LSG vs RCB: ಕೃನಾಲ್ ಎಸೆದ ಬೌನ್ಸರ್​ಗೆ ತಾಳ್ಮೆ ಕಳೆದುಕೊಂಡ ಪೂರನ್: ಮೈದಾನದಲ್ಲಿ ನಡೆಯಿತು ಜಟಾಪಟಿ – Kannada News | Nicholas Pooran lost patience with Krunal Pandya’s bouncer in LSG vs RCB IPL 2026 Match

ಬೆಂಗಳೂರು (ಮೇ. 08): 2026 ರ ಐಪಿಎಲ್​ನಲ್ಲಿ ಗುರುವಾರ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ, ಲಕ್ನೋ ಸೂಪರ್ ಜೈಂಟ್ಸ್ ತಂಡವು ಆರ್‌ಸಿಬಿಯನ್ನು (Royal Challengers Bengaluru) ಕೊನೆಯ ಓವರ್​ನಲ್ಲಿ ಸೋಲಿಸಿ ರೋಚಕ ಜಯ ಸಾಧಿಸಿತು. ಲಕ್ನೋ ತಂಡಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿತ್ತು. ಗೆದ್ದರೆ ತನ್ನ ಪ್ಲೇಆಫ್ ಸ್ಥಾನವನ್ನು ಉಳಿಸಿಕೊಳ್ಳುವ ಅವಕಾಶ ಅತ್ತ ಆರ್​​ಸಿಬಿಗೂ ಗೆಲುವು ಅವಶ್ಯಕವಿತ್ತು. ಹೀಗಾಗಿ ಉಭಯ ಆಟಗಾರರು ಮೈದಾನದಲ್ಲಿ ಹೋರಾಡುತ್ತಿದ್ದರು. ಈ ಬಿಸಿ ವಾತಾವರಣದ ಮಧ್ಯೆ ಆರ್‌ಸಿಬಿಯ ಕೃನಾಲ್ ಪಾಂಡ್ಯ ಮತ್ತು ಲಕ್ನೋದ ನಿಕೋಲಸ್ ಪೂರನ್ ನಡುವೆ ಜಗಳ ಕೂಡ ನಡೆಯಿತು.

ಪಾಂಡ್ಯ ಮತ್ತು ಪೂರನ್ ನಡುವಿನ ಸಂಘರ್ಷ

ಈ ಘಟನೆಯು ಕೃನಾಲ್ ಪಾಂಡ್ಯ, ಅರ್ಶಿನ್ ಕುಲಕರ್ಣಿ ಅವರನ್ನು ಔಟ್ ಮಾಡಿದ ಬಳಿಕ ಹಾಗೂ ನಿಕೋಲಸ್ ಪೂರನ್ ಕ್ರೀಸ್​ಗೆ ಬಂದಾಗ ಸಂಭವಿಸಿತು. ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಂದ ನಿಕೋಲಸ್ ಪೂರನ್ ಅವರನ್ನು ಕೃನಾಲ್ ತೀಕ್ಷ್ಣವಾದ ಬೌನ್ಸರ್ ಮೂಲಕ ಸ್ವಾಗತಿಸಿದರು. ಗಂಟೆಗೆ ಸುಮಾರು 119 ಕಿ.ಮೀ ವೇಗದಲ್ಲಿ ಬಂದ ಚೆಂಡು ಪೂರನ್ ಅವರನ್ನು ಭಯ ಹುಟ್ಟಿಸಿತು.

ಮುಂದಿನ ಎಸೆತದಲ್ಲಿಯೇ ಕೃನಾಲ್ ಮತ್ತೊಂದು ಬೌನ್ಸರ್ ಎಸೆದರು, ಇದರಿಂದ ಪೂರನ್ ರನ್ ಗಳಿಸಿದರು. ರನ್ ಪೂರ್ಣಗೊಳಿಸಿದ ನಂತರ, ಪೂರನ್ ಕೃನಾಲ್ ಬಳಿ ಬಂದು ಏನೋ ಹೇಳುತ್ತಿದ್ದಂತೆ ಪರಿಸ್ಥಿತಿ ಉದ್ವಿಗ್ನವಾಯಿತು. ಇಬ್ಬರೂ ಎದುರೆದುರಾಗಿ ಕೆಲ ಸೆಕೆಂಡ್ ನಿಂತರು. ಆದಾಗ್ಯೂ, ಈ ಬಿಸಿಯ ವಾತಾರವಣ ಹೆಚ್ಚು ಕಾಲ ಉಳಿಯಲಿಲ್ಲ, ತಜ್ಷಣವೇ ಇಬ್ಬರೂ ಆಟಗಾರರು ಆಟಕ್ಕೆ ಮರಳಿದರು. ಈ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಪ್ಲೇಆಫ್ ರೇಸ್‌ಗೆ ಇನ್ನೂ ಅವಕಾಶ

ಆರ್​ಸಿಬಿ ವಿರುದ್ಧದ ಈ ಗೆಲುವು ರಿಷಭ್ ಪಂತ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪ್ಲೇಆಫ್ ಭರವಸೆಯನ್ನು ಜೀವಂತವಾಗಿರಿಸಿದೆ. ಆರು ಪಂದ್ಯಗಳ ಸೋಲಿನ ಸರಣಿಯನ್ನು ಮುರಿದು, ಲಕ್ನೋ ತಮ್ಮ ಸತತ ಮೂರನೇ ಗೆಲುವು ದಾಖಲಿಸಿದೆ. ಆದಾಗ್ಯೂ, ಅವರ ಹಾದಿಯು ಅಷ್ಟೊಂದು ಸುಲಭವಾಗಿಲ್ಲ. ಎಲ್​ಎಸ್​ಜಿ ತಂಡವು ತಮ್ಮ ಉಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲುವುದು ಮಾತ್ರವಲ್ಲದೆ, ಇತರ ತಂಡಗಳ ಫಲಿತಾಂಶಗಳನ್ನು ಸಹ ಅವಲಂಬಿಸಬೇಕಾಗುತ್ತದೆ. ಈ ಗೆಲುವು ಖಂಡಿತವಾಗಿಯೂ ತಂಡದ ಮನೋಸ್ಥೈರ್ಯವನ್ನು ಹೆಚ್ಚಿಸಿದೆ. ಪಂತ್ ಪಡೆ ಈಗ ಉಳಿದ ಪಂದ್ಯಗಳನ್ನು ಮಾಡು ಇಲ್ಲವೇ ಮಡಿ ಎಂಬ ಮನೋಭಾವದಿಂದ ಎದುರುಸಬೇಕಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Source link

ಅರ್ಷದೀಪ್ ಸುತ್ತ ಸುತ್ತುವ ಈ ಸುಂದರಿ ಯಾರು? ಈ ನಟಿಗೆ ಇದೆ ಬೇಡಿಕೆ – Kannada News | Arshdeep Singh and Samreen Kaur Dating: IPL Star and Punjabi Actress Spark Romance Rumors

ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ವೇಗಿ ಮತ್ತು ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಪರ ಮಿಂಚುತ್ತಿರುವ ಅರ್ಷದೀಪ್ ಸಿಂಗ್ ಸದ್ಯ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಅವರು ಸುದ್ದಿಯಲ್ಲಿರುವುದು ತಮ್ಮ ಮಾರಕ ಬೌಲಿಂಗ್‌ನಿಂದಲ್ಲ, ಬದಲಾಗಿ ತಮ್ಮ ವೈಯಕ್ತಿಕ ಜೀವನದಿಂದ. ಹೌದು, ಅರ್ಷದೀಪ್ ಸಿಂಗ್ ಅವರು ಖ್ಯಾತ ಪಂಜಾಬಿ ನಟಿ ಸಮ್ರೀನ್ ಕೌರ್ ಅವರೊಂದಿಗೆ ಪ್ರೇಮಪಾಶದಲ್ಲಿ ಸಿಲುಕಿದ್ದಾರೆ ಎಂಬ ಸುದ್ದಿ ಕ್ರಿಕೆಟ್ ವಲಯದಲ್ಲಿ ಸಖತ್ ಸದ್ದು ಮಾಡುತ್ತಿದೆ.

ವಿಮಾನ ನಿಲ್ದಾಣದಲ್ಲಿ ಕೈ ಕೈ ಹಿಡಿದು ಪ್ರತ್ಯಕ್ಷ

ಇತ್ತೀಚೆಗೆ ಅಂದರೆ ಏಪ್ರಿಲ್ 22, 2026 ರಂದು ಪಂಜಾಬ್ ಕಿಂಗ್ಸ್ ತಂಡವು ಪಂದ್ಯಕ್ಕಾಗಿ ದೆಹಲಿಗೆ ಆಗಮಿಸಿದಾಗ, ಎಲ್ಲರ ಕಣ್ಣು ಅರ್ಷದೀಪ್ ಸಿಂಗ್ ಅವರ ಮೇಲಿತ್ತು. ಇದಕ್ಕೆ ಕಾರಣ, ಅವರು ವಿಮಾನ ನಿಲ್ದಾಣದಿಂದ ಹೊರಬರುವಾಗ ಒಬ್ಬ ಸುಂದರ ಯುವತಿಯ ಕೈ ಹಿಡಿದು ತಂಡದ ಬಸ್ಸಿನತ್ತ ಹೆಜ್ಜೆ ಹಾಕುತ್ತಿದ್ದರು. ಆ ಯುವತಿ ಬೇರೆ ಯಾರೂ ಅಲ್ಲ, ಪಂಜಾಬಿ ಚಿತ್ರರಂಗದ ಉದಯೋನ್ಮುಖ ತಾರೆ ಸಮ್ರೀನ್ ಕೌರ್. ಅಂದಿನಿಂದ ಅಭಿಮಾನಿಗಳು ಈ ಜೋಡಿಯ ಬಗ್ಗೆ ಹೆಚ್ಚಿನ ಮಾಹಿತಿ ಹುಡುಕಲಾರಂಭಿಸಿದ್ದಾರೆ.

ಯಾರು ಈ ಸಮ್ರೀನ್ ಕೌರ್?

26 ವರ್ಷದ ಸಮ್ರೀನ್ ಕೌರ್ ಮೂಲತಃ ಜಮ್ಮು ಮತ್ತು ಕಾಶ್ಮೀರದವರು. ಪ್ರಸ್ತುತ ಮುಂಬೈನಲ್ಲಿ ನೆಲೆಸಿರುವ ಇವರು ವೃತ್ತಿಯಿಂದ ನಟಿ ಮತ್ತು ಮಾಡೆಲ್. ಅರ್ಷದೀಪ್‌ಗಿಂತ ಒಂದು ವರ್ಷ ಚಿಕ್ಕವರಾಗಿರುವ ಸಮ್ರೀನ್, ತಮ್ಮ ವೃತ್ತಿಜೀವನವನ್ನು ಸೌಂದರ್ಯ ಸ್ಪರ್ಧೆಗಳ ಮೂಲಕ ಆರಂಭಿಸಿದ್ದರು. 2018ರಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಪ್ರತಿಷ್ಠಿತ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಪ್ರತಿನಿಧಿಸಿದ ಖ್ಯಾತಿ ಇವರದ್ದು.

ಸಿನಿಮಾ ಪ್ರಯಾಣ ಮತ್ತು ಸಾಧನೆ:

ಸಮ್ರೀನ್ ಕೌರ್ ಈಗಾಗಲೇ ಬಾಲಿವುಡ್ ಮತ್ತು ಪಂಜಾಬಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ರಣವೀರ್ ಸಿಂಗ್ ಅಭಿನಯದ ’83’ ಸಿನಿಮಾದಲ್ಲಿ ಅಮ್ಮಿ ವಿರ್ಕ್ ಅವರ ನಿಶ್ಚಿತಾರ್ಥದ ಹುಡುಗಿಯ ಪಾತ್ರದಲ್ಲಿ ಸಮ್ರೀನ್ ಮಿಂಚಿದ್ದರು. ಅಲ್ಲದೆ, ಪಂಜಾಬಿ ಸೂಪರ್ ಸ್ಟಾರ್ ದಿಲ್ಜಿತ್ ದೋಸಾಂಜ್ ಅವರ ‘ಸದಾರ್ ಜಿ 2’ ಚಿತ್ರದಲ್ಲೂ ಇವರು ನಟಿಸಿದ್ದಾರೆ. ಕೇವಲ ಸಿನಿಮಾಗಳಷ್ಟೇ ಅಲ್ಲದೆ, ಬಾದ್‌ಶಾ ಮತ್ತು ಗುರು ರಾಂಧವಾ ಅವರಂತಹ ಖ್ಯಾತ ಗಾಯಕರ ಆಲ್ಬಂ ಹಾಡುಗಳಲ್ಲೂ ಸಮ್ರೀನ್ ಕಾಣಿಸಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಇವರಿಗೆ ಬರೊಬ್ಬರಿ 4.5 ಮಿಲಿಯನ್ ಫಾಲೋವರ್ಸ್ ಇದ್ದಾರೆ.

ಇದನ್ನೂ ಓದಿ: ತಂಡದಿಂದ ದೂರ; ಈ ಐಪಿಎಲ್‌ನಲ್ಲಿ ಧೋನಿ ಆಡುವುದು ಅನುಮಾನ?

ಪ್ರೇಮ ಪಕ್ಷಿಗಳ ಡೇಟಿಂಗ್:

ಅರ್ಷದೀಪ್ ಅವರು ಐಪಿಎಲ್ ಆಡುವ ಹೆಚ್ಚಿನ ನಗರಗಳಿಗೆ ಸಮ್ರೀನ್ ಭೇಟಿ ನೀಡುತ್ತಿರುತ್ತಾರೆ. ಇತ್ತೀಚೆಗೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ವೇಳೆ ಸಮ್ರೀನ್ ಗ್ಯಾಲರಿಯಲ್ಲಿ ಕುಳಿತು ಅರ್ಷದೀಪ್ ಅವರನ್ನು ಹುರಿದುಂಬಿಸುತ್ತಿದ್ದ ಫೋಟೋಗಳು ವೈರಲ್ ಆಗಿವೆ. ಅಷ್ಟೇ ಅಲ್ಲದೆ, ಇವರಿಬ್ಬರೂ ಚಂಡೀಗಢ ವಿಮಾನ ನಿಲ್ದಾಣ ಮತ್ತು ಗುರುದ್ವಾರಕ್ಕೂ ಒಟ್ಟಿಗೆ ಭೇಟಿ ನೀಡಿದ್ದು, ಇವರ ನಡುವಿನ ಸ್ನೇಹ ಪ್ರೀತಿಯಾಗಿ ಬದಲಾಗಿರುವುದು ಬಹುತೇಕ ಖಚಿತವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಕಿ ಬಾಲ್​ಗೆ ಕಂಗಾಲಾದ ವಿರಾಟ್; ಕೊಹ್ಲಿ ಡಕ್​ ಔಟ್ ಮಾಡಲು ಬೇಕಾಯ್ತು 8 ವರ್ಷ – Kannada News | RCB’s 9 Run Defeat to LSG: Virat Kohli’s Historic Duck Shocks Fans in IPL Thriller

ಎಲ್​​ಎಸ್​​ಜಿ ವಿರುದ್ಧದ ಪಂದ್ಯದಲ್ಲಿ ಆರ್​​ಸಿಬಿ ತಂಡ ಸೋತಿದೆ. ರೋಚಕ ಪಂದ್ಯದಲ್ಲಿ ಆರ್​​ಸಿಬಿ 9 ರನ್​​ಗಳ ಸೋಲು ಕಂಡಿತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಡಕ್ ಬಿದ್ದಿದ್ದಾರೆ. ಒಂದೆಡೆ ವಿರಾಟ್ ಕೊಹ್ಲಿ ಅವರ ಅಪರೂಪದ ‘ಡಕ್ ಔಟ್’ ಅಭಿಮಾನಿಗಳಿಗೆ ಆಘಾತ ನೀಡಿದರೆ, ಮತ್ತೊಂದೆಡೆ ರಿಷಬ್ ಪಂತ್ ನೇತೃತ್ವದ ತಂಡ ಸತತ ಆರು ಸೋಲುಗಳ ನಂತರ ಗೆಲುವಿನ ಹಳಿಗೆ ಮರಳಿದೆ.

209 ರನ್​​ಗಳ (19 ಓವರ್) ಬೃಹತ್ತ ಮೊತ್ತ ಬೆನ್ನು ಹತ್ತಿದ ಆರ್​​ಸಿಬಿಗೆ ಆರಂಭದಲ್ಲೇ ಆಘಾತ ಎದುರಾಯಿತು. ಕೊಹ್ಲಿ ಹಾಗೂ ಬೆತೆಲ್ ಔಟ್ ಆದರು. ಪಂದ್ಯದ ಗೆಲುವಿನಲ್ಲಿ 24 ವರ್ಷದ ಯುವ ವೇಗಿ ಯಾದವ್ ಪ್ರಮುಖ ಪಾತ್ರ ವಹಿಸಿದರು. ಕೇವಲ 33 ರನ್ ನೀಡಿ 3 ವಿಕೆಟ್ ಕಬಳಿಸಿದ ಇವರು, ಪಂದ್ಯದ ದಿಕ್ಕನ್ನೇ ಬದಲಿಸಿದರು. ಕೊಹ್ಲಿ ಔಟ್ ಆದ ಬಳಿಕ ದೇವದತ್ ಪಡಿಕ್ಕಲ್ ಮತ್ತು ರಜತ್ ಪಾಟಿದಾರ್ ನಡುವಿನ 95 ರನ್‌ಗಳ ಜೊತೆಯಾಟವನ್ನು ಮುರಿಯುವ ಮೂಲಕ ಪಂತ್ ಪಡೆಗೆ ಗೆಲುವಿನ ಹಾದಿಯನ್ನು ಸುಗಮ ಮಾಡಿದರು. ಅದೇ ಓವರ್‌ನಲ್ಲಿ ಜಿತೇಶ್ ಶರ್ಮಾ ಅವರ ವಿಕೆಟ್ ಕೂಡ ಪಡೆದ ಯಾದವ್, ಅಂತಿಮವಾಗಿ 9 ರನ್‌ಗಳ ರೋಚಕ ಜಯ ತಂದುಕೊಡುವಲ್ಲಿ ಯಶಸ್ವಿಯಾದರು.

ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟ್ ಆಗುವ ಮೂಲಕ ಅಚ್ಚರಿ ಮೂಡಿಸಿದರು. 18 ವರ್ಷಗಳ ಐಪಿಎಲ್ ಇತಿಹಾಸದಲ್ಲಿ, 269 ಇನಿಂಗ್ಸ್‌ಗಳನ್ನು ಆಡಿರುವ ಕೊಹ್ಲಿಕೇವಲ 11ನೇ ಬಾರಿಗೆ ಶೂನ್ಯಕ್ಕೆ ನಿರ್ಗಮಿಸಿದ್ದಾರೆ. ವಿಶೇಷವೆಂದರೆ, ರನ್ ಚೇಸಿಂಗ್ ವೇಳೆ ಅವರು ಔಟಾಗುತ್ತಿರುವುದು ಇದು 6ನೇ ಬಾರಿ.

ಇದನ್ನೂ ಓದಿ:  ಲಕ್ನೋ ವಿರುದ್ಧ ಆರ್​​ಸಿಬಿಗೆ 9 ರನ್ ಸೋಲು​

ವಿರಾಟ್ ಕೊಹ್ಲಿ ರನ್ ಚೇಸಿಂಗ್ ವೇಳೆ ಶೂನ್ಯಕ್ಕೆ ಔಟಾಗಿ ಬರೋಬ್ಬರಿ 3,301 ದಿನಗಳು ಕಳೆದಿವೆ. ಅಂದರೆ ಸುಮಾರು 8 ವರ್ಷಗಳು. ಕೊನೆಯ ಬಾರಿಗೆ 2017ರ ಏಪ್ರಿಲ್ 23ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಅವರು ಮೊದಲ ಎಸೆತದಲ್ಲೇ ಔಟ್ ಆಗಿದ್ದರು. ಅಂದು ಆರ್‌ಸಿಬಿ ತಂಡವು ಐಪಿಎಲ್ ಇತಿಹಾಸದ ಕನಿಷ್ಠ ಮೊತ್ತವಾದ 49 ರನ್‌ಗಳಿಗೆ ಆಲೌಟ್ ಆಗಿತ್ತು. ಆ ಬಳಿಕ ಡಕ್ ಬಿದ್ದಿದ್ದು ಇದೇ ಮೊದಲು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:39 am, Fri, 8 May 26

Source link

LSG vs RCB: ಆರ್​ಸಿಬಿ ಸೋಲಿಗೆ ಕಾರಣವಾಗಿದ್ದು ಕೊನೆಯಲ್ಲಿ ರಿಷಭ್ ಪಂತ್ ತೆಗೆದುಕೊಂಡ ಆ ಒಂದು ನಿರ್ಧಾರ – Kannada News | LSG vs RCB IPL 2026 Rishabh Pant’s one decision at the end led to RCB’s defeat

ಬೆಂಗಳೂರು (ಮೇ. 08): ಐಪಿಎಲ್ 2026 ರಲ್ಲಿ ಗುರುವಾರ ಏಕಾನಾ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡವು ಗೆಲುವು ಸಾಧಿಸಿದೆ. ಈ ಪಂದ್ಯ ಕೊನೆಯ ಓವರ್ ವರೆಗೂ ರೋಚಕತೆಯಿಂದ ಕೂಡಿತ್ತು. 20ನೇ ಓವರ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲ್ಲಲು 20 ರನ್‌ಗಳ ಅಗತ್ಯವಿದ್ದಾಗ, ಮೈದಾನದಲ್ಲಿ ಹೈವೋಲ್ಟೇಜ್ ನಾಟಕ ನಡೆಯಿತು. ಆ ಕ್ಷಣದಲ್ಲಿ, ರಿಷಭ್ ಪಂತ್ (Rishabh Pant) ತೆಗೆದುಕೊಂಡ ಆ ಒಂದು ನಿರ್ಧಾರ ಮತ್ತು ಅವರ ನಾಯಕತ್ವವು ಎಲ್​ಎಸ್​ಜಿ ತಂಡಕ್ಕೆ ಜಯವನ್ನು ಖಚಿತಪಡಿಸಿತು.

ಕೊನೆಯ ಓವರ್‌ನಲ್ಲಿ ರಿಷಭ್ ಪಂತ್ ದಿಟ್ಟ ಹೆಜ್ಜೆ

ಅನುಭವಿ ಶಹಬಾಜ್ ಅಹ್ಮದ್ ಮತ್ತು ಯುವ ದಿಗ್ವಿಜಯ್ ಸಿಂಗ್ ರಥಿ ಇಬ್ಬರೂ ಅಂತಿಮ ಓವರ್ ಎಸೆಯಲು ಸಿದ್ಧರಾಗಿದ್ದರು. ನಾಯಕ ರಿಷಭ್ ಪಂತ್ ಆರಂಭದಲ್ಲಿ ಶಹಬಾಜ್‌ಗೆ ಚೆಂಡನ್ನು ನೀಡಲು ಬಯಸಿದ್ದರು, ಆದರೆ ಮಿಚೆಲ್ ಮಾರ್ಷ್ ಅವರೊಂದಿಗೆ ಸಮಾಲೋಚಿಸಿದ ನಂತರ, ನಿರ್ಧಾರವನ್ನು ಬದಲಾಯಿಸಲಾಯಿತು ಮತ್ತು ಚೆಂಡನ್ನು ರಥಿಗೆ ನೀಡಲಾಯಿತು. ಈ ಸಮಯದಲ್ಲಿ, ಶಹಬಾಜ್ ತುಂಬಾ ಕೋಪಗೊಂಡಂತೆ ಕಂಡುಬಂದರು ಮತ್ತು ಪಂತ್‌ಗೆ ಚೆಂಡನ್ನು ನೀಡುವಂತೆ ಒತ್ತಾಯಿಸಿದರು. ಪರಿಸ್ಥಿತಿ ಎಷ್ಟು ಉದ್ವಿಗ್ನವಾಯಿತು ಎಂದರೆ ನಾಯಕ ಪಂತ್ ಮೈದಾನದಲ್ಲಿ ಶಹಬಾಜ್‌ ಮೇಲೆ ಕೋಪಗೊಂಡರು. ಕೊನೆಯಲ್ಲಿ, ಪಂತ್ ತಮ್ಮ ನಿರ್ಧಾರದಲ್ಲಿ ದೃಢವಾಗಿ ಉಳಿದು ಚೆಂಡನ್ನು ರಥಿಗೆ ನೀಡಿದರು.

ದಿಗ್ವಿಜಯ್ ರಥಿ ಅವರ ಕೊನೆಯ ಮ್ಯಾಜಿಕ್ ಓವರ್

ಪಂತ್ ಅವರ ಈ ದೊಡ್ಡ ನಿರ್ಧಾರ ಫಲ ನೀಡಿತು, ಮತ್ತು ರಥಿ ತನ್ನ ಸ್ಪಿನ್‌ನಲ್ಲಿ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳನ್ನು ಸಿಲುಕಿಸಿ, ಅವರು ಗೆರೆ ದಾಟದಂತೆ ತಡೆದರು. ರೊಮಾರಿಯೊ ಶೆಫರ್ಡ್ ಮತ್ತು ಕೃನಾಲ್ ಪಾಂಡ್ಯ ಅವರಂತಹ ಆಟಗಾರರು ಓವರ್‌ನಲ್ಲಿ ಒಂದೇ ಒಂದು ಸಿಕ್ಸರ್ ಹೊಡೆಯದಂತೆ ದಿಗ್ವೇಶ್ ತಡೆದರು. ದಿಗ್ವೇಶ್ ಕೇವಲ 10 ರನ್‌ಗಳನ್ನು ಬಿಟ್ಟುಕೊಟ್ಟರು, ಅಂತಿಮವಾಗಿ ಆರ್‌ಸಿಬಿ 9 ರನ್‌ಗಳಿಂದ ಪಂದ್ಯವನ್ನು ಸೋತಿತು.

ಬೆಂಕಿ ಬಾಲ್​ಗೆ ಕಂಗಾಲಾದ ವಿರಾಟ್; ಕೊಹ್ಲಿ ಡಕ್​ ಔಟ್ ಮಾಡಲು ಬೇಕಾಯ್ತು 8 ವರ್ಷ

ಪಂತ್ ಮಾಸ್ಟರ್ ಸ್ಟ್ರೋಕ್ ಗೆಲುವಿಗೆ ಕಾರಣ

ಲಕ್ನೋ ತಂಡವು ಪಂದ್ಯವನ್ನು 9 ರನ್‌ಗಳಿಂದ ಗೆದ್ದಿತು. ಪಂತ್ ಶಹಬಾಜ್ ಅವರ ಒತ್ತಾಯಕ್ಕೆ ಮಣಿದಿದ್ದರೆ, ಫಲಿತಾಂಶ ವಿಭಿನ್ನವಾಗಿರುತ್ತಿತ್ತು, ಆದರೆ ಯುವ ದಿಗ್ವಿಜಯ್ ರಥಿಯನ್ನು ನಂಬಿದ್ದು ಪಂದ್ಯ ಗತಿಯನ್ನೇ ಬದಲಾಯಿಸಿತು. ರಥಿ ಒತ್ತಡವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದು ಮಾತ್ರವಲ್ಲದೆ ರೊಮಾರಿಯೊ ಶೆಫರ್ಡ್‌ನಂತಹ ಅಪಾಯಕಾರಿ ಹಿಟ್ಟರ್​ ಅನ್ನು ತಮ್ಮ ನಿಖರವಾದ ಗೂಗ್ಲಿಗಳೊಂದಿಗೆ ದೂರವಿಟ್ಟರು. ಈ ಗೆಲುವಿನೊಂದಿಗೆ, ಲಕ್ನೋ ತನ್ನ ಪ್ಲೇಆಫ್ ಭರವಸೆಯನ್ನು ಇನ್ನೂ ಉಳಿಸಿಕೊಂಡಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸರ್ಕಾರ ರಚನೆಗೆ ವಿಜಯ್​ ಕಸರತ್ತು: ತಮಿಳುನಾಡಿನಲ್ಲಿ ಏನೇನಾಗ್ತಿದೆ ನೋಡಿ! – Kannada News | Tamil Nadu Govt Formation: Vijay’s TVK Eyes Magic Number as AIADMK Faces Split and Resort Politics Begins

ಚೆನ್ನೈ, ಮೇ 7: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷವು 107 ಸ್ಥಾನಗಳನ್ನು ಗೆದ್ದಿದ್ದು, ಸರ್ಕಾರ ರಚನೆಯ ಮ್ಯಾಜಿಕ್ ನಂಬರ್ ತಲುಪಲು ತೀವ್ರ ಪ್ರಯತ್ನ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ತಮಿಳುನಾಡಿನಲ್ಲಿ ಸರ್ಕಾರ ರಚಿಸಲು 118 ಶಾಸಕರ ಬೆಂಬಲ ಬೇಕು. 118 ಶಾಸಕರ ಪಟ್ಟಿ ನೀಡುವಂತೆ ವಿಜಯ್​​ ರಾಜ್ಯಪಾಲರು ಸೂಚಿಸಿದ್ದಾರೆ. ಟಿವಿಕೆ ಬಳಿ ಪ್ರಸ್ತುತ 112 ಶಾಸಕರ ಬೆಂಬಲವಿದೆ (ಟಿವಿಕೆಯ 107 + ಕಾಂಗ್ರೆಸ್‌ನ 5 ಶಾಸಕರು). ಇನ್ನು ಕೇವಲ 6 ಶಾಸಕರ ಬೆಂಬಲ ಸಿಕ್ಕರೆ ವಿಜಯ್ ಮುಖ್ಯಮಂತ್ರಿಯಾಗುವುದು ಖಚಿತ.

ಏತನ್ಮಧ್ಯೆ ಎಐಎಡಿಎಂಕೆಯ (AIADMK) ಸಿ.ವಿ. ಷಣ್ಮುಗಂ ಬಣದ ಶಾಸಕರು ಟಿವಿಕೆಗೆ ಬೆಂಬಲ ನೀಡುವಂತೆ ಪಳನಿಸ್ವಾಮಿಗೆ ಒತ್ತಡ ಹೇರುತ್ತಿದ್ದಾರೆ. ಒಂದು ವೇಳೆ ಬೆಂಬಲ ನೀಡದಿದ್ದರೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದಾರೆ. ಈಗಾಗಲೇ ಪುದುಚೇರಿಯ ರೆಸಾರ್ಟ್‌ಗೆ ಎಐಎಡಿಎಂಕೆಯ 28 ಶಾಸಕರನ್ನು ಶಿಫ್ಟ್ ಮಾಡಲಾಗಿದ್ದು, ಅಲ್ಲಿ ಪಳನಿಸ್ವಾಮಿ ಅವರು ಶಾಸಕರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಅತ್ತ ಡಿಎಂಕೆ ಶಾಸಕರು ಮೇ 10ರವರೆಗೆ ಚೆನ್ನೈ ಬಿಟ್ಟು ಹೋಗದಂತೆ ನಿರ್ಗಮಿತ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ವಿಜಯ್ ಸರ್ಕಾರ ರಚನೆ ಮಾಡಲಿ, ನಾವು ಆರು ತಿಂಗಳವರೆಗೆ ಯಾವುದೇ ತೊಂದರೆ ಕೊಡುವುದಿಲ್ಲ ಎಂದು ಸ್ಟಾಲಿನ್ ಗುರುವಾರ ಅಚ್ಚರಿಯ ಹೇಳಿಕೆ ನೀಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Bengaluru Air Quality: ಅಂತೂ ಸುಧಾರಿಸಿತು ಬೆಂಗಳೂರಿನ ವಾಯು ಗುಣಮಟ್ಟ! – Kannada News | Bengaluru Air Quality gets better, Mangalore AQI is also Good

ಅಂತೂ ಸುಧಾರಿಸಿತು ಬೆಂಗಳೂರಿನ ವಾಯು ಗುಣಮಟ್ಟ!

ಬೆಂಗಳೂರು, ಮೇ 08: ರಾಜ್ಯದಲ್ಲಿ ಬೆಂಗಳೂರು, ಮಂಗಳೂರು ಏರ್ ಕ್ವಾಲಿಟಿ  (Bengaluru Air Quality) ಭಾರಿ ಸುಧಾರಣೆ ಕಂಡಿದೆ. ಆದರೂ ಬೆಂಗಳೂರಿನ ವಾಯು ಗುಣಮಟ್ಟ ಅಪಾಯಕಾರಿ ಮಟ್ಟದಲ್ಲಿಯೇ ಇದೆ ಎಂದು ತಜ್ಞರು ಹೇಳುತ್ತಾರೆ. ಮಂಗಳೂರು ವಾಯು ಗುಣಮಟ್ಟ ಇಂದು ಭಾರೀ ಸುಧಾರಣೆ ಕಂಡಿದ್ದು, ಉಳಿದೆಡೆಗಿಂತ ಎಷ್ಟೋ ಉತ್ತಮವಾಗಿದೆ ಎನ್ನಲಾಗಿದೆ. ಬೆಂಗಳೂರಿನ AQI ಸಧ್ಯಕ್ಕೆ ಒಳ್ಳೆಯ ಮಟ್ಟದಲ್ಲಿದ್ದು, ಆದರೂ ಬೆಂಗಳೂರಿನ ವಾಯು ಗುಣಮಟ್ಟ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಬೆಂಗಳೂರಿನ ಏರ್ ಕ್ವಾಲಿಟಿ ಇಂದು ಕೇವಲ 66ರಷ್ಟಿದ್ದು, ಅತ್ಯಂತ ಒಳ್ಳೆಯ ಗುಣಮಟ್ಟದಲ್ಲಿದೆ. ಮಂಗಳೂರಿನಲ್ಲಿ ಕೆಲ ತಿಂಗಳ ಹಿಂದೆ ವಾಯು ಗುಣಮಟ್ಟ ಅಪಾಯಕಾರಿ ಮಟ್ಟಕ್ಕೆ ಇಳಿದಿತ್ತು. ಹಲವು ಬಾರಿ 200ರ ಗಡಿ ತಲುಪಿತ್ತು. ಆದರೆ ಇತ್ತೀಚೆಗೆ AQI ಸುಧಾರಣೆ ಕಂಡುಬಂದಿತ್ತು. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಏರ್ ಕ್ವಾಲಿಟಿ ಇಂದು 86ಕ್ಕೆ ತಲುಪಿದೆ. ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು – 66
  • ಮಂಗಳೂರು-86
  • ಮೈಸೂರು – 74
  • ಬೆಳಗಾವಿ – 68
  • ಕಲಬುರ್ಗಿ-64
  • ಶಿವಮೊಗ್ಗ –66
  • ಬಳ್ಳಾರಿ – 86
  • ಹುಬ್ಬಳ್ಳಿ- 87
  • ಉಡುಪಿ –64
  • ವಿಜಯಪುರ – 67

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಹವಾಮಾನ ಮುನ್ಸೂಚನೆ: ಮುಂದಿನ 3 ದಿನ ರಾಜ್ಯದ ಹಲವೆಡೆ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ – Kannada News | Karnataka Weather Forecast: IMD Predicts Thunderstorms and Heavy Rain Across State for Next 3 Days

ಬೆಂಗಳೂರು, ಮೇ 8: ರಾಜ್ಯದ ಜನತೆಗೆ ಬಿಸಿಲಿನ ಬೇಗೆಯಿಂದ ಕೊಂಚ ಉಪಶಮನ ಸಿಗುವ ಲಕ್ಷಣಗಳು ಕಾಣಿಸುತ್ತಿವೆ. ಭಾರತೀಯ ಹವಾಮಾನ ಇಲಾಖೆ (IMD Bengaluru) ನೀಡಿರುವ ಮುನ್ಸೂಚನೆಯಂತೆ (Weather Forecast), ಮುಂದಿನ ಮೂರು ದಿನಗಳ ಕಾಲ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ. ವಿಶೇಷವಾಗಿ ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಹೆಚ್ಚಿರಲಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ.

ಮುಖ್ಯಾಂಶಗಳು

  • ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯ ಎಚ್ಚರಿಕೆ.
  • ಗಂಟೆಗೆ 30 ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ.
  • ಬೆಂಗಳೂರಿನಲ್ಲಿ ಸಂಜೆ ಅಥವಾ ರಾತ್ರಿ ವೇಳೆಗೆ ಸಾಧಾರಣ ಮಳೆಯ ಮುನ್ಸೂಚನೆ.

ಎಲ್ಲೆಲ್ಲಿ ಮಳೆಯಾಗಲಿದೆ?

ಹವಾಮಾನ ಇಲಾಖೆಯ ವರದಿಯ ಪ್ರಕಾರ, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಧಾರ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಮೇ 8 ಮತ್ತು 9 ರಂದು ಗುಡುಗು ಸಹಿತ ಮಳೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಉತ್ತರ ಒಳನಾಡಿನ ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಮೇ 8 ರಂದು ಭಾರಿ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ.

ಮುಂದುವರಿಯಲಿದೆ ಗರಿಷ್ಠ ತಾಪಮಾನ

ಮಳೆಯ ಮುನ್ಸೂಚನೆಯಿದ್ದರೂ ರಾಜ್ಯದ ಗರಿಷ್ಠ ತಾಪಮಾನದಲ್ಲಿ ಹೆಚ್ಚಿನ ಬದಲಾವಣೆಯಾಗುವ ಸಾಧ್ಯತೆಯಿಲ್ಲ. ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನವು 38 ರಿಂದ 40 ಡಿಗ್ರಿ ಸೆಲ್ಸಿಯಸ್ ವರೆಗೆ ಮುಂದುವರಿಯಲಿದೆ. ಮಳೆಯ ಸಮಯದಲ್ಲಿ ಕೆಲವು ಜಿಲ್ಲೆಗಳಲ್ಲಿ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ತಿಳಿಸಿದೆ.

ಬೆಂಗಳೂರು ಹವಾಮಾನ ಮುನ್ಸೂಚನೆ

ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಮುಂದಿನ 24 ರಿಂದ 48 ಗಂಟೆಗಳಲ್ಲಿ ಸಂಜೆ ಅಥವಾ ರಾತ್ರಿ ವೇಳೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ನಗರದ ಗರಿಷ್ಠ ತಾಪಮಾನ 33 ಡಿಗ್ರಿ ಮತ್ತು ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರಲಿದೆ ಎಂದು ಐಎಂಡಿಯ ಬೆಂಗಳೂರು ಕೇಂದ್ರದ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Horoscope Today: ಇಂದು ಈ ರಾಶಿಯವರು ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಾಗಿ ಭಾಗಿಯಾಗಬೇಕು

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮೇ 8, ಶುಕ್ರವಾರದ ದ್ವಾದಶ ರಾಶಿಗಳ ಫಲಾಫಲವನ್ನು ನೀಡಿದ್ದಾರೆ. ಪರಾಭವನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಕೃಷ್ಣ ಪಕ್ಷದ ಸಪ್ತಮಿ ತಿಥಿಯ ಈ ದಿನದ ಮಹತ್ವವನ್ನು ವಿವರಿಸಿದ್ದಾರೆ. ಇಂದು ಚಂದ್ರನು ಮಕರ ರಾಶಿಯಲ್ಲಿ ಮತ್ತು ಉತ್ತರಾಷಾಢ ನಕ್ಷತ್ರದಲ್ಲಿ ಸಂಚರಿಸುತ್ತಿದ್ದು, ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ವಿಶೇಷವಾಗಿ ಮೇಷ ಮತ್ತು ಸಿಂಹ ರಾಶಿಯವರಿಗೆ ಆರ್ಥಿಕ ಲಾಭ ಹಾಗೂ ಉದ್ಯೋಗದಲ್ಲಿ ಪ್ರಗತಿಯುಂಟಾಗಲಿದೆ ಎಂದು ಗುರೂಜಿ ತಿಳಿಸಿದ್ದಾರೆ.

 

 

 

Source link

ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಪಶ್ಚಿಮ ಬಂಗಾಳದಲ್ಲಿ ರಿಲೀಸ್ ಆಗ್ತಿದೆ ‘ದಿ ಬೆಂಗಾಲ್ ಫೈಲ್ಸ್’ – Kannada News | The Bengal Files Releasing in West Bengal: BJP Victory Paves Way for Vivek Agnihotri’s Film

ವಿವೇಕ್ ಅಗ್ನಿಹೋತ್ರಿ () ನಿರ್ದೇಶನದ’ದಿ ಬೆಂಗಾಲ್ ಫೈಲ್ಸ್’ ಸಿನಿಮಾ (The Bengal Files) 2025ರಲ್ಲಿ ಭಾರತದಲ್ಲಿ ರಿಲೀಸ್ ಆಯಿತು. ಆದರೆ, ಮಮತಾ ಬ್ಯಾನರ್ಜಿ ಆಡಳಿತದಲ್ಲಿ ಈ ಚಿತ್ರವನ್ನು ಪಶ್ಚಿಮ ಬಂಗಾಳದಲ್ಲಿ ತೆರೆಗೆ ತರಲು ಸಾಧ್ಯ ಆಗಿರಲಿಲ್ಲ. ಕೊನೆಗೂ ಪಶ್ಚಿಮ ಬಂಗಾಳದ ಚಿತ್ರಮಂದಿರಗಳಲ್ಲಿ ಮೇ 15ರಂದು ತೆರೆಕಾಣಲಿದೆ. ಈ ಬಗ್ಗೆ ವಿವೇಕ್ ಅಗ್ನಿಹೋತ್ರಿ ಅಧಿಕೃತವಾಗಿ ಘೋಷಿಸಿದ್ದಾರೆ. ರಾಜ್ಯದಲ್ಲಿ ನಡೆದ 2026ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಜಯ ಗಳಿಸಿದ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ.

‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶನ ಮಾಡಿದ್ದ ವಿವೇಕ್ ಅಗ್ನಿಹೋತ್ರಿ ‘ದಿ ಬೆಂಗಾಲ್​ ಫೈಲ್ಸ್’ ನಿರ್ದೇಶನ ಮಾಡಿದ್ದರು. ಈ ಚಿತ್ರ 2025ರಲ್ಲೇ ದೇಶಾದ್ಯಂತ ಬಿಡುಗಡೆಯಾಗಿತ್ತು. ಆದರೆ, ಪಶ್ಚಿಮ ಬಂಗಾಳದಲ್ಲಿ ಮಾತ್ರ ಪ್ರದರ್ಶನಕ್ಕೆ ತೀವ್ರ ಅಡೆತಡೆಗಳು ಎದುರಾಗಿದ್ದವು.

ಮಮತಾ ಬ್ಯಾನರ್ಜಿ ನೇತೃತ್ವದ ಅಂದಿನ ತೃಣಮೂಲ ಕಾಂಗ್ರೆಸ್ ಸರ್ಕಾರ ಚಿತ್ರದ ಪ್ರದರ್ಶನಕ್ಕೆ ಪರೋಕ್ಷವಾಗಿ ತಡೆ ಒಡ್ಡಿತ್ತು. ಈ ಬಗ್ಗೆ ವಿವೇಕ್ ಅಗ್ನಿಹೋತ್ರಿ ಧ್ವನಿ ಎತ್ತಿದ್ದರು. ಚಿತ್ರಮಂದಿರಗಳ ಮಾಲೀಕರಿಗೆ ಬೆದರಿಕೆ ಹಾಕಲಾಗುತ್ತಿದೆ ಮತ್ತು ಚಿತ್ರದ ವಿರುದ್ಧ ಉದ್ದೇಶಪೂರ್ವಕವಾಗಿ ಎಫ್‌ಐಆರ್‌ಗಳನ್ನು ದಾಖಲಿಸಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು.

‘ದಿ ಬೆಂಗಾಲ್ ಫೈಲ್ಸ್’ ಚಿತ್ರವು ಬಂಗಾಳದ ಇತಿಹಾಸದ ಕರಾಳ ಘಟನೆಗಳಾದ ‘ಡೈರೆಕ್ಟ್ ಆಕ್ಷನ್ ಡೇ’ (ನೇರ ಕ್ರಮ ದಿನ) ಮತ್ತು ನೋಖಾಲಿ ದಂಗೆಗಳ ಸುತ್ತ ಹೆಣೆಯಲಾದ ಕಥೆಯನ್ನು ಹೊಂದಿದೆ. ಈ ಚಿತ್ರವು ಪ್ರಚೋದನಾತ್ಮಕವಾಗಿದೆ ಎಂಬ ಟೀಕೆಗಳು ಒಂದು ಕಡೆಯಾದರೆ, ಇದು ಮರೆತುಹೋದ ಇತಿಹಾಸವನ್ನು ಜನರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಎಂದು ಮತ್ತೊಂದು ವರ್ಗ ಪ್ರತಿಪಾದಿಸುತ್ತಿದೆ.

ಪಶ್ಚಿಮ ಬಂಗಾಳದಲ್ಲಿ ಆಡಳಿತ ವಿರೋಧಿ ಅಲೆ ಮತ್ತು ಪ್ರಧಾನಿ ಮೋದಿಯವರ ತೀವ್ರ ಪ್ರಚಾರದ ಫಲವಾಗಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಈ ರಾಜಕೀಯ ಬದಲಾವಣೆಯು ಚಿತ್ರದ ಬಿಡುಗಡೆಗೆ ಹಾದಿ ಸುಗಮಗೊಳಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅಗ್ನಿಹೋತ್ರಿ, ‘ಸತ್ಯವನ್ನು ಹೆಚ್ಚು ಕಾಲ ಮುಚ್ಚಿಡಲು ಸಾಧ್ಯವಿಲ್ಲ. ಬೆಂಗಾಲಿಗಳ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾ ಬಿಡುಗಡೆ: ಸಿನಿಮಾದ ಕತೆ ಏನು?

ಈಗಾಗಲೇ ಈ ಚಿತ್ರವು ರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿದ್ದು, ಇದೀಗ ಬಂಗಾಳದ ನೆಲದಲ್ಲೇ ಬಿಡುಗಡೆಯಾಗುತ್ತಿರುವುದು ಸಿನಿಮಾ ಪ್ರೇಮಿಗಳಲ್ಲಿ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪೀಣ್ಯ ಕೈಗಾರಿಕೆಗಳಿಗೆ ಯುದ್ಧದ ಬಿಸಿ: ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ, ಸಾವಿರಾರು ಕಾರ್ಮಿಕರಿಗೆ ಕೆಲಸ ಕಳೆದುಕೊಳ್ಳುವ ಭೀತಿ – Kannada News | Peenya Industries in Trouble: Commercial LPG Supply Disruption and Price Hike Threaten Thousands of Jobs in Bengaluru

ಪೀಣ್ಯ ಕೈಗಾರಿಕೆಗಳಿಗೆ ಯುದ್ಧದ ಬಿಸಿImage Credit source: tv9

ಬೆಂಗಳೂರು, ಮೇ 8: ಜಾಗತಿಕ ಮಟ್ಟದ ಯುದ್ಧದ ಬಿಕ್ಕಟ್ಟು ಕೇವಲ ಕಚ್ಚಾ ತೈಲ ಬೆಲೆಯ ಮೇಲೆ ಮಾತ್ರವಲ್ಲದೆ, ರಾಜಧಾನಿ ಬೆಂಗಳೂರಿನ (Bengaluru) ಕೈಗಾರಿಕೆಗಳ ಮೇಲೂ ಭೀಕರ ಪರಿಣಾಮ ಬೀರಿದೆ. ದಕ್ಷಿಣ ಏಷ್ಯಾದಲ್ಲೇ ಅತಿ ದೊಡ್ಡ ಕೈಗಾರಿಕಾ ವಲಯವೆಂದು ಗುರುತಿಸಲ್ಪಟ್ಟಿರುವ ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ (Peenya Industries) ಈಗ ವಾಣಿಜ್ಯ ಇಂಧನ ಪೂರೈಕೆಯ ವ್ಯತ್ಯಯ ಹಾಗೂ ಬೆಲೆ ಏರಿಕೆಯ ‘ಟ್ರಬಲ್’ ಶುರುವಾಗಿದೆ. ಇದರಿಂದಾಗಿ ನೂರಾರು ಕೈಗಾರಿಕೆಗಳು ಮುಚ್ಚುವ ಸ್ಥಿತಿಗೆ ತಲುಪಿವೆ.

ಮುಖ್ಯಾಂಶಗಳು

  • ಸರ್ಕಾರದಿಂದ ಪೂರೈಕೆಯಾಗುತ್ತಿದ್ದ ವಾಣಿಜ್ಯ ಗ್ಯಾಸ್ ಸಪ್ಲೈ ಸಂಪೂರ್ಣ ಸ್ಥಗಿತ.
  • ಖಾಸಗಿಯವರಿಂದ ದುಪ್ಪಟ್ಟು ಹಣ ನೀಡಿ ಗ್ಯಾಸ್ ಖರೀದಿಸಬೇಕಾದ ಅನಿವಾರ್ಯತೆ.
  • ಸುಮಾರು 400ಕ್ಕೂ ಹೆಚ್ಚು ಸಣ್ಣ ಕೈಗಾರಿಕೆಗಳು ಬಾಗಿಲು ಮುಚ್ಚುವ ಭೀತಿಯಲ್ಲಿವೆ.

ಕೈಗಾರಿಕೆಗಳಿಗೆ ತಪ್ಪದ ಪರದಾಟ

ಸರ್ಕಾರದಿಂದ ಪೂರೈಕೆಯಾಗುತ್ತಿದ್ದ ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆ ಸ್ಥಗಿತಗೊಂಡಿರುವುದು ಪೀಣ್ಯದ ಕೈಗಾರಿಕಾ ಕಂಪನಿಗಳ ಮಾಲೀಕರನ್ನು ಸಂಕಷ್ಟಕ್ಕೆ ದೂಡಿದೆ. ಪ್ರಸ್ತುತ ಕೈಗಾರಿಕೆಗಳು ಕೇವಲ ಖಾಸಗಿ ಏಜೆನ್ಸಿಗಳ ಮೇಲೆ ಅವಲಂಬಿತವಾಗಿವೆ. ಆದರೆ ಖಾಸಗಿಯಲ್ಲಿ ಸಿಲಿಂಡರ್ ಬೆಲೆ ಎರಡು ಪಟ್ಟು ಹೆಚ್ಚಾಗಿರುವುದರಿಂದ ಉತ್ಪಾದನಾ ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ. ಸಣ್ಣಪುಟ್ಟ ಕಟ್ಟಿಂಗ್ ಯೂನಿಟ್ ಸೇರಿದಂತೆ ಸಾವಿರಕ್ಕೂ ಅಧಿಕ ಕೈಗಾರಿಕೆಗಳು ಈ ಗ್ಯಾಸ್ ಮೇಲೆ ಅವಲಂಬಿತವಾಗಿವೆ. ಬೆಲೆ ಏರಿಕೆಯಿಂದಾಗಿ ಉದ್ಯಮ ನಡೆಸಲು ಸಾಧ್ಯವಾಗದೆ ಮಾಲೀಕರು ಕಂಗಾಲಾಗಿದ್ದಾರೆ.

ಸರ್ಕಾರಕ್ಕೆ ಪತ್ರ ಬರೆದ ಅಸೋಸಿಯೇಷನ್

ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 12 ಸಾವಿರಕ್ಕೂ ಹೆಚ್ಚು ಕೈಗಾರಿಕೆಗಳಿದ್ದು, ಸಾವಿರಾರು ಕಂಪನಿಗಳಿಗೆ ಎಲ್‌ಪಿಜಿ (LPG) ಅತ್ಯಗತ್ಯವಾಗಿದೆ. ಈ ಗ್ಯಾಸ್ ಬಿಕ್ಕಟ್ಟಿನ ಬಗ್ಗೆ ಪೀಣ್ಯ ಇಂಡಸ್ಟ್ರಿಯಲ್ ಅಸೋಸಿಯೇಷನ್ ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ‘ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯನ್ನು ಪುನರಾರಂಭಿಸಿ ಮತ್ತು ಕೈಗಾರಿಕೆಗಳಿಗೆ ಪ್ರತ್ಯೇಕ ಹಾಗೂ ಕಡಿಮೆ ದರ ನಿಗದಿಪಡಿಸಿ’ ಎಂದು ಅಸೋಸಿಯೇಷನ್ ಅಧ್ಯಕ್ಷರಾದ ದಾನಪ್ಪ ಮನವಿ ಮಾಡಿದ್ದಾರೆ.

ಸಾವಿರಾರು ಸಿಬ್ಬಂದಿಗೆ ಆತಂಕ

ಪೀಣ್ಯದ ವಿವಿಧ ಬಿಡಿಭಾಗ ತಯಾರಿಕಾ ಘಟಕಗಳು ಈ ಬೆಲೆ ಏರಿಕೆಯ ಬಿಸಿಯನ್ನು ಅನುಭವಿಸುತ್ತಿವೆ. ಕಳೆದ ಕೆಲವು ದಿನಗಳಿಂದ ಗ್ಯಾಸ್ ಸಪ್ಲೈ ಇಲ್ಲದೆ ಉತ್ಪಾದನೆ ಕುಂಠಿತಗೊಂಡಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಸಾವಿರಾರು ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಆತಂಕ ಎದುರಾಗಿದೆ.

ಇದನ್ನೂ ಓದಿ: ಆಟೋ ಪ್ರಯಾಣಿಕರಿಗೆ ಬ್ಯಾಡ್​​ ನ್ಯೂಸ್​​: ಮೀಟರ್​ ದರ ಹೆಚ್ಚಳಕ್ಕೆ ಚಾಲಕ ಸಂಘಟನೆಗಳ ಮನವಿ

ವಾಣಿಜ್ಯ ಇಂಧನದ ಈ ವ್ಯತ್ಯಯ ಕೇವಲ ಹೋಟೆಲ್ ಉದ್ಯಮಕ್ಕೆ ಮಾತ್ರವಲ್ಲದೆ, ದೇಶದ ಆರ್ಥಿಕತೆಯ ಬೆನ್ನೆಲುಬಾಗಿರುವ ಕೈಗಾರಿಕಾ ಕ್ಷೇತ್ರಕ್ಕೂ ದೊಡ್ಡ ಹೊಡೆತ ನೀಡುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version