ಚೇತನ್ ಅಹಿಂಸ ಭಾರತೀಯನೇ ಅಲ್ಲ: ನಟಿ ಜಯಮಾಲಾ – Kannada News | Film Chamber president Jayamala lashes out on Chethan Ahimsa

ಡಾ ರಾಜ್​ಕುಮಾರ್ (Dr Rajkumar) ಸಮಾಧಿ ಕುರಿತು ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸ ನೀಡಿರುವ ಹೇಳಿಕೆ ತೀವ್ರ ಆಕ್ರೋಶಕ್ಕೆ ಗುರಿಯಾಗಿವೆ. ಒಮ್ಮೆ ಕ್ಷಮಾಪಣೆ ಕೇಳಿ ಮತ್ತೆ ಹಳೆ ವರಸೆ ಮುಂದುವರೆಸಿರುವ ಚೇತನ್ ಅಹಿಂಸ ವಿರುದ್ಧ ಹಲವು ಕನ್ನಡಪರ ಸಂಘಟನೆಗಳು, ಅಣ್ಣಾವ್ರ ಅಭಿಮಾನಿಗಳು, ಅಭಿಮಾನಿ ಸಂಘಗಳ ಸದಸ್ಯರು ಫಿಲಂ ಚೇಂಬರ್ ಎದುರು ಪ್ರತಿಭಟನೆ ಮಾಡಿದ್ದಾರೆ. ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲಾ ಅವರಿಗೆ ದೂರು ಸಹ ನೀಡಿದ್ದಾರೆ. ಇದೀಗ ಜಯಾಮಾಲಾ ಅವರು ಟಿವಿ9 ಜೊತೆಗೆ ಮಾತನಾಡಿದ್ದು, ‘ಪಾಕಿಸ್ತಾನಕ್ಕೆ ಜಯಕಾರ ಹಾಕಿರುವ ಚೇತನ್, ಭಾರತೀಯನೇ ಅಲ್ಲ’ ಎಂದಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Source link

ನಗರಸಭೆ ಅಧಿಕಾರಿಗಳ ಸುಳ್ಳು ಹೇಳಿಕೆ ಡಿಸಿ ಎದುರೇ ಬಯಲು: ಕಳ್ಳಾಟ ತಿಳಿಯುತ್ತಿದ್ದಂತೆ TV9 ಕ್ಯಾಮರಾಮ್ಯಾನ್ ಮೇಲೆ ಅಧಿಕಾರಿ ದರ್ಪ – Kannada News | DC Office Drama: Chamarajanagar Residents Expose False Water Report; Official Attacks Cameraman

ಚಾಮರಾಜನಗರ, ಏ. 28: ಜಿಲ್ಲಾಧಿಕಾರಿ ಕಚೇರಿಯಲ್ಲೇ ಇಂದು ಭಾರಿ ಹೈಡ್ರಾಮಾ ನಡೆದಿದೆ. ಕುಡಿಯುವ ನೀರಿನ ಸಮಸ್ಯೆ ಕುರಿತು ಅಧಿಕಾರಿಗಳು ನೀಡಿದ ಸುಳ್ಳು ಮಾಹಿತಿಯನ್ನು ನಿವಾಸಿಗಳು ಡಿಸಿ ಎದುರೇ ಸಾಕ್ಷಿ ಸಮೇತ ಬಯಲು ಮಾಡಿದ್ದು, ಈ ವೇಳೆ ಅಧಿಕಾರಿಗಳು ಮತ್ತು ಸಾರ್ವಜನಿಕರ ನಡುವೆ ತೀವ್ರ ವಾಗ್ವಾದ ನಡೆದಿದೆ. ಚಾಮರಾಜನಗರದ ವಾರ್ಡ್ ನಂ. 26ರ ನಿವಾಸಿಗಳು ಕಳೆದ ಹಲವು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಶ್ರೀರೂಪ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಗರಸಭೆ ಆಯುಕ್ತರು ಮತ್ತು ಇಂಜಿನಿಯರ್‌ಗಳು, “ವಾರ್ಡ್‌ಗೆ ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ” ಎಂದು ಮಾಹಿತಿ ನೀಡಿದರು. ಅಧಿಕಾರಿಗಳ ಈ ಹೇಳಿಕೆಯಿಂದ ಆಕ್ರೋಶಗೊಂಡ ನಿವಾಸಿಗಳು ಜಿಲ್ಲಾಧಿಕಾರಿ ಎದುರೇ ನಗರಸಭೆ ಸಿಬ್ಬಂದಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. “ಕಳೆದ 15 ದಿನಗಳಿಂದ ಒಂದು ಹನಿ ನೀರು ಪೂರೈಕೆಯಾಗಿಲ್ಲ. ಅಧಿಕಾರಿಗಳು ಡಿಸಿ ಅವರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ” ಎಂದು ರೆಡ್‌ ಹ್ಯಾಂಡ್ ಆಗಿ ಹಿಡಿದು ಹಾಕಿದರು. ಸುಳ್ಳು ಮಾಹಿತಿ ನೀಡಿದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಶ್ರೀರೂಪ ಅವರು ಕೆಂಡಾಮಂಡಲರಾದರು. ಸಭೆಯಲ್ಲಿ ನಡೆಯುತ್ತಿದ್ದ ಈ ವಾಗ್ವಾದವನ್ನು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ TV9 ಕ್ಯಾಮರಾಮ್ಯಾನ್ ಮೇಲೆ ನಗರಸಭೆ ಅಧಿಕಾರಿ ವೆಂಕಟೇಶ್ ದರ್ಪ ತೋರಿದ್ದಾರೆ. ತಮ್ಮ ಕಳ್ಳಾಟ ಮತ್ತು ಬೇಜವಾಬ್ದಾರಿ ಬಯಲಾದ ಬೆನ್ನಲ್ಲೇ ಆಕ್ರೋಶಗೊಂಡ ವೆಂಕಟೇಶ್, ಚಿತ್ರೀಕರಣ ಮಾಡದಂತೆ ಕ್ಯಾಮರಾ ತಡೆದು ಅಸಭ್ಯವಾಗಿ ವರ್ತಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲೇ ಅಧಿಕಾರಿಯೊಬ್ಬರು ಮಾಧ್ಯಮದವರ ಮೇಲೆ ಈ ರೀತಿ ದರ್ಪ ತೋರಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೇಣುಬಿಗಿದ ಸ್ಥಿತಿಯಲ್ಲಿ ನವವಿವಾಹಿತೆ ಮೃತದೇಹ ಪತ್ತೆ: ಗಂಡನ ಅನುಮಾನದ ಭೂತಕ್ಕೆ ಯುವತಿ ಬಲಿ? – Kannada News | Chikkaballapur Newlywed Roopa Found Dead: Husband Suspected in Suspicious Hanging Incident

ಚಿಕ್ಕಬಳ್ಳಾಪುರ, ಏಪ್ರಿಲ್​​ 28: ಅನುಮಾನಾಸ್ಪದ ರೀತಿಯಲ್ಲಿ ನವವಿವಾಹಿತೆ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಹೊನ್ನೇನಹಳ್ಳಿಯಲ್ಲಿ ನಡೆದಿದೆ. ರೂಪಾ (30) ಮೃತ ಯುವತಿಯಾಗಿದ್ದು, ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. 5 ತಿಂಗಳ ಹಿಂದೆಯಷ್ಟೇ ಮುನಿರಾಜು ಜತೆ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ನಿವಾಸಿ ರೂಪಾ ಮದುವೆಯಾಗಿತ್ತು. ಪತಿಯ ಅನುಮಾನದ ಭೂತಕ್ಕೆ ರೂಪಾ ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದ್ದು, ಮೃತದೇಹವನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ.

ಪತಿ ವಿರುದ್ಧವೇ ಕೊಲೆ ಆರೋಪ

ಇನ್ನು ಅನುಮಾನಾಸ್ಪದ ರೀತಿಯಲ್ಲಿ ಮನೆ ಮಗಳ ಸಾವಿನಿಂದ ಕಂಗಾಲಾಗಿರುವ ರೂಪಾ ಕುಟುಂಬಸ್ಥರು, ಆಕೆಯ ಪತಿ ಮುನಿರಾಜು ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ಶವಾಗಾರದ ಬಳಿ ಮುನಿರಾಜು ತಾಯಿಗೆ ಮೃತ ರೂಪಾ ಸಂಬಂಧಿಕರು ಹಿಡಿಶಾಪವನ್ನೂ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದು, ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ರೂಪಾರದ್ದು ಆತ್ಮಹತ್ಯೆಯಾ ಅಥವಾ ಆಕೆಯ ಕುಟುಂಬಸ್ಥರು ದೂರಿರುವಂತೆ ಕೊಲೆಯಾ ಎಂಬುದು ಪೊಲೀಸ್​​ ತನಿಖೆಯಿಂದ ಬಹಿರಂಗಗೊಳ್ಳಬೇಕಿದೆ.

ಇದನ್ನೂ ಓದಿ: ಆ ಚೀಟಿಗಳಲ್ಲಿದೆಯಾ ಸಾವಿನ ಸೀಕ್ರೆಟ್? ಯುವತಿಯ ನಗ್ನ ಮೃತದೇಹ ಪತ್ತೆ ಪ್ರಕರಣದ ಹಿಂದೆ ಹಲವು ಅನುಮಾನ

ಪ್ರೀತಿ ವಿಚಾರಕ್ಕೆ ಯುವಕ ಆತ್ಮಹತ್ಯೆ

ಮಾಗಡಿ ತಾಲೂಕಿನ ಕುದೂರು ಕುದೂರು ರಸ್ತೆ ಮಲ್ಲಿಕುಂಟೆಯ ತೋಟದ ಮನೆಯಲ್ಲಿ ಪ್ರೀತಿ ವಿಚಾರಕ್ಕೆ ಮನನೊಂದು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ರಾಜೇಶ್​(35) ಮೃತನಾಗಿದ್ದು, ಪ್ರೀತಿಸಿದವಳ ಕಿರುಕುಳ ತಾಳಲಾರದೆ ಆತ್ಮಹತ್ಯೆ ಎಂದು ಡೆತ್​ನೋಟ್​ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ. ಬೆಂಗಳೂರಿನ ಬಾಗಲೂರು-ಸಾತನೂರು ನಿವಾಸಿ ರಾಜೇಶ್ ಶಿವಣ್ಣ ಎಂಬುವವರ ಎರಡನೇ ಮಗನಾಗಿದ್ದು, ಡೆತ್​​​ನೋಟ್​ ಬಗ್ಗೆ ರಾಜೇಶ್ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ರಾಜೇಶ್​​ನನ್ನು ಯಾರೋ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸುತ್ತಿದ್ದಾರೆ ಎಂಬ ಅನುಮಾನ ಇರೋದಾಗಿ ಅವರು ತಿಳಿಸಿದ್ದಾರೆ. ಈ ಬಗ್ಗೆ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 4:33 pm, Tue, 28 April 26

Source link

ರಾಮ್ ಚರಣ್ ಮತ್ತು ನಾನಿ ಸಿನಿಮಾಗಳಿಗೆ ಲೀಕ್ ಸಂಕಷ್ಟ: ಆತಂಕದಲ್ಲಿ ‘ಪೆದ್ದಿ’, ‘ದಿ ಪ್ಯಾರಡೈಸ್’ – Kannada News | Ram Charan Peddi and Nani The Paradise leaked scenes viral on social media

ಚಿತ್ರರಂಗದಲ್ಲಿ ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಲೀಕ್ (Leak) ಪಿಡುಗು ಮಾತ್ರ ಚಿತ್ರತಂಡಗಳನ್ನು ಬಿಡುತ್ತಿಲ್ಲ. ಸದ್ಯ ಸಿನಿಪ್ರಿಯರೆಲ್ಲ ಕುತೂಹಲದಿಂದ ಕಾಯುತ್ತಿರುವ ಎರಡು ದೊಡ್ಡ ಸಿನಿಮಾಗಳಾದ ರಾಮ್ ಚರಣ್ ಅಭಿನಯದ ‘ಪೆದ್ದಿ’ (Peddi) ಮತ್ತು ನಟ ನಾನಿ ಅಭಿನಯದ ‘ದಿ ಪ್ಯಾರಡೈಸ್’ (The Paradise) ಚಿತ್ರಗಳ ಪ್ರಮುಖ ದೃಶ್ಯಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. ಇದರಿಂದ ಚಿತ್ರತಂಡಗಳಿಗೆ ತಲೆ ನೋವು ಶುರುವಾಗಿದೆ. ಕೆಲವು ದಿನಗಳ ಹಿಂದೆ ‘ಜನ ನಾಯಗನ್’ ಸಿನಿಮಾ ಲೀಕ್ ಆಗಿತ್ತು. ಹೀಗೆ ಒಂದೊಂದೇ ಸಿನಿಮಾಗಳು ಲೀಕ್ ಸಮಸ್ಯೆ ಎದುರಿಸುತ್ತಿವೆ.

ಚಿತ್ರಮಂದಿರದಲ್ಲಿ ಪ್ರೇಕ್ಷಕರಿಗೆ ಸಿನಿಮಾ ವೀಕ್ಷಣೆಯ ಅನುಭವ ಸಿಗುವ ಮೊದಲೇ ಲೀಕ್ ಆದರೆ ಚಿತ್ರದ ಮೇಲಿನ ಕುತೂಹಲ ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ಈ ಎರಡೂ ಚಿತ್ರತಂಡಗಳು ಚಿತ್ರೀಕರಣದ ಸಮಯದಲ್ಲಿ ಅತ್ಯಂತ ರಹಸ್ಯವನ್ನು ಕಾಪಾಡಿಕೊಂಡಿದ್ದವು. ಆದರೆ, ಕೇವಲ ಒಂದೇ ದಿನದಲ್ಲಿ ಎರಡೂ ಚಿತ್ರಗಳ ಪ್ರಮುಖ ದೃಶ್ಯಗಳು ಸೋರಿಕೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಬುಚ್ಚಿ ಬಾಬು ಸನಾ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಪೆದ್ದಿ’ ಚಿತ್ರದಲ್ಲಿ ರಾಮ್ ಚರಣ್ ಮತ್ತು ಶ್ರುತಿ ಹಾಸನ್ ಅಭಿನಯದ ವಿಶೇಷ ಹಾಡೊಂದನ್ನು ಅದ್ದೂರಿ ಸೆಟ್‌ನಲ್ಲಿ ಚಿತ್ರೀಕರಿಸಲಾಗುತ್ತಿತ್ತು. ಆದರೆ, ಆ ಸೆಟ್‌ನಿಂದ ಕೆಲವು ಫೋಟೋಗಳು ಲೀಕ್ ಆಗಿದ್ದು, ಸದ್ಯ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿವೆ. ಈ ಚಿತ್ರವು ಜೂನ್ 25ರಂದು ಬಿಡುಗಡೆಯಾಗಲು ಸಜ್ಜಾಗಿದೆ.

ಇನ್ನೊಂದೆಡೆ, ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ‘ದಿ ಪ್ಯಾರಡೈಸ್’ ಚಿತ್ರದ ಹೈ-ವೋಲ್ಟೇಜ್ ಆ್ಯಕ್ಷನ್ ದೃಶ್ಯವೊಂದು ಸೋರಿಕೆಯಾಗಿದೆ. ನಾನಿ ಅವರ ಮಾಸ್ ಅವತಾರವನ್ನು ಒಳಗೊಂಡ ಈ ದೃಶ್ಯ ವೈರಲ್ ಆಗಿರುವುದು ಚಿತ್ರತಂಡಕ್ಕೆ ಆತಂಕ ತಂದಿದೆ. ಈ ಸಿನಿಮಾ ಆಗಸ್ಟ್ 21ರಂದು ತೆರೆಕಾಣಲಿದೆ. ಆದರೆ ಲೀಕ್ ಸಮಸ್ಯೆ ತಪ್ಪಿಸಲು ಚಿತ್ರತಂಡ ಎಚ್ಚರಿಕೆ ವಹಿಸಬೇಕಿದೆ.

ಇದನ್ನೂ ಓದಿ: ಶಿವಣ್ಣ ಬಳಿಕ ‘ಪೆದ್ದಿ’ ಸೆಟ್ ಸೇರಿದ ಕನ್ನಡದಲ್ಲಿ ಮಿಂಚಿದ ನಟ

ಚಿತ್ರಗಳ ದೃಶ್ಯಗಳು ಹೀಗೆ ಸೋರಿಕೆಯಾಗುವುದು ಚಿತ್ರದ ಬಾಕ್ಸ್ ಆಫೀಸ್ ಗಳಿಕೆ ಮತ್ತು ಪ್ರೇಕ್ಷಕರ ಅನುಭವದ ಮೇಲೆ ನೇರ ಪರಿಣಾಮ ಬೀರಲಿದೆ. ಹೀಗಾಗಿ ಚಿತ್ರತಂಡಗಳು ಶೂಟಿಂಗ್ ಸಮಯದಲ್ಲಿ ಹಾಗೂ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಸೆಕ್ಯೂರಿಟಿಯನ್ನು ಇನ್ನಷ್ಟು ಬಿಗಿಗೊಳಿಸಬೇಕಾದ ಅನಿವಾರ್ಯತೆ ಇದೆ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಡಾನ್ 3’ ಸಿನಿಮಾ ಬಗ್ಗೆ ಕೊನೆಗೂ ಬಾಯ್ಬಿಟ್ಟ ಫರ್ಹಾನ್ ಅಖ್ತರ್ – Kannada News | Farhan Akhtar talks about Don 3 movie, says he learned valid lesson

ಡಾನ್’ (Don) ಸಿನಿಮಾ ಸರಣಿ ಭಾರತದ ಬಲು ಜನಪ್ರಿಯ ಆಕ್ಷನ್ ಸಿನಿಮಾ ಸರಣಿಗಳಲ್ಲಿ ಒಂದಾಗಿದೆ. ಮೊದಲಿಗೆ ಅಮಿತಾಬ್ ಬಚ್ಚನ್ ನಟಿಸಿದ್ದ ಸಿನಿಮಾವನ್ನು ಶಾರುಖ್ ಖಾನ್ ನಾಯಕನನ್ನಾಗಿ ಹಾಕಿಕೊಂಡು ರೀಮೇಕ್ ಮಾಡಿಲಾಯ್ತು. ಸಿನಿಮಾ ನಿರ್ದೇಶನ ಮಾಡಿದ್ದು ಫರ್ಹಾನ್ ಅಖ್ತರ್, ಆ ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು. ಬಳಿಕ ‘ಡಾನ್’ ಹೆಸರು, ಪಾತ್ರವನ್ನೇ ಇರಿಸಿಕೊಂಡು ಹೊಸದೊಂದು ಥ್ರಿಲ್ಲರ್ ಕತೆ ಹೆಣೆದ ಫರ್ಹಾನ್ ಅಖ್ತರ್ ಅದನ್ನು 2011 ರಲ್ಲಿ ರಿಲೀಸ್ ಮಾಡಿದರು. ಆ ಸಿನಿಮಾದಲ್ಲಿಯೂ ಶಾರುಖ್ ಖಾನ್ ನಾಯಕ. ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು. ಆಗಿನಿಂದಲೂ ‘ಡಾನ್ 3’ಗಾಗಿ ಅಭಿಮಾನಿಗಳು ಕೇಳುತ್ತಿದ್ದರು. ಫರ್ಹಾನ್ ಕತೆ ರೆಡಿ ಇರಿಸಿಕೊಂಡು ಸಿನಿಮಾ ಪ್ರಾರಂಭಿಸಲು ಶುರು ಮಾಡಿದ್ದರು. ರಣ್ವೀರ್ ಸಿಂಗ್ ನಾಯಕ ಎನ್ನಲಾಯ್ತು. ಆದರೆ ರಣ್ವೀರ್ ಮತ್ತು ಫರ್ಹಾನ್ ನಡುವೆ ಭಿನ್ನಾಭಿಪ್ರಾಯ ತಲೆದೂರಿ ಸಿನಿಮಾ ನಿಂತು ಹೋಗಿದೆ. ಇದೀಗ ಫರ್ಹಾನ್ ಅಖ್ತರ್ ‘ಡಾನ್ 3’ ಬಗ್ಗೆ ಮಾತನಾಡಿದ್ದಾರೆ.

ಹಾಲಿವುಡ್ ರಿಪೋರ್ಟರ್ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿರುವ ಫರ್ಹಾನ್, ‘ಡಾನ್ 3’ ದೊಡ್ಡ ಪಾಠ ಕಲಿಸಿದೆ. ನಾನು ಕಲಿತ ಪಾಠವೆಂದರೆ ಅನಿರೀಕ್ಷಿತವಾದುದನ್ನು ನಿರೀಕ್ಷಿಸಬಾರದು ಎಂದು. ಯಾವುದೂ ಕೂಡ ಸಿನಿಮಾ ಆಗಿ ಪರದೆಯ ಮೇಲೆ ಬರುವವರೆಗೆ ಅದು ಖಚಿತ ಎಂದು ಭಾವಿಸುವಂತಿಲ್ಲ’ ಎಂದು ಅವರು ಹೇಳಿದ್ದಾರೆ. ಸಿನಿಮಾ ರಂಗದಲ್ಲಿ ಎದುರಾಗುವ ಇಂತಹ ಸವಾಲುಗಳನ್ನು ಸಾಮಾನ್ಯ ಎಂಬಂತೆ ಸ್ವೀಕರಿಸುವುದಾಗಿ ಅವರು ತಿಳಿಸಿದ್ದಾರೆ.

2023ರಲ್ಲಿ ‘ಡಾನ್ 3’ ಸಿನಿಮಾ ಘೋಷಿಸಲಾಯ್ತು. ಸಿನಿಮಾಕ್ಕೆ ಶಾರುಖ್ ಖಾನ್ ಬದಲಿಗೆ ರಣ್ವೀರ್ ಸಿಂಗ್ ನಾಯಕ ಎಂದೂ ಸಹ ಘೋಷಿಸಲಾಗಿತ್ತು. ‘ಧುರಂಧರ್ 2’ ಸಿನಿಮಾದ ಬಳಿಕ ‘ಡಾನ್ 3’ ಸಿನಿಮಾವನ್ನು ಫರ್ಹಾನ್ ಅಖ್ತರ್ ಶುರು ಮಾಡಬೇಕಿತ್ತು. ರಣ್ವೀರ್ ಕತೆ ಸಹ ಕೇಳಿದ್ದರು. ರಣ್ವೀರ್ ಅವರಿಗೆ ಅಡ್ವಾನ್ಸ್ ಸಹ ನೀಡಲಾಗಿತ್ತು. ಆದರೆ, ರಣವೀರ್ ಅವರ ಇತ್ತೀಚಿನ ಸಿನಿಮಾ ‘ಧುರಂಧರ್’ ಯಶಸ್ಸಿನ ನಂತರ, ಸ್ಕ್ರಿಪ್ಟ್ ವಿಚಾರದಲ್ಲಿನ ಭಿನ್ನಾಭಿಪ್ರಾಯದಿಂದಾಗಿ ಅವರು ಈ ಯೋಜನೆಯಿಂದ ಇದ್ದಕ್ಕಿದ್ದಂತೆ ಹೊರನಡೆದರು.

ಇದನ್ನೂ ಓದಿ:‘ಧುರಂಧರ್’ ಚಿತ್ರಕ್ಕೆ ತಿರುಗೇಟು ನೀಡಲು ‘ಮೇರಾ ಲಿಯಾರಿ’ ಸಿನಿಮಾ ಮಾಡಿದ ಪಾಕಿಸ್ತಾನ

ರಣವೀರ್ ಅವರ ಈ ನಿರ್ಧಾರದಿಂದಾಗಿ ಫರ್ಹಾನ್ ಅವರ ಎಕ್ಸೆಲ್ ಎಂಟರ್ಟೈನ್‌ಮೆಂಟ್ ಸಂಸ್ಥೆಗೆ ಸುಮಾರು 40 ಕೋಟಿ ನಷ್ಟವಾಗಿದೆ ಎಂದು ವರದಿಯಾಗಿದೆ. ಇದಕ್ಕಾಗಿ ನಿರ್ಮಾಪಕರ ಸಂಘದ ಮೊರೆ ಕೂಡ ಹೋಗಲಾಗಿತ್ತು. ಬಳಿಕ ಸ್ಟಾರ್ ನಟ ಆಮಿರ್ ಖಾನ್ ಅವರು ಮಧ್ಯಸ್ಥಿಕೆ ವಹಿಸಿ ಇಬ್ಬರ ನಡುವೆ ಸಂಧಾನ ಮಾಡಿದ್ದಾರೆ. ರಣವೀರ್ ಸಿಂಗ್ ಅವರು ಪಡೆದಿದ್ದ 10 ಕೋಟಿ ಮುಂಗಡ ಹಣವನ್ನು ಮರಳಿಸಿದ್ದಾರೆ. ಮತ್ತು ತಮ್ಮ ಮುಂದಿನ ಚಿತ್ರ ‘ಪ್ರಳಯ’ದಲ್ಲಿ ಪಾಲನ್ನು ನೀಡುವ ಮೂಲಕ ನಷ್ಟ ಭರಿಸಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ನಿರ್ಮಾಣ ಸಂಸ್ಥೆಯು ಈ ಬಗ್ಗೆ ಯಾವುದೇ ಅಧಿಕೃತ ಒಪ್ಪಂದ ನಡೆದಿಲ್ಲ ಎಂದಿದೆ.

ಸದ್ಯಕ್ಕೆ ‘ಡಾನ್ 3’ ಭವಿಷ್ಯ ಅನಿಶ್ಚಿತವಾಗಿದೆ. ಫರ್ಹಾನ್ ಅಖ್ತರ್ ಅವರೇ ಸ್ವತಃ ಡಾನ್ ಪಾತ್ರದಲ್ಲಿ ನಟಿಸುತ್ತಾರೆಯೇ ಅಥವಾ ಶಾರುಖ್ ಖಾನ್ ಅವರೇ ಮತ್ತೆ ಡಾನ್ ಪಾತ್ರದಲ್ಲಿ ನಟಿಸುತ್ತಾರಾ? ಅಥವಾ ಹೊಸ ನಟನನ್ನು ಹುಡುಕುತ್ತಾರೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ. ಫರ್ಹಾನ್ ಅಖ್ತರ್, ನಿರ್ದೇಶಕ ಆಗಿರುವ ಜೊತೆಗೆ ನಟ ಮತ್ತು ಸಂಗೀತಗಾರ ಸಹ ಆಗಿದ್ದಾರೆ. ಕಳೆದ ವರ್ಷ ಅವರ ನಟನೆಯ ‘120 ಬಹದ್ಧೂರ್’ ಸಿನಿಮಾ ಬಿಡುಗಡೆ ಆಗಿ ದೊಡ್ಡ ಹಿಟ್ ಆಗಿದೆ. ಫರ್ಹಾನ್ ಖಾನ್ ಅವರು 2011 ರಲ್ಲಿ ಬಿಡುಗಡೆ ಆದ ‘ಡಾನ್ 3’ ಬಳಿಕ ಇನ್ಯಾವುದೇ ಸಿನಿಮಾ ನಿರ್ದೇಶಿಸಿಲ್ಲ. ಆದರೆ ಈಗ ನಿರ್ದೇಶಕನಾಗಿ ಕಮ್​​ಬ್ಯಾಕ್ ಮಾಡುವ ಹೊತ್ತಲ್ಲೇ ಅವರಿಗೆ ಸಂಕಷ್ಟ ಎದುರಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹೆರಿಗೆಗೂ ಮೊದಲೇ ಮೃತಪಟ್ಟ ಹಸುಗೂಸು: ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಯ್ತಾ ಪುಟ್ಟ ಜೀವ? – Kannada News | Newborn Dies: Medical Negligence Allegations Rock Karnataka Hospital and Spark Protests

ರಾಯಚೂರು/ಹಾವೇರಿ, ಏಪ್ರಿಲ್​​ 28: ಹೆರಿಗೆಗೂ ಮೊದಲೇ  ಹಸುಗೂಸು ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದೆ. ವೈದ್ಯರ ನಿರ್ಲಕ್ಷ್ಯದಿಂದಲೇ ಸಾವಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಆಸ್ಪತ್ರೆ ಮತ್ತು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ನಮಗೆ ನ್ಯಾಯ ಬೇಕು ಎಂದು ಆಗ್ರಹಿಸಿದ್ದಾರೆ. ರಾಯಚೂರಿನ ಮಸ್ಕಿ ತಾಲೂಕಿನ ಜಂಗಮರ ಹಳ್ಳಿ ಗ್ರಾಮದ ಗುಂಡಪ್ಟ ಅವರ ಪತ್ನಿ ಪರಮ್ಮಳಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಸಿಂಧನೂರಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಕುಟುಂಬಸ್ಥರು ಕರೆತಂದಿದ್ದರು ಎನ್ನಲಾಗಿದೆ.

ನಿನ್ನೆಯಿಂದ ಸಹಜ ಹೆರಿಗೆ ಆಗಲಿದೆ ಎಂದು ವೈದ್ಯರು ಹೇಳಿದ್ದರಾದರೂ ಅದು ಸಾಧ್ಯವಾಗದೇ ಇದಲ್ಲಿ ಸಿಜರಿಯನ್ ನಡೆಸುವಂತೆ ಪರಮ್ಮ ಕಡೆಯವರು ವೈದ್ಯರಿಗೆ ತಿಳಿಸಿದ್ದರು. ಇಂದು ಮುಂಜಾನೆ ಇಂಜೆಕ್ಷನ್ ನೀಡಿ ಸಹಜ ಹೆರಿಗೆಗೆ ಆಸ್ಪತ್ರೆಯವರು ಯತ್ನಿಸಿದ್ದು, ಅದು ನೆರವೇರದ ಕಾರಣ ಸಿಜರಿಯನ್ ಮಾಡಿ ಹೆರಿಗೆ ಮಾಡಿಸಲಾಗಿತ್ತು. ಆದರೆ ಅದಾಗಲೇ ಮಗು ಮೃತಪಟ್ಟಿತ್ತು ಎನ್ನಲಾಗಿದೆ. ಸಿಂಧನೂರು ಟೌನ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಆಸ್ಪತ್ರೆ ಆಡಳಿತಾಧಿಕಾರಿಯಿಂದ ಸ್ಪಷ್ಟನೆ

ಇನ್ನು ಮಗು ಮೃತಪಟ್ಟಿರುವ ಬಗ್ಗೆ ಸಿಂಧನೂರು ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಕಾವೇರಿ ಪ್ರತಿಕ್ರಿಯೆ ನೀಡಿದ್ದಾರೆ. ಹೆರಿಗೆಗಾಗಿ ಬೆಳಿಗ್ಗೆ 6 ಗಂಟೆಗೆ ಔಷಧಿ ನೀಡಿದ್ದೆವು. ಆಗ ಮಗು ಸುಸ್ತಾಗಿದೆ ಎಂಬ ಬಗ್ಗೆ ಗೊತ್ತಾಗಿದೆ. ತಂತ್ರಜ್ಞಾನದ ಮೂಲದ ಮಗುವಿನ ಹಾರ್ಟ್ ಬೀಟ್ ಪತ್ತೆ ಮಾಡಿದ್ದು, ಕೂಡಲೇ ಸಿಜರಿಯನ್​​ಗೆ ಸಿದ್ಧರಾಗಿದ್ದೇವೆ. ಆ ಬಳಿಕ ಮಗುವಿನ ಸ್ಥಿತಿ ಗಂಭೀರವಾಗಿತ್ತು. ನಮ್ಮ ಶಕ್ತಿ ಮೀರಿ ಪ್ರಯತ್ನ ಮಾಡಿದರೂ ಜೀವ ಉಳಿಸಲು ಆಗಲಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಉದ್ಯೋಗ ಕೊಡಿಸುವ ನೆಪದಲ್ಲಿ ವೇಶ್ಯಾವಾಟಿಕೆ! ಮಹಿಳೆಯರನ್ನ ದಂಧೆಗೆ ಇಳಿಸ್ತಿದ್ದ ಕಿಂಗ್ ಪಿನ್ ಸೇರಿ 11 ಜನ ಅರೆಸ್ಟ್

ಆಪರೇಷನ್​​ ವೇಳೆ ಕೋಮಾಗೆ ಹೋದ ಬಾಲಕ

ಇತ್ತ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿಯೂ ವೈದ್ಯರ ನಿರ್ಲಕ್ಷ್ಯ ಆರೋಪ ಕೇಳಿಬಂದಿದೆ. ಹರ್ನಿಯಾ ಆಪರೇಷನ್​​ ವೇಳೆ 7 ವರ್ಷದ ಚಾಂದ್​​ಪೀರ್ ಸಾಬ್ ದೊಡ್ಡಮನಿ ಎಂಬ ಬಾಲಕ ಕೋಮಾಗೆ ಹೋಗಿದ್ದು, ಜಿಲ್ಲಾಸ್ಪತ್ರೆ ವೈದ್ಯ, ಸಿಬ್ಬಂದಿ ವಿರುದ್ಧ ಆಕ್ರೋಶವ್ಯಕ್ತಪಡಿಸಿ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ. ಕೋಮಾಗೆ ಹೋದ ಬಾಲಕನನ್ನ ಖಾಸಗಿ ಆಸ್ಪತ್ರೆಗೆ ವೈದ್ಯರು ರೆಫರ್​​ ಮಾಡಿದ್ದು, ಬಾಲಕನ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಹಣವನ್ನು ಕುಟುಂಬದ ಸದಸ್ಯರು ಖರ್ಚು ಮಾಡಿದ್ದಾರೆ. ಸದ್ಯ ಕಿಮ್ಸ್ ಆಸ್ಪತ್ರೆಯಲ್ಲಿ ಚಾಂದ್​​ಪೀರ್​​ಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಹರ್ನಿಯಾ ಆಪರೇಷನ್​ ಮಾಡಿದ ವೈದ್ಯರ ವಿರುದ್ಧ ದೂರು ದಾಖಲಾಗಬೇಕು. ತನಿಖೆ ನಡೆಸಿ ಬಾಲಕನ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸೋದಾಗಿ ಸ್ಥಳೀಯರು ಕೂಡ ಎಚ್ಚರಿಕೆ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:56 pm, Tue, 28 April 26

Source link

ಗುಂಡ್ಲುಪೇಟೆಯಲ್ಲಿ ಫ್ಯಾಮಿಲಿ ಜೊತೆ ಯೂನಿಫಾರ್ಮ್‌ನಲ್ಲಿ ಶೋಕಿ; ಇನ್ಸ್‌ಪೆಕ್ಟರ್ ಜೈ ಕುಮಾರ್ ವಿಡಿಯೋ ವೈರಲ್ – Kannada News | Gundlepet Police Controversy: CPI Jai Kumar’s Family Trip in Uniform, Buffer Zone Violation

ಚಾಮರಾಜನಗರ, ಏ.28: ಕಾನೂನು ಪಾಲಿಸಬೇಕಾದ ಅಧಿಕಾರಿಯೇ ನಿಯಮಗಳನ್ನು ಗಾಳಿಗೆ ತೂರಿ ಶೋಕಿ ಮಾಡುತ್ತಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದಿದೆ. ಗುಂಡ್ಲುಪೇಟೆ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ (CPI) ಜೈ ಕುಮಾರ್ ಅವರು ಪತ್ನಿ ಮತ್ತು ಮಕ್ಕಳೊಂದಿಗೆ ಪೊಲೀಸ್ ಯೂನಿಫಾರ್ಮ್‌ನಲ್ಲಿಯೇ ಓಪನ್ ಜೀಪ್‌ನಲ್ಲಿ ಸುತ್ತಾಡಿ ಈಗ ಸುದ್ದಿಯಾಗಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಊಟಿ ರಸ್ತೆಯ ಬಳಿಯಿರುವ ಇಕ್ರಮ್ ಸಿದ್ದಿಕಿ ಫಾರ್ಮ್ ಹೌಸ್ ಸುತ್ತಮುತ್ತ ಇನ್ಸ್‌ಪೆಕ್ಟರ್ ಜೈ ಕುಮಾರ್ ಅವರು ತಮ್ಮ ಕುಟುಂಬದೊಂದಿಗೆ ಬಿಂದಾಸ್ ಆಗಿ ರೌಂಡ್ಸ್ ಹಾಕಿದ್ದಾರೆ. ಈ ಪ್ರದೇಶವು ಬಫರ್ ಝೋನ್ (ಕಾಡಂಚಿನ ಪ್ರದೇಶ) ವ್ಯಾಪ್ತಿಗೆ ಬರುತ್ತದೆ. ಕೇವಲ ಫ್ಯಾಮಿಲಿ ಜೊತೆ ಸುತ್ತಾಡಿದ್ದು ಮಾತ್ರವಲ್ಲದೆ, ಆ ವಿಡಿಯೋಗೆ ಸಖತ್ ಬಿಲ್ಡಪ್ ನೀಡುವ ಸಾಂಗ್ ಏಡಿಟ್​​ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಪೊಲೀಸ್ ಸಮವಸ್ತ್ರದ ಘನತೆಯನ್ನು ಮರೆತು, ಕಾಡಂಚಿನ ಪ್ರದೇಶದಲ್ಲಿ ಶೋಕಿ ಮಾಡಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಪೊಲೀಸ್ ಇಲಾಖೆಯ ವಾಹನ ಮತ್ತು ಸಮವಸ್ತ್ರವನ್ನು ವೈಯಕ್ತಿಕ ಪ್ರಚಾರಕ್ಕೆ ಹಾಗೂ ಫ್ಯಾಮಿಲಿ ಪ್ರವಾಸಕ್ಕೆ ಬಳಸಿಕೊಂಡಿರುವ ಇನ್ಸ್‌ಪೆಕ್ಟರ್ ನಡೆಗೆ ಭಾರಿ ಆಕ್ಷೇಪ ವ್ಯಕ್ತವಾಗುತ್ತಿದೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಗಿ ಭದ್ರತೆ ನಡುವೆ 5 ಬಾರಿ ಏಮ್ಸ್​ ಆಸ್ಪತ್ರೆಗೆ ಭೇಟಿ ನೀಡಿದ ಮುಂಬೈ ದಾಳಿಯ ಆರೋಪಿ ರಾಣಾ – Kannada News | 26/11 attack accused Tahawwur Rana visits 5 times to AIIMS amid tight security

ನವದೆಹಲಿ, ಏಪ್ರಿಲ್ 28: ಮುಂಬೈನ 26/11 ಭಯೋತ್ಪಾದಕ ದಾಳಿಯ ಆರೋಪಿ ತಹಾವೂರ್ ರಾಣಾ (Tahawwur Rana) ಬಿಗಿ ಭದ್ರತೆಯ ನಡುವೆ 5 ಬಾರಿ AIIMSಗೆ ಭೇಟಿ ನೀಡಿದ್ದಾರೆ. ಮುಂಬೈ ಭಯೋತ್ಪಾದಕ ದಾಳಿಯಲ್ಲಿನ ಕೈವಾಡಕ್ಕೆ ಸಂಬಂಧಿಸಿದಂತೆ ಕಳೆದ ಏಪ್ರಿಲ್‌ನಲ್ಲಿ ಅಮೆರಿಕದಿಂದ ಗಡಿಪಾರಾಗಿದ್ದ ತಹಾವೂರ್ ರಾಣಾ, ವೈದ್ಯಕೀಯ ಚಿಕಿತ್ಸೆಗಾಗಿ ಕಳೆದ 1 ತಿಂಗಳಲ್ಲಿ 5 ಬಾರಿ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS)ಗೆ ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ.

ಈ ಬಗ್ಗೆ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದ್ದು, ತಹಾವೂರ್ ರಾಣಾ ಏಮ್ಸ್​ಗೆ ಮೊದಲ ಬಾರಿ ಮಾರ್ಚ್ 31ರಂದು ಭೇಟಿ ನೀಡಿದ್ದರು. ನಂತರ ಏಪ್ರಿಲ್ 6, ಏಪ್ರಿಲ್ 7, ಏಪ್ರಿಲ್ 20 ಮತ್ತು ಏಪ್ರಿಲ್ 21ರಂದು 4 ಬಾರಿ ಭೇಟಿ ನೀಡಿದ್ದಾರೆ. ಅವರು ಆರೋಗ್ಯ ತಪಾಸಣೆಗೆ ಬರುವಾಗ ಸಾಕಷ್ಟು ಭದ್ರತಾ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. ತಿಹಾರ್ ಜೈಲಿನಲ್ಲಿರುವ ಕೈದಿಗಳನ್ನು ನ್ಯಾಯಾಲಯ ಅಥವಾ ಆಸ್ಪತ್ರೆಗೆ ಕರೆದೊಯ್ಯುವ ಜವಾಬ್ದಾರಿಯನ್ನು ಎನ್‌ಎವಿ ಹೊಂದಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಮಾಟಮಂತ್ರದ ಶಂಕೆ ಒಡಹುಟ್ಟಿದವನನ್ನು ಕೊಂದು, ಇಬ್ಬರು ಮಕ್ಕಳ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ

“ಪ್ರತಿ ಬಾರಿಯೂ, ರಾಣಾ ಅವರನ್ನು ಹೃದ್ರೋಗ, ಸಾಮಾನ್ಯ ಔಷಧ, ಮೂತ್ರಪಿಂಡಶಾಸ್ತ್ರ ವಿಭಾಗಗಳು ಮತ್ತು ಶಸ್ತ್ರಚಿಕಿತ್ಸಾ ವಾರ್ಡ್‌ಗೆ ಭಾರೀ ಪೊಲೀಸ್ ಬೆಂಗಾವಲಿನಡಿಯಲ್ಲಿ ಸಾಗಿಸಲಾಗುತ್ತಿತ್ತು. ಕೆಲವು ಗಂಟೆಗಳ ಕಾಲ ಪರೀಕ್ಷೆ ನಡೆಸಿದ ನಂತರ ಅದೇ ದಿನ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಹಲವು ಬಾರಿ ತಪಾಸಣೆ ಮತ್ತು ಪರೀಕ್ಷೆಗಳನ್ನು ನಡೆಸಿದ ನಂತರ ಮೇ 4ರಂದು ಅವರಿಗೆ ವೈದ್ಯಕೀಯ ಚಿಕಿತ್ಸೆಗೆ ದಿನಾಂಕ ಸಿಕ್ಕಿದೆ. ಅವರ ಆರೋಗ್ಯ ಸ್ಥಿತಿಯ ಕುರಿತು ದೆಹಲಿ ನ್ಯಾಯಾಲಯದಿಂದ ಅನುಮತಿ ಪಡೆದ ನಂತರ ಸಂಪೂರ್ಣ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಯಿತು.

ಇದನ್ನೂ ಓದಿ: ಗಂಡನ ತಂಗಿಯನ್ನೇ ಆತನ ಎರಡನೇ ಹೆಂಡತಿಯೆಂದ ಪತ್ನಿ; ವಿಚ್ಛೇದನಕ್ಕಾಗಿ ಎಷ್ಟೆಲ್ಲ ನಾಟಕ!

65 ವರ್ಷದ ರಾಣಾ ಅವರನ್ನು ಪ್ರಸ್ತುತ ತಿಹಾರ್ ಜೈಲು ಸಂಖ್ಯೆ 2ರಲ್ಲಿ ಇರಿಸಲಾಗಿದೆ. ತಿಹಾರ್ ಜೈಲಿನಲ್ಲಿರುವ ಹೆಚ್ಚಿನ ಅಪಾಯದ ಕೈದಿಗಳಿಗಾಗಿ ಮೀಸಲಾದ ವಾರ್ಡ್‌ನಲ್ಲಿ ಅವರನ್ನು ಇರಿಸಲಾಗಿದೆ. ಇದಲ್ಲದೆ, ಅವರನ್ನು ಇರಿಸಲಾಗಿರುವ ಬ್ಲಾಕ್ ಜೈಲು ಸಂಕೀರ್ಣದೊಳಗಿನ ಇತರರಿಗಿಂತ ಕಡಿಮೆ ಜನದಟ್ಟಣೆಯಿಂದ ಕೂಡಿದೆ. 26/11 ಲಷ್ಕರ್-ಎ-ತೈಬಾ ಸ್ಕೌಟ್ ಡೇವಿಡ್ ಕೋಲ್ಮನ್ ಹೆಡ್ಲಿಯ ಆಪ್ತ ಸಹಚರ ರಾಣಾ ಅವರನ್ನು ಕರೆತರಲಾಯಿತು. ಏಪ್ರಿಲ್ 10, 2025ರಂದು ಭಾರತಕ್ಕೆ ಅಮೆರಿಕದಿಂದ ಹಸ್ತಾಂತರ ಮಾಡಲಾಯಿತು. ಮುಂಬೈನಲ್ಲಿ 26/11 ದಾಳಿಗೆ ಕುಮ್ಮಕ್ಕು ನೀಡಿದ ಆರೋಪ ಅವರ ಮೇಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಜಾಗತಿಕ ಅನಿಮೆ ಅವಾರ್ಡ್ಸ್ 2026: ಟೋಕಿಯೋದಲ್ಲಿ ಮಿಂಚಲಿರುವ ರಶ್ಮಿಕಾ ಮಂದಣ್ಣ – Kannada News | Rashmika Mandanna to present at 10th Global Anime Awards 2026 Tokyo

ಪ್ಯಾನ್ ಇಂಡಿಯಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಅವರಿಗೆ ಅಭಿಮಾನಿಗಳು ಇದ್ದಾರೆ. ಅದಕ್ಕೆ ಹಲವು ಉದಾಹರಣೆಗಳು ಸಿಗುತ್ತಿವೆ. ಜಪಾನ್‌ನ ಟೋಕಿಯೋದಲ್ಲಿ ಮೇ 23ರಂದು ನಡೆಯಲಿರುವ ಪ್ರತಿಷ್ಠಿತ 10ನೇ ಗ್ಲೋಬಲ್ ಅನಿಮೆ ಅವಾರ್ಡ್ಸ್ (Global Anime Awards) ಸಮಾರಂಭದಲ್ಲಿ ರಶ್ಮಿಕಾ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇದು ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳಿಗೆ ಹೆಮ್ಮ ತಂದಿದೆ.

ರಶ್ಮಿಕಾ ಮಂದಣ್ಣ ಅವರು ಈ ಹಿಂದೆ 2024ರಲ್ಲಿ ಈ ಅನಿಮೆ ಅವಾರ್ಡ್ಸ್‌ನಲ್ಲಿ ಭಾಗವಹಿಸಿದ್ದರು. ಈ ಮೂಲಕ ಈ ಜಾಗತಿಕ ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ಭಾರತೀಯ ಚಿತ್ರರಂಗದ ಮೊದಲ ನಟಿಯರಲ್ಲಿ ಒಬ್ಬರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಈಗ ಎರಡನೇ ಬಾರಿಗೆ ಅವರಿಗೆ ಈ ಆಹ್ವಾನ ಬಂದಿರುವುದು ಅವರ ಜಾಗತಿಕ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಈ ಬಾರಿ ಪ್ರಶಸ್ತಿ ಪ್ರದಾನ ಮಾಡುವವರ ಪಟ್ಟಿಯಲ್ಲಿ ರಶ್ಮಿಕಾ ಅವರ ಜೊತೆಗೆ ಖ್ಯಾತ ಗಾಯಕ ದಿ ವೀಕೆಂಡ್ ಸೇರಿದಂತೆ ವಿಶ್ವದ ವಿವಿಧ ದೇಶಗಳ ಪ್ರಸಿದ್ಧ ತಾರೆಯರು ಇರಲಿದ್ದಾರೆ. ಇದು ಸಿನಿಮಾ, ಸಂಗೀತ ಮತ್ತು ಅನಿಮೇಷನ್ ಲೋಕದ ಸಂಗಮಕ್ಕೆ ಸಾಕ್ಷಿಯಾಗಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಇರುವ ಹಲವು ಗಣ್ಯರ ಜೊತೆಗೆ ರಶ್ಮಿಕಾ ಮಂದಣ್ಣ ಅವರಿಗೂ ಆಹ್ವಾನ ಬಂದಿದೆ.

ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗಗಳಲ್ಲಿ ಸಕ್ರಿಯವಾಗಿರುವ ರಶ್ಮಿಕಾ ಅವರಿಗೆ ಮೊದಲಿನಿಂದಲೂ ‘ಅನಿಮೆ’ ಎಂದರೆ ಪಂಚಪ್ರಾಣ. ಅನಿಮೆ ಕಥೆಗಳು ಮತ್ತು ಅಲ್ಲಿನ ಪಾತ್ರಗಳ ಬಗ್ಗೆ ಅವರು ಹಲವು ಬಾರಿ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮಗಿಷ್ಟವಾದ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ವೇದಿಕೆ ಮೇಲೆ ಕಾಣಿಸಿಕೊಳ್ಳುತ್ತಿರುವುದು ಅವರ ಅಭಿಮಾನಿಗಳಿಗೆ ಸಂಭ್ರಮ ತಂದಿದೆ.

ಇದನ್ನೂ ಓದಿ: ಕೊಡವ ಭಾಷೆಯಲ್ಲಿ ವಿಜಯ್ ದೇವರಕೊಂಡ ಬಗ್ಗೆ ಮಾತಾಡಿದ ರಶ್ಮಿಕಾ ಮಂದಣ್ಣ

ಚಿತ್ರರಂಗದಲ್ಲಿ ರಶ್ಮಿಕಾ ಮಂದಣ್ಣ ಅವರ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಅವರು ಒಪ್ಪಿಕೊಳ್ಳುತ್ತಿದ್ದಾರೆ. ‘ಮೈಸಾ’, ‘ರಣಬಾಲಿ’ ಮುಂತಾದ ಸಿನಿಮಾಗಳು ಈಗ ಅವರ ಕೈಯಲ್ಲಿವೆ. ಈ ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ಅವರ ಲುಕ್ ಗಮನ ಸೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗಾಂಜಾ ಸೇವನೆ ಆರೋಪಕ್ಕೆ ಹೆದರಿ ವಿದ್ಯಾರ್ಥಿ ಆತ್ಮಹತ್ಯೆ: ಹಣಕ್ಕೆ ಬೇಡಿಕೆ ಇಟ್ಟಿದ್ದರಾ ಪೊಲೀಸರು? – Kannada News | Student Dies After Police Allegedly Demand Money in Ganja Case

ಧಾರವಾಡ, ಏಪ್ರಿಲ್​​ 28: ಗಾಂಜಾ ಸೇವನೆ ಆರೋಪಕ್ಕೆ ಹೆದರಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಧಾರವಾಡದ ಗಿರಿನಗರದಲ್ಲಿ ನಡೆದಿದೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಬೇಲೂರು ನಿವಾಸಿ ಆದಿತ್ಯ ಮ್ಯಾಗೇರಿ(20) ನೇಣಿಗೆ ಶರಣಾದ ವಿದ್ಯಾರ್ಥಿಯಾಗಿದ್ದು, ಧಾರವಾಡದ ಕಿಟೆಲ್ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ. ಗಿರಿನಗರ ಬಡಾವಣೆಯಲ್ಲಿ ರೂಮ್ ಮಾಡಿಕೊಂಡಿದ್ದ ವಿದ್ಯಾರ್ಥಿ ಆದಿತ್ಯಗೆ 2 ದಿನಗಳಿಂದ ಪೊಲೀಸರು ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಗಾಂಜಾ ಸೇವನೆ ಆರೋಪದಲ್ಲಿ ಆದಿತ್ಯ ಸೇರಿ 10ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ನೆಗೆಟಿವ್​ ವರದಿ ಬಂದಿದ್ದರಿಂದ ಆದಿತ್ಯನನ್ನು ಬಿಟ್ಟು ಕಳುಹಿಸಲಾಗಿತ್ತು. ನಂತರ ಹಣ ನೀಡುವಂತೆ ಪೊಲೀಸರು ಆದಿತ್ಯನಿಗೆ ಕಾಡುತ್ತಿದ್ದ ಆರೋಪವನ್ನು ಮೃತ ವಿದ್ಯಾರ್ಥಿ ಆದಿತ್ಯ ತಾಯಿ ಕವಿತಾ ಮಾಡಿದ್ದಾರೆ. ಪೊಲೀಸರು ಹಣ ಕೇಳಿದ್ದರಿಂದ ಆತಂಕಗೊಂಡಿದ್ದ ವಿದ್ಯಾರ್ಥಿ ಆದಿತ್ಯ ನಿನ್ನೆ ತಾಯಿಯ ಬಳಿ 2 ಸಾವಿರ ಹಣ ಕೇಳಿದ್ದ. ಆದರೆ ಆಕೆ ಹಣ ನೀಡಲು ನಿರಾಕರಿಸಿದ್ದಕ್ಕೆ ಸಿಟ್ಟಿಗೆದ್ದಿದ್ದ ಆದಿತ್ಯ ನಿನ್ನೆ ರಾತ್ರಿ ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ. ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version