ಕುಡಿದ ಮತ್ತಲ್ಲಿ ಕ್ಷುಲ್ಲಕ ವಿಚಾರಕ್ಕೆ ಸಹೋದರರ ಫೈಟ್​​: ಕಲ್ಲಿಂದ ಜಜ್ಜಿ ತಮ್ಮನನ್ನೇ ಕೊಂದ ಅಣ್ಣ! – Kannada News | Tumakuru Tragedy: Elder Brother Murders Younger Sibling in Drunken Brawl

ತುಮಕೂರು, ಏಪ್ರಿಲ್​​ 28: ಕ್ಷುಲ್ಲಕ ವಿಚಾರಕ್ಕೆ ಒಡಹುಟ್ಟಿದವರ ನಡುವೆ ಆರಂಭವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ. ಮಧುಗಿರಿ ತಾಲೂಕಿನ ನಿಟ್ಟರಹಳ್ಳಿ ನಿವಾಸಿ ಗಂಗರಾಜು ಮೃತನಾಗಿದ್ದು, ಕಲ್ಲಿನಿಂದ ಜಜ್ಜಿ ಸಹೋದರನ ಹತ್ಯೆಗೈದ ಆರೋಪಿ ನರಸಿಂಹಮೂರ್ತಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕುಡಿದ ಮತ್ತಿನಲ್ಲಿ ಕೋಪದ ಕೈಗೆ ಬುದ್ಧಿಕೊಟ್ಟ ಅಣ್ಣ ಜೈಲು ಸೇರಿದ್ದರೆ, ಮದ್ಯಕ್ಕೆ ದಾಸನಾಗಿದ್ದ ತಮ್ಮ ಇಹಲೋಕವನ್ನೇ ತೊರೆದಿದ್ದಾನೆ. ಭೀಕರ ಘಟನೆಗೆ ಸ್ಥಳೀಯರು ಬೆಚ್ಚಿಬಿದ್ದಿದ್ದು, ಮೃತ ಗಂಗರಾಜು ಅವಿವಾಹಿತ ಎಂಬುದು ಕೂಡ ಗೊತ್ತಾಗಿದೆ.

ಇನ್ನು ಗಂಗರಾಜು ಸಹೋದರರರಿಗೆ ಅಪ್ಪ-ಅಮ್ಮ ಇರಲಿಲ್ಲ. ಹೀಗಾಗಿ ಅಜ್ಜಿಯ ಆಶ್ರಯದಲ್ಲಿಯೇ ಇವರು ಬೆಳೆದಿದ್ದರು. ಓದು ತಲೆಗೆ ಹತ್ತದಿದ್ದರೂ ಕುಡಿತದ ಚಟ ಮಾತ್ರ ಮೈಗಂಟಿತ್ತು. ಮದುವೆ ಬಳಿಕ ಗಂಗರಾಜು ಅಣ್ಣಂದಿರು ಬೇರೆ ಮನೆ ಮಾಡಿಕೊಂಡು ವಾಸವಿದ್ದರೆ, ಈತ ಮಾತ್ರ ಅಜ್ಜಿಯ ಸೇವೆ ಮಾಡಿಕೊಂಡು ಆಕೆಯ ಜೊತೆಗೇ ಇದ್ದ. ಈ ನಡುವೆ ನಿನ್ನೆ ಸಂಜೆ ವೇಳೆಗೆ ಮನೆಯಲ್ಲಿದ್ದ ಗಂಗರಾಜು ಬಾರ್​​ಗೆ ತೆರಳಿ ಕುಡಿದು ಬಂದಿದ್ದಾನೆ. ಇದೇ ವೇಳೆ ಸಹೋದರ ನರಸಿಂಹಮೂರ್ತಿ ಸಹ ಕುಡಿದ ಮತ್ತಿನಲ್ಲಿ ಪ್ರತ್ಯಕ್ಷನಾಗಿದ್ದಾನೆ. ಈ ವೇಳೆ ಅಣ್ಣ-ತಮ್ಮನ ನಡುವೆ ಹಣದ ವಿಚಾರ ಸಂಬಂಧ ಗಲಾಟೆ ಶುರುವಾಗಿದೆ. ಆ ಜಗಳ ವಿಕೋಪಕ್ಕೆ ತೆರಳಿ ಇಬ್ಬರೂ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ನಡುವೆ ಕುಸಿದು ಬಿದ್ದ ಗಂಗರಾಜುವಿನ ಮೇಲೆ ಅಲ್ಲೇ ಇದ್ದ ಕಲ್ಲಿನಿಂದ ನರಸಿಂಹಮೂರ್ತಿ ದಾಳಿ ಮಾಡಿದ್ದಾನೆ. ತಲೆಗೆ ಕಲ್ಲಿನಿಂದ ಹಲ್ಲೆ ಮಾಡಿ ಸಹೋದರನ ಕೊಲೆಗೈದಿದ್ದಾನೆ.

ಇದನ್ನೂ ಓದಿ: ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯ ಭೀಕರ ಕೊಲೆ; ಸಂಬಂಧಿಕರಿಂದಲೇ ನಡೀತು ಭೀಭತ್ಸ ಕೃತ್ಯ

ಪ್ರಕರಣ ಸಂಬಂಧ ಕೊಡಿಗೇನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಗಂಗರಾಜುವಿನ ಮತ್ತೋರ್ವ ಸಹೋದರ ನೀಡಿರುವ ದೂರಿನ ಅನ್ವಯ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಕುಡಿದ ಮತ್ತಿನಲ್ಲಿ ನಡೆದ ಜಗಳದಲ್ಲಿ ತಮ್ಮನ ಕೊಂದ ಅಣ್ಣನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತಿದ್ದಾರೆ. ಮೇಲ್ನೋಟಕ್ಕೆ ಕ್ಷುಲ್ಲಕ ವಿಚಾರಕ್ಕೆ ಕೊಲೆ ನಡೆದಿರುವಂತೆ ಕಂಡುಬಂದಿದೆ. ಆದರೆ ಇದರ ಹೊರತಾಗಿ ಸಹೋದರರ ನಡುವೆ ಬೇರೆನಾದರೂ ವಿಚಾರ ಸಂಬಂಧ ಜಗಳ ಸೃಷ್ಟಿಯಾಗಿ ಕೊಲೆ ನಡೆದಿದೆಯಾ ಎಂಬ ಅನುಮಾನ ಸಹ ಮೂಡಿದ್ದು, ಪೊಲೀಸರ ತನಿಖೆಯಿಂದಷ್ಟೇ ಮತ್ತಷ್ಟು ಸಂಗತಿಗಳು ಹೊರಬರಬೇಕಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೈಕ್ ರೀಲ್ಸ್ ವಿವಾದ: ಕ್ಷಮೆ ಕೇಳಿದ ಬಿಗ್​​ಬಾಸ್ ರಜತ್ – Kannada News | Bigg Boss Rajath asks apology after his reel facing backlash

ಬಿಗ್​​ಬಾಸ್ (Bigg Boss) ರಜತ್ ಮತ್ತೊಮ್ಮೆ ರೀಲ್ಸ್ ಕಾರಣಕ್ಕೆ ವಿವಾದಕ್ಕೆ ಸಿಲುಕಿದ್ದಾರೆ. ಈ ಹಿಂದೆ ಲಾಂಗ್ ಹಿಡಿದು ರೀಲ್ಸ್ ಮಾಡಿ ವಿವಾದಕ್ಕೊಳಗಾಗಿ ಜೈಲಿಗೆ ಸಹ ಹೋಗಿ ಬಂದಿದ್ದ ಬಿಗ್​​ಬಾಸ್ ರಜತ್, ಇದೀಗ ಮತ್ತೊಮ್ಮೆ ರೀಲ್ಸ್ ಕಾರಣಕ್ಕೆ ವಿವಾದಕ್ಕೆ ಒಳಗಾಗಿದ್ದಾರೆ. ಇತ್ತೀಚೆಗೆ ಬೈಕ್ ಒಂದರ ಪ್ರಚಾರಕ್ಕಾಗಿ ಸಣ್ಣ ರೀಲ್ಸ್ ಮಾಡಿದ್ದರು. ಅದರಲ್ಲಿ ಬೆಂಕಿ, ಬ್ಲಾಸ್ಟ್​ಗಳನ್ನು ಸಹ ಬಳಸಲಾಗಿತ್ತು, ಅದರ ಬಗ್ಗೆ ವಿರೋಧ ವ್ಯಕ್ತವಾಗಿತ್ತು. ಇದೀಗ ಮತ್ತೊಂದು ವಿಡಿಯೋ ಅಪ್​​ಲೋಡ್ ಮಾಡಿರುವ ರಜತ್, ಕ್ಷಮೆ ಕೇಳಿದ್ದಾರೆ, ಅಲ್ಲದೆ ರೀಲ್ಸ್ ಅನ್ನು ಡಿಲೀಟ್ ಮಾಡಿರುವುದಾಗಿಯೂ ಹೇಳಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Biryani and Watermelon: ಬಿರಿಯಾನಿ ತಿಂದ ನಂತರ ಕಲ್ಲಂಗಡಿ ಸೇವನೆ ಮಾರಕವೇ? ಮುಂಬೈ ಘಟನೆಯ ಬೆನ್ನಲ್ಲೇ ತಜ್ಞರು ನೀಡಿದ ಎಚ್ಚರಿಕೆ ಇಲ್ಲಿದೆ! – Kannada News | Biryani and Watermelon Death: Expert Debunks Myth, Points to Food Poisoning Risk

ಬಿರಿಯಾನಿ ತಿಂದ ನಂತರ ಕಲ್ಲಂಗಡಿ ಸೇವನೆ ಮಾರಕವೇ?Image Credit source: Pinterest

ಇತ್ತೀಚೆಗೆ ಮುಂಬೈನಲ್ಲಿ ನಡೆದ ಒಂದು ದುರದೃಷ್ಟಕರ ಘಟನೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಬಿರಿಯಾನಿ ಸೇವಿಸಿದ ನಂತರ ಕಲ್ಲಂಗಡಿ ಹಣ್ಣನ್ನು ತಿಂದ ಒಂದೇ ಕುಟುಂಬದ ನಾಲ್ವರು ಸದಸ್ಯರು ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಭೀತಿ ಹುಟ್ಟಿಸಿದೆ. ಈ ಘಟನೆಯ ನಂತರ, “ಬಿರಿಯಾನಿ ಮತ್ತು ಕಲ್ಲಂಗಡಿ ಒಟ್ಟಿಗೆ ತಿಂದರೆ ಸಾವು ಸಂಭವಿಸುತ್ತದೆಯೇ?” ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಈ ಕುರಿತು ವೈದ್ಯಕೀಯ ತಜ್ಞರು ನೀಡಿರುವ ಸ್ಪಷ್ಟನೆ ಇಲ್ಲಿದೆ.

ಬಿರಿಯಾನಿ-ಕಲ್ಲಂಗಡಿ ಸಂಯೋಜನೆ ಸಾವಿಗೆ ಕಾರಣವಾಗುತ್ತದೆಯೇ?

ವೈದ್ಯಕೀಯ ತಜ್ಞರ ಪ್ರಕಾರ, ಬಿರಿಯಾನಿ ಮತ್ತು ಕಲ್ಲಂಗಡಿಯನ್ನು ಅಲ್ಪ ಅವಧಿಯಲ್ಲಿ ಸೇವಿಸುವುದರಿಂದ ನೇರವಾಗಿ ಸಾವು ಸಂಭವಿಸುವ ಸಾಧ್ಯತೆ ತೀರಾ ಕಡಿಮೆ. ಮುಂಬೈನ ಖ್ಯಾತ ಸಾಂಕ್ರಾಮಿಕ ರೋಗ ತಜ್ಞ (Infectious Disease Specialists) ಡಾ. ಈಶ್ವರ್ ಗಿಲಾಡಾ ಅವರ ಪ್ರಕಾರ, ಇವೆರಡೂ ವಿಭಿನ್ನ ರೀತಿಯ ಆಹಾರಗಳು ಮತ್ತು ಇವುಗಳ ಜೀರ್ಣಕ್ರಿಯೆಯ ಸಮಯ ಬೇರೆಯಾಗಿರುತ್ತದೆ. ಕಲ್ಲಂಗಡಿ ಬೇಗನೆ ಜೀರ್ಣವಾದರೆ, ಮಾಂಸಾಹಾರಿ ಆಹಾರವಾದ ಬಿರಿಯಾನಿ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಈ ವ್ಯತ್ಯಾಸದಿಂದ ಜೀರ್ಣಕ್ರಿಯೆಯಲ್ಲಿ ಏರುಪೇರಾಗಿ ಹೊಟ್ಟೆ ಉಬ್ಬರ ಅಥವಾ ಅಜೀರ್ಣವಾಗಬಹುದೇ ಹೊರತು ತಕ್ಷಣದ ಸಾವಿಗೆ ಇದು ಕಾರಣವಾಗುವುದಿಲ್ಲ.

ಅಸಲಿ ಅಪಾಯ ಎಲ್ಲಿದೆ? ‘ಫುಡ್ ಪಾಯ್ಸನಿಂಗ್’ ಶಂಕೆ:

ಅಂತಹ ಸಂದರ್ಭಗಳಲ್ಲಿ ಸಾವಿಗೆ ಪ್ರಮುಖ ಕಾರಣ ‘ಫುಡ್ ಪಾಯ್ಸನಿಂಗ್’ (ಆಹಾರ ವಿಷವಾಗುವುದು) ಇರಬಹುದು ಎಂದು ವೈದ್ಯರು ಶಂಕಿಸುತ್ತಾರೆ. ಆಹಾರ ಅಥವಾ ಹಣ್ಣುಗಳನ್ನು ದೀರ್ಘಕಾಲದವರೆಗೆ ತೆರೆದಿಟ್ಟಿದ್ದರೆ ಅಥವಾ ಅವು ಹಳೆಯದಾಗಿದ್ದರೆ, ಅದರಲ್ಲಿ ಸಾಲ್ಮೊನೆಲ್ಲಾ, ಇ.ಕೋಲಿ ಅಥವಾ ಸ್ಟ್ಯಾಫಿಲೋಕೊಕಸ್‌ನಂತಹ ಅಪಾಯಕಾರಿ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ.

ಸೆಪ್ಸಿಸ್ ಭೀತಿ:

ಈ ಬ್ಯಾಕ್ಟೀರಿಯಾಗಳು ದೇಹ ಸೇರಿ ತೀವ್ರ ವಾಂತಿ ಮತ್ತು ಅತಿಸಾರಕ್ಕೆ ಕಾರಣವಾಗುತ್ತವೆ. ದೇಹದಲ್ಲಿ ನೀರಿನಂಶ ಮತ್ತು ಎಲೆಕ್ಟ್ರೋಲೈಟ್‌ಗಳ ಕೊರತೆಯಾಗಿ ರಕ್ತದೊತ್ತಡ ಹಠಾತ್ ಕುಸಿಯಬಹುದು. ಇದು ‘ಸೆಪ್ಸಿಸ್’ ಅಥವಾ ದೇಹದ ಅಂಗಾಂಗಗಳ ವೈಫಲ್ಯಕ್ಕೆ ಕಾರಣವಾಗಿ ಪ್ರಾಣಾಪಾಯ ಉಂಟುಮಾಡಬಹುದು.

ಇದನ್ನೂ ಓದಿ: ಮಹಿಳೆಯರಲ್ಲಿ ವಿಟಮಿನ್ ಡಿ ಕೊರತೆಯಾದಾಗ ಈ ರೀತಿಯ ಲಕ್ಷಣಗಳು ಕಂಡುಬರುತ್ತೆ, ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ!

ಕಲ್ಲಂಗಡಿ ಹಣ್ಣಿನ ಮೇಲಿರುವ ರಾಸಾಯನಿಕಗಳ ಎಚ್ಚರಿಕೆ:

ಕೆಲವೊಮ್ಮೆ ಕಲ್ಲಂಗಡಿ ಹಣ್ಣು ಹೆಚ್ಚು ಕೆಂಪಾಗಿ ಕಾಣಲು ಅಥವಾ ಬೇಗ ಹಣ್ಣಾಗಲು ಅಪಾಯಕಾರಿ ರಾಸಾಯನಿಕಗಳನ್ನು ಚುಚ್ಚಲಾಗುತ್ತದೆ. ಅಂತಹ ಕಲಬೆರಕೆ ಹಣ್ಣುಗಳನ್ನು ಸೇವಿಸಿದಾಗ ಅವು ದೇಹದಲ್ಲಿ ವಿಷವಾಗಿ ಪರಿಣಮಿಸಬಹುದು. ಒಂದು ವೇಳೆ ಕಲ್ಲಂಗಡಿ ಹಣ್ಣು ಕಲುಷಿತಗೊಂಡಿದ್ದರೆ ಅಥವಾ ಅದಕ್ಕೆ ವಿಷಕಾರಿ ಅಂಶಗಳು ಸೇರಿದರೆ ಮಾತ್ರ ಇಂತಹ ಸಾವುಗಳು ಸಂಭವಿಸಲು ಸಾಧ್ಯ ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ.

ತಜ್ಞರ ಸಲಹೆ ಏನು?

  • ತಾಜಾ ಆಹಾರ ಸೇವಿಸಿ: ಹೋಟೆಲ್‌ ಆಗಲಿ ಅಥವಾ ಮನೆಯಲ್ಲೇ ಆಗಲಿ, ತಯಾರಿಸಿದ ತಕ್ಷಣ ಆಹಾರ ಸೇವಿಸುವುದು ಉತ್ತಮ. ದೀರ್ಘಕಾಲ ಹೊರಗಿಟ್ಟ ಆಹಾರ ಬೇಡ.
  • ಹಣ್ಣುಗಳ ಶುಚಿತ್ವ: ಹಣ್ಣುಗಳನ್ನು ಕತ್ತರಿಸುವ ಮುನ್ನ ಚೆನ್ನಾಗಿ ತೊಳೆಯಿರಿ ಮತ್ತು ಕತ್ತರಿಸಿದ ತಕ್ಷಣ ಸೇವಿಸಿ. ಬಣ್ಣಕ್ಕಾಗಿ ರಾಸಾಯನಿಕ ಬಳಸಿದ ಹಣ್ಣುಗಳ ಬಗ್ಗೆ ಎಚ್ಚರವಿರಲಿ.

ಮುಂಬೈ ಘಟನೆಯಲ್ಲಿ ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ (Forensic) ವರದಿ ಬಂದ ನಂತರವಷ್ಟೇ ಸಾವಿಗೆ ನಿಖರ ಕಾರಣವೇನು ಎಂಬುದು ತಿಳಿದುಬರಲಿದೆ.

ಗಮನಿಸಿ: ಈ ಮಾಹಿತಿಯು ಸಂಶೋಧನಾ ಅಧ್ಯಯನಗಳು ಮತ್ತು ತಜ್ಞರ ಅಭಿಪ್ರಾಯಗಳನ್ನು ಆಧರಿಸಿದೆ. ಇದನ್ನು ವೈದ್ಯಕೀಯ ಸಲಹೆಗೆ ಪರ್ಯಾಯವೆಂದು ಪರಿಗಣಿಸಬೇಡಿ. ನಿಮಗೆ ಯಾವುದೇ ಅನುಮಾನ ಅಥವಾ ಹೊಸ ಆಹಾರ ಕ್ರಮ, ವ್ಯಾಯಾಮವನ್ನು ಕೈಗೊಳ್ಳುವ ಮೊದಲು ನಿಮ್ಮ ಹತ್ತಿರದ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆಯಿರಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RRB Recruitment 2026: ರೈಲ್ವೆ ಇಲಾಖೆಯಲ್ಲಿ ನೇಮಕಾತಿ; 11,127 ಸಹಾಯಕ ಲೋಕೋ ಪೈಲಟ್ ಹುದ್ದೆಗೆ ಅರ್ಜಿ ಆಹ್ವಾನ – Kannada News | RRB ALP Recruitment 2026: 11,127 Assistant Loco Pilot Posts. Apply Now!

ರೈಲ್ವೆ ಇಲಾಖೆಯಲ್ಲಿ ಬೃಹತ್ ನೇಮಕಾತಿ

ಭಾರತೀಯ ರೈಲ್ವೆ ಸಚಿವಾಲಯದ ಅಡಿಯಲ್ಲಿ ಬರುವ ರೈಲ್ವೆ ನೇಮಕಾತಿ ಮಂಡಳಿಯು (RRB) ದೇಶಾದ್ಯಂತ ಖಾಲಿ ಇರುವ ಸಹಾಯಕ ಲೋಕೋ ಪೈಲಟ್ (ALP) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 11,127 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಬೆಂಗಳೂರು, ಮುಂಬೈ, ಚೆನ್ನೈ, ಸಿಕಂದರಾಬಾದ್ ಸೇರಿದಂತೆ ದೇಶದ ಪ್ರಮುಖ ರೈಲ್ವೆ ವಲಯಗಳಲ್ಲಿ ಕೆಲಸ ಮಾಡಲು ಅರ್ಹ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶ ಲಭಿಸಿದೆ.

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಉತ್ತೀರ್ಣರಾಗಿರಬೇಕು. ಇದರೊಂದಿಗೆ ಸಂಬಂಧಿತ ಟ್ರೇಡ್‌ಗಳಲ್ಲಿ ಐಟಿಐ (ITI) ಅಥವಾ ಡಿಪ್ಲೊಮಾ ಪೂರ್ಣಗೊಳಿಸಿರುವುದು ಕಡ್ಡಾಯವಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಜುಲೈ 1, 2026 ಕ್ಕೆ ಅನ್ವಯವಾಗುವಂತೆ 18 ರಿಂದ 30 ವರ್ಷಗಳ ಒಳಗಿರಬೇಕು. ನಿಯಮಾನುಸಾರ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಆಯ್ಕೆ ವಿಧಾನ ಮತ್ತು ವೇತನ ಶ್ರೇಣಿ:

ಅಭ್ಯರ್ಥಿಗಳನ್ನು ಎರಡು ಹಂತದ ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆಗಳ (CBT 1 ಮತ್ತು CBT 2) ಮೂಲಕ ಆಯ್ಕೆ ಮಾಡಲಾಗುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ದಾಖಲೆ ಪರಿಶೀಲನೆ ನಡೆಸಲಾಗುವುದು. ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಆರಂಭಿಕ ವೇತನವಾಗಿ ರೂ. 19,900 ರೊಂದಿಗೆ ರೈಲ್ವೆ ಇಲಾಖೆಯ ನಿಯಮದಂತೆ ಇತರೆ ಭತ್ಯೆಗಳನ್ನು ನೀಡಲಾಗುವುದು. ಇದು ಕೇಂದ್ರ ಸರ್ಕಾರದ ಉದ್ಯೋಗವಾಗಿದ್ದು, ಆಕರ್ಷಕ ಸೌಲಭ್ಯಗಳನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಅರ್ಜಿ ಸಲ್ಲಿಸುವ ವಿಧಾನ ಮತ್ತು ದಿನಾಂಕ:

ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿ ಪ್ರಕ್ರಿಯೆಯು ಮೇ 15, ರಿಂದ ಅಧಿಕೃತವಾಗಿ ಪ್ರಾರಂಭವಾಗಲಿದ್ದು, ಆಸಕ್ತರು ಜೂನ್ 14 ರೊಳಗೆ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ಕೊನೆಯ ಕ್ಷಣದ ತಾಂತ್ರಿಕ ತೊಂದರೆಗಳನ್ನು ತಪ್ಪಿಸಲು ಅಭ್ಯರ್ಥಿಗಳು ಮೊದಲೇ ಅರ್ಜಿ ಸಲ್ಲಿಸುವುದು ಸೂಕ್ತ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಬಾಹುಬಲಿ 2’ ದಾಖಲೆ ಉಡೀಸ್: ಹೊಸ ಇತಿಹಾಸ ಬರೆಯಲು ಸಜ್ಜಾದ ‘ಧುರಂಧರ್ 2’ – Kannada News | Dhurandhar 2 set to surpass Baahubali 2 Box Office Collection record

ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ಇತಿಹಾಸದಲ್ಲಿ ‘ಧುರಂಧರ್ 2’ (Dhurandhar 2) ಸಿನಿಮಾ ಮಾಡಿದ ಸಾಧನೆ ಸಣ್ಣದಲ್ಲ. ಕಳೆದ ಒಂಬತ್ತು ವರ್ಷಗಳಿಂದ ಅಲುಗಾಡದಂತೆ ಉಳಿದಿದ್ದ ‘ಬಾಹುಬಲಿ 2’ (Baahubali 2) ಚಿತ್ರದ ಬೃಹತ್ ದಾಖಲೆಯನ್ನು ಮುರಿಯಲು ‘ಧುರಂಧರ್ 2’ ಚಿತ್ರ ಸಜ್ಜಾಗಿದೆ. ರಿಲೀಸ್ ಆದ ದಿನದಿಂದಲೂ ಭರ್ಜರಿ ಕಲೆಕ್ಷನ್ ಮಾಡುತ್ತಾ ಬಂದಿರುವ ಈ ಸಿನಿಮಾ ವಿಶ್ವಾದ್ಯಂತ ಅಬ್ಬರಿಸಿದೆ. ಚಿತ್ರದ ಒಟ್ಟು ಕಲೆಕ್ಷನ್ 1700 ಕೋಟಿ ರೂಪಾಯಿ ಮೀರಿದೆ. ಈ ಮೂಲಕ ರಣವೀರ್ ಸಿಂಗ್ (Ranveer Singh) ಅವರ ಖ್ಯಾತಿ ಹೆಚ್ಚಾಗಿದೆ.

ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ 2’ ಚಿತ್ರವು ವಿಶ್ವಾದ್ಯಂತ ಅಂದಾಜು 1790 ಕೋಟಿ ರೂಪಾಯಿ ಗಳಿಸುವ ಮೂಲಕ ಅತಿಹೆಚ್ಚು ಗಳಿಕೆ ಮಾಡಿದ ಭಾರತದ ಎರಡನೇ ಚಿತ್ರ ಎಂಬ ಹೆಗ್ಗಳಿಕೆ ಪಾತ್ರವಾಗಿತ್ತು. ಚೀನಾದಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದ ‘ದಂಗಲ್’ ಸಿನಿಮಾ ಮೊದಲ ಸ್ಥಾನದಲ್ಲಿದೆ. ಈಗ ‘ಧುರಂಧರ್ 2’ ಚಿತ್ರವು ‘ಬಾಹುಬಲಿ 2’ ದಾಖಲೆ ಮುರಿಯಲು ಕೇವಲ 10 ಕೋಟಿ ರೂಪಾಯಿ ಬಾಕಿ ಇದೆ.

‘ಧುರಂಧರ್ 2’ ಚಿತ್ರದ ಸದ್ಯದ ವೇಗವನ್ನು ನೋಡಿದರೆ, ಈ ವಾರಾಂತ್ಯದ ವೇಳೆಗೆ ಅಧಿಕೃತವಾಗಿ 1790 ಕೋಟಿ ರೂಪಾಯಿ ಗಡಿ ದಾಟಲಿದೆ. ಈ ಮೂಲಕ ಜಾಗತಿಕವಾಗಿ ಅತಿಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ‘ಬಾಹುಬಲಿ 2’ ಸಿನಿಮಾವನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ‘ಧುರಂಧರ್ 2’ ಏರಲಿದೆ. ಇದು ಚಿತ್ರತಂಡದ ದೊಡ್ಡ ಸಾಧನೆ ಆಗಲಿದೆ.

ಒಂದು ಕಾಲದಲ್ಲಿ ಮುಟ್ಟಲು ಅಸಾಧ್ಯ ಎನ್ನಲಾಗುತ್ತಿದ್ದ ದಾಖಲೆಗಳು ಈಗಿನ ಸಿನಿಮಾಗಳಿಗೆ ಸುಲಭವಾಗುತ್ತಿವೆ. ಪ್ರೇಕ್ಷಕರ ವ್ಯಾಪಕ ಬೆಂಬಲ ಮತ್ತು ಮಲ್ಟಿಪ್ಲೆಕ್ಸ್​​ಗಳ ಸಂಖ್ಯೆ ಹೆಚ್ಚಿರುವುದರಿಂದ ‘ಧುರಂಧರ್ 2’ ಈ ಮೈಲಿಗಲ್ಲನ್ನು ವೇಗವಾಗಿ ತಲುಪುತ್ತಿದೆ. ಈ ಸಾಧನೆಯು ಭಾರತೀಯ ಸಿನಿಮಾ ಲೋಕದಲ್ಲಿ ಹೊಸ ಯುಗದ ಆರಂಭವನ್ನು ಸೂಚಿಸುತ್ತಿದೆ ಎನ್ನುತ್ತಿದ್ದಾರೆ ಟ್ರೇಡ್ ತಜ್ಞರು

ಇದನ್ನೂ ಓದಿ: ‘ಧುರಂಧರ್’ ಚಿತ್ರಕ್ಕೆ ತಿರುಗೇಟು ನೀಡಲು ‘ಮೇರಾ ಲಿಯಾರಿ’ ಸಿನಿಮಾ ಮಾಡಿದ ಪಾಕಿಸ್ತಾನ

ಆದಿತ್ಯ ಧರ್ ಅವರು ‘ಧುರಂಧರ್ 2’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ರಣವೀರ್ ಸಿಂಗ್ ಮತ್ತು ಸಾರಾ ಅರ್ಜುನ್ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಅರ್ಜುನ್ ರಾಮ್​ಪಾಲ್, ರಾಕೇಶ್ ಬೇಡಿ, ಸಂಜಯ್ ದತ್, ಆರ್. ಮಾಧವನ್ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಡಾರ್ಕ್ ಸ್ಕಿನ್ ಮತ್ತು ಒಬೆಸಿಟಿ ಇರುವವರಲ್ಲಿ ವಿಟಮಿನ್ ಡಿ ಕೊರತೆ ಹೆಚ್ಚಾಗಿ ಕಂಡು ಬರುವುದಕ್ಕೆ ಕಾರಣ ಏನ್ ಗೊತ್ತಾ? – Kannada News | Doctor Advice: Vitamin D Sun Exposure Tips for Dark Skin Types

ಇತ್ತೀಚಿನ ದಿನಗಳಲ್ಲಿ ವಿಟಮಿನ್ ಡಿ (Vitamin D) ಕೊರತೆ ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ. ಅದರಲ್ಲಿಯೂ ನಗರ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವವರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಇಷ್ಟಾದರೂ ಕೂಡ ಈ ಬಗ್ಗೆ ಜನ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ಆದರೆ ಸ್ನಾಯು ಮತ್ತು ರೋಗನಿರೋಧಕ ಶಕ್ತಿಗೆ ಅಗತ್ಯವಾದ ಈ ಪೋಷಕಾಂಶ ದೇಹದಲ್ಲಿ ಸರಿಯಾಗಿ ಸಿಗದಿದ್ದರೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂಬುದನ್ನು ಮರೆಯಬಾರದು. ಅದರಲ್ಲಿಯೂ ಆರೋಗ್ಯ ತಜ್ಞರು ಹೇಳುವ ಪ್ರಕಾರ, ವಿಟಮಿನ್ ಡಿಯನ್ನು ಎಲ್ಲರೂ ಒಂದೇ ರೀತಿಯಲ್ಲಿ ಪಡೆದುಕೊಳ್ಳಲು ಸಾಧ್ಯವಿಲ್ಲ. ಹಾಗಾದರೆ ಯಾಕೆ ಈ ರೀತಿ ಆಗುತ್ತದೆ, ಇದಕ್ಕೆ ಕಾರಣವೇನು, ಸಾಮಾನ್ಯವಾಗಿ ವಿಟಮಿನ್ ಡಿ ಪಡೆಯಲು ಎಷ್ಟು ಹೊತ್ತು ಸೂರ್ಯನ ಕಿರಣಗಳನ್ನು ಪಡೆದುಕೊಳ್ಳಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ವಿಟಮಿನ್ ಡಿ ಹೇಗೆ ಕೆಲಸ ಮಾಡುತ್ತದೆ?

ಹಲಿಯ ಏಮ್ಸ್‌ನ ಡಾ. ಭಾವುಕು ಗರ್ಗ್ ಅವರ ಪ್ರಕಾರ, ವಿಟಮಿನ್ ಡಿ ಕೇವಲ ವಿಟಮಿನ್ ಅಲ್ಲ, ಇದು ಹಾರ್ಮೋನ್‌ನಂತೆ ಕೆಲಸ ಮಾಡುತ್ತದೆ. ಸ್ನಾಯುಗಳ ಕಾರ್ಯಕ್ಷಮತೆ ಮತ್ತು ಇಮ್ಯೂನಿಟಿಗೆ ಮುಖ್ಯವಾಗಿದೆ. ಆದ್ದರಿಂದ ಇದರ ಕೊರತೆಯನ್ನು ನಿರ್ಲಕ್ಷಿಸಬಾರದು.

ಡಾರ್ಕ್ ಸ್ಕಿನ್ ಮತ್ತು ತೂಕ ಹೆಚ್ಚಿರುವವರಿಗೆ ತೊಂದರೆ!

ಸಾಮಾನ್ಯವಾಗಿ ಡಾರ್ಕ್ ಸ್ಕಿನ್ ಹೊಂದಿರುವವರಲ್ಲಿ ಮೆಲನಿನ್ ಪ್ರಮಾಣ ಹೆಚ್ಚು ಇರುತ್ತದೆ. ಇದು ಸೂರ್ಯನ ಯುವಿಬಿ ಕಿರಣಗಳನ್ನು ತಡೆದು ವಿಟಮಿನ್ ಡಿ ಪಡೆದುಕೊಳ್ಳುವುದನ್ನು ನಿಧಾನಗೊಳಿಸುತ್ತದೆ. ಆದ್ದರಿಂದ ಇವರು ಸಾಮಾನ್ಯರಿಗಿಂತ ಹೆಚ್ಚು ಸಮಯ ಸೂರ್ಯನ ಬೆಳಕಿನಲ್ಲಿ ಇರಬೇಕಾಗುತ್ತದೆ. ಅದೇ ರೀತಿ, ಹೆಚ್ಚು ತೂಕ (ಒಬೆಸಿಟಿ) ಇರುವವರಲ್ಲಿ ವಿಟಮಿನ್ ಡಿ ದೇಹದ ಕೊಬ್ಬಿನಲ್ಲಿ ಸಂಗ್ರಹವಾಗುತ್ತದೆ. ಇದರಿಂದ ದೇಹಕ್ಕೆ ಅದರ ಲಭ್ಯತೆ ಕಡಿಮೆಯಾಗಬಹುದು. ಈ ಕಾರಣದಿಂದ ಇವರಿಗೂ ಹೆಚ್ಚು ಸಮಯ ಸೂರ್ಯನ ಬೆಳಕು ಅಗತ್ಯವಿರುತ್ತದೆ.

ಇದನ್ನೂ ಓದಿ: ಮಹಿಳೆಯರಲ್ಲಿ ವಿಟಮಿನ್ ಡಿ ಕೊರತೆಯಾದಾಗ ಈ ರೀತಿಯ ಲಕ್ಷಣಗಳು ಕಂಡುಬರುತ್ತೆ, ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ!

ಎಷ್ಟು ಸಮಯ ಸೂರ್ಯನ ಬೆಳಕು ಬೇಕಾಗುತ್ತದೆ?

  • ಸಾಮಾನ್ಯ ವ್ಯಕ್ತಿಗೆ: 15– 20 ನಿಮಿಷ
  • ಡಾರ್ಕ್ ಸ್ಕಿನ್ ಹೊಂದಿರುವವರಿಗೆ: 30– 40 ನಿಮಿಷ
  • ಹೆಚ್ಚು ತೂಕ ಇರುವವರಿಗೆ: 35– 45 ನಿಮಿಷ

ಯಾವ ಸಮಯದ ಸೂರ್ಯನ ಬೆಳಕು ಉತ್ತಮ?

ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 2:30 ರವರೆಗೆ ಇರುವ ಸೂರ್ಯನ ಬೆಳಕು ವಿಟಮಿನ್ ಡಿ ನಿರ್ಮಾಣಕ್ಕೆ ಹೆಚ್ಚು ಉಪಯುಕ್ತ. ಈ ಸಮಯದಲ್ಲಿ ಕೈ, ಕಾಲು ಮತ್ತು ಬೆನ್ನಿನ ಭಾಗ ಸೂರ್ಯನ ಬೆಳಕಿಗೆ ತಾಗುವಂತೆ ನೋಡಿಕೊಳ್ಳಬೇಕು. ತಜ್ಞರ ಪ್ರಕಾರ, ವಿಟಮಿನ್ ಡಿ ಕೊರತೆ ಹೆಚ್ಚಿದ್ದರೆ ಕೇವಲ ಸೂರ್ಯನ ಬೆಳಕು ಸಾಕಾಗುವುದಿಲ್ಲ. ಸರಿಯಾದ ಆಹಾರ ಮತ್ತು ವೈದ್ಯರ ಸಲಹೆಯ ಮೇರೆಗೆ ಸಪ್ಲಿಮೆಂಟ್ ತೆಗೆದುಕೊಳ್ಳುವುದು ಅಗತ್ಯ. ಜೊತೆಗೆ ಮ್ಯಾಗ್ನೀಷಿಯಮ್ ಕೂಡ ತೆಗೆದುಕೊಳ್ಳುವುದು ಸಹಕಾರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗಾರ್ಮೆಂಟ್ಸ್ ಕಾರ್ಮಿಕರಿದ್ದ ಮಿನಿಬಸ್ ಪಲ್ಟಿ: 10ಕ್ಕೂ ಹೆಚ್ಚು ಮಹಿಳೆಯರಿಗೆ ಗಾಯ – Kannada News | Mini Bus Carrying Garment Workers Overturns in Gauribidanur, Eight Seriously Injured

ಚಿಕ್ಕಬಳ್ಳಾಪುರ, ಏಪ್ರಿಲ್ 28: ಗೌರಿಬಿದನೂರು ತಾಲೂಕಿನ ವೇದಲವೇಣಿ ಸಮೀಪ ಗಾರ್ಮೆಂಟ್ಸ್ ಕಾರ್ಮಿಕರಿದ್ದ ಮಿನಿಬಸ್ ಪಲ್ಟಿಯಾಗಿದೆ. ಈ ಘಟನೆಯಲ್ಲಿ ಹತ್ತಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು ಗಾಯಗೊಂಡಿದ್ದು, ಅವರಲ್ಲಿ ಎಂಟು ಮಂದಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ದೊಡ್ಡಬಳ್ಳಾಪುರದ ಗಾರ್ಮೆಂಟ್ಸ್ ಒಂದಕ್ಕೆ ತೆರಳುತ್ತಿದ್ದ ಈ ಮಿನಿಬಸ್ ಚಾಲಕನ ಅಜಾಗರೂಕತೆಯಿಂದಾಗಿ ಏಕಾಏಕಿ ರಸ್ತೆ ಪಕ್ಕಕ್ಕೆ ಪಲ್ಟಿಯಾಗಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮಿನಿಬಸ್‌ನ ಗಾಜುಗಳು ಒಡೆದುಹೋಗಿದ್ದು, ಬಸ್‌ನಲ್ಲಿ ಸುಮಾರು 20 ಜನರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಗಾಯಗೊಂಡ ಕಾರ್ಮಿಕರನ್ನು ಕೂಡಲೇ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ತೀವ್ರ ಗಾಯಗಳಾದ ಎಂಟು ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಘಟನೆ ಕುರಿತು ಗೌರಿಬಿದನೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬಂಗಾಳದಲ್ಲಿ ವಿವಾದ ಸೃಷ್ಟಿಸಿದ ಎನ್‌ಕೌಂಟರ್ ಸ್ಪೆಷಲಿಸ್ಟ್ ಅಜಯ್ ಶರ್ಮಾ ಯಾರು? – Kannada News | Who is Uttar Pradesh’s Singham encounter specialist IPS Ajay Sharma why his deployment in Bengal caused stir

ನವದೆಹಲಿ, ಏಪ್ರಿಲ್ 28: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ (West Bengal Elections) ‘ಎನ್‌ಕೌಂಟರ್ ಸ್ಪೆಷಲಿಸ್ಟ್’ ಎಂದೇ ಜನಪ್ರಿಯವಾಗಿರುವ ಉತ್ತರ ಪ್ರದೇಶದ ಐಪಿಎಸ್ ಅಧಿಕಾರಿ ಅಜಯ್ ಪಾಲ್ ಶರ್ಮಾ ಅವರನ್ನು ದಕ್ಷಿಣ 24 ಪರಗಣ ಜಿಲ್ಲೆಯ ಪೊಲೀಸ್ ವೀಕ್ಷಕರಾಗಿ ನಿಯೋಜಿಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಹೊಸ ವಿವಾದ ಭುಗಿಲೆದ್ದಿದೆ. ಏಪ್ರಿಲ್ 29ರಂದು ಬಂಗಾಳದಲ್ಲಿ ನಡೆಯಲಿರುವ ಎರಡನೇ ಹಂತದ ಮತದಾನಕ್ಕೂ ಮೊದಲು ಅಜಯ್ ಶರ್ಮಾ ಅವರನ್ನು ನೇಮಿಸಿರುವುದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ನಡುವೆ ತೀವ್ರ ಜಗಳಕ್ಕೆ ಕಾರಣವಾಗಿದೆ.

ಏಪ್ರಿಲ್ 29ರ ಬುಧವಾರ ನಡೆಯಲಿರುವ ಪಶ್ಚಿಮ ಬಂಗಾಳದ ಎರಡನೇ ಸುತ್ತಿನ ಮತದಾನಕ್ಕೆ ಮುಂಚಿತವಾಗಿ ಅಜಯ್ ಶರ್ಮಾ ಅವರ ನಿಯೋಜನೆಯಾಗಿದ್ದು, ಇದು ಅಧಿಕಾರದಲ್ಲಿರುವ ಟಿಎಂಸಿ ಮತ್ತು ಬಿಜೆಪಿ ನಡುವೆ ದೊಡ್ಡ ವಾಗ್ವಾದಕ್ಕೆ ಕಾರಣವಾಗಿದೆ. ಉತ್ತರ ಪ್ರದೇಶದಾದ್ಯಂತ ಹಲವಾರು ಹುದ್ದೆಗಳಲ್ಲಿ ಹಲವಾರು ಪ್ರಮುಖ ಭದ್ರತಾ ಕಾರ್ಯಾಚರಣೆಗಳಲ್ಲಿ ಅಜಯ್ ಶರ್ಮಾ ಅವರ ಪಾತ್ರವು ಅವರಿಗೆ “ಎನ್‌ಕೌಂಟರ್ ಸ್ಪೆಷಲಿಸ್ಟ್” ಎಂಬ ಖ್ಯಾತಿಯನ್ನು ತಂದುಕೊಟ್ಟಿತು.

ಇದನ್ನೂ ಓದಿ: ಬಂಗಾಳ ಚುನಾವಣೆ ಎಫೆಕ್ಟ್: ಗುರುಗ್ರಾಮದಲ್ಲಿ ಕಾರ್ಮಿಕರ ಕೊರತೆ, ರೋಬೋಟ್ ವ್ಯಾಕ್ಯೂಮ್ ಕ್ಲೀನರ್‌ಗಳಿಗೆ ಭಾರಿ ಬೇಡಿಕೆ

ಅಜಯ್ ಶರ್ಮಾ ಯಾರು?:

ಉತ್ತರ ಪ್ರದೇಶ ಕೇಡರ್‌ನ 2011ರ ಬ್ಯಾಚ್​​ನ ಐಪಿಎಸ್ ಅಧಿಕಾರಿ ಅಜಯ್ ಪಾಲ್ ಶರ್ಮಾ ಪ್ರಸ್ತುತ ಪ್ರಯಾಗ್‌ರಾಜ್‌ನಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ (ಎಸಿಪಿ) ನೇಮಕಗೊಂಡಿದ್ದಾರೆ.

ಪಂಜಾಬ್‌ನ ಲುಧಿಯಾನದಲ್ಲಿ ಜನಿಸಿದ ಅಜಯ್ ಶರ್ಮಾ ಉತ್ತರ ಪ್ರದೇಶದ ಅತ್ಯಂತ ಪ್ರಮುಖ “ಎನ್‌ಕೌಂಟರ್ ಸ್ಪೆಷಲಿಸ್ಟ್” ಗಳಲ್ಲಿ ಒಬ್ಬರೆಂದು ಖ್ಯಾತಿಯನ್ನು ಗಳಿಸಿದ್ದಾರೆ. ಅವರು ಶಾಮ್ಲಿ, ನೋಯ್ಡಾ, ಜೌನ್‌ಪುರ ಮತ್ತು ರಾಂಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇಲ್ಲಿಯವರೆಗೆ ಡಜನ್​​ಗಟ್ಟಲೆ ಎನ್‌ಕೌಂಟರ್‌ಗಳನ್ನು ನಡೆಸಿದ್ದಾರೆ. ಡೆಂಟಲ್ ಸರ್ಜನ್ ಆಗಿದ್ದ ಅಜಯ್ ಶರ್ಮಾ ಐಪಿಎಸ್​ ಅಧಿಕಾರಿಯಾಗಿ ನೇಮಕಗೊಂಡರು.

ಇದನ್ನೂ ಓದಿ: ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ ಪ್ರತಿಕ್ರಿಯೆ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಹಂತಕ್ಕೆ ಮುಂಚಿತವಾಗಿ, ಟಿಎಂಸಿಯ ಭದ್ರಕೋಟೆಯಾದ 36% ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ದಕ್ಷಿಣ 24 ಪರಗಣಕ್ಕೆ ಪೊಲೀಸ್ ವೀಕ್ಷಕರಾಗಿ ಅಜಯ್ ಶರ್ಮಾ ಅವರನ್ನು ನಿಯೋಜಿಸಿರುವುದು ಪ್ರಮುಖ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚೇತನ್ ಅಹಿಂಸ ಭಾರತೀಯನೇ ಅಲ್ಲ: ನಟಿ ಜಯಮಾಲಾ – Kannada News | Film Chamber president Jayamala lashes out on Chethan Ahimsa

ಡಾ ರಾಜ್​ಕುಮಾರ್ (Dr Rajkumar) ಸಮಾಧಿ ಕುರಿತು ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸ ನೀಡಿರುವ ಹೇಳಿಕೆ ತೀವ್ರ ಆಕ್ರೋಶಕ್ಕೆ ಗುರಿಯಾಗಿವೆ. ಒಮ್ಮೆ ಕ್ಷಮಾಪಣೆ ಕೇಳಿ ಮತ್ತೆ ಹಳೆ ವರಸೆ ಮುಂದುವರೆಸಿರುವ ಚೇತನ್ ಅಹಿಂಸ ವಿರುದ್ಧ ಹಲವು ಕನ್ನಡಪರ ಸಂಘಟನೆಗಳು, ಅಣ್ಣಾವ್ರ ಅಭಿಮಾನಿಗಳು, ಅಭಿಮಾನಿ ಸಂಘಗಳ ಸದಸ್ಯರು ಫಿಲಂ ಚೇಂಬರ್ ಎದುರು ಪ್ರತಿಭಟನೆ ಮಾಡಿದ್ದಾರೆ. ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲಾ ಅವರಿಗೆ ದೂರು ಸಹ ನೀಡಿದ್ದಾರೆ. ಇದೀಗ ಜಯಾಮಾಲಾ ಅವರು ಟಿವಿ9 ಜೊತೆಗೆ ಮಾತನಾಡಿದ್ದು, ‘ಪಾಕಿಸ್ತಾನಕ್ಕೆ ಜಯಕಾರ ಹಾಕಿರುವ ಚೇತನ್, ಭಾರತೀಯನೇ ಅಲ್ಲ’ ಎಂದಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Source link

ನಗರಸಭೆ ಅಧಿಕಾರಿಗಳ ಸುಳ್ಳು ಹೇಳಿಕೆ ಡಿಸಿ ಎದುರೇ ಬಯಲು: ಕಳ್ಳಾಟ ತಿಳಿಯುತ್ತಿದ್ದಂತೆ TV9 ಕ್ಯಾಮರಾಮ್ಯಾನ್ ಮೇಲೆ ಅಧಿಕಾರಿ ದರ್ಪ – Kannada News | DC Office Drama: Chamarajanagar Residents Expose False Water Report; Official Attacks Cameraman

ಚಾಮರಾಜನಗರ, ಏ. 28: ಜಿಲ್ಲಾಧಿಕಾರಿ ಕಚೇರಿಯಲ್ಲೇ ಇಂದು ಭಾರಿ ಹೈಡ್ರಾಮಾ ನಡೆದಿದೆ. ಕುಡಿಯುವ ನೀರಿನ ಸಮಸ್ಯೆ ಕುರಿತು ಅಧಿಕಾರಿಗಳು ನೀಡಿದ ಸುಳ್ಳು ಮಾಹಿತಿಯನ್ನು ನಿವಾಸಿಗಳು ಡಿಸಿ ಎದುರೇ ಸಾಕ್ಷಿ ಸಮೇತ ಬಯಲು ಮಾಡಿದ್ದು, ಈ ವೇಳೆ ಅಧಿಕಾರಿಗಳು ಮತ್ತು ಸಾರ್ವಜನಿಕರ ನಡುವೆ ತೀವ್ರ ವಾಗ್ವಾದ ನಡೆದಿದೆ. ಚಾಮರಾಜನಗರದ ವಾರ್ಡ್ ನಂ. 26ರ ನಿವಾಸಿಗಳು ಕಳೆದ ಹಲವು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಶ್ರೀರೂಪ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಗರಸಭೆ ಆಯುಕ್ತರು ಮತ್ತು ಇಂಜಿನಿಯರ್‌ಗಳು, “ವಾರ್ಡ್‌ಗೆ ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ” ಎಂದು ಮಾಹಿತಿ ನೀಡಿದರು. ಅಧಿಕಾರಿಗಳ ಈ ಹೇಳಿಕೆಯಿಂದ ಆಕ್ರೋಶಗೊಂಡ ನಿವಾಸಿಗಳು ಜಿಲ್ಲಾಧಿಕಾರಿ ಎದುರೇ ನಗರಸಭೆ ಸಿಬ್ಬಂದಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. “ಕಳೆದ 15 ದಿನಗಳಿಂದ ಒಂದು ಹನಿ ನೀರು ಪೂರೈಕೆಯಾಗಿಲ್ಲ. ಅಧಿಕಾರಿಗಳು ಡಿಸಿ ಅವರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ” ಎಂದು ರೆಡ್‌ ಹ್ಯಾಂಡ್ ಆಗಿ ಹಿಡಿದು ಹಾಕಿದರು. ಸುಳ್ಳು ಮಾಹಿತಿ ನೀಡಿದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಶ್ರೀರೂಪ ಅವರು ಕೆಂಡಾಮಂಡಲರಾದರು. ಸಭೆಯಲ್ಲಿ ನಡೆಯುತ್ತಿದ್ದ ಈ ವಾಗ್ವಾದವನ್ನು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ TV9 ಕ್ಯಾಮರಾಮ್ಯಾನ್ ಮೇಲೆ ನಗರಸಭೆ ಅಧಿಕಾರಿ ವೆಂಕಟೇಶ್ ದರ್ಪ ತೋರಿದ್ದಾರೆ. ತಮ್ಮ ಕಳ್ಳಾಟ ಮತ್ತು ಬೇಜವಾಬ್ದಾರಿ ಬಯಲಾದ ಬೆನ್ನಲ್ಲೇ ಆಕ್ರೋಶಗೊಂಡ ವೆಂಕಟೇಶ್, ಚಿತ್ರೀಕರಣ ಮಾಡದಂತೆ ಕ್ಯಾಮರಾ ತಡೆದು ಅಸಭ್ಯವಾಗಿ ವರ್ತಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲೇ ಅಧಿಕಾರಿಯೊಬ್ಬರು ಮಾಧ್ಯಮದವರ ಮೇಲೆ ಈ ರೀತಿ ದರ್ಪ ತೋರಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version