Headlines

ಬೆಂಗಳೂರಿನಲ್ಲಿ ಪುಡಿರೌಡಿಗಳ ಕಿರುಕುಳ ತಪ್ಪಿಸಲು ವ್ಯಾಪಾರಿಗಳು ಆಗ್ರಹ: ಜೂ.1ರಂದು ಬೇಕರಿ-ಕಾಂಡಿಮೆಂಟ್ಸ್ ಬಂದ್..! – Kannada News | Bengaluru condiments association Calls Shop Bandh On June 18th Over rowdies harassment

ಬೆಂಗಳೂರು, (ಜೂನ್ 14): ಪೋಲಿಸರು (Police), ಜಿಬಿಎ ಅಧಿಕಾರಿಗಳು, ಆರೋಗ್ಯ ಇಲಾಖೆ ಸೇರಿದಂತೆ ಪ್ರಮುಖವಾಗಿ ಪುಡಿ ರೌಡಿಗಳ ಕಿರುಕುಳಕ್ಕೆ ಬ್ರೇಕ್ ಹಾಕುವಂತೆ ಆಗ್ರಹಿಸಿ, ಸಿಲಿಕಾನ್ ಸಿಟಿ ಬೆಂಗಳೂರಿನ ಬೇಕರಿ-ಕಾಂಡಿಮೆಂಟ್ಸ್, ಬೀಡಾ ಅಂಗಡಿ, ಸಣ್ಣಪುಟ್ಟ ವ್ಯಾಪಾರಿಗಳು ಗುರುವಾದಿಂದ ಅನಿರ್ದಿಷ್ಟಾವದಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಹೌದು….ಪುಡಿರೌಡಿಗಳ ಕಿರುಕುಳಕ್ಕೆ ಬೇಸತ್ತು ಬೇಕರಿ ಕಾಂಡಿಮೆಂಟ್ಸ್ ಅಸೋಸಿಯೇಷನ್ (Bengaluru condiments association), ಜೂನ್ 18ರಂದು ಬೇಕರಿ ಹಾಗೂ ಕಾಂಡಿಮೆಂಟ್ಸ್ ಅಂಗಡಿಗಳು ಬಂದ್ಗೆ ಕರೆ ನೀಡಿದೆ. ಈ ಮೂಲಕ ರೌಡಿಗಳ ದಾಂಧಲೆಗಳಿಗೆ ಬ್ರೇಕ್ ಹಾಕುವಂತೆ ಒತ್ತಾಯಿಸಿದೆ….

Read More

World Wind Day 2026: ವಿಶ್ವ ಪವನ ದಿನಾಚರಣೆಯ ಉದ್ದೇಶವೇನು? – Kannada News | World Wind Day 2026: Purpose of World Wind Day

ಪವನ (Wind) ಶಕ್ತಿಯು ಶುದ್ಧ, ನವೀಕರಿಸಬಹುದಾದ ಮತ್ತು ಹೇರಳವಾದ ಶಕ್ತಿಯ ನೈಸರ್ಗಿಕ ಮೂಲವಾಗಿದ್ದು, ಇದರಿಂದ ಶಕ್ತಿಯನ್ನು ಉತ್ಪಾದಿಸಬಹುದು ಅಲ್ಲದೆ ಇದು ಹವಾಮಾನ ಬದಲಾವಣೆಯನ್ನು ತಗ್ಗಿಸುವಲ್ಲಿ, ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವಲ್ಲಿ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮುಖ್ಯವಾಗಿ ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯ ಉಳಿವಿಗೂ ಗಾಳಿ ಬೇಕೇ ಬೇಕು. ಶುದ್ಧ ಗಾಳಿಯ ಮಹತ್ವವನ್ನು ಸಾರಲು, ಈ ಪವನ ಶಕ್ತಿಯ ವಿವಿಧ ಉಪಯೋಗ ಮತ್ತು ಅದರ ಸರಿಯಾದ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಜೂನ್…

Read More

ತೆರಿಗೆ ವಿನಾಯಿತಿ, ಉಚಿತ ಟಿಕೆಟ್: ಆದರೂ ಏಳುತ್ತಿಲ್ಲ ಕಂಗನಾ ಸಿನಿಮಾ – Kannada News | Kangana Ranaut starrer bharat bhagya vidhata movie declares tax free in Haryana

ಕಂಗನಾ ರನೌತ್ (Kangana Ranaut) ನಟನೆಯ ‘ಭಾರತ ಭಾಗ್ಯ ವಿಧಾತ’ ಹೆಸರಿನ ಸಿನಿಮಾ ಎರಡು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ನಟಿ ಮತ್ತು ಸಂಸದೆ ಆಗಿರುವ ಕಂಗನಾ ರನೌತ್ ಅವರು ಶುಶ್ರೂಕಿಯ ಪಾತ್ರದಲ್ಲಿ ನಟಿಸಿದ್ದಾರೆ. 2008 ರಲ್ಲಿ ನಡೆದ ಮುಂಬೈ ದಾಳಿಯ ವೇಳೆ ಮುಂಬೈನ ಕಾಮಾ ಆಸ್ಪತ್ರೆಯ ವೈದ್ಯರು ಮತ್ತು ಶುಶ್ರೂಕಿಯರು ತೋರಿದ ಅಭೂತಪೂರ್ವ ಧೈರ್ಯ, ತ್ಯಾಗ ಮತ್ತು ಸೇವೆಯ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾದ ಕಥಾವಸ್ತು ಚೆನ್ನಾಗಿದೆಯಾದರೂ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಬಲು ನೀರಸ…

Read More

IND vs PAK: ಪಾಕಿಸ್ತಾನ್ ವಿರುದ್ಧ ನಿರ್ಣಾಯಕ ಅರ್ಧಶತಕ ಚಚ್ಚಿದ ಸ್ಮೃತಿ ಮಂಧಾನ – Kannada News | India vs Pakistan Women’s T20 World Cup 2026: Smriti Mandhana’s Fifty Steers India Amidst Early Collapse

ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಮಹಿಳಾ ಟಿ20 ವಿಶ್ವಕಪ್ ( Women’s T20 World Cup 2026) ಪಂದ್ಯ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯಾವಳಿಯಲ್ಲಿ ಉಭಯ ತಂಡಗಳಿಗೆ ಇದು ಮೊದಲ ಪಂದ್ಯವಾಗಿದೆ. ಹೀಗಾಗಿ ಉಭಯ ತಂಡಗಳು ಗೆಲುವಿನೊಂದಿಗೆ ಟೂರ್ನಿ ಆರಂಭಿಸಲು ನೋಡುತ್ತಿವೆ. ಅದರಂತೆ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕಿ ಹರ್ಮನ್​ಪ್ರೀತ್ ಕೌರ್ ಮೊದಲು ಬ್ಯಾಟಿಂಗ್‌ ಆಯ್ದುಕೊಂಡರು. ಆದರೆ ನಾಯಕಿಯ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಲ್ಲಿ ಶಫಾಲಿ ಹಾಗೂ ಜೆಮೀಮಾ ಎಡವಿದರು. ಆದಾಗ್ಯೂ…

Read More

ಬಾಂಗ್ಲಾ ವಿರುದ್ಧ ಕೊನೆಯ ಓವರ್​ನಲ್ಲಿ ಗೆದ್ದು ಕ್ಲೀನ್ ಸ್ವೀಪ್​ನಿಂದ ಪಾರಾದ ಆಸ್ಟ್ರೇಲಿಯಾ – Kannada News | Cooper Connolly’s Century Powers Australia to Thrilling ODI Win vs Bangladesh

ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಬಾಂಗ್ಲಾದೇಶ ಪ್ರವಾಸ ಮಾಡಿದ್ದ ಆಸ್ಟ್ರೇಲಿಯಾ (Australia vs Bangladesh ODI) ತಂಡ 2-0 ಅಂತರದಿಂದ ಏಕದಿನ ಸರಣಿ ಸೋತಿತ್ತು. ಆದರೆ ಕ್ಲೀನ್ ಸ್ವೀಪ್ ಮುಖಭಂಗದಿಂದ ಪಾರಾಗಲು ಆಸ್ಟ್ರೇಲಿಯಾ ಕೊನೆಯ ಏಕದಿನ ಪಂದ್ಯವನ್ನು ಗೆಲ್ಲಲೇಬೇಕಿತ್ತು. ಅದರಂತೆ ಕೂಪರ್ ಕನೋಲಿ (Cooper Connolly) ಅವರ ಅಮೋಘ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ, ಬಾಂಗ್ಲಾದೇಶ ವಿರುದ್ಧ ಕೊನೆಯ ಓವರ್​ನಲ್ಲಿ ಗುರಿ ಬೆನ್ನಟ್ಟಿ ರೋಚಕ ಜಯ ಸಾಧಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಬಾಂಗ್ಲಾದೇಶ ತಂಡ…

Read More

ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಮಹಾ ಭೂಕಂಪ: ಟಿಎಂಸಿ ಬಂಡಾಯ ಸಂಸದರಿಂದ ಹೊಸ ಪಕ್ಷ ಸ್ಥಾಪನೆ, ಎನ್‌ಡಿಎ ಜೊತೆ ವಿಲೀನ ಸಾಧ್ಯತೆ – Kannada News | TMC Crisis: Rebel MPs May Form ‘Nationalist Citizen Party’, Eye NDA Merger in West Bengal

ಕೋಲ್ಕತ್ತಾ/ನವದೆಹಲಿ, ಜೂನ್ 14: ಲೋಕಸಭೆ ಚುನಾವಣೆ ಬೆನ್ನಲ್ಲೇ ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಸ್ಫೋಟಗೊಂಡಿರುವ ಭಿನ್ನಮತವು ತಾರ್ಕಿಕ ಅಂತ್ಯ ಮುಟ್ಟುವ ಸೂಚನೆ ಇದೆ. ತಮ್ಮ ಪಕ್ಷದ ಹೈಕಮಾಂಡ್ ಧೋರಣೆಯಿಂದ ಅಸಮಾಧಾನಗೊಂಡಿರುವ ಟಿಎಂಸಿಯ ಒಂದು ದೊಡ್ಡ ಸಂಸದರ ಗುಂಪು ಬಂಡಾಯವೆದ್ದಿದ್ದು, ‘ನ್ಯಾಷನಲಿಸ್ಟ್ ಸಿಟಿಜನ್ ಪಾರ್ಟಿ’ (Nationalist Citizen Party) ಎಂಬ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಲು ಹೊರಟಿದೆ. ಅಷ್ಟೇ ಅಲ್ಲ, ತಮ್ಮ ಹೊಸ ಪಕ್ಷವನ್ನು ಕೇಂದ್ರದ ಆಡಳಿತಾರೂಢ ಎನ್‌ಡಿಎ (NDA) ಒಕ್ಕೂಟದೊಂದಿಗೆ ವಿಲೀನಗೊಳಿಸಲು ತೆರೆಮರೆಯಲ್ಲಿ…

Read More

‘ಕಾಕ್ರೂಚ್’ಗಳ ಪ್ರತಿಭಟನೆಗೆ ನಟ ಪ್ರಕಾಶ್ ರೈ ಸಾಥ್: ವಿಡಿಯೋ – Kannada News | Prakash Raj participated in protest organized by CJP

ಕಾಕ್ರೂಚ್ ಜನತಾ ಪಾರ್ಟಿಯ (Cockroach janata party) ಸದಸ್ಯರು ಇಂದು (ಜೂನ್ 14) ಬೆಂಗಳೂರಿನಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ನಟ ಪ್ರಕಾಶ್ ರೈ ಭಾಗಿ ಆಗಿದ್ದಾರೆ. ಕಾಕ್ರೂಚ್ ಜನಪಾ ಪಾರ್ಟಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಲು ಆರಂಭಿಸಿದಾಗಿನಿಂತಲೂ ಅದರ ಪರವಾಗಿಯೇ ನಿಂತಿದ್ದ ಪ್ರಕಾಶ್ ರೈ, ಇದೀಗ ಪ್ರತಿಭಟನೆಗೆ ಹಾಜರಾಗುವ ಮೂಲಕ ಬಹಿರಂಗ ಬೆಂಬಲ ಘೋಷಿಸಿದ್ದಾರೆ. ಕಾಕ್ರೂಚ್ ಜನಪಾ ಪಾರ್ಟಿ ಸದಸ್ಯರು, ನೀಟ್ ಅಕ್ರಮ ಖಂಡಿಸಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್​​ನಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಹಲವು ಯುವಕರು ಭಾಗಿ…

Read More

ಬಾಂಗ್ಲಾ ವಿರುದ್ಧ ಕೊನೆಯ ಓವರ್​ನಲ್ಲಿ ಗೆದ್ದು ಕ್ಲೀನ್ ಸ್ವೀಪ್​ನಿಂದ ಪಾರಾದ ಆಸ್ಟ್ರೇಲಿಯಾ – Kannada News | Australia prevents clean sweep bangladesh odi

ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಬಾಂಗ್ಲಾದೇಶ ಪ್ರವಾಸ ಮಾಡಿದ್ದ ಆಸ್ಟ್ರೇಲಿಯಾ ತಂಡ 2-0 ಅಂತರದಿಂದ ಏಕದಿನ ಸರಣಿ ಸೋತಿತ್ತು. ಆದರೆ ಕ್ಲೀನ್ ಸ್ವೀಪ್ ಮುಖಭಂಗದಿಂದ ಪಾರಾಗಲು ಆಸ್ಟ್ರೇಲಿಯಾ ಕೊನೆಯ ಏಕದಿನ ಪಂದ್ಯವನ್ನು ಗೆಲ್ಲಲೇಬೇಕಿತ್ತು. ಅದರಂತೆ ಕೂಪರ್ ಕನೋಲಿ ಅವರ ಅಮೋಘ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ, ಬಾಂಗ್ಲಾದೇಶ ವಿರುದ್ಧ ಕೊನೆಯ ಓವರ್​ನಲ್ಲಿ ಗುರಿ ಬೆನ್ನಟ್ಟಿ ರೋಚಕ ಜಯ ಸಾಧಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಬಾಂಗ್ಲಾದೇಶ ತಂಡ 274 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ…

Read More

ಧರ್ಮಸ್ಥಳ ಪ್ರವಾಸ ಮುಗಿಸಿ ಬರುವಾಗ ದುರಂತ: ಹೇಮಾವತಿ ಹಿನ್ನೀರಿನಲ್ಲಿ ಮೂವರು ಯುವಕರು ಜಲಸಮಾಧಿ – Kannada News | Hemavathi Dam Tragedy: Three Youths Drown in Gorur Shettyhalli Church Backwaters

ಹಾಸನ, ಜೂನ್​​ 14: ಜಿಲ್ಲೆಯಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಪ್ರವಾಸಿ ತಾಣವಾದ ಶೆಟ್ಟಿಹಳ್ಳಿ ಚರ್ಚ್ ವೀಕ್ಷಿಸಲು ಹೋಗಿದ್ದ ಬೆಂಗಳೂರು ಮೂಲದ ಮೂವರು ಯುವಕರು (Youths) ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ (death). ಸ್ನೇಹಿತರ ಕಣ್ಣೆದುರೇ ಮೂವರು ಯುವಕರು ಜಲಸಮಾಧಿಯಾದ ಕರುಣಾಜನಕ ಘಟನೆ ಹಾಸನ ತಾಲೂಕಿನ ಗೊರೂರು ಬಳಿಯಿರುವ ಹೇಮಾವತಿ ಜಲಾಶಯದಲ್ಲಿ ನಡೆದಿದೆ. ಗೊರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮುಖ್ಯಾಂಶಗಳು ಈಜಲು ಹೋಗಿ ಮೂವರು ಯುವಕರು ನೀರುಪಾಲು ಹಾಸನ ತಾಲೂಕಿನ ಗೊರೂರು ಬಳಿಯಿರುವ…

Read More

Bankra Masjid: ಕೋಲ್ಕತ್ತಾ ಏರ್​ಪೋರ್ಟ್ ಆವರಣದಿಂದ ಶತಮಾನದ ಹಳೆಯ ಬಾಂಕ್ರಾ ಮಸೀದಿಯ ಸ್ಥಳಾಂತರಕ್ಕೆ ನಿರ್ಧಾರ – Kannada News | Kolkata Airport Security: Bankra Mosque Relocation for Enhanced Flight Safety

ಕೋಲ್ಕತ್ತಾ, ಜೂನ್ 14: ಭದ್ರತೆ ಹಾಗೂ ವಿಮಾನಯಾನ ಸುರಕ್ಷತೆಯ ದೃಷ್ಟಿಯಿಂದ ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರಬೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ಬಳಿ ಇರುವ 136 ವರ್ಷ ಹಳೆಯ ‘ಬಾಂಕ್ರಾ ಮಸೀದಿ’ಯನ್ನು (ಗೌರಿಪುರ ಜಾಮೆ ಮಸೀದಿ) ಸ್ಥಳಾಂತರಿಸುವ ಮೂರು ದಶಕಗಳ ಹಳೆಯ ಪ್ರಸ್ತಾವನೆಗೆ ಇದೀಗ ಮರುಜೀವ ಬಂದಿದೆ. ಕೇಂದ್ರ ಸರ್ಕಾರ ಮತ್ತು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಗಳು ಒಮ್ಮತಕ್ಕೆ ಬಂದಿದ್ದು, ಮಸೀದಿಯನ್ನು ಸುರಕ್ಷಿತವಾಗಿ ಬೇರೆಡೆಗೆ ಸ್ಥಳಾಂತರಿಸಲು ಜಂಟಿ ಮಾತುಕತೆಗಳು ಚುರುಕುಗೊಂಡಿವೆ. ಏನಿದು ಬಾಂಕ್ರಾ ಮಸೀದಿ ಸ್ಥಳಾಂತರ ಸಮಸ್ಯೆ?…

Read More