಕ್ ಪಾಂಡ್ಯ ಪಡೆಗೆ ಗೆಲ್ಲಲು ಸಾಧ್ಯವಾಗುತ್ತಿಲ್ಲ.
ಮುಂಬೈ ಇಂಡಿಯನ್ಸ್ ತಂಡಕ್ಕೆ ಈಗ ಬೇಕಿರುವುದು ಕೇವಲ ಆಟಗಾರರ ಬದಲಾವಣೆಯಲ್ಲ, ಬದಲಾಗಿ ಮೈದಾನದಲ್ಲಿ ತೋರುವ ಕೆಚ್ಚೆದೆಯ ಪ್ರದರ್ಶನ. ಉಳಿದ ಪಂದ್ಯಗಳಲ್ಲಾದರೂ ಮುಂಬೈ ಒಂದು ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿದು ಅಭಿಮಾನಿಗಳಿಗೆ ಹಳೆಯ ಸಂಭ್ರಮವನ್ನು ಮರಳಿ ನೀಡುತ್ತದೆಯೇ ಎಂದು ಕಾದು ನೋಡಬೇಕಿದೆ.
ಐಪಿಎಲ್ 2026 ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ ಆಟಗಾರರು: ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮ, ದಾನಿಶ್ ಮಲೇವಾರ್, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ವಿಲ್ ಜಾಕ್ಸ್, ಶಾರ್ದೂಲ್ ಠಾಕೂರ್, ಕಾರ್ಬಿನ್ ಬಾಷ್, ರಾಜ್ ಅಂಗದ್ ಬಾವಾ, ಮಯಾಂಕ್ ರಾವತ್, ಕ್ರಿಶ್ ಭಗತ್, ಮಿಚೆಲ್ ಸ್ಯಾಂಟ್ನರ್, ಕ್ವಿಂಟನ್ ಡಿ ಕಾಕ್, ರಿಯಾನ್ ರಿಕೆಲ್ಟನ್, ರಾಬಿನ್ ಮಿಂಜ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್, ದೀಪಕ್ ಚಹಾರ್, ಮಯಾಂಕ್ ಮಾರ್ಕಾಂಡೆ, ಅಲ್ಲಾ ಗಜನ್ಫರ್, ಅಶ್ವಿನಿ ಕುಮಾರ್.