‘ಸ್ವಾತಂತ್ರ್ಯ ಹೋರಾಟಗಾರರು ಗುಂಡಿಗೆ ಎದೆಯೊಡ್ಡಿದರು, ನೀವು ಮೊಟ್ಟೆಗೆ ಹೆದರುತ್ತೀರಾ?’; ಮಹುವಾ ಮೊಯಿತ್ರಾಗೆ ಸುಪ್ರೀಂ ಕೋರ್ಟ್‌ ಪ್ರಶ್ನೆ – Kannada News | Why fear eggs freedom fighters took bullets Supreme Court asks TMC MP Mahua Moitra

ನವದೆಹಲಿ, ಆಗಸ್ಟ್ 7: ತಮ್ಮ ಮೇಲೆ ಮೊಟ್ಟೆ ಎಸೆಯಬಹುದು ಎಂಬ ಕಾರಣ ನೀಡಿ ಪೊಲೀಸ್ ತನಿಖೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಾಜರಾಗಲು ಅನುಮತಿ ಕೋರಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ (Mahua Moitra) ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ತನಿಖಾಧಿಕಾರಿಯ ಮುಂದೆ ಖುದ್ದಾಗಿ ಹಾಜರಾಗುವಂತೆ ತಿಳಿಸಿದ್ದ ಕೊಲ್ಕತ್ತಾ ಹೈಕೋರ್ಟ್ ನಿರ್ದೇಶನವನ್ನು ಪ್ರಶ್ನಿಸಿದ್ದ ಸಂಸದೆ ಮಹುವಾ ಮೊಯಿತ್ರಾ, ಸುರಕ್ಷತೆಯ ಬಗ್ಗೆ ಆತಂಕ ಮತ್ತು ರಾಜಕೀಯ ವಿರೋಧಿಗಳಿಂದ ಮೊಟ್ಟೆ ಎಸೆಯುವುದು ಸೇರಿದಂತೆ ಸಾರ್ವಜನಿಕವಾಗಿ ಕಿರುಕುಳ ಉಂಟಾಗುವ ಬೆದರಿಕೆಯನ್ನು ಉಲ್ಲೇಖಿಸಿದ್ದರು.

ಈ ಬಗ್ಗೆ ಇಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಶೀಲ್ ನಾಗು ಅವರಿದ್ದ ನ್ಯಾಯಪೀಠವು, ಪೊಲೀಸರ ಮುಂದೆ ವರ್ಚುವಲ್ ಮೂಲಕ ಹಾಜರಾಗಲು ತಮಗೆ ಕಾನೂನಾತ್ಮಕ ಹಕ್ಕಿದೆ ಎಂಬ ಮಹುವಾ ಮೊಯಿತ್ರಾ ಅವರ ವಕೀಲರ ವಾದವನ್ನು ಆಲಿಸಲು ನಿರಾಕರಿಸಿತು ಹಾಗೂ ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿತು.

ಇದನ್ನೂ ಓದಿ: ಬಂಗಾಳದ ರೆಸ್ಟೋರೆಂಟ್ ಹೊರಗೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಮೇಲೆ ಮೊಟ್ಟೆ ದಾಳಿ

“ಪೋಲಿಸ್ ನೋಟಿಸ್ ಪ್ರಕಾರ, ನಾನು ನನ್ನ ಸ್ವಂತ ಕ್ಷೇತ್ರದ ಪೊಲೀಸ್ ಠಾಣೆಗೆ ಹಾಜರಾಗಬೇಕಿದೆ. ಕಳೆದ ಬಾರಿ ನಾನು ಅಲ್ಲಿಗೆ ಹೋದಾಗ 2 ಘಟನೆಗಳು ನಡೆದವು. ಮೊದಲನೆಯದಾಗಿ ಮೊಟ್ಟೆ ಎಸೆಯುವುದಾಗಿ ಬೆದರಿಕೆ ಹಾಕಲಾಯಿತು ಮತ್ತು ಎರಡನೇ ಬಾರಿ ನಿಜವಾಗಿಯೂ ಮೊಟ್ಟೆಗಳನ್ನು ಎಸೆಯಲಾಯಿತು” ಎಂದು ಅವರು ವಾದಿಸಿದರು.

ಮಹುವಾ ಮೊಯಿತ್ರಾ ಅವರ ಈ ಆತಂಕವನ್ನು ಪ್ರಶ್ನಿಸಿದ ನ್ಯಾಯಪೀಠವು, “ನೀವು ಸಂಸದೆಯಾಗಿದ್ದೀರಿ. ರಾಜಕೀಯಕ್ಕೆ ಬಂದ ಮೇಲೆ ಮೊಟ್ಟೆಗಳಿಗೆ ಹೆದರುತ್ತೀರಾ? ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಎದೆಗೆ ಗುಂಡು ಬಿದ್ದಾಗಲೇ ಎದುರಿಸಿದರು. ಇಂತಹ ಅರ್ಜಿಗಳು ಈ ನ್ಯಾಯಾಲಯದ ಮೆಟ್ಟಿಲೇರಲೇಬಾರದು” ಎಂದು ಹೇಳಿತು. ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ನಿರಾಕರಿಸಿದ ಕಾರಣದಿಂದ ಮೊಯಿತ್ರಾ ಅವರ ಪರ ವಕೀಲರು ಅರ್ಜಿಯನ್ನು ಹಿಂಪಡೆದರು.

ಇದನ್ನೂ ಓದಿ: ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿಗೆ ಬಿಗ್ ರಿಲೀಫ್; ಆಫೀಸ್ ಧ್ವಂಸ ಕ್ರಮಕ್ಕೆ ಕೊಲ್ಕತ್ತಾ ಹೈಕೋರ್ಟ್ ತಡೆ

ದ್ವೇಷಪೂರಿತ ಭಾಷಣ ಪ್ರಕರಣದಲ್ಲಿ ಕೃಷ್ಣನಗರದ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದಂತೆ ಕೊಲ್ಕತ್ತಾ ಹೈಕೋರ್ಟ್ ಜುಲೈ 21ರಂದು ಅಕ್ಟೋಬರ್ 5ರವರೆಗೆ ಮಧ್ಯಂತರ ರಕ್ಷಣೆ ನೀಡಿತ್ತು. ನಾದಿಯಾ ಜಿಲ್ಲೆಯಲ್ಲಿ ದಾಖಲಾಗಿರುವ ಈ ಪ್ರಕರಣವು ಸುಳ್ಳು ಆರೋಪಗಳಿಂದ ಕೂಡಿದೆ ಎಂದು ಮಹುವಾ ಮೊಯಿತ್ರಾ ವಾದಿಸಿದ್ದರು.

ನ್ಯಾಯಮೂರ್ತಿ ಸೌಗತ ಭಟ್ಟಾಚಾರ್ಯ ಅವರು ತನಿಖೆಗೆ ಸಹಕರಿಸುವಂತೆ ಮತ್ತು ವಿಚಾರಣೆಗಾಗಿ ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ಮಹುವಾ ಮೊಯಿತ್ರಾಗೆ ನಿರ್ದೇಶಿಸಿದ್ದರು. ಪೊಲೀಸರ ಮುಂದೆ ಹಾಜರಾಗಬೇಕು ಎಂಬ ಈ ನಿರ್ದೇಶನವನ್ನೇ ಅವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಕೋರ್ಟ್ ವಿಧಿಸಿದ ಷರತ್ತುಗಳನ್ನು ಪಾಲಿಸಿ ತನಿಖೆಗೆ ಸಹಕರಿಸಿದರೆ ಅಕ್ಟೋಬರ್ 5ರವರೆಗೆ ಅವರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳಬಾರದು ಎಂದೂ ಹೈಕೋರ್ಟ್ ನಿರ್ದೇಶಿಸಿತ್ತು. ಈ ವಿಷಯದ ಮುಂದಿನ ವಿಚಾರಣೆಯನ್ನು ಹೈಕೋರ್ಟ್ ಅಕ್ಟೋಬರ್ 1ರಂದು ನಡೆಸಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಆಸ್ಕರ್ ಸಿಗಲೇ ಬೇಕು’: ‘ರಾಮಾಯಣ’ ಸಿನಿಮಾ ನೋಡಿ ಕೊಂಡಾಡಿದ ಮಹಾರಾಷ್ಟ್ರ ಸಿಎಂ – Kannada News | Maharashtra CM Devendra Fadnavis praises Ramayana movie

ರಣ್​​ಬೀರ್ ಕಪೂರ್ (Ranbir Kapoor), ಯಶ್, ಸಾಯಿ ಪಲ್ಲವಿ ಇನ್ನೂ ಹಲವಾರು ಪ್ರತಿಭಾವಂತ ನಟ-ನಟಿಯರು ನಟಿಸಿರುವ ‘ರಾಮಾಯಣ’ ಸಿನಿಮಾ ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್ ಸಿನಿಮಾ ಎನಿಸಿಕೊಂಡಿದೆ. ‘ರಾಮಾಯಣ’ ಸಿನಿಮಾ ಬಿಡುಗಡೆ ದಿನಾಂಕ ಹತ್ತಿರ ಬರುತ್ತಿದ್ದಂತೆ, ಇತ್ತೀಚೆಗೆ ಕೆಲವರು ತಮಗೆ ಸಿನಿಮಾ ತೋರಿಸಬೇಕೆಂದು, ಇನ್ನು ಕೆಲವರು ಪಾತ್ರಗಳ ಆಯ್ಕೆ ತಪ್ಪಾಗಿದೆ ಎಂದು ಟೀಕಿಸಲು ಆರಂಭಿಸಿದ್ದರು. ಆದರೆ ಇದೀಗ ಬಿಜೆಪಿಯ ಹಿರಿಯ ನಾಯಕ, ಮಹರಾಷ್ಟ್ರ ಸಿಎಂ ದೇವೇಂದ್ರ ಫಡ್ಣವೀಸ್ ಅವರು ‘ರಾಮಾಯಣ’ ಸಿನಿಮಾ ವೀಕ್ಷಿಸಿದ್ದು, ಸಿನಿಮಾವನ್ನು ಬಹುವಾಗಿ ಕೊಂಡಾಡಿದ್ದಾರೆ.

ಪ್ರೈಮ್ ಫೋಕಸ್ ಸ್ಟುಡಿಯೋಸ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಅಕಾಡೆಮಿ ಪ್ರಶಸ್ತಿಗಳ ಜ್ಯೂರಿಗಳು (ಆಯ್ಕೆ ಸಮಿತಿ) ‘ರಾಮಾಯಣ’ ಚಿತ್ರಕ್ಕೆ ಆಸ್ಕರ್ ನೀಡದಿದ್ದರೆ ನನಗೆ ತುಂಬಾ ನಿರಾಶೆಯಾಗುತ್ತದೆ. ಇದು ಕೇವಲ ದಶಕ್ಕೊಮ್ಮೆ ಬರುವ ಸಿನಿಮಾ ಅಲ್ಲ, ಬದಲಿಗೆ ಇದು ಒಂದು ಸಹಸ್ರಮಾನದ (Millennium)ಕ್ಕೆ ಒಮ್ಮೆ ಬರುವ ಸಿನಿಮಾ’ ಎಂದು ಫಡ್ನವೀಸ್ ಕೊಂಡಾಡಿದ್ದಾರೆ.

ನರೇಂದ್ರ ಮೋದಿ ಅವರೊಟ್ಟಿಗೆ ‘ರಾಮಾಯಣ’ ಸಿನಿಮಾ ಸೆಟ್​​ಗೆ ಭೇಟಿ ನೀಡಿದ್ದು, ಸಿನಿಮಾದ ಪ್ರೊಡಕ್ಷನ್ ಗುಣಮಟ್ಟವನ್ನು ನೋಡಿ ಆಶ್ಚರ್ಯಚಕಿತವಾಗಿದ್ದನ್ನು ಸ್ಮರಿಸಿದ ಫಡ್ಣವೀಸ್​​ ಅವರು, ‘ಹೊಸ ಪೀಳಿಗೆಗೆ ನಮ್ಮ ಕಥೆಗಳನ್ನು ಹೇಳಬೇಕಾದ ಮಾರ್ಗ ಇದು ಎಂದು ನಾನು ಭಾವಿಸುತ್ತೇನೆ, ಮತ್ತು ನೀವು ಸ್ಥಾಪಿಸುತ್ತಿರುವುದು ಜಗತ್ತಿನಲ್ಲೇ ಅತ್ಯುತ್ತಮವಾಗಿರುತ್ತದೆ ಎಂದು ನಾನು ನಂಬುತ್ತೇನೆ’ ಎಂದಿದ್ದಾರೆ.

ನಿತೇಶ್ ತಿವಾರಿ ನಿರ್ದೇಶನ ಮಾಡಿರುವ ‘ರಾಮಾಯಣ’ ಸಿನಿಮಾನಲ್ಲಿ ರಣಬೀರ್ ಕಪೂರ್ ಶ್ರೀರಾಮನ ಪಾತ್ರದಲ್ಲಿ, ನಟಿ ಸಾಯಿ ಪಲ್ಲವಿ ಸೀತಾಮಾತೆ ಪಾತ್ರದಲ್ಲಿ, ಯಶ್, ರಾವಣನ ಪಾತ್ರದಲ್ಲಿ ನಟಿಸಿದ್ದಾರೆ. ಇವರು ಮಾತ್ರವೇ ಅಲ್ಲದೆ, ಸನ್ನಿ ಡಿಯೋಲ್, ರವಿ ದುಬೆ, ಲಾರಾ ದತ್ತಾ, ರಾಕುಲ್ ಪ್ರೀತ್ ಸಿಂಗ್ ಹಾಗೂ ಅರುಣ್ ಗೋವಿಲ್ ಮುಂತಾದ ದೊಡ್ಡ ತಾರಾಬಳಗವಿದೆ.

ಇದನ್ನೂ ಓದಿ:ರಣ್​​ಬೀರ್ ಕಪೂರ್ ಸಿನಿಮಾ ಸೆಟ್​​ನಲ್ಲಿ ಸಾವು, ನಿರ್ದೇಶಕನ ವಿರುದ್ಧ ಎಫ್​​ಐಆರ್​​ಗೆ ಆಗ್ರಹ

ಸಿನಿಮಾಕ್ಕೆ ಆಸ್ಕರ್ ವಿಜೇತ ಸಂಗೀತ ನಿರ್ದೇಶಕರಾದ ಹ್ಯಾನ್ಸ್ ಜಿಮ್ಮರ್ ಮತ್ತು ಎ.ಆರ್. ರಹಮಾನ್ ಸಂಗೀತ ಸಂಯೋಜಿಸುತ್ತಿದ್ದಾರೆ. ಇಬ್ಬರು ವಿಶ್ವಶ್ರೇಷ್ಠ ಸಂಗೀತ ನಿರ್ದೇಶಕರು ಈ ಸಿನಿಮಾಕ್ಕಾಗಿ ಕೈ ಜೋಡಿಸಿರುವುದು ವಿಶೇಷ. ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್, ಡಿಎನ್‌ಇಜಿ (DNEG) ವಿಎಫ್‌ಎಕ್ಸ್ ಸ್ಟುಡಿಯೋ ಮತ್ತು ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರೀಶನ್ಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿವೆ. ‘ರಾಮಾಯಣ’ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗವು ಇದೇ ವರ್ಷ ನವೆಂಬರ್ 6 ರಂದು ವಿಶ್ವದಾದ್ಯಂತ ಭಾರಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ಎರಡನೇ ಭಾಗ ಮುಂದಿನ ವರ್ಷ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

5 ಸ್ಟಾರ್ ಹೋಟೆಲ್​​ಗಳಲ್ಲಿ ಕೊಳೆತ ತರಕಾರಿ, ಮಾಂಸ ಪತ್ತೆ: ಕಠಿಣ ಕ್ರಮ ಎಂದ ಸಚಿವ ಯುಟಿ ಖಾದರ್ – Kannada News | Rotten Vegetables and Meat Found in Five Star Hotels; UT Khader Warns of Strict Action

ಮಂಗಳೂರು, ಆಗಸ್ಟ್​ 07: ‘ರಾಜ್ಯದ ಪಂಚತಾರಾ ಹೋಟೆಲ್‌ಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳ ದಾಳಿ ವೇಳೆ ಕೊಳೆತ ಈರುಳ್ಳಿ, ಡೆನ್ಮಾರ್ಕ್​​ನ ಹೆಪ್ಪುಗಟ್ಟಿದ ಮಾಂಸ, ಅವಧಿ ಮುಗಿದ ಹಾಲು ಪತ್ತೆ ಆಗಿದೆ. ಎಲ್ಲ ವಸ್ತುಗಳ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. ಮುಂದೆಯೂ ಈ ತಪಾಸಣೆಯನ್ನು ಮುಂದುವರಿಸುತ್ತೇವೆ’ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಜನರಿಗೆ ಆಹಾರದ ಸುರಕ್ಷತೆ ಬಗ್ಗೆ ತಿಳಿಸೋದು ನಮ್ಮ ಕರ್ತವ್ಯ. ಸ್ಟಾರ್​ ಹೋಟೆಲ್​​ಗಳಲ್ಲಿ ಅಧಿಕಾರಿಗಳು ತಪಾಸಣೆ ಮಾಡಲ್ಲ ಅಂತಾ ಭಾವನೆ ಇದೆ. ಆದರೆ ಮೊದಲು ದೊಡ್ಡವರನ್ನು ಹಿಡಿಯಬೇಕು ಆಮೇಲೆ ಎಲ್ಲ ಸರಿ ಆಗುತ್ತದೆ. ಇನ್ನು ಮಾಂಸ ಯಾವಾಗ ತಂದಿರುವುದು, ಫ್ರೆಶ್ ಎಂಬುದರ ಬಗ್ಗೆ ಸೂಚನ ಫಲಕ ಹಾಕಬೇಕು. ಸದ್ಯ ಇದು ತಪಾಸಣೆ ಅಷ್ಟೇ, ‌ಮುಂದೆ ನಿಯಮ ಮೀರಿದರೆ ಕಠಿಣ ಕ್ರಮ ನಿಶ್ಚಿತ’ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Aadhaar: ಆಧಾರ್ ಕಾರ್ಡ್​​ನಲ್ಲಿ ಎರಡು ಬಾರಿ ಹೆಸರು ತಿದ್ದುಪಡಿ ಮಾಡಿದ್ರೂ ತಪ್ಪಿದ್ಯಾ? ಹಾಗಾದ್ರೆ ಹೀಗೆ ಮಾಡಿ – Kannada News | Aadhaar: How to correct the name on an Aadhaar card for the third time

ಆಧಾರ್ ಕಾರ್ಡ್ (Aadhaar Card) ಭಾರತದಲ್ಲಿ ಪ್ರಮುಖ ಗುರುತಿನ ದಾಖಲೆಯಾಗಿದೆ. ಸಬ್ಸಿಡಿಗಳು, ಪಿಂಚಣಿಗಳು, ವಿದ್ಯಾರ್ಥಿವೇತನಗಳು ಹಾಗೂ ಸರ್ಕಾರಿ ಸೌಲಭ್ಯಗಳಿಗೆ ಈ ದಾಖಲೆ ಅತ್ಯಗತ್ಯ. ಆದರೆ ಈ ಇತರ ದಾಖಲೆಗಳಲ್ಲಿ ನಿಮ್ಮ ಹೆಸರು ಸರಿಯಿದ್ದು ಈ ದಾಖಲೆಯಲ್ಲಿ ಹೆಸರು ತಪ್ಪಿದ್ದರೆ, ಇದರಿಂದ ನೀವು ಸಮಸ್ಯೆ ಅನುಭವಿಸಬೇಕಾಗುತ್ತದೆ. ಆದರೆ ಯುಐಡಿಎಐ ನಿಯಮಗಳ ಪ್ರಕಾರ, ಹೆಸರನ್ನು ಎರಡು ಬಾರಿ ಮಾತ್ರ ಬದಲಾಯಿಸಲು ಅವಕಾಶವಿದೆ. ವಿನಾಯಿತಿ ನವೀಕರಣ ಪ್ರಕ್ರಿಯೆ ಮೂಲಕ ಹೆಸರು ಬದಲಾವಣೆ ಸಾಧ್ಯ. ಈ ಪ್ರಕ್ರಿಯೆಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ಮೂರನೇ ಬಾರಿ ಆಧಾರ್ ಕಾರ್ಡ್‌ನಲ್ಲಿನ ಹೆಸರು ತಿದ್ದುಪಡಿ ಮಾಡುವುದು ಹೇಗೆ?

ಹಂತ 1: ಮೊದಲು ನಿಮ್ಮ ಹತ್ತಿರದ ಅಧಿಕೃತ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ.

ಹಂತ 2: ನಿಮ್ಮಲ್ಲಿರುವ ಗೆಜೆಟ್ ನೋಟಿಫಿಕೇಶನ್ ದಾಖಲೆಯನ್ನು ನೀಡಿ, ಹೆಸರು ತಿದ್ದುಪಡಿಗಾಗಿ ನವೀಕರಣ ವಿನಂತಿ ಅರ್ಜಿ ಸಲ್ಲಿಸಿ.

ಹಂತ 3: ಈ ಪ್ರಕ್ರಿಯೆ ಮುಗಿದ ಬಳಿಕ ಯುಆರ್ ಎನ್ ಇರುವ ರಶೀದಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ (ನೀವು ಕಳಿಸಿದ ವಿನಂತಿ ಮೊದಲ ಹಂತದಲ್ಲಿ ರಿಜೆಕ್ಟ್ ಆಗುವುದು ಸಾಮಾನ್ಯ).

ಹಂತ 4: ನಿಮ್ಮ ಈ ವಿನಂತಿ ತಿರಸ್ಕೃತಗೊಂಡರೆ, ನಿಮ್ಮ ರಾಜ್ಯಕ್ಕೆ ಸಂಬಂಧಿಸಿದ UIDAI ಪ್ರಾದೇಶಿಕ ಕಚೇರಿಯನ್ನು ಸಂಪರ್ಕಿಸಿ.

ಹಂತ 5: ಇಮೇಲ್‌ನಲ್ಲಿ ಅರ್ಜಿ ಸಲ್ಲಿಸುವಾಗ ಅಥವಾ ನೇರವಾಗಿ ಆಫೀಸಿಗೆ ಹೋದರೆ ಆಧಾರ್ ನವೀಕರಣ ರಶೀದಿ, ಗೆಜೆಟ್ ನೋಟಿಫಿಕೇಶನ್ ಪ್ರತಿ, ನಿಮ್ಮ ಸಮಸ್ಯೆಯನ್ನು ವಿವರಿಸಿ ಬರೆದ ಪತ್ರ ಈ ದಾಖಲೆಗಳು ತೆಗೆದುಕೊಂಡು ಹೋಗಿ.

ಹಂತ 6: ರೀಜನಲ್ ಆಫೀಸ್‌ನ ಅಧಿಕಾರಿಗಳು ನಿಮ್ಮ ದಾಖಲೆಗಳನ್ನು ಹಾಗೂ ಅರ್ಜಿಯನ್ನು ಪರಿಶೀಲಿಸಿ, ಹೆಸರು ಬದಲಾವಣೆಗೆ ವಿಶೇಷ ಅನುಮೋದನೆ ನೀಡುತ್ತಾರೆ.

ಇದನ್ನೂ ಓದಿ: ನಿಮ್ಮ ಆಧಾರ್ ಬಯೋಮೆಟ್ರಿಕ್‌ ಡೇಟಾ ಸುರಕ್ಷಿತವಾಗಿರಲು ಈ ರೀತಿ ಲಾಕ್ ಮಾಡಿ

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಆಧಾರ್ ಕಾರ್ಡ್ ನಲ್ಲಿನ ಹೆಸರನ್ನು ಎಷ್ಟು ಭಾರಿ ತಿದ್ದುಪಡಿ ಮಾಡಬೇಕು?

ಉತ್ತರ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ಜೀವಿತಾವಧಿಯಲ್ಲಿ ಕೇವಲ ಎರಡು ಬಾರಿ ಮಾತ್ರ ಬದಲಾಯಿಸಲು ಅವಕಾಶ ನೀಡಿದೆ.

ಪ್ರಶ್ನೆ: ಆಧಾರ್ ಕಾರ್ಡ್ ನಲ್ಲಿನ ಹೆಸರನ್ನು ಮೂರನೇ ಬಾರಿ ತಿದ್ದುಪಡಿ ಮಾಡಲು ಯಾವೆಲ್ಲಾ ದಾಖಲೆಗಳು ಬೇಕು?

ಉತ್ತರ: ಆಧಾರ್ ನವೀಕರಣ ರಶೀದಿ, ಗೆಜೆಟ್ ನೋಟಿಫಿಕೇಶನ್ ಪ್ರತಿ, ನಿಮ್ಮ ಸಮಸ್ಯೆಯನ್ನು ವಿವರಿಸಿ ಬರೆದ ಪತ್ರ ಈ ದಾಖಲೆಗಳು ಬೇಕು.

ಪ್ರಶ್ನೆ: ಆಧಾರ್ ಕಾರ್ಡ್ ಮುಖ್ಯ ಯಾಕೆ?

ಉತ್ತರ: ಸಬ್ಸಿಡಿಗಳು, ಪಿಂಚಣಿಗಳು, ವಿದ್ಯಾರ್ಥಿವೇತನಗಳು ಹಾಗೂ ಸರ್ಕಾರಿ ಸೌಲಭ್ಯ ಸೇರಿದಂತೆ ಇನ್ನಿತ್ತರ ಕೆಲಸಗಳಿಗೆ ಈ ದಾಖಲೆ ಅಗತ್ಯ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs SL: ಭಾರತ- ಶ್ರೀಲಂಕಾ ಟೆಸ್ಟ್ ಸರಣಿ; ಅಭಿಮಾನಿಗಳಿಗೆ ಬಂಪರ್ ಆಫರ್

ಭಾರತ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಸರಣಿ ಆಗಸ್ಟ್ 15 ರಂದು ಆರಂಭವಾಗಲಿದೆ. ಈ ಸರಣಿಯಲ್ಲಿ ಎರಡು ಟೆಸ್ಟ್ ಪಂದ್ಯಗಳು ನಡೆಯಲಿವೆ. ಒಂಬತ್ತು ವರ್ಷಗಳ ನಂತರ ಈ ಸರಣಿಗಾಗಿ ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸ ಮಾಡಿದೆ. ಅಲ್ಲದೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ ರೇಸ್​ನಲ್ಲಿ ಜೀವಂತವಾಗಿರಲು ಉಭಯ ತಂಡಗಳಿಗೂ ಈ ಸರಣಿ ಗೆಲುವು ಅತ್ಯವಶ್ಯಕವಾಗಿದೆ. ಹೀಗಾಗಿ ಉಭಯ ತಂಡಗಳು ಗೆಲುವಿಗಾಗಿ ಜಿದ್ದಾಜಿದ್ದಿನ ಹೋರಾಟ ನೀಡುವುದು ನಿಶ್ಚಿತ. ಇದನ್ನು ಗಮನದಲ್ಲಿಟ್ಟುಕೊಂಡು, ಶ್ರೀಲಂಕಾ ಕ್ರಿಕೆಟ್ ಮಂಡಳಿ ಅಭಿಮಾನಿಗಳಿಗೆ ಬಂಪರ್ ಉಡುಗೊರೆ ನೀಡಿದೆ. ಅದರಂತೆ ಉಭಯ ತಂಡಗಳ ನಡುವೆ ನಡೆಯುವ ಈ ಎರಡೂ ಟೆಸ್ಟ್ ಪಂದ್ಯಗಳಿಗೆ ಪ್ರೇಕ್ಷಕರಿಗೆ ಕ್ರೀಡಾಂಗಣ ಪ್ರವೇಶವನ್ನು ಉಚಿತಗೊಳಿಸಿದೆ.

ಎರಡೂ ಟೆಸ್ಟ್ ಪಂದ್ಯಗಳಿಗೆ ಉಚಿತ ಪ್ರವೇಶ

ಭಾರತ ಮತ್ತು ಶ್ರೀಲಂಕಾ ಟೆಸ್ಟ್ ಸರಣಿಯ ಮೊದಲ ಪಂದ್ಯ ಗಾಲೆ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯ ಆಗಸ್ಟ್ 15 ರಿಂದ ಆಗಸ್ಟ್ 19 ರವರೆಗೆ ನಡೆಯಲಿದೆ. ಎರಡನೇ ಟೆಸ್ಟ್ ಪಂದ್ಯ ಆಗಸ್ಟ್ 23 ರಿಂದ ಆಗಸ್ಟ್ 27 ರವರೆಗೆ ಕೊಲಂಬೊದ ಆರ್ ಎಸ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ. ಸುಮಾರು ನಾಲ್ಕೂವರೆ ವರ್ಷಗಳ ನಂತರ ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಸರಣಿ ಇದಾಗಿದ್ದು, 2017 ರ ನಂತರ ಶ್ರೀಲಂಕಾ ನೆಲದಲ್ಲಿ ಮೊದಲ ಟೆಸ್ಟ್ ಪಂದ್ಯವಾಗಿದೆ.

ಈ ಸಂದರ್ಭವನ್ನು ವಿಶೇಷವಾಗಿಸಲು ಮತ್ತು ಹೆಚ್ಚಿನ ಪ್ರೇಕ್ಷಕರನ್ನು ಕ್ರೀಡಾಂಗಣಕ್ಕೆ ಆಕರ್ಷಿಸಲು ಶ್ರೀಲಂಕಾ ಕ್ರಿಕೆಟ್ ಮಂಡಳಿ ಎರಡೂ ಟೆಸ್ಟ್ ಪಂದ್ಯಗಳಿಗೆ ಉಚಿತ ಪ್ರವೇಶವನ್ನು ಘೋಷಿಸಿದೆ. ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಮೈದಾನಕ್ಕೆ ಬರುವ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿರುವುದನ್ನು ಪರಿಗಣಿಸಿ ಈ ನಿರ್ಧಾರ ಮಹತ್ವದ್ದಾಗಿದೆ. ಇದಲ್ಲದೆ, ಭಾರತ ಮತ್ತು ಶ್ರೀಲಂಕಾ ನಡುವೆ ಕೇವಲ ಎರಡು ಟೆಸ್ಟ್ ಪಂದ್ಯಗಳು ನಡೆಯುವುದರಿಂದ ಈ ಪ್ರವಾಸದಲ್ಲಿ ಟೀಮ್ ಇಂಡಿಯಾ ಮತ್ತೆ ಆಡುವುದನ್ನು ನೋಡಲು ಅವಕಾಶವಿರುವುದಿಲ್ಲ. ಹೀಗಾಗಿ ಉಭಯ ದೇಶಗಳ ಅಭಿಮಾನಿಗಳು ಕ್ರೀಡಾಂಗಣದಲ್ಲಿ ತಮ್ಮ ತಂಡಗಳ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಇದು ಉತ್ತಮ ಅವಕಾಶವಾಗಿದೆ.

ಅತ್ಯಂದ ಮಹತ್ವದ ಸರಣಿ

ಮೇಲೆ ಹೇಳಿದಂತೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಾಗಿ ಎರಡೂ ತಂಡಗಳಿಗೆ ಇದು ನಿರ್ಣಾಯಕವಾಗಿದೆ. ಭಾರತ ಮತ್ತು ಶ್ರೀಲಂಕಾ ಪ್ರಸ್ತುತ ಪಾಯಿಂಟ್ಸ್ ಪಟ್ಟಿಯಲ್ಲಿ ಐದು ಮತ್ತು ಆರನೇ ಸ್ಥಾನದಲ್ಲಿವೆ. ಟೀಂ ಇಂಡಿಯಾ ಶೇ. 48.15 ರ ಗೆಲುವಿನ ಶೇಕಡಾವಾರು ಹೊಂದಿದ್ದರೆ, ಶ್ರೀಲಂಕಾ 41.67 ರ ಗೆಲುವಿನ ಶೇಕಡಾವಾರು ಹೊಂದಿದೆ. ಆದಾಗ್ಯೂ ಶ್ರೀಲಂಕಾ ಈ ಸರಣಿಯನ್ನು ತವರಿನ ಲಾಭವನ್ನು ಪಡೆದುಕೊಳ್ಳಬಹುದು.

Source link

ಆಸ್ಕರ್ ವಿಜೇತ ಹಾಲಿವುಡ್​​ ಸ್ಟಾರ್ ಜೊತೆ ಪ್ರಿಯಾಂಕಾ ಚೋಪ್ರಾ ಹೊಸ ಸಿನಿಮಾ – Kannada News | Priyanka Chopra acting along with Russell Crowe in new movie

ಪ್ರಿಯಾಂಕಾ ಚೋಪ್ರಾ (Priyanka Chopra), ಬಾಲಿವುಡ್​​ ತೊರೆದು ಹಾಲಿವುಡ್​​ಗೆ ಹಾರಿ ವರ್ಷಗಳೇ ಆಗಿವೆ. ಹಾಲಿವುಡ್​​ಗೆ ಹಾರಿದ ಆರಂಭದಲ್ಲಿ ಪ್ರಿಯಾಂಕಾ ಚೋಪ್ರಾ ಅವರಿಗೆ ಸಣ್ಣ-ಪುಟ್ಟ ಪಾತ್ರಗಳೇ ದೊರೆತಿದ್ದು, ಟಿವಿ ಸರಣಿಯೊಂದರಲ್ಲಿ ನಟಿಸಿದರು. ವಿಲನ್ ಆಗಿ ನಟಿಸಿದರು. ಬಳಿಕ ಪೋಷಕ ಪಾತ್ರ ಹೀಗೆ ಸಾಗಿ ಕಳೆದ ಕೆಲ ವರ್ಷಗಳಲ್ಲಿ ಪ್ರಧಾನ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹಾಲಿವುಡ್​​ನ ಸ್ಟಾರ್ ನಟನ ಎದುರು ಸರಿಸಮನಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದೀಗ ಪ್ರಿಯಾಂಕಾ, ಹಾಲಿವುಡ್‌ನಲ್ಲಿ ಮತ್ತೊಂದು ದೊಡ್ಡ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ನಟ ರಸೆಲ್ ಕ್ರೋಗೆ ಜೋಡಿಯಾಗಿ ಪ್ರಮುಖ ಪಾತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಈ ಚಿತ್ರಕ್ಕೆ ‘ಬ್ಲೂಫ್ಲೈ’ ಎಂದು ಹೆಸರಿಡಲಾಗಿದ್ದು, ಇದೊಂದು ಆಕ್ಷನ್ ಭರಿತ ಸೈನ್ಸ್ ಫಿಕ್ಷನ್ ಕತೆಯನ್ನು ಒಳಗೊಂಡಿದೆ. ಭಾರಿ ದೊಡ್ಡ ಪ್ರಾಜೆಕ್ಟ್ ಇದಾಗಿದ್ದು, ಸಿನಿಮಾದ ಕತೆಯೂ ಬಲು ವಿಭಿನ್ನವಾಗಿದೆ.

ಈ ಚಿತ್ರವು ಕಾಂಗೋದಲ್ಲಿ ರಹಸ್ಯ ಬ್ಲಾಕ್-ಆಪ್ಸ್ ಕಾರ್ಯಾಚರಣೆಯಲ್ಲಿ ತೊಡಗಿರುವ ವಿಶ್ವಸಂಸ್ಥೆಯ ಭಾಷಾಂತರಕಾರನ ಕಥೆಯನ್ನು ಹೊಂದಿದೆ. ಅಸ್ತಿತ್ವದಲ್ಲಿರದ ನಿಗೂಢ ವಿಮಾನದ ಒಳಗುಟ್ಟುಗಳನ್ನು ಹುಡುಕುವ ಕೆಲಸ ನಾಯಕ ಮತ್ತು ಆತನ ತಂಡದ್ದು. ತಂಡವು ಅಪಾಯಕಾರಿ ಮಿಲಿಟರಿ ನಿಯಂತ್ರಿತ ಪ್ರದೇಶಕ್ಕೆ ಪ್ರಯಾಣಿಸುತ್ತಿದ್ದಂತೆ, ಅವರು ನಿಧಾನವಾಗಿ ಆಘಾತಕಾರಿ ಸತ್ಯವನ್ನು ಬಹಿರಂಗಪಡಿಸುತ್ತಾರೆ, ಜೊತೆಗೆ ಜೀವನ್ಮರಣ ಹೋರಾಟದ ಆಪರೇಷನ್ ಒಂದರಲ್ಲಿ ತೊಡಗಿಕೊಳ್ಳುತ್ತಾರೆ.

ಇದನ್ನೂ ಓದಿ:‘ವಾರಣಾಸಿ’: ಪ್ರಿಯಾಂಕಾ ಚೋಪ್ರಾ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ ರಾಜಮೌಳಿ

ಚಿತ್ರಕಥೆಯನ್ನು ಡೇವಿಡ್ ಫ್ರಿಜೆರಿಯೊ, ವಿಲಿಯಂ ಯುಬ್ಯಾಂಕ್ ಮತ್ತು ಕಾರ್ಲೈಲ್ ಯುಬ್ಯಾಂಕ್ ಬರೆದಿದ್ದಾರೆ. ಸಿನಿಮಾವನ್ನು ನಿಮ್ರೋಡ್ ಆಂಟಲ್ ನಿರ್ದೇಶನ ಮಾಡುತ್ತಿದ್ದಾರೆ. ಇವರು ಈ ಹಿಂದೆ ‘ಪ್ರೆಡೆಟರ್’, ‘ಆಫ್ಟರ್​ಬರ್ತ್’ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ‘ಸ್ಟ್ರೇಂಜರ್ ಥಿಂಗ್ಸ್’ ನ ಕೆಲ ಎಪಿಸೋಡ್​​ಗಳನ್ನು ಸಹ ನಿರ್ದೇಶಿಸಿದ್ದಾರೆ.

ಇನ್ನು ಸಿನಿಮಾದ ನಾಯಕ, ರಸಲ್ ಕ್ರೋವ್, ಹಾಲಿವುಡ್​ನ ಸ್ಟಾರ್ ನಟರಾಗಿದ್ದು, ‘ಗ್ಲಾಡಿಯೇಟರ್’, ‘ಎಲ್​​ಎ ಕಾನ್ಫಿಡೆನ್ಷಿಯಲ್’, ‘ಎ ಬ್ಯೂಟಿಫುಲ್ ಮೈಂಡ್’, ‘ಬಾಡಿ ಆಫ್ ಲೈಸ್’, ‘ಅಮೆರಿಕನ್ ಗ್ಯಾಂಗ್​​ಸ್ಟರ್’, ‘ರಾಬಿನ್ ಹುಡ್’, ‘ಸೂಪರ್ ಮ್ಯಾನ್’, ‘ದಿ ಮಮ್ಮಿ’, ‘ವಾರ್ ಮಷಿನ್’ ಇನ್ನೂ ಹಲವಾರು ಬ್ಲಾಕ್ ಬಸ್ಟರ್, ಕಲ್ಟ್ ಕ್ಲಾಸಿಕ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೂರು ಬಾರಿ ಆಸ್ಕರ್​​ಗೆ ನಾಮಿನೇಟ್ ಆಗಿದ್ದ ರಸಲ್ ಕ್ರೋವ್, ಒಂದು ಬಾರಿ ಆಸ್ಕರ್ ಗೆದ್ದಿದ್ದಾರೆ ಸಹ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಶಿವಾನಂದ ನೀಲಣ್ಣನವರ್​​ಗೆ ಇಡಿ ಶಾಕ್! ಬೆಳಗಾವಿಯಲ್ಲಿ ಮೂರು ಕಡೆಗಳಲ್ಲಿ ದಾಳಿ – Kannada News | ED Raids Three Locations in Shivam Associates 4,500 Crore Fraud Case

ಶಿವಾನಂದ ನೀಲಣ್ಣನವರ್Image Credit source: tv9 kannada

ಬೆಳಗಾವಿಮ, ಆಗಸ್ಟ್​​ 07: ಸಾವಿರಾರು ಕೋಟಿ ರೂ ವಂಚನೆ ಆರೋಪ ಎದುರಿಸುತ್ತಿರುವ ಶಿವಂ ಅಸೋಸಿಯೇಟ್ಸ್ ಕಂಪನಿಯ ಮಾಲೀಕ ಶಿವಾನಂದ ನೀಲಣ್ಣನವರ್​​ಗೆ (Shivanand Neelannavar) ಜಾರಿ ನಿರ್ದೇಶನಾಲಯ (ED) ಬಿಗ್ ಶಾಕ್ ನೀಡಿದೆ. 40,000ಕ್ಕೂ ಹೆಚ್ಚು ಹೂಡಿಕೆದಾರರಿಗೆ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಬೆಳಗಾವಿ ಜಿಲ್ಲೆಯ ಮೂರು ಪ್ರಮುಖ ಸ್ಥಳಗಳ ಮೇಲೆ ದಿಢೀರ್ ದಾಳಿ ಮಾಡಿದೆ.

ಮೂರು ಕಡೆಗಳಲ್ಲಿ ಇಡಿ ದಾಳಿ

ಮಂಗಳೂರು ಹಾಗೂ ಗೋವಾದಿಂದ ಆಗಮಿಸಿರುವ ಇಡಿ ಅಧಿಕಾರಿಗಳ ತಂಡ ಜಂಟಿಯಾಗಿ ಕಾರ್ಯಚರಣೆ ನಡೆಸಿದೆ. ಶಿವಾನಂದ ನೀಲಣ್ಣನವರ್​​​ಗೆ ಸೇರಿದ ಬೆಳಗಾವಿಯ ಶಿವಬಸವನಗರದಲ್ಲಿರುವ ಎಂ.ಎಸ್. ಟವರ್ ಅಪಾರ್ಟ್‌ಮೆಂಟ್, ಬಡಕುಂದ್ರಿ ಗ್ರಾಮದಲ್ಲಿರುವ ನಿವಾಸ ಹಾಗೂ ಚಿಕ್ಕೋಡಿ ಪಟ್ಟಣದಲ್ಲಿರುವ ಅವರ ಬಿಸಿನೆಸ್ ಪಾರ್ಟ್‌ನರ್ ಸುಭಾಷ್ ನಂದರಗಿ ಅವರ ಮನೆ ಮೇಲೆ ದಾಳಿ ಮಾಡಲಾಗಿದೆ. ಅಷ್ಟೇ ಅಲ್ಲದೆ ಇಡಿ ಅಧಿಕಾರಿಗಳು ಶಿವಾನಂದ ನೀಲಣ್ಣನವರ್‌ ಹಾಗೂ ಪತ್ನಿ ಸಂಗೀತಾರನ್ನು ವಿಚಾರಣೆ ಮಾಡಿದ್ದಾರೆ.

ಪ್ರಕರಣದ ಹಿನ್ನೆಲೆ

ಬೆಳಗಾವಿಯಲ್ಲಿ ಶಿವಂ ಅಸೋಸಿಯೇಟ್ ಹೆಸರಿನಲ್ಲಿ ಸಾವಿರಾರು ಕೋಟಿ ರೂ ವಂಚನೆ ಆರೋಪ ಕೇಳಿಬಂದಿತ್ತು. ಬಳಿಕ ಮೇ 15ರಂದು ಶಿವಂ ಅಸೋಸಿಯೇಟ್ ಕಂಪನಿಯ ಮೇಲೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ದಾಳಿ ನಡೆಸಿತ್ತು. ಅಕ್ರಮವಾಗಿ ಠೇವಣಿ ಸಂಗ್ರಹ ಹಾಗೂ ಆಮಿಷವೊಡ್ಡಿ ಹಣ ಸಂಗ್ರಹಿಸುತ್ತಿರುವ ಆರೋಪದಡಿ ಪ್ರಕರಣ ದಾಖಲಿಸಿ ಮಾಲೀಕ ನೀಲಣ್ಣನವರ್​ ನನ್ನು ಬಂಧಿಸಲಾಗಿತ್ತು. ತನಿಖೆ ವೇಳೆ ಸುಮಾರು 2,400 ಕೋಟಿ ರೂ ಹಣವನ್ನು 40,700ಕ್ಕೂ ಹೆಚ್ಚು ಜನರಿಂದ ಸಂಗ್ರಹಿಸಿರುವುದು ಬೆಳಕಿಗೆ ಬಂದಿತ್ತು. ಅದರಲ್ಲಿ 540 ಕೋಟಿ ರೂ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗಿದ್ದು, ಸುಮಾರು 170 ಕೋಟಿ ರೂ ನಷ್ಟವಾಗಿದೆ ಎಂದು ಸಿಐಡಿ ಮಾಹಿತಿ ನೀಡಿತ್ತು.

ಇದನ್ನೂ ಓದಿ: ಬೆಳಗಾವಿಯ ಶಿವಾನಂದ ನೀಲಣ್ಣವರನ ಸಾವಿರಾರು ಕೋಟಿ ರೂ. ರಹಸ್ಯ ಬಯಲು: ಎಳೆ ಎಳೆಯಾಗಿ ಬಿಚ್ಚಿಟ್ಟ ಸಿಐಡಿ

ಬಳಿಕ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಲಾಗಿತ್ತು. ಪ್ರಕರಣದಲ್ಲಿ ಬಂಧಿತರಾಗಿದ್ದ ಶಿವಾನಂದ ನೀಲಣ್ಣನವರ್​ ಪ್ರಸ್ತುತ ಜಾಮೀನಿನ ಮೇಲೆ ಹೊರಬಂದಿದ್ದು, ಹಣಕಾಸು ಅಕ್ರಮ ವ್ಯವಹಾರದ ಜಾಡು ಹಿಡಿದು ಇದೀಗ ಇಡಿ ಅಧಿಕಾರಿಗಳು ಕಣಕ್ಕಿಳಿದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Source link

ವಿದೇಶಿ ಟಿ20 ಲೀಗ್​ಗೆ ಅಜಿಂಕ್ಯ ರಹಾನೆ ಪಾದಾರ್ಪಣೆ – Kannada News | Ajinkya Rahane Joins European T20 League: Marquee Player for Amsterdam Flames

ತಮ್ಮ ವೃತ್ತಿಜೀವನದಲ್ಲಿ 308 ಟಿ20 ಪಂದ್ಯಗಳನ್ನು ಆಡಿರುವ ರಹಾನೆ, ಮೊದಲ ಬಾರಿಗೆ ವಿದೇಶಿ ಟಿ20 ಲೀಗ್‌ನಲ್ಲಿ ಆಡಲಿದ್ದಾರೆ. ಇಲ್ಲಿಯವರೆಗೆ, ಟೀಮ್ ಇಂಡಿಯಾ ಮತ್ತು ಐಪಿಎಲ್ ಹೊರತುಪಡಿಸಿ, ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮಾತ್ರ ಆಡಿದ್ದಾರೆ(PC-PTI).

Source link

2050ರಲ್ಲಿ ಭಾರತ ಶ್ರೀಮಂತಿಕೆ ಸಾಧಿಸುವ ಮುನ್ನವೇ ಮುಪ್ಪಾಗಲಿದೆ: ಅಧ್ಯಯನ ವರದಿ – Kannada News | India may become aged before reaching high income level, says study report

ನವದೆಹಲಿ, ಆಗಸ್ಟ್ 7: ಭಾರತದ ಆರ್ಥಿಕತೆ (Indian Economy) ಸದ್ಯ ಇತರ ದೇಶಗಳಿಗಿಂತ ಹೆಚ್ಚಿನ ವೇಗದಲ್ಲಿ ಬೆಳೆಯುತ್ತಿದೆ. 2047ಕ್ಕೆ ಮುಂದುವರಿದ ದೇಶವಾಗುವ ಕನಸು ನನಸಾಗುತ್ತದೋ ಇಲ್ಲವೋ, ಆದರೆ ಭಾರತವು ಅಷ್ಟರೊಳಗೆ ವೃದ್ಧಾಪ್ಯಕ್ಕೆ ಕಾಲಿಟ್ಟಿರಬಹುದು ಎಂದು ಹೇಳಲಾಗುತ್ತಿದೆ. ಇತ್ತೀಚಿನ ಅಧ್ಯಯನವೊಂದರ ಪ್ರಕಾರ, 2050ರ ವೇಳೆಗೆ ದೇಶದ ಸುಮಾರು 70% ಹಿರಿಯ ನಾಗರಿಕರು ಗ್ರಾಮೀಣ ಭಾಗದಲ್ಲೇ ವಾಸಿಸಲಿದ್ದಾರೆ. ಪ್ರತೀ ಐವರಲ್ಲಿ ಒಬ್ಬರು ಹಿರಿಯ ನಾಗರಿಕರಿರಲಿದ್ದಾರಂತೆ.

ಟ್ರಾನ್ಸ್​ಫಾರ್ಮ್ ರೂರಲ್ ಇಂಡಿಯಾ (TRI) ಇಂದು ಶುಕ್ರವಾರ ಬಿಡುಗಡೆ ಮಾಡಿದ ಶ್ವೇತಪತ್ರದಲ್ಲಿ ಈ ಕೆಲ ಕುತೂಹಲಕಾರಿಯಾದ ಮತ್ತು ಆಘಾತಕಾರಿ ಎನಿಸುವ ಸಂಗತಿಗಳಿವೆ. 2050ರ ವೇಳೆಗೆ ಭಾರತದಲ್ಲಿ 34.7 ಕೋಟಿ ಜನರು ವೃದ್ಧರಾಗಿರುತ್ತಾರೆ. ಅಂದರೆ, ಅವರ ವಯಸ್ಸು 60 ವರ್ಷ ದಾಟಿರುತ್ತದೆ. ಅಂದಿನ ಜನಸಂಖ್ಯೆಯ ಶೇ. 20ರಷ್ಟು ಮಂದಿ ವೃದ್ಧರಿರುತ್ತಾರೆ. ಈ ವೃದ್ಧರಲ್ಲಿ ಬಹುತೇಕ ಮುಕ್ಕಾಲು ಭಾಗದಷ್ಟು ಜನರು ಗ್ರಾಮೀಣ ಭಾಗದಲ್ಲಿರುತ್ತಾರೆ ಎಂದು ಈ ವರದಿ ಹೇಳುತ್ತದೆ.

ಇದನ್ನೂ ಓದಿ: ಜುಲೈನಲ್ಲಿ ಇವಿ ಮಾರಾಟದಲ್ಲಿ ಹೊಸ ದಾಖಲೆ; ಒಂದೇ ತಿಂಗಳಲ್ಲಿ 3.28 ಲಕ್ಷ ಎಲೆಕ್ಟ್ರಿಕ್ ವಾಹನಗಳು ಸೇಲ್

ಧನಿಕರಾಗುವ ಮೊದಲೇ ವೃದ್ಧಾಪ್ಯ

ಅನೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತಮ್ಮ ಜನಸಂಖ್ಯೆ ವಯಸ್ಸಾಗುವ ಮುನ್ನವೇ ಆರ್ಥಿಕವಾಗಿ ಸಮೃದ್ಧಿ ಸಾಧಿಸಿದ್ದವು. ಆದರೆ ಭಾರತವು ಕಡಿಮೆ ಆದಾಯದ ಹಂತದಲ್ಲಿದ್ದಾಗಲೇ ಈ ಜನಸಂಖ್ಯಾ ಬದಲಾವಣೆಗೆ (Demographic Transition) ಒಳಪಡುತ್ತಿದೆ. ಭಾರತದ ಆರ್ಥಿಕತೆ ಇಷ್ಟೇ ವೇಗದಲ್ಲಿ ಸಾಗಿದರೆ ಮುಂದಿನ ಎರಡು ದಶಕದಲ್ಲಿ ದೇಶವು ಮೇಲ್ಮಧ್ಯಮ ಹಂತಕ್ಕೆ ಏರಬಹುದು ಅಷ್ಟೇ ಹೊರತು ಶ್ರೀಮಂತ ದೇಶಗಳ ತಲಾದಾಯ ಮಟ್ಟ ತಲುಪಲು ಸಾಧ್ಯವಾಗದೇ ಹೋಗಬಹುದು.

ಕುಟುಂಬ ವ್ಯವಸ್ಥೆ ಮತ್ತು ವಲಸೆ ಪ್ರಭಾವ

ಗ್ರಾಮೀಣ ಭಾಗಗಳಿಂದ ಯುವಕರು ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಹೋಗುತ್ತಿರುವುದು ಮತ್ತು ಅವಿಭಕ್ತ ಕುಟುಂಬಗಳು ಸಣ್ಣ ಕುಟುಂಬಗಳಾಗಿ ಬದಲಾಗುತ್ತಿರುವುದರಿಂದ, ಹಿರಿಯರಿಗೆ ಸಾಂಪ್ರದಾಯಿಕವಾಗಿ ಸಿಗುತ್ತಿದ್ದ ಕುಟುಂಬದ ಆರೈಕೆ ಮತ್ತು ಬೆಂಬಲ ಕಡಿಮೆಯಾಗುತ್ತಿದೆ ಎಂಬ ಸಂಗತಿಯನ್ನು ಟಿಆರ್​ಐ ಅಧ್ಯಯನ ವರದಿಯಲ್ಲಿ ಗುರುತಿಸಲಾಗಿದೆ.

ಇದನ್ನೂ ಓದಿ: ಆರ್ಥಿಕ ಸಂಕಷ್ಟದಲ್ಲೂ ವಿದೇಶಿಗರ ನೆರವಿನ ಹಸ್ತಕ್ಕೆ ಕೈಚಾಚದ ಬೆಂಗಳೂರು ಸ್ಟಾರ್ಟಪ್; ಭಾರತದ ಮೊದಲ ಎಂಆರ್​ಐ ನಿರ್ಮಿಸಿದವನ ಕಥೆ

ಆರೋಗ್ಯ ರಕ್ಷಣೆಯ ಅಗತ್ಯತೆ

ಅಸಾಂಕ್ರಾಮಿಕ ರೋಗಗಳು (Non-communicable diseases) ಹೆಚ್ಚಾಗುತ್ತಿದ್ದು, ಗ್ರಾಮೀಣ ಮಟ್ಟದಲ್ಲಿ ಹಿರಿಯರ ಆರೋಗ್ಯ ತಪಾಸಣೆ ಮತ್ತು ದಿನನಿತ್ಯದ ಆರೈಕೆಗೆ ಅನುಕೂಲವಾಗುವಂತೆ ಗ್ರಾಮೀಣ ಸಂಸ್ಥೆಗಳನ್ನು ಒಳಗೊಂಡ ‘ಸಮುದಾಯ ಆಧಾರಿತ ಆರೈಕೆ ಮಾದರಿ’ (Community-based care model) ರೂಪಿಸುವುದು ಅಗತ್ಯವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಜನಪದಕ್ಕೆ ಬೆರೆತ ರ್ಯಾಪ್, ‘ಸಿಟಿ ಲೈಟ್ಸ್’ ಸಿನಿಮಾದ ಹಾಡು ಕೇಳಿದಿರಾ? – Kannada News | New song released from City Lights Kannada movie

ವಿಜಯ್ ಕುಮಾರ್ (ದುನಿಯಾ ವಿಜಯ್) (Duniya Viji) ನಿರ್ದೇಶಿಸಿ, ದೊಡ್ಮನೆ ಕುಡಿ ವಿನಯ್ ರಾಜ್​​ಕುಮಾರ್ (Vinay Rajkumar) ನಾಯಕನಾಗಿ ನಟಿಸುತ್ತಿರುವ ‘ಸಿಟಿ ಲೈಟ್ಸ್’ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗಷ್ಟೆ ಸಿನಿಮಾದ ಹಾಡೊಂದು ಬಿಡುಗಡೆ ಆಗಿದೆ. ದುನಿಯಾ ವಿಜಯ್ ನಿರ್ದೇಶನ ಮಾಡಿರುವ ಸಿನಿಮಾದ ಹಾಡುಗಳು ವಿಭಿನ್ನವಾಗಿರುತ್ತವೆ, ಈ ಹಿಂದೆ ಅವರು ನಿರ್ದೇಶಿಸಿದ್ದ ‘ಭೀಮ’ ಮತ್ತು ‘ಸಲಗ’ ಸಿನಿಮಾಗಳಲ್ಲಿ ಹಾಡುಗಳು ಸಖತ್ ಹಿಟ್ ಆಗಿದ್ದವು. ಇದೀಗ ಅವರ ನಿರ್ದೇಶನದ ‘ಸಿಟಿ ಲೈಟ್ಸ್’ ಸಿನಿಮಾದ ಹಾಡು ಅವರ ಹಿಂದಿನ ಸಿನಿಮಾ ಹಾಡುಗಳಿಗಿಂತಲೂ ಬಹಳ ಭಿನ್ನವಾಗಿದ್ದು, ಜನಪದ ಹಾಡಿಗೆ ರ್ಯಾಪ್ ಟಚ್ ಅನ್ನು ನೀಡಲಾಗಿದೆ.

ಮಲೆ ಮಹದೇಶ್ವರ ಸ್ವಾಮಿಯ ‘ಕೆಂಡದೋಕುಳಿ’ ಜನಪದ ಹಾಡಿಗೆ ಹೊಸತನದ ಸ್ಪರ್ಷ ನೀಡಿ ಬಿಡುಗಡೆ ಮಾಡಲಾಗಿದೆ. ತಲೆ ತಲಮಾರುಗಳಿಂದ ಹಾಡಿಕೊಂಡು ಬಂದಿರುವ ಹಾಡಿಗೆ ಆಧುನಿಕ ಇಂಗ್ಲೀಷ್ ರ್ಯಾಪ್ ಅನ್ನು ಸಹ ಸೇರಿಸಲಾಗಿದೆ. ಜನಪದ ಹಾಡುಗಾರರಿಂದಲೇ ಸಂಗೀತ ನಿರ್ದೇಶಕ ಚರಣ್ ರಾಜ್ ಅವರು ‘ಕೆಂಡದೋಕುಳಿ’ ಹಾಡನ್ನು ಹಾಡಿಸಿರುವುದು ಮಾತ್ರವಲ್ಲದೆ, ಹಾಡಿಗೆ ಜನಪದ ವಾದ್ಯಗಳ ಜೊತೆಗೆ ಆಧುನಿಕ ವಾದ್ಯಗಳನ್ನು ಸಹ ಹಿನ್ನೆಲೆಯಲ್ಲಿ ಬಳಸಿದ್ದಾರೆ. ಈ ಹಾಡು ಮಾದೇಶ್ವರನ ಭಕ್ತರ ಜೊತೆಗೆ ಹೊಸ ತಲೆಮಾರಿನ ಜೆನ್​-ಜಿಗಳಿಗೂ ಹಿಡಿಸುವಂತಿದೆ.

ಈಗ ಯೂಟ್ಯೂಬ್​​ನಲ್ಲಿ ಬಿಡುಗಡೆ ಆಗಿರುವ ಹಾಡಿನ ವಿಡಿಯೋನಲ್ಲಿ, ‘ಸಿಟಿ ಲೈಟ್ಸ್’ ಸಿನಿಮಾದ ಮಾಸ್ ದೃಶ್ಯಗಳ ಚಿತ್ರೀಕರಣದ ತುಣುಕುಗಳನ್ನು ನೀಡಲಾಗಿದೆ. ನಿರ್ದೇಶಕ ದುನಿಯಾ ವಿಜಯ್ ಅವರು ಪ್ಯಾಷನೇಟ್ ಆಗಿ, ನಾಯಕ ವಿನಯ್ ಅವರಿಗೆ ನಟಿಸಿ ತೋರಿಸುತ್ತಿರು, ಆಕ್ಷನ್ ಮಾಡಿ ತೋರಿಸುತ್ತಿರುವ ದೃಶ್ಯಗಳು ಇವೆ. ಸಿನಿಮಾನಲ್ಲಿ ಆಕ್ಷನ್ ಯಾವ ರೀತಿ ಇರಲಿದೆ, ಮತ್ತು ವಿನಯ್ ಅವರು ವಿಧೇಯರಾಗಿ ನಿರ್ದೇಶಕರ ಆದೇಶ ಪಾಲಿಸುತ್ತಿರುವುದು ಕಾಣುತ್ತಿದೆ.

‘ಸಿಟಿ ಲೈಟ್ಸ್’ ಸಿನಿಮಾ ಆಕ್ಷನ್ ಭರಿತ ಪ್ರೇಮಕತೆ ಹೊಂದಿರುವ ಸಿನಿಮಾ ಆಗಿದ್ದು, ಬೆಂಗಳೂರಿನ ನಿಜ ಮುಖಗಳ ದರ್ಶನವನ್ನು ಸಿನಿಮಾ ಮಾಡಿಸಲಿದೆ. ಈ ಸಿನಿಮಾ ಮೂಲಕ ದುನಿಯಾ ವಿಜಯ್ ಅವರ ಪುತ್ರಿ ಮೋನಿಷಾ ನಾಯಕಿ ಆಗಿ ಚಿತ್ರರಂಗಕ್ಕೆ ಕಾಲಿರಿಸಿದ್ದಾರೆ. ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ, ವಿನಯ್ ರಾಜ್​​ಕುಮಾರ್, ‘ಇಬ್ಬರು ಮುಗ್ಧ ವ್ಯಕ್ತಿಗಳು ಅನಿರೀಕ್ಷಿತವಾಗಿ ನಗರಕ್ಕೆ ಬಂದಾಗ ಎದುರಿಸಬೇಕಾಗಿ ಬರುವ ಸವಾಲುಗಳು ಮತ್ತು ಅವರ ಜೀವನದಲ್ಲಿ ನಡೆಯುವ ತಿರುವುಗಳೇ ಈ ಸಿನಿಮಾದ ಮುಖ್ಯ ಕಥಾವಸ್ತು, ಇನ್ನು ಮಾದಪ್ಪನ ಹಾಡು ಹಾಗೂ ಮಹದೇಶ್ವರ ಬೆಟ್ಟದಲ್ಲಿ ಹಾಡು ಚಿತ್ರೀಕರಣ ಮಾಡಲು ಅವಕಅಶ ಸಿಕ್ಕಿದ್ದೆ ನನ್ನ ಪುಣ್ಯ’ ಎಂದರು.

ಇದನ್ನೂ ಓದಿ:‘ಶಾಂತಿ ಕ್ರಾಂತಿ’ ಸಿನಿಮಾದಲ್ಲಿ ನಟಿಸಿದ್ದ ಆ ಬಾಲಕಿ ಈಗ ಸ್ಟಾರ್ ನಟಿ

ತಮ್ಮ ಚೊಚ್ಚಲ ಅಭಿನಯದ ಕುರಿತು ಹಂಚಿಕೊಂಡ ಮೊನಿಷಾ, “ಅಭಿನಯದ ಸೂಕ್ಷ್ಮಗಳನ್ನು ಕಲಿಯಲು ಲಂಡನ್‌ನಲ್ಲಿ ನಟನಾ ತರಬೇತಿ ಪಡೆದಿದ್ದೇನೆ. ನನ್ನ ತಂದೆ ನನಗೆ ವಿಭಿನ್ನವಾದ ಪಾತ್ರವನ್ನು ನೀಡಿದ್ದು, ಆ ಪಾತ್ರಕ್ಕೆ ನ್ಯಾಯ ಒದಗಿಸಲು ಸಂಪೂರ್ಣ ಶ್ರಮ ಹಾಕಿದ್ದೇನೆ” ಎಂದರು. ಅಣ್ಣಾವ್ರ ಕುಟುಂಬದ ಕುಡಿಯನ್ನ ನಿರ್ದೇಶಿಸುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ನಿರ್ದೇಶಕ ವಿಜಯ್ ಕುಮಾರ್, ‘ನಾನು ಡಾ ರಾಜ್‌ಕುಮಾರ್ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದವನು. ಇಂದು ಅವರ ಮೊಮ್ಮಗನಿಗೆ ಆಕ್ಷನ್-ಕಟ್ ಹೇಳುತ್ತಿರುವುದು ನನಗೆ ಸಿಕ್ಕ ದೊಡ್ಡ ಗೌರವ ಹಾಗೂ ಅಪಾರ ಸಂತಸ ತಂದಿದೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version