ಪ್ರಯಾಣಿಕರ ಗಮನಕ್ಕೆ: ಆ 9ರಂದು ಈ ಮಾರ್ಗದಲ್ಲಿ ಮೆಟ್ರೋ ಸೇವೆ ತಾತ್ಕಾಲಿಕ ಸ್ಥಗಿತ – Kannada News | Purple Line Metro Services Between Baiyappanahalli and MG Road Temporary Suspended on August 9

ಬೆಂಗಳೂರು, ಆಗಸ್ಟ್​​ 07: ಆಗಸ್ಟ್ 9ರಂದು ಮೆಟ್ರೋ (Namma Metro) ನೇರಳೆ ಮಾರ್ಗದಲ್ಲಿ ಅಗತ್ಯ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಬೈಯಪ್ಪನಹಳ್ಳಿ ಮತ್ತು ಎಂ.ಜಿ. ರಸ್ತೆ ನಡುವೆ ಬೆಳಗ್ಗೆ 2 ಗಂಟೆಗಳ ಕಾಲ ತಾತ್ಕಾಲಿಕವಾಗಿ ಮೆಟ್ರೋ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್ (BMRCL) ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಟ್ರಿನಿಟಿ, ಎಂ.ಜಿ.ರಸ್ತೆ ಸೇರಿದಂತೆ 6 ನಿಲ್ದಾಣಗಳಲ್ಲಿ ಮೆಟ್ರೋ ಸಂಚಾರ ಇರುವುದಿಲ್ಲ.

ಮಾಧ್ಯಮ ಪ್ರಕಟಣೆಯಲ್ಲಿ ಏನಿದೆ?

ನಮ್ಮ ಮೆಟ್ರೋದ ನೇರಳೆ ಮಾರ್ಗದ ಸ್ವಾಮಿ ವಿವೇಕಾನಂದ ರಸ್ತೆ ಮತ್ತು ಇಂದಿರಾನಗರ ಮೆಟ್ರೋ ನಿಲ್ದಾಣಗಳ ನಡುವೆ ಅಗತ್ಯ ನಿರ್ವಹಣಾ ಕಾಮಗಾರಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು ಆಗಸ್ಟ್​​ 9ರಂದು ಅಂದರೆ ಭಾನುವಾರ ಕೈಗೊಳ್ಳಲಿದೆ.

ಬಿಎಂಆರ್​ಸಿಎಲ್​ ಟ್ವೀಟ್​

ಈ ಕಾಮಗಾರಿಯನ್ನು ಕೈಗೊಳ್ಳಲು ಅನುಕೂಲವಾಗುವಂತೆ, ಬೈಯಪ್ಪನಹಳ್ಳಿ ಮತ್ತು ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣಗಳ ನಡುವಿನ ರೈಲು ಸೇವೆಯನ್ನು ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಅಂದರೆ ಎರಡು ಗಂಟೆಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು. ಈ ಅವಧಿಯಲ್ಲಿ ಕೆಳಕಂಡ ಮಾರ್ಗಗಳಲ್ಲಿ ಮೆಟ್ರೋ ರೈಲು ಸೇವೆಗಳು ನಿಯಮಿತ ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸಲಿವೆ.

  • ಚಲ್ಲಘಟ್ಟದಿಂದ ಎಂ.ಜಿ. ರಸ್ತೆ
  • ಬೈಯಪ್ಪನಹಳ್ಳಿಯಿಂದ ವೈಟ್ ಫೀಲ್ಡ್ (ಕಾಡುಗೋಡಿ)
  • ಮಾದಾವರದಿಂದ ಸಿಲ್ಕ್ ಇನ್‌ಸ್ಟಿಟ್ಯೂಟ್​
  • ಆ‌ರ್.ವಿ. ರಸ್ತೆಯಿಂದ ಬೊಮ್ಮಸಂದ್ರ

ಇದನ್ನೂ ಓದಿ: ಆತ್ಮಹತ್ಯೆ ಸ್ಪಾಟ್​ ಆಗುತ್ತಿದೆಯಾ ಮೆಟ್ರೋ? ಈವರೆಗೆ ಪ್ರಾಣ ಕಳೆದುಕೊಂಡವರೆಷ್ಟು?

ಇನ್ನು ಬೈಯಪ್ಪನಹಳ್ಳಿ ಮತ್ತು ಎಂ.ಜಿ. ರಸ್ತೆ ನಡುವಿನ ಮಾರ್ಗವನ್ನು ಒಳಗೊಂಡಂತೆ ಸಂಪೂರ್ಣ ನೇರಳೆ ಮಾರ್ಗದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಮೆಟ್ರೋ ರೈಲು ಸೇವೆಗಳು ಎಂದಿನಂತೆ ಪುನರಾರಂಭಗೊಳ್ಳಲಿವೆ. ಪ್ರಯಾಣಿಕರು ಈ ತಾತ್ಕಾಲಿಕ ಸೇವಾ ಸ್ಥಗಿತವನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುವಂತೆ ಬಿಎಂಆರ್​ಸಿಎಲ್​ ಮನವಿ ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಟಾಕ್ಸಿಕ್’ ಸಿನಿಮಾದ ರನ್ಟೈಮ್ ಎಷ್ಟು? ಸೆನ್ಸಾರ್ ಬಗ್ಗೆ ಹರಿದಾಡುತ್ತಿದೆ ಸುದ್ದಿ – Kannada News | Yash’s Toxic movie runtime estimated to 3 hours 6 minutes

ಯಶ್ ನಟನೆಯ ‘ಟಾಕ್ಸಿಕ್’ (Toxic) ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇವೆ. ‘ಟಾಕ್ಸಿಕ್’ ಭಾರತದ ಬಹು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಸಿನಿಮಾನಲ್ಲಿ ಯಶ್ ಜೊತೆಗೆ ಹಲವು ಸ್ಟಾರ್ ನಟಿಯರು ನಾಯಕಿಯರಾಗಿ ನಟಿಸಿದ್ದು, ಈ ವರೆಗೆ ಬಿಡುಗಡೆ ಆಗಿರುವ ಸಿನಿಮಾದ ಟೀಸರ್, ಹಾಡುಗಳು, ಪೋಸ್ಟರ್ ಸಾಕಷ್ಟು ಗಮನ ಸೆಳೆದಿವೆ. ನಾಳೆ (ಆಗಸ್ಟ್ 08) ಸಿನಿಮಾದ ಟ್ರೈಲರ್ ರಿಲೀಸ್ ಆಗಲಿದ್ದು, ಇದರ ನಡುವೆ ಸಿನಿಮಾದ ರನ್​​ಟೈಮ್​​ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ.

‘ಟಾಕ್ಸಿಕ್’ ಸಿನಿಮಾದ ಅವಧಿ ಎಷ್ಟಿರಲಿದೆ ಎಂಬ ಬಗ್ಗೆ ಗಾಸಿಪ್ ಒಂದು ಹರಿದಾಡುತ್ತಿದೆ. ಸೆನ್ಸಾರ್​​ಗೂ ಮುಂಚೆ ಈ ಸಿನಿಮಾದ ಅವಧಿ 3 ಗಂಟೆ ಆರು ನಿಮಿಷ ಇದೆ ಎನ್ನಲಾಗುತ್ತಿದೆ. ಸಿನಿಮಾದ ಫೈನಲ್ ಕಟ್ ಅನ್ನು ಇತ್ತೀಚೆಗಷ್ಟೆ ಚಿತ್ರತಂಡ ರೆಡಿ ಮಾಡಿದ್ದು, ಡೈರೆಕ್ಟರ್ಸ್ ಕಟ್ 3 ಗಂಟೆ 6 ನಿಮಿಷ ಇದೆಯಂತೆ. ಆದರೆ ಸಿನಿಮಾ ಇನ್ನೂ ಸೆನ್ಸಾರ್ ಆಗಿಲ್ಲ. ಸೆನ್ಸಾರ್ ವೇಳೆ ಸಿನಿಮಾದ ಕೆಲ ದೃಶ್ಯಗಳಿಗೆ ಕತ್ತರಿ ಬೀಳುವ ಸಾಧ್ಯತೆ ದಟ್ಟವಾಗಿದ್ದು, ಈ ರನ್​​ಟೈಮ್ ಬದಲಾವಣೆ ಆಗಲಿದೆ.

‘ಟಾಕ್ಸಿಕ್’ ಸಿನಿಮಾ ಇನ್ನೂ ಸೆನ್ಸಾರ್ ಆಗಿಲ್ಲ. ಇನ್ನೆರಡು ದಿನಗಳಲ್ಲಿ ಸಿನಿಮಾವನ್ನು ಸೆನ್ಸಾರ್ ಮಂಡಳಿಗೆ ಕಳಿಸಲಾಗುತ್ತಿದೆ. ಸಿನಿಮಾ ಕನ್ನಡ ಮಾತ್ರವಲ್ಲದೆ ಹಲವು ಬೇರೆ ಬೇರೆ ಭಾಷೆಗಳಲ್ಲಿ ಸಹ ಬಿಡುಗಡೆ ಆಗುತ್ತಿರುವ ಕಾರಣದಿಂದಾಗಿ ತುಸು ಮುಂಚಿತವಾಗಿಯೇ ಎಲ್ಲ ಆವೃತ್ತಿಗಳನ್ನು ಸೆನ್ಸಾರ್​ ಮಾಡಿಸಲಾಗುತ್ತಿದೆ.

ಇದನ್ನೂ ಓದಿ:ಕೆವಿಎನ್ ಜೊತೆ ಸೇರಿ ಕರ್ನಾಟಕದಲ್ಲಿ ‘ಟಾಕ್ಸಿಕ್​’ ಡಿಸ್ಟ್ರಿಬ್ಯೂಟ್ ಮಾಡಲಿದ್ದಾರೆ ಯಶ್

‘ಟಾಕ್ಸಿಕ್’ ಸಿನಿಮಾದ ಸೆನ್ಸಾರ್​ ಮೇಲೆ ಚಿತ್ರರಂಗ ಮತ್ತು ಸಿನಿಮಾ ಪ್ರೇಮಿಗಳ ಗಮನ ನೆಟ್ಟಿದೆ. ಸಿನಿಮಾದ ಮೊದಲ ಟೀಸರ್ ಬಿಡುಗಡೆ ಆದ ಬಳಿಕ ಟೀಸರ್​​ನಲ್ಲಿರುವ ಹಸಿ-ಬಿಸಿ ದೃಶ್ಯಗಳಿಗೆ ಸಾಕಷ್ಟು ಟೀಕೆ ಎದುರಾಗಿತ್ತು. ಆ ಸಮಯದಲ್ಲಿ ಕೆಲವರು ಸೆನ್ಸಾರ್ ಮಂಡಳಿಗೆ ಪತ್ರ ಬರೆದು ಈ ಸಿನಿಮಾಕ್ಕೆ ಸೆನ್ಸಾರ್ ಪತ್ರ ನೀಡಬಾರದು ಎಂದಿದ್ದರು, ಇನ್ನು ಕೆಲವರು, ಹಸಿ ಬಿಸಿ ದೃಶ್ಯಗಳಿಗೆ ಕತ್ತರಿ ಹಾಕಬೇಕು ಎಂದಿದ್ದರು. ಇದೇ ಕಾರಣಕ್ಕೆ ಈ ಸಿನಿಮಾದ ಸೆನ್ಸಾರ್ ಪ್ರಕ್ರಿಯೆ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಚಿತ್ರತಂಡವೇ ಹೇಳಿರುವಂತೆ ‘ಟಾಕ್ಸಿಕ್’ ಸಿನಿಮಾ ‘ದೊಡ್ಡವರ ಕತೆ’ ಹಾಗಾಗಿ ಸಿನಿಮಾನಲ್ಲಿ ಸಾಕಷ್ಟು ಹಸಿ-ಬಿಸಿ ದೃಶ್ಯಗಳಿವೆ. ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ಸಿಗುವುದು ಖಾಯಂ ಆಗಿದೆ. ಆದರೆ ‘ಎ’ ಪ್ರಮಾಣ ಪತ್ರ ಕೊಟ್ಟ ಬಳಿಕವೂ ಕೆಲವು ದೃಶ್ಯಗಳಿಗೆ ಕತ್ತರಿ ಹಾಕುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು. ಇತ್ತೀಚೆಗಷ್ಟೆ ಬಿಡುಗಡೆ ಆದ ‘ಜನ ನಾಯಗನ್’ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ಕೊಟ್ಟರೂ ಕೆಲವು ದೃಶ್ಯಗಳಿಗೆ, ಕೆಲ ಸಂಭಾಷಣೆಗಳಿಗೆ ಕತ್ತರಿ ಹಾಕಿದ್ದನ್ನು ನೆನಪಿಸಿಕೊಳ್ಳಬಹುದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs SL: ಇಬ್ಬರು ಸ್ಟಾರ್ ಆಟಗಾರರಿಗೆ ಗಾಯ; ಮೊದಲ ಟೆಸ್ಟ್​ಗೆ ಅಲಭ್ಯ – Kannada News | India vs SL Test: Mendis, Nissanka Out – Big Blow for Sri Lanka’s Chances

ಭಾರತ ಮತ್ತು ಶ್ರೀಲಂಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಆಗಸ್ಟ್ 15 ರಂದು ಆರಂಭವಾಗಲಿದೆ. ಈ ಸರಣಿ ಆರಂಭಕ್ಕೂ ಮುನ್ನವೇ ಆತಿಥೇಯ ಶ್ರೀಲಂಕಾ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಇಬ್ಬರು ಅನುಭವಿ ಬ್ಯಾಟ್ಸ್‌ಮನ್​ಗಳು ಗಾಯದಿಂದ ಬಳಲುತ್ತಿದ್ದು, ಇವರಿಬ್ಬರು ಮೊದಲ ಟೆಸ್ಟ್​ ಪಂದ್ಯದಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ.

Source link

ಎಂಡಿಆರ್ ಶುಲ್ಕ ಕೇವಲ ಶೇ. 0.04? ದೊಡ್ಡ ವ್ಯಾಪಾರಿಗಳಿಗೆ ಮಾತ್ರವಾ ಈ ಶುಲ್ಕ? ಯಾರು ದೊಡ್ಡ ವ್ಯಾಪಾರಿಗಳು? – Kannada News | UPI MDR to be very nominal, large merchants to bear the fee, as per proposed framework

ನವದೆಹಲಿ, ಆಗಸ್ಟ್ 7: ನಿರ್ದಿಷ್ಟ ಯುಪಿಐ ವಹಿವಾಟುಗಳಿಗೆ ಎಂಡಿಆರ್ ಅಥವಾ ಮರ್ಚೆಂಟ್ ಡಿಸ್ಕೌಂಟ್ ರೇಟ್ ಶುಲ್ಕ ವಿಧಿಸಲು ಸರ್ಕಾರ ಸಜ್ಜಾಗಿದೆ ಎಂದು ಮೂಲಗಳಿಂದ ಮಾಹಿತಿ ಪಡೆದು ಬ್ಯುಸಿನೆಸ್ ಟುಡೆ ಎಕ್ಸ್​ಕ್ಲೂಸಿವ್ ವರದಿ ಪ್ರಕಟಿಸಿದೆ. ಈ ವರದಿ ಪ್ರಕಾರ ಯುಪಿಐ ವಹಿವಾಟುಗಳ ಸಂಬಂಧ ಸರ್ಕಾರ ಹಾಗೂ ಆರ್​ಬಿಐ ಹೊಸ ನೀತಿಯನ್ನು ರೂಪಿಸಲು ಚಿಂತನೆ ನಡೆಸಿವೆ. ದೊಡ್ಡ ವ್ಯಾಪಾರಿಗಳಿಗಷ್ಟೇ ಯುಪಿಐ ವಹಿವಾಟು ಮೇಲೆ ಎಂಡಿಆರ್ ಶುಲ್ಕ ಅನ್ವಯಿಸಬಹುದು. ಅದೂ ಬಹಳ ಅಲ್ಪ ಪ್ರಮಾಣದ ಶುಲ್ಕ ಇರಲಿದೆ ಎಂದು ಈ ವರದಿ ಹೇಳುತ್ತಿದೆ.

ದೊಡ್ಡ ವ್ಯಾಪಾರಿಗಳ ಮೇಲೆ ಎಂಡಿಆರ್ ಶುಲ್ಕ

ಪ್ರಸ್ತಾವಿತ ಹೊಸ ಚೌಕಟ್ಟಿನಡಿಯಲ್ಲಿ, ದೊಡ್ಡ ಪ್ರಮಾಣದ ವಹಿವಾಟು ನಡೆಸುವ ದೊಡ್ಡ ವ್ಯಾಪಾರಿಗಳಿಗೆ (Large Merchants) ಯುಪಿಐ ‘ಮರ್ಚೆಂಟ್ ಡಿಸ್ಕೌಂಟ್ ರೇಟ್’ (MDR – Merchant Discount Rate) ವಿಧಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: 2050ರಲ್ಲಿ ಭಾರತ ಶ್ರೀಮಂತಿಕೆ ಸಾಧಿಸುವ ಮುನ್ನವೇ ಮುಪ್ಪಾಗಲಿದೆ: ಅಧ್ಯಯನ ವರದಿ

ಸಣ್ಣ ವ್ಯಾಪಾರಿಗಳು (Small Merchants) ಹಾಗೂ ಸಾಮಾನ್ಯ ಗ್ರಾಹಕರಿಗೆ ಯುಪಿಐ ವಹಿವಾಟುಗಳು ಮೊದಲಿನಂತೆಯೇ ಉಚಿತವಾಗಿರಲಿವೆ.

ಡಿಜಿಟಲ್ ಪಾವತಿ ವ್ಯವಸ್ಥೆಯ ಸುಸ್ಥಿರತೆ: ಯುಪಿಐ ಪಾವತಿ ಮೂಲಸೌಕರ್ಯ ನಿರ್ವಹಣೆ ಮತ್ತು ಸುರಕ್ಷತೆಗಾಗಿ ಬ್ಯಾಂಕುಗಳು ಹಾಗೂ ಪಾವತಿ ಸೇವಾ ಪೂರೈಕೆದಾರರು (Payment Service Providers) ಎದುರಿಸುತ್ತಿರುವ ವೆಚ್ಚವನ್ನು ಭರಿಸಲು ಮತ್ತು ಈ ವ್ಯವಸ್ಥೆಯನ್ನು ಆರ್ಥಿಕವಾಗಿ ಸುಸ್ಥಿರಗೊಳಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.

ದೊಡ್ಡ ವ್ಯಾಪಾರಿಗಳೆಂದರೆ ಯಾರು? ಶೇ. 0.04 ಮಾತ್ರವಾ ಶುಲ್ಕ?

ವಾರ್ಷಿಕವಾಗಿ 4 ಕೋಟಿ ರೂಗಿಂತಲೂ ಹೆಚ್ಚಿನ ಪ್ರಮಾಣದ ವ್ಯಾಪಾರ ಹೊಂದಿರುವ ದೊಡ್ಡ ವ್ಯಾಪಾರಿಗಳಿಗೆ ಈ ಎಂಡಿಆರ್ ಶುಲ್ಕ ವಿಧಿಸಬಹುದು ಎನ್ನಲಾಗುತ್ತಿದೆ. ಆದರೆ, ಈ ಶುಲ್ಕ ಬಹಳ ಕಡಿಮೆ ಪ್ರಮಾಣದಲ್ಲಿರಲಿದೆ. ಶೇ. 0.04 ಎಂಡಿಆರ್ ಶುಲ್ಕದ ಪ್ರಸ್ತಾಪ ಇದೆ. ಅಂದರೆ, ನೂರು ರುಪಾಯಿಗೆ 4 ಪೈಸೆ ಮಾತ್ರ. ಒಂದು ಲಕ್ಷ ರುಪಾಯಿ ಟ್ರಾನ್ಸಾಕ್ಷನ್​ಗೆ 40 ರುಪಾಯಿ ಶುಲ್ಕ ಇರುತ್ತದೆ ಎನ್ನಲಾಗಿದೆ.

ಇದನ್ನೂ ಓದಿ: ಆಧಾರ್ ಕಾರ್ಡ್​​ನಲ್ಲಿ ಎರಡು ಬಾರಿ ಹೆಸರು ತಿದ್ದುಪಡಿ ಮಾಡಿದ್ರೂ ತಪ್ಪಿದ್ಯಾ? ಹಾಗಾದ್ರೆ ಹೀಗೆ ಮಾಡಿ

ಯುಪಿಐ ವಹಿವಾಟು ಮೇಲೆ ಎಂಡಿಆರ್ ಶುಲ್ಕ ವಿಧಿಸುವ ಸಾಧ್ಯತೆ ಬಗ್ಗೆ ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೂ ಇತ್ತೀಚೆಗಷ್ಟೇ ಸುಳಿವು ನೀಡಿರುವುದುಂಟು. ಸಾಮಾನ್ಯ ಯುಪಿಐ ಬಳಕೆದಾರರಿಗೆ ಶುಲ್ಕ ಇರುವುದಿಲ್ಲವಾದರೂ ದೊಡ್ಡ ವ್ಯಾಪಾರಿಗಳು ತಮ್ಮ ಲಾಭನಷ್ಟವನ್ನು ಗ್ರಾಹಕರ ಮೇಲೆ ಹೊರಿಸುವ ಸಾಧ್ಯತೆಯಂತೂ ಇದ್ದೇ ಇರುತ್ತದೆ. ಯಾರಿಗೇ ಎಂಡಿಆರ್ ಶುಲ್ಕ ವಿಧಿಸಿದರೂ ಅದು ಅಂತಿಮವಾಗಿ ಜನಸಾಮಾನ್ಯರ ಮೇಲೆ ಪರಿಣಾಮ ಬೀರಬಹುದು. ಆದರೂ ಯುಪಿಐ ಪೇಮೆಂಟ್ ಇಕೋಸಿಸ್ಟಂನ ಉಳಿವಿಗಾಗಿ ಯಾವುದಾದರೂ ಶುಲ್ಕ ಹಾಕುವುದು ಅನಿವಾರ್ಯ ಎನ್ನುವ ಅಭಿಪ್ರಾಯಗಳಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Randstad 2026: ಭಾರತದ ಟಾಪ್ 10 ಉದ್ಯೋಗದಾತ ಕಂಪನಿಗಳ ಪಟ್ಟಿ ಪ್ರಕಟ; ಗೂಗಲ್, ಟಾಟಾ ಗ್ರೂಪ್‌ಗೆ ಅಗ್ರಸ್ಥಾನ! – Kannada News | Randstad 2026: Google, Tata, Amazon Top India’s Best Employers; WLB Key to Retention

ರ್ಯಾಂಡ್‌ಸ್ಟಾಡ್( Randstad) ಎಂಪ್ಲಾಯರ್ ಬ್ರಾಂಡ್ ರಿಸರ್ಚ್ 2026ರ ವರದಿಯ ಪ್ರಕಾರ, ಉದ್ಯೋಗಿಗಳನ್ನು ಆಕರ್ಷಿಸುವಲ್ಲಿ ಗೂಗಲ್ ಪ್ರಥಮ ಸ್ಥಾನದಲ್ಲಿದ್ದರೆ, ಟಾಟಾ ಗ್ರೂಪ್ ಎರಡನೇ ಸ್ಥಾನ ಮತ್ತು ಅಮೆಜಾನ್ ಮೂರನೇ ಸ್ಥಾನವನ್ನು ಪಡೆದುಕೊಂಡಿವೆ. ತಂತ್ರಜ್ಞಾನ, ಉತ್ಪಾದನೆ ಮತ್ತು ಸೇವಾ ವಲಯಗಳ ಪ್ರಮುಖ ಕಂಪನಿಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಪ್ರಪಂಚದಾದ್ಯಂತದ 34 ಮಾರುಕಟ್ಟೆಗಳಲ್ಲಿ 1.7 ಮಿಲಿಯನ್ ಹಾಗೂ ಭಾರತದಲ್ಲಿ ಸುಮಾರು 3,500 ಉದ್ಯೋಗಿಗಳ ಅಭಿಪ್ರಾಯಗಳನ್ನು ಆಧರಿಸಿ ಈ ಅಧ್ಯಯನ ನಡೆಸಲಾಗಿದೆ. ಜಾಗತಿಕವಾಗಿ ಇದು 26ನೇ ಅಧ್ಯಯನವಾಗಿದ್ದರೆ, ಭಾರತದಲ್ಲಿ ನಡೆಸಲಾದ 16ನೇ ಆವೃತ್ತಿಯಾಗಿದೆ.

ಭಾರತದ ಟಾಪ್ 10 ಅತ್ಯುತ್ತಮ ಉದ್ಯೋಗದಾತರು:

ರಾಂಡ್‌ಸ್ಟಾಡ್ ವರದಿಯ ಪ್ರಕಾರ ಭಾರತದ ಅತ್ಯಂತ ಆಕರ್ಷಕ ಉದ್ಯೋಗದಾತ ಕಂಪನಿಗಳ ಪಟ್ಟಿಯಲ್ಲಿ ಗೂಗಲ್, ಟಾಟಾ ಗ್ರೂಪ್, ಅಮೆಜಾನ್, ಸ್ಯಾಮ್‌ಸಂಗ್ ಇಂಡಿಯಾ, ಇನ್ಫೋಸಿಸ್, ರಿಲಯನ್ಸ್ ಇಂಡಸ್ಟ್ರೀಸ್, ಐಟಿಸಿ ಗ್ರೂಪ್, ಹಿಂದೂಸ್ತಾನ್ ಯೂನಿಲಿವರ್, ಮಹೀಂದ್ರಾ & ಮಹೀಂದ್ರಾ ಮತ್ತು ಡೆಲ್ ಟೆಕ್ನಾಲಜೀಸ್ ಸೇರಿವೆ. ವಿಶೇಷವೆಂದರೆ ಈ ಟಾಪ್ 10 ಪಟ್ಟಿಯಲ್ಲಿ ಐದು ಭಾರತೀಯ ಕಂಪನಿಗಳು ಸ್ಥಾನ ಪಡೆದಿರುವುದು ಗಮನಾರ್ಹ. ಇದು ದೇಶೀಯ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಉತ್ತಮ ಕೆಲಸದ ಸಂಸ್ಕೃತಿಯನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿವೆ ಎಂಬುದನ್ನು ತೋರಿಸುತ್ತದೆ.

ಉದ್ಯೋಗಿಗಳು ಕಂಪನಿಗಳನ್ನು ಬದಲಾಯಿಸಲು ಪ್ರಮುಖ ಕಾರಣಗಳು:

ವರದಿಯ ಪ್ರಕಾರ, ಭಾರತೀಯ ಉದ್ಯೋಗಿಗಳು ಉದ್ಯೋಗ ಬದಲಾಯಿಸಲು ಮುಖ್ಯ ಕಾರಣ ಕೆಲಸ ಮತ್ತು ಜೀವನದ ನಡುವಿನ ಸಮತೋಲನದ (Work-Life Balance) ಕೊರತೆಯಾಗಿದೆ. ಸುಮಾರು ಶೇಕಡಾ 49 ರಷ್ಟು ಉದ್ಯೋಗಿಗಳು ತಮ್ಮ ಕೆಲಸ-ಜೀವನದ ಸಮತೋಲನವು ಉತ್ತಮವಾಗಿಲ್ಲದಿದ್ದರೆ ಉದ್ಯೋಗಗಳನ್ನು ಬದಲಾಯಿಸುವುದಾಗಿ ಹೇಳಿದ್ದಾರೆ. ಇದರ ಜೊತೆಗೆ ಶೇಕಡಾ 42 ರಷ್ಟು ಜನರು ವೃತ್ತಿ ಬೆಳವಣಿಗೆಯ ಅವಕಾಶಗಳ ಕೊರತೆಯನ್ನು ಹಾಗೂ ಶೇಕಡಾ 41 ರಷ್ಟು ಜನರು ಕಡಿಮೆ ಸಂಬಳ ಮತ್ತು ಸವಲತ್ತುಗಳನ್ನು ಕಾರಣವಾಗಿ ನೀಡಿದ್ದಾರೆ. ಮಿಲೇನಿಯಲ್‌ಗಳಲ್ಲಿ ಶೇಕಡಾ 43 ರಷ್ಟು ಜನರು ಉತ್ತಮ ಬೆಳವಣಿಗೆಯ ಅವಕಾಶಗಳು ಲಭ್ಯವಿಲ್ಲದಿದ್ದರೆ ಉದ್ಯೋಗ ಬದಲಾಯಿಸಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಜಾಬ್ ಇಂಟರ್‌ವ್ಯೂಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಸಿಂಪಲ್​ ಟಿಪ್ಸ್​ ಇಲ್ಲಿದೆ

ಉದ್ಯೋಗಿಗಳ ಬದಲಾಗುತ್ತಿರುವ ಮನಸ್ಥಿತಿ ಮತ್ತು ಹೊಸ ಅಗತ್ಯಗಳು:

2020 ರ ನಂತರ ಉದ್ಯೋಗಿಗಳ ಆಲೋಚನೆಯಲ್ಲಿ ಗಮನಾರ್ಹ ಬದಲಾವಣೆಯಾಗಿದೆ ಎಂದು ರ್ಯಾಂಡ್‌ಸ್ಟಾಡ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ನಾರಾಯಣ್ ಅಯ್ಯರ್ ತಿಳಿಸಿದ್ದಾರೆ. ಉದ್ಯೋಗಿಗಳು ಕೇವಲ ಸಂಬಳ ಮತ್ತು ಸವಲತ್ತುಗಳನ್ನಷ್ಟೇ ನೋಡದೆ ಒಟ್ಟಾರೆ ಕೆಲಸದ ಅನುಭವ, ಉತ್ತಮ ಕೆಲಸದ ವಾತಾವರಣ, ವೃತ್ತಿ ಅಭಿವೃದ್ಧಿ, ಉದ್ಯೋಗ ಭದ್ರತೆ ಹಾಗೂ ಹೊಂದಿಕೊಳ್ಳುವ ಕೆಲಸದ ಅಭ್ಯಾಸಗಳನ್ನು ಪರಿಗಣಿಸುತ್ತಿದ್ದಾರೆ. ಪ್ರಸ್ತುತ ಮುಂದಿನ ಆರು ತಿಂಗಳಲ್ಲಿ ಸುಮಾರು ಅರ್ಧದಷ್ಟು ಉದ್ಯೋಗಿಗಳು ಕೆಲಸ ಬದಲಾಯಿಸುವ ಆಲೋಚನೆಯಲ್ಲಿದ್ದು, ಸಂಸ್ಥೆಗಳು ದೈನಂದಿನ ಕೆಲಸದ ಅನುಭವ ಮತ್ತು ಉದ್ಯೋಗಿ ತೃಪ್ತಿಯ ಮೇಲೆಯೂ ಗಮನಹರಿಸಬೇಕಾದ ಅಗತ್ಯವಿದೆ.

ಡಿಜಿಟಲ್ ವೃತ್ತಿಪರರ ವಿಶಿಷ್ಟ ಆದ್ಯತೆಗಳು:

ಡಿಜಿಟಲ್ ವಲಯದಲ್ಲಿ ಕೆಲಸ ಮಾಡುವ ಹೊಸ ಪೀಳಿಗೆಯ ಉದ್ಯೋಗಿಗಳು ಇತರ ಉದ್ಯೋಗಿಗಳಿಗೆ ಹೋಲಿಸಿದರೆ ವಿಭಿನ್ನ ಆದ್ಯತೆಗಳನ್ನು ಹೊಂದಿದ್ದಾರೆ ಎಂದು ವರದಿ ಸ್ಪಷ್ಟಪಡಿಸಿದೆ. ಈ ವಿಭಾಗದ ಶೇಕಡಾ 73 ರಷ್ಟು ವೃತ್ತಿಪರರು ಉತ್ತಮ ಸಂಬಳವನ್ನು ಪ್ರಮುಖ ಅಂಶವೆಂದು ಪರಿಗಣಿಸಿದರೆ, ಶೇಕಡಾ 55 ರಷ್ಟು ಉದ್ಯೋಗಿಗಳು ವೃತ್ತಿಜೀವನದ ಪ್ರಗತಿಗೆ ಅವಕಾಶಗಳಿಲ್ಲದಿದ್ದರೆ ಉದ್ಯೋಗ ತೊರೆಯುವುದಾಗಿ ಹೇಳಿದ್ದಾರೆ. ಹೊಸ ಪೀಳಿಗೆಯ ಉದ್ಯೋಗಿಗಳು ತ್ವರಿತ ವೃತ್ತಿ ಬೆಳವಣಿಗೆ, ಹೊಸ ಕೌಶಲ್ಯಗಳನ್ನು ಕಲಿಯುವ ಅವಕಾಶಗಳು ಮತ್ತು ಉತ್ತಮ ಕೆಲಸದ ಸಂಸ್ಕೃತಿಯನ್ನು ನಿರೀಕ್ಷಿಸುತ್ತಿದ್ದಾರೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

ಆ. 14ರ ಬದಲು ಇಂದೇ ರಾಜೀನಾಮೆ ನೀಡಿದ್ದೇಕೆ ಸಭಾಪತಿ?: ಸತ್ಯ ಬಿಚ್ಚಿಟ್ಟ ಬಸವರಾಜ ಹೊರಟ್ಟಿ – Kannada News | ‘Resigned Early to Avoid No Confidence Motion’: Basavaraj Horatti Reveals Truth Behind Sudden Resignation

ಆ. 14ರ ಬದಲು ಇಂದೇ ರಾಜೀನಾಮೆ ನೀಡಿದ್ದೇಕೆ ಸಭಾಪತಿ?Image Credit source: Tv9 Kannada

ಬೆಂಗಳೂರು, ಆಗಸ್ಟ್​​ 07: ಕರ್ನಾಟಕ ವಿಧಾನ ಪರಿಷತ್​​ಗೆ ನೂತನ ಸಭಾಪತಿಯಾಗಿ ಸಲೀಂ ಅಹ್ಮದ್​​ ಹೆಸರನ್ನು ಎಐಸಿಸಿ ಘೋಷಣೆ ಮಾಡಿದ ಬಳಿಕ ನಡೆದ ರಾಜಕೀಯ ಬೆಳವಣಿಗಳ ನಡುವೆ, ಸಭಾಪತಿ ಸ್ಥಾನಕ್ಕೆ ಆಗಸ್ಟ್​​ 14ರಂದು ರಾಜೀನಾಮೆ ನೀಡೋದಾಗಿ ಬಸವರಾಜ ಹೊರಟ್ಟಿ ಘೋಷಿಸಿದ್ದರು. ಆದರೆ ಅಚ್ಚರಿಯ ಬೆಳವಣಿಗೆಗಳ ನಡುವೆ ಇಂದೇ ಅವರು ತಮ್ಮ ಹುದ್ದೆ ತೊರೆದಿದ್ದಾರೆ. ಸರ್ಕಾರದಿಂದ ಅವರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬ ವಿಪಕ್ಷಗಳ ಆರೋಪಗಳ ನಡುವೆಯೂ, ಸ್ವ ಇಚ್ಛೆಯಿಂದ ಹುದ್ದೆ ತೊರೆಯುತ್ತಿರೋದಾಗಿ ಅವರು ತಿಳಿಸಿದ್ದಾರೆ.

ಇವತ್ತೇ ಹೊರಟ್ಟಿ ರಾಜೀನಾಮೆ ಯಾಕೆ?

ಸಿಎಂ ಮತ್ತುಕೆಪಿಸಿಸಿ ಅಧ್ಯಕ್ಷರು ಇವತ್ತೇ ರಾಜೀನಾಮೆ‌ ಕೊಡಿ ಎಂದ ಕಾರಣ ಕೊಟ್ಟಿದ್ದೇನೆ. ಯಾವಾಗ ಕೊಟ್ರು ಒಂದೇ, ಹಾಗಾಗಿ ಇಂದೇ ರಾಜೀನಾಮೆ ಕೊಟ್ಟೆ. ಪರಿಷತ್​ ಸಭಾಪತಿಯಾಗಿ ಏನು ಕೆಲಸ ಮಾಡಬೇಕೋ ಮಾಡಿದ್ದೇನೆ. ರಾಜೀನಾಮೆ ಕೊಡಲಿಲ್ಲ ಅಂದ್ರೆ ಅವಿಶ್ವಾಸ ನಿರ್ಣಯ ಮಂಡಿಸುತ್ತಿದ್ದರು. ಹಂಗಾಮಿ ಸಭಾಪತಿ ಮಾಡ್ತಾರೋ ಬಿಡ್ತಾರೋ ಅವರಿಗೆ ಬಿಟ್ಟಿದ್ದು ಎಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸಿಗರ ಮನವೊಲಿಕೆಗೆ ಮಣಿದ ಬಸವರಾಜ ಹೊರಟ್ಟಿ: ಸಭಾಪತಿ ಸ್ಥಾನಕ್ಕೆ ರಾಜೀನಾಮೆ

ರಾಜೀನಾಮೆಗೂ ಮುನ್ನ ಸಿದ್ದರಾಮಯ್ಯ ಅವರ ಜೊತೆ ಮಾತನಾಡಿದ್ದೇನೆ. ಏನು ಮಾಡ್ತೀಯಾ ನೋಡಪ್ಪ ಎಂದು ಅವರು ಹೇಳಿದ್ದರು. ವಿಧಾನಪರಿಷತ್​ನಲ್ಲಿ ನಾನು 10-12 ಸಭಾಪತಿಗಳನ್ನು ನೋಡಿದ್ದೇನೆ. ನಾನೂ ಸಭಾಪತಿ ಆಗಿ ಎಲ್ಲಾ ಕಾರ್ಯ ಕಲಾಪಗಳನ್ನು ಮಾಡಿದ್ದೇನೆ. ಸದನದಲ್ಲಿ ಎಲ್ಲರಿಗೂ ಅವಕಾಶ ನೀಡಿದ್ದೇನೆ. ರಾತ್ರಿ 2 ಗಂಟೆಯವರೆಗೂ ಸದನ ನಡೆಸಿರುವ ಉದಾಹರಣೆ ಇದೆ ಎಂದವರು ಹೇಳಿದ್ದಾರೆ. ಅಧಿಕಾರ ಪೂರ್ಣಗೊಳ್ಳದೆ ಮಧ್ಯದಲ್ಲಿಯೇ ಸ್ಥಾನ ಬಿಡುವಾಗ ನೋವು ಸಹಜ. ಆಕಸ್ಮಿಕ ಸಿನಿಮಾ ನೋಡಿದ್ದೆ, ಅದೇ ರೀತಿ ಈಗ ಆಗಿದೆ ಎಂದವರು ಬೇಸರ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:16 pm, Fri, 7 August 26

Source link

ದೆಹಲಿಯಲ್ಲಿ ಭಾರೀ ಮಳೆ; ರಸ್ತೆಯಲ್ಲಿ ನಿಂತ ನೀರಲ್ಲಿ ಈಜಾಡಿದ ಮಕ್ಕಳು – Kannada News | Delhi roads turn into water parks after the rain Children seen Swimming around

ನವದೆಹಲಿ, ಆಗಸ್ಟ್ 7: ದೆಹಲಿಯಲ್ಲಿ (Delhi Rains) ಇಂದು ಸುರಿದ ಭಾರೀ ಮಳೆಯಿಂದ ಪ್ರಮುಖ ರಸ್ತೆಗಳು ಜಲಾವೃತವಾಗಿವೆ. ಇದು ಜನಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದೆ. ರಸ್ತೆಯ ತುಂಬ ನಿಂತಿದ್ದ ಮಳೆನೀರಿನಲ್ಲಿ ಹಾರಿದ ಮಕ್ಕಳು ಈಜಾಡಿದ್ದಾರೆ. ಈ ವೀಕೆಂಡ್​​ನಲ್ಲಿ ದೆಹಲಿಯಲ್ಲಿ ಮಳೆಯ ತೀವ್ರತೆ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.

ದಕ್ಷಿಣ ದೆಹಲಿಯ ಮೆಹ್ರೌಲಿ-ಬದರ್‌ಪುರ (MB) ರಸ್ತೆಯ ವಾಯುಸೇನಾ ಬಾದ್ (ಏರ್ ಫೋರ್ಸ್ ಸ್ಟೇಷನ್) ಬಳಿ 3ರಿಂದ 4 ಅಡಿಗಳಷ್ಟು ನೀರು ಶೇಖರಣೆಯಾಗಿದ್ದು, ಆ ಮಾರ್ಗವು ನದಿಯಂತಾಗಿತ್ತು. ಜಲಾವೃತಗೊಂಡ ಭಾಗವನ್ನು ದಾಟಲು ಮಿಲಿಟರಿ ಸಿಬ್ಬಂದಿ ಹೆವಿ ಟ್ರಕ್‌ಗಳನ್ನು ಬಳಸಿ ಜನರಿಗೆ ಸಹಾಯ ಮಾಡುತ್ತಿರುವುದು ಕಂಡುಬಂದಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೆರೆಯಲ್ಲಿ ಶವಸಂಸ್ಕಾರದ ಹರಸಾಹಸ: ಹರಿವ ನದಿಯಲ್ಲೇ ಟ್ರ್ಯಾಕ್ಟರ್ ಓಡಿಸಿ ಅಂತ್ಯಕ್ರಿಯೆ ನೆರವೇರಿಸಿದ ಜನರು – Kannada News | Floods Force Family to Use Tractor for Cremation Amid Flowing River

ಕಲಬುರಗಿ, ಆಗಸ್ಟ್​​ 07: ಜಿಲ್ಲೆಯ ಸೇಡಂನಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಶವ ಸಂಸ್ಕಾರಕ್ಕೂ (funeral) ಜನರು ಪರದಾಡುವಂತಹ ದುಸ್ಥಿತಿ ನಿರ್ಮಾಣವಾಗಿದೆ. ಸೇಡಂ ತಾಲೂಕಿನಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಮಲಾವತಿ ನದಿಯಲ್ಲೇ ಜೀವವನ್ನು ಪಣಕ್ಕಿಟ್ಟು ಟ್ರ್ಯಾಕ್ಟರ್ ಓಡಿಸುವ ಮೂಲಕ ಮೃತದೇಹವನ್ನು ಸಾಗಿಸಿ ಅಂತ್ಯಕ್ರಿಯೆ ನೆರವೇರಿಸಿದ ಘಟನೆ ಬೆಳಕಿಗೆ ಬಂದಿದೆ.

ನಡೆದಿದ್ದೇನು?

ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣಪ್ರಕಾಶ್ ಪಾಟೀಲ್ ತವರು ಕ್ಷೇತ್ರ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನಲ್ಲಿ ಈ ಘಟನೆ ನಡೆದಿದೆ. ಕಳೆದ ಎರಡು ದಿನಗಳ ಹಿಂದೆ ಸೇಡಂ ಪಟ್ಟಣದ ಪುರಸಭೆ ಮಾಜಿ ಸದಸ್ಯ, ಮಾದಿಗ ಸಮಾಜದ ಮುಖಂಡ ರಾಜು ಕಾಳಗಿಕರ್ ಅಕಾಲಿಕ ನಿಧನ ಹೊಂದಿದರು. ಪಟ್ಟಣದ ಬಸವನಗರದಲ್ಲಿ ಸಾರ್ವಜನಿಕ ಅಂತಿಮ ದರ್ಶನ ಬಳಿಕ ಕಮಲಾವತಿ ನದಿಯಾಚೆ ಇರುವ ಮಾದಿಗ ಸಮಾಜದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲು ಕುಟುಂಬಸ್ಥರು ಮತ್ತು ಸ್ನೇಹಿತರು ನಿರ್ಧರಿಸಿದ್ದರು.

ಇದನ್ನೂ ಓದಿ: ಕಾರ್ಕಳದಲ್ಲಿ ವಯನಾಡು ಮಾದರಿ ದುರಂತದ ಭೀತಿ: ಗುಡ್ಡಕುಸಿತದ ಆತಂಕದಲ್ಲಿ ಗ್ರಾಮಸ್ಥರು!

ಮೃತದೇಹ ಸಾಗಾಟಕ್ಕೆ ಅಡ್ಡಿಯಾಗಿದ್ದು, ಪಟ್ಟಣ ಹೊರವಲಯದ ಕಮಲಾವತಿ ನದಿ. ಸದ್ಯ ಕಮಲಾವತಿ ನದಿ ತುಂಬಿ ಹರಿಯುತ್ತಿದ್ದು, ಟ್ರ್ಯಾಕ್ಟರ್‌ನಲ್ಲಿ ಮೃತ ದೇಹವಿಟ್ಟುಕೊಂಡು ನದಿಯಲ್ಲೇ ಟ್ರ್ಯಾಕ್ಟರ್ ಓಡಿಸಿದ್ದಾರೆ. ಅಲ್ಲದೇ ಅಂತ್ಯಕ್ರಿಯೆಗೆ ಬಂದವರು ಕೂಡ ಕೈ‌ ಕೈ ಹಿಡಿದು ನದಿ ದಾಟಿದ್ದಾರೆ. ಬಳಿಕ ರುದ್ರಭೂಮಿಯಲ್ಲಿ ರಾಜು ಕಾಗಿಳಕರ್‌ರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

85 ಲಕ್ಷ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಒಪ್ಪಿಗೆ

ಇನ್ನು ಸೇಡಂ ಪಟ್ಟಣ ಹೊರವಲಯದ ಕಮಲಾವತಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಬೇಕೆಂದು ಆಗ್ರಹಿಸಿ ಸೇಡಂ ನಾಗರಿಕರು ಸಾಕಷ್ಟು ಬಾರಿ ಪ್ರತಿಭಟನೆ ನಡೆಸಿದ ಪರಿಣಾಮ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ 85 ಲಕ್ಷ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿತ್ತು. ಅದರಂತೆ ಸೇತುವೆ ನಿರ್ಮಾಣ ಟೆಂಡರ್ ಪ್ರಕ್ರಿಯೆ ಸಹ ಪೂರ್ಣಗೊಂಡಿದೆ.

ಸೇತುವೆ ನಿರ್ಮಾಣ ಮಾಡದೆ ನಿರ್ಲಕ್ಷ್ಯ

ನದಿಯಲ್ಲಿ ಅಪಾರ ಪ್ರಮಾಣ ನೀರು ಇರುವ ನೆಪವೊಡ್ಡಿ ಅಧಿಕಾರಿಗಳು ಸೇತುವೆ ನಿರ್ಮಾಣಕ್ಕೆ ಕಾಲಹರಣ ಮಾಡುತ್ತಿದ್ದಾರೆ ಅಂತಾ ಸೇಡಂ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಮಳೆಗಾಲವಲ್ಲದೆ ಚಳಿಗಾಲ ಹಾಗೂ ಬೇಸಿಗೆಯಲ್ಲೂ ಸೇತುವೆ ನಿರ್ಮಾಣ ಮಾಡದೆ ನಿರ್ಲಕ್ಷ್ಯ ವಹಿಸಿರುವುದರಿಂದ ಪ್ರತಿವರ್ಷವೂ ಇದೇ ರೀತಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: ಕಬಿನಿ ನದಿ ಪಾತ್ರದಲ್ಲಿರುವ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚನೆ

ಆಧುನಿಕ ಯುಗದಲ್ಲೂ ಶವಸಂಸ್ಕಾರಕ್ಕಾಗಿ ಜನರು ಇಷ್ಟೊಂದು ಹರಸಾಹಸ ಪಡುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಇನ್ನಾದರೂ ಸಚಿವ ಡಾ ಶರಣಪ್ರಕಾಶ್ ಪಾಟೀಲ್ ಕಮಲಾವತಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಿ ಜನರ ಬಹುದಿನಗಳ ಬೇಡಿಕೆ ಈಡೇರಿಸುತ್ತಾರಾ ಕಾದು ನೋಡಬೇಕಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸಿಡಿಲು ಬಡಿದು 24 ವರ್ಷದ ಫುಟ್ಬಾಲ್ ಆಟಗಾರ ಸಾವು; ದಾರುಣ ಘಟನೆ ಕ್ಯಾಮರಾದಲ್ಲಿ ಸೆರೆ – Kannada News | Thai Footballer Sofwan Awe Dies from Lightning Strike Mid Match: Viral Video

ಸಿಡಿಲು ಬಡಿದು 24 ವರ್ಷದ ಯುವ ಫುಟ್ಬಾಲ್ ಆಟಗಾರ (football player) ಸಾವನ್ನಪ್ಪಿರುವ ದಾರುಣ ಘಟನೆ ಭಾರತದ ನೆರೆಯ ರಾಷ್ಟ್ರ ಥೈಲ್ಯಾಂಡ್​ನಲ್ಲಿ ನಡೆದಿದೆ. ಈ ಅವಘಡದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನಿಜಕ್ಕೂ ಹೃದಯವಿದ್ರಾವಕವಾಗಿದೆ. ದಕ್ಷಿಣ ಥೈಲ್ಯಾಂಡ್‌ನಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ಪಂದ್ಯದ ಸಂದರ್ಭದಲ್ಲಿ ಸಿಡಿಲು ಬಡಿದ ಪರಿಣಾಮವಾಗಿ ಯುವ ಫುಟ್ಬಾಲ್ ಆಟಗಾರ ಸೋಫ್ವಾನ್ ಅವೆ ಸಾವನ್ನಪ್ಪಿದ್ದಾರೆ. ಹಾಗೆಯೇ ಈ ಘಟನೆಯಲ್ಲಿ ಸುಮಾರು ಒಂದು ಡಜನ್ ಇತರ ಆಟಗಾರರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಸ್ಥಳದಲ್ಲೇ ಸಾವು

ವೈರಲ್ ಆಗಿರುವ ವಿಡಿಯೋದಲ್ಲಿರುವಂತೆ ಭಾರೀ ಮಳೆಯ ನಡುವೆಯೂ ಫುಟ್ಬಾಲ್ ಪಂದ್ಯ ನಡೆಯುತ್ತಿತ್ತು. ಇದೇ ವೇಳೆ ಇದ್ದಕ್ಕಿದ್ದಂತೆ ಸಿಡಿಲು ಬಡಿದಿದ್ದರಿಂದ ಮೈದಾನದಲ್ಲಿದ್ದ ಸೋಫ್ವಾನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೈದಾನದಲ್ಲಿದ್ದ ಉಳಿದ ಆಟಗಾರರು ಸಿಡಿಲನ ರಬಸಕ್ಕೆ ನೆಲಕ್ಕುರುಳಿದ್ದಾರೆ. ಕೂಡಲೇ ಅಲ್ಲಿ ನೆರೆದಿದ್ದವರು ಆಟಗಾರರ ಸಹಾಯಕ್ಕೆ ಧಾವಿಸಿದ್ದಾರೆ. ಈ ಅವಘಡದ ವಿಡಿಯೋ ವೈರಲ್ ಆದ ನಂತರ, ಭಾರೀ ಮಳೆಯ ನಡುವೆಯೂ ಆಟವನ್ನು ಮುಂದುವರೆಸಿರುವುದರ ಬಗ್ಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಹತ್ತಿರದ ಆಸ್ಪತ್ರೆಗೆ ರವಾನಿಸಲಾಯಿತು

ಮಳೆ ಬಂದ ಕೂಡಲೇ ಪಂದ್ಯವನ್ನು ನಿಲ್ಲಿಸಿದ್ದರೆ, ಈ ಘಟನೆ ನಡೆಯುತ್ತಿರಲಿಲ್ಲ ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ಅಲ್ಲದೆ ಈ ಪಂದ್ಯಾವಳಿಯ ಆಯೋಜಕರ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಮಲೇಷ್ಯಾದ ಸುದ್ದಿ ಸಂಸ್ಥೆ ಬರ್ನಾಮ ಪ್ರಕಾರ, ಅವಘಡದ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಮುಖ್ಯಸ್ಥ ಥುನ್ ಸಿರಿಖುಂಟ್, ‘ತುರ್ತು ವೈದ್ಯಕೀಯ ತಂಡವು ಸೋಫ್ವಾನ್ ಅವರನ್ನು ಉಳಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸಿತು. ಆದರೆ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರ ಕಾರಣದಿಂದಾಗಿ ಸೋಫ್ವಾನ್ ಸಾವನ್ನಪ್ಪಿದ್ದಾರೆ. ಸಿಡಿಲು ಬಡಿದ ಕೂಡಲೇ ಪ್ರೇಕ್ಷಕರು ಮತ್ತು ಅಲ್ಲಿದ್ದ ಇತರ ಜನರು ಸಫ್ವಾನ್ ಅವರನ್ನು ರಕ್ಷಿಸಲು ಭಯಭೀತರಾಗಿ ಮೈದಾನಕ್ಕೆ ಧಾವಿಸಿದರು. ತಕ್ಷಣವೇ ವೈದ್ಯಕೀಯ ತಂಡ ಕೂಡ ಆಗಮಿಸಿ ಸಫ್ವಾನ್ ಅವರನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಲಾಯಿತು. ವೈದ್ಯರ ಅತ್ಯುತ್ತಮ ಪ್ರಯತ್ನದ ಹೊರತಾಗಿಯೂ, ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:22 pm, Fri, 7 August 26

Source link

‘ಜನರೇಷನ್ ಗಟಾರ್’ ಎಂದಿದ್ದ ಕಂಗನಾ ಈಗ ಯೂ ಟರ್ನ್; ‘ಜೆನ್ ಜಿ ಭಾರತದ ಶಕ್ತಿ’ ಎಂದ ನಟಿ – Kannada News | Kangana Ranaut U Turn calls Gen Z strength of country after Generation Gutter Remark

ಕೆಲವೇ ದಿನಗಳ ಹಿಂದಷ್ಟೇ ಜೆನ್ ಜಿ (Gen Z) ಪೀಳಿಗೆಯನ್ನು ‘ಜನರೇಷನ್ ಗಟಾರ್’ (Generation Gutter) ಎಂದು ಕರೆದು ತೀವ್ರ ವಾಗ್ದಾಳಿ ನಡೆಸಿದ್ದ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut) ಈಗ ದಿಢೀರ್ ಯೂ-ಟರ್ನ್ ಹೊಡೆದಿದ್ದಾರೆ. ಪ್ರಸ್ತುತ ಯುವ ಪೀಳಿಗೆಯೇ ನಮ್ಮ ದೇಶದ ದೊಡ್ಡ ಶಕ್ತಿ ಎಂದು ಅವರು ಹೊಗಳಿಕೆಯ ಮಳೆ ಸುರಿಸಿದ್ದಾರೆ. ಶುಕ್ರವಾರ ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಕಂಗನಾ, ‘ಜೆನ್ ಜಿ ನಮ್ಮ ದೇಶದ ದೊಡ್ಡ ಶಕ್ತಿ. ಒಂದು ರೀತಿಯಲ್ಲಿ ಅವರು ನಮ್ಮ ರಾಷ್ಟ್ರದ ದೊಡ್ಡ ಆಸ್ತಿ. ನಮ್ಮ ದೇಶದ ಯುವಕರು ನಮ್ಮ ಸಂಸ್ಕೃತಿ ಮತ್ತು ಅನನ್ಯತೆಯ ರಾಯಭಾರಿಗಳಾಗಿ ಹೊರಹೊಮ್ಮುತ್ತಿರುವುದು ನಮಗೆ ಅತ್ಯಂತ ಸಂತಸದ ವಿಷಯ’ ಎಂದು ಹೇಳಿದ್ದಾರೆ.

ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಸಂಸದೆಯಾಗಿರುವ ಕಂಗನಾ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ‘ನಾವು ಅತ್ಯಂತ ಗೌರವಿಸುವ ಮೋಹನ್ ಭಾಗವತ್ ಅವರ ಮಾರ್ಗದರ್ಶನ ಮತ್ತು ಅನುಭವದ ನುಡಿಗಳನ್ನು ಕೇಳುವ ಅವಕಾಶ ನಮಗೆ ಸಿಕ್ಕಿದೆ. ದೇಶದ ಯುವಸಮೂಹ ನಮ್ಮೊಂದಿಗೆ ಜೋಡಣೆಗೊಳ್ಳುತ್ತಾ, ನಮ್ಮ ಸಾಂಸ್ಕೃತಿಕ ಗುರುತನ್ನು ಅಪ್ಪಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ’ ಎಂದಿದ್ದಾರೆ.

ಕಂಗನಾ ಅವರ ಹಿಂದಿನ ಹೇಳಿಕೆ ಏನಾಗಿತ್ತು?

ಕೆಲವು ದಿನಗಳ ಹಿಂದೆ ಜಂತರ್ ಮಂತರ್‌ನಲ್ಲಿ ನಡೆದ ನೀಟ್ ಪರೀಕ್ಷೆ ಸಂಬಂಧಿತ ವಿದ್ಯಾರ್ಥಿ ಪ್ರತಿಭಟನೆಗಳ ವೀಡಿಯೋಗಳನ್ನು ನೋಡಿ ಕಂಗನಾ ಆಕ್ರೋಶ ಹೊರಹಾಕಿದ್ದರು. ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರ ವಿರುದ್ಧ ಬಳಸಿದ ಭಾಷೆಯನ್ನು ಖಂಡಿಸಿ ಸರಣಿ ವೀಡಿಯೋಗಳನ್ನು ಹಂಚಿಕೊಂಡಿದ್ದರು.

ಇದನ್ನೂ ಓದಿ: ‘ನಾನು ಸಂಘಿ ಆಗಬೇಕು’: ವಿಡಿಯೋ ನೋಡಿ ಟ್ರೋಲ್‌ ಮಾಡಿದವರಿಗೆ ಕಂಗನಾ ತಿರುಗೇಟು

‘ನನ್ನ ಜೀವಮಾನದಲ್ಲೇ ಇಷ್ಟೊಂದು ವಿಕಾರವನ್ನು ಒಂದೇ ಕಡೆ ನೋಡಿರಲಿಲ್ಲ. ಜೆನ್ ಜಿ ಪ್ರತಿಭಟನೆಯ ಈ ರೀಲ್ಸ್‌ಗಳನ್ನು ನೋಡಿದರೆ ವಾಂತಿ ಬರುತ್ತದೆ. ಅವರು ಬಳಸುತ್ತಿರುವ ಭಾಷೆ ಹಾಗೂ ವರ್ತನೆ ಅತ್ಯಂತ ಅಸಭ್ಯವಾಗಿದೆ. ಇಂಥವರನ್ನು ಯಾರು ಹೆತ್ತು ಸಾಕುತ್ತಿದ್ದಾರೋ ಗೊತ್ತಿಲ್ಲ?’ ಎಂದು ಕಿಡಿಕಾರಿದ್ದರು. ಅವರ ಈ ಹೇಳಿಕೆ ಸಖತ್ ವೈರಲ್ ಆಗಿತ್ತು.

‘ಪಾಶ್ಚಿಮಾತ್ಯ ಸಂಸ್ಕೃತಿಗೆ ಮರುಳಾಗಿರುವ ಈ ಹೊಸ ಪೀಳಿಗೆಯನ್ನು ನಾನು ಜನರೇಷನ್ ಗಟಾರ್ ಎಂದು ಕರೆಯುತ್ತೇನೆ. ನೀವು ನಿಮ್ಮನ್ನು ಕ್ರಿಮಿಗಳೆಂದು ಕರೆದುಕೊಳ್ಳುತ್ತೀರಿ ಮತ್ತು ಹಾಗೆಯೇ ವರ್ತಿಸುತ್ತೀರಿ. ಇಡೀ ಜಗತ್ತಿಗೆ ನಿಮ್ಮ ಕೊಳಕನ್ನು ತೋರಿಸುತ್ತಿದ್ದೀರಿ. ಈ ವೀಡಿಯೋಗಳನ್ನು ನೋಡಿ ನನ್ನ ಮನಸ್ಸಿಗೆ ನೋವಾಗಿದೆ. ನನಗೆ ಡಿಜಿಟಲ್ ಡಿಟಾಕ್ಸ್ ಅಗತ್ಯವಿದೆ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಂಗನಾ ಬರೆದುಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:12 pm, Fri, 7 August 26

Source link

Exit mobile version