Spiritual Remedies: ಸಾಲದ ಸುಳಿಯಿಂದ ಹೊರಬರಲು ಈ ಆಧ್ಯಾತ್ಮಿಕ ತಂತ್ರ ಅನುಸರಿಸಿ – Kannada News | Astrological Tips: Spiritual Remedies for Debt Relief; A Daily Devotional Guide

ಸಾಲದ ಸುಳಿಯಿಂದ ಹೊರಬರಲುImage Credit source: Pinterest

ಸಾಲ ಹೆಚ್ಚಾದಾಗ ಅದನ್ನು ತೀರಿಸಿಕೊಳ್ಳಲು ನಾವು ಪಡುವ ಕಷ್ಟ ಅಷ್ಟಿಷ್ಟಲ್ಲ. ಬ್ಯಾಂಕ್ ಸಾಲವಿರಲಿ, ಕೈಸಾಲವಿರಲಿ ಅಥವಾ ಯಾವುದೇ ಸಾಲವಿರಲಿ, ಆದಾಯ ಸಾಲಕ್ಕೆ ಸರಿಹೊಂದುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೆಲವು ಆಧ್ಯಾತ್ಮಿಕ ತಂತ್ರಗಳನ್ನು ಅಳವಡಿಸಿಕೊಂಡರೆ ಸಾಲ ಬೇಗ ತೀರುವ ಸಾಧ್ಯತೆಗಳು ಹೆಚ್ಚಿರುತ್ತವೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ಸಾಲ ಪಡೆಯಬೇಕಾದ ಸಂದರ್ಭದಲ್ಲಿ, ಬ್ಯಾಂಕ್‌ಗೆ ಅಥವಾ ಯಾವುದೇ ವ್ಯಕ್ತಿಯ ಬಳಿ ಹಣ ಪಡೆಯಲು ಹೋಗುವಾಗ, ಕುಬೇರನನ್ನು ಸ್ಮರಣೆ ಮಾಡಿಕೊಳ್ಳುವುದು ಅತ್ಯಂತ ಮುಖ್ಯ. ಮನೆಯಲ್ಲಿ ಒಂದು ರೂಪಾಯಿ ಕಾಯನ್ನು ಅರಿಶಿನ ಬಟ್ಟೆಯಲ್ಲಿ ಕಟ್ಟಿ ದೇವರ ಬಳಿ ಇಟ್ಟು, ಕುಬೇರ ಅಥವಾ ಲಕ್ಷ್ಮಿ ಕುಬೇರರಿಗೆ ಪ್ರಾರ್ಥನೆ ಸಲ್ಲಿಸಿ. “ನಾನು ಸಾಲಕ್ಕೆ ಹೋಗುತ್ತಿದ್ದೇನೆ, ಅದನ್ನು ಸರಿಯಾಗಿ ತೀರಿಸಲು ನೀನು ವ್ಯವಸ್ಥೆ ಮಾಡಿಕೊಡು” ಎಂದು ಪ್ರಾರ್ಥಿಸಿ ಹೊರಟರೆ, ಆ ಸಾಲ ಬೇಗ ತೀರುತ್ತದೆ.

ಸಾಲ ತೀರಿಸುವಾಗ:

ಸಾಲವನ್ನು ಮರುಪಾವತಿಸುವಾಗ ದಕ್ಷಿಣಾಮೂರ್ತಿಯನ್ನು ಸ್ಮರಣೆ ಮಾಡಿಕೊಳ್ಳಬೇಕು. ಬೇರೆಯವರಿಗೆ ಹಣ ನೀಡುವಾಗ ಒಮ್ಮೆ ದಕ್ಷಿಣಾಮೂರ್ತಿಯನ್ನು ನೆನೆದು ಆ ಹಣವನ್ನು ಕೊಡಬೇಕು. ಧನಮೂಲಂ ಇದಂ ಜಗತ್ತು ಎಂಬಂತೆ ಹಣವಿದ್ದರೆ ಮಾತ್ರ ಜೀವನ ಮಾಡಲು ಸಾಧ್ಯ. ಹಣವಿಲ್ಲದವನು ಹೆಣಕ್ಕೆ ಸಮಾನ ಎಂಬ ಮಾತು ಸುಳ್ಳಲ್ಲ. ಸಾಲ ತೀರಿಸಲಾಗದೆ ಕಷ್ಟಪಡುತ್ತಿರುವಾಗ, ಅನಾಥೋ ದೈವರಕ್ಷಕ ಎಂಬಂತೆ, ನಮಗೆ ಶಕ್ತಿ ಇಲ್ಲದಾಗ ಭಗವಂತನನ್ನು ಪ್ರಾರ್ಥಿಸುವುದು ಅಗತ್ಯ.

ಶುಭ ದಿನಗಳು ಮತ್ತು ಅಶುಭ ದಿನಗಳು:

ಸಾಲವನ್ನು ತೀರಿಸಲು ಮಂಗಳವಾರದ ದಿನವನ್ನು ಆಯ್ದುಕೊಳ್ಳಿ. ಮಂಗಳವಾರದಂದು ಸಾಲವನ್ನು ಮರುಪಾವತಿಸಲು ಪ್ರಾರಂಭಿಸಿದರೆ, ಮೂರು ಮಂಗಳವಾರಗಳು ತಪ್ಪಿಸದೆ ಹಣವನ್ನು ನೀಡಿದರೆ, ನಿಮ್ಮ ಸಾಲ ಬೇಗ ತೀರಹೋಗುತ್ತದೆ. ಸಾಲಗಾರರು ಮಂಗಳವಾರದಂದು ಹಣ ತೆಗೆದುಕೊಳ್ಳಲು ಇಷ್ಟಪಡುತ್ತಾರೆ ಏಕೆಂದರೆ ಇದು ಶುಭ ದಿನವೆಂದು ನಂಬಲಾಗಿದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಸಾಲವನ್ನು ಪಡೆಯಲು ಸೋಮವಾರ ಮತ್ತು ಗುರುವಾರಗಳು ಶುಭ ದಿನಗಳಾಗಿವೆ. ಈ ದಿನಗಳಲ್ಲಿ ಸಾಲವನ್ನು ಪಡೆದರೆ ಅದನ್ನು ಬೇಗ ತೀರಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಸಾಲ ಕೊಡುವವರನ್ನು ಸೋಮವಾರ ಅಥವಾ ಗುರುವಾರ ಹಣ ನೀಡಲು ಕೇಳಬಹುದು. ಆದರೆ, ಶನಿವಾರದ ದಿನ ಯಾವುದೇ ಹಣಕಾಸಿನ ವಹಿವಾಟು ಮಾಡದಿರುವುದು ಉತ್ತಮ. ಶನಿವಾರದಂದು ಹಣವನ್ನು ಕೊಡುವುದು ಅಥವಾ ಪಡೆಯುವುದು ಒಳ್ಳೆಯ ರೀತಿಯಲ್ಲಿ ಸಫಲವಾಗುವುದಿಲ್ಲ ಎಂದು ನಂಬಲಾಗಿದೆ.

ಈ ಎಲ್ಲಾ ಸಣ್ಣ ಸಣ್ಣ ತಂತ್ರಗಳನ್ನು ಅಳವಡಿಸಿಕೊಂಡಿದ್ದೆ ಆದರೆ, ಸಾಲದ ಸಂಕಷ್ಟದಿಂದ ಹೊರಬಂದು ಸುಖಮಯ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟ್ರಂಪ್ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ, ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಜಾಗವಿಲ್ಲ: ಪ್ರಧಾನಿ ಮೋದಿ – Kannada News | Trump Event Shooting in DC, PM Modi Condemns Violence in Democracy

ನವದೆಹಲಿ, ಏಪ್ರಿಲ್ 26: ಅಮೆರಿಕದ ಶ್ವೇತಭವನದಲ್ಲಿ ಆಯೋಜಿಸಲಾಗಿದ್ದ ಗಣ್ಯರ ಸಭೆಯಲ್ಲಿ ಭೀಕರ ಗುಂಡಿನ ದಾಳಿ ನಡೆದಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರನ್ನು ಗುರಿಯಾಗಿಸಿಕೊಂಡು ನಡೆದ ಈ ದಾಳಿಯಿಂದ ಇಡೀ ಜಗತ್ತು ಬೆಚ್ಚಿಬಿದ್ದಿದೆ. ಈ ಘಟನೆಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಬಲವಾಗಿ ಖಂಡಿಸಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಎಕ್ಸ್ (X) ಮೂಲಕ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಅಧ್ಯಕ್ಷ ಟ್ರಂಪ್, ಪ್ರಥಮ ಮಹಿಳೆ ಮತ್ತು ಉಪಾಧ್ಯಕ್ಷರು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಸಮಾಧಾನವಾಯಿತು. ಅವರ ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ. ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಎಂದಿಗೂ ಸ್ಥಾನವಿಲ್ಲ, ಇದನ್ನು ನಿಸ್ಸಂದಿಗ್ಧವಾಗಿ ಖಂಡಿಸಬೇಕು ಎಂದು ಹೇಳಿದ್ದಾರೆ.
ಬಹು ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ದಾಳಿಕೋರನು ಭದ್ರತಾ ತಪಾಸಣಾ ಕೇಂದ್ರವನ್ನು ಭೇದಿಸಿ ಸಭಾಂಗಣದತ್ತ ಧಾವಿಸುತ್ತಿದ್ದ ದೃಶ್ಯಗಳು ವೈರಲ್ ಆಗಿವೆ. ಆದರೆ, ಸೀಕ್ರೆಟ್ ಸರ್ವಿಸ್ ಸಿಬ್ಬಂದಿ ಪ್ರಾಣದ ಹಂಗು ತೊರೆದು ಆತನನ್ನು ಹಿಮ್ಮೆಟ್ಟಿಸಿ ವಶಕ್ಕೆ ಪಡೆದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್ ಆಘಾತಕಾರಿ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ದಾಳಿಕೋರ ಹಾರಿಸಿದ ಗುಂಡು ಒಬ್ಬ ಭದ್ರತಾ ಅಧಿಕಾರಿಯ ಬುಲೆಟ್ ಪ್ರೂಫ್ ಜಾಕೆಟ್‌ಗೆ ನೇರವಾಗಿ ತಗುಲಿದೆ. ಅದೃಷ್ಟವಶಾತ್ ಅಧಿಕಾರಿ ಸುರಕ್ಷಿತವಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಈ ಘಟನೆಯು ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸುವ ಅಗತ್ಯವನ್ನು ಎತ್ತಿ ತೋರಿಸಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮತ್ತಷ್ಟು ಓದಿ: ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಭಾಷಣ ನಿಲ್ಲಿಸಿ ಬಂಕರ್‌ನತ್ತ ಓಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಶ್ವೇತಭವನದಲ್ಲಿ ಪತ್ರಿಕಾಗೋಷ್ಠಿ ವೇಳೆ ಗುಂಡಿನ ದಾಳಿ ನಡೆಸಿದ್ದ ಆರೋಪಿಯ ಫೋಟೊವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಬಿಡುಗಡೆ ಮಾಡಿದ್ದಾರೆ. ನೂರಾರು ಅತಿಥಿಗಳು ಸೇರಿದ್ದ ಹೋಟೆಲ್‌ನ ಬಾಲ್ ರೂಂನ ಹೊರಗಿನ ಸ್ಕ್ರೀನಿಂಗ್ ಪ್ರದೇಶದಲ್ಲಿ ಬಂದೂಕುಧಾರಿಯನ್ನು ಬಂಧಿಸಲಾಗಿದೆ. ಟ್ರಂಪ್ ಅವರನ್ನು ವೇದಿಕೆಯಿಂದ ಕೆಳಗಿಳಿಸಲಾಯಿತು. ಶ್ವೇತಭವನದ ವರದಿಗಾರರ ಭೋಜನ ಕೂಟದಿಂದ ಶಂಕಿತ ಶೂಟರ್‌ನ ಮೊದಲ ಚಿತ್ರ ಹೊರಬಂದಿದ್ದು, ವಾಷಿಂಗ್ಟನ್ ಹಿಲ್ಟನ್‌ನ ಮೆಟ್ಟಿಲುಗಳ ಬಳಿ ಕಾನೂನು ಜಾರಿ ಸಂಸ್ಥೆಗಳು ಆತನನ್ನು ಬಂಧಿಸಿರುವುದನ್ನು ತೋರಿಸುತ್ತದೆ. ಶಂಕಿತ ಶೂಟರ್ ಅನ್ನು ಕ್ಯಾಲಿಫೋರ್ನಿಯಾದ ಟೊರೆನ್ಸ್‌ನ 31 ವರ್ಷದ ಕೋಲ್ ತೋಮಸ್ ಅಲೆನ್ ಎಂದು ಗುರುತಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

World Intellectual Property Day 2026: ಬೌದ್ಧಿಕ ಆಸ್ತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ – Kannada News | World Intellectual Property Day 2026: Why celebrate World Intellectual Property Day?

ವಿಶ್ವ ಬೌದ್ಧಿಕ ಆಸ್ತಿ ದಿನImage Credit source: Freepik

ಬೌದ್ಧಿಕ ಆಸ್ತಿ (Intellectual Property) ಎಂಬುದು ಮಾನವನ ಬುದ್ಧಿಶಕ್ತಿಯ ಅಮೂರ್ತ ಸೃಷ್ಟಿಯನ್ನು ಒಳಗೊಂಡಿರುವ ಆಸ್ತಿಯ ವರ್ಗವಾಗಿದ್ದು, ಇದು ಬೆಲೆ ಕಟ್ಟಲಾಗದಷ್ಟು ಅಮೂಲ್ಯವಾಗಿದೆ. ಪೇಟೆಂಟ್‌ಗಳು, ಹಕ್ಕುಸ್ವಾಮ್ಯಗಳು, ಟ್ರೇಡ್‌ಮಾರ್ಕ್‌ಗಳು ಮತ್ತು ವಿನ್ಯಾಸಗಳು, ಕೃತಿಸ್ವಾಮ್ಯ ಇವೆಲ್ಲವೂ ಬೌದ್ಧಿಕ ಆಸ್ತಿಗಳಾಗಿದ್ದು, ಲೇಖಕ, ಕಥೆಗಾರ, ವಿಜ್ಞಾನಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮ ಬುದ್ಧಿ ಶಕ್ತಿ ಹಾಗೂ ಸೃಜನಶೀಲತೆಯಿಂದ  ಹೊರ ತರುವ ಕಥೆ, ಸಂಗೀತ, ಪುಸ್ತಕ, ವಿನ್ಯಾಸಗಳನ್ನು ಬೇರೆ ಯಾರು ಕದಿಯದಂತೆ ಈ ಅಮೂಲ್ಯ ಬೌದ್ಧಿಕ ಆಸ್ತಿಯ ಹಕ್ಕುಗಳನ್ನು ರಕ್ಷಿಸಲು ಹಾಗೂ ಸೃಷ್ಟಿಕರ್ತರು, ಸಂಶೋಧಕರು, ಉದ್ಯಮಿಗಳ ಆಲೋಚನೆಗಳು ಮತ್ತು ಅವರು ನೀಡಿದ ಕೊಡುಗೆಗಳನ್ನು ಗೌರವಿಸಲು ಪ್ರತಿವರ್ಷ ಏಪ್ರಿಲ್‌ 26 ರಂದು  ವಿಶ್ವ ಬೌದ್ಧಿಕ ಆಸ್ತಿಯ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.

ವಿಶ್ವ ಬೌದ್ಧಿಕ ಆಸ್ತಿ ದಿನದ ಇತಿಹಾಸವೇನು?

ವಿಶ್ವ  ಬೌದ್ಧಿಕ ಆಸ್ತಿ ದಿನವನ್ನು ಪ್ರತಿ ವರ್ಷ ಏಪ್ರಿಲ್‌ 26 ರಂದು ಆಚರಿಸಲಾಗುತ್ತದೆ.  ಈ ದಿನದ ಆಚರಣೆಯನ್ನು ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ (WIPO) 2000 ರಲ್ಲಿ ಪ್ರಾರಂಭಿಸಿತು. ಈ ದಿನ 1970 ರಲ್ಲಿ ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ (WIPO) ಯನ್ನು ಸ್ಥಾಪಿಸುವ ಸಮಾವೇಶವು ಜಾರಿಗೆ ಬಂದ ದಿನದ ಸ್ಮರಣಾರ್ಥವಾಗಿದೆ. ನಾವೀನ್ಯತೆ ಮತ್ತು ಸೃಜನಶೀಲತೆಯನ್ನು ಉತ್ತೇಜಿಸುವಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ (ಪೇಟೆಂಟ್‌ಗಳು, ಹಕ್ಕುಸ್ವಾಮ್ಯಗಳು, ಟ್ರೇಡ್‌ಮಾರ್ಕ್‌ಗಳು ಮತ್ತು ವಿನ್ಯಾಸಗಳು) ಪ್ರಮುಖ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಇಟ್ಟುಕೊಂಡು ಈ ದಿನದ ಆಚರಣೆಯನ್ನು ಪ್ರಾರಂಭಿಸಲಾಯಿತು. ಅಂದಿನಿಂದ ಪ್ರತಿವರ್ಷ ಏಪ್ರಿಲ್‌ 26 ರಂದು ಈ ವಿಶೇಷ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ಇದನ್ನೂ ಓದಿ: ಏಪ್ರಿಲ್ 24 ರಂದೇ ರಾಷ್ಟ್ರೀಯ ಪಂಚಾಯತ್‌ ರಾಜ್‌ ದಿನ ಆಚರಿಸುವುದು ಏಕೆ?

ವಿಶ್ವ ಬೌದ್ಧಿಕ ಆಸ್ತಿ ದಿನದ ಮಹತ್ವವೇನು?

  • ವಿಶ್ವ ಬೌದ್ಧಿಕ ಆಸ್ತಿ ದಿನವನ್ನು ಆಚರಿಸುವ ಮೂಲ ಉದ್ದೇಶವೇ ಬೌದ್ಧಿಕ ಆಸ್ತಿಯ ಹಕ್ಕು, ನಾವೀನ್ಯತೆ ಮತ್ತು ಸೃಜನಶೀಲತೆಯನ್ನು ಉತ್ತೇಜಿಸುವಲ್ಲಿ ಬೌದ್ಧಿಕ ಆಸ್ತಿಯ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಬೌದ್ಧಿಕ ಆಸ್ತಿಗಳಿಗೆ ಅಂತರಾಷ್ಟ್ರೀಯ ಮಾನ್ಯತೆ ತಂದುಕೊಡುವುದಾಗಿದೆ
  • ಈ ದಿನ ಸೃಜನಶೀಲತೆ ಮತ್ತು ನಾವೀನ್ಯತೆಯನ್ನು ಪ್ರೋತ್ಸಾಹಿಸುತ್ತದೆ, ಇದು ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ.
  • ಈ ಈ ದಿನದಂದು ಪ್ರಪಂಚದಾದ್ಯಂತ ವಿಚಾರ ಸಂಕಿರಣಗಳು, ಪ್ರದರ್ಶನಗಳು ಮತ್ತು ಸ್ಪರ್ಧೆಗಳು ಮುಂತಾದ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಂದು ಶತಕಕ್ಕೆ ‘ವೈಭವ’ದ ೮ ದಾಖಲೆಗಳು ಉಡೀಸ್ – Kannada News | Vaibhav Sooryavanshi’s List of records

ಕ್ರಿಕೆಟ್ ಎನ್ನುವುದು ಕೇವಲ ಅನುಭವದ ಆಟವಲ್ಲ, ಅದು ಪ್ರತಿಭೆಯ ಪ್ರದರ್ಶನ ಎಂಬುದನ್ನು 15 ವರ್ಷದ ವೈಭವ್ ಸೂರ್ಯವಂಶಿ (Vaibhav Sooryavanshi) ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ತಂಡದ ಬೌಲಿಂಗ್ ದಾಳಿಯನ್ನು ಪುಡಿ ಮಾಡಿದ ಸೂರ್ಯವಂಶಿ, ಐಪಿಎಲ್ ಇತಿಹಾಸ ಕಂಡ ಅತ್ಯಂತ ಸ್ಫೋಟಕ ಇನ್ನಿಂಗ್ಸ್‌ಗಳಲ್ಲಿ ಒಂದನ್ನು ಆಡಿ ಮುಗಿಸಿದ್ದಾರೆ. ಈ ಭರ್ಜರಿ ಇನಿಂಗ್ಸ್​ನೊಂದಿಗೆ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಆ ದಾಖಲೆಗಳ ಮಾಹಿತಿ ಇಲ್ಲಿದೆ…

Source link

ಅಕ್ರಮ ಗೋ ಸಾಗಾಟ ವಾಹನ ತಡೆದು 23 ಗೋವುಗಳನ್ನು ರಕ್ಷಿಸಿದ ಬಿಜೆಪಿ ಶಾಸಕ ಶರಣು ಸಲಗರ – Kannada News | BJP MLA Sharanu Salgar Rescues 23 Cattle, Intercepts Illegal Transport Vehicle in Bidar

ಬೀದರ್, ಏಪ್ರಿಲ್​​ 26: ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆದು ಅವುಗಳನ್ನು ಸ್ವತಃ ಶಾಸಕರೇ ರಕ್ಷಣೆ ಮಾಡಿರುವ ಘಟನೆ ಬಸವಕಲ್ಯಾಣ ತಾಲೂಕಿನ ಅಲಗೂಡ ಗ್ರಾಮದ ಸಮೀಪ ನಡೆದಿದೆ. ಬಸವಕಲ್ಯಾಣದಿಂದಾ ಅಲಗೂಡ ಚಿಟ್ಟಾ ಗ್ರಾಮದ ಮೂಲಕ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ಒಂದೆರಡಲ್ಲ ಬರೋಬ್ಬರಿ 23 ಗೋವುಗಳನ್ನು ಬಿಜೆಪಿ ಶಾಸಕ ಶರಣು ಸಲಗರ ರಕ್ಷಣೆ ಮಾಡಿದ್ದಾರೆ. ಮಂಠಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ರಕ್ಷಿಸಿದ ಗೋವುಗಳನ್ನು ಗೋಶಾಲೆಗೆ ರವಾನೆ ಮಾಡಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

 

Source link

DC vs PBKS Records: 529 ರನ್ಸ್, 33 ಸಿಕ್ಸರ್ಸ್, 49 ಬೌಂಡರಿಗಳು: ದಾಖಲೆಯ ಪುಸ್ತಕ ಬರೆದ ದೆಹಲಿ-ಪಂಜಾಬ್ ಪಂದ್ಯ – Kannada News | DC vs PBKS IPL 2026 529 runs, 33 sixes, 49 fours: Delhi Punjab match that wrote the record books

ಬೆಂಗಳೂರು (ಏ. 26): ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ದೆಹಲಿ ಕ್ಯಾಪಿಟಲ್ಸ್ (Delhi Capitals) ಮತ್ತು ಪಂಜಾಬ್ ಕಿಂಗ್ಸ್ ನಡುವೆ ನಡೆದ ಪಂದ್ಯದಲ್ಲಿ ರನ್‌ ಮಳೆಯೇ ಸುರಿಯಿತು. ಈ ಪಂದ್ಯದಲ್ಲಿ ಬ್ಯಾಟ್ಸ್‌ಮನ್‌ಗಳು ದಾಖಲೆ ಪುಸ್ತಕಕ್ಕೆ ಹಲವು ಪುಟ ಸೇರಿಸಿದರು. ಈ ಪಂದ್ಯದಲ್ಲಿ 529 ರನ್‌ಗಳು, 33 ಸಿಕ್ಸರ್‌ಗಳು ಮತ್ತು 49 ಬೌಂಡರಿಗಳು ಸಿಡಿದವು. ದೆಹಲಿಯ 264 ರನ್‌ಗಳ ಗುರಿಯನ್ನು ಕೇವಲ 18.5 ಓವರ್‌ಗಳಲ್ಲಿ ತಲುಪುವ ಮೂಲಕ ಪಂಜಾಬ್ ಕಿಂಗ್ಸ್ ಇತಿಹಾಸ ನಿರ್ಮಿಸಿತು. ಇದು ಐಪಿಎಲ್‌ನಲ್ಲಿ ಮಾತ್ರವಲ್ಲದೆ ವಿಶ್ವ ಟಿ20 ಕ್ರಿಕೆಟ್ ಇತಿಹಾಸದಲ್ಲಿಯೂ ಅತ್ಯಧಿಕ ಯಶಸ್ವಿ ರನ್-ಚೇಸ್ ಆಗಿದೆ. ಪಂಜಾಬ್ 2024 ರ ತನ್ನದೇ ಆದ 261 ರನ್‌ಗಳ (ಕೆಕೆಆರ್ ವಿರುದ್ಧ) ದಾಖಲೆಯನ್ನು ಮುರಿದು ಹೊಸ ದಾಖಲೆಯನ್ನು ಸ್ಥಾಪಿಸಿತು.

ಕೆಎಲ್ ರಾಹುಲ್ ಅಬ್ಬರ

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಕೆ.ಎಲ್. ರಾಹುಲ್ ಅಜೇಯ 152 ರನ್ ಗಳಿಸಿ ಸಂಚಲನ ಸೃಷ್ಟಿಸಿದರು. ಐಪಿಎಲ್‌ನಲ್ಲಿ 150 ರನ್ ಗಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಐಪಿಎಲ್ ಇತಿಹಾಸದಲ್ಲಿ ಕ್ರಿಸ್ ಗೇಲ್ (175*) ಮತ್ತು ಬ್ರೆಂಡನ್ ಮೆಕಲಮ್ (158*) ನಂತರ ಮೂರನೇ ಅತ್ಯಧಿಕ ವೈಯಕ್ತಿಕ ಸ್ಕೋರ್ ಹೊಂದಿದ್ದಾರೆ.

ಗೇಲ್ ಶತಕಗಳ ಸಂಖ್ಯೆಗೆ ಸಮ

ಈ ಪಂದ್ಯದಲ್ಲಿ ಗಳಿಸಿದ ಶತಕವು ಕೆಎಲ್ ರಾಹುಲ್ ಅವರ ವೃತ್ತಿಜೀವನದ ಆರನೇ ಐಪಿಎಲ್ ಶತಕವಾಗಿದೆ. ಇದರೊಂದಿಗೆ, ಅವರು ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಅವರ ದಾಖಲೆಯನ್ನು ಸರಿಗಟ್ಟಿದರು. ಈಗ, ವಿರಾಟ್ ಕೊಹ್ಲಿ (8) ಮತ್ತು ಜೋಸ್ ಬಟ್ಲರ್ (7) ಮಾತ್ರ ಅವರಿಗಿಂತ ಮುಂದಿದ್ದಾರೆ.

ಟಿ20ಯಲ್ಲಿ ಭಾರತೀಯರ ರಾಜನಾದ ರಾಹುಲ್

ಕೆಎಲ್ ರಾಹುಲ್ ಈಗ ಟಿ20 ಕ್ರಿಕೆಟ್‌ನಲ್ಲಿ (ಪುರುಷರ ಟಿ20) ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಆಗಿದ್ದಾರೆ. ಅವರು ತಿಲಕ್ ವರ್ಮಾ ಅವರ ದಾಖಲೆಯನ್ನು (ಮೇಘಾಲಯ ವಿರುದ್ಧ 151 ರನ್) ಹಿಂದಿಕ್ಕಿದ್ದಾರೆ.

Karun Nair: ಕರುಣ್ ನಾಯರ್​ನಿಂದ ಒಂದಲ್ಲ ಎರಡು ಕ್ಯಾಚ್ ಡ್ರಾಪ್: ಕೆಎಲ್ ರಾಹುಲ್ ಸ್ಫೋಟಕ ಆಟ ವ್ಯರ್ಥ

ರಾಹುಲ್ ಮತ್ತು ರಾಣಾ ಐತಿಹಾಸಿಕ ಜೊತೆಯಾಟ

ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಮತ್ತು ನಿತೀಶ್ ರಾಣಾ ನಡುವೆ 220 ರನ್‌ಗಳ ಬೃಹತ್ ಜೊತೆಯಾಟ ಕಂಡುಬಂದಿತು. ಇದು ಐಪಿಎಲ್ ಇತಿಹಾಸದಲ್ಲಿ ಎರಡನೇ ಅತ್ಯಧಿಕ ಪಾಲುದಾರಿಕೆಯಾಗಿದೆ. ಕೊಹ್ಲಿ ಮತ್ತು ಡಿವಿಲಿಯರ್ಸ್ (229 ರನ್‌ಗಳು) ಇನ್ನೂ ಈ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಹೊಂದಿದ್ದಾರೆ.

ಅತಿ ದೊಡ್ಡ ರನ್ ಚೇಸ್

ಪಂಜಾಬ್ ಕಿಂಗ್ಸ್ ತಂಡವು ಐಪಿಎಲ್‌ನಲ್ಲಿ ಮಾತ್ರವಲ್ಲದೆ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಚೇಸ್ ಮಾಡಿದ ದಾಖಲೆಯನ್ನು ಮತ್ತೊಮ್ಮೆ ಸ್ಥಾಪಿಸಿದೆ. ಈ ಹಿಂದೆ ಅವರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 265 ರನ್‌ಗಳ ಗುರಿಯನ್ನು ಬೆನ್ನಟ್ಟಿ ಈ ದಾಖಲೆಯನ್ನು ಹೊಂದಿದ್ದರು. ಇದಕ್ಕೂ ಮೊದಲು, ಪಂಜಾಬ್ ಕಿಂಗ್ಸ್ ತಂಡದ ಅತ್ಯಧಿಕ ರನ್ ಚೇಸ್ 2025 ರಲ್ಲಿ ಕೆಕೆಆರ್ ವಿರುದ್ಧವಾಗಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಾ. ರಾಜ್​ಕುಮಾರ್ ಸಮಾಧಿ ವಿವಾದ: ಕ್ಷಮೆ ಕೇಳುವಾಗ ಸತಾಯಿಸಿದ್ರಾ ನಟ ಚೇತನ್? ವಿಡಿಯೋ ನೋಡಿ – Kannada News | This is how Chetan Kumar Ahimsa apologized in Dr Rajkumar Samadhi controversy

ನಟ ಚೇತನ್ ಅಹಿಂಸಾ ಅವರು ಇತ್ತೀಚೆಗೆ ಡಾ. ರಾಜ್​ಕುಮಾರ್ ಸಮಾಧಿ (Dr Rajkumar Samadhi) ಬಗ್ಗೆ ನೀಡಿದ ಹೇಳಿಕೆಯಿಂದ ವಿವಾದ ಸೃಷ್ಟಿ ಆಯಿತು. ಸಮಾಧಿ ನಿರ್ಮಾಣಕ್ಕೆ ಸರ್ಕಾರ ಎರಡೂವರೆ ಎಕರೆ ಜಾಗ ನೀಡಿದ್ದು ಸೂಕ್ತವಲ್ಲ ಎಂದು ಚೇತನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಅದಕ್ಕೆ ಡಾ. ರಾಜ್​ಕುಮಾರ್ ಅಭಿಮಾನಿಗಳು, ಕನ್ನಡಪರ ಸಂಘಟನೆ ಕಾರ್ಯಕರ್ತರು ಖಂಡನೆ ವ್ಯಕ್ತಪಡಿಸಿದರು. ಚೇತನ್ ಅಹಿಂಸಾ (Chetan Kumar Ahimsa) ಕ್ಷಮೆ ಕೇಳಬೇಕು ಎಂದು ಎಲ್ಲರೂ ಒತ್ತಾಯಿಸಿದರು. ಆದರೆ ಚೇತನ್ ಅವರು ಕ್ಷಮೆ ಕೇಳುವಾಗ ಸುತ್ತಿ ಬಳಸಿ ಮಾತನಾಡಿದರು. ನೇರವಾಗಿ ಅವರು ಕ್ಷಮೆ ಕೇಳುವುದಕ್ಕೂ ಮುನ್ನ ತಮ್ಮ ಹೇಳಿಕೆಯನ್ನು ಸಮರ್ಥಿಸುವ ಪ್ರಯತ್ನ ಮಾಡಿದರು. ಅದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅವಧಿಗೂ ಮೊದಲೇ ತುಂಗಭದ್ರಾ ಜಲಾಶಯ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ಪೂರ್ಣ: ರೈತರು ಫುಲ್​​ ಖುಷ್​ – Kannada News | Tungabhadra Dam Crest Gate Installation Completed Ahead of Schedule in Koppal

ಕೊಪ್ಪಳ, ಏಪ್ರಿಲ್​​ 26: ತುಂಗಭದ್ರಾ ಜಲಾಶಯ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ನಿಗದಿತ ಸಮಯಕ್ಕೂ ಮೊದಲೇ ಪೂರ್ಣಗೊಂಡಿದೆ. ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಡ್ಯಾಂ ನಿರ್ಮಾಣವಾಗಿ 8 ದಶಕಗಳ ನಂತರ 33 ಗೇಟ್ ಬದಲಾವಣೆ ಮಾಡಲಾಗಿದೆ. 2024ರ ಆಗಸ್ಟ್ 10ರಂದು ಜಲಾಶಯದ 19ನೇ ಗೇಟ್​ ಕಿತ್ತು ಹೋಗಿತ್ತು. ತಜ್ಞರ ಸಲಹೆಯ ಮೇರೆಗೆ ಜಲಾಶಯದ ಎಲ್ಲಾ ಗೇಟ್​ಗಳ‌ ಬದಲಾವಣೆ ಮಾಡಲಾಗಿದೆ. ಟಿ.ಬಿ.ಡ್ಯಾಂನ 12 ಗೇಟ್​ಗಳ ಇಳಿಸುವ, ಏರಿಸುವ ಪರೀಕ್ಷೆ ಪೂರ್ಣವಾಗಿದ್ದು, ಉಳಿದ ಗೇಟ್​ಗಳ ಪರೀಕ್ಷೆ ಮಾಡಬೇಕಿದೆ. ಮೇ‌ ಅಂತ್ಯಕ್ಕೆ ಗೇಟ್ ಅಳವಡಿಕೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿತ್ತು. ಆದರೆ ಇದೀಗ ಅವಧಿಗೂ ಮೊದಲೇ ಕಾಮಗಾರಿ ಮುಗಿದಿದ್ದರಿಂದ ರೈತರು ಸಂತಸಗೊಂಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ವೈಟ್​ಹೌಸ್​ನಲ್ಲಿ ಗುಂಡಿನ ದಾಳಿ ನಡೆಸಿದ ವ್ಯಕ್ತಿಯ ಫೋಟೊ ಬಿಡುಗಡೆ ಮಾಡಿದ ಟ್ರಂಪ್ – Kannada News | Trump Shares Image of Suspect Restrained After White House Event Incident

ವಾಷಿಂಗ್ಟನ್, ಏಪ್ರಿಲ್ 26: ಶ್ವೇತಭವನದಲ್ಲಿ ಪತ್ರಿಕಾಗೋಷ್ಠಿ ವೇಳೆ ಗುಂಡಿನ ದಾಳಿ ನಡೆಸಿದ್ದ ಆರೋಪಿಯ ಫೋಟೊವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಬಿಡುಗಡೆ ಮಾಡಿದ್ದಾರೆ. ನೂರಾರು ಅತಿಥಿಗಳು ಸೇರಿದ್ದ ಹೋಟೆಲ್‌ನ ಬಾಲ್ ರೂಂನ ಹೊರಗಿನ ಸ್ಕ್ರೀನಿಂಗ್ ಪ್ರದೇಶದಲ್ಲಿ ಬಂದೂಕುಧಾರಿಯನ್ನು ಬಂಧಿಸಲಾಗಿದೆ. ಟ್ರಂಪ್ ಅವರನ್ನು ವೇದಿಕೆಯಿಂದ ಕೆಳಗಿಳಿಸಲಾಯಿತು. ಶ್ವೇತಭವನದ ವರದಿಗಾರರ ಭೋಜನ ಕೂಟದಿಂದ ಶಂಕಿತ ಶೂಟರ್‌ನ ಮೊದಲ ಚಿತ್ರ ಹೊರಬಂದಿದ್ದು, ವಾಷಿಂಗ್ಟನ್ ಹಿಲ್ಟನ್‌ನ ಮೆಟ್ಟಿಲುಗಳ ಬಳಿ ಕಾನೂನು ಜಾರಿ ಸಂಸ್ಥೆಗಳು ಆತನನ್ನು ಬಂಧಿಸಿರುವುದನ್ನು ತೋರಿಸುತ್ತದೆ. ಶಂಕಿತ ಶೂಟರ್ ಅನ್ನು ಕ್ಯಾಲಿಫೋರ್ನಿಯಾದ ಟೊರೆನ್ಸ್‌ನ 31 ವರ್ಷದ ಕೋಲ್ ತೋಮಸ್ ಅಲೆನ್ ಎಂದು ಗುರುತಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಈಗ ಹೇಗಿದ್ದಾರೆ ಲುಂಗಿ ಎನ್​ಗಿಡಿ? ಹೊರಬಿತ್ತು ಬಿಗ್ ಅಪ್​ಡೇಟ್! – Kannada News | IPL 2026: Lungi Ngidi Injury Update

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗಿ ಲುಂಗಿ ಎನ್​ಗಿಡಿ ಅವರು ಈಗ ಚೇತರಿಸಿಕೊಂಡಿದ್ದಾರೆ. ಈ ಚೇತರಿಕೆಯ ಬೆನ್ನಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಅವರು ಶನಿವಾರ ರಾತ್ರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೋಟೆಲ್‌ಗೆ ಮರಳಿದ್ದಾರೆ ಎಂದು ವರದಿಯಾಗಿದೆ.

ಘಟನೆಯ ಹಿನ್ನೆಲೆ:

ಶನಿವಾರ ಸಂಜೆ ನಡೆದ ಐಪಿಎಲ್​​ನ 35ನೇ ಪಂದ್ಯದ ವೇಳೆ ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ಮಾಡುತ್ತಿದ್ದಾಗ, ಮೂರನೇ ಓವರ್‌ನಲ್ಲಿ ಮಿಡ್-ಆಫ್‌ನಲ್ಲಿ ಕ್ಯಾಚ್ ಹಿಡಿಯಲು ಪ್ರಯತ್ನಿಸಿದ ಲುಂಗಿ ಎನ್​ಗಿಡಿ ಅವರು ಸಮತೋಲನ ತಪ್ಪಿ ಹಿಮ್ಮುಖವಾಗಿ ಬಿದಿದ್ದರು. ಈ ವೇಳೆ ಅವರ ಕುತ್ತಿಗೆ ಮತ್ತು ತಲೆಯ ಹಿಂಭಾಗ ನೆಲಕ್ಕೆ ಬಲವಾಗಿ ಬಡಿದಿತ್ತು. ಮೈದಾನದಲ್ಲೇ ಪ್ರಥಮ ಚಿಕಿತ್ಸೆ ನೀಡಿದರೂ ಚೇತರಿಸಿಕೊಳ್ಳದ ಕಾರಣ, ಅವರನ್ನು ತಕ್ಷಣವೇ ಸ್ಟ್ರೆಚರ್ ಮೂಲಕ ಮೈದಾನದಿಂದ ಹೊರಗೆ ಕರೆದೊಯ್ಯಲಾಗಿತ್ತು.

ದೆಹಲಿ ಪೊಲೀಸರ ಸಾಹಸ:

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ದೆಹಲಿ ಸಂಚಾರಿ ಪೊಲೀಸರು, ಕ್ರೀಡಾಂಗಣದಿಂದ ಬಿಎಲ್‌ಕೆ-ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯವರೆಗೆ ‘ಗ್ರೀನ್ ಕಾರಿಡಾರ್’ ನಿರ್ಮಿಸಿದ್ದರು. ಇದರಿಂದಾಗಿ ದಟ್ಟಣೆಯ ಸಮಯದಲ್ಲೂ ಕೇವಲ 11 ನಿಮಿಷಗಳಲ್ಲಿ ಅಂಬ್ಯುಲೆನ್ಸ್ ಆಸ್ಪತ್ರೆಯನ್ನು ತಲುಪಲು ಸಾಧ್ಯವಾಯಿತು.

ಆರೋಗ್ಯ ಸ್ಥಿತಿ:

ಆಸ್ಪತ್ರೆಯಲ್ಲಿ  ಲುಂಗಿ ಎನ್​ಗಿಡಿ ಅವರಿಗೆ ಸಿಟಿ ಸ್ಕ್ಯಾನ್ (CT Scan) ಸೇರಿದಂತೆ ಹಲವು ಪರೀಕ್ಷೆಗಳನ್ನು ನಡೆಸಲಾಗಿದ್ದು, ಅದೃಷ್ಟವಶಾತ್, ಅವರ ಬೆನ್ನುಮೂಳೆ ಅಥವಾ ಮೆದುಳಿಗೆ ಯಾವುದೇ ಗಂಭೀರ ಹಾನಿಯಾಗಿಲ್ಲ ಎಂದು ವೈದ್ಯರು ಖಚಿತಪಡಿಸಿದ್ದಾರೆ.

ನ್ಯೂರೋ ಸರ್ಜನ್ ಮೇಲ್ವಿಚಾರಣೆಯಲ್ಲಿ ಕೆಲವು ಗಂಟೆಗಳ ಕಾಲ ನಿಗಾದಲ್ಲಿ ಇರಿಸಿದ ನಂತರ, ಅವರ ಆರೋಗ್ಯ ಸ್ಥಿರವಾಗಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ವೈದ್ಯರು ಡಿಸ್ಚಾರ್ಚ್​ಗೆ ಸೂಚಿಸಿದ್ದಾರೆ. ಅದರಂತೆ ಇದೀಗ ಲುಂಗಿ ಎನ್​ಗಿಡಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೋಟೆಲ್​ಗೆ ಮರಳಿದ್ದಾರೆ. ಇದಾಗ್ಯೂ ಅವರಿಗೆ ವೈದ್ಯರು ಹೆಚ್ಚಿನ ವಿಶ್ರಾಂತಿ ಸೂಚಿಸಿದ್ದಾರೆ.

ಇದನ್ನೂ ಓದಿ: IPL 2026: ಒಂದೇ ದಿನ ಬರೋಬ್ಬರಿ 16 ಕ್ಯಾಚ್​ಗಳು ಡ್ರಾಪ್..!

ಇತ್ತ ವೈದ್ಯರು ವಿಶ್ರಾಂತಿ ಸೂಚಿಸಿರುವ ಕಾರಣ ಲುಂಗಿ ಎನ್​ಗಿಡಿ ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿಲ್ಲ. ಅವರ ಬದಲಿಗೆ ಡೆಲ್ಲಿ ಕ್ಯಾಪಿಟಲ್ಸ್​ ಪರ ಮಿಚೆಲ್ ಸ್ಟಾರ್ಕ್​ ಕಣಕ್ಕಿಳಿಯಲಿದ್ದಾರೆ. ಸ್ಟಾರ್ಕ್​ ಐಪಿಎಲ್​ನ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಇದೀಗ ಸಂಪೂರ್ಣ ಫಿಟ್​ನೆಸ್​ನೊಂದಿಗೆ ಮರಳಿರುವ ಸ್ಟಾರ್ಕ್​ ಮುಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಪರ ಕಣಕ್ಕಿಳಿಯುವುದು ಖಚಿತ ಎಂದೇ ಹೇಳಬಹುದು.

Published On – 9:06 am, Sun, 26 April 26

Source link

Exit mobile version