Pat Cummins: ಹೆಡ್, ಅಭಿಷೇಕ್ ಅಲ್ಲ, ನಮ್ಮ ಗೆಲುವಿಗೆ ಈತನೇ ಕಾರಣ! – Kannada News | Pat Cummins Post Match Interview After MI vs SRH Match

IPL 2026: ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಐಪಿಎಲ್ 2026ರ ಹೈ-ವೋಲ್ಟೇಜ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡವು ಮುಂಬೈ ಇಂಡಿಯನ್ಸ್ (MI) ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಮುಂಬೈ ನೀಡಿದ್ದ 244 ರನ್‌ಗಳ ಬೃಹತ್ ಮೊತ್ತವನ್ನು ಇನ್ನು 8 ಎಸೆತಗಳು ಬಾಕಿ ಇರುವಂತೆಯೇ ಬೆನ್ನಟ್ಟುವ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ಐತಿಹಾಸಿಕ ರನ್ ಚೇಸ್ ದಾಖಲಿಸಿದೆ.

ಈ ಗೆಲುವಿನ ಬಳಿಕ ಮಾತನಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್, “ನಮ್ಮ ಬ್ಯಾಟಿಂಗ್ ಲೈನಪ್ ಮತ್ತು ಪಿಚ್‌ನ ಗುಣಮಟ್ಟ ನೋಡಿದರೆ ಎಂತಹ ಗುರಿಯನ್ನೂ ಬೆನ್ನಟ್ಟಬಹುದು ಎಂಬ ನಂಬಿಕೆ ನನಗಿತ್ತು. ನಮ್ಮ ಆರಂಭಿಕ ಆಟಗಾರರು ಯಾವುದೇ ಭಯವಿಲ್ಲದೆ ಆಡುತ್ತಿದ್ದಾರೆ. ಅವರಲ್ಲಿ ಅದೆಷ್ಟು ವೈವಿಧ್ಯಮಯ ಶಾಟ್‌ಗಳಿವೆ ಎಂದರೆ, ಅವರಿಗೆ ಬೌಲಿಂಗ್ ಮಾಡುವ ಪರಿಸ್ಥಿತಿ ನನಗೆ ಬರದಿರುವುದಕ್ಕೆ ನಾನು ದೇವರಿಗೆ ಧನ್ಯವಾದ ಅರ್ಪಿಸುತ್ತೇನೆ!” ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಯುವ ಆಟಗಾರರ ಬೆಂಬಲ:

ತಂಡದ ಯುವ ಆಟಗಾರರಾದ ಸಲಿಲ್ ಅರೋರಾ ಅವರಂತಹ ಪ್ರತಿಭೆಗಳ ಬಗ್ಗೆ ಮಾತನಾಡುತ್ತಾ, ಕೋಚಿಂಗ್ ಸ್ಟಾಫ್ ಯುವಕರಲ್ಲಿ ತುಂಬಿರುವ ‘ನಿರ್ಭೀತ ಮನೋಭಾವ’ವೇ ತಂಡದ ಯಶಸ್ಸಿನ ಗುಟ್ಟು ಎಂದಿದ್ದಾರೆ. “ಈ ಯುವ ಆಟಗಾರರಿಗೆ ತಾವು ಎಷ್ಟು ಸಮರ್ಥರು ಎಂಬುದು ಅವರಿಗೇ ತಿಳಿದಿಲ್ಲ, ಅದು ಅವರ ದೊಡ್ಡ ಶಕ್ತಿ,” ಎಂದು ಕಮ್ಮಿನ್ಸ್ ಅಭಿಪ್ರಾಯಪಟ್ಟಿದ್ದಾರೆ.

ಬೌಲರ್‌ಗಳಿಗೆ ಹೊಸ ಸವಾಲು:

ಹೆಚ್ಚಿನ ರನ್ ಬಿಟ್ಟುಕೊಡುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಮ್ಮಿನ್ಸ್, “ಖಂಡಿತವಾಗಿಯೂ ಚಿಂತೆಯಾಗುತ್ತದೆ. ಆದರೆ ನಾವು ವಾಸ್ತವವನ್ನು ಒಪ್ಪಿಕೊಳ್ಳಬೇಕು. ಐದು ವರ್ಷಗಳ ಹಿಂದಿನ ಐಪಿಎಲ್‌ಗೂ ಈಗಿನದ್ದಕ್ಕೂ ದೊಡ್ಡ ವ್ಯತ್ಯಾಸವಿದೆ. ಹಿಂದೆ 200 ರನ್ ಬೆನ್ನಟ್ಟುವುದು ಕಷ್ಟವಾಗಿತ್ತು, ಆದರೆ ಈಗ ಓವರ್‌ಗೆ 12 ರನ್ ಬೇಕಿದ್ದರೂ ಬ್ಯಾಟರ್‌ಗಳು ಅದನ್ನು ಸುಲಭವಾಗಿ ಚೇಸ್ ಮಾಡುತ್ತಿದ್ದಾರೆ. ಹೀಗಾಗಿ ಬೌಲರ್‌ಗಳು ತಮ್ಮ ನಿರೀಕ್ಷೆಗಳನ್ನು ಬದಲಿಸಿಕೊಳ್ಳಬೇಕಿದೆ,” ಎಂದಿದ್ದಾರೆ.

ಬೌಲರ್‌ಗಳಿಗೆ ಎದುರಾಗಿರುವ ಇಂತಹ ಸವಾಲುಗಳ ನಡುವೆ ಈಶಾನ್ ಮಾಲಿಂಗ ಅವರ ಬೌಲಿಂಗ್ ದಾಳಿಯೇ ನಮ್ಮ ಗೆಲುವಿಗೆ ಕಾರಣ. ಏಕೆಂದರೆ ಹೈ ಸ್ಕೋರಿಂಗ್ ಪಂದ್ಯದಲ್ಲಿ ಈಶಾನ್ 4 ಓವರ್‌ಗಳಲ್ಲಿ ನೀಡಿದ್ದು ಕೇವಲ 29 ರನ್ ಮಾತ್ರ. ಹೀಗಾಗಿ ನಮ್ಮ ಗೆಲುವಿಗೆ ಈಶಾನ್ ಮಾಲಿಂಗ ಕಾರಣ ಎಂದೇ ಹೇಳಬೇಕು.

ಕೊನೆಯಲ್ಲಿ ನೀವು ಹಾಕುವ ಒಂದು ಅತ್ಯುತ್ತಮ ಯಾರ್ಕರ್ ಪಂದ್ಯದ ಗತಿಯನ್ನೇ ಬದಲಿಸಬಹುದು. ಈಶಾನ್ ಮಾಲಿಂಗ ಅವರಂತಹ ಬೌಲರ್‌ಗಳು ನಮ್ಮ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಪ್ಯಾಟ್ ಕಮಿನ್ಸ್, ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ಗೆಲುವಿಗಾಗಿ 22 ಆಟಗಾರರನ್ನು ಕಣಕ್ಕಿಳಿಸಿದ ಮುಂಬೈ ಇಂಡಿಯನ್ಸ್

ಒಟ್ಟಾರೆಯಾಗಿ, ಬ್ಯಾಟಿಂಗ್ ಸ್ನೇಹಿ ಪಿಚ್‌ಗಳ ನಡುವೆಯೂ ಈಶಾನ್ ಮಾಲಿಂಗ 4 ಓವರ್‌ಗಳಲ್ಲಿ ಕೇವಲ 29 ರನ್ ಮಾತ್ರ ನೀಡಿದ್ದಾರೆ. ಪರಿಣಾಮ 250 ರ ಗಡಿದಾಟಬೇಕಿದ್ದ ಮುಂಬೈ ಇಂಡಿಯನ್ಸ್ ಸ್ಕೋರ್ 243 ರಲ್ಲೇ ನಿಂತಿದೆ. ಈ ಗುರಿ ಬೆನ್ನತ್ತಿ ಸನ್‌ರೈಸರ್ಸ್ ಹೈದರಾಬಾದ್ 6 ವಿಕೆಟ್ ಗಳ ವಿಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಸನ್‌ರೈಸರ್ಸ್ ಹೈದರಾಬಾದ್ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.

Source link

‘ಅವಳ ಪರಿಸ್ಥಿತಿ ನೋಡಿದ್ರೆ ಬೇಸರವಾಗುತ್ತೆ’; ಶೋಭಿತಾ ಬಗ್ಗೆ ನಾಗ ಚೈತನ್ಯ ಮಾತು – Kannada News | Naga Chaitanya on Sobhita: Sad to see her situation, breaks silence on hate comments and marriage

ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ್ ವಿವಾಹ ಆಗಿ ಹಾಯಾಗಿ ಜೀವನ ನಡೆಸುತ್ತಿದ್ದಾರೆ. ಸಮಂತಾ ವಿಚ್ಛೇದನದ ಬಳಿಕ ನಾಗ ಚೈತನ್ಯ ಬಾಳಲ್ಲಿ ಶೋಭಿತಾ ಬಂದರು. ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಚ್ಯಾಟ್ ಮಾಡಿಕೊಂಡರು. ಆ ಬಳಿಕ ಎದುರು ಭೇಟಿ ಆಗಿ, ಗೆಳೆತನ ಮೂಡಿ, ಅದು ಪ್ರೀತಿಗೆ ತಿರುಗಿ ಈಗ ವಿವಾಹ ಆಗಿದ್ದಾರೆ. ಈಗ ನಾಗಚೈತನ್ಯ ಅವರು ಶೋಭಿತಾ ಬಗ್ಗೆ ಮಾತನಾಡಿದ್ದಾರೆ. ಶೋಭಿತಾ ಅವರನ್ನು ನೋಡಿದರೆ ಬೇಸರವಾಗುತ್ತದೆ ಎಂದಿದ್ದಾರೆ.

ಸಮಂತಾ ಜೊತೆಗಿನ ವಿಚ್ಛೇದನದ ಬಳಿಕ ಕೆಲ ಸಮಯ ನಾಗ ಚೈತನ್ಯ ಒಂಟಿಯಾಗೇ ಇದ್ದರು. ಈ ಒಂಟಿತನವನ್ನು ದೂರ ಮಾಡಿದ್ದು ಶೋಭಿತಾ. ಹಲವು ಸಮಯ ಇಬ್ಬರೂ ಒಟ್ಟಿಗೆ ಸುತ್ತಾಡಿದರು. ಆ ಬಳಿಕ ಮದುವೆ ಆಗುವ ನಿರ್ಧಾರಕ್ಕೆ ಬಂದರು. ಈ ಬೆನ್ನಲ್ಲೇ ಶೋಭಿತಾ ಸಾಕಷ್ಟು ಹೇಟ್ ಕಮೆಂಟ್ ಅನುಭವಿಸಬೇಕಾಯಿತು. ‘ನಾಗ ಚೈತನ್ಯ ಹಾಗೂ ಸಮಂತಾ ದೂರ ಆಗಲು ನೀವು ಕಾರಣ’ ಎಂದು ಅನೇಕರು ಶೋಭಿತಾ ಮೇಲೆ ಆರೋಪ ಹೊರಿಸಿದರು.

ಈ ವಿಷಯವಾಗಿ ನಾಗ ಚೈತನ್ಯ ಅವರು ಓಪನ್ ಆಗಿ ಮಾತನಾಡಿದ್ದು ಕಡಿಮೆ. ಈಗ ಅವರು ಈ ಬಗ್ಗೆ ಮೌನ ಮುರಿದಿದ್ದಾರೆ. ಅವರಿಗೆ ಶೋಭಿತಾ ಅವರ ಪರಿಸ್ಥಿತಿ ನೋಡಿ ಸಂಕಟವಾಗುತ್ತಿದೆ. ಶೋಭಿತಾ ತಮ್ಮನ್ನು ಅರ್ಥೈಸಿಕೊಳ್ಳುತ್ತಿರುವ ರೀತಿ ನೋಡಿ ಖುಷಿ ಕೂಡ ಇದೆ.

ಇದನ್ನೂ ಓದಿ: ನಾಗ ಚೈತನ್ಯ ಸಿಕ್ಸ್ ಪ್ಯಾಕ್: ವೈರಲ್ ಆದ ಫೋಟೋ ನೋಡಿ ಅಭಿಮಾನಿಗಳಿಗೆ ಅಚ್ಚರಿ

‘ಅವಳನ್ನು ನೋಡಿದ್ರೆ ಬೇಸರವಾಗುತ್ತದೆ. ಇದರಲ್ಲಿ ಅವಳ ತಪ್ಪೇನು ಇಲ್ಲ. ಸೋಶಿಯಲ್ ಮೀಡಿಯಾ ಚ್ಯಾಟ್ ಮೂಲಕ ಇಬ್ಬರೂ ಪರಿಚಯ ಆಗಿ, ಹಂತ ಹಂತವಾಗಿ ನಮ್ಮ ಸಂಬಂಧ ಬೆಳೆಯಿತು. ನನ್ನ ಹಿಂದಿನ ಜೀವನಕ್ಕೂ ಅವಳಿಗೂ ಯಾವುದೇ ಸಂಬಂಧ ಇಲ್ಲ. ಅವಳಿಗೆ ಸಾಕಷ್ಟು ಧನ್ಯವಾದ ಹೇಳಬೇಕು. ಪ್ರಬುದ್ಧವಾಗಿ ವರ್ತಿಸಿದ್ದಾರೆ. ಅವರು ನಿಜವಾದ ಹೀರೋ’ ಎಂದಿದ್ದಾರೆ ನಾಗ ಚೈತನ್ಯ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Riyan Parag Vaping Row: ರಿಯಾನ್ ಪರಾಗ್ ವಿವಾದದ ಬಗ್ಗೆ ಕೆಂಡಾಮಂಡಲರಾದ ಅಂಪೈರ್ ಅನಿಲ್ ಚೌಧರಿ: ಏನು ಹೇಳಿದ್ರು ನೋಡಿ – Kannada News | Umpire Anil Chaudhary gets angry over Riyan Parag Vaping Row controversy

ಬೆಂಗಳೂರು (ಏ. 30): ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ (Riyan Parag) ಡ್ರೆಸ್ಸಿಂಗ್ ರೂಮ್‌ನಲ್ಲಿ ವಾಪಿಂಗ್ ಮಾಡುತ್ತಿರುವುದನ್ನು ತೋರಿಸುವ ವಿಡಿಯೋ ವೈರಲ್ ಆದ ನಂತರ, ಕ್ರಿಕೆಟ್ ಜಗತ್ತಿನ ಅನುಭವಿಗಳು ಇದರ ಬಗ್ಗೆ ಪ್ರತಿಕ್ರಿಯಿಸಲು ಪ್ರಾರಂಭಿಸಿದ್ದಾರೆ. ಈ ವಿಷಯಕ್ಕೆ ಪ್ರತಿಕ್ರಿಯಿಸಿದ ಮಾಜಿ ಅಂತರರಾಷ್ಟ್ರೀಯ ಅಂಪೈರ್ ಅನಿಲ್ ಚೌಧರಿ, ಆಟಗಾರರಿಗೆ ಶಿಸ್ತು ಮತ್ತು ಕ್ಯಾಮೆರಾಗಳ ಉಪಸ್ಥಿತಿಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಶೌಚಾಲಯ ಹೊರತುಪಡಿಸಿ ಎಲ್ಲೆಡೆ ಕ್ಯಾಮೆರಾಗಳಿವೆ: ಅನಿಲ್ ಚೌಧರಿ

ಈ ಘಟನೆಯ ಹಿನ್ನೆಲೆಯಲ್ಲಿ ಆಟಗಾರರು ಜಾಗರೂಕರಾಗಿರಬೇಕೆಂದು ಅನಿಲ್ ಚೌಧರಿ ಸಲಹೆ ನೀಡಿದರು. ಇಂದು ತಂತ್ರಜ್ಞಾನವು ಎಷ್ಟು ಮುಂದುವರೆದಿದೆ ಎಂದರೆ ಕ್ಯಾಮೆರಾಗಳು ಮೈದಾನದಿಂದ ಡ್ರೆಸ್ಸಿಂಗ್ ಕೋಣೆಯವರೆಗೆ ಎಲ್ಲೆಡೆ ಇರುತ್ತವೆ. ಹಾಸ್ಯಮಯ ಆದರೆ ಗಂಭೀರವಾದ ಸ್ವರದಲ್ಲಿ, ಚೌಧರಿ, “ಇತ್ತೀಚಿನ ದಿನಗಳಲ್ಲಿ ಕ್ಯಾಮೆರಾಗಳು ಎಲ್ಲಿ ಬೇಕಾದರೂ ಹೋಗಬಹುದು, ಆದ್ದರಿಂದ ಆಟಗಾರರು ಬಹಳ ಜಾಗರೂಕರಾಗಿರಬೇಕು. ಇವರು ಚಿಕ್ಕ ಹುಡುಗರು, ಶೌಚಾಲಯವನ್ನು ಹೊರತುಪಡಿಸಿ ಬೇರೆಲ್ಲಿ ಬೇಕಾದರೂ ಅವರನ್ನು ಕ್ಯಾಮೆರಾ ಮೂಲಕ ಸೆರೆ ಹಿಡಿಯಬಹುದು ಎಂದು ಅವರಿಗೆ ತಿಳಿದಿರುವುದಿಲ್ಲ. ಆದ್ದರಿಂದ, ಹುಡುಗರು ಶಿಸ್ತಿನ ಬಗ್ಗೆ ಜಾಗರೂಕರಾಗಿರಬೇಕು” ಎಂದು ಹೇಳಿದರು.

ಕಾನೂನು ಕ್ರಮದ ಬಗ್ಗೆ ಕೇಳಿದಾಗ, ಚೌಧರಿ ಇದನ್ನು ಸಂಪೂರ್ಣವಾಗಿ ಆಡಳಿತಾತ್ಮಕ ವಿಷಯ ಎಂದು ವಿವರಿಸಿದರು. ಕಾನೂನು ಪರಿಣಾಮಗಳ ಬಗ್ಗೆ ತನಗೆ ತಿಳಿದಿಲ್ಲ, ಆದರೆ ಯಾವುದೇ ನಿರ್ಧಾರವನ್ನು ಸರ್ಕಾರಿ ನಿಯಮಗಳು ಮತ್ತು ನಿಬಂಧನೆಗಳ ಆಧಾರದ ಮೇಲೆ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು. ಯಾವುದೇ ಕ್ರಮವು ಅಸ್ತಿತ್ವದಲ್ಲಿರುವ ನೀತಿಗಳು ಮತ್ತು ಮಾರ್ಗಸೂಚಿಗಳನ್ನು ಅವಲಂಬಿಸಿರುತ್ತದೆ ಎಂದು ಅವರು ಸೂಚಿಸಿದರು.

MI vs SRH, IPL 2026: 243 ರನ್‌ಗಳಿಸಿದರೂ ಸೋತಿದ್ದೇಕೆ?: ಹಾರ್ದಿಕ್ ನೀಡಿದ ಕಾರಣಕ್ಕೆ ಇಡೀ ಸ್ಟೇಡಿಯಂ ಸ್ತಬ್ಧ

ಆಟದ ಮೇಲೆ ಗಮನ ಹರಿಸಿ, ವಿವಾದಗಳಲ್ಲ

ಅನಿಲ್ ಚೌಧರಿ ಅವರು ಕ್ರಿಕೆಟ್ ಪ್ರಸಾರದ ಪ್ರಾಥಮಿಕ ಉದ್ದೇಶ ಆಟವನ್ನು ಆನಂದಿಸುವುದಾಗಿರಬೇಕು, ಮೈದಾನದ ಹೊರಗೆ ವಿವಾದಗಳಿಗೆ ಗಮನ ಕೊಡಬೇಡಿ ಎಂದು ಒತ್ತಿ ಹೇಳಿದರು. ಟಿವಿ ಆಟದಿಂದ ಗಮನವನ್ನು ಬೇರೆಡೆಗೆ ಸೆಳೆಯುವ ವಿವಾದಗಳ ಮೇಲೆ ಕೇಂದ್ರೀಕರಿಸುವ ಬದಲು ಆಟದ ಸಕಾರಾತ್ಮಕ ಅಂಶಗಳ ಮೇಲೆ ಕೇಂದ್ರೀಕರಿಸಬೇಕು ಎಂಬುದು ಅವರ ಮಾತು.

ಮಂಗಳವಾರ ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ಪಂದ್ಯ ನಡೆಯುತ್ತಿರುವ ಸಂದರ್ಭ ನೇರ ಪ್ರಸಾರದ ಸಮಯದಲ್ಲಿ ಪರಾಗ್ ಡ್ರೆಸ್ಸಿಂಗ್ ಕೋಣೆಯೊಳಗೆ (ಇ-ಸಿಗರೇಟ್) ವೇಪ್ ಮಾಡುತ್ತಿರುವುದು ಕಂಡುಬಂದಿದೆ. ಈ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಬಿಸಿಸಿಐ ಮತ್ತು ಕ್ರೀಡಾ ಜಗತ್ತಿನಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ರಾಜಸ್ಥಾನ್ ರಾಯಲ್ಸ್ ತಂಡದ ಇನ್ನಿಂಗ್ಸ್‌ನ 16 ನೇ ಓವರ್‌ನಲ್ಲಿ ಈ ಘಟನೆ ನಡೆದಿದ್ದು, ಡ್ರೆಸ್ಸಿಂಗ್ ರೂಮ್ ದೃಶ್ಯವನ್ನು ಲೈವ್ ಕ್ಯಾಮೆರಾ ಸೆರೆಹಿಡಿದಿದೆ. ರಿಯಾನ್ ಪರಾಗ್ ಸಹ ಆಟಗಾರರಾದ ಧ್ರುವ್ ಜುರೆಲ್ ಮತ್ತು ಯಶಸ್ವಿ ಜೈಸ್ವಾಲ್ ಅವರ ಸಮ್ಮುಖದಲ್ಲಿ ವೇಪ್ ಬಳಸುತ್ತಿರುವುದನ್ನು ದೃಶ್ಯಗಳು ತೋರಿಸಿವೆ. ನಿಯಮಗಳ ಪ್ರಕಾರ, ಕ್ರೀಡಾಂಗಣದ ಆವರಣ ಮತ್ತು ಡ್ರೆಸ್ಸಿಂಗ್ ರೂಮ್‌ಗಳಲ್ಲಿ ಧೂಮಪಾನವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇದಲ್ಲದೆ, ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ ಕಾಯ್ದೆ (PECA) 2019 ರ ಅಡಿಯಲ್ಲಿ ಭಾರತದಲ್ಲಿ ವೇಪ್‌ಗಳ ಉತ್ಪಾದನೆ, ಮಾರಾಟ ಮತ್ತು ಬಳಕೆ ಕಾನೂನುಬಾಹಿರವಾಗಿದ್ದು, ಉಲ್ಲಂಘನೆಗಳಿಗೆ ಭಾರೀ ದಂಡ ಮತ್ತು ಜೈಲು ಶಿಕ್ಷೆ ವಿಧಿಸಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೌರಿಂಗ್ ಆಸ್ಪತ್ರೆಯ ತಡೆಗೋಡೆ ಕುಸಿದು 7 ಜನರ ಬಲಿ ಪಡೆದ ಜಾಗ ಈಗ ಹೇಗಿದೆ ನೋಡಿ – Kannada News | Negligence Suspected in Bowring Hospital Wall Collapse, Seven Feared Dead

ಬೆಂಗಳೂರು, ಏಪ್ರಿಲ್​​ 30: ನಗರದಲ್ಲಿ ಸುರಿದ ಭಾರೀ ಮಳೆಯ ಪರಿಣಾಮ ಬೌರಿಂಗ್ ಆಸ್ಪತ್ರೆಯ ತಡೆಗೋಡೆ ಕುಸಿದು ಏಳು ಜನರು ಮೃತಪಟ್ಟಿರುವ ದಾರುಣ ಘಟನೆ ನಡೆದಿದ್ದು, ಸುಮಾರು 15 ಜನರು ಗಾಯಗೊಂಡಿದ್ದಾರೆ. ಆಸ್ಪತ್ರೆ ಆವರಣದ ಖಾಲಿ ಜಾಗದಲ್ಲಿ ಮಣ್ಣನ್ನು ಅಗೆದು ಗೋಡೆಯ ಅಂಚಿಗೆ ಸುರಿದಿದ್ದು, ಅಲ್ಲದೆ ಗೋಡೆಯ ಸುತ್ತಲೂ ಗಿಡಗಳನ್ನು ನೆಟ್ಟಿರುವುದು ಗೋಡೆಯನ್ನು ದುರ್ಬಲಗೊಳಿಸಿತ್ತು ಎಂದು ತಿಳಿದುಬಂದಿದೆ. ಇದರ ಪರಿಣಾಮವಾಗಿ, ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದ ನೀರು ಗೋಡೆಯ ಮೇಲೆ ಒತ್ತಡ ಹೇರಿದ್ದರಿಂದ ಗೋಡೆ ಕುಸಿದಿದೆ. ಗೋಡೆಯ ಪಕ್ಕದಲ್ಲಿ ಆಶ್ರಯ ಪಡೆದಿದ್ದ ಜನರು ಮತ್ತು ರಸ್ತೆಯಲ್ಲಿ ವ್ಯಾಪಾರ ಮಾಡುತ್ತಿದ್ದ ಕೆಲವು ವ್ಯಾಪಾರಿಗಳು ಈ ದುರಂತಕ್ಕೆ ಬಲಿಯಾಗಿದ್ದಾರೆ. ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು (ಯುಡಿಆರ್) ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮುಂಬೈ ಇಂಡಿಯನ್ಸ್ ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿಯಲು ಇದುವೇ ಕಾರಣ..! – Kannada News | Why Mumbai Indians Wear black band vs SRH

IPL 2026: ಐಪಿಎಲ್ 2026ರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ತಂಡದ ಆಟಗಾರರು ತೋಳಿಗೆ ಕಪ್ಪು ಪಟ್ಟಿ (Black Armband) ಧರಿಸಿ ಮೈದಾನಕ್ಕಿಳಿಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇದರ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ಕಪ್ಪು ಪಟ್ಟಿ ಧರಿಸಲು ಕಾರಣವೇನು? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತ್ತು.

ಕಪ್ಪು ಪಟ್ಟಿ ಧರಿಸಲು ಕಾರಣವೇನು?

ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಬೆಂಬಲ ಸಿಬ್ಬಂದಿಯೊಬ್ಬರ ಮಗಳು ಅಕಾಲಿಕವಾಗಿ ನಿಧನರಾಗಿದ್ದಾರೆ. ಈ ದುಃಖದ ಸಮಯದಲ್ಲಿ ತಮ್ಮ ಸಿಬ್ಬಂದಿಯ ಕುಟುಂಬದೊಂದಿಗೆ ನಾವಿದ್ದೇವೆ ಎಂಬ ಒಗ್ಗಟ್ಟನ್ನು ಪ್ರದರ್ಶಿಸಲು ಫ್ರಾಂಚೈಸಿಯು ಈ ನಿರ್ಧಾರ ತೆಗೆದುಕೊಂಡಿದೆ.

ತಂಡದ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಎಂಐ ಮ್ಯಾನೇಜ್‌ಮೆಂಟ್, “ನಮ್ಮ ಬೆಂಬಲ ಸಿಬ್ಬಂದಿಯ ಮಗಳ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ, ಅವರ ಕುಟುಂಬದ ಪರವಾಗಿ ಮತ್ತು ಅಗಲಿದ ಆತ್ಮದ ಸ್ಮರಣಾರ್ಥವಾಗಿ ಇಂದು ಮುಂಬೈ ಇಂಡಿಯನ್ಸ್ ಆಟಗಾರರು ಕಪ್ಪು ಪಟ್ಟಿ ಧರಿಸುತ್ತಿದ್ದಾರೆ” ಎಂದು ತಿಳಿಸಿದೆ.

ಒಗ್ಗಟ್ಟಿನ ಸಂದೇಶ:

ಮುಂಬೈ ಇಂಡಿಯನ್ಸ್ ತಂಡವು ತನ್ನ ಸಿಬ್ಬಂದಿ ಮತ್ತು ಆಟಗಾರರನ್ನು ಒಂದು ‘ದೊಡ್ಡ ಕುಟುಂಬ’ (One Family) ಎಂದು ಪರಿಗಣಿಸುತ್ತದೆ. ಮೈದಾನದಲ್ಲಿ ಎಷ್ಟೇ ಒತ್ತಡದ ಪಂದ್ಯವಿದ್ದರೂ, ಮೈದಾನದ ಹೊರಗಿನ ನೋವಿನಲ್ಲಿ ಭಾಗಿಯಾಗುವ ಮೂಲಕ ತಂಡವು ಮಾನವೀಯತೆ ಮೆರೆದಿದೆ. ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಈ ನಡೆಯನ್ನು ಶ್ಲಾಘಿಸಿದ್ದು, ಶೋಕತಪ್ತ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಪಂದ್ಯದ ಮುಖ್ಯಾಂಶ:

ಈ ಭಾವುಕ ಕ್ಷಣಗಳ ನಡುವೆಯೂ ನಡೆದ ಪಂದ್ಯದಲ್ಲಿ ರಯಾನ್ ರಿಕೆಲ್ಟನ್ ಅವರ ಸ್ಫೋಟಕ ಶತಕದ (123*) ನೆರವಿನಿಂದ ಮುಂಬೈ ಇಂಡಿಯನ್ಸ್ 243 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು. ಆದರೆ, ಸನ್‌ರೈಸರ್ಸ್ ಹೈದರಾಬಾದ್ ತಂಡವು ಗುರಿ ಬೆನ್ನಟ್ಟಿ ,6 ವಿಕೆಟ್ ಗಳ ಜಯ ಸಾಧಿಸಿದೆ.

ಇದನ್ನೂ ಓದಿ: ಗೆಲುವಿಗಾಗಿ 22 ಆಟಗಾರರನ್ನು ಕಣಕ್ಕಿಳಿಸಿದ ಮುಂಬೈ ಇಂಡಿಯನ್ಸ್

ಈ ಸೋಲಿನ ಹೊರತಾಗಿಯೂ ಹೆಚ್ಚಾಗಿ ಮುಂಬೈ ಇಂಡಿಯನ್ಸ್ ಆಟಗಾರರು ಸಿಬ್ಬಂದಿ ಕುಟುಂಬಕ್ಕೆ ತೋರಿದ ಈ ಗೌರವ ಅಭಿಮಾನಿಗಳ ಮನಗೆದ್ದಿದೆ.

Source link

ಮಳೆಗೆ ಬೆಂಗಳೂರಲ್ಲಿ ಸಾಲು ಸಾಲು ಅನಾಹುತ: ವಾಹನ ಸವಾರರೇ ಈ ರಸ್ತೆಗಳಲ್ಲಿ ಸಂಚರಿಸುವ ಮುನ್ನ ಗಮನಿಸಿ – Kannada News | Bengaluru Rain Chaos:Flooded Underpasses and Fallen Trees Disrupt Traffic

ಮಳೆಯಿಂದಾದ ಅನಾಹುತಗಳುImage Credit source: Tv9 Kannada

ಬೆಂಗಳೂರು, ಏಪ್ರಿಲ್​​ 30: ತೀವ್ರ ಸೆಕೆಯಿಂದ ಬೆಂದು ಹೋಗಿದ್ದ ನಗರಕ್ಕೆ ನಿನ್ನೆ ವರುಣ ತಂಪೆರೆದಿದ್ದಾನೆ ಎಂದು ಖುಷಿ ಪಡಬೇಕೋ ಅಥವಾ ಮಳೆಯ ಅಬ್ಬರಕ್ಕೆ ಉಂಟಾಗಿರುವ ಸಾಲು ಸಾಲು ಅನಾಹುತಗಳಿಗೆ ದುಃಖ ಪಡಬೇಕೋ ಎನ್ನುವ ಸ್ಥಿತಿಯಲ್ಲಿ ಸದ್ಯ ರಾಜ್ಯ ರಾಜಧಾನಿ ಬೆಂಗಳೂರಿನ ನಿವಾಸಿಗಳಿದ್ದಾರೆ. ಗಾಳಿ ಮತ್ತು ಗುಡುಗಿನ ಸಹಿತ ಸುರಿದ ಭಾರಿ ಆಲಿಕಲ್ಲು ಮಳೆಗೆ ಸಾಲು ಸಾಲು ಅನಾಹುತಗಳೇ ನಡೆದಿದ್ದು, ಪ್ರತ್ಯೇಕ ಘಟನೆಗಳಲ್ಲಿ ಒಟ್ಟು 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ತೀವ್ರ ಗಾಳಿಗೆ ನಗರದ ಹಲವೆಡೆ ಮರಗಳು ಧರೆಗುರುಳಿದ್ದರೆ, ಅಂಡರ್​​ ಪಾಸ್​​ ಸೇರದಂತೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿರುವ ಕಾರಣ ಸಂಚಾರ ಸಮಸ್ಯೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹೀಗಾಗಿ ಬೆಂಗಳೂರು ನಗರ ಸಂಚಾರ ಪೊಲೀಸರು ಹಂಚಿಕೊಂಡಿರುವ ಕೆಲ ಮಹತ್ವದ ಮಾಹಿತಿ ಇಲ್ಲಿದೆ.

ಅಂಡರ್​​ಪಾಸ್​​ನಲ್ಲಿ ನೀರು ನಿಂತು ಸಂಚಾರಕ್ಕೆ ಸಮಸ್ಯೆ

ನಿನ್ನೆಯ ಮಳೆ ಅಬ್ಬರಕ್ಕೆ ಕೆಲ ಪ್ರದೇಶಗಳಲ್ಲಿ ತುಂಬಿದ್ದ ನೀರು ಹಾಗೆಯೇ ಇಂದು ಕೂಡ ಉಳಿದುಕೊಂಡಿದೆ. ಲೌರಿ ಅಂಡರ್‌ಪಾಸ್‌ನಲ್ಲಿ ಮಳೆ ನೀರು ನಿಂತಿರುವುದರಿಂದ ಸುಗಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಮಹದೇವಪುರ ಕಡೆಗೆ ನಿಧಾನಗತಿಯ ಸಂಚಾರವಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಕೆ.ಆರ್.ಸರ್ಕಲ್ ಅಂಡರ್ ಪಾಸ್​​​​ ಕೂಡ ಜಲಾವೃತವಾಗಿದ್ದು, ಬ್ಯಾರಿಕೇಡ್ ಹಾಕಿ ಪೊಲೀಸರು ಅಂಡರ್ ಪಾಸ್ ಬಂದ್ ಮಾಡಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ; ಬೆಂಗಳೂರು ಸೇರಿದಂತೆ ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಅಬ್ಬರಿಸಲಿದ್ದಾನೆ ವರುಣ

ಭಾಷ್ಯಂ ವೃತ್ತದ ಬಳಿ ರಸ್ತೆಗೆ ಬಿದ್ದ ಮರ

ಗಾಳಿ ಮಳೆಯ ಅಬ್ಬರಕ್ಕೆ ನಗರದ ವಿವಿಧೆಡೆ ಹಲವು ಮರಗಳು ಮತ್ತು ರೆಂಬೆಗಳು ಧರೆಗೆ ಉರುಳಿವೆ. ರಾತ್ರಿಯಿಂದಲೇ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಇವುಗಳ ತೆರವು ಮಾಡಿ, ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆಯಾದರೂ ಕೆಲವೆಡೆ ತೆರವು ಕಾರ್ಯ ಇನ್ನೂ ಮುಂದುವರಿದಿದೆ. ಭಾಷ್ಯಂ ವೃತ್ತದ ಬಳಿ ಮರ ಬಿದ್ದಿರುವುದರಿಂದ ಕಾವೇರಿ ಥಿಯೇಟರ್ ಜಂಕ್ಷನ್‌ ಕಡೆಗೆ ನಿಧಾನಗತಿಯ ಸಂಚಾರ ಕಂಡುಬಂದಿದೆ. ಬಸವನಗುಡಿಯಲ್ಲಿಯೂ ಬೃಹತ್​​ ಮರ ಬಿದ್ದು ಅವಾಂತರ ಸೃಷ್ಟಿಯಾಗಿದೆ. ವಿದ್ಯಾಪೀಠ ಸರ್ಕಲ್-ಬಸವನಗುಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಡ್ಡಲಾಗಿ ಬೃಹತ್ ಮರ ಬಿದ್ದಿದ್ದು, ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್​​ ಆಗಿದೆ. ಸ್ಥಳಕ್ಕೆ ಬಾರದ ಜಿಬಿಎ ಅಧಿಕಾರಿಗಳ ವಿರುದ್ಧ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆಯಲ್ಲೇ ಕೆಟ್ಟುನಿಂತ ವಾಹನ

ಬೊಮ್ಮನಹಳ್ಳಿ ಜಂಕ್ಷನ್ ಬಳಿ ರಸ್ತೆಯಲ್ಲಿವೇ ವಾಹನ ಕೆಟ್ಟು ನಿಂತಿರುವುದರಿಂದ ರೂಪೇನ ಅಗ್ರಹಾರ ಕಡೆಗೆ ನಿಧಾನಗತಿಯ ಸಂಚಾರವಿರೋದಾಗಿ ಎಕ್ಸ್​​ ಪೋಸ್ಟ್​​ ಮೂಲಕ ಬೆಂಗಳೂರು ಟ್ರಾಫಿಕ್​​ ಪೊಲೀಸರು ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಗ್ಲಾಮರ್ ಲೋಕದಿಂದ ಅಧ್ಯಾತ್ಮದತ್ತ ಮಮತಾ ಕುಲಕರ್ಣಿ: ವಿವಾದಗಳ ಸುಳಿಯಲ್ಲೇ ಕಳೆದುಹೋದ ನಟಿಯ ಕಥೆ – Kannada News | From Bollywood Diva to Sanyasini: The Turbulent Life of Mamta Kulkarni

90ರ ದಶಕದಲ್ಲಿ ಬಾಲಿವುಡ್‌ನ ಟಾಪ್ ನಟಿಯಾಗಿ ಮೆರೆದವರು ಮಮತಾ ಕುಲಕರ್ಣಿ. ಸಲ್ಮಾನ್ ಖಾನ್, ಶಾರುಖ್ ಖಾನ್ ಅವರಂತಹ ಸ್ಟಾರ್ ನಟರ ಜೊತೆ ಸ್ಕ್ರೀನ್ ಹಂಚಿಕೊಂಡಿದ್ದ ಈ ನಟಿ, ತಮ್ಮ ಸೌಂದರ್ಯ ಮತ್ತು ಧೈರ್ಯವಂತ ನಿರ್ಧಾರಗಳಿಂದಲೇ ಸುದ್ದಿಯಲ್ಲಿದ್ದರು. ಆದರೆ, ಉತ್ತುಂಗದಲ್ಲಿದ್ದಾಗಲೇ ಚಿತ್ರರಂಗದಿಂದ ಮಾಯವಾದ ಮಮತಾ, ದಶಕಗಳ ಕಾಲ ವಿದೇಶದಲ್ಲಿ ನೆಲೆಸಿದ್ದರು.

ಅಧ್ಯಾತ್ಮದ ಹಾದಿ ಮತ್ತು ಮಹಾಕುಂಭ ಮೇಳದ ಸಂಚಲನ: 2025ರಲ್ಲಿ ಭಾರತಕ್ಕೆ ಮರಳಿದ ಮಮತಾ ಕುಲಕರ್ಣಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದು ತಮ್ಮ ಬದಲಾದ ಜೀವನಶೈಲಿಯಿಂದ. ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ಕಾಣಿಸಿಕೊಂಡ ಅವರು, ಅಧ್ಯಾತ್ಮದ ಹಾದಿ ಹಿಡಿದು ‘ಕಿನ್ನರ್ ಅಖಾಡ’ದ ಮಹಾಮಂಡಲೇಶ್ವರಿಯಾಗಿ ನೇಮಕಗೊಂಡರು. ತಮ್ಮ ಹಳೆಯ ಜೀವನಕ್ಕೆ ವಿದಾಯ ಹೇಳಿ ‘ಶ್ರೀ ಯಮಯಿ ಮಮತಾ ನಂದ ಗಿರಿ’ ಎಂಬ ಹೊಸ ಹೆಸರನ್ನು ಪಡೆದರು. ಆದರೆ, ಈ ಆಧ್ಯಾತ್ಮಿಕ ಪಯಣ ಸುಗಮವಾಗಿರಲಿಲ್ಲ; ಭೂಗತ ಲೋಕದೊಂದಿಗಿನ ಹಳೆಯ ಕೊಂಡಿಗಳ ಆರೋಪದ ಮೇಲೆ ಅವರನ್ನು ಅಖಾಡದಿಂದ ಉಚ್ಚಾಟಿಸಲಾಯಿತು.

ವಿವಾದಗಳ ಸುಳಿ ಮತ್ತು ಡ್ರಗ್ಸ್ ಪ್ರಕರಣ: ಮಮತಾ ಅವರ ಜೀವನ ತಿರುವು ಪಡೆದಿದ್ದು 2015ರಲ್ಲಿ. 2000 ಕೋಟಿ ರೂಪಾಯಿಗಳ ಬೃಹತ್ ಅಂತರಾಷ್ಟ್ರೀಯ ಡ್ರಗ್ಸ್ ಜಾಲದಲ್ಲಿ ಅವರ ಹೆಸರು ಕೇಳಿಬಂದಿತ್ತು. ಅವರ ಪಾಲುದಾರ ವಿಕ್ಕಿ ಗೋಸ್ವಾಮಿ ಈ ಪ್ರಕರಣದ ಕಿಂಗ್‌ಪಿನ್ ಎಂದು ಆರೋಪಿಸಲಾಗಿತ್ತು. ಆದರೆ, 2024ರಲ್ಲಿ ಬಾಂಬೆ ಹೈಕೋರ್ಟ್ ಈ ಎಲ್ಲಾ ಆರೋಪಗಳನ್ನು ವಜಾಗೊಳಿಸಿ, ಮಮತಾ ಅವರಿಗೆ ದೊಡ್ಡ ರಿಲೀಫ್ ನೀಡಿತು.

ದಾವುದ್ ಇಬ್ರಾಹಿಂ ಕುರಿತು ವಿವಾದಾತ್ಮಕ ಹೇಳಿಕೆ: ಇತ್ತೀಚಿನ ಸಂದರ್ಶನವೊಂದರಲ್ಲಿ ಮಮತಾ ಕುಲಕರ್ಣಿ ಅವರು ಭೂಗತ ಪಾತಕಿ ದಾವುದ್ ಇಬ್ರಾಹಿಂ ಕುರಿತು ನೀಡಿದ ಹೇಳಿಕೆ ಭಾರಿ ವಿವಾದ ಸೃಷ್ಟಿಸಿತ್ತು. “ದಾವುದ್ ಭಯೋತ್ಪಾದಕನಲ್ಲ” ಎಂಬರ್ಥದಲ್ಲಿ ಮಾತನಾಡಿದ ಅವರು, ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಅಥವಾ ಬಾಂಬ್ ಸ್ಫೋಟಗಳಲ್ಲಿ ಆತನ ಪಾತ್ರವಿಲ್ಲ ಎಂದು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದರು.

ಇದನ್ನೂ ಓದಿ: ಕಿನ್ನರ್ ಅಖಾಡ ಮಹಾಮಂಡಲೇಶ್ವರ ಸ್ಥಾನಕ್ಕೆ ರಾಜಿನಾಮೆ ನೀಡಿದ ಮಮತಾ ಕುಲಕರ್ಣಿ

ಈಗ ಎಲ್ಲಿದ್ದಾರೆ? ಸದ್ಯ ಗ್ಲಾಮರ್ ಲೋಕದಿಂದ ದೂರವೇ ಉಳಿದಿರುವ ಮಮತಾ ಕುಲಕರ್ಣಿ, ಇತ್ತೀಚೆಗೆ ‘ಲಾಫ್ಟರ್ ಚೆಫ್ಸ್’ (Laughter Chefs) ಕಾರ್ಯಕ್ರಮದಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಸದ್ಯಕ್ಕೆ ಅವರ ಕೈಯಲ್ಲಿ ಯಾವುದೇ ದೊಡ್ಡ ಪ್ರಾಜೆಕ್ಟ್‌ಗಳಿಲ್ಲದಿದ್ದರೂ, ಅವರ ಜೀವನದ ಒಂದೊಂದೇ ರಹಸ್ಯಗಳು ಇಂದಿಗೂ ಕುತೂಹಲ ಮೂಡಿಸುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗೆಲುವಿಗಾಗಿ 22 ಆಟಗಾರರನ್ನು ಕಣಕ್ಕಿಳಿಸಿದ ಮುಂಬೈ ಇಂಡಿಯನ್ಸ್

Source link

‘ಅಮೃತಧಾರೆ’: ಮೋಸ ಮಾಡಿ ಕಾಲ್ಕಿತ್ತ ಜೆಡಿ ಪತ್ನಿ ದಿಯಾ; ಬೀದಿಗೆ ಬಂದ ಜಯದೇವ್ – Kannada News | Amruthadhare Twist: Jayadev Cheated by Wife Diya; Faces Ruin and Serial End

‘ಅಮೃತಧಾರೆ’ ಧಾರಾವಾಹಿಯಲ್ಲಿ (Amruthadhaare) ಈಗ ದೊಡ್ಡ ಟ್ವಿಸ್ಟ್ ಒಂದು ಎದುರಾಗಿದೆ ಎಂದರೂ ತಪ್ಪಾಗಲಾರದು. ಈ ಧಾರಾವಾಹಿಯಲ್ಲಿ ಜಯದೇವ್ ಬೀದಿಗೆ ಬರುವುದು ಬಹುತೇಕ ಖಚಿತವಾಗಿದೆ. ಈ ಧಾರಾವಾಹಿಯಲ್ಲಿ ವಿಲನ್ ಆಗಿ ಮೆರೆಯುತ್ತಿದ್ದ ಆತನಿಗೆ ಸ್ವತಃ ಪತ್ನಿಯಿಂದಲೇ ಮೋಸ ಆಗಿದೆ. ಕುಟುಂಬದ ಎಲ್ಲರಿಗೂ ಮೋಸ ಮಾಡಿದ ಆತನಿಗೆ ಈಗ ಶಾಕ್ ಎದುರಾಗಿದೆ. ಶೀಘ್ರವೇ ಧಾರಾವಾಹಿ ಪೂರ್ಣಗೊಳ್ಳಬಹುದು ಎಂಬ ಅನುಮಾನ ಬಂದಿದೆ.

‘ಅಮೃತಧಾರೆ’ ಧಾರಾವಾಹಿಯಲ್ಲಿ ಒಂದು ದೊಡ್ಡ ಟ್ವಿಸ್ಟ್ ಎದುರಾಗಿತ್ತು. ಜಯದೇವ್ ತಾನು ಹೂಡಿಕೆ ಮಾಡಿದ್ದ. ಆದರೆ, ಈ ಹಣ ಈಗ ಇಲ್ಲದಂತೆ ಆಗಿದೆ. ಇದರಿಂದ ಕಂಪನಿ ಮಾರಿ ವಿದೇಶಕ್ಕೆ ತೆರಳುವ ಪ್ಲ್ಯಾನ್ ಮಾಡಿದ್ದ. ಆದರೆ, ಈ ಪ್ಲ್ಯಾನ್ ಕೈಕೊಟ್ಟಿದೆ. ಹಣ ಹಾಗೂ ಚಿನ್ನವನ್ನು ತೆಗೆದುಕೊಂಡು ಜಯದೇವ್ ಪತ್ನಿ ದಿಯಾ ಓಡಿ ಹೋಗಿದ್ದಾಳೆ. ಜೊತೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ಸೋರಿಕೆ ಮಾಡಿದ್ದಾರೆ. ಇದರಿಂದ ಅಧಿಕಾರಿಗಳು ಮನೆ ಬಾಗಿಲಿಗೆ ಬಂದಿದ್ದಾರೆ.

ಸದ್ಯದ ಬೆಳವಣಿಗೆ ಜಯದೇವ್​​ಗೆ ಶಾಕ್ ಕೊಟ್ಟಿದೆ. ಶಾರ್ಟ್​ ಕಟ್​​ನಲ್ಲಿ ತೆರಳಿ ಹಣ ಮಾಡಬೇಕು ಎಂದು ಆತ ಪ್ಲ್ಯಾನ್ ಮಾಡಿದ್ದ. ಆದರೆ, ಈ ಪ್ಲ್ಯಾನ್ ಉಲ್ಟಾ ಆಗಿದೆ. ಇದರಿಂದ ಮುಂದೇನು ಎನ್ನುವ ಪ್ರಶ್ನೆ ಆತನಿಗೆ ಮೂಡಿದೆ. ಈ ಸಂದರ್ಭದಲ್ಲಿ ಆತನ ಅಣ್ಣ ಗೌತಮ್ ಸಹಾಯಕ್ಕೆ ಬರುತ್ತಾನಾ ಎನ್ನುವ ಪ್ರಶ್ನೆ ಮೂಡಿದೆ.

ಈಗಾಗಲೇ ಗೌತಮ್​ಗೆ ಜಯದೇವ್ ಯಾವ ರೀತಿಯ ವ್ಯಕ್ತಿ ಎಂಬುದು ಗೊತ್ತಾಗಿದೆ. ಈ ಸಂದರ್ಭದಲ್ಲಿ ಅವನು ಈತನ ಬೆಂಬಲಕ್ಕೆ ನಿಲ್ಲೋದು ಅನುಮಾನವೇ. ಈ ವಿಷಯದಲ್ಲಿ ಯಾವ ರೀತಿಯ ಬೆಳವಣಿಗೆ ನಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ‘ಅಮೃತಧಾರೆ’ ಧಾರಾವಾಹಿಗೆ ಅಖಿಲಾಂಡೇಶ್ವರಿಯ ಎಂಟ್ರಿ

ಮುಂದಿನ ದಿನಗಳಲ್ಲಿ ಧಾರಾವಾಹಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಧಾರಾವಾಹಿ ಹೋಗುತ್ತಿರುವ ರೀತಿ ನೋಡಿದರೆ ಮೇ ತಿಂಗಳಾಂತ್ಯಕ್ಕೆ ಧಾರಾವಾಹಿ ಕೊನೆಗೊಳ್ಳಬಹುದು ಎಂದು ಹೇಳಲಾಗುತ್ತಾ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಮೃತ್ಯುವಿನ ದವಡೆಯಿಂದ ಮಗುವನ್ನು ಕಾಪಾಡಿದ ತಂದೆ, ಚಲಿಸುವ ರೈಲು-ಪ್ಲಾಟ್‌ಫಾರ್ಮ್ ನಡುವೆ ಬಿದ್ದ ಮಗುವಿನ ರಕ್ಷಣೆ – Kannada News | Father’s Quick Reflexes Avert Tragedy at Railway Platform in Bangladesh

ಬಾಂಗ್ಲಾದೇಶ,ಏಪ್ರಿಲ್ 30: ವ್ಯಕ್ತಿಯೊಬ್ಬರು ಚಲಿಸುತ್ತಿರುವ ರೈಲು-ಪ್ಲಾಟ್​ಫಾರ್ಮ್​ ಮಧ್ಯೆ ಬಿದ್ದ ತಮ್ಮ ಮಗುವನ್ನು ರಕ್ಷಿಸಿ ಹೀರೋ ಎನಿಸಿಕೊಂಡಿದ್ದಾರೆ. ಬಾಂಗ್ಲಾದೇಶದ ಕಿಶೋರ್‌ಗಂಜ್‌ನ ಭೈರಬ್ ರೈಲು ನಿಲ್ದಾಣದಲ್ಲಿ ಏಪ್ರಿಲ್ 28 ರಂದು ಮಧ್ಯಾಹ್ನ 3.30 ರ ಸುಮಾರಿಗೆ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಢಾಕಾಗೆ ಹೋಗುವ ಟೈಟಾಸ್ ಕಮ್ಯೂಟರ್ ರೈಲು ನಿಲ್ದಾಣದಿಂದ ಚಲಿಸಲು ಪ್ರಾರಂಭಿಸಿದಾಗ, ಇಳಿಯಲು ಆತುರಪಟ್ಟ ತಂದೆಯ ಕೈಯಿಂದ ಒಂದು ವರ್ಷದ ಮಗು ಜಾರಿ ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವಿನ ಕಿರಿದಾದ ಅಂತರಕ್ಕೆ ಬಿದ್ದಿತ್ತು.

ಕ್ಷಣಾರ್ಧವೂ ವಿಳಂಬ ಮಾಡದ ತಂದೆ, ತನ್ನ ಮಗುವನ್ನು ರಕ್ಷಿಸಲು ಚಲಿಸುವ ರೈಲಿನ ಕೆಳಗೆ ಹಾರಿದರು. ಮಗುವನ್ನು ಗಟ್ಟಿಯಾಗಿ ಅಪ್ಪಿಕೊಂಡ ಅವರು ಪ್ಲಾಟ್‌ಫಾರ್ಮ್‌ನ ಗೋಡೆಗೆ ಒರಗಿ ಮಲಗಿದರು. ಚಲಿಸುವ ರೈಲಿನ ಬೋಗಿಗಳು ಅವರ ಮೇಲೆಯೇ ಹಾದುಹೋದರೂ, ತಂದೆಯ ಸಮಯಪ್ರಜ್ಞೆಯಿಂದ ಇಬ್ಬರೂ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದರು. ರೈಲು ಸಂಪೂರ್ಣವಾಗಿ ಹಾದುಹೋದ ನಂತರ, ಅಲ್ಲಿದ್ದ ಜನರು ಮತ್ತು ಮಗುವಿನ ತಾಯಿ ಹಳಿಗಳ ಮೇಲೆ ಇಳಿದು ಮಗುವನ್ನು ಸುರಕ್ಷಿತವಾಗಿ ಮೇಲೆತ್ತಿಕೊಂಡರು. ಮಗು ಗಾಯಗಳಿಲ್ಲದೆ ಪಾರಾಗಿದ್ದು, ಈ ಎದೆನಡುಗಿಸುವ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version