Headlines

ಉತ್ತರ ಸುಡಾನ್‌ನ ನೈಲ್ ನದಿಯಲ್ಲಿ ಹಡಗು ಮುಳುಗಿ 21 ಜನ ಸಾವು – Kannada News | Nile River boat capsize claims at least 21 lives in northern Sudan

ನವದೆಹಲಿ, ಫೆಬ್ರವರಿ 12: ಉತ್ತರ ಸುಡಾನ್‌ನ ನೈಲ್ ನದಿಯಲ್ಲಿ ಪ್ರಯಾಣಿಕರ ಹಡಗು ಮುಳುಗಿದ ನಂತರ 21 ಜನರು ಸಾವನ್ನಪ್ಪಿದ್ದಾರೆ. ಈ ಹಡಗು ತೈಬಾ ಅಲ್-ಖವಾದ್ ಮತ್ತು ಡೀಮ್ ಅಲ್-ಖರೈ ಗ್ರಾಮಗಳ ನಡುವೆ ಪ್ರಯಾಣಿಸುತ್ತಿತ್ತು. ಈ ಹಡಗು (Boat) ಮಹಿಳೆಯರು, ವೃದ್ಧರು ಮತ್ತು ಮಕ್ಕಳು ಸೇರಿದಂತೆ ಸುಮಾರು 30 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. “ಇನ್ನೂ ಹೆಚ್ಚಿನ ಶವಗಳು ಇರಬಹುದು ಎಂಬ ಕಾರಣದಿಂದ ರಕ್ಷಣಾ ತಂಡಗಳು ತಮ್ಮ ಕೆಲಸವನ್ನು ಮುಂದುವರಿಸುತ್ತಿವೆ. ನೈಲ್ ನದಿಯ ರಾಜ್ಯದ ಅಧಿಕಾರಿಗಳು ಇಂದು 21 ಶವಗಳನ್ನು ವಶಪಡಿಸಿಕೊಳ್ಳಲಾಗಿದೆ…

Read More

ಹೈಬಿಪಿ ಇರುವವರಿಗೆ ತಲೆಯ ಹಿಂಭಾಗದಲ್ಲಿ ನೋವು ಕಂಡುಬರುತ್ತದೆಯೇ? – Kannada News | High Blood Pressure and Headache: Link and Symptoms

ತಲೆನೋವು (Headache) ಕಂಡುಬರುವುದು ಸಾಮಾನ್ಯ. ಕೆಲವೊಮ್ಮೆ ಈ ನೋವು ತಲೆಯ ಮುಂಭಾಗದಲ್ಲಿ, ಮಧ್ಯದಲ್ಲಿ, ಕೆಲವೊಮ್ಮೆ ಇಡೀ ತಲೆ, ಮತ್ತೆ ಕೆಲವು ಸಂದರ್ಭಗಳಲ್ಲಿ ಹಿಂಭಾಗದಲ್ಲಿ ನೋವು ಕಂಡುಬರುತ್ತದೆ. ಈ ತಲೆನೋವು ಸಾಮಾನ್ಯವಾಗಿ ಮೈಗ್ರೇನ್, ನಿದ್ರೆಯ ಕೊರತೆ, ಹಳೆಯ ಗಾಯ ಅಥವಾ ಮಾನಸಿಕ ಒತ್ತಡದಂತಹ ಹಲವು ಕಾರಣಗಳಿಂದ ಕಂಡುಬರಬಹುದು. ಆದರೆ ಅಂತಹ ಯಾವುದೇ ಸಮಸ್ಯೆ ಇಲ್ಲದಿದ್ದರೂ ಕೂಡ ತಲೆಯ ಹಿಂಭಾಗದಲ್ಲಿ ಇನ್ನೂ ಕಂಡುಬರುತ್ತಿದ್ದರೆ ಅದಕ್ಕೆ ಅಧಿಕ ರಕ್ತದೊತ್ತಡವೂ (High BP) ಕಾರಣವಾಗಿರಬಹುದು. ಹಾಗಾದರೆ ಅಧಿಕರಕ್ತದೊತ್ತಡಕ್ಕೂ ತಲೆ ನೋವಿಗೂ ಏನು ಸಂಬಂಧ,…

Read More

Video: ಕರುವಿನ ಮೈ ಮೇಲಿನ ಉಣ್ಣೆಗಳನ್ನು ಹೆಕ್ಕಿ ತೆಗೆದ ಸಾಕು ನಾಯಿ – Kannada News | A pet dog plucking the Tick from a calf’s body

ಈ ಪ್ರಾಣಿಗಳಿಗೆ (animals) ಇರುವ ಬುದ್ಧಿ ಮನುಷ್ಯರಿಗಿಲ್ಲ. ಮನುಷ್ಯರಿಗಿಂತ ಈ ಪ್ರಾಣಿಗಳೇ ಲೇಸು ಎನ್ನುವುದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ಸಾಕು ನಾಯಿಯೊಂದು (pet dog) ಕರುವಿನ ಮೈ ಮೇಲಿರುವ ಉಣ್ಣೆಗಳನ್ನು ನಾಲಿಗೆಯಲ್ಲಿ ನೆಕ್ಕಿ, ಹೆಕ್ಕಿ ತೆಗೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಈ ಮುಗ್ಧ ಜೀವಿಗಳ ಬಾಂಧವ್ಯಕ್ಕೆ ಮನಸೋತಿದ್ದಾರೆ. ಯುವರಾಜ್ ಹೆಗಡೆ ಮೇಗರವಳ್ಳಿ (Yuvraj Hegade Megarvalli) ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದ ಶೀರ್ಷಿಕೆಯಲ್ಲಿ ಶಿರುಪತಿ ಗ್ರಾಮದ ಚೇತನ್ ಮನೆಗೆ…

Read More

T20 World Cup: ಪಾಕ್ ವಿರುದ್ಧವೂ ಅಭಿಷೇಕ್ ಆಡಲ್ಲ: ಶಾಕಿಂಗ್ ಹೇಳಿಕೆ ನೀಡಿದ ಸೂರ್ಯ – Kannada News | Team India’s T20 World Cup Scare: Abhishek Sharma Doubtful for Pakistan Clash After Illness

ಇದರ ನಡುವೆ ಟಾಸ್ ಸಮಯದಲ್ಲಿ ಸೂರ್ಯ ನೀಡಿದ ಹೇಳಿಕೆ ಅಭಿಮಾನಿಗಳನ್ನು ಆತಂಕಗೊಳಿಸಿದೆ. ಅಷ್ಟಕ್ಕೂ ಸೂರ್ಯ ಹೇಳಿದ್ದೇನೆಂದರೆ, ಅನಾರೋಗ್ಯಕ್ಕೆ ತುತ್ತಾಗಿರುವ ಅಭಿಷೇಕ್ ಶರ್ಮಾ ನಮೀಬಿಯಾ ವಿರುದ್ಧ ಆಡುತ್ತಿಲ್ಲ, ಅವರು ಒಂದು ಅಥವಾ ಎರಡು ಪಂದ್ಯಗಳನ್ನು ತಪ್ಪಿಸಿಕೊಳ್ಳಬಹುದು ಎಂದರು. ಇದರರ್ಥ ಅಭಿಷೇಕ್ ಮುಂದಿನ ಪಂದ್ಯವನ್ನು ಆಡುವುದು ಅನುಮಾನವಾಗಿದೆ. Source link

Read More

ಅಕ್ರಮ ಆಸ್ತಿ ಗಳಿಕೆ: ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ; ಕೋಟ್ಯಂತರ ರೂ ಪತ್ತೆ – Kannada News | Karnataka Lokayukta Raids: 4 Govt Officials’ Illegal Assets Exposed, Crores Seized

ದಾಳಿ ವೇಳೆ ಪತ್ತೆಯಾದ ನಗದು, ಚಿನ್ನಾಭರಣಗಳುImage Credit source: tv9 kannada ಬೆಂಗಳೂರು, ಫೆಬ್ರವರಿ 12: ಇಂದು ಕರ್ನಾಟಕದ ನಾಲ್ವರು ಸರ್ಕಾರಿ ಅಧಿಕಾರಿಗಳಿಗೆ (Govt Officials) ಲೋಕಾಯುಕ್ತ (Lokayukta) ಶಾಕ್ ನೀಡಿದೆ. ಬೆಳಿಗ್ಗೆ ಎದ್ದು ಬಾಗಿಲು ತೆಗೆಯುವ ಹೊತ್ತಿಗೆ ಲೋಕಾಯುಕ್ತ ಅಧಿಕಾರಿಗಳು ಅಕ್ರಮ ಆಸ್ತಿ ಗಳಿಕೆ ಕೇಸ್​​ನಲ್ಲಿ ಮನೆ ಬಾಗಿಲು ಮುಂದೆ ಹಾಜರಾಗಿದ್ದಾರೆ. ದಾಳಿ ವೇಳೆ ಕೋಟಿ ಕೋಟಿ ಹಣ ಪತ್ತೆಯಾಗಿದ್ದು, ಲೋಕಾಯುಕ್ತ ಅಧಿಕಾರಿಗಳೇ ಶಾಕ್​ ಆಗಿದ್ದಾರೆ. ನಾಲ್ವರು ಸರ್ಕಾರಿ ಅಧಿಕಾರಿಗಳಿಗೆ ಶಾಕ್ ನೀಡಿದ ಲೋಕಾ ಇಂದು…

Read More

ಬಿಕ್ಲು ಶಿವ ಕೊಲೆ ಕೇಸ್​ನಲ್ಲಿ ಶಾಸಕ ಭೈರತಿ ಬಸವರಾಜ್​​ ಪೊಲೀಸರ ವಶಕ್ಕೆ – Kannada News | BJP MLA Byrathi Basavaraj police custody in Biklu Shiva Murder Case After Bail Denial

ಶಾಸಕ ಭೈರತಿ ಬಸವರಾಜ್​​​, ಬಿಕ್ಲು ಶಿವ ಬೆಂಗಳೂರು, ಫೆಬ್ರವರಿ 12: ಸೈಟ್ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ವಿ.ಜಿ.ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಇದೀಗ  ಶಾಸಕ ಭೈರತಿ ಬಸವರಾಜ್​ನ್ನು ದೇವನಹಳ್ಳಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತನಿಖೆ ವೇಳೆ ಆರೋಪಿ ಜಗ್ಗ ಯಾರೆಂಬುದೇ ಗೊತ್ತಿಲ್ಲವೆಂದು ಭೈರತಿ ಬಸವರಾಜ್​ ಹೇಳಿದ ಸುಳ್ಳುಗಳೇ ಅವರಿಗೆ ಇದೀಗ ಮುಳುವಾಗಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಭೈರತಿ ಬಸವರಾಜ್ ಈಗಾಗಲೇ ಕೆಲ ದಿನಗಳ ಹಿಂದೆಯೇ ಮೊಬೈಲ್ ಸ್ವಿಚ್ ಆಫ್…

Read More

ಜನ ನಾಯಗನ್ ಬಳಿಕ ಮತ್ತೊಂದು ಚಿತ್ರದ ರಿಲೀಸ್​​​ಗೆ ತಡೆ; ದೊಡ್ಡ ಪ್ಲ್ಯಾನ್ ಮಾಡಿದ ತಂಡ – Kannada News | Ghuskor Pandat Title Row: Netflix Changes Name for Release Amidst Brahmin Protest

‘ಜನ ನಾಯಗನ್’ ಸಿನಿಮಾ ರಿಲೀಸ್ ಆಗಿ ಈಗಾಗಲೇ ತಿಂಗಳು ಕಳೆದಿರಬೇಕಿತ್ತು. ಆದರೆ, ಸೆನ್ಸಾರ್ ಪ್ರಮಾಣಪತ್ರ ಸಿಗದೆ ಇರುವುದೇ ಸಿನಿಮಾ ರಿಲೀಸ್ ವಿಳಂಬ ಆಗಲು ಕಾರಣ. ಹೀಗಾಗಿ, ಈವರೆಗೆ ಸಿನಿಮಾ ರಿಲೀಸ್ ಆಗಿಲ್ಲ. ಈ ಬೆನ್ನಲ್ಲೇ ಮತ್ತೊಂದು ಸಿನಿಮಾಗೆ ರಿಲೀಸ್​ಗೆ ಬ್ರೇಕ್ ಬೀಳುವ ಲಕ್ಷಣ ಇತ್ತು. ಆದರೆ, ತಕ್ಷಣ ತೆಗೆದುಕೊಂಡ ನಿರ್ಧಾರದಿಂದ ಸಿನಿಮಾ ರಿಲೀಸ್​​ಗೆ ಅನುವು ಮಾಡಿಕೊಡಲಾಗುತ್ತಿದೆ. ಅದು ಬಾಲಿವುಡ್​​ನ ‘ಘುಸ್ಕೋರ್ ಪಂಡತ್’. ಮನೋಜ್ ಬಾಜ್​​ಪಾಯಿ ನಟನೆಯ ‘ಘುಸ್ಕೋರ್ ಪಂಡತ್’ ಸುತ್ತ ವಿವಾದದ ಹುತ್ತ ಬೆಳೆದಿದೆ. ಈ ಸಿನಿಮಾದ…

Read More

ಕುಡಿದ ಮತ್ತಿನಲ್ಲಿದ್ದ ಪೊಲೀಸ್ ಕಾರು ಆಟೋಗೆ ಡಿಕ್ಕಿ ಹೊಡೆದು 25 ವರ್ಷದ ಯುವತಿ ಸಾವು – Kannada News | Haryana 25 year old woman killed after hit by drunk cops Car in Ambala

ಅಂಬಾಲ, ಫೆಬ್ರವರಿ 12: ಹರಿಯಾಣದ ಅಂಬಾಲದಲ್ಲಿ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸುತ್ತಿದ್ದ ಹರಿಯಾಣದ ಪೊಲೀಸ್ ಅಧಿಕಾರಿಯೊಬ್ಬರು 25 ವರ್ಷದ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಆ ಮಹಿಳೆ ಸಾವನ್ನಪ್ಪಿದ್ದಾರೆ. ಮಹಿಳೆ ಇ-ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಪೊಲೀಸ್ ಅಧಿಕಾರಿ ಚಲಾಯಿಸುತ್ತಿದ್ದ ಕಾರು ಡಿಕ್ಕಿ (Car Accident) ಹೊಡೆದ ಪರಿಣಾಮದಿಂದಾಗಿ ಈ ಘಟನೆ ನಡೆದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಕಾರು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ರಸ್ತೆಗೆ ಬಿದ್ದಿದ್ದು, ನಂತರ ಕಾರು ಆಕೆಯ ಮೇಲೆ ಹರಿದಿದೆ. ಮೃತಳನ್ನು ನಿಕಿತಾ ಎಂದು ಗುರುತಿಸಲಾಗಿದೆ. ಅಂಬಾಲದ…

Read More

IND vs NAM Playing XI: ಟಾಸ್ ಗೆದ್ದ ನಮೀಬಿಯಾ; ಭಾರತ ತಂಡದಲ್ಲಿ 2 ಬದಲಾವಣೆ – Kannada News | IND vs NAM Playing XI India vs Namibia Today 18th T20 World Cup 2026 match playing 11 details with name in Kannada

2026 ರ ಟಿ20 ವಿಶ್ವಕಪ್​ನ 18 ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಟೀಂ ಇಂಡಿಯಾ ಗ್ರೂಪ್ ಎ ನಲ್ಲಿ ನಮೀಬಿಯಾ ತಂಡವವನ್ನು ಎದುರಿಸುತ್ತಿದೆ. ಈ ಟೂರ್ನಿಯಲ್ಲಿ ಉಭಯ ತಂಡಗಳ ನಡುವಿನ ಎರಡನೇ ಪಂದ್ಯ ಇದಾಗಿದೆ. ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ. ಟೀಂ ಇಂಡಿಯಾ ಯುಎಸ್ಎ ತಂಡವನ್ನು ಸೋಲಿಸುವ ಮೂಲಕ ತನ್ನ ಅಭಿಯಾನವನ್ನು ಪ್ರಾರಂಭಿಸಿದರೆ, ತನ್ನ ಮೊದಲ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಸೋತಿರುವ ನಮೀಬಿಯಾ ಬಲಿಷ್ಠ ಟೀಂ ಇಂಡಿಯಾಗೆ ಸವಾಲು ನೀಡಲು ಸಜ್ಜಾಗಿದೆ. ಈ…

Read More

ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ನೀವು ಶಾಕ್​​ ಆಗೋದು ಗ್ಯಾರಂಟಿ – Kannada News | Koppal Horticultural Fair Showcases Rs 15 Lakh Yarsagumba Mushroom

ಕೊಪ್ಪಳ, ಫೆಬ್ರವರಿ 12: ಮಹಾ ಶಿವರಾತ್ರಿ ಅಂಗವಾಗಿ ತೋಟಗಾರಿಕೆ ಇಲಾಖೆ ಆಯೋಜಿಸಿದ್ದ ಐದು ದಿನಗಳ ಹಣ್ಣು, ಜೇನು ಮತ್ತು ಅಣಬೆ ಮೇಳದಲ್ಲಿ ಜಗತ್ತಿನ ಅತ್ಯಂತ ದುಬಾರಿ ಅಣಬೆಯಾದ ಯಾರ್ಸಗುಂಬಾವನ್ನು (ಕಾರ್ಡಿಯೋಶೆಪ್ಸ್) ಪ್ರದರ್ಶನಕ್ಕೆ ಇಡಲಾಗಿದೆ. ಹಿಮಾಲಯದ ತಪ್ಪಲಿನಲ್ಲಿ ಬೆಳೆಯುವ ಈ ಅಣಬೆ ಪ್ರತಿ ಕೆ.ಜಿ.ಗೆ 15 ಲಕ್ಷ ರೂಪಾಯಿ ಬೆಲೆ ಬಾಳುತ್ತದೆ. ಈ ಅಣಬೆಯು ಹೆಚ್ಚಿನ ಔಷಧೀಯ ಗುಣಗಳನ್ನು ಹೊಂದಿದ್ದು, ಮಧುಮೇಹ, ಕ್ಯಾನ್ಸರ್, ಬಿಪಿ, ಅಸ್ತಮಾ ಸೇರಿದಂತೆ ಹಲವು ಕಾಯಿಲೆಗಳಿಗೆ ಮದ್ದಾಗಿ ಬಳಕೆಯಾಗುತ್ತದೆ ಎಂದು ಹೇಳಲಾಗುತ್ತದೆ. ಕೊಪ್ಪಳ ತೋಟಗಾರಿಕೆ…

Read More