ವೃಷಭ ರಾಶಿ ರೋಹಿಣಿ ನಕ್ಷತ್ರದಲ್ಲಿ ಚಂದ್ರನ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ – Kannada News | Horoscope Today, August 8, 2026: Moon in Taurus Rohini Nakshatra, Daily Predictions for All 12 Zodiac Signs

ಇಂದು ಆಗಸ್ಟ್ 8, 2026ರ ಶನಿವಾರ, ಪರಾಭವ ನಾಮ ಸಂವತ್ಸರ, ಆಷಾಢ ಮಾಸ, ರೋಹಿಣಿ ನಕ್ಷತ್ರದ ಶುಭ ದಿನವಾಗಿದ್ದು, ಶನಿ ಭಗವಾನ್ ಕೃಪೆಗೆ ಪಾತ್ರರಾಗಲು ಹಾಗೂ ಹನುಮನ ಪೂಜೆಗೆ ವಿಶೇಷ ದಿನವಾಗಿದೆ. ರವಿ ಕರ್ಕಾಟಕ ರಾಶಿಯಲ್ಲಿ ಮತ್ತು ಚಂದ್ರ ವೃಷಭ ರಾಶಿಯ ರೋಹಿಣಿ ನಕ್ಷತ್ರದಲ್ಲಿ ಸಂಚರಿಸುತ್ತಾನೆ. ರಾಹುಕಾಲ ಬೆಳಗ್ಗೆ 9:15 ರಿಂದ 10:50 ರವರೆಗೆ ಇರಲಿದೆ. ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ, ಮತ್ತು ಶುಭಕಾಲ ಮಧ್ಯಾಹ್ನ 1:59 ರಿಂದ 3:34 ರವರೆಗೆ ಇರುತ್ತದೆ. ಈ ದಿನದ ದ್ವಾದಶ ರಾಶಿಗಳ ದಿನ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.

Source link

E20 ಪೆಟ್ರೋಲ್‌ನಲ್ಲಿ ಕ್ಲೋರೈಡ್, ತೇವಾಂಶ ಪತ್ತೆ ವದಂತಿ ಸುಳ್ಳು: ಗ್ರಾಹಕರಿಗೆ ಆತಂಕ ಬೇಡ ಎಂದ ತೈಲ ಕಂಪನಿಗಳು – Kannada News | E20 Petrol Quality Safe: OMCs Refute Chloride Contamination Claims

ಸಾಂದರ್ಭಿಕ ಚಿತ್ರImage Credit source: the times of India

ನವದೆಹಲಿ, ಆಗಸ್ಟ್ 08: ಇತ್ತೀಚಿನ ದಿನಗಳಲ್ಲಿ E20 ಪೆಟ್ರೋಲ್‌ನಲ್ಲಿ (ಎಥನಾಲ್ ಮಿಶ್ರಿತ ಪೆಟ್ರೋಲ್) ಅತಿಯಾದ ಕ್ಲೋರೈಡ್ ಮತ್ತು ತೇವಾಂಶ (ನೀರಿನ ಅಂಶ) ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದ ಬೆನ್ನಲ್ಲೇ, ದೇಶದ ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳು (OMCs) ದೇಶಾದ್ಯಂತ ತೀವ್ರ ನಿಗಾ ವಹಿಸಿ ತಪಾಸಣೆ ನಡೆಸಿವೆ. ಈ ತಪಾಸಣೆಯಲ್ಲಿ ಇಂಧನದ ಗುಣಮಟ್ಟವು ನಿಗದಿತ ಮಾನದಂಡಗಳ ಒಳಗೇ ಇರುವುದು ದೃಢಪಟ್ಟಿದ್ದು, ಇಂಧನ ಕಲುಷಿತಗೊಂಡಿದೆ ಎಂಬ ವದಂತಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಕಂಪನಿಗಳು ಸ್ಪಷ್ಟಪಡಿಸಿವೆ. ಮಾಧ್ಯಮಗಳಲ್ಲಿ 500 ppm ವರೆಗೆ ಕ್ಲೋರೈಡ್ ಪತ್ತೆಯಾಗಿದೆ ಎಂದು ಮಾಡಲಾಗಿದ್ದ ಆರೋಪಗಳನ್ನು ತಳ್ಳಿಹಾಕಿರುವ ಕಂಪನಿಗಳು, ಗ್ರಾಹಕರು ಯಾವುದೇ ಆತಂಕವಿಲ್ಲದೆ E20 ಪೆಟ್ರೋಲ್ ಬಳಸಬಹುದು ಎಂದು ತಿಳಿಸಿವೆ.

ದಿನಕ್ಕೆ 8 ರಿಂದ 12 ಬಾರಿ ಗುಣಮಟ್ಟ ತಪಾಸಣೆ!

ಗ್ರಾಹಕರ ನಂಬಿಕೆ ಮತ್ತು ವಾಹನಗಳ ಕಾರ್ಯಕ್ಷಮತೆಗೆ ಯಾವುದೇ ಧಕ್ಕೆಯಾಗದಂತೆ ತಡೆಯಲು ಭಾರತ ಸರ್ಕಾರ ಮತ್ತು ತೈಲ ಕಂಪನಿಗಳು ಕಠಿಣ ಕ್ರಮಗಳನ್ನು ಕೈಗೊಂಡಿವೆ. ದೇಶದ ಪ್ರತಿ ಪೆಟ್ರೋಲ್ ಬಂಕ್‌ಗಳಲ್ಲಿರುವ ಭೂಗತ ಇಂಧನ ಟ್ಯಾಂಕ್‌ಗಳನ್ನು ದಿನಕ್ಕೆ 8 ರಿಂದ 12 ಬಾರಿ ನೀರಿನ ಸೋರಿಕೆ ಮತ್ತು ಸಾಂದ್ರತೆ ತಪಾಸಣೆಗೆ ಒಳಪಡಿಸಲಾಗುತ್ತಿದೆ. ದೇಶಾದ್ಯಂತ ಸುಮಾರು 90,000 ಪೆಟ್ರೋಲ್ ಬಂಕ್‌ಗಳಲ್ಲಿ ಈ ಕಡ್ಡಾಯ ತಪಾಸಣೆ ನಡೆಯುತ್ತಿದ್ದು, ಎಲ್ಲಿಯೂ ನೀರಿನ ಅಂಶ ಪತ್ತೆಯಾಗಿಲ್ಲ.

ಇದರೊಂದಿಗೆ ಸಂಚಾರಿ ಇಂಧನ ಗುಣಮಟ್ಟ ತಪಾಸಣಾ ಪ್ರಯೋಗಾಲಯಗಳನ್ನು (Mobile Fuel Quality Testing Laboratories) ನಿಯೋಜಿಸಲಾಗಿದ್ದು, ಪ್ರಯೋಗಾಲಯಗಳ ಮೂಲಕ ಸ್ವತಂತ್ರವಾಗಿ ಗುಣಮಟ್ಟವನ್ನು ಮರುಪರಿಶೀಲಿಸಲಾಗುತ್ತಿದೆ.

ವಿವಿಧ ಹಂತಗಳಲ್ಲಿ ನಡೆದ ತಪಾಸಣೆ

  • ಶುದ್ಧೀಕರಣ ಹಂತ: ರಿಫೈನರಿಗಳಿಂದ ಹೊರಬರುವ ಪೆಟ್ರೋಲ್ ಮಾದರಿಗಳನ್ನು ಪರೀಕ್ಷಿಸಿದಾಗ, ಅದರಲ್ಲಿರುವ ಕ್ಲೋರೈಡ್ ಪ್ರಮಾಣವು 1 ppm ಗಿಂತಲೂ ಕಡಿಮೆ ಇರುವುದು ಕಂಡುಬಂದಿದೆ.
  • ಡಿಸ್ಟಿಲರಿ ಹಂತ (ಎಥನಾಲ್ ಉತ್ಪಾದನಾ ಘಟಕ): ಕಳೆದ 10 ದಿನಗಳಲ್ಲಿ ದೇಶದ 80 ಎಥನಾಲ್ ಉತ್ಪಾದನಾ ಘಟಕಗಳಿಂದ ಮಾದರಿಗಳನ್ನು ಸಂಗ್ರಹಿಸಿ ತಜ್ಞರ ತಂಡ ಪರಿಶೀಲಿಸಿದೆ. ಎಲ್ಲಾ ಮಾದರಿಗಳಲ್ಲೂ ಕ್ಲೋರೈಡ್ ಪ್ರಮಾಣ 3 ppm ಗಿಂತ ಕಡಿಮೆ ಇದೆ.
  • ಇಂಧನ ಪೂರೈಕೆ: ದೇಶಾದ್ಯಂತ ತೈಲ ಡಿಪೋಗಳಿಂದ ಸಂಗ್ರಹಿಸಿದ 80ಕ್ಕೂ ಹೆಚ್ಚು ಇಂಧನ ಮಾದರಿಗಳಲ್ಲೂ ಕ್ಲೋರೈಡ್ ಅಂಶ 3 ppm ಗಿಂತ ಕಡಿಮೆ ದಾಖಲಾಗಿದೆ.
  • ಪೆಟ್ರೋಲ್ ಬಂಕ್‌: 1000ಕ್ಕೂ ಹೆಚ್ಚು ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಈ ಪೈಕಿ ಲಭ್ಯವಾಗಿರುವ 160 ವರದಿಗಳಲ್ಲಿ ಕ್ಲೋರೈಡ್ ಪ್ರಮಾಣ 0 ಇಂದ 3 ppm ವ್ಯಾಪ್ತಿಯಲ್ಲಿದೆ.

ಕೇವಲ 4 ಕಡೆ ಲೋಪ – ತಕ್ಷಣವೇ ಸರಬರಾಜು ಸ್ಥಗಿತ

ಈ ವ್ಯಾಪಕ ತಪಾಸಣೆಯ ಸಂದರ್ಭದಲ್ಲಿ ಕೇವಲ ನಾಲ್ಕು ಪೆಟ್ರೋಲ್ ಬಂಕ್‌ಗಳಲ್ಲಿ ಮಾತ್ರ ಕ್ಲೋರೈಡ್ ಪ್ರಮಾಣ ಕೊಂಚ ಹೆಚ್ಚಿರುವುದು ಪತ್ತೆಯಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಆ ಬಂಕ್‌ಗಳ ಇಂಧನ ಮಾರಾಟವನ್ನು ಅಮಾನತುಗೊಳಿಸಿದ್ದಾರೆ. ಅದರ ಮೂಲ ಕಾರಣವನ್ನು ಪತ್ತೆಹಚ್ಚಿ, ಅಗತ್ಯ ಕ್ರಮ ಕೈಗೊಂಡ ಬಳಿಕವಷ್ಟೇ ಅಲ್ಲಿ ಮತ್ತೆ ಇಂಧನ ಪೂರೈಕೆಗೆ ಅವಕಾಶ ನೀಡಲಾಗಿದೆ.

ಈ ಎಲ್ಲಾ ತಪಾಸಣೆಗಳ ಸಂಪೂರ್ಣ ವಿವರ ಹಾಗೂ ಕೋಷ್ಟಕವನ್ನು ಸೆಂಟರ್ ಫಾರ್ ಹೈ ಟೆಕ್ನಾಲಜಿ (CHT) ಅಧಿಕೃತ ವೆಬ್‌ಸೈಟ್ www.cht.gov.in ನಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಗುಣಮಟ್ಟಕ್ಕೆ ನಮ್ಮ ಮೊದಲ ಆದ್ಯತೆಯಾಗಿದ್ದು, ಗ್ರಾಹಕರು ಯಾವುದೇ ಗೊಂದಲವಿಲ್ಲದೆ ಇಂಧನ ಖರೀದಿಸಬಹುದು ಎಂದು ತೈಲ ಮಾರುಕಟ್ಟೆ ಕಂಪನಿಗಳು ಪ್ರಕಟಣೆಯಲ್ಲಿ ಭರವಸೆ ನೀಡಿವೆ.

ಇನ್ನಷ್ಟು  ರಾಷ್ಟ್ರೀಯ ಸುದ್ದಿಗಳನ್ನು  ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊಟ್ಟಿಗೆಹಾರ ಬಳಿ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ದುರ್ಮರಣ, ಇಬ್ಬರಿಗೆ ಗಂಭೀರ ಗಾಯ – Kannada News | Kottigehara Road Accident: Three died After Car Crashes Into LPG Cylinder Laden Truck

ಅಪಘಾತದ ರಭಸಕ್ಕೆ ನುಜ್ಜುಗುಜ್ಜಾಗಿರುವ ಕಾರುImage Credit source: tv9

ಚಿಕ್ಕಮಗಳೂರು, ಆಗಸ್ಟ್ 8: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ (Mudigere) ತಾಲೂಕಿನ ಕೊಟ್ಟಿಗೆಹಾರ (Kottigehara) ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹಾಸನ (Hassan) ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೊಟ್ಟಿಗೆಹಾರದಲ್ಲಿ ಪೆಟ್ರೋಲ್ ಬಂಕ್ ಮುಂಭಾಗ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಸಿಲಿಂಡರ್ ತುಂಬಿದ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರನ್ನು ಗುರುಕಿರಣ್ (28), ಮೋಹನ್ (30) ಹಾಗೂ ಜ್ಞಾನೇಶ್ (28) ಎಂದು ಗುರುತಿಸಲಾಗಿದೆ. ಇನ್ನು ಕಾರಿನಲ್ಲಿದ್ದ ಪ್ರೇಮ್ ಕುಮಾರ್ ಮತ್ತು ಹೃತಿಕ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರು ತುಮಕೂರು ಜಿಲ್ಲೆಯ ಗುಬ್ಬಿ ಮೂಲದವರು ಎಂದು ತಿಳಿದುಬಂದಿದೆ. ಘಟನೆ ಬಣಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:26 am, Sat, 8 August 26

Source link

ದಿನ ಭವಿಷ್ಯ: ಇಂದು ಈ ರಾಶಿಯವರು ಅಹಂಕಾರದಿಂದ ಹಲವರನ್ನು ದೂರ ಮಾಡಿಕೊಳ್ಳುವರು.. – Kannada News | Daily Horoscope for August 08, 2026: Dakshinayana Greeshma season, Ashada Masa Krishna Paksha Satursday astrology

ಮೇಷ ರಾಶಿ:

ಪ್ರೀತಿಪಾತ್ರರ ಜೊತೆ ಇಂದು ವಿಹಾರ ಮಾಡುವಿರಿ. ನಿಮ್ಮ ಮಾತುಗಳೇ ನಿಮಗೆ ತಿರುಗುಬಾಣವಾಗಿ ಬರಬಹುದು. ನೀವು ಇಂದು ವಾಹನಕ್ಕೆ ಸಂಬಂಧಿಸಿದಂತೆ ಹಣವನ್ನು ವ್ಯಯಿಸಬೇಕಾಗಬಹುದು. ಯಾರನ್ನಾದರೂ ಒಪ್ಪಿಸುವ ಜವಾಬ್ದಾರಿಯನ್ನು ನಿಮಗೆ ಕೊಡುವರು. ಯಾರಾದರೂ ನಿಮಗೆ ಇಂದು ಪ್ರೇರಣೆ ಆಗಬಹುದು. ನಿಮ್ಮ ಬಗ್ಗೆ ಬಂಧುಗಳು ಆಡಿಕೊಳ್ಳಬಹುದು. ಸಂಗಾತಿಯ ಸಂಪೂರ್ಣ ಬೆಂಬಲವು ನಿಮಗೆ ಇರಲಿದೆ. ಫಲ ಸಿಗವವರೆಗೂ ನಿಮ್ಮ ಛಲವನ್ನು ಬಿಡಲಾರಿರಿ.

ವೃಷಭ ರಾಶಿ:

ಬರಬೇಕಾದ ಹಳೆಯ ಬಾಕಿಗಳು ಇಂದು ಬಂದು ಸೇರಲಿದೆ. ಸಂತೋಷ ಪಡಲು ನೀವು ನಿಮ್ಮದೇ ಮಾರ್ಗವನ್ನು ಕಂಡುಕೊಳ್ಳುವಿರಿ. ನೋವನ್ನು ಸ್ವಲ್ಪ ಕಾಲ ಮರೆಯುವಿರಿ. ಅನವಶ್ಯಕ ವಿಚಾರಕ್ಕೆ ನೀವು ಸಮಯವನ್ನು ಕೊಡುವಿರಿ. ತಂದೆಯಿಂದ ಬೈಗುಳ ಪಡೆಯಬಹುದು. ಪಾಪದ ಪರಿಹಾರಕ್ಕಾಗಿ ಸಂಕಲ್ಪದಿಂದ ದಾನ ಮಾಡುವಿರಿ. ವ್ಯಾಪಾರ ವಲಯದಲ್ಲಿ ಹೆಚ್ಚಿನ ಜಾಗರೂಕತೆ ಅಗತ್ಯ. ನೌಕರರ ನಿರ್ಲಕ್ಷ್ಯದಿಂದ ಆಗುವ ಹೊಣೆಯನ್ನೂ ಹೊರಬೇಕಾಗುವುದು.

ಮಿಥುನ ರಾಶಿ:

ಇಂದು ಇನ್ನೊಬ್ಬರ ಮಾತನ್ನೇ ಪೂರ್ಣವಾಗಿ ನಂಬಿ ನಿಮ್ಮವರನ್ನು ಕಳೆದುಕೊಳ್ಳಲಿದ್ದೀರಿ. ನಿಮಗೆ ಇಂದು ಮಕ್ಕಳ ಕಡೆಯಿಂದ ಸಮಸ್ಯೆಗಳು ಬರುವ ಸಾಧ್ಯತೆ ಇದೆ. ಮನಸ್ಸಿನ ತೊಳಲಾಟದಿಂದ ನಿಮಗೆ ಕಷ್ಟವಾಗಬಹುದು. ಏಕಾಗ್ರವಾಗಿ ಕೆಲಸ ಮಾಡಲಾಗದು. ನಿಮ್ಮ ಗಮನಸೆಳೆದು ವಂಚಿಸುವ ಕೆಲಸವು ನಡೆಯಬಹುದು. ಸಣ್ಣ ಆದಾಯವನ್ನು ನೀವು ಇಂದು ಪಡೆಯಬಹುದು. ನಿಮ್ಮಲ್ಲಿರುವ ನ್ಯೂನತೆಗಳನ್ನು ನೀವೇ ತಿಳಿದು ಸರಿಪಡಿಸಿಕೊಳ್ಳಿ.

ಕರ್ಕಾಟಕ ರಾಶಿ:

ನ್ಯಾಯಾಲಯಕ್ಕೆ ಸಂಬಂಧಿಸಿದ್ದನ್ನು ತುರ್ತಾಗಿ ಮಾಡುವಿರಿ. ನೀವು ಬದಲಿಸಿಕೊಂಡ ಜೀವನಶೈಲಿಯ ಬಗ್ಗೆ ಕೆಲಸವರು ಆಡಿಕೊಳ್ಳಬಹುದು. ದಾಂಪತ್ಯದಲ್ಲಿ ವಿರಸದ ಮನೋಭಾವವು ಮುಂದುವರಿಯಬಹುದು. ಆಹಾರದ ವ್ಯತ್ಯಾಸದಿಂದ ಅನಾರೋಗ್ಯ ಹೆಚ್ಚಾಗುವುದು. ಚಾಡಿಯಿಂದ ಯಾರನ್ನಾದರೂ ಹಾಳು ಮಾಡುವ ಕೆಲಸವು ಇಂದು ನಿಮ್ಮಿಂದ ಆದೀತು. ಯಾವುದೇ ರೀತಿಯ ವ್ಯವಹಾರಕ್ಕೆ ನಿಮ್ಮ ಕೆಲಸದ ಗುಣಮಟ್ಟಕ್ಕೆ ಹೆಚ್ಚಿನ ಗಮನ ಬೇಕಾಗುತ್ತದೆ.

ಸಿಂಹ ರಾಶಿ:

ಕೆಲಸಗಳಲ್ಲಿ ಹಿನ್ನಡೆಯಾಗಿ ಮೇಲಧಿಕಾರಿಗಳಿಂದ‌ ಸೂಚನೆ ಬರಬಹುದು. ಕಛೇರಿಯ ಕೆಲಸದಲ್ಲಿ ವ್ಯತ್ಯಾಸವಾದ ಕಾರಣ ಕಿರಿಕಿರಿಯಿಂದ ಕೋಪ ಉಂಟಾಗಬಹುದು. ಕಟ್ಟಡದ ಕಾರ್ಯವು ಅಪೂರ್ಣವಾಗಿ ಮಾಲಿಕರಿಂದ ಹೇಳಿಸಿಕೊಳ್ಳಬೇಕಾಗುವುದು. ರಾಜಕೀಯಕ್ಕೆ ಹೋಗಲು ನಿಮಗೆ ಬೆಂಬಲವು ಸಿಗಲಿದೆ. ನೀವೂ ಬಹಳ ಉತ್ಸುಕರಾಗಿರುವಿರಿ. ಕಳೆದ ಸಮಯವನ್ನು ಚಿಂತಿಸುವಿರಿ. ಅನಿವಾರ್ಯವಾಗಿ ಮನೆಯಿಂದ ಹೊರಗೆ ವಾಸಮಾಡಬೇಕಾಗುವುದು.

ಕನ್ಯಾ ರಾಶಿ:

ಒಳಗೊಂದು ಹೊರಗೊಂದು ಸ್ವಭಾವವನ್ನು ತೋರಿಸುವುದು ಬೇಡ. ವೇಗವಾಗಿ ಸಾಲವನ್ನು ಮುಗಿಸಲು ನೀವು ಪ್ರಯತ್ನಿಸಬೇಕಾದೀತು. ಆಲಸ್ಯದಿಂದ ಹೊರಬಂದು ಆ ಕುರಿತು ಆಲೋಚಿಸಿ. ಅದೃಷ್ಟವನ್ನು ನಂಬಿ ಕುಳಿತುಕೊಳ್ಳುವುದು ಬೇಡ. ನಿಮಗಾಗದ ಕಾರ್ಯವನ್ನು ನೇರವಾಗಿ ಹೇಳುವಿರಿ. ನಿಮ್ಮ ಆಲೋಚನೆಗಳ ಬಗ್ಗೆ ಯೋಚಿಸುವುದು ಕೆಲವು ಪರಿಣಾಮಗಳನ್ನು ಉಂಟುಮಾಡಬಹುದು. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳು ಹೆಚ್ಚು ಸಮಯ ಕಳೆಯಬಹುದು.

ತುಲಾ ರಾಶಿ:

ನೀವು ಇಂದು ಏನನ್ನೋ ಮಾಡಲು ಹೋಗಿ ಮತ್ತೇನೋ ಆಗಬಹುದು. ಮಕ್ಕಳಿಂದಾಗಿ ಆರ್ಥಿಕನಷ್ಟವನ್ನು ಕಾಣಬೇಕಾಗಬಹುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ದಾಂಪತ್ಯದಲ್ಲಿ ಬಿರಕು ಬರುವ ಸಾಧ್ಯತೆ ಇದೆ. ಕಳೆದುಹೋದ ವಸ್ತು ಯಾರದೋ ಮೂಲಕ ನಿಮ್ಮ ಕೈ ಸೇರುವ ಸಾಧ್ಯತೆ ಇದೆ. ಅದಕ್ಕೋಸ್ಕರ ಪಶ್ಚಾತ್ತಾಪ ಪಡಬೇಕಾದೀತು. ಸ್ನೇಹಿತರು ನಿಮ್ಮ ಜೊತೆ ಎಂದಿನಂತೆ ಇಲ್ಲವೆಂದು ಬುದ್ಧಿಯು ಊಹಿಸುತ್ತದೆ.

ವೃಶ್ಚಿಕ ರಾಶಿ :

ಸಂತರಿಗೆ ಸಮಾನವಾದ ವ್ಯಕ್ತಿಗಳಿಂದ‌ ನಿಮಗೆ ಸಾಂತ್ವನ ಸಿಗಲಿದೆ. ನಿಮಗೆ ಸೌಕರ್ಯಗಳು ಅಧಿಕವಾಗಿ ಬೇಕು ಎನಿಸಬಹುದು. ಸ್ಥಾನಭ್ರಷ್ಟರಾಗುವ ಭಯವು ನಿಮಗೆ ಕಾಡಬಹುದು. ನಿಮ್ಮ ಹಣವನ್ನು ಬೇರೆ ರೀತಿಯಲ್ಲಿ ಬದಲಾವಣೆ ಮಾಡಿಕೊಳ್ಳುವಿರಿ. ಭೂಮಿಯ ವ್ಯವಹಾರಕ್ಕೆ ಸಂಬಂಧಿಸಿದಂತೆ ನೀವು ಕೆಲವು ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಸರ್ಕಾರಿ ನೌಕರರು ಹೆಚ್ಚಿನ ಕೆಲಸದ ಕಾರಣದಿಂದ ಇಂದು ಹೆಚ್ಚಿನ ಸಮಯವನ್ನು ಮಾಡಬೇಕಾಗುವುದು.

ಧನು ರಾಶಿ:

ಇಂದು ನಿಮ್ಮ ಮನೆಯ ಒತ್ತಡದದ ಕಾರಣ ಯಾವ ಕಾರ್ಯವನ್ನೂ ಪೂರ್ಣಗೊಳಿಸಲಾಗದು. ಹಣವನ್ನು ಸಂಪೂರ್ಣವಾಗಿ ಇತರೇತರ ಕಾರ್ಯಗಳಿಗೆ ಖರ್ಚು ಮಾಡಿ ತುರ್ತಿಗೆ ಹಣವಿಲ್ಲದಂತೆ ಮಾಡಿಕೊಳ್ಳುವಿರಿ. ನಿಮ್ಮ ಮೇಲಿನ ಸಿಟ್ಟಿನಿಂದ ಯಾರೂ ಕೆಲಸವನ್ನು ಮಾಡಿಕೊಡದೇ ಇರಬಹುದು. ವಿದ್ಯಾರ್ಥಿಗಳು ಅಧ್ಯಯನದಿಂದ ದೂರವಾಗುತ್ತಾರೆ. ವ್ಯಾಪಾರವನ್ನು ಹೆಚ್ಚಿಸಲು ಸೂಕ್ತ ವಿಧಾನಗಳನ್ನು ಅಳವಡಿಸಿಕೊಳ್ಳಿ. ನಿಮ್ಮ ಆದಾಯದ ಬಗ್ಗೆ ಗೌಪ್ಯತೆ ಇರಲಿ.

ಮಕರ ರಾಶಿ:

ಬೇಡದ್ದನ್ನೂ ಮನಸ್ಸಿನಲ್ಲಿ ಹಾಕಿಕೊಂಡು ಸಂಕಟಪಡುವಿರಿ. ಕುಟುಂಬದ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಇಬ್ಬರಿಗೂ ಸಂತೋಷವಾಗಲಿದೆ. ನೀವಂದುಕೊಂಡಿದ್ದೇ ಸತ್ಯ ಎನ್ನುವ ಮಾನಸಿಕ ಸ್ಥಿತಿಯನ್ನು ಬೆಳೆಸಿಕೊಂಡಿದ್ದರೆ ಅದರಿಂದ ಹೊರಬರುವುದು ಒಳ್ಳೆಯದು. ಇಂದಿನ ನಿಮ್ಮ ಪ್ರಯಾಣದಿಂದ ಕಷ್ಟವಾಗಬಹುದು. ಕಠಿಣ ಪರಿಶ್ರಮದ ಹೊರತಾಗಿ ಸರಿಯಾದ ಫಲಿತಾಂಶವನ್ನು ಸಾಧಿಸಲಾಗುವುದಿಲ್ಲ. ಸಂಶೋಧನೆಯ ಚಟುವಟಿಕೆಗಳಲ್ಲಿ ಯಶಸ್ಸಿದೆ.

ಕುಂಭ ರಾಶಿ:

ಇಂದು ನೀವು ಭವಿಷ್ಯಕ್ಕಾಗಿ ಆರ್ಥಿಕತೆಯ ಬಗ್ಗೆ ಅಧಿಕ ಆಲೋಚನೆ ಮಾಡುವ ಸನ್ನಿವೇಶ ಬರಲಿದೆ. ನಿಮ್ಮ ಅಂತಸ್ಸತ್ತ್ವವೇ ಎಲ್ಲ ಕಾರ್ಯಗಳನ್ನು ಖುಷಿಯಿಂದ ಮಾಡಲು ಸಹಕಾರಿಯಾಗುವುದು. ಮುಂದಾಳುತ್ವ ವಹಿಸದೇ ಕೆಲಸಗಳು ಮುನ್ನಡೆಯದು. ಬಹಳ ದಿನಗಳಿಂದ ನಿಮ್ಮ ಆರೋಗ್ಯವು ಹಳಿ ತಪ್ಪಿದ್ದರೂ ನೀವು ನಿರ್ಲಕ್ಷ್ಯ ತೋರಿಸುತ್ತಿರುವುದು ಒಳ್ಳೆಯದಲ್ಲ. ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವುದಾದರೂ ನಿರ್ಧಾರವನ್ನು ತೆಗೆದುಕೊಳ್ಳುವಾಗ, ಉತ್ತಮ ಅನುಭವಿ ವ್ಯಕ್ತಿಯನ್ನು ಸಂಪರ್ಕಿಸಿ.

ಮೀನ ರಾಶಿ:

ಕುಂಟು ನೆಪವನ್ನು ಹೇಳಿ ಇಂದಿನ ಸುತ್ತಾಟವನ್ನು ತಪ್ಪಿಸಿಕೊಳ್ಳುವಿರಿ. ತಿಳಿವಳಿಕೆ ಇಲ್ಲದವರ ನಿಮ್ಮ ವ್ಯವಹಾರಗಳನ್ನು ಹೇಳಬೇಡಿ. ನಿಮಗೆ ಬರಬೇಕಾದ ಹಣದ ಬಗ್ಗೆ ನಿರ್ಲಕ್ಷ್ಯ ತೋರಿದ್ದರಿಂದ ನಿಮಗೆ ನಷ್ಟವಾಗಬಹುದು. ಪ್ರೇಮ ವಿವಾಹದಿಂದ ಸಂಕಷ್ಟ ಎನಿಸುವುದು. ಇಂದು ಸ್ವಲ್ಪ ದೇಹಕ್ಕೂ ಮನಸ್ಸಿಗೂ ವಿಶ್ರಾಂತಿಯನ್ನು ನೀಡಿದರೆ ಒಳ್ಳೆಯದು. ಹಣಕಾಸಿನ ವಹಿವಾಟಿನ ಜೊತೆ ವ್ಯವಹರಿಸುವಾಗ ಜಾಗರೂಕತೆ ಇರಲಿ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಗ್ರೀಷ್ಮ, ಚಾಂದ್ರಮಾಸ : ಆಷಾಢ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಆಶ್ಲೇಷಾ, ವಾರ : ಶನಿ ಪಕ್ಷ : ಕೃಷ್ಣ, ತಿಥಿ : ದಶಮೀ, ನಿತ್ಯನಕ್ಷತ್ರ : ಮೃಗಶಿರಾ, ಯೋಗ : ಹರ್ಷಣ, ಕರಣ : ಬವ, ಸೂರ್ಯೋದಯ – 06 – 07 am, ಸೂರ್ಯಾಸ್ತ – 06 – 42 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:16 – 10:51, ಯಮಗಂಡ ಕಾಲ 13:59 – 15:34, ಗುಳಿಕ ಕಾಲ 06:08 – 07:42

– ಲೋಹಿತ್ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:39 am, Sat, 8 August 26

Source link

ಮಹೀಂದ್ರಾ ಗ್ರೂಪ್​ನಿಂದ ಹೊಸ ವಿಮಾನ ಸಂಸ್ಥೆ; ನೋವಾವಾಯು ಏರೋಸ್ಪೇಸ್ ಕಂಪನಿ ನೊಂದಣಿ – Kannada News | Mahindra Group registers new defence aircraft company Novavayu Aerospace

ನವದೆಹಲಿ, ಆಗಸ್ಟ್ 7: ಪ್ರಸಿದ್ಧ ವಾಹನ ತಯಾರಿಕಾ ಸಂಸ್ಥೆಯಾದ ಮಹೀಂದ್ರಾ ವಿಮಾನ ಹಾಗೂ ವೈಮಾನಿಕ ಬಿಡಿಭಾಗಗಳನ್ನು ತಯಾರಿಸುವ ಹೊಸ ಸಂಸ್ಥೆಯೊಂದನ್ನು ಸ್ಥಾಪಿಸಿದೆ. ಡಿಫೆನ್ಸ್ ಸೆಕ್ಟರ್​ಗೆ ಪೂರೈಕೆ ಮಾಡುವ ಉದ್ದೇಶದಿಂದ ‘ನೋವಾವಾಯು ಏರೋಸ್ಪೇಸ್ ಲಿಮಿಟೆಡ್’ (Novavayu Aerospace Limited) ಎಂಬ ನೂತನ ಅಂಗಸಂಸ್ಥೆಯನ್ನು ಪ್ರಾರಂಭಿಸಿದೆ. ಮಹೀಂದ್​ರ ಗ್ರೂಪ್​ಗೆ ಸೇರಿದ ಮಹೀಂದ್ರ ಅಡ್ವಾನ್ಸ್ಡ್ ಸಿಸ್ಟಮ್ಸ್ ಮಾಲಕತ್ವದ ಮಹೀಂದ್ರ ಡಿಫೆನ್ಸ್ ಸಿಸ್ಟಮ್ಸ್​ನ (Mahindra Defence Systems) ಅಂಗಸಂಸ್ಥೆಯಾಗಿ ಈ ಹೊಸ ಕಂಪನಿಯನ್ನು 2026ರ ಜುಲೈ 29ರಂದು ನೊಂದಾಯಿಸಲಾಗಿದ್ದು, ಮುಂಬೈನಲ್ಲಿ ಮುಖ್ಯ ಕಚೇರಿ ಇದೆ.

ರಕ್ಷಣಾ ಕ್ಷೇತ್ರಕ್ಕಾಗಿ ವಿಮಾನಗಳ ತಯಾರಿಕೆ (Aircraft Manufacturing), ಏರೋಸ್ಪೇಸ್ ಉತ್ಪನ್ನಗಳು ಮತ್ತು ಸಂಬಂಧಿತ ಸೇವೆಗಳನ್ನು ಒದಗಿಸುವುದು ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ನೋವಾವಾಯು ಕಂಪನಿಯನ್ನು ₹1 ಕೋಟಿ ಅಧಿಕೃತ ಶೇರು ಬಂಡವಾಳದೊಂದಿಗೆ ಪ್ರಾರಂಭಿಸಲಾಗಿದೆ.

ಬೆಂಗಳೂರಿನ ಉತ್ಪಾದನಾ ಘಟಕದ ಬೆಂಬಲ

ಆನಂದ್ ಮಹೀಂದ್ರ ಒಡೆತನದ ಮಹೀಂದ್ರಾ ಗ್ರೂಪ್ ಈಗಾಗಲೇ ಬೆಂಗಳೂರಿನ ಬಳಿ ಬೃಹತ್ತಾದ ‘ಮಹೀಂದ್ರಾ ಏರೋಸ್ಟ್ರಕ್ಚರ್ಸ್’ (Mahindra Aerostructures) ಘಟಕವನ್ನು ಹೊಂದಿದ್ದು, ಏರ್‌ಬಸ್ (Airbus) ಹೆಲಿಕಾಪ್ಟರ್‌ಗಳ ಬಿಡಿಭಾಗಗಳನ್ನು ತಯಾರಿಸುತ್ತಿದೆ. ಹೊಸ ‘ನೋವಾವಾಯು’ ಸಂಸ್ಥೆಯು ಈ ಅನುಭವವನ್ನು ಬಳಸಿಕೊಂಡು ಸಂಪೂರ್ಣ ವಿಮಾನ ತಯಾರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲಿದೆ. ಆದರೆ, ನೋವಾವಾಯು ಯಾವ ಉತ್ಪನ್ನಗಳನ್ನು ತಯಾರಿಸುತ್ತದೆ, ಯಾರಿಗೆ ಪೂರೈಕೆ ಮಾಡುತ್ತದೆ ಎಂಬುದು ಇನ್ನೂ ನಿರ್ಧಾರವಾದಂತಿಲ್ಲ. ನೊಂದಣಿ ಪ್ರಕ್ರಿಯೆ ಈಗಷ್ಟೇ ಮುಗಿದಿರುವುದರಿಂದ ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟತೆ ಸಿಗಬಹುದು.

ಇದನ್ನೂ ಓದಿ: 2050ರಲ್ಲಿ ಭಾರತ ಶ್ರೀಮಂತಿಕೆ ಸಾಧಿಸುವ ಮುನ್ನವೇ ಮುಪ್ಪಾಗಲಿದೆ: ಅಧ್ಯಯನ ವರದಿ

ಬ್ರೆಜಿಲ್​ನ ಎಂಬ್ರೇರ್ ಜೊತೆ ಮಹೀಂದ್ರ ಒಪ್ಪಂದ

ಕಳೆದ ವರ್ಷ (2025) ಅಕ್ಟೋಬರ್ ತಿಂಗಳಲ್ಲಿ ಬ್ರೆಜಿಲ್‌ನ ಎಂಬ್ರೇರ್ (Embraer) ಸಂಸ್ಥೆಯೊಂದಿಗೆ ‘C-390 ಮಿಲಿಟರಿ ಸಾರಿಗೆ ವಿಮಾನ’ ತಯಾರಿಕೆಗೆ ಸಂಬಂಧಿಸಿದಂತೆ ಮಹೀಂದ್ರಾ ಒಪ್ಪಂದ ಮಾಡಿಕೊಂಡಿತ್ತು. ಇದೇ ಉದ್ದೇಶಕ್ಕೆ ನೋವಾವಾಯು ಏರೋಸ್ಪೇಸ್ ಅನ್ನು ಆರಂಭಿಸಲಾಗಿದೆಯಾ ಎನ್ನುವ ಅನುಮಾನ ಇದೆಯಾದರೂ ಅದು ಖಚಿತವಿಲ್ಲದ ಸುದ್ದಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಉಡುಪಿಯಲ್ಲಿ ಶೂಟೌಟ್: ಕಾಂಗ್ರೆಸ್ ಮುಖಂಡನ ಮೇಲೆ ಗುಂಡಿನ ದಾಳಿ ದೃಶ್ಯ ಸಿಸಿಟಿವಿಯಲ್ಲಿ ಸೆರೆ – Kannada News | Udupi Congress Leader shootout video captured in cctv, Here Is SP Statement

ಉಡುಪಿ, (ಆಗಸ್ಟ್ 07): ಜಿಲ್ಲೆಯ ಮುದರಂಗಡಿ ಪೇಟೆಯಲ್ಲಿರು ಶುಕ್ರವಾರ ಮಧಾಹ್ನ ಶೂಟೌಟ್ ನಡೆದಿದೆ. ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು, ಕಾಂಗ್ರೆಸ್‌ ಮುಖಂಡನ ಮೇಲೆ ಗುಂಡು ಹಾರಿಸಿದ್ದು, ಉದ್ಯಮಿ ದೇವ ಡೆವಿಡ್ ಡಿಸೋಜ ಸಾವನ್ನಪ್ಪಿದ್ದಾನೆ. ಇನ್ನು ದುಷ್ಕರ್ಮಿಯೋರ್ವ ಗುಂಡಿನ ದಾಳಿ ಮಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೈಕ್​​​ನಲ್ಲಿ ಬಂದಿದ್ದ ಇಬ್ಬರ ಪೈಕಿ ಓರ್ವ ನಡೆದುಕೊಂಡು ಡೆವಿಡ್ ಡಿಸೋಜ ಬಳಿ ಹೋಗಿ ಪಿಸ್ತೂಲ್​​​ನಿಂದ ಮೂರ್ನಾಲ್ಕು ಬಾರಿ ಗುಂಡು ಹಾರಿಸಿದ್ದಾನೆ. ಬಳಿಕ ಬೈಕ್​​ ಏರಿ ಪರಾರಿಯಾಗಿದ್ದಾನೆ. ಇನ್ನು ಈ ಶೂಟ್​ ಔಟ್ ಬಗ್ಗೆ ಎಸ್ಪಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ಉಡುಪಿಯಲ್ಲಿ ಮತ್ತೊಂದು ಶೂಟೌಟ್‌; ಗುಂಡಿಕ್ಕಿ ಕಾಂಗ್ರೆಸ್‌ ಮುಖಂಡನ ಬರ್ಬರ ಹತ್ಯೆ

Source link

ಹೆಸರಘಟ್ಟದಲ್ಲಿ ಭಾರತದ ಮೊದಲ ‘ಕ್ವಾಂಟಮ್ ಸಿಟಿ ನಿರ್ಮಾಣ: ಸಿಎಂ ಡಿಕೆ ಶಿವಕುಮಾರ್ – Kannada News | India’s first ‘Quantum City’ to be built in hesaraghatta Says CM DK Shivakumar

ಬೆಂಗಳೂರು, (ಆ.7): ‘ ಭಾರತ–ಅಮೆರಿಕ ತಂತ್ರಜ್ಞಾನ ಮತ್ತು ನಾವೀನ್ಯತಾ ಸಹಭಾಗಿತ್ವದ ಪ್ರಮುಖ ಕೇಂದ್ರವಾಗಿ ಬೆಂಗಳೂರು ಬೆಳೆಯುತ್ತಿದ್ದು, ನಗರದಲ್ಲಿ ಪೂರ್ಣ ಪ್ರಮಾಣದ ಅಮೆರಿಕ ಕಾನ್ಸುಲೇಟ್ ಸ್ಥಾಪನೆಯಾಗಬೇಕು’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದರು. ಬೆಂಗಳೂರಿನ ಸೈನ್ಸ್ ಗ್ಯಾಲರಿಯಲ್ಲಿ ‘ಕ್ವಾಂಟಮ್’ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ 700ಕ್ಕೂ ಹೆಚ್ಚು ಅಮೆರಿಕನ್ ಕಂಪನಿಗಳು, 10 ಸಾವಿರಕ್ಕೂ ಹೆಚ್ಚು ಸ್ಟಾರ್ಟ್ಅಪ್ಗಳು ಹಾಗೂ 10 ಲಕ್ಷಕ್ಕೂ ಹೆಚ್ಚು ತಂತ್ರಜ್ಞಾನ ಉದ್ಯೋಗಿಗಳಿದ್ದಾರೆ. ಭಾರತದಲ್ಲಿ ಅಮೆರಿಕದ ಅತಿ ದೊಡ್ಡ ತಂತ್ರಜ್ಞಾನ ಮತ್ತು ನಾವೀನ್ಯತೆಯ ಪಾಲುದಾರ ನಗರವಾಗಿರುವ ಬೆಂಗಳೂರಿಗೆ ಪೂರ್ಣ ಪ್ರಮಾಣದ ಕಾನ್ಸುಲೇಟ್ ಅಗತ್ಯವಿದೆ ಎಂದು ಮುಖ್ಯಮಂತ್ರಿಗಳು ಪ್ರತಿಪಾದಿಸಿದರು.

‘ನಾವು ಕೇವಲ ವ್ಯಾಪಾರ ಕಚೇರಿಯನ್ನು ಕೇಳುತ್ತಿಲ್ಲ. ಶಾಶ್ವತ ರಾಜತಾಂತ್ರಿಕ ಕಚೇರಿ ಇಲ್ಲಿ ಇರಬೇಕು. ಇದರಿಂದ ತಂತ್ರಜ್ಞಾನ, ನಾವೀನ್ಯತೆ, ಸಂಶೋಧನೆ, ರಕ್ಷಣೆ, ಬಾಹ್ಯಾಕಾಶ ಮತ್ತು ವಿಮಾನಯಾನ ಕ್ಷೇತ್ರಗಳಲ್ಲಿ ಸಹಕಾರ ಮತ್ತಷ್ಟು ವಿಸ್ತರಿಸಲಿದೆ. ಕಾನ್ಸುಲೇಟ್ ಸ್ಥಾಪನೆಗೆ ಅಗತ್ಯವಿರುವ ರಾಜ್ಯಮಟ್ಟದ ಎಲ್ಲ ಅನುಮತಿಗಳನ್ನು ತ್ವರಿತವಾಗಿ ನೀಡಲು ಕರ್ನಾಟಕ ಸರ್ಕಾರ ಸಿದ್ಧವಿದೆ. ಅಮೆರಿಕದ ರಾಯಭಾರ ಕಚೇರಿ ಮತ್ತು ಸಂಬಂಧಿಸಿದ ಸಂಸ್ಥೆಗಳೊಂದಿಗೆ ಸರ್ಕಾರ ನಿಕಟವಾಗಿ ಕಾರ್ಯನಿರ್ವಹಿಸಲಿದೆ ಎಂದರು.
ಅಮೆರಿಕದ ಪ್ರಮುಖ ಶೈಕ್ಷಣಿಕ ಹಾಗೂ ನಾವೀನ್ಯತಾ ಕೇಂದ್ರಗಳೊಂದಿಗೆ ತರಬೇತಿ, ಸಂಶೋಧನೆ ಮತ್ತು ಹೊಸ ಆವಿಷ್ಕಾರಗಳಲ್ಲಿ ಪಾಲುದಾರಿಕೆ ಬೆಳೆಸಲು ಅಮೆರಿಕದ ರಾಯಭಾರಿ ಸರ್ಜಿಯೋ ಗೋರ್ ಅವರ ನೆರವು ಕೋರಿದರು.

ಸೈನ್ಸ್ ಗ್ಯಾಲರಿ ಬೆಂಗಳೂರು ಈ ಕನಸಿನೊಂದಿಗೆ ನಿಕಟವಾಗಿ ಬೆಸೆದುಕೊಂಡಿದೆ. ಕ್ವಾಂಟಮ್ ಶೈಕ್ಷಣಿಕ ಸಲಹೆಗಾರರಾದ ಪ್ರೊಫೆಸರ್ ಅರಿಂದಮ್ ಘೋಷ್ ಅವರು ಕರ್ನಾಟಕದ ಕ್ವಾಂಟಮ್ ಟಾಸ್ಕ್ ಫೋರ್ಸ್ನ ಅಧ್ಯಕ್ಷರಾಗಿದ್ದಾರೆ. ಡಾ. ಜಾಹ್ನವಿ ಫಾಲ್ಕಿ ಅವರು ಕ್ಯೂ-ಸಿಟಿ ಸಲಹಾ ಮಂಡಳಿಯ ಸದಸ್ಯರಾಗಿದ್ದಾರೆ. ನನಗೆ ಕ್ವಾಂಟಮ್ ವಿಜ್ಞಾನದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದಿರಬಹುದು. ಆದರೆ ಕ್ವಾಂಟಮ್ ವಿಜ್ಞಾನವು ಕಂಪ್ಯೂಟಿಂಗ್, ಸಂವಹನ, ಆರೋಗ್ಯ ಮತ್ತು ಆಧುನಿಕ ಉತ್ಪಾದನಾ ಕ್ಷೇತ್ರದ ಭವಿಷ್ಯವನ್ನು ರೂಪಿಸುತ್ತದೆ ಎಂಬ ಅರಿವಿದೆ ಎಂದರು.

ನಮ್ಮ ಯುವಕರು ಇಂತಹ ಬೆಳವಣಿಗೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ಖಾತರಿಪಡಿಸುವುದು ನಮ್ಮ ಜವಾಬ್ದಾರಿಯಾಗಿದೆ. ಅದಕ್ಕಾಗಿಯೇ ಇಂತಹ ಸಂಸ್ಥೆ ನಮಗೆ ಮುಖ್ಯವಾಗುತ್ತದೆ. ಸೈನ್ಸ್ ಗ್ಯಾಲರಿಯ ಸಂಸ್ಥಾಪಕ ಪಾಲುದಾರರಾಗಿ, ಸಾರ್ವಜನಿಕರಿಗೆ ವಿಜ್ಞಾನವನ್ನು ತಲುಪಿಸುವ ಅದರ ಆಶಯಕ್ಕೆ ಕರ್ನಾಟಕ ಸರ್ಕಾರ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಹೇಳಿದರು.

ಹೆಸರಘಟ್ಟದಲ್ಲಿ ‘ಕ್ವಾಂಟಮ್ ಸಿಟಿ’

ಕ್ವಾಂಟಮ್ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಈಗಾಗಲೇ ಹಲವು ಹೆಜ್ಜೆಗಳನ್ನು ಇಟ್ಟಿದೆ. ಕರ್ನಾಟಕ ಕ್ವಾಂಟಮ್ ಮಿಷನ್ನ ಬೆಂಬಲದೊಂದಿಗೆ ಬೆಂಗಳೂರು ಜಾಗತಿಕ ತಂತ್ರಜ್ಞಾನ ಕಂಪನಿಗಳು ಮತ್ತು ನವೋದ್ಯಮಗಳ ಕೇಂದ್ರವಾಗಿ ಬೆಳೆಯುತ್ತಿದೆ ಎಂದು ಹೇಳಿದರು.

ಹೆಸರಘಟ್ಟದಲ್ಲಿ ಭಾರತದ ಮೊದಲ ‘ಕ್ವಾಂಟಮ್ ಸಿಟಿ’ ನಿರ್ಮಾಣವಾಗುತ್ತಿದ್ದು, ಸಂಶೋಧನಾ ಪ್ರಯೋಗಾಲಯಗಳ ಪ್ರಮುಖ ಕೇಂದ್ರವಾಗಲಿದೆ. ನಮ್ಮ ಬದ್ಧತೆ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ‘ಲೋಕಲ್ ಎಕಾನಮಿ ಆಕ್ಸಿಲರೇಟರ್ ಪ್ರೋಗ್ರಾಂ’ (LEAP) ಅಡಿಯಲ್ಲಿ, ಕರ್ನಾಟಕ ಸರ್ಕಾರವು ಬೆಂಗಳೂರಿನ ಹೊರಗೆ ಮೊದಲ ಬಾರಿಗೆ ಧಾರವಾಡದ IIITಯಲ್ಲಿ ‘ಕ್ವಾಂಟಮ್ ಕೃತಕ ಬುದ್ಧಿಮತ್ತೆ ಮತ್ತು ಕಂಪ್ಯೂಟಿಂಗ್ ಶ್ರೇಷ್ಠತಾ ಕೇಂದ್ರ’ವನ್ನು ಸ್ಥಾಪಿಸಲಾಗಿದೆ ಎಂದರು.

‘ಜ್ಞಾನ ಮೂಲಸೌಕರ್ಯವೇ ಭವಿಷ್ಯದ ಶಕ್ತಿ’

ಭವಿಷ್ಯದ ಆರ್ಥಿಕ ಬೆಳವಣಿಗೆಯನ್ನು ಕಟ್ಟಡ, ರಸ್ತೆ ಮತ್ತಿತರ ಭೌತಿಕ ಮೂಲಸೌಕರ್ಯಗಳು ಮಾತ್ರ ನಿರ್ಧರಿಸುವುದಿಲ್ಲ. ಜ್ಞಾನ ಮೂಲಸೌಕರ್ಯವೇ ಭವಿಷ್ಯದ ಆರ್ಥಿಕತೆಯ ನಿಜವಾದ ಶಕ್ತಿ. “ನಮ್ಮ ಗುರಿ ಸರಳ. ತರಗತಿಗಳನ್ನು ಪ್ರಯೋಗಾಲಯಗಳಿಗೆ, ಪ್ರಯೋಗಾಲಯಗಳನ್ನು ಸ್ಟಾರ್ಟ್ಅಪ್ಗಳಿಗೆ ಮತ್ತು ಸ್ಟಾರ್ಟ್ಅಪ್ಗಳನ್ನು ಜಾಗತಿಕ ಮಾರುಕಟ್ಟೆಗೆ ಜೋಡಿಸಬೇಕು,” ಎಂದು ಹೇಳಿದರು.

ಕರ್ನಾಟಕದ ವಿಶ್ವವಿದ್ಯಾಲಯಗಳು ಮತ್ತು ಅಮೆರಿಕದ ಪ್ರಮುಖ ವಿಶ್ವವಿದ್ಯಾಲಯಗಳ ನಡುವೆ ಜಂಟಿ ಸಂಶೋಧನೆ, ಹೊಸ ಪಠ್ಯಕ್ರಮ ಮತ್ತು ಉದ್ಯಮಕ್ಕೆ ಅಗತ್ಯವಾದ ಕೌಶಲ್ಯಾಧಾರಿತ ಕಲಿಕೆಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.

ಅಮೆರಿಕದ ಟೆಕ್ ಕೇಂದ್ರಗಳೊಂದಿಗೆ ಸಹಭಾಗಿತ್ವ

ಅಮೆರಿಕದ ಪ್ರಮುಖ ತಂತ್ರಜ್ಞಾನ ಕೇಂದ್ರಗಳ ಶ್ರೇಷ್ಠತಾ ಕೇಂದ್ರಗಳು, ಇನ್ಕ್ಯುಬೇಟರ್ಗಳು ಮತ್ತು ಸಂಶೋಧನಾ ಪಾರ್ಕ್ಗಳೊಂದಿಗೆ ಕರ್ನಾಟಕ ಆಳವಾದ ಪಾಲುದಾರಿಕೆ ಬಯಸಿದೆ.ಇದರಿಂದ ರಾಜ್ಯದ ನವೋದ್ಯಮಗಳಿಗೆ ಜಾಗತಿಕ ಮಾರ್ಗದರ್ಶನ, ಆಧುನಿಕ ಸಂಶೋಧನಾ ಸೌಲಭ್ಯ, ಬಂಡವಾಳ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಪ್ರವೇಶ ದೊರೆಯಲಿದೆ ಎಂದು ಹೇಳಿದರು.

ಕ್ವಾಂಟಮ್ ವಿಜ್ಞಾನವು ಕಂಪ್ಯೂಟಿಂಗ್, ಸಂವಹನ, ಆರೋಗ್ಯ ಮತ್ತು ಆಧುನಿಕ ಉತ್ಪಾದನಾ ಕ್ಷೇತ್ರಗಳ ಭವಿಷ್ಯವನ್ನು ರೂಪಿಸಲಿದೆ. ಈ ಬೆಳವಣಿಗೆಯಲ್ಲಿ ಯುವಕರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವುದು ಸರ್ಕಾರದ ಜವಾಬ್ದಾರಿ.‘ಸೈನ್ಸ್ ಗ್ಯಾಲರಿ’ ಸಾರ್ವಜನಿಕರಿಗೆ ವಿಜ್ಞಾನವನ್ನು ತಲುಪಿಸುವ ಪ್ರಮುಖ ವೇದಿಕೆಯಾಗಿದ್ದು, ಅದರ ಆಶಯಕ್ಕೆ ಕರ್ನಾಟಕ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ. ಕ್ವಾಂಟಮ್’ ಪ್ರದರ್ಶನವನ್ನು ಬೆಂಗಳೂರಿನ ಜನರು, ಕರ್ನಾಟಕದ ಜನರು ಹಾಗೂ ನಗರಕ್ಕೆ ಭೇಟಿ ನೀಡುವ ಎಲ್ಲರಿಗಾಗಿ ಮುಕ್ತಗೊಳಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ಘೋಷಿಸಿದರು.

Source link

‘ಎಫ್‌ಸಿಆರ್‌ಎ ವಿಧೇಯಕ ಭಾರತದ ಆಂತರಿಕ ವಿಷಯ’; ಅಮೆರಿಕದ ಸಂಸದನ ಟೀಕೆಗೆ ಕೇಂದ್ರ ಸರ್ಕಾರ ತಿರುಗೇಟು – Kannada News | FCRA bill is India’s internal matter MEA hits back at US lawmakers criticism

ನವದೆಹಲಿ, ಆಗಸ್ಟ್ 7: ವಿದೇಶಿ ದೇಣಿಗೆ ನಿಯಂತ್ರಣ (ತಿದ್ದುಪಡಿ) ಕಾಯ್ದೆಗೆ (FCRA Bill) ಸಂಬಂಧಿಸಿದಂತೆ ಅಮೆರಿಕದ ಸಂಸದರೊಬ್ಬರು ವ್ಯಕ್ತಪಡಿಸಿದ್ದ ಟೀಕೆಯನ್ನು ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ನಿರಾಕರಿಸಿದೆ. ಎಫ್‌ಸಿಆರ್‌ಎ ಕಾಯ್ದೆಯು ಸಂಪೂರ್ಣವಾಗಿ ಭಾರತದ ಆಂತರಿಕ ವಿಷಯವಾಗಿದ್ದು, ದೇಶದ ಕಾನೂನು ಮತ್ತು ಸಾರ್ವಭೌಮತ್ವಕ್ಕೆ ಸಂಬಂಧಿಸಿದ ನಿರ್ಧಾರಗಳಲ್ಲಿ ವಿದೇಶಿ ಹಸ್ತಕ್ಷೇಪವನ್ನು ಸಹಿಸುವುದಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.

ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಶಾಸನಗಳನ್ನು ರೂಪಿಸಲು ಭಾರತವು ಅತ್ಯುತ್ತಮ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಹೊಂದಿದೆ. ದೇಶೀಯ ಕಾನೂನುಗಳನ್ನು ಅವುಗಳ ಸರಿಯಾದ ಚೌಕಟ್ಟಿನಲ್ಲಿ ನೋಡಬೇಕಾಗಿದೆ ಎಂದು ಹೇಳಿದರು.

ಅಮೆರಿಕ ಸಂಸದರ ಟೀಕೆ:

ಅಮೆರಿಕದ ಸಂಸದರೊಬ್ಬರು ಭಾರತದ ಎಫ್‌ಸಿಆರ್‌ಎ ನಿಯಮಗಳು ಕಠಿಣವಾಗಿದ್ದು, ಇವು ಎನ್‌ಜಿಒಗಳು (NGOs), ನಾಗರಿಕ ಸಮಾಜ ಸಂಸ್ಥೆಗಳು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳ ಮೇಲೆ ಆಡಳಿತಾತ್ಮಕ ಕಟ್ಟುಪಾಡುಗಳನ್ನು ವಿಧಿಸುತ್ತವೆ ಹಾಗೂ ವಿದೇಶಿ ಅನುದಾನವನ್ನು ತಡೆಯುತ್ತವೆ ಎಂದು ಬಹಿರಂಗವಾಗಿ ಕಳವಳ ವ್ಯಕ್ತಪಡಿಸಿದ್ದರು.

ಭಾರತದ ವಿದೇಶಾಂಗ ಸಚಿವಾಲಯದ ತಿರುಗೇಟು:

ಅಮೆರಿಕದ ಸಂಸದರ ಈ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, “ಎಫ್‌ಸಿಆರ್‌ಎ ಕಾಯ್ದೆಯು ಭಾರತದ ಸಂಸತ್ತು ರೂಪಿಸಿರುವ ಶಾಸನಬದ್ಧ ಕಾನೂನಾಗಿದೆ. ದೇಶದ ರಾಷ್ಟ್ರೀಯ ಭದ್ರತೆ, ಪಾರದರ್ಶಕತೆ ಮತ್ತು ಆಂತರಿಕ ಕಾನೂನು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವುದು ಯಾವುದೇ ಪ್ರಜಾಪ್ರಭುತ್ವ ಸರ್ಕಾರದ ಪ್ರಥಮ ಕರ್ತವ್ಯ. ಈ ಕುರಿತಾದ ನೀತಿ-ನಿಯಮಗಳು ಭಾರತದ ಆಂತರಿಕ ವಿಚಾರಗಳಾಗಿದ್ದು, ಇವುಗಳಲ್ಲಿ ಇತರರ ಅನಗತ್ಯ ಹಸ್ತಕ್ಷೇಪದ ಅಗತ್ಯವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ವಿದೇಶಿ ದೇಣಿಗೆಯ ದುರುಪಯೋಗ ತಡೆ:

ಭಾರತದಲ್ಲಿ ಕಾರ್ಯನಿರ್ವಹಿಸುವ ಸರ್ಕಾರೇತರ ಸಂಸ್ಥೆಗಳು (NGOs) ಪಡೆಯುವ ವಿದೇಶಿ ಧನಸಹಾಯವು ಸದ್ಬಳಕೆಯಾಗಬೇಕು ಮತ್ತು ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಅಥವಾ ಕಾನೂನುಬಾಹಿರ ಚಟುವಟಿಕೆಗಳಿಗೆ ದುರುಪಯೋಗವಾಗಬಾರದು ಎಂಬ ಉದ್ದೇಶದಿಂದ ಎಫ್‌ಸಿಆರ್‌ಎ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ ಎಂದು ಭಾರತ ಸಮರ್ಥಿಸಿಕೊಂಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಬಾಸ್’ ಸಿನಿಮಾ ನೋಡಿದ ದರ್ಶನ್ ಅಭಿಮಾನಿಗಳು ಹೀಗೆಂದರಂತೆ – Kannada News | Boss Movie actor Tanush Shivanna talks about Darsha fans reaction

ರೇಣುಕಾ ಸ್ವಾಮಿ (Renuka Swamy) ಕೊಲೆ ಆಧರಿಸಿದ್ದು ಎನ್ನಲಾಗಿದ್ದ ‘ಬಾಸ್’ ಸಿನಿಮಾ ಇಂದು (ಜುಲೈ 07) ಬಿಡುಗಡೆ ಆಗಿದೆ. ಸಾಕಷ್ಟು ನ್ಯಾಯಾಲಯದ ದಾವೆ, ವಾದ, ಪ್ರತಿವಾದಗಳ ಬಳಿಕ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ದರ್ಶನ್ ಅಭಿಮಾನಿಗಳು ಸಾಕಷ್ಟು ಕುತೂಹಲದಿಂದ ಈ ಸಿನಿಮಾ ಅನ್ನು ತಂಡಗಳಾಗಿ ಬಂದು ವೀಕ್ಷಿಸಿದ್ದಾರೆ. ಸಿನಿಮಾದ ನಟ, ನಿರ್ಮಾಪಕ ಎರಡೂ ಆಗಿರುವ ತನಿಷ್ ಶಿವಣ್ಣ, ಟಿವಿ9 ಜೊತೆಗೆ ಮಾತನಾಡಿದ್ದು, ‘ಬಾಸ್’ ಸಿನಿಮಾ ನೋಡಿದ ದರ್ಶನ್ ಅಭಿಮಾನಿಗಳು ತಮ್ಮ ಬಳಿ ಬಂದು ಹೇಳಿದ್ದೇನು? ಎಂಬುದನ್ನು ವಿವರಿಸಿದ್ದಾರೆ. ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಳೆಯಲ್ಲೂ ಲಾಲ್‌ಬಾಗ್ ಫ್ಲವರ್ ಶೋಗೆ ಭರ್ಜರಿ ಸ್ಪಂದನೆ: ಗಂಗರ ಸುವರ್ಣ ವೈಭವ ಕಣ್ತುಂಬಿಕೊಂಡವರೆಷ್ಟು ಗೊತ್ತಾ? – Kannada News | Lalbagh Flower Show 2026 Draws Over 60,000 Visitors in Two Days Despite Rain

ಗಂಗರ ಆಡಳಿತ, ಚೋಳರ ಇತಿಹಾಸ ಹಾಗೂ ಕಾವೇರಿ ತೀರದ ಹೋರಾಟಗಳ ವಿಷಯಾಧಾರಿತವಾಗಿ ವಿನ್ಯಾಸಗೊಂಡಿರುವ ಈ ಬಾರಿಯ ಮನಮೋಹಕ ಫಲಪುಷ್ಪ ಪ್ರದರ್ಶನವನ್ನು, ಸಿಲಿಕಾನ್ ಸಿಟಿ ಮಂದಿ ಜಿಟಿ ಜಿಟಿ ಮಳೆಯ ನಡುವೆಯೂ ಕಣ್ತುಂಬಿಕೊಳ್ಳುತ್ತಿದ್ದಾರೆ.

Source link

Exit mobile version