ತಿಂಗಳಾನುಗಟ್ಟಲೆ ಪೇಮೆಂಟ್ ಇಲ್ಲದೆ ಇಂದಿರಾ ಕ್ಯಾಂಟಿನ್ ಸಿಬ್ಬಂದಿ ಪರದಾಟ!

ಬೆಂಗಳೂರು, ಮೇ 11: ಇಂದಿರಾ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರು ಕಡಿಮೆ ವೇತನ ಮತ್ತು ಸಂಬಳ ಪಾವತಿಯಲ್ಲಿ ವಿಳಂಬದಿಂದ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಅಡುಗೆಮನೆಯಲ್ಲಿ ತರಕಾರಿ ತೊಳೆಯುವುದು, ಹೆಚ್ಚುವುದು ಮತ್ತು ಇತರ ಸಹಾಯಕ ಕೆಲಸಗಳನ್ನು ನಿರ್ವಹಿಸುವ ಈ ಕಾರ್ಮಿಕರಿಗೆ ತಿಂಗಳಿಗೆ 7,000 ರೂಪಾಯಿ ವೇತನ ನೀಡಲಾಗುತ್ತದೆ. ಈ ಮೊತ್ತವು ಅತ್ಯಂತ ಕಡಿಮೆಯಾಗಿದ್ದು, ಕುಟುಂಬ ನಿರ್ವಹಣೆಗೆ ಕಷ್ಟಕರವಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಸ್ತುತ, ಕಾರ್ಮಿಕರಿಗೆ ಎರಡು ತಿಂಗಳಿಗೂ ಹೆಚ್ಚು ಕಾಲದಿಂದ ಸಂಬಳ ಪಾವತಿಯಾಗಿಲ್ಲ. ಮತ್ತು ವಿದ್ಯುತ್, ನೀರು ಮತ್ತು ಇತರ ಬಿಲ್‌ಗಳನ್ನು ಪಾವತಿಸುವುದು ಸವಾಲಾಗಿದೆ ಎಂದು ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ. ಸಮಯಕ್ಕೆ ಸರಿಯಾಗಿ ವೇತನ ಪಾವತಿ ಮಾಡುವುದು ತಮ್ಮ ಏಕೈಕ ಬೇಡಿಕೆಯಾಗಿದೆ ಎಂದು ಕಾರ್ಮಿಕರು ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಿಕ್ಕಬಳ್ಳಾಪುರದಲ್ಲಿ ಕಾಶ್ಮೀರಿ ಆ್ಯಪಲ್ ಬೆಳೆದು ಸೈ ಎನಿಸಿಕೊಂಡ ರೈತ!

ಚಿಕ್ಕಬಳ್ಳಾಪುರ, ಮೇ 11: ಅನಿಲ್ ಎಂಬ ರೈತರ ಚಿಕ್ಕಬಳ್ಳಾಪುರ ಜಿಲ್ಲೆಯ ಅಡ್ಡಗಲ್ ಗ್ರಾಮದಲ್ಲಿ ಸೇಬು ಬೆಳೆದು ಯಶಸ್ಸಿನ ಕಥೆ ಬರೆದಿದ್ದಾರೆ. ಸಾಮಾನ್ಯವಾಗಿ ತಂಪಾದ ವಾತಾವರಣದಲ್ಲಿ ಬೆಳೆಯುವ ಸೇಬನ್ನು, ಬಿಸಿಲಿನ ವಾತಾವರಣವಿರುವ ಚಿಕ್ಕಬಳ್ಳಾಪುರದಲ್ಲಿ ಬೆಳೆಸುವುದು ದೊಡ್ಡ ಸವಾಲಾಗಿತ್ತು. ಆರಂಭದಲ್ಲಿ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಿದ್ದ ಅನಿಲ್ ಅವರು, ಹೊಸ ಪ್ರಯತ್ನವಾಗಿ ಸೇಬು ಕೃಷಿಯತ್ತ ಆಸಕ್ತಿ ವಹಿಸಿದರು.

ಗುಬ್ಬಿಯ ಶೇಷಣ್ಣ ಅವರ ಮಾರ್ಗದರ್ಶನ ಪಡೆದ ಅನಿಲ್, ಅವರ ಸಲಹೆಯಂತೆ ಸಸಿಗಳನ್ನು ನೆಟ್ಟರು. ಇದು ಅವರ ಮೊದಲ ಬೆಳೆಯಾಗಿದ್ದು, ಒಂದು ಎಕರೆಯಲ್ಲಿ ಸುಮಾರು 400 ಗಿಡಗಳನ್ನು ನೆಡಲಾಗಿದೆ. ಪ್ರತಿ ಗಿಡದಿಂದ 10 ರಿಂದ 15 ಕೆಜಿ ಸೇಬು ಇಳುವರಿ ನಿರೀಕ್ಷಿಸಲಾಗಿದೆ. ಅಂದಾಜು 5 ಲಕ್ಷ ರೂಪಾಯಿ ಬಂಡವಾಳ ಹೂಡಿಕೆ ಮಾಡಲಾಗಿದ್ದು, ಅನಿಲ್ ಅವರ ಈ ಪ್ರಯೋಗವು ಯಶಸ್ವಿಯಾಗಿದೆ. ಅವರ ಸಾಧನೆ ಇತರ ರೈತರಿಗೆ ಸ್ಫೂರ್ತಿದಾಯಕವಾಗಿದೆ ಎಂದು ಅವರು ಸಂತೋಷ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಾಖಲೆಯ ಅರ್ಧಶತಕ ಸಿಡಿಸಿ ಸಿಎಸ್​ಕೆ ಆಟಗಾರ ತೋರಿಸಿದ ಚೀಟಿಯಲ್ಲೇನಿತ್ತು? – Kannada News | What was written on CSK star Urvil Patel’s chit?

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​-19ರ 53ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಉರ್ವಿಲ್ ಪಟೇಲ್ ಅಕ್ಷರಶಃ ಅಬ್ಬರಿಸಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಈ ಪಂದ್ಯದಲ್ಲಿ ಕೇವಲ 13 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಐಪಿಎಲ್ ಇತಿಹಾಸದ ಅತಿ ವೇಗದ ಫಿಫ್ಟಿ ದಾಖಲೆಯನ್ನು ಸರಿಗಟ್ಟಿದ್ದಾರೆ. ಆದರೆ, ಈ ಐತಿಹಾಸಿಕ ಸಾಧನೆಗಿಂತ ಹೆಚ್ಚಾಗಿ ಮೈದಾನದಲ್ಲಿ ಉರ್ವಿಲ್ ಸಂಭ್ರಮಿಸಿದ ರೀತಿ ಮತ್ತು ಅವರು ಪ್ರದರ್ಶಿಸಿದ ಒಂದು ಸಣ್ಣ ಚೀಟಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದೆ. ಅಷ್ಟಕ್ಕೂ ಆ ಚೀಟಿಯಲ್ಲೇನಿತ್ತು? ಎಂದು ನೋಡುವುದಾದರೆ…

ಉರ್ವಿಲ್ ಪಟೇಲ್ ಅರ್ಧಶತಕದ ಸಂಭ್ರಮದ ವೇಳೆ ತೋರಿಸಿದ ಚೀಟಿಯಲ್ಲಿ ತಮ್ಮ ತಂದೆ ಮುಖೇಶ್ ಪಟೇಲ್ ಅವರಿಗಾಗಿ ಬರೆದ ಸಾಲುಗಳಿದ್ದವು. ಇಂಗ್ಲಿಷ್ ಮತ್ತು ಗುಜರಾತಿ ಭಾಷೆಯಲ್ಲಿದ್ದ ಆ ಸಂದೇಶ ಹೀಗಿತ್ತು:

  • “This is for you, Papa” (ಅಪ್ಪಾ, ಇದು ನಿಮಗಾಗಿ).
  •  “તમારું સપનું આજે પૂરું થયું,ક્રિકેટર મોટું બનીને બતાવ્યું.” (ಇಂದು ನಾನು ದೊಡ್ಡ ಕ್ರಿಕೆಟಿಗನಾಗಿ ನಿಮ್ಮ ಕನಸನ್ನು ನನಸು ಮಾಡಿ ತೋರಿಸಿದ್ದೇನೆ).

ಅಲ್ಲದೆ, ಅದರಲ್ಲಿ ತಮ್ಮ ಕುಲದೇವತೆಗಳ ಹೆಸರನ್ನು ಉಲ್ಲೇಖಿಸಿ, ಅವರ ಆಶೀರ್ವಾದದಿಂದಲೇ ಈ ಸಾಧನೆ ಸಾಧ್ಯವಾಯಿತು ಎಂದು ಬರೆದುಕೊಂಡಿದ್ದರು.

ದಾಖಲೆಗಳ ಸುರಿಮಳೆ:

ಈ ಪಂದ್ಯದಲ್ಲಿ ಉರ್ವಿಲ್ ಪಟೇಲ್ ಕೇವಲ ಚೀಟಿಯಿಂದ ಮಾತ್ರವಲ್ಲ, ಬ್ಯಾಟಿಂಗ್ ಮೂಲಕವೂ ಇತಿಹಾಸ ಸೃಷ್ಟಿಸಿದರು. ಆ ದಾಖಲೆಗಳಾವುವು ಎಂದು ನೋಡುವುದಾದರೆ…

    • ಅತಿ ವೇಗದ ಫಿಫ್ಟಿ: 13 ಎಸೆತಗಳಲ್ಲಿ 50 ರನ್ ಪೂರೈಸುವ ಮೂಲಕ ಐಪಿಎಲ್‌ನ ಸಾರ್ವಕಾಲಿಕ ದಾಖಲೆಯನ್ನು ಸರಿಗಟ್ಟಿದರು.
    •  ಸಿಕ್ಸರ್‌ಗಳ ಅಬ್ಬರ: ಐಪಿಎಲ್​ ಇನಿಂಗ್ಸ್‌ನ ಮೊದಲ 8 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಉರ್ವಿಲ್ ಪಟೇಲ್ ಹಿನ್ನೆಲೆ:

ಮಧ್ಯಮ ವರ್ಗದ ಕುಟುಂಬದಿಂದ ಬಂದ ಉರ್ವಿಲ್ ಪಟೇಲ್ ಅವರನ್ನು ಕ್ರಿಕೆಟಿಗನನ್ನಾಗಿ ಮಾಡಲು ಅವರ ತಂದೆ ಸಾಕಷ್ಟು ಕಷ್ಟಪಟ್ಟಿದ್ದರು. ಐಪಿಎಲ್‌ನಂತಹ ದೊಡ್ಡ ವೇದಿಕೆಯಲ್ಲಿ ಮಗ ಅಬ್ಬರಿಸುವುದನ್ನು ನೋಡುವುದು ಅವರ ದೊಡ್ಡ ಕನಸಾಗಿತ್ತು. ಹೀಗಾಗಿಯೇ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ದಾಖಲೆಯ ಅರ್ಧಶತಕವನ್ನು ಉರ್ವಿಲ್ ಪಟೇಲ್ ತಮ್ಮ ತಂದೆಗೆ ಅರ್ಪಿಸಿದ್ದರು.

Source link

ದೇಶದ ಹಿತಕ್ಕಾಗಿ ಒಂದು ವರ್ಷ ಚಿನ್ನ ಖರೀದಿಸಬೇಡಿ, ಮನೆಯಿಂದಲ್ಲೇ ಕೆಲಸ ಮಾಡಿ: ಪ್ರಧಾನಿ ಮೋದಿ ನೀಡಿದ ‘ಆರ್ಥಿಕ ಶಿಸ್ತಿನ’ ಕರೆ! – Kannada News | Foreign Exchange Conservation: PM Modi Urges Citizens to Halt Gold Purchase and Save Fuel

ಹೈದರಾಬಾದ್‌, ಮೇ.11: ಜಿಲ್ಲೆಯಲ್ಲಿ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಮಹತ್ವದ ಕರೆ ನೀಡಿದ್ದಾರೆ. ಜಗತ್ತು ಬಿಕ್ಕಟ್ಟಿನಲ್ಲಿದ್ದು, ದೇಶದ ಹಿತಕ್ಕಾಗಿ ತ್ಯಾಗಗಳನ್ನು ಮಾಡಲು ಸಿದ್ಧರಾಗಿ ಎಂದು ಅವರು ಹೇಳಿದ್ದಾರೆ. ಕಚ್ಚಾ ತೈಲ ಮತ್ತು ಚಿನ್ನದ ಬೆಲೆಗಳು ಗಣನೀಯವಾಗಿ ಹೆಚ್ಚಾಗಿರುವುದರಿಂದ, ವಿದೇಶಿ ವಿನಿಮಯವನ್ನು ಉಳಿಸುವುದು ಅತ್ಯಗತ್ಯ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದ್ದಾರೆ. ಈ ನಿಟ್ಟಿನಲ್ಲಿ, ನಾಗರಿಕರು ಮುಂದಿನ ಒಂದು ವರ್ಷದವರೆಗೆ ಚಿನ್ನ ಖರೀದಿಸುವುದನ್ನು ನಿಲ್ಲಿಸಬೇಕು ಎಂದು ಸಲಹೆ ನೀಡಿದ್ದಾರೆ. ಅಲ್ಲದೆ, ವಿದೇಶಿ ಪ್ರಯಾಣವನ್ನು ತಪ್ಪಿಸಿ, ಸಾಧ್ಯವಾದಷ್ಟು ಮೆಟ್ರೋ ಮತ್ತು ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ಸೂಚಿಸಿದ್ದಾರೆ. ವಿದ್ಯುತ್ ವಾಹನಗಳ ಬಳಕೆಗೆ ಉತ್ತೇಜನ ನೀಡಿದ್ದು, ಮನೆಯಿಂದಲೇ ಕೆಲಸ ಮಾಡುವ, ಆನ್‌ಲೈನ್ ಸಭೆಗಳನ್ನು ನಡೆಸುವ ಮೂಲಕ ವೆಚ್ಚಗಳನ್ನು ಕಡಿಮೆಗೊಳಿಸುವಂತೆ ಮಧ್ಯಮ ವರ್ಗದ ಜನರಿಗೆ ಕರೆ ನೀಡಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಮಿತವಾಗಿ ಬಳಸುವ ಮೂಲಕ ದೇಶದ ವಿದೇಶಿ ವಿನಿಮಯವನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಮೋದಿ ಒತ್ತಿ ಹೇಳಿದ್ದಾರೆ. ಅಡುಗೆ ಎಣ್ಣೆ ಬಳಕೆಯ ತಗ್ಗಿಸುವಿಕೆಯು ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿಸಿದ್ದಾರೆ. ದೇಶದ ಆರ್ಥಿಕ ಸ್ಥಿರತೆಗೆ ಈ ಕ್ರಮಗಳು ಸಹಕಾರಿ ಆಗಲಿವೆ ಎಂದು ಅವರು ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RCB ಗೆಲುವಿಗೆ ಕಾರಣವಾದ 4 ಎಸೆತಗಳು..!

ಇಂಡಿಯನ್ ಪ್ರೀಮಿಯರ್ ಲೀಗ್​ನ 54ನೇ ಮ್ಯಾಚ್​ನಲ್ಲಿ ಆರ್​ಸಿಬಿ ತಂಡವು ರೋಚಕ ಜಯ ಸಾಧಿಸಿದೆ. ಆರ್​ಸಿಬಿ ತಂಡದ ಈ ಗೆಲುವಿಗೆ ಭುವನೇಶ್ವರ್ ಕುಮಾರ್ ಹಾಗೂ ರಾಸಿಖ್ ದಾರ್ ಎಷ್ಟು ಕಾರಣರೋ,  ಮುಂಬೈ ಇಂಡಿಯನ್ಸ್ ತಂಡದ ಸೋಲಿಗೆ​ ರಾಜ್​ ಬಾವ ಕೂಡ ಅಷ್ಟೇ ಕಾರಣರು.

ಏಕೆಂದರೆ ಈ ಮ್ಯಾಚ್​ನ ಅಂತಿಮ ಓವರ್​ನಲ್ಲಿ ಆರ್​ಸಿಬಿ ತಂಡಕ್ಕೆ 15 ರನ್​ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ದಾಳಿಗಿಳಿದ ರಾಜ್​ ಬಾವ ಬರೋಬ್ಬರಿ 10 ಎಸೆತಗಳನ್ನು ಎಸೆದಿದ್ದರು. ಅಂದರೆ ಹೆಚ್ಚುವರಿ ಮೂರು ಎಸೆತಗಳೇ ಮುಂಬೈ ಇಂಡಿಯನ್ಸ್ ಪಾಲಿಗೆ ಮುಳುವಾಯಿತು.

ರಾಜ್​ ಬಾವ ಕೊನೆಯ ಓವರ್​:

ಮೊದಲ ಎಸೆತವನ್ನು ವೈಡ್ ಎಸೆದಿದ್ದ ರಾಜ್ ಬಾವ, ಮರು ಎಸೆತದಲ್ಲಿ ನೋ ಬಾಲ್ ಮಾಡಿದರು. ಪರಿಣಾಮ ಆರ್​ಸಿಬಿ ತಂಡಕ್ಕೆ 2 ರನ್​ಗಳು ಸಿಕ್ಕವು. ಇನ್ನು ಫ್ರಿಹಿಟ್ ಎಸೆತದಲ್ಲಿ ಒಂದು ರನ್ ನೀಡಿದರು.

ಇದಾದ ಬಳಿಕ ಮತ್ತೊಂದು ವೈಡ್ ಎಸೆದರು. ಇದರಿಂದ ಎಕ್ಸ್​ಟ್ರಾ ಇನ್ನೊಂದು ರನ್ ಸಿಕ್ಕಿತು. ಆ ಬಳಿಕ ರೊಮಾರಿಯೊ ಶೆಫರ್ಡ್ ವಿಕೆಟ್ ಪಡೆದರು. ಆದರೆ ಆ ಬಳಿಕ ಭುವನೇಶ್ವರ್ ಕುಮಾರ್​​ಗೆ ಬಾನ್ಸರ್ ಎಸೆಯಲು ಹೋಗಿ ಮತ್ತೊಂದು ವೈಡ್ ನೀಡಿದರು. ಮರು ಎಸೆತದಲ್ಲಿ ಭುವಿ ಸಿಕ್ಸ್ ಸಿಡಿಸಿದರು. ಇನ್ನು 5ನೇ ಎಸೆತದಲ್ಲಿ ಒಂದು ರನ್ ಕಲೆಹಾಕುವ ಮೂಲಕ ರಾಸಿಖ್ ದಾರ್​ಗೆ ಸ್ಟ್ರೈಕ್ ನೀಡಿದರು.

ಅದರಂತೆ ಅಂತಿಮ ಎಸೆತದಲ್ಲಿ ಆರ್​ಸಿಬಿ ತಂಡಕ್ಕೆ 2 ರನ್​ಗಳ ಅವಶ್ಯಕತೆಯಿತ್ತು. ಈ ವೇಳೆ ರಾಸಿಖ್ ನೀಡಿದ ಕ್ಯಾಚ್ ಕೈಚೆಲ್ಲುವ ಮೂಲಕ ರಾಜ್ ಬಾವ 2 ರನ್​ ಬಿಟ್ಟು ಕೊಟ್ಟರು. ಈ ಮೂಲಕ ಆರ್​ಸಿಬಿ ತಂಡ ಕೊನೆಯ ಓವರ್​ನಲ್ಲಿ ರೋಚಕ ಗೆಲುವು ದಾಖಲಿಸಿತು.

ಅಂದರೆ ಇಲ್ಲಿ ರಾಜ್​ ಬಾವ ಕೊನೆಯ ಓವರ್​ನಲ್ಲಿ ಮೂರು ವೈಡ್ ಹಾಗೂ ಒಂದು ನೋ ಬಾಲ್ ಎಸೆಯುವ ಮೂಲಕ ಒಟ್ಟು 10 ಎಸೆತಗಳನ್ನು ಎಸೆದಿದ್ದರು. ಈ ಹೆಚ್ಚುವರಿ 4 ಎಸೆತಗಳ ಮೂಲಕ ಆರ್​ಸಿಬಿ  5 ರನ್​ಗಳನ್ನು ಕಲೆಹಾಕಿದ್ದರು. ಅಂದರೆ ರಾಜ್​ ಬಾವ ಎಸೆದ ಹೆಚ್ಚುವರಿ ಎಸೆತಗಳೇ ಆರ್​ಸಿಬಿ ಗೆಲುವಿಗೆ ಕಾರಣವಾಯ್ತು ಎಂದರೆ ತಪ್ಪಾಗಲಾರದು.

 

 

Source link

“ನಾವು ಯಾವಾಗ ಇರ್ತೀವೋ ಗೊತ್ತಿಲ್ಲ..”: ಸಾವಿನ ಬಗ್ಗೆ ಸುಳಿವು ನೀಡಿದ್ದ ಸಚಿವ ಸುಧಾಕರ್ – Kannada News | Minister D. Sudhakar’s Last Speech Goes Viral: “Life is Like a Bulb, It May Switch Off Anytime

ಚಿತ್ರದುರ್ಗ ಮೇ.11: ಕರ್ನಾಟಕ ಸರ್ಕಾರದ ಸಚಿವರಾಗಿದ್ದ ಡಿ. ಸುಧಾಕರ್ ಅವರ ಅಕಾಲಿಕ ನಿಧನದ ನಂತರ, ಅವರು ಇತ್ತೀಚೆಗೆ ಶಾರದಾ ಆಶ್ರಮದ ಭೂಮಿಪೂಜೆ ವೇಳೆ ಆಡಿದ್ದ ಮಾತುಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ. ಜೀವನದ ಕ್ಷಣಿಕತೆಯ ಬಗ್ಗೆ ಅವರು ಆಡಿದ್ದ ಈ ಮಾತುಗಳು ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸುತ್ತಿವೆ. “ನಾವು ಇವತ್ತು ಇರ್ತೀವೋ ಇಲ್ಲವೋ ಗೊತ್ತಿಲ್ಲ. ನಮ್ಮ ಜೀವನ ಒಂದು ರೀತಿ ಬಲ್ಬ್ ಇದ್ದಂತೆ, ಯಾವಾಗ ಸ್ವಿಚ್ ಆಫ್ ಆಗುತ್ತೋ ಗೊತ್ತಿಲ್ಲ” ಎಂದು ಹೇಳುವ ಮೂಲಕ ಜೀವನದ ಅನಿಶ್ಚಿತತೆಯನ್ನು ವಿವರಿಸಿದ್ದರು. “ಇದ್ದಷ್ಟು ದಿನ ಧಾರ್ಮಿಕವಾಗಿ, ಭಗವಂತನ ಸ್ಮರಣೆಯಲ್ಲಿ ಕಳೆಯಬೇಕು. ಒಬ್ಬೊಬ್ಬರದ್ದು ಒಂದೊಂದು ನಂಬಿಕೆ ಇರುತ್ತದೆ. ಕೆಲವರು ಕಾಯಕವೇ ಕೈಲಾಸ ಎನ್ನುತ್ತಾರೆ, ಮತ್ತೆ ಕೆಲವರು ಪರೋಪಕಾರವೇ ಭಗವಂತನ ಸೇವೆ ಎನ್ನುತ್ತಾರೆ” ಎಂದು ಅವರು ಕಿವಿಮಾತು ಹೇಳಿದ್ದರು. ಇಡೀ ಭಾಷಣದಲ್ಲಿ ಅವರು ಪರೋಪಕಾರ ಮತ್ತು ಸಮಾಜ ಸೇವೆಯ ಮಹತ್ವದ ಬಗ್ಗೆ ಒತ್ತಿ ಹೇಳಿದ್ದರು. ಸಚಿವ ಸುಧಾಕರ್ ಅವರು ಈ ಮಾತುಗಳನ್ನು ಆಡುವಾಗ ತಮಗೆ ಸಾವಿನ ಮುನ್ಸೂಚನೆ ಸಿಕ್ಕಿತ್ತೇ ಎಂಬ ಪ್ರಶ್ನೆ ಈಗ ಸಾರ್ವಜನಿಕರಲ್ಲಿ ಮೂಡಿದೆ. ಅವರ ಈ ವೈರಲ್ ವಿಡಿಯೋ ಕಂಡು ಚಿತ್ರದುರ್ಗದ ಜನತೆ ಹಾಗೂ ಅವರ ಬೆಂಬಲಿಗರು ಕಂಬನಿ ಮಿಡಿಯುತ್ತಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಧಾನಿ ಮೋದಿ ಸಂಚರಿಸುವ ಮಾರ್ಗದಲ್ಲೇ ಜಿಲೆಟಿನ್ ಪತ್ತೆ: ಸ್ಫೋಟಕ ತುಂಬಿದ ಬಾಕ್ಸ್​ಗೆ ಟೇಪ್ ಸುತ್ತಿ ಬಿಸಾಡಿದ್ದ ಆರೋಪಿ! – Kannada News | Security Breach: Explosives Found on PM Modi’s Route Near Art of Living in Bengaluru

ರಾಮನಗರ, ಮೇ 11: ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಭಾರೀ ಭದ್ರತಾ ಲೋಪದ ಶಂಕೆ ವ್ಯಕ್ತವಾಗಿತ್ತು. ಮೋದಿ ಅವರು ಸಂಚರಿಸುವ ಮಾರ್ಗದ ಪಕ್ಕದಲ್ಲೇ ಸ್ಫೋಟಕಗಳು (Explosive) ಪತ್ತೆಯಾಗಿದ್ದು, ಇಡೀ ಪೊಲೀಸ್ ಇಲಾಖೆಯನ್ನು ಬೆಚ್ಚಿಬೀಳಿಸಿತ್ತು. ಈ ಘಟನೆಗೆ ಸಂಬಂಧಿಸಿದ ಎಕ್ಸ್‌ಕ್ಲೂಸಿವ್ ಫೋಟೋ ಟಿವಿ9ಗೆ ಲಭ್ಯವಾಗಿದೆ.

ಮುಖ್ಯಾಂಶಗಳು

  • ಮೋದಿ ಬರುವ ಮಾರ್ಗದಲ್ಲಿ ಎರಡು ಜಿಲೆಟಿನ್ ಕಡ್ಡಿಗಳಿದ್ದ ಬಾಕ್ಸ್ ಪತ್ತೆಯಾಗಿ ಆತಂಕ.
  •  ಪೊಲೀಸ್ ಪೇದೆಯ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ; ಬಾಂಬ್ ಸ್ಕ್ವಾಡ್‌ನಿಂದ ತೀವ್ರ ತಪಾಸಣೆ.
  •  ಪ್ರಕರಣ ಭೇದಿಸಲು ಆರು ವಿಶೇಷ ತಂಡಗಳ ರಚನೆ; ಕ್ವಾರಿಗಳ ಮೇಲೆ ಪೊಲೀಸರ ಕಣ್ಣು.

ಏನಾಗಿತ್ತು?

ನಿನ್ನೆ (ಮೇ 10) ಪ್ರಧಾನಿ ಮೋದಿ ಅವರು ‘ಆರ್ಟ್ ಆಫ್ ಲಿವಿಂಗ್’ ಆಶ್ರಮಕ್ಕೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದರು. ಅವರು ಬರುವ ಕೇವಲ ಎರಡು ಗಂಟೆಗಳ ಮೊದಲು, ಅಂದರೆ ಬೆಳಿಗ್ಗೆ 9 ಗಂಟೆ ವೇಳೆಗೆ, ಬೆಂಗಳೂರು ದಕ್ಷಿಣ ತಾಲೂಕಿನ ವಡೇರಹಳ್ಳಿ ಗೇಟ್ ಸಮೀಪ ಅನುಮಾನಾಸ್ಪದ ಬಾಕ್ಸ್ ಒಂದು ಪತ್ತೆಯಾಗಿತ್ತು. ಭದ್ರತೆಗೆ ನಿಯೋಜನೆಗೊಂಡಿದ್ದ ಪೇದೆಯೊಬ್ಬರು ರಸ್ತೆ ಪಕ್ಕದಲ್ಲಿ ಬಿದ್ದಿದ್ದ ಈ ಬಾಕ್ಸ್ ಅನ್ನು ಗಮನಿಸಿದ್ದರು.

ಬಾಕ್ಸ್‌ನಲ್ಲಿ ಏನಿತ್ತು?

ಸುದ್ದಿ ತಿಳಿದ ಕೂಡಲೇ ಬಾಂಬ್ ನಿಷ್ಕ್ರಿಯ ದಳ (Bomb Squad) ಸ್ಥಳಕ್ಕೆ ಧಾವಿಸಿತ್ತು. ಬಾಕ್ಸ್ ಅನ್ನು ತೆರೆದು ಪರಿಶೀಲಿಸಿದಾಗ ಅದರಲ್ಲಿ ಎರಡು ಜಿಲೆಟಿನ್ ಕಡ್ಡಿಗಳು, ನಾಲ್ಕು ಗಂಧದ ಕಡ್ಡಿಗಳು, ಒಂದು ಮ್ಯಾಚ್ ಬಾಕ್ಸ್ ಹಾಗೂ ಎರಡು ಬ್ಯಾಟರಿಗಳು ಕಂಡುಬಂದಿದ್ದವು. ಆರೋಪಿಯು ಸ್ಫೋಟಕಗಳನ್ನು ಬಾಕ್ಸ್‌ನಲ್ಲಿಟ್ಟು ಸುತ್ತಲೂ ಟೇಪ್ ಅಂಟಿಸಿದ್ದನು. ತಕ್ಷಣವೇ ಸ್ಫೋಟಕಗಳನ್ನು ವಶಕ್ಕೆ ಪಡೆದ ಪೊಲೀಸರು, ಇಡೀ ಮಾರ್ಗವನ್ನು ಮತ್ತೊಮ್ಮೆ ತೀವ್ರ ತಪಾಸಣೆಗೆ ಒಳಪಡಿಸಿದ್ದಾರೆ. ಸಂಪೂರ್ಣ ಭದ್ರತೆ ಖಚಿತವಾದ ನಂತರವಷ್ಟೇ ಪ್ರಧಾನಿ ಸಂಚಾರಕ್ಕೆ ಅವಕಾಶ ನೀಡಲಾಯಿತು.

ಇದನ್ನೂ ಓದಿ ಮೋದಿ ಸಂಚರಿಸುವ ರಸ್ತೆ ಬಳಿ ಜಿಲೆಟಿನ್ ಕಡ್ಡಿ ಪತ್ತೆ: ತನಿಖೆ ಬಗ್ಗೆ ಕೇಂದ್ರ ವಲಯ ಡಿಐಜಿ ಮಾಹಿತಿ

ತನಿಖೆಯ ಹಾದಿ

ಈ ಗಂಭೀರ ಪ್ರಕರಣವನ್ನು ಭೇದಿಸಲು ಕಗ್ಗಲಿಪುರ ಠಾಣೆ ಪೊಲೀಸರು ಆರು ವಿಶೇಷ ತಂಡಗಳನ್ನು ರಚಿಸಿದ್ದು, ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ನಡೆಸುವುದರ ಜೊತೆಗೆ, ಬೆಂಗಳೂರು ದಕ್ಷಿಣ ಮತ್ತು ರಾಮನಗರ ಭಾಗದ ಕ್ವಾರಿಗಳಲ್ಲಿ ಬಳಕೆಯಾಗುವ ಜಿಲೆಟಿನ್ ಕಡ್ಡಿಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮೋದಿ ಸಂಚಾರಕ್ಕೂ ಹಿಂದಿನ ದಿನವೇ ಬಾಂಬ್ ಸ್ಕ್ವಾಡ್ ತಪಾಸಣೆ ನಡೆದಿತ್ತಾದರೂ ಬೆಳಗಿನ ಜಾವ ಈ ಬಾಕ್ಸ್ ಅನ್ನು ಅಲ್ಲಿ ಇಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಕೇಂದ್ರ ವಲಯದ ಡಿಐಜಿ ಗಿರೀಶ್ ಅವರು ಈ ಬಗ್ಗೆ ಮಾಹಿತಿ ನೀಡಿ, ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ತನಿಖೆ ಮುಂದುವರಿಸಲಾಗಿದೆ ಎಂದು ತಿಳಿಸಿದ್ದಾರೆ. ನಿನ್ನೆ ಕಾನ್‌ಸ್ಟೆಬಲ್ ಸಮಯಪ್ರಜ್ಞೆಯಿಂದ ಅನಾಹುತವೊಂದು ತಪ್ಪಿದಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:14 am, Mon, 11 May 26

Source link

Suryakumar Yadav: ನಮ್ಮ ಸೋಲಿಗೆ ಇಂದೊಂದೇ ಕಾರಣ! – Kannada News | Suryakumar yadav post match interview After RCB vs MI Match

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 54ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೋಲನುಭವಿಸಿದೆ. ರಾಯ್​ಪುರ್​ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್​ಗಳಲ್ಲಿ 167 ರನ್ ಕಲೆಹಾಕಿದ್ದರು. ಈ ಗುರಿಯನ್ನು ಆರ್​ಸಿಬಿ 20ನೇ ಓವರ್​ನ ಕೊನೆಯ ಎಸೆತದಲ್ಲಿ ಚೇಸ್ ಮಾಡಿದ್ದಾರೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2 ವಿಕೆಟ್​ಗಳ ರೋಚಕ ಜಯ ಸಾಧಿಸಿದೆ.

ಈ ಸೋಲಿನ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ತಂಡದ ಹಂಗಾಮಿ ನಾಯಕ ಸೂರ್ಯಕುಮಾರ್ ಯಾದವ್,  ನಮ್ಮ ಸೋಲಿಗೆ ಬ್ಯಾಟಿಂಗ್ ವಿಭಾಗದ ಹಿನ್ನಡೆಯೇ ಮುಖ್ಯ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.

“ನಮ್ಮ ಸ್ಕೋರ್‌ನಲ್ಲಿ 10 ರಿಂದ 15 ರನ್ ಕಡಿಮೆಯಾದವು ಎಂದು ನನಗೆ ಅನ್ನಿಸಿತು. ಸರಿಯಾದ ಸಮಯದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡಿದ್ದು ನಮಗೆ ಹೊಡೆತ ನೀಡಿತು. ಆದರೆ ನಮನ್ ಧೀರ್ ಮತ್ತು ತಿಲಕ್ ವರ್ಮಾ ಬ್ಯಾಟಿಂಗ್ ಮಾಡಿದ ರೀತಿ ಅದ್ಭುತವಾಗಿತ್ತು. ಅವರು ಈ ಪಿಚ್‌ನಲ್ಲಿ ಆಡಿದ ರೀತಿ ನೋಡಿದರೆ, ಅವರು ಬೇರೆಯದೇ ಟ್ರ್ಯಾಕ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆನೋ ಎಂಬಂತಿತ್ತು,” ಎಂದು ಸೂರ್ಯಕುಮಾರ್ ಯಾದವ್ ಯುವ ಬ್ಯಾಟರ್‌ಗಳನ್ನು ಶ್ಲಾಘಿಸಿದರು.

ಇನ್ನು ಪಂದ್ಯದ ಕೊನೆಯ ಓವರ್‌ನಲ್ಲಿ 15 ರನ್‌ಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ಯುವ ಆಲ್ ರೌಂಡರ್ ರಾಜ್ ಬಾವಾಗೆ ನೀಡಲಾಗಿತ್ತು. ಈ ಬಗ್ಗೆ ಮಾತನಾಡಿದ ಸೂರ್ಯ, “ರಾಜ್ ಕಳೆದ ವರ್ಷದಿಂದ ಮತ್ತು ಈ ಸೀಸನ್ ಪೂರ್ತಿ ಕೊನೆಯ ಓವರ್‌ಗಳ ಅಭ್ಯಾಸವನ್ನು ಚೆನ್ನಾಗಿ ಮಾಡಿದ್ದಾರೆ. ಅವರು ಈ ವರ್ಷ ಸಂಪೂರ್ಣ ಭಿನ್ನ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಕೊನೆಯ ಓವರ್‌ನಲ್ಲಿ ಅವರು ಗೆಲುವಿನ ಹತ್ತಿರ ತಂದಿದ್ದರು. ಅವರ ಶ್ರಮದ ಬಗ್ಗೆ ನಮಗೆ ಹೆಮ್ಮೆಯಿದೆ,” ಎಂದರು.

ಇದನ್ನೂ ಓದಿ: ಮುಂಬೈ ಇಂಡಿಯನ್ಸ್​​ ವಿರುದ್ಧ ‘ಅಸಭ್ಯ’ವಾಗಿ ಸಂಭ್ರಮಿಸಿದ ಟಿಮ್ ಡೇವಿಡ್

ಇದೇ ವೇಳೆ ಪಂದ್ಯದ ನಡುವೆ ತಿಲಕ್ ವರ್ಮಾ ಮತ್ತು ನಮನ್ ಧೀರ್ ನಡುವೆ ಕ್ಯಾಚ್ ಪಡೆಯುವಾಗ ನಡೆದ ಗೊಂದಲದ ಬಗ್ಗೆ ಮಾತನಾಡಿದ ಸೂರ್ಯಕುಮಾರ್ ಯಾದವ್, “ಇವೆಲ್ಲ ಆಟದ ಭಾಗ. ಅಭ್ಯಾಸದ ಸಮಯದಲ್ಲಿ ನಾವು ಇವುಗಳ ಬಗ್ಗೆ ಗಮನ ಹರಿಸುತ್ತೇವೆ. ಆದರೆ ಅಂತಿಮವಾಗಿ ತಿಲಕ್ ಆ ಅದ್ಭುತ ಕ್ಯಾಚ್ ಹಿಡಿದ ರೀತಿ ಅವರ ವಿಶೇಷತೆಯನ್ನು ತೋರಿಸುತ್ತದೆ,” ಮೆಚ್ಚುಗೆ ವ್ಯಕ್ತಪಡಿಸಿದರು.

ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿರುವುದು ಮುಂಬೈ ಇಂಡಿಯನ್ಸ್​ ತಂಡಕ್ಕೆ ಹೊಸ ಅನುಭವ ಮತ್ತು ನುಂಗಲಾರದ ತುತ್ತಾಗಿದೆ. ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ಸೂರ್ಯಕುಮಾರ್, “ನಾವು ಈ ಸ್ಥಾನದಲ್ಲಿ ಇರಲು ಬಯಸುವುದಿಲ್ಲ. ಇದು ಜೀರ್ಣಿಸಿಕೊಳ್ಳಲು ಕಷ್ಟವಾದ ವಿಷಯ. ಆದರೆ ಈ ಸೀಸನ್ ನಮಗೆ ಸಾಕಷ್ಟು ಪಾಠಗಳನ್ನು ಕಲಿಸಿದೆ. ಕ್ರಿಕೆಟ್ ಮೇಲಿನ ಪ್ರೀತಿಗಾಗಿ ನಾವು ಮುಂದಿನ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತೇವೆ ಮತ್ತು ಮುಂದಿನ ವರ್ಷ ಬಲಿಷ್ಠವಾಗಿ ಹಿಂತಿರುಗುತ್ತೇವೆ,” ಎಂದು ಅಭಿಮಾನಿಗಳಿಗೆ ಭರವಸೆ ನೀಡಿದರು.

Source link

ಲೈವ್​​​ನಲ್ಲೇ ಕಣ್ಣೀರು ಹಾಕಿದ ಕಿಯಾರಾ ಅಡ್ವಾಣಿ – Kannada News | Kiara Advani Gets Emotional About Her Post Pregnancy Journey and the Importance of Self Love

ತಾಯಿಯಾದ ನಂತರದ ಜರ್ನಿ ಬಗ್ಗೆ ಕಿಯಾರಾ ರಾಜ್ ಶಮಾನಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. ‘ನಾವು ಜೀವನಪೂರ್ತಿ ಇತರರಿಗಾಗಿ ಬದುಕುತ್ತೇವೆ, ಆದರೆ ನಮ್ಮೊಂದಿಗೆ ನಾವು ಹೊಂದಿರಬೇಕಾದ ಸಂಬಂಧವನ್ನು ಮರೆತುಬಿಡುತ್ತೇವೆ. ಈಗ ನಾನು ಅಂತಿಮವಾಗಿ ನನಗಾಗಿ ಸಮಯ ಮೀಸಲಿಡುವುದನ್ನು ಕಲಿಯುತ್ತಿದ್ದೇನೆ’ ಎಂದು ಕಿಯಾರಾ ಕಣ್ಣೀರು ಹಾಕಿದ್ದಾರೆ.  ಈ ಬದಲಾವಣೆಯು ಅವರ ಜೀವನದ ಅತ್ಯುತ್ತಮ ಅನುಭವಗಳಲ್ಲಿ ಒಂದೆಂದು ಅವರು ಹೇಳಿಕೊಂಡಿದ್ದಾರೆ. 2025ರ ಜುಲೈ 15ರಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದರು. ಸರಾಯ ಎಂದು ಮಗುವಿಗೆ ಹೆಸರು ಇಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಟಾಕ್ಸಿಕ್’ ಶೂಟಿಂಗ್ ವೇಳೆ ವ್ಯಾನ್ ಅಲ್ಲಿ ಕುಳಿತು ಹೊಟ್ಟೆಯಲ್ಲಿರೋ ಮಗು ಜೊತೆ ಮಾತನಾಡುತ್ತಿದ್ದ ಕಿಯಾರಾ – Kannada News | Kiara Advani’s Motherhood Journey: Filming ‘Toxic’ Pregnant, Emotional Battles and Sidharth’s Support

ಬಾಲಿವುಡ್ ಸುಂದರಿ ಕಿಯಾರಾ ಅಡ್ವಾಣಿ ಈಗ ಕೇವಲ ನಟಿಯಲ್ಲ, ಅವರು ತಾಯಿ ಕೂಡ ಹೌದು. ಕಳೆದ ವರ್ಷ ಜುಲೈನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ ಕಿಯಾರಾ ಬಣ್ಣದ ಲೋಕದಿಂದ ತುಸು ದೂರವಿದ್ದರು. ಇದೀಗ ತಾಯ್ತನದ ನಂತರದ ತಮ್ಮ ದೈಹಿಕ ಮತ್ತು ಮಾನಸಿಕ ಬದಲಾವಣೆಗಳ ಬಗ್ಗೆ ಮುಕ್ತವಾಗಿ ಮಾತನಾಡಿರುವ ಅವರು, ಆ ನೋವು ಮತ್ತು ಸವಾಲುಗಳನ್ನು ನೆನೆದು ಸಂದರ್ಶನದ ವೇಳೆ ಕಣ್ಣೀರಿಟ್ಟಿದ್ದಾರೆ.

1. ಟಾಕ್ಸಿಕ್ ಶೂಟಿಂಗ್​​ನಲ್ಲಿ ಭಾಗಿ ಆಗಿದ್ದ ಕಿಯಾರಾ

2. ಪ್ರೆಗ್ನೆಂಟ್ ಆಗಿಯೇ ಶೂಟ್ ಮಾಡಿದ್ದ ಕಿಯಾರಾ

3. ಆ ದಿನಗಳನ್ನು ನೆನೆದ ನಟಿ 

ರಾಜ್ ಶಮಾನಿ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಕಿಯಾರಾ, ‘ತಾಯಿ ಆಗುವ ಮೊದಲು ಮತ್ತು ನಂತರದ ಬದುಕಿನಲ್ಲಿ ನಾನು ಸಂಪೂರ್ಣವಾಗಿ ಬೇರೆಯೇ ವ್ಯಕ್ತಿಯಾಗಿದ್ದೇನೆ. ಇದೊಂದು ದೊಡ್ಡ ಅಸ್ಮಿತತೆಯ ಬದಲಾವಣೆ. ಆರಂಭದಲ್ಲಿ ಈ ಬದಲಾವಣೆಯನ್ನು ಒಪ್ಪಿಕೊಳ್ಳುವುದು ನನಗೆ ಕಷ್ಟವಾಗಿತ್ತು’ ಎಂದು ಭಾವುಕರಾದರು. ಮಗು ಜನಿಸಿದ ನಂತರದ ಆರು ತಿಂಗಳು ತಮಗೆ ತಾವೇ ಸಮಯ ನೀಡಲು ಸಾಧ್ಯವಾಗದೆ ಅನುಭವಿಸಿದ ಮಾನಸಿಕ ತುಮುಲಗಳನ್ನು ಅವರು ಈ ವೇಳೆ ಬಿಚ್ಚಿಟ್ಟರು.

ಕಿಯಾರಾ ಅವರು ಗರ್ಭಿಣಿಯಾಗಿದ್ದ ಸಂದರ್ಭದಲ್ಲೇ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು ಎನ್ನುವುದು ವಿಶೇಷ. ಸುಮಾರು ಏಳು ತಿಂಗಳ ಗರ್ಭಿಣಿಯಾಗಿದ್ದಾಗಲೂ ಅವರು ಕಠಿಣ ಸಾಹಸ ದೃಶ್ಯಗಳಲ್ಲಿ ಭಾಗವಹಿಸಿದ್ದರು. ಈ ವಿಷಯ ಕೇವಲ ನಿರ್ದೇಶಕ ಮತ್ತು ನಿರ್ಮಾಪಕರಿಗೆ ಮಾತ್ರ ತಿಳಿದಿತ್ತು. ‘ಶೂಟಿಂಗ್ ವೇಳೆ ವ್ಯಾನ್ ಒಳಗೆ ಹೋಗಿ ಹೊಟ್ಟೆಯಲ್ಲಿದ್ದ ಮಗುವಿನ ಜೊತೆ ಮಾತನಾಡುತ್ತಿದ್ದೆ. ಅಮ್ಮ ಕೇವಲ ನಟನೆ ಮಾಡುತ್ತಿದ್ದಾಳೆ ಮಗು, ಇದು ನಿಜವಲ್ಲ ಎಂದು ಮಗುವನ್ನು ಸಮಾಧಾನಪಡಿಸುತ್ತಿದ್ದೆ’ ಎಂದು ಆ ದಿನಗಳನ್ನು ನೆನೆದರು.

ಇದನ್ನೂ ಓದಿ: ‘ಟಾಕ್ಸಿಕ್’ ಸಿನಿಮಾದ ಬೋಲ್ಡ್ ದೃಶ್ಯಕ್ಕೆ ಕಿಯಾರಾ ಕಿರಿಕ್ ಇಲ್ಲ: ವದಂತಿಗಳಿಗೆ ತೆರೆ ಎಳೆದ ನಟಿ

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಕಿಯಾರಾ ಅವರು ‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಜೊತೆಗಿನ ಆಪ್ತ ದೃಶ್ಯಗಳನ್ನು ಕತ್ತರಿಸುವಂತೆ ಕೇಳಿಕೊಂಡಿದ್ದಾರೆ ಎಂಬ ವದಂತಿ ಹಬ್ಬಿತ್ತು. ಇದರ ಬಗ್ಗೆ ಮಾತನಾಡಿದ ಅವರು, ‘ಇವೆಲ್ಲವೂ ಕೇವಲ ಅಸಂಬದ್ಧ ಮಾತುಗಳು’ ಎಂದು ಹೇಳುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ತಮ್ಮ ಪತಿ ಸಿದ್ಧಾರ್ಥ್ ಮಲ್ಹೋತ್ರಾ ಅವರ ಬಗ್ಗೆ ಹೆಮ್ಮೆಯಿಂದ ಮಾತನಾಡಿದ ಕಿಯಾರಾ, ‘ಅವರು ಓರ್ವ ಜವಾಬ್ದಾರಿಯುತ ತಂದೆ. ಮಗುವಿನ ವಿಷಯದಲ್ಲಿ ನನಗೆ ಬೆನ್ನೆಲುಬಾಗಿ ನಿಂತಿದ್ದಾರೆ’ ಎಂದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:48 am, Mon, 11 May 26

Source link

Exit mobile version