ಬಿಗ್​​ಬಾಸ್​ ಸ್ಪರ್ಧಿಗಳಿಗೆ ಅಗ್ನಿಪರೀಕ್ಷೆ: ಮಾಜಿ ​​ಸ್ಪರ್ಧಿಗಳ ಕೆಲಸವೇನು? – Kannada News | Bigg Boss Kannada Agniparikshe, here is the promo video

ಬಿಗ್​ಬಾಸ್ ಕನ್ನಡ ಸೀಸನ್ 13 (Bigg Boss Kannada 13) ಪ್ರಾರಂಭಕ್ಕೆ ಕೆಲವೇ ದಿನಗಳು ಬಾಕಿ ಇದೆ. ಆಗಸ್ಟ್ 16 ರಂದು ಬಿಗ್​​ಬಾಸ್ ಕನ್ನಡದ ಹೊಸ ಸೀಸನ್ ಆರಂಭ ಆಗಲಿದೆ. ಹೊಸ ಸ್ಪರ್ಧಿಗಳು ಬಿಗ್​​ಬಾಸ್ ಮನೆ ಸೇರಲಿದ್ದಾರೆ. ಆದರೆ ಈ ಬಾರಿ ಬಿಗ್​​ಬಾಸ್ ಮನೆ ಸೇರುವ ಸ್ಪರ್ಧಿಗಳಿಗೆ ಅಗ್ನಿಪರೀಕ್ಷೆ ಎದುರಾಗಲಿದೆ. ಮನೆಯ ಒಳಗೆ ಹೋಗಲು ಈ ಅಗ್ನಿಪರೀಕ್ಷೆಯಲ್ಲಿ ಪಾಸಾಗಲೇ ಬೇಕಿದೆ. ಆದರೆ ಈ ಅಗ್ನಿಪರೀಕ್ಷೆಯನ್ನು ತೆಗೆದುಕೊಳ್ಳುವ ತೀರ್ಪುಗಾರರು, ಈ ಹಿಂದೆ ಬಿಗ್​​ಬಾಸ್ ಮನೆಯಲ್ಲಿದ್ದು, ಅದ್ಭುತವಾಗಿ ಆಡಿ ಜನಮನ ಗೆದ್ದ ಮಾಜಿ ಸ್ಪರ್ಧಿಗಳು. ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಸತತ ಎರಡನೇ ಬಾರಿಗೆ ಪ್ರತಿಷ್ಠಿತ ಪ್ರಶಸ್ತಿ ಗೆದ್ದ ಟ್ರಾವಿಸ್ ಹೆಡ್ – Kannada News | Travis Head Wins Second Allan Border Medal; Cricket Australia Awards 2025 26 Revealed

ಹೆಡ್​ಗೂ ಮೊದಲು ರಿಕಿ ಪಾಂಟಿಂಗ್, ಮೈಕೆಲ್ ಕ್ಲಾರ್ಕ್ ಮತ್ತು ಸ್ಟೀವ್ ಸ್ಮಿತ್ ತಲಾ ನಾಲ್ಕು ಬಾರಿ ಈ ಪದಕವನ್ನು ಗೆದ್ದಿದ್ದರೆ, ಡೇವಿಡ್ ವಾರ್ನರ್ ಮೂರು ಬಾರಿ ಮತ್ತು ಶೇನ್ ವ್ಯಾಟ್ಸನ್ ಎರಡು ಬಾರಿ ಪದಕವನ್ನು ಗೆದ್ದಿದ್ದಾರೆ. ಈಗ, ಹೆಡ್ ಈ ದಿಗ್ಗಜರ ಪಟ್ಟಿಗೆ ಸೇರಿದ್ದಾರೆ.

Source link

National Handloom Day: ಕೈಮಗ್ಗದ ಬಟ್ಟೆ ಖರೀದಿಸಿ ಒಡಿಶಾದ ಹ್ಯಾಂಡ್​ಲೂಮ್ ಪರಂಪರೆ ಬೆಂಬಲಿಸಿದ ಸಚಿವ ಪ್ರಲ್ಹಾದ್ ಜೋಶಿ – Kannada News | National Handloom Day Union Minister Pralhad Joshi Purchased Odisha Handloom Product via Digital Payment

ನವದೆಹಲಿ, ಆಗಸ್ಟ್ 7: ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ (National Handloom Day) ಹಿನ್ನೆಲೆಯಲ್ಲಿ ಇಂದು ಯಾವುದಾದರೂ ಒಂದಾದರೂ ಕೈಮಗ್ಗದ ಉತ್ಪನ್ನವನ್ನು ಖರೀದಿಸುವಂತೆ ನಿನ್ನೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಕರೆನೀಡಿದ್ದರು. ವೋಕಲ್ ಫಾರ್ ಲೋಕಲ್ ಅಡಿ ಭಾರತೀಯ ಕೈಮಗ್ಗ ಪರಂಪರೆಯನ್ನು ಬೆಂಬಲಿಸಿ, ಅದರ ವಿಡಿಯೋ ಮಾಡಿ ಶೇರ್ ಮಾಡಿಕೊಳ್ಳುವಂತೆ ಮೋದಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ಕೂಡ ಒಡಿಶಾದ ಕೈಮಗ್ಗದ ಬಟ್ಟೆಗಳನ್ನು ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

‘ಭಾರತದ ಕೈಮಗ್ಗವು ಪರಂಪರೆ, ಕೌಶಲ ಮತ್ತು ಕೋಟ್ಯಂತರ ಕರಕುಶಲಕರ್ಮಿಗಳ ಪರಿಶ್ರಮದ ಸಂಕೇತವಾಗಿದೆ. ರಾಷ್ಟ್ರೀಯ ಕೈಮಗ್ಗ ದಿನದಂದು ಭುವನೇಶ್ವರದಲ್ಲಿರುವ ಒಡಿಶಾ ರಾಜ್ಯದ ಉತ್ಕಳಿಕಾ ಕೋಆಪರೇಟಿವ್‌ನಿಂದ ಕೈಮಗ್ಗ ಉತ್ಪನ್ನಗಳನ್ನು ಖರೀದಿಸುವ ಮೂಲಕ ನಾನು ಈ ಪರಂಪರೆಗೆ ಬೆಂಬಲ ಸೂಚಿಸಿದೆ. ಜೊತೆಗೆ ನಮ್ಮ ದೈನಂದಿನ ಜೀವನದ ಅನಿವಾರ್ಯ ಅಂಗವಾಗಿರುವ ಯುಪಿಐ ಮೂಲಕವೇ ಹಣ ಪಾವತಿಸಿದೆ. ನಾವೆಲ್ಲರೂ ವೋಕಲ್ ಫಾರ್ ಲೋಕಲ್ (Vocal For Local) ತತ್ವವನ್ನು ಅಳವಡಿಸಿಕೊಳ್ಳೋಣ ಹಾಗೂ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸೋಣ’ ಎಂದು ಪ್ರಲ್ಹಾದ್ ಜೋಶಿ ಮನವಿ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತನ್ನದೇ ಆಟಗಾರನಿಗೆ 2 ವರ್ಷಗಳ ನಿಷೇಧ ಹೇರಿದ ಪಾಕ್ ಕ್ರಿಕೆಟ್ ಮಂಡಳಿ

Source link

ಮುಸ್ಲಿಂ ಎಂಬ ಕಾರಣಕ್ಕೆ ನಿಂದನೆಯೇ? ಬಿಜೆಪಿ ಎಂಎಲ್​​​​​ಸಿ ರವಿಕುಮಾರ್​​​ಗೆ ಕೋರ್ಟ್ ತರಾಟೆ – Kannada News | Politicians should hold their tongue: Karnataka HC slams BJP MLC N Ravikumar for calling IAS officer ‘Pakistani’

ಫೌಜಿಯಾ ತರನ್ನುಮ್‌, ಎನ್​ ರವಿಕುಮಾರ್​

ಬೆಂಗಳೂರು/ ಕಲಬುರಗಿ, (ಆಗಸ್ಟ್ 07): ಕಲಬುರಗಿ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಫೌಜಿಯಾ ತರನ್ನುಮ್‌ ಅವರನ್ನು ಪಾಕಿಸ್ತಾನದಿಂದ ಬಂದಿದ್ದಾರೆಯೇ ಎಂದಿದ್ದ ಬಿಜೆಪಿ ವಿಧಾನಪರಿಷತ್ ಸದಸ್ಯ ಎನ್​ ರವಿಕುಮಾರ್​​​ ವಿರುದ್ಧ ಹೈಕೋರ್ಟ್, ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ​​ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಜನಪ್ರತಿನಿಧಿ ಎಂದ ಮಾತ್ರಕ್ಕೆ ಏನಾದ್ರು ಹೇಳಿಕೆ‌ ನೀಡಬಹುದಾ? ರಾಜಕಾರಣಿಗಳು ಯೋಜನೆಗಳ ಬಗ್ಗೆ ಮಾತನಾಡೋದು ಬಿಟ್ಟು ಈ ರೀತಿ ಮಾತನಾಡಬಹುದೇ? ನೀವು ಯಾವುದೇ ಪಕ್ಷವಾಗಿರಿ ಈ ಕೇಸರೆಚಾಟವೇಕೆ? ಇಂತಹ ಕ್ಷುಲಕ ಕೇಸ್ ಗಳೇ ತುಂಬಿವೆ ಎಂದು ತರಾಟೆಗೆ ತೆದುಕೊಂಡು ಮುಂದಿನ ವಿಚಾರಣೆಯನ್ನು ಆಗಸ್ಟ್​ 20ಕ್ಕೆ ಮುಂದೂಡಿದೆ.

ಕ್ಷಮೆಯಾಚಿಸಿದ್ರೆ ಪ್ರಕರಣ ರದ್ದುಗೊಳಿಸಲು ಸಾಧ್ಯವೇ ?

ರವಿಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ಈಗಾಗಲೇ ಕ್ಷಮೆಯಾಚಿಸಿದ್ದಾರೆ ಎಂದು ತಿಳಿಸಿದರು. ಇದಕ್ಕೆ ಪೀಠ, ಕೇವಲ ಕ್ಷಮೆಯಾಚನೆಯಿಂದ ಇಂತಹ ಹೇಳಿಕೆಗಳ ನೀಡಿದ ಪ್ರಕರಣ ರದ್ದುಗೊಳಿಸಲು ಸಾಧ್ಯವೇ ಎಂದು ನ್ಯಾಯಾಲಯ ಪ್ರಶ್ನಿಸಿತು. ಅಲ್ಲದೆ, ಐಎಎಸ್ ಅಧಿಕಾರಿಯೊಬ್ಬರನ್ನು ಧರ್ಮದ ಆಧಾರದ ಮೇಲೆ ಹೇಗೆ ಗುರಿಯಾಗಿಸಲು ಸಾಧ್ಯ ಎಂದು ತರಾಟೆಗೆ ತೆಗೆದುಕೊಂಡಿತು.

ಇದನ್ನೂ ಓದಿ: ಅಟ್ರಾಸಿಟಿ ಕೇಸ್​ ಬೆನ್ನಲ್ಲೇ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಡಿಸಿದ ಬಿಜೆಪಿ MLC ರವಿಕುಮಾರ್

ರಾಜಕೀಯ ನಾಯಕರಿಗೆ ನಾಲಿಗೆ ಹಿಡಿತದಲ್ಲಿರಬೇಕು

ಎಲ್ಲರಿಗೂ ಸ್ವಯಂ ಗೌರವ ಇರಲಿದೆ. ಬೇಕಾದಂತೆ ಮಾತನಾಡುವುದಕ್ಕೆ ಅವಕಾಶವಿರುವುದಿಲ್ಲ. ಈ ರೀತಿಯ ಹೇಳಿಕೆಗಳನ್ನು ನೀಡುವವರಿಗೆ ಕ್ಷಮಿಸಲು ಸಾಧ್ಯವಿಲ್ಲ. ರಾಜಕೀಯ ನಾಯಕರು, ರಾಜ್ಯದ ಜನರ ಕಲ್ಯಾಣಕ್ಕಾಗಿ ಏನು ಮಾಡಿದರೆ ಉತ್ತಮ ಎಂಬುದರ ಬಗ್ಗೆ ಮಾತನಾಡುತ್ತಿಲ್ಲ. ರಾಜಕೀಯ ನಾಯಕರಿಗೆ ನಾಲಿಗೆ ಹಿಡಿತದಲ್ಲಿರಬೇಕು. ಏನು ಬೇಕಾದರೂ ಮಾತನಾಡಬಹುದು ಎನ್ನುವುದಕ್ಕೆ ಸಾಧ್ಯವಿಲ್ಲ. ಈ ರೀತಿಯ ಪ್ರಕರಣಗಳಿಂದ ನಿಜವಾದ ಪರಿಹಾರ ಕೋರಿ ಬರುವ ಕ್ರಿಮಿನಲ್​ ಪ್ರಕರಣಗಳ ವಿಚಾರಣೆ 10 ವರ್ಷಗಳು ಕಳೆದರೂ ಇತ್ಯರ್ಥಗೊಳ್ಳುತ್ತಿಲ್ಲ ಎಂದು ಕೋರ್ಟ್​, ರವಿಕುಮಾರ್​​​​​​​ಗೆ ಚಾಟಿ ಬೀಸಿದೆ.

ಎಲ್ಲ ರಾಜಕೀಯ ಪಕ್ಷದವರೂ ಈ ದಾಟಿಯಲ್ಲಿ ಮಾತನಾಡುವುದನ್ನು ನಿಲ್ಲಿಸಬೇಕು. ಕೇವಲ ಪರಸ್ಪರ ಕೆಸರೆರೆಚಾಟ ನಡೆಸಲಾಗುತ್ತಿದೆ. ಯಾರೂ ಜನಪರ ನೀತಿಗಳ ಬಗ್ಗೆಯಾಗಲಿ, ಪ್ರಮುಖ ಸಮಸ್ಯೆಗಳ ಬಗ್ಗೆಯಾಗಲಿ ಮಾತನಾಡುತ್ತಿಲ್ಲ. ರಾಜಕೀಯ ನಾಯಕರ ಪರಸ್ಪರ ಆರೋಪಗಳನ್ನು ಕೇಳುವುದಕ್ಕೆ ಜನ ಆಸಕ್ತರಾಗಿಲ್ಲ, ಬದಲಿಗೆ ತಮ್ಮ ಕಲ್ಯಾಣದ ಬಗ್ಗೆ ಯೋಚಿಸುತ್ತಾರೆ ಎಂದು ಪೀಠ ಹೇಳಿದೆ.

ಇನ್ನು ಇದೇ ವೇಳೆ ಕಲಬುರಗಿಯಲ್ಲಿ ನಡೆದ ಪ್ರತಿಭಟನೆ ವೇಳೆ ರಾಷ್ಟ್ರಧ್ವಜ ಹಿಡಿದು ಮೆರವಣಿಗೆ ಮಾಡುವುದಕ್ಕೆ ಜಿಲ್ಲಾಧಿಕಾರಿಗಳು 9 ತಾಸು ಅಡ್ಡಿ ಪಡಿಸಿದ್ದಾರೆ ಎಂಬ ಅರ್ಜಿದಾರರ ವಕೀಲರ ವಾದ ಆಲಿಸಿದ ಪೀಠ, ರಾಷ್ಟ್ರಧ್ವಜ ಹಿಡಿಯುವುದರಲ್ಲಿ ತಪ್ಪೇನಿದೆ? ಒಂದು ವೇಳೆ ರವಿಕುಮಾರ್ ಹೇಳಿಕೆ ತಪ್ಪಾಗಿದ್ದರೂ, ಕ್ರಮವೂ ಸರಿಯಲ್ಲ. ಪ್ರತಿಭಟನಾಕಾರರಿಗೆ ಧ್ವಜ ಹಿಡಿಯಲು ಬಿಡದಿದ್ದರೆ ನಾವು ದಂಡ ವಿಧಿಸುತ್ತೇವೆ. ಆದರೆ ಅದಕ್ಕಾಗಿ ಇಂತಹ ಹೇಳಿಕೆ ನೀಡುವುದನ್ನು ಸಮರ್ಥಿಸಲು ಬರುವುದಿಲ್ಲ. ಅಲ್ಲದೆ, ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಲು ಅನುಮತಿ ಕೋರಿದ್ದ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿದೆ.

ಪ್ರಕರಣದ ಹಿನ್ನೆಲೆ:

ತಿರಂಗಾ ಯಾತ್ರೆಗೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಪರಿಷತ್ ಸದಸ್ಯ ರವಿಕುಮಾರ್, ಕಲಬುರಗಿ ಜಿಲ್ಲಾಧಿಕಾರಿಯಾಗಿದ್ದ ಐಎಎಸ್ ಅಧಿಕಾರಿ ಫೌಜಿಯಾ ತರನ್ನುಮ್ ಅವರು ಕಾಂಗ್ರೆಸ್ ಸರ್ಕಾರದ ಆದೇಶದ ಮೇರೆಗೆ ವರ್ತಿಸುತ್ತಿದ್ದಾರೆ. ಪಾಕಿಸ್ತಾನದಿಂದ ಬಂದಿದ್ದಾರೋ ಎಂಬುದು ಗೊತ್ತಾಗುತ್ತಿಲ್ಲ ಎಂಬುದಾಗಿ ಕಳೆದ ಮೇ ತಿಂಗಳಲ್ಲಿ ನಡೆದ ರಾಜಕೀಯ ಪ್ರತಿಭಟನೆಯಲ್ಲಿ ಬಿಜೆಪಿ ಎಂಎಲ್​​​ಸಿ ಎನ್. ರವಿಕುಮಾರ್ ಹೇಳಿಕೆ ನೀಡಿದ್ದರು. ಈ ಸಂಬಂಧ 2025ರ ಮೇ 25ರಂದು ಕಲಬುರಗಿಯ ಸ್ಟೇಷನ್ ಬಜಾರ್ ಠಾಣೆಯಲ್ಲಿ ರವಿಕುಮಾರ್ ವಿರುದ್ಧ ದೂರು ದಾಖಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 10:33 pm, Fri, 7 August 26

Source link

ಬಿಗ್​​ಬಾಸ್ ಸ್ಪರ್ಧಿಗಳಿಗೆ ಎದುರಾಗಲಿದೆ ಅಗ್ನಿಪರೀಕ್ಷೆ, ಎದುರಿದ್ದಾರೆ ನಾಲ್ವರು ತೀರ್ಪುಗಾರರು – Kannada News | Bigg Boss Agniparikshe, Four ex Bigg Boss contestants will be Jury

ಬಿಗ್​​ಬಾಸ್ ಕನ್ನಡ (Bigg Boss Kannada) ಹೊಸ ಸೀಸನ್ ಪ್ರಾರಂಭಕ್ಕೆ ದಿನಗಳಷ್ಟೆ ಬಾಕಿ ಇದೆ. ಮುಂದಿನ ವಾರವೇ ಕಾರ್ಯಕ್ರಮ ಪ್ರಾರಂಭ ಆಗಲಿದೆ. ಈ ಬಾರಿ ಸಾಮಾನ್ಯರಿಗೂ ಸಹ ಬಿಗ್​​ಬಾಸ್ ಮನೆಗೆ ಟಿಕೆಟ್ ನೀಡಲಾಗಿದೆ. ಈ ಬಾರಿ ಸಾಕಷ್ಟು ವಿಶೇಷತೆಗಳು ಬಿಗ್​​ಬಾಸ್​​ನಲ್ಲಿ ಇರಲಿವೆ. ಅದರಲ್ಲೂ ಸ್ಪರ್ಧಿಗಳ ಆಯ್ಕೆ ಈ ಬಾರಿ ಬಹಳ ಭಿನ್ನವಾಗಿರಲಿದೆ. ಈ ಬಾರಿ ‘ಬಿಗ್​​ಬಾಸ್ ಅಗ್ನಿಪರೀಕ್ಷೆ’ ಎಂಬ ಹೊಸ ಕಾನ್ಸೆಪ್ಟ್ ಅನ್ನು ಪರಿಚಯಿಸಲಾಗಿದ್ದು, ಮನೆಯ ಒಳಗೆ ಹೋಗುವ ಸ್ಪರ್ಧಿಗಳು ಮೊದಲು ಅಗ್ನಿಪರೀಕ್ಷೆಯನ್ನು ಎದುರಿಸಬೇಕಿರಲಿದೆ. ಈ ಪರೀಕ್ಷೆಯನ್ನು ತೆಗೆದುಕೊಳ್ಳುವವರು ನಾಲ್ಕು ಬಿಗ್​​ಬಾಸ್ ಪರಿಣಿತರು.

ಹೌದು, ಮನೆಯ ಒಳಗೆ ಹೋಗುವ ಸ್ಪರ್ಧಿಗಳಿಗೆ ಅಗ್ನಿಪರೀಕ್ಷೆಯಲ್ಲಿ ಗೆಲ್ಲಬೇಕಿರುತ್ತದೆ. ಈ ಅಗ್ನಿಪರೀಕ್ಷೆಯನ್ನು ತೆಗೆದುಕೊಂಡು ತೀರ್ಪು ನೀಡಿ ಸ್ಪರ್ಧಿಯನ್ನು ಒಳಗೆ ಕಳಿಸುವ ಜವಾಬ್ದಾರಿಯನ್ನು ನಾಲ್ವರು ಮಾಜಿ, ಬಿಗ್​​ಬಾಸ್ ಸ್ಪರ್ಧಿಗಳಿಗೆ ವಹಿಸಲಾಗಿದೆ. ಹಿರಿಯ ನಟಿ, ಮಾಜಿ ಬಿಗ್​​ಬಾಸ್ ವಿನ್ನರ್ ಶ್ರುತಿ, ಮಾಜಿ ಸ್ಪರ್ಧಿಗಳಾದ ಚಂದನ್ ಗೌಡ, ಸಂಗೀತಾ ಶೃಂಗೇರಿ ಮತ್ತು ವಿನಯ್ ಗೌಡ ಅವರನ್ನು ತೀರ್ಪುಗಾರರನ್ನಾಗಿ ಮಾಡಲಾಗಿದ್ದು, ಇವರುಗಳು ಸ್ಪರ್ಧಿಗಳ ಅಥವಾ ಆಕಾಂಕ್ಷಿಗಳ ಪರೀಕ್ಷೆಯನ್ನು ತೆಗೆದುಕೊಳ್ಳಲಿದ್ದಾರೆ.

ಈ ಕುರಿತು ಹೊಸ ಪ್ರೋಮೊ ಒಂದನ್ನು ಬಿಗ್​​ಬಾಸ್ ಹಂಚಿಕೊಂಡಿದ್ದು, ಪ್ರೋಮೊನಲ್ಲಿ ವಿನಯ್ ಗೌಡ, ಚಂದನ್, ಸಂಗೀತ ಮತ್ತು ಶ್ರುತಿ ಅವರುಗಳು ಬಿಗ್​​ಬಾಸ್​​ನಲ್ಲಿ ಈ ಬಾರಿ ಎದುರಾಗಲಿರುವ ಅಗ್ನಿಪರೀಕ್ಷೆ ಮತ್ತು ಅದರ ಕಠಿಣತೆಯ ಬಗ್ಗೆ ಮಾತನಾಡಿದ್ದಾರೆ. ‘ಪ್ರತಿ ಬಾರಿ ಬಿಗ್​​ಬಾಸ್ ಮನೆಯ ಒಳಗೆ ಯುದ್ಧ ಆಗೋದು ನೋಡಿದ್ದೀರ. ಆದರೆ ಈ ಬಾರಿ ಮನೆಯ ಒಳಗೆ ಹೋಗೋಕೆ ಮಹಾಯುದ್ಧನೇ ನಡೆಯಲಿದೆ. ಈ ಮಹಾಯುದ್ಧದಲ್ಲಿ ಗೆದ್ದು ಮನೆಯ ಒಳಗೆ ಎಂಟ್ರಿ ಆಗೋದು ಯಾರು’ ಎಂದು ಈ ನಾಲ್ವರು ತೀರ್ಪುಗಾರರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ:ಬಿಗ್​​ಬಾಸ್ ಕನ್ನಡ: ಗಿಲ್ಲಿ ಪರವಾಗಿ ಮತ ಕೇಳಿದ ಮಳವಳ್ಳಿ ಶಾಸಕ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವವರು, ಬಿಗ್​​ಬಾಸ್ ಮನೆಗೆ ಹೋಗಬೇಕೆಂದು ಅರ್ಜಿ ಸಲ್ಲಿಸಿರುವ ಸಾಮಾನ್ಯರು ಇನ್ನೂ ಕೆಲವರು ಈ ಅಗ್ನಿ ಪರೀಕ್ಷೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾಕಷ್ಟು ಮಂದಿ ಆಕಾಂಕ್ಷಿಗಳನ್ನು ಈ ತೀರ್ಪುಗಾರರು ಹಲವು ರೀತಿಯಲ್ಲಿ ಪರೀಕ್ಷೆ ನಡೆಸಿ ಕೆಲವರನ್ನು ಆಯ್ಕೆ ಮಾಡಲಿದ್ದಾರೆ. ಈ ಆಯ್ಕೆ ಪ್ರಕ್ರಿಯೆ ಶೀಘ್ರವೇ ನಡೆಯಲಿದೆ ಎನ್ನಲಾಗುತ್ತಿದೆ.

ಬಿಗ್​​ಬಾಸ್ ಕನ್ನಡ ಸೀಸನ್ 13 ಆಗಸ್ಟ್ 16 ರಿಂದ ಆರಂಭ ಆಗಲಿದೆ. ಸುದೀಪ್ ಅವರು ಪ್ರತಿಬಾರಿಯಂತೆ ಅದ್ಧೂರಿಯಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸ್ಪರ್ಧಿಗಳನ್ನು ಪರಿಚಯಿಸಲಿದ್ದಾರೆ. ವೀಕೆಂಡ್ ಕಾರ್ಯಕ್ರಮವನ್ನು ಲೈವ್ ಆಗಿ ನೋಡಲು ಸಹ ಅವಕಾಶವನ್ನು ಪಡೆದುಕೊಳ್ಳಬಹುದಾಗಿದೆ. ಲಾಲ್​​ಬಾಗ್​​ನಲ್ಲಿ ನಡೆಯುತ್ತಿರುವ ಪುಷ್ಪ ಪ್ರದರ್ಶನದಲ್ಲಿ ಭಾಗವಹಿಸಿ ಅಲ್ಲಿ ಇರುವ ಬಿಗ್​​ಬಾಸ್​​ ಎಕ್ಸ್​​ಪೀರಿಯನ್ಸ್ ಜೋನ್​​ನಲ್ಲಿ ಸೆಲ್ಫಿ ತೆಗೆದುಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ತನ್ನದೇ ಆಟಗಾರನಿಗೆ 2 ವರ್ಷಗಳ ನಿಷೇಧ ಹೇರಿದ ಪಾಕ್ ಕ್ರಿಕೆಟ್ ಮಂಡಳಿ

Source link

ಇತಿಹಾಸದ ಪುಟಗಳಲ್ಲಿ ದಾಖಲಾಯ್ತು ಸ್ಕಾಟ್ಲೆಂಡ್ vs ಕೆನಡಾ ಏಕದಿನ ಪಂದ್ಯ – Kannada News | 5000th ODI Milestone: Scotland vs Canada Match and ODI Cricket History; India’s Dominance

ಟಿ20 ಕ್ರಿಕೆಟ್​ನ ಅಬ್ಬರದ ನಡುವೆ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್​ನ ಜನಪ್ರಿಯತೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ಟಿ20 ಪಂದ್ಯಗಳ ಮೇಲೆ ತೋರಿಸುವ ಆಸಕ್ತಿಯನ್ನು ಉಳಿದೆರಡು ಮಾದರಿಗಳ ಮೇಲೆ ಪ್ರೇಕ್ಷಕರು ತೋರಿಸುತ್ತಿಲ್ಲ. ಬಲಿಷ್ಠ ತಂಡಗಳು ಆಡುವಾಗ ಮಾತ್ರ ಈ ಎರಡು ಮಾದರಿಗಳ ಪಂದ್ಯಗಳನ್ನು ನೋಡುವ ಅಭಿಮಾನಿಗಳ ಸಂಖ್ಯೆ ಹೆಚ್ಚಿರುತ್ತದೆ. ಉಳಿದಂತೆ ಜನಪ್ರಿಯವಲ್ಲದ ತಂಡಗಳು ಆಡಿದರೆ ಕ್ರೀಡಾಂಗಣವೂ ಖಾಲಿ ಇರುತ್ತದೆ. ವೀಕ್ಷಕರ ಸಂಖ್ಯೆಯೂ ಕಡಿಮೆ ಇರುತ್ತದೆ. ಹೀಗಾಗಿ ವಿಶ್ವದೆಲ್ಲೆಡೆ ಟಿ20 ಲೀಗ್​ಗಳ ಸಂಖ್ಯೆ ಹೆಚ್ಚುತ್ತಿದೆ. ಇತ್ತ ಟೆಸ್ಟ್ ಹಾಗೂ ಏಕದಿನ ಸರಣಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆದಾಗ್ಯೂ ಈ ಎಲ್ಲಾ ಸವಾಲುಗಳ ನಡುವೆಯೂ ಏಕದಿನ ಕ್ರಿಕೆಟ್​ನಲ್ಲಿ​ ಐತಿಹಾಸಿಕ ದಾಖಲೆಯೊಂದು ದಾಖಲೆಯ ಪುಟಕ್ಕೆ ಸೇರ್ಪಡೆಗೊಂಡಿದೆ.

ಸ್ಕಾಟ್ಲೆಂಡ್ ಮತ್ತು ಕೆನಡಾ ನಡುವಿನ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಲೀಗ್ 2 ರ ಏಕದಿನ ಪಂದ್ಯವು ಸ್ಕಾಟ್ಲೆಂಡ್‌ನ ಡುಂಡೀಯಲ್ಲಿರುವ ಫೋರ್ಥಿಲ್ ಕ್ರಿಕೆಟ್ ಮೈದಾನದಲ್ಲಿ ನಡೆಯಿತು. ಉಭಯ ತಂಡಗಳ ನಡುವಿನ ಈ ಏಕದಿನ ಪಂದ್ಯ ಏಕದಿನ ಮಾದರಿಯಲ್ಲಿ 5000ನೇ ಏಕದಿನ ಪಂದ್ಯವೆಂಬ ದಾಖಲೆ ಬರೆಯಿತು. ವಾಸ್ತವವಾಗಿ 1971 ರಲ್ಲಿ ಪ್ರಾರಂಭವಾದ ಏಕದಿನ ಮಾದರಿಯು ಕಳೆದ 55 ವರ್ಷಗಳಲ್ಲಿ ತನ್ನ ನಿಯಮಗಳಲ್ಲಿ ಅನೇಕ ಬದಲಾವಣೆಗಳನ್ನು ಕಂಡಿದೆ. ಟಿ20 ಮಾದರಿಯ ಆಗಮನದ ಹೊರತಾಗಿಯೂ, ಏಕದಿನ ಇನ್ನೂ ತನ್ನದೇಯಾದ ಪ್ರಾಮುಖ್ಯತೆಯನ್ನು ಹೊಂದಿದೆ.

ಏಕದಿನ ಕ್ರಿಕೆಟ್​ನ ಇತಿಹಾಸ

ಏಕದಿನ ಕ್ರಿಕೆಟ್ ಇತಿಹಾಸದ ಬಗ್ಗೆ ಹೇಳುವುದಾದರೆ, ಮೊದಲ ಪಂದ್ಯವು ಜನವರಿ 5, 1971 ರಂದು ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ನಡೆಯಿತು, ಈ ಪಂದ್ಯವನ್ನು ಆಸ್ಟ್ರೇಲಿಯಾ 5 ವಿಕೆಟ್‌ಗಳಿಂದ ಗೆದ್ದಿತು. 1000 ನೇ ಏಕದಿನ ಪಂದ್ಯವು 8905 ದಿನಗಳ ನಂತರ ಅಂದರೆ 1995 ರಲ್ಲಿ ನಾಟಿಂಗ್‌ಹ್ಯಾಮ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯಿತು. ತಲಾ 55 ಓವರ್‌ಗಳ ಈ ಪಂದ್ಯ ಎರಡು ದಿನಗಳ ಕಾಲ ನಡೆಯಿತು. 2000 ನೇ ಏಕದಿನ ಪಂದ್ಯವು ಏಪ್ರಿಲ್ 10, 2003 ರಂದು ನಡೆಯಿತು. ಏಕದಿನ ಸ್ವರೂಪದಲ್ಲಿ 3000 ನೇ ಪಂದ್ಯವನ್ನು ಜೂನ್ 22, 2010 ರಂದು ನಡೆದಿತ್ತು. ಹಾಗೆಯೇ 4000 ನೇ ಪಂದ್ಯವನ್ನು ಮಾರ್ಚ್ 17, 2018 ರಂದು ನಡೆಯಿತು. ಇದೀಗ 5000 ನೇ ಪಂದ್ಯವು ಆಗಸ್ಟ್ 7, 2026 ರಂದು ಸ್ಕಾಟ್ಲೆಂಡ್ ಮತ್ತು ಕೆನಡಾ ನಡುವೆ ನಡೆದಿದೆ.

ಏಕದಿನದಲ್ಲಿ ಟೀಂ ಇಂಡಿಯಾದ ಪ್ರಾಬಲ್ಯ

ವೆಸ್ಟ್ ಇಂಡೀಸ್ ತಂಡವು ಏಕದಿನ ಕ್ರಿಕೆಟ್‌ನ ಆರಂಭಿಕ ಹಂತಗಳಲ್ಲಿ ಪ್ರಾಬಲ್ಯ ಸಾಧಿಸಿ, ಸತತ ಎರಡು ವಿಶ್ವಕಪ್‌ಗಳನ್ನು ಗೆದ್ದಿತು. ಅಂದಿನಿಂದ, ಆಡಿದ ಪ್ರತಿ 1,000 ಪಂದ್ಯಗಳಲ್ಲಿ ಅವರ ಪ್ರದರ್ಶನವು ಸ್ಥಿರವಾಗಿ ಕುಸಿಯುತ್ತಿದೆ. ಇತ್ತ ಏಕದಿನ ಸ್ವರೂಪದಲ್ಲಿ ವರ್ಷದಿಂದ ವರ್ಷಕ್ಕೆ ಬಲಿಷ್ಠವಾಗುತ್ತಿರುವ ಟೀಂ ಇಂಡಿಯಾದ ಗೆಲುವಿನ ಶೇಕಡಾವಾರು ಪ್ರಮಾಣ ಹೆಚ್ಚುತ್ತಲೇ ಇದೆ.

ಅಗ್ರಸ್ಥಾನದಲ್ಲಿ ಟೀಂ ಇಂಡಿಯಾ

ಅತಿ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿದ ತಂಡಗಳ ಪಟ್ಟಿಯಲ್ಲಿ ಭಾರತ ತಂಡವು ಪ್ರಸ್ತುತ ಅಗ್ರಸ್ಥಾನದಲ್ಲಿದೆ. ಟೀಂ ಇಂಡಿಯಾ ಇದುವರೆಗೆ 1,081 ಏಕದಿನ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 575 ಪಂದ್ಯಗಳನ್ನು ಗೆದ್ದಿದ್ದರೆ, 452 ಪಂದ್ಯಗಳಲ್ಲಿ ಸೋತಿದೆ. ಉಳಿದಂತೆ 10 ಪಂದ್ಯಗಳು ಟೈ ಆಗಿದ್ದರೆ, 44 ಪಂದ್ಯಗಳು ರದ್ದಾಗಿವೆ. ಆಸ್ಟ್ರೇಲಿಯಾ 1,025 ಪಂದ್ಯಗಳನ್ನು ಆಡಿದ್ದು, ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನ 1,002 ಏಕದಿನ ಪಂದ್ಯಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯುಪಿಐ ಬಳಸಲು ಶುಲ್ಕ ಪಾವತಿಸಬೇಕೇ? ಹಲವು ವದಂತಿಗಳಿಗೆ ಇಲ್ಲಿದೆ ಸ್ಪಷ್ಟನೆ – Kannada News | Payments Council of India clarifies on UPI service Charges

ನವದೆಹಲಿ, ಆಗಸ್ಟ್ 7: ದೇಶಾದ್ಯಂತ ಹೆಚ್ಚಿನ ಜನರು ದಿನನಿತ್ಯದ ವಹಿವಾಟುಗಳಿಗಾಗಿ ಬಳಸುವ ಯುಪಿಐ (ಫೋನ್​ಪೇ, ಗೂಗಲ್​ಪೇ, ಪೇಟಿಎಂ ಇತ್ಯಾದಿ) ವಹಿವಾಟುಗಳ ಮೇಲೆ ಶುಲ್ಕ ವಿಧಿಸುವ ಸಾಧ್ಯತೆಯ ಕುರಿತು ದೇಶಾದ್ಯಂತ ವ್ಯಾಪಕ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಪೇಮೆಂಟ್ಸ್ ಕೌನ್ಸಿಲ್ ಆಫ್ ಇಂಡಿಯಾ (PCI) ವಿವರವಾದ ಸ್ಪಷ್ಟನೆ ನೀಡಿದ್ದು, ಗ್ರಾಹಕರು ಮತ್ತು ಸಣ್ಣ ವ್ಯಾಪಾರಿಗಳಿಗೆ ಡಿಜಿಟಲ್ ಪಾವತಿ ವೇದಿಕೆಯು ಸಂಪೂರ್ಣ ಉಚಿತವಾಗಿ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದೆ. ಪಿಸಿಐ ಪ್ರಕಾರ, ಯುಪಿಐ ಪಾವತಿ ಮಾಡಲು ಗ್ರಾಹಕರಿಂದ ಯಾವುದೇ ಶುಲ್ಕ ವಸೂಲಿ ಮಾಡುವುದಿಲ್ಲ. 2016ರಲ್ಲಿ ಪ್ರಾರಂಭವಾದಾಗಿನಿಂದಲೂ ಯುಪಿಐ ಉಚಿತವಾಗಿಯೇ ಉಳಿದಿದ್ದು, ಯಾವುದೇ ವಹಿವಾಟು ಶುಲ್ಕವಿಲ್ಲದೆ ತಕ್ಷಣದ ಡಿಜಿಟಲ್ ವಹಿವಾಟು ನಡೆಸಲು ಅನುವು ಮಾಡಿಕೊಟ್ಟಿದೆ.

ಯುಪಿಐ ಕುರಿತು ಪೇಮೆಂಟ್ ಕೌನ್ಸಿಲ್ ಆಫ್ ಇಂಡಿಯಾ ನೀಡಿದ ಸ್ಪಷ್ಟನೆ ಇಲ್ಲಿದೆ.

ಯುಪಿಐ ಬಳಸಲು ನಾನು ಹಣ ಪಾವತಿಸಬೇಕೇ?

ಇಲ್ಲ. 2016ರಲ್ಲಿ ಪ್ರಾರಂಭವಾದಾಗಿನಿಂದಲೂ ಯುಪಿಐ ಗ್ರಾಹಕರಿಗೆ ಸಂಪೂರ್ಣ ಉಚಿತವಾಗಿದೆ. ಪ್ರತಿಯೊಬ್ಬ ಭಾರತೀಯನೂ ಯಾವುದೇ ವಹಿವಾಟು ಶುಲ್ಕವಿಲ್ಲದೆ ತಕ್ಷಣದ ಡಿಜಿಟಲ್ ಪಾವತಿಗಳನ್ನು ಮಾಡುವುದನ್ನು ಮುಂದುವರಿಸಬಹುದು.

ಇದನ್ನೂ ಓದಿ: ಕಾರ್ಡ್ ಪೇಮೆಂಟ್​ನಲ್ಲಿಯಂತೆ ಕೆಲ ಯುಪಿಐ ಪೇಮೆಂಟ್​ಗೂ ಎಂಡಿಆರ್ ಶುಲ್ಕ; ಸರ್ಕಾರ ಚಿಂತನೆ

ಯುಪಿಐ ಪಾವತಿ ಸ್ವೀಕರಿಸಲು ಸಣ್ಣ ಅಂಗಡಿಯವರು ಅಥವಾ ಕಿರಾಣಿ ಅಂಗಡಿಯವರಿಗೆ ಶುಲ್ಕ ವಿಧಿಸಲಾಗುತ್ತದೆಯೇ?

ಇಲ್ಲ. ಯುಪಿಐ ಪಾವತಿಗಳನ್ನು ಸ್ವೀಕರಿಸಲು ಸಣ್ಣ ವ್ಯಾಪಾರಿಗಳು ಯಾವುದೇ ಶುಲ್ಕವನ್ನು (MDR) ಪಾವತಿಸುವ ಅಗತ್ಯವಿಲ್ಲ. ಭಾರತದ ಅತ್ಯಂತ ಸಣ್ಣ ಮಟ್ಟದ ವ್ಯಾಪಾರಸ್ಥರಿಗೂ ಡಿಜಿಟಲ್ ಪಾವತಿಗಳನ್ನು ಸುಲಭವಾಗಿ ತಲುಪಿಸುವಂತೆ ಯುಪಿಐ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ. ಸಣ್ಣ ವ್ಯಾಪಾರಿಗಳನ್ನು ರಕ್ಷಿಸುವುದು ಈ ವ್ಯವಸ್ಥೆಯ ಸಮಗ್ರ ಪ್ರಗತಿಯ ಮುಖ್ಯ ಗುರಿಯಾಗಿದೆ.

ಈಗ ಯುಪಿಐ ಶುಲ್ಕಗಳ ಬಗ್ಗೆ ಚರ್ಚೆ ಏಕೆ ನಡೆಯುತ್ತಿದೆ?

ಯುಪಿಐ ಆರಂಭಿಕ ಪಾವತಿ ವೇದಿಕೆಯಿಂದ ಜಗತ್ತಿನ ಅತಿದೊಡ್ಡ ರಿಯಲ್-ಟೈಮ್ ಪಾವತಿ ವ್ಯವಸ್ಥೆಯಾಗಿ ಬೆಳೆದಿದೆ. ಈ ಡಿಜಿಟಲ್ ವ್ಯವಸ್ಥೆಯು ವಿಸ್ತರಿಸುತ್ತಿರುವಂತೆ, ಪ್ರತಿ ತಿಂಗಳು ಶತಕೋಟಿ ಸುರಕ್ಷಿತ ವಹಿವಾಟುಗಳನ್ನು ಸಕ್ರಿಯಗೊಳಿಸುವ ಮೂಲಸೌಕರ್ಯವನ್ನು ಸುಸ್ಥಿರವಾಗಿ ಬೆಂಬಲಿಸುವುದು ಹೇಗೆ ಎಂಬುದರ ಕುರಿತು ಚರ್ಚೆಗಳು ನಡೆಯುತ್ತಿವೆ. ಅದೇ ಸಮಯದಲ್ಲಿ ಗ್ರಾಹಕರು ಮತ್ತು ಸಣ್ಣ ವ್ಯಾಪಾರಿಗಳ ಹಿತರಕ್ಷಣೆಯನ್ನು ಮುಂದುವರಿಸಲಾಗುತ್ತಿದೆ.

ಯುಪಿಐ ಅನ್ನು ಯಾರು ನಿರ್ಮಿಸಿದ್ದಾರೆ ಮತ್ತು ನಿರಂತರ ಹೂಡಿಕೆ ಮಾಡುತ್ತಿದ್ದಾರೆ?

ಕಳೆದ ಸುಮಾರು 10 ವರ್ಷಗಳಿಂದ ಬ್ಯಾಂಕ್‌ಗಳು, ಪಾವತಿ ಕಂಪನಿಗಳು, ಫಿನ್‌ಟೆಕ್‌ಗಳು, ಎನ್‌ಪಿಸಿಐ (NPCI) ಮತ್ತು ಆರ್‌ಬಿಐ (RBI) ವಿಶ್ವದಲ್ಲೇ ಅತ್ಯಂತ ಸುರಕ್ಷಿತ ಮತ್ತು ಅತ್ಯಂತ ವಿಶ್ವಸನೀಯ ಪಾವತಿ ವ್ಯವಸ್ಥೆಗಳಲ್ಲಿ ಒಂದನ್ನು ನಿರ್ಮಿಸಲು ತಂತ್ರಜ್ಞಾನ, ಸೈಬರ್ ಭದ್ರತೆ, ವಂಚನೆ ತಡೆಗಟ್ಟುವಿಕೆ, ನಾವೀನ್ಯತೆ ಮತ್ತು ಗ್ರಾಹಕ ಬೆಂಬಲದಲ್ಲಿ ಜಂಟಿಯಾಗಿ ಹೂಡಿಕೆ ಮಾಡಿವೆ. ಯುಪಿಐ ಸುರಕ್ಷಿತವಾಗಿ, ದೃಢವಾಗಿ ಮತ್ತು 24×7 ಲಭ್ಯವಿರುವಂತೆ ಮಾಡಲು ಈ ಹೂಡಿಕೆಗಳು ಪ್ರತಿದಿನವೂ ಮುಂದುವರಿಯುತ್ತಿವೆ.

ಇದನ್ನೂ ಓದಿ: ಒಂದು ತಿಂಗಳಲ್ಲಿ ಫೋನ್​ಪೇನಲ್ಲಿ 1,000 ಕೋಟಿ ಟ್ರಾನ್ಸಾಕ್ಷನ್ಸ್; ಈ ಮೈಲಿಗಲ್ಲು ಮುಟ್ಟಿದ ಮೊದಲ ಯುಪಿಐ ಆ್ಯಪ್

ಯುಪಿಐ ಉಚಿತವಾಗಿದ್ದರೆ, ಅದನ್ನು ನಿರ್ವಹಿಸುವ ವೆಚ್ಚವನ್ನು ಯಾರು ಭರಿಸುತ್ತಾರೆ?

ರಾಷ್ಟ್ರೀಯ ಪಾವತಿ ಮೂಲಸೌಕರ್ಯವನ್ನು ನಿರ್ವಹಿಸುವುದು ತಂತ್ರಜ್ಞಾನ, ವಂಚನೆ ತಡೆಗಟ್ಟುವಿಕೆ, ಸೈಬರ್ ಭದ್ರತೆ, ನಿಯಮಾವಳಿಗಳ ಪಾಲನೆ, ಗ್ರಾಹಕ ಬೆಂಬಲ ಮತ್ತು ನಾವೀನ್ಯತೆಯಲ್ಲಿ ನಿರಂತರ ಹೂಡಿಕೆಯನ್ನು ಒಳಗೊಂಡಿರುತ್ತದೆ. ಗ್ರಾಹಕರು ಸುರಕ್ಷಿತ ಮತ್ತು ಸುಗಮ ಪಾವತಿ ಅನುಭವವನ್ನು ಪಡೆಯಲು ಬ್ಯಾಂಕ್‌ಗಳು ಮತ್ತು ಪಾವತಿ ಸೇವಾ ಪೂರೈಕೆದಾರರು ಸೇರಿದಂತೆ ಈ ವ್ಯವಸ್ಥೆಯ ಭಾಗಿದಾರರೇ ಪ್ರಸ್ತುತ ಈ ವೆಚ್ಚಗಳನ್ನು ಭರಿಸುತ್ತಿದ್ದಾರೆ.

ದೊಡ್ಡ ವ್ಯಾಪಾರಿಗಳು ಪಾವತಿ ಸ್ವೀಕಾರಕ್ಕೆ ಶುಲ್ಕ ಪಾವತಿಸಿದರೆ ಗ್ರಾಹಕರು ಪಾವತಿಸಬೇಕೇ?

ಇಲ್ಲ. ವರ್ತಕರ ಸೇವಾ ಶುಲ್ಕಗಳು (ಅನ್ವಯಿಸುವಲ್ಲಿ) ವ್ಯಾಪಾರಿಗಳು ಮತ್ತು ಪಾವತಿ ಸೇವಾ ಪೂರೈಕೆದಾರರ ನಡುವಿನ ವಾಣಿಜ್ಯ ಒಪ್ಪಂದಗಳಾಗಿರುತ್ತವೆ. ಇದರರ್ಥ ಡಿಜಿಟಲ್ ಪಾವತಿಗಳನ್ನು ಬಳಸಲು ಗ್ರಾಹಕರು ಪಾವತಿಸುತ್ತಾರೆ ಎಂದಲ್ಲ.ಪ್ರಪಂಚದಾದ್ಯಂತ, ವರ್ತಕರ ಸೇವಾ ಶುಲ್ಕಗಳು ಡಿಜಿಟಲ್ ಪಾವತಿ ವ್ಯವಸ್ಥೆಯ ಸಾಮಾನ್ಯ ಲಕ್ಷಣವಾಗಿವೆ, ಆದರೆ ಗ್ರಾಹಕರು ಅನುಕೂಲಕರ ಮತ್ತು ಸುರಕ್ಷಿತ ಡಿಜಿಟಲ್ ಪಾವತಿ ಅನುಭವವನ್ನು ಪಡೆಯುತ್ತಲೇ ಇರುತ್ತಾರೆ.

ಐ ವ್ಯವಸ್ಥೆಯನ್ನು ಸುಸ್ಥಿರವಾಗಿಡುವುದು ಏಕೆ ಮುಖ್ಯ?

ಯುಪಿಐ ಪ್ರತಿದಿನ ಕೋಟ್ಯಂತರ ಭಾರತೀಯರು ಬಳಸುವ ನಿರ್ಣಾಯಕ ರಾಷ್ಟ್ರೀಯ ಡಿಜಿಟಲ್ ಮೂಲಸೌಕರ್ಯವಾಗಿದೆ. ವಹಿವಾಟಿನ ಪ್ರಮಾಣವು ಬೆಳೆಯುತ್ತಲೇ ಇರುವುದರಿಂದ, ಮುಂಬರುವ ವರ್ಷಗಳಲ್ಲಿ ಯುಪಿಐ ಗ್ರಾಹಕರಿಗೆ ಮತ್ತು ವ್ಯಾಪಾರಗಳಿಗೆ ವಿಶ್ವಾಸಾರ್ಹವಾಗಿ ಸೇವೆ ನೀಡುವುದನ್ನು ಮುಂದುವರಿಸಲು ಭದ್ರತೆ, ಸ್ಥಿರತೆ, ನಾವೀನ್ಯತೆ, ವಂಚನೆ ತಡೆಗಟ್ಟುವಿಕೆ ಮತ್ತು ಮೂಲಸೌಕರ್ಯಗಳಲ್ಲಿ ನಿರಂತರ ಹೂಡಿಕೆ ಅತ್ಯಗತ್ಯವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:30 pm, Fri, 7 August 26

Source link

ಚಿಂತಿಸಬೇಡಿ, ನಾನು ನಿಮ್ಮೊಂದಿಗಿದ್ದೇನೆ, ಎನ್‌ಡಿಎ ಹೊಸ ಸಂಸದರು ಹಾಗೂ ಬಂಡಾಯ ನಾಯಕರಿಗೆ ಪ್ರಧಾನಿ ಮೋದಿ ಅಭಯ – Kannada News | Modi Assures NDA MPs: Don’t Worry, I am With You, Unity Amidst Parliament Standoff

ನವದೆಹಲಿ, ಆಗಸ್ಟ್​ 07: ಸಂಸತ್ತಿನ ಕಲಾಪಗಳಲ್ಲಿ ಗದ್ದಲ ಮತ್ತು ಅಡೆತಡೆಗಳು ಉಂಟಾಗುತ್ತಿರುವ ನಡುವೆಯೇ, ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಹೊಸದಾಗಿ ಆಯ್ಕೆಯಾದ ಎನ್‌ಡಿಎ (NDA) ಲೋಕಸಭಾ ಸಂಸದರೊಂದಿಗೆ ಉಪಾಹಾರ ಸಭೆ ನಡೆಸಿದ್ದಾರೆ.ತೃಣಮೂಲ ಕಾಂಗ್ರೇಸ್‌ನ ಬಂಡುಕೋರ ನಾಯಕರು ಹಾಗೂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರಿದ ಮಾಜಿ ಉದ್ಧವ್ ನಾಯಕರಿಗೆ ಭರವಸೆ ನೀಡಿದ ಪ್ರಧಾನಿ, ಎನ್‌ಡಿಎ ಒಂದು ಕುಟುಂಬ. ಪ್ರತಿಯೊಬ್ಬ ಸಂಸದನೊಂದಿಗೂ ನಾನು ನಿಲ್ಲುತ್ತೇನೆ, ನೀವು ಯಾವುದಕ್ಕೂ ಚಿಂತಿಸಬೇಕಾಗಿಲ್ಲ ಎಂದು ಅಭಯ ನೀಡಿದ್ದಾರೆ.

ಗದ್ದಲಕ್ಕೆ ಕಳವಳ: ಸಂಸತ್ತಿನ ನಿರಂತರ ಕಲಾಪ ತಡೆ ಮತ್ತು ಗದ್ದಲದಿಂದಾಗಿ ಹೊಸ ಸಂಸದರಿಗೆ ಮಾತನಾಡಲು ಅವಕಾಶ ಸಿಗದಿರುವುದಕ್ಕೆ ಪ್ರಧಾನಿ ಬೇಸರ ವ್ಯಕ್ತಪಡಿಸಿದರು. ಸಂಸತ್ತು ಸುಗಮವಾಗಿ ನಡೆಯುವುದು ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಅತ್ಯಗತ್ಯ ಎಂದರು.
ಸಂಸದರು ಸಂಸತ್ತಿನ ಇತಿಹಾಸವನ್ನು ಓದಿ, ಸಂಶೋಧಿಸಿ ಮತ್ತು ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಸಂಸತ್ತಿನಲ್ಲಿರುವ ಅಪಾರ ಐತಿಹಾಸಿಕ ಮಾಹಿತಿಯನ್ನು ಭಾಷಣ ಸಿದ್ಧಪಡಿಸಲು ಬಳಸಿಕೊಳ್ಳಬೇಕು ಎಂದು ಪ್ರಧಾನಿ ಸಲಹೆ ನೀಡಿದರು.

ಎನ್‌ಡಿಎ ಮೈತ್ರಿಕೂಟದ ಒಗ್ಗಟ್ಟು ಮತ್ತು ಅಭಿವೃದ್ಧಿ
ತಮ್ಮ ತಮ್ಮ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ಅಡೆತಡೆ ಬಂದರೂ ನೇರವಾಗಿ ಪ್ರಧಾನಮಂತ್ರಿ ಕಾರ್ಯಾಲಯವನ್ನು (PMO) ಸಂಪರ್ಕಿಸುವಂತೆ ಸಂಸದರಿಗೆ ಸೂಚಿಸಲಾಯಿತು.ಬಡ ಕಾರ್ಮಿಕರು, ರೈತರು ಸೇರಿದಂತೆ ಸಮಾಜದ ಎಲ್ಲಾ ವರ್ಗದ ಜನರನ್ನು ಭೇಟಿಯಾಗಿ ಅವರ ಕುಂದುಕೊರತೆಗಳನ್ನು ಆಲಿಸುವಂತೆ ಪ್ರಧಾನಿ ಮೋದಿ ಕಿವಿಮಾತು ಹೇಳಿದರು.

ಮತ್ತಷ್ಟು ಓದಿ:ಪ್ರಧಾನಿ ಮೋದಿಗೆ ಕರೆ ಮಾಡಿದ ನೆತನ್ಯಾಹು; ಪಶ್ಚಿಮ ಏಷ್ಯಾ ಸಂಘರ್ಷ, ಭಾರತ-ಇಸ್ರೇಲ್ ಸಂಬಂಧದ ಕುರಿತು ಚರ್ಚೆ

ದೆಹಲಿಯ ರಾಜಕೀಯ ಜಾಲದಲ್ಲಿ ಸಿಲುಕಿಕೊಳ್ಳಬೇಡಿ, ವಿರೋಧ ಪಕ್ಷದ ನಾಯಕರೊಂದಿಗೂ ಸೌಹಾರ್ದಯುತ ಬಾಂಧವ್ಯ ಕಾಯ್ದುಕೊಳ್ಳಿ ಎಂದು ಸಂಸದರಿಗೆ ನಗೆಚಟಾಕಿ ಹಾರಿಸಿದರು. ಈ ಉಪಾಹಾರ ಸಭೆಯಲ್ಲಿ ಶಿವಸೇನೆಯ 7, ಎನ್‌ಸಿಪಿ (ಅಜಿತ್ ಪವಾರ್) ಗುಂಪಿನ ಇಬ್ಬರು ಹಾಗೂ ಎನ್‌ಸಿಪಿಐ (NCPI) ನ 20 ಸಂಸದರು ಸೇರಿದಂತೆ ಸುಮಾರು 45ಕ್ಕೂ ಹೆಚ್ಚು ಎನ್‌ಡಿಎ ಸಂಸದರು ಭಾಗವಹಿಸಿದ್ದರು. ಮುಂಗಾರು ಅಧಿವೇಶನದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಇತ್ತೀಚೆಗೆ 37 ಬಿಜೆಪಿ ಸಂಸದರಿಗೆ ಭೋಜನಕೂಟ ಆಯೋಜಿಸಿದ್ದರು. ಎನ್‌ಡಿಎ ಮೈತ್ರಿಕೂಟದ ಆಡಳಿತಾರೂಢ ಪಕ್ಷಗಳ ನಡುವೆ ಉತ್ತಮ ಸೌಹಾರ್ದತೆ ಮತ್ತು ಕಾರ್ಯತಂತ್ರ ರೂಪಿಸಲು ಇಂತಹ ಅನೌಪಚಾರಿಕ ಭೇಟಿಗಳನ್ನು ಒಂದೊಂದಾಗಿ ನಡೆಸಲಾಗುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version