Video: ಕಿರಿದಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ – Kannada News | Asansol Car Attack: Viral CCTV Captures Violent Conflict in West Bengal Street

ಪಶ್ಚಿಮ ಬಂಗಾಳದ ಅಸನ್ಸೋಲ್‌ನಲ್ಲಿ ಭೀಕರ ಸಂಘರ್ಷವೊಂದು ಸಂಭವಿಸಿದ್ದು, ಕಿರಿದಾದ ಗಲ್ಲಿಯೊಂದರಲ್ಲಿ ನಡೆದ ಈ ಘಟನೆಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಜನರ ಗುಂಪಿನ ಮೇಲೆ ಕಾರೊಂದು ನುಗ್ಗಲು ಪ್ರಯತ್ನಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಕುಪಿತಗೊಂಡ ಸಾರ್ವಜನಿಕರು ಕಾರಿನ ಮೇಲೆ ಮನಬಂದಂತೆ ದಾಳಿ ನಡೆಸಿ ಜಖಂಗೊಳಿಸಿದ್ದಾರೆ. ಕಾರಿನ ಗಾಜುಗಳನ್ನು ಕಲ್ಲು ಮತ್ತು ದೊಣ್ಣೆಗಳಿಂದ ಹೊಡೆದು ಪುಡಿಪುಡಿ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

Source link

ಬಂದೇ ಬಿಡ್ತು ‘ಹೌಸ್ ಆಫ್ ದಿ ಡ್ರ್ಯಾಗನ್ 3’: ಬಿಡುಗಡೆ ದಿನಾಂಕ ಘೋಷಣೆ – Kannada News | House Of The Dragon season 3 trailer released

ವಿಶ್ವದ ಈ ವರೆಗಿನ ಅತ್ಯುತ್ತಮ ವೆಬ್ ಸರಣಿ ‘ಗೇಮ್ ಆಫ್ ಥ್ರೋನ್ಸ್’ (Game Of  Thrones) ಎನ್ನಲಾಗುತ್ತದೆ. ವಿಶ್ವದಲ್ಲಿ ಅತಿ ಹೆಚ್ಚು ಜನ ನೋಡಿರುವ ವೆಬ್ ಸರಣಿ ಸಹ ಇದೇ ಆಗಿದೆ. ಜಾರ್ಜ್​ ಆರ್​​ಆರ್ ಮಾರ್ಟಿನ್ ಬರೆದಿರುವ ‘ಆ ಸಾಂಗ್ ಆಫ್ ಐಸ್ ಆಂಡ್ ಫೈರ್’ ಪುಸ್ತಕ ಸರಣಿಯನ್ನು ಆಧರಿಸಿದ ಕತೆಯನ್ನು ಇದು ಒಳಗೊಂಡಿದೆ. ‘ಗೇಮ್ ಆಫ್ ಥ್ರೋನ್’ ವೆಬ್ ಸರಣಿ 2019 ರಲ್ಲಿ ಕೊನೆಗೊಂಡಿತ್ತು. ಅದರ ಪ್ರೀಕ್ವೆಲ್ ‘ಹೌಸ್ ಆಫ್ ದಿ ಡ್ರ್ಯಾಗನ್’ 2022 ರಲ್ಲಿ ಮೊದಲ ಸೀಸನ್ ಪ್ರಸಾರವಾಗಿ ಭಾರಿ ಜನಪ್ರಿಯತೆ ಗಳಿಸಿಕೊಂಡಿತು. ಇದೀಗ ‘ಹೌಸ್ ಆಫ್ ದಿ ಡ್ರ್ಯಾಗನ್’ ಸೀಸನ್ 3 ಪ್ರಸಾರಕ್ಕೆ ಅಣಿಯಾಗಿದ್ದು, ವೆಬ್ ಸರಣಿಯ ಟ್ರೈಲರ್ ಬಿಡುಗಡೆ ಆಗಿದೆ. ಜೊತೆಗೆ ಬಿಡುಗಡೆ ದಿನಾಂಕವನ್ನು ಸಹ ಪ್ರಕಟಿಸಲಾಗಿದೆ.

‘ಹೌಸ್ ಆಫ್ ದಿ ಡ್ರ್ಯಾಗನ್’ ಸರಣಿಯು ‘ಗೇಮ್ ಆಫ್ ಥ್ರೋನ್’ ಕತೆ ನಡೆಯುವ 200 ವರ್ಷ ಹಿಂದಿನ ಕತೆಯನ್ನು ಒಳಗೊಂಡಿದೆ. ಸೀಸನ್ 1 ಬಹುತೇಕ ಪಾತ್ರ ಪರಿಚಯ, ವಿವಿಧ ಹೌಸ್​​ಗಳ ಪರಿಚಯ ಅವರ ಸ್ಥಿತಿ ಇನ್ನಿತರೆಗಳನ್ನು ತೋರಿಸಿದರೆ ಸೀಸನ್ 2ರಲ್ಲಿ ಟಾಗೇರಿಯನ್ ರಾಜನ ಸಾವಿನ ಮೂಲಕ ಒಳ ರಾಜಕೀಯಗಳು ಶುರುವಾಗಿದ್ದವು. ಯುದ್ಧಕ್ಕೆ ತಯಾರಿ ಆರಂಭಿಸುವ ಮೂಲಕ ಎರಡನೇ ಸೀಸನ್ ಅಂತ್ಯವಾಗಿತ್ತು. ಆದರೆ ಇದೀಗ ಸೀಸನ್ 3 ರಲ್ಲಿ ಯುದ್ಧ ಮತ್ತು ಅದರ ನಂತರದ ಕತೆಯನ್ನು ಒಳಗೊಂಡಿದೆ.

ಈಗ ಬಿಡುಗಡೆ ಆಗಿರುವ ಟೀಸರ್​​ನಲ್ಲಿ ರಿಹಾನಾ ಟಾಗೇರಿಯನ್ ಮತ್ತು ಏಮಂಡ್ ಟಾಗೇರಿಯನ್ ನಡುವೆ ಭೀಕರ ಯುದ್ಧ ನಡೆದಿದೆ. ಕೊಲೆಯಾಗುವ ಭಯದಿಂದ ಪರಾರಿ ಆಗಿರುವ ಆತನ ಸಹೋದರ ಏಗನ್ ಟಾಗೇರಿಯನ್ ಸಹ ಈ ಸೀಸನ್​​ನಲ್ಲಿ ತಮ್ಮನ ವಿರುದ್ಧ ಸೇಡು ತೀರಿಸಿಕೊಳ್ಳಲು ಮರಳಿ ಬರುತ್ತಿದ್ದಾನೆ. ರಿಹಾನಾಳ ಪತಿ ಮತ್ತು ಚಿಕ್ಕಪ್ಪ ಎರಡೂ ಆಗಿರುವ ಡೇಮನ್ ಟಾಗೇರಿಯನ್ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದನ್ನು ಸಹ ತೋರಿಸಲಾಗಿದೆ. ಜೊತೆಗೆ ಕೆಲವು ಹೊಸ ಪಾತ್ರಗಳ ಪರಿಚಯವನ್ನು ಸೀಸನ್ 3ರಲ್ಲಿ ಮಾಡಲಾಗಿದೆ.

ಇದನ್ನೂ ಓದಿ:ಕೊಲೆ ಮಾಡಲು ಒಂದು ತಿಂಗಳು ವೆಬ್ ಸೀರೀಸ್ ನೋಡಿದ ಆರೋಪಿಗಳು

‘ಹೌಸ್ ಆಫ್ ದಿ ಡ್ರ್ಯಾಗನ್’ ಸೀಸನ್ 3 ಜೂನ್ 22 ಕ್ಕೆ ಬಿಡುಗಡೆ ಆಗಲಿದೆ. ಎಚ್​​ಬಿಓನಲ್ಲಿ ಇದು ಪ್ರಸಾರ ಆಗಲಿದ್ದು, ಜಿಯೋ ಹಾಟ್​​ಸ್ಟಾರ್​​ನಲ್ಲಿ ಸಹ ವೆಬ್ ಸರಣಿಯನ್ನು ವೀಕ್ಷಿಸಬಹುದಾಗಿದೆ. ‘ಗೇಮ್ ಆಫ್ ಥ್ರೋನ್ಸ್’ ಸರಣಿಯ ಎರಡನೇ ಪ್ರೀಕ್ವೆಲ್ ಇದಾಗಿದೆ. ‘ಹೌಸ್ ಆಫ್ ದಿ ಡ್ರ್ಯಾಗನ್’ ಹೊರತಾಗಿ ‘ಎ ನೈಟ್ ಆಫ್ ದಿ ಸೆವೆನ್ ಕಿಂಗ್ಡಮ್ಸ್’ ಹೆಸರಿನ ವೆಬ್ ಸರಣಿ ಸಹ ಈಗಾಗಲೇ ಪ್ರದರ್ಶನ ಆಗುತ್ತಿದ್ದು ಅದರ ಒಂದು ಸೀಸನ್​ ಈಗಾಗಲೇ ಪ್ರಸಾರ ಆಗಿದ್ದು, ಅದೂ ಸಹ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಎರಡನೇ ಸೀಸನ್ ಈ ವರ್ಷದ ಅಂತ್ಯದಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ಹೋರಾಟದ ವೇಳೆ ರೈತರು, ಪೊಲೀಸರ ನಡುವೆ ಘರ್ಷಣೆ – Kannada News | Chikkaballapur Farmers Clash with Police Over KIADB Land Acquisition Protest

ಚಿಕ್ಕಬಳ್ಳಾಪುರ, ಏಪ್ರಿಲ್​​ 29: ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ರೈತರ ಪ್ರತಿಭಟನೆ ವೇಳೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಎದುರು ಭಾರಿ ಹೈಡ್ರಾಮಾವೇ ನಡೆದಿದೆ. ರೈತರ ಕೊರಳುಪಟ್ಟಿಗೆ ಕೈ ಹಾಕಿ ಪೊಲೀಸರು ದೌರ್ಜನ್ಯ ನಡೆಸಿರುವ ಆರೋಪ ಕಾರಣಕ್ಕೆ ಕೆಲ ಕಾಲ ಪರಿಸ್ಥಿತಿ ಪ್ರಕ್ಷುಬ್ಧಗೊಂಡಿದ್ದು, ರೈತರು ಹಾಗೂ ಪೊಲೀಸರ ನಡುವೆ ನೂಕಾಟ, ತಳ್ಳಾಟ ನಡೆದಿದೆ. ಪೊಲೀಸರ ವಿರುದ್ದ ರಾಜ್ಯ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ ಬಣ ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು, ದೌರ್ಜನ್ಯ ನಡೆಸಿರುವ ಪೊಲೀಸರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕೆಲಸ ಮಾಡುತ್ತಲೇ ಸಾವನ್ನಪ್ಪಿದ ಉದ್ಯೋಗ ಖಾತ್ರಿ ಕಾರ್ಮಿಕ: ಅಧಿಕಾರಿಗಳ ನಿರ್ಲಕ್ಷ್ಯ ಬಯಲು ಮಾಡಿದ ಟಿವಿ9 ರಿಯಾಲಿಟಿ ಚೆಕ್! – Kannada News | Raichur Heatwave Death: MGNREGA Worker Dies Due to Lack of Facilities; TV9 Reality Check Exposes PDO Negligence

ರಾಯಚೂರು, ಏಪ್ರಿಲ್ 29: ಯಾಪಲದಿನ್ನಿ ಪಂಚಾಯತ್ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಕೆಲಸ ಮಾಡುವಾಗ ಬಿಸಿಲ ಬೇಗೆಗೆ ಕಾರ್ಮಿಕ ಹುಸೇನಪ್ಪ ಸಾವನ್ನಪ್ಪಿದ್ದಾರೆ ಎಂದು ಆತನ ಕುಟುಂಬಸ್ಥರು ಹೇಳುತ್ತಿದ್ದಾರೆ. ಟಿವಿ9 ರಿಯಾಲಿಟಿ ಚೆಕ್‌ನಲ್ಲಿ ಕೆಲಸದ ಸ್ಥಳದಲ್ಲಿ ಕುಡಿಯುವ ನೀರು ಮತ್ತು ನೆರಳಿನ ವ್ಯವಸ್ಥೆ ಇಲ್ಲದಿರುವುದು ಬಯಲಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಮೃತನ ಕುಟುಂಬ ಮತ್ತು ರೈತ ಸಂಘಟನೆಗಳು ಸೂಕ್ತ ಪರಿಹಾರಕ್ಕಾಗಿ ಆಗ್ರಹಿಸಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

6+2+4 ಸಂಯೋಜನೆಯಲ್ಲಿ ಕಣಕ್ಕಿಳಿಯಲಿದೆ RCB – Kannada News | IPL 2026: RCB Playing XI For Gujarat Titans Match

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 42ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ಹಾಗೂ ರಾಯಲ್ ಚಾಲೆಂಜರ್ಸ್ (RCB) ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ. ಗುರುವಾರ (ಏ.30) ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಆರ್​ಸಿಬಿ ತಂಡ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ರೂಪಿಸಲಿದೆ. ಇದಕ್ಕಾಗಿ ಕಳೆದ ಬಾರಿ ಕಣಕ್ಕಿಳಿದಂತೆ 6+2+4 ಸಂಯೋಜನೆಯನ್ನು ರೂಪಿಸಲಿದ್ದಾರೆ.

ಅದರಂತೆ ಆರ್​ಸಿಬಿ ಪರ ಪೂರ್ಣ ಪ್ರಮಾಣದ ಬ್ಯಾಟರ್​ಗಳಾಗಿ ವಿರಾಟ್ ಕೊಹ್ಲಿ, ಜೇಕಬ್ ಬೆಥೆಲ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಜಿತೇಶ್ ಶರ್ಮಾ ಹಾಗೂ ಟಿಮ್ ಡೇವಿಡ್ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಆಲ್​ರೌಂಡರ್​ಗಳಾಗಿ ಕೃನಾಲ್ ಪಾಂಡ್ಯ ಹಾಗೂ ರೊಮಾರಿಯೊ ಶೆಫರ್ಡ್ ಕಣಕ್ಕಿಳಿಯಲಿದ್ದಾರೆ. ಹಾಗೆಯೇ ಬೌಲರ್​ಗಳಾಗಿ ಆರ್​ಸಿಬಿ ಪರ ಜೋಶ್ ಹೇಝಲ್​ವುಡ್, ಭುವನೇಶ್ವರ್ ಕುಮಾರ್, ರಾಸಿಖ್ ದಾರ್ ಕಾಣಿಸಿಕೊಳ್ಳುವುದು ಖಚಿತ. ಇವರೊಂದಿಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಸ್ಪಿನ್ನರ್ ಸುಯಶ್ ಶರ್ಮಾ ಕೂಡ ಸೇರ್ಪಡೆಯಾಗಲಿದ್ದಾರೆ.

ಅಂದರೆ ಆರುಬ್ಯಾಟರ್​ಗಳು, ಇಬ್ಬರು ಆಲ್​ರೌಂಡರ್​ಗಳು ಮತ್ತು ನಾಲ್ವರು ಬೌಲರ್​ಗಳೊಂದಿಗೆ ಆರ್​ಸಿಬಿ ತಂಡವು ತನ್ನ ಪ್ಲೇಯಿಂಗ್ ಇಲೆವೆನ್ ರೂಪಿಸಲಿದ್ದಾರೆ. ಅದರಂತೆ ಆರ್​ಸಿಬಿ ತಂಡದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…

  • ವಿರಾಟ್ ಕೊಹ್ಲಿ
  • ಜೇಕಬ್ ಬೆಥೆಲ್
  • ದೇವದತ್ ಪಡಿಕ್ಕಲ್
  • ರಜತ್ ಪಾಟಿದಾರ್ (ನಾಯಕ)
  • ಟಿಮ್ ಡೇವಿಡ್
  • ಜಿತೇಶ್ ಶರ್ಮಾ
  • ರೊಮಾರಿಯೊ ಶೆಫರ್ಡ್​
  • ಕೃನಾಲ್ ಪಾಂಡ್ಯ
  • ಜೋಶ್ ಹೇಝಲ್​ವುಡ್​
  • ಭುವನೇಶ್ವರ್ ಕುಮಾರ್
  • ರಾಸಿಖ್ ದಾರ್
  • ಸುಯಶ್ ಶರ್ಮಾ (ಇಂಪ್ಯಾಕ್ಟ್ ಪ್ಲೇಯರ್).

ಫಿಲ್ ಸಾಲ್ಟ್ ಡೌಟ್!

ಬೆಂಗಳೂರಿನಲ್ಲಿ ನಡೆದ ಅಭ್ಯಾಸದ ವೇಳೆ ಗಾಯಗೊಂಡಿದ್ದ ಆರ್​ಸಿಬಿ ತಂಡದ ಸ್ಫೋಟಕ ದಾಂಡಿಗ ಫಿಲ್ ಸಾಲ್ಟ್ ಏಪ್ರಿಲ್ 24 ರಂದು ನಡೆದ ಗುಜರಾತ್ ಟೈಟಾನ್ಸ್​ ಮತ್ತು ಏಪ್ರಿಲ್ 27 ರಂದು ಜರುಗಿದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು.

ಇದೀಗ ಫಿಟ್​ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಸಾಲ್ಟ್ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ನಾಳೆ (ಏ.30) ನಡೆಯಲಿರುವ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲೂ ಆರ್​ಸಿಬಿ ಪರ ಜೇಕಬ್ ಬೆಥೆಲ್ ಇನಿಂಗ್ಸ್ ಆರಂಭಿಸುವುದನ್ನು ಎದುರು ನೋಡಬಹುದು.

ಇದನ್ನೂ ಓದಿ: David Miller: ಕಿಲ್ಲರ್ ಮಿಲ್ಲರ್ ವಿಶ್ವ ದಾಖಲೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜೇಕಬ್ ಬೆಥೆಲ್, ಜೋಶ್ ಹೇಝಲ್​ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಯಶ್ ದಯಾಳ್, ರಾಸಿಖ್ ಸಲಾಂ, ವೆಂಕಟೇಶ್ ಅಯ್ಯರ್, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ಜೇಕಬ್ ಡಫಿ, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ಜೋರ್ಡನ್ ಕಾಕ್ಸ್, ವಿಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾನ್.

Source link

Video: ಇದು ಉತ್ತರ ಪ್ರದೇಶದ ಅಭಿವೃದ್ಧಿಯ ಜೀವಸೆಲೆ, ಗಂಗಾ ಎಕ್ಸ್​ಪ್ರೆಸ್ ವೇ ಉದ್ಘಾಟಿಸಿದ ಪ್ರಧಾನಿ ಮೋದಿ – Kannada News | Narendra Modi Unveils Ganga Expressway Linking Uttar Pradesh End to End

ಮೀರತ್, ಏಪ್ರಿಲ್ 29: ಪ್ರಧಾನಿ ನರೇಂದ್ರ ಮೋದಿ ಇಂದು ಗಂಗಾ ಎಕ್ಸ್​ಪ್ರೆಸ್​ ವೇ ಉದ್ಘಾಟಿಸಿದ್ದಾರೆ. ಪಶ್ಚಿಮ ಉತ್ತರ ಪ್ರದೇಶವನ್ನು ಪೂರ್ವ ಉತ್ತರ ಪ್ರದೇಶದೊಂದಿಗೆ ಸಂಪರ್ಕಿಸುವ ಈ ಎಕ್ಸ್‌ಪ್ರೆಸ್‌ವೇ ಮೀರತ್‌ನಿಂದ ಪ್ರಯಾಗ್‌ರಾಜ್‌ವರೆಗಿನ 594 ಕಿ.ಮೀ ದೂರವನ್ನು ಕಡಿಮೆ ಮಾಡುತ್ತದೆ. ಈಗ, ಕೆಲವೇ ಗಂಟೆಗಳಲ್ಲಿ, ನೀವು ಪ್ರಯಾಗ್‌ರಾಜ್‌ನಲ್ಲಿರುವ ಸಂಗಮವನ್ನು ತಲುಪಬಹುದು ಮತ್ತು ಕಾಶಿಯಲ್ಲಿ ಬಾಬಾ ವಿಶ್ವನಾಥನನ್ನು ಭೇಟಿ ಮಾಡಿ ಹಿಂತಿರುಗಬಹುದು.

ಸಾವಿರಾರು ವರ್ಷಗಳಿಂದ ಗಂಗಾ ತಾಯಿ ಉತ್ತರ ಪ್ರದೇಶ ಮತ್ತು ದೇಶದ ಜೀವನಾಡಿಯಾಗಿರುವಂತೆ, ಆಧುನಿಕ ಪ್ರಗತಿಯ ಈ ಯುಗದಲ್ಲಿ ಆಕೆಯ ಬಳಿ ಹಾದುಹೋಗುವ ಈ ಎಕ್ಸ್‌ಪ್ರೆಸ್‌ವೇ ಉತ್ತರ ಪ್ರದೇಶದ ಅಭಿವೃದ್ಧಿಗೆ ಹೊಸ ಜೀವನಾಡಿಯಾಗಲಿದೆ ಎಂದು ಹೇಳಿದರು.

ಕಳೆದ ನಾಲ್ಕೈದು ದಿನಗಳಿಂದ ನಾನು ಗಂಗಾ ಮಾತೆಯ ಸನ್ನಿಧಿಯಲ್ಲಿದ್ದೇನೆ ಎಂಬುದು ಕಾಕತಾಳೀಯ, ನಾನು ಬಂಗಾಳದಲ್ಲಿದ್ದಾಗ, ಅಲ್ಲಿ ಗಂಗಾ ಮಾತೆಯ ದರ್ಶನ ಪಡೆದಿದ್ದೆ, ನಿನ್ನೆ ನಾನು ಕಾಶಿಯಲ್ಲಿದ್ದೆ, ಮತ್ತು ಇಂದು ಬಾಬಾ ವಿಶ್ವನಾಥ ಅವರೊಂದಿಗೆ ಗಂಗಾ ಮಾತೆಯ ದರ್ಶನ ಪಡೆಯುವ ಭಾಗ್ಯ ನನಗೆ ಸಿಕ್ಕಿತು ಎಂದು ಹೇಳಿದ್ದಾರೆ.

ಸುಮಾರು 36,230 ಕೋಟಿ ರೂ. ಒಟ್ಟು ವೆಚ್ಚದಲ್ಲಿ ನಿರ್ಮಿಸಲಾದ ಗಂಗಾ ಎಕ್ಸ್‌ಪ್ರೆಸ್‌ವೇ ಮೀರತ್ ಮತ್ತು ಪ್ರಯಾಗ್‌ರಾಜ್ ನಡುವಿನ ಪ್ರಯಾಣದ ಸಮಯವನ್ನು ಪ್ರಸ್ತುತ 10-12 ಗಂಟೆಗಳಿಂದ ಸುಮಾರು 6 ಗಂಟೆಗಳವರೆಗೆ ಕಡಿಮೆ ಮಾಡುವ ನಿರೀಕ್ಷೆಯಿದೆ.
ಈ ಎಕ್ಸ್‌ಪ್ರೆಸ್‌ವೇಗೆ ಉತ್ತರ ಪ್ರದೇಶ ಸರ್ಕಾರ ಗಂಗಾ ಮಾತೆಯ ಹೆಸರಿಟ್ಟಿರುವುದು ನನಗೆ ಸಂತೋಷ ತಂದಿದೆ. ಇದು ನಮ್ಮ ಅಭಿವೃದ್ಧಿಯ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ ಮತ್ತು ನಮ್ಮ ಪರಂಪರೆಯನ್ನು ಪ್ರದರ್ಶಿಸುತ್ತದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರಣಾಂಗಣವಾದ ಕುವೆಂಪು ವಿಶ್ವವಿದ್ಯಾಲಯದ ಆವರಣ: ಕುಲಪತಿ ಕಚೇರಿಯ ಕುರ್ಚಿ, ಪಾಟ್​​ಗಳು ಧ್ವಂಸ – Kannada News | NSUI Leads Student Uprising at Kuvempu University Against VC, Office Vandalised

ರಣಾಂಗಣವಾದ ಕುವೆಂಪು ವಿಶ್ವವಿದ್ಯಾಲಯದ ಆವರಣ

ಶಿವಮೊಗ್ಗ, ಏಪ್ರಿಲ್​​ 29: ಕುವೆಂಪು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಕುಲಪತಿಗಳ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ವಿಶ್ವವಿದ್ಯಾಲಯದ ಆವರಣವು ರಣರಂಗವಾಗಿ ಮಾರ್ಪಟ್ಟಿದ್ದು, NSUI ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆ ವೇಳೆ ಕುಲಪತಿಗಳ ಕಚೇರಿಯಲ್ಲಿದ್ದ ಕುರ್ಚಿ ಮತ್ತು ಪಾಟ್‌ಗಳನ್ನು ದ್ವಂಸ ಮಾಡಲಾಗಿದೆ. ಅಲ್ಲದೆ, ಕುಲಪತಿ ಕಚೇರಿಯ ನಾಮಫಲಕಕ್ಕೆ ಮಸಿ ಬಳಿದು ತಮ್ಮ ಅಸಮಾಧಾನ ಹೊರಹಾಕಿದ್ದು, ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಆಕ್ರೋಶಕ್ಕೆ ಕಾರಣ ಏನು?

ಕಳೆದ ಕೆಲವು ತಿಂಗಳಿಂದ ವಿದ್ಯಾರ್ಥಿ ವೇತನ (ಸ್ಕಾಲರ್‌ಶಿಪ್) ಸರಿಯಾಗಿ ತಲುಪದಿರುವುದು, ಹಾಸ್ಟೆಲ್‌ನಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಮತ್ತು ಕಳಪೆ ನಿರ್ವಹಣೆ, ಕಳೆದ ಐದು ತಿಂಗಳಿನಿಂದ 1ನೇ, 3ನೇ ಮತ್ತು 5ನೇ ಸೆಮಿಸ್ಟರ್‌ಗಳ ಪರೀಕ್ಷಾ ಫಲಿತಾಂಶಗಳು ವಿಳಂಬವಾಗಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಮುಖ್ಯ ಕಾರಣಗಳಾಗಿವೆ. ಈ ಬಗ್ಗೆ ಹಲವಾರು ಬಾರಿ ವಿಶ್ವವಿದ್ಯಾಲಯದ ಆಡಳಿತಕ್ಕೆ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಕೆಲವು ತಾತ್ಕಾಲಿಕ ಸಿಬ್ಬಂದಿಗಳ ನೇಮಕಾತಿ ಮತ್ತು ನಿರ್ವಹಣೆಯಲ್ಲಿಯೂ ಸಾಕಷ್ಟು ಅವ್ಯವಹಾರಗಳು ನಡೆದಿವೆ ಎಂಬ ಆರೋಪಗಳು ಕೇಳಿಬಂದಿವೆ.ಕುಲಪತಿಗಳು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಕಿವಿಗೊಡುತ್ತಿಲ್ಲ ಮತ್ತು ಪರಿಹಾರ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.

ಇದನ್ನೂ ಓದಿ: ಶಾಲಾ ಕಾರ್ಯಕ್ರಮಗಳಲ್ಲಿ ಅಶ್ಲೀಲ ಹಾಡುಗಳಿಗೆ ಕೋಕ್​​; ಇವಿಷ್ಟೇ ಸಾಂಗ್​​ಗಳಿಗೆ ಮಾತ್ರ ಇನ್ಮುಂದೆ ಅವಕಾಶ

ಕುಲಪತಿಗಳು ಹೇಳೋದೇನು?

ಇನ್ನು ಘಟನೆ ಬಗ್ಗೆ ಪ್ರತಿಕ್ರಿಕೆ ನೀಡಿರುವ ಕುಲಪತಿ ಶರತ್​​ ಅನಂತಮೂರ್ತಿ, ಈ ಸಂಬಂಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಎಂಬಿಎ ವಿದ್ಯಾರ್ಥಿಗಳಿಗೆ ಮಾರಾಟದ ಮಳಿಗೆ ಆಯೋಜನೆ ಮಾಡಲಾಗಿದ್ದು, ಅಲ್ಲಿದ್ದ ನನಗೆ ಕುಲಪತಿ ಕಚೇರಿಯಿಂದ ಕರೆ ಬಂತು. ಯಾರೋ ಬಂದು ಕಚೇರಿಯ ಪಾಟ್​​ಗಳನ್ನು ಒಡೆದು ಹಾಕುತ್ತಿದ್ದಾರೆ. ನುಗ್ಗಲು ಯತ್ನಿಸುತ್ತಿದ್ದಾರೆ ಎಂಬ ವಿಷಯ ತಿಳಿದು ಸ್ಥಳಕ್ಕೆ ಬಂದಿದ್ದೇನೆ. ಆ ವೇಳೆ ನನ್ನ ವಿರುದ್ಧ ಘೋಷಣೆ ಕೂಗಿ ಘೇರಾವ್​​ ಹಾಕಿದ್ದಾರೆ. ಸ್ವಲ್ಪ ತಳ್ಳಾಟದ ಯತ್ನವೂ ನಡೆದಿದೆ. ಕುವೆಂಪು ಅವರ ಭಾವಚಿತ್ರದ ಎದುರೇ ಮಡಿಕೆಗಳನ್ನ ಒಡೆಯಲಾಗಿದ್ದು, ಒಂದು ಹಂತಕ್ಕೆ ಅವರಿಗೇ ಅವಮಾನ ಮಾಡುವ ಯತ್ನವನ್ನು ನಡೆಸಲಾಗಿದೆ. ಪ್ರತಿಭಟನೆ ನಡೆಸಿದವರು ಯಾರು ಅಂತಲೂ ನಮಗೆ ಗೊತ್ತಿಲ್ಲ. ಸಮಸ್ಯೆ ಏನು ಎಂದೂ ಸರಿಯಾಗಿ ಅವರು ಹೇಳಿಲ್ಲ. ಇದೇ ಪ್ರತಿಭಟನಾ ನಿರತರ ಪೈಕಿ ನಾಲ್ವರು ಈ ಹಿಂದೆಯೂ ಬಂದಿದ್ದರು. ಅವರ ಮನವಿಯನ್ನು ನಾನು ಸ್ವೀಕರಿಸಿದ್ದೆ. ಇಲ್ಲಿ ಬಂಧು ದಾಂಧಲೆ ನಡೆಸಿದವರು ವಿದ್ಯಾರ್ಥಿಗಳಾ ಎಂಬುದು ಗೊತ್ತಿಲ್ಲ. ಘಟನೆ ಹಿಂದೆ ಯಾರೋ ಬೇರೆಯವರು ಇದ್ದಂತೆ ಕಾಣುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕೊಳ್ಳೇಗಾಲ: ಮದುವೆ ಮನೆಯಲ್ಲಿ ಚಿನ್ನದ ವಿಚಾರಕ್ಕೆ ಭಾರಿ ಗಲಾಟೆ, ಚಾಕುವಿನಿಂದ ಇರಿದು ಮರ್ಮಾಂಗಕ್ಕೆ ಒದ್ದು ಹಲ್ಲೆ – Kannada News | Kollegal Wedding Horror: Groom’s Relative Stabbed Over Gold Ornament Dispute; Police Investigation Underway

ಗಲಾಟೆ ನಡೆದ ಆರ್​ಎಸ್ ಫಂಕ್ಷನ್ ಹಾಲ್‌ ಹಾಗೂ ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿರುವುದುImage Credit source: tv9

ಚಾಮರಾಜನಗರ, ಏಪ್ರಿಲ್ 29: ಮದುವೆ (Marriage) ಮನೆಯಲ್ಲಿ ಸಂಭ್ರಮ ಮನೆ ಮಾಡಬೇಕಿದ್ದ ಹೊತ್ತಲ್ಲಿ ಚಿನ್ನಾಭರಣದ ವಿಚಾರಕ್ಕೆ ಶುರುವಾದ ಜಗಳ ವಿಕೋಪಕ್ಕೆ ಹೋಗಿ, ಚಾಕು ಇರಿತದಲ್ಲಿ ಅಂತ್ಯವಾಗಿರುವ ಘಟನೆ ಚಾಮರಾಜನಗರ (Chamarajanagar) ಜಿಲ್ಲೆಯ ಕೊಳ್ಳೇಗಾಲದ ಆರ್​ಎಸ್ ಫಂಕ್ಷನ್ ಹಾಲ್‌ನಲ್ಲಿ ನಡೆದಿದೆ. ಕೇವಲ 70 ಗ್ರಾಂ ಚಿನ್ನದ ವ್ಯತ್ಯಾಸಕ್ಕಾಗಿ ವಧು-ವರರ ಕಡೆಯವರು ಬೀದಿಯಲ್ಲಿ ಬಡಿದಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಚಾಕುವಿನಿಂದ ಇರಿದು, ಮರ್ಮಾಂಗಕ್ಕೆ ಒದ್ದು ಹಲ್ಲೆ ಮಾಡಲಾಗಿದ್ದು, ಸದ್ಯ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಗಾಯಾಗಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಳ್ಳೇಗಾಲದ ಆರ್​ಎಸ್ ಫಂಕ್ಷನ್ ಹಾಲ್‌ನಲ್ಲಿ ನಡೆದಿದ್ದೇನು?

ಮುದಾಸಿರ್ ಮತ್ತು ಗುಲ್ನಾಜ್ ಭಾನು ಎಂಬವರ ವಿವಾಹ ಇಂದು (ಏಪ್ರಿಲ್ 29) ನಿಶ್ಚಯವಾಗಿತ್ತು. ಆದರೆ ಮಂಗಳವಾರ ರಾತ್ರಿ ನಡೆದ ಅರಶಿಣ ಶಾಸ್ತ್ರದ ವೇಳೆ ವರನ ಕಡೆಯವರು ಒಂದೂವರೆ ಗಂಟೆ ತಡವಾಗಿ ಬಂದಿದ್ದಕ್ಕೆ ವಧುವಿನ ಕುಟುಂಬಸ್ಥರು ತಕರಾರು ತೆಗೆದಿದ್ದರು. ಈ ಮನಸ್ಥಾಪದ ನಡುವೆಯೇ ಚಿನ್ನಾಭರಣದ ವಿಚಾರ ಮುನ್ನೆಲೆಗೆ ಬಂದಿದೆ. ವಧುವಿನ ಕಡೆಯವರು 100 ಗ್ರಾಂ ಚಿನ್ನಕ್ಕೆ ಬೇಡಿಕೆ ಇಟ್ಟಿದ್ದರು, ಆದರೆ ವರನ ಕಡೆಯವರು ಕೇವಲ 30 ಗ್ರಾಂ ಚಿನ್ನ ತಂದಿದ್ದರು. ಇದರಿಂದ ಆಕ್ರೋಶಗೊಂಡ ವಧುವಿನ ಕುಟುಂಬಸ್ಥರು ಮದುವೆಯೇ ಬೇಡ ಎಂದು ಗಲಾಟೆ ಆರಂಭಿಸಿದ್ದಾರೆ.

ಮರ್ಮಾಂಗಕ್ಕೆ ಒದ್ದು ಚಾಕು ಇರಿತ

ಬುಧವಾರ ಮುಂಜಾನೆ ವರನ ಪರವಾಗಿ ಸಂಬಂಧಿ ಮೊಹಮ್ಮದ್ ಕೈಸರ್ ರಾಜಿ ಮಾತುಕತೆಗೆ ತೆರಳಿದ್ದಾರೆ. ಈ ವೇಳೆ ತಮಿಳುನಾಡಿನಿಂದ ಬಂದಿದ್ದ ವಧುವಿನ ಸಂಬಂಧಿಕರು ರೊಚ್ಚಿಗೆದ್ದು ಕೈಸರ್ ಅವರ ಮರ್ಮಾಂಗಕ್ಕೆ ಒದ್ದು, ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿ ವರನ ಸಂಬಂಧಿಗಳಾದ ಸಮೀರ್ ಅಯಾಜ್, ಶೋಯೆಬ್ ಹಾಗೂ ವಧುವಿನ ಕಡೆಯ ಫೈರೋಜ್ ಖಾನ್, ಅಬ್ದುಲ್ ವಾಹೀದ್ ಮತ್ತು ಅಬ್ದುಲ್ ಆರೀಫ್ ಮೇಲೂ ಹಲ್ಲೆ ನಡೆದಿದೆ.

ಇದನ್ನೂ ಓದಿ: ನಗರಸಭೆ ಅಧಿಕಾರಿಗಳ ಸುಳ್ಳು ಹೇಳಿಕೆ ಡಿಸಿ ಎದುರೇ ಬಯಲು: ಕಳ್ಳಾಟ ತಿಳಿಯುತ್ತಿದ್ದಂತೆ TV9 ಕ್ಯಾಮರಾಮ್ಯಾನ್ ಮೇಲೆ ಅಧಿಕಾರಿ ದರ್ಪ

ಗಾಯಾಳುಗಳಿಗೆ ಮೊದಲು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆ ಹಾಗೂ ಚಾಮರಾಜನಗರದ ಸಿಮ್ಸ್ (CIMS) ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಡಿವೈಎಸ್ಪಿ ಧರ್ಮೇಂದ್ರ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವೈಭವ್ ಬಿರುಗಾಳಿಗೆ ಕ್ರಿಸ್ ಗೇಲ್​ಗೆ ಶ್ರೇಷ್ಠ ದಾಖಲೆಯೇ ಶೇಕಿಂಗ್..!

Source link

ರಾಬರಿ ಪ್ರಕರಣದ ಆರೋಪಿ ಹೈಡ್ರಾಮ: ಪೊಲೀಸರ ಮೇಲೆ ಹಲ್ಲೆ ಯತ್ನ! – Kannada News | High Drama During Robbery Case Spot Inspection, Accused Creates Chaos, Attack Attempt Made On Police

ಬೆಳಗಾವಿ, ಏಪ್ರಿಲ್ 29: ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಶಿವಾಜಿನಗರದಲ್ಲಿ ರಾಬರಿ ಪ್ರಕರಣವೊಂದರ ಸ್ಥಳ ಮಹಜರ್ ಸಂದರ್ಭದಲ್ಲಿ ಹೈಡ್ರಾಮಾ ನಡೆದಿದೆ. ಚಿಕ್ಕೋಡಿ ಠಾಣೆ ಪೊಲೀಸರು ಆರೋಪಿ ಧೀರಜ್‌ನನ್ನು ಸ್ಥಳ ಮಹಜರಿಗಾಗಿ ಕರೆತಂದಿದ್ದರು. ಈ ವೇಳೆ ಆರೋಪಿ ಧೀರಜ್, ತನ್ನನ್ನು ಸುಮ್ಮನೆ ಬಂದಿಸಲಾಗಿದೆ ಎಂದು ಕೂಗಾಡಲು ಆರಂಭಿಸಿದ್ದಾನೆ.

ಆರೋಪಿಯ ಈ ಕೃತ್ಯದಿಂದ ಪರಿಸ್ಥಿತಿ ಉದ್ವಿಗ್ನಗೊಂಡಾಗ ಅಲ್ಲಿದ್ದ ಆರೋಪಿಯ ಸಂಬಂಧಿಕರು ಮತ್ತು ಸ್ನೇಹಿತರು ಸೇರಿಕೊಂಡು, ಸಿಪಿಐ ವಿಶ್ವನಾಥ ಚೌಗಲ್ ಹಾಗೂ ಪೇದೆಗಳ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ರಾಬರಿ ಪ್ರಕರಣದ ತನಿಖೆಗಾಗಿ ಕೊಲ್ಲಾಪುರಕ್ಕೆ ತೆರಳಿದ್ದ ಚಿಕ್ಕೋಡಿ ಪೊಲೀಸರು ಈ ಅನಿರೀಕ್ಷಿತ ಹಲ್ಲೆ ಯತ್ನದಿಂದ ಕೆಲಕಾಲ ಗೊಂದಲಕ್ಕೊಳಗಾಗಿದ್ದರು. ಆದಾಗ್ಯೂ, ಕ್ಷಣಾರ್ಧದಲ್ಲಿ ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಿ ಹಲ್ಲೆಯಿಂದ ಪಾರಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version