ಅವಧಿಗೂ ಮೊದಲೇ ತುಂಗಭದ್ರಾ ಜಲಾಶಯ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ಪೂರ್ಣ: ರೈತರು ಫುಲ್​​ ಖುಷ್​ – Kannada News | Tungabhadra Dam Crest Gate Installation Completed Ahead of Schedule in Koppal

ಕೊಪ್ಪಳ, ಏಪ್ರಿಲ್​​ 26: ತುಂಗಭದ್ರಾ ಜಲಾಶಯ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ನಿಗದಿತ ಸಮಯಕ್ಕೂ ಮೊದಲೇ ಪೂರ್ಣಗೊಂಡಿದೆ. ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಡ್ಯಾಂ ನಿರ್ಮಾಣವಾಗಿ 8 ದಶಕಗಳ ನಂತರ 33 ಗೇಟ್ ಬದಲಾವಣೆ ಮಾಡಲಾಗಿದೆ. 2024ರ ಆಗಸ್ಟ್ 10ರಂದು ಜಲಾಶಯದ 19ನೇ ಗೇಟ್​ ಕಿತ್ತು ಹೋಗಿತ್ತು. ತಜ್ಞರ ಸಲಹೆಯ ಮೇರೆಗೆ ಜಲಾಶಯದ ಎಲ್ಲಾ ಗೇಟ್​ಗಳ‌ ಬದಲಾವಣೆ ಮಾಡಲಾಗಿದೆ. ಟಿ.ಬಿ.ಡ್ಯಾಂನ 12 ಗೇಟ್​ಗಳ ಇಳಿಸುವ, ಏರಿಸುವ ಪರೀಕ್ಷೆ ಪೂರ್ಣವಾಗಿದ್ದು, ಉಳಿದ ಗೇಟ್​ಗಳ ಪರೀಕ್ಷೆ ಮಾಡಬೇಕಿದೆ. ಮೇ‌ ಅಂತ್ಯಕ್ಕೆ ಗೇಟ್ ಅಳವಡಿಕೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿತ್ತು. ಆದರೆ ಇದೀಗ ಅವಧಿಗೂ ಮೊದಲೇ ಕಾಮಗಾರಿ ಮುಗಿದಿದ್ದರಿಂದ ರೈತರು ಸಂತಸಗೊಂಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ವೈಟ್​ಹೌಸ್​ನಲ್ಲಿ ಗುಂಡಿನ ದಾಳಿ ನಡೆಸಿದ ವ್ಯಕ್ತಿಯ ಫೋಟೊ ಬಿಡುಗಡೆ ಮಾಡಿದ ಟ್ರಂಪ್ – Kannada News | Trump Shares Image of Suspect Restrained After White House Event Incident

ವಾಷಿಂಗ್ಟನ್, ಏಪ್ರಿಲ್ 26: ಶ್ವೇತಭವನದಲ್ಲಿ ಪತ್ರಿಕಾಗೋಷ್ಠಿ ವೇಳೆ ಗುಂಡಿನ ದಾಳಿ ನಡೆಸಿದ್ದ ಆರೋಪಿಯ ಫೋಟೊವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಬಿಡುಗಡೆ ಮಾಡಿದ್ದಾರೆ. ನೂರಾರು ಅತಿಥಿಗಳು ಸೇರಿದ್ದ ಹೋಟೆಲ್‌ನ ಬಾಲ್ ರೂಂನ ಹೊರಗಿನ ಸ್ಕ್ರೀನಿಂಗ್ ಪ್ರದೇಶದಲ್ಲಿ ಬಂದೂಕುಧಾರಿಯನ್ನು ಬಂಧಿಸಲಾಗಿದೆ. ಟ್ರಂಪ್ ಅವರನ್ನು ವೇದಿಕೆಯಿಂದ ಕೆಳಗಿಳಿಸಲಾಯಿತು. ಶ್ವೇತಭವನದ ವರದಿಗಾರರ ಭೋಜನ ಕೂಟದಿಂದ ಶಂಕಿತ ಶೂಟರ್‌ನ ಮೊದಲ ಚಿತ್ರ ಹೊರಬಂದಿದ್ದು, ವಾಷಿಂಗ್ಟನ್ ಹಿಲ್ಟನ್‌ನ ಮೆಟ್ಟಿಲುಗಳ ಬಳಿ ಕಾನೂನು ಜಾರಿ ಸಂಸ್ಥೆಗಳು ಆತನನ್ನು ಬಂಧಿಸಿರುವುದನ್ನು ತೋರಿಸುತ್ತದೆ. ಶಂಕಿತ ಶೂಟರ್ ಅನ್ನು ಕ್ಯಾಲಿಫೋರ್ನಿಯಾದ ಟೊರೆನ್ಸ್‌ನ 31 ವರ್ಷದ ಕೋಲ್ ತೋಮಸ್ ಅಲೆನ್ ಎಂದು ಗುರುತಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಈಗ ಹೇಗಿದ್ದಾರೆ ಲುಂಗಿ ಎನ್​ಗಿಡಿ? ಹೊರಬಿತ್ತು ಬಿಗ್ ಅಪ್​ಡೇಟ್! – Kannada News | IPL 2026: Lungi Ngidi Injury Update

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗಿ ಲುಂಗಿ ಎನ್​ಗಿಡಿ ಅವರು ಈಗ ಚೇತರಿಸಿಕೊಂಡಿದ್ದಾರೆ. ಈ ಚೇತರಿಕೆಯ ಬೆನ್ನಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಅವರು ಶನಿವಾರ ರಾತ್ರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೋಟೆಲ್‌ಗೆ ಮರಳಿದ್ದಾರೆ ಎಂದು ವರದಿಯಾಗಿದೆ.

ಘಟನೆಯ ಹಿನ್ನೆಲೆ:

ಶನಿವಾರ ಸಂಜೆ ನಡೆದ ಐಪಿಎಲ್​​ನ 35ನೇ ಪಂದ್ಯದ ವೇಳೆ ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ಮಾಡುತ್ತಿದ್ದಾಗ, ಮೂರನೇ ಓವರ್‌ನಲ್ಲಿ ಮಿಡ್-ಆಫ್‌ನಲ್ಲಿ ಕ್ಯಾಚ್ ಹಿಡಿಯಲು ಪ್ರಯತ್ನಿಸಿದ ಲುಂಗಿ ಎನ್​ಗಿಡಿ ಅವರು ಸಮತೋಲನ ತಪ್ಪಿ ಹಿಮ್ಮುಖವಾಗಿ ಬಿದಿದ್ದರು. ಈ ವೇಳೆ ಅವರ ಕುತ್ತಿಗೆ ಮತ್ತು ತಲೆಯ ಹಿಂಭಾಗ ನೆಲಕ್ಕೆ ಬಲವಾಗಿ ಬಡಿದಿತ್ತು. ಮೈದಾನದಲ್ಲೇ ಪ್ರಥಮ ಚಿಕಿತ್ಸೆ ನೀಡಿದರೂ ಚೇತರಿಸಿಕೊಳ್ಳದ ಕಾರಣ, ಅವರನ್ನು ತಕ್ಷಣವೇ ಸ್ಟ್ರೆಚರ್ ಮೂಲಕ ಮೈದಾನದಿಂದ ಹೊರಗೆ ಕರೆದೊಯ್ಯಲಾಗಿತ್ತು.

ದೆಹಲಿ ಪೊಲೀಸರ ಸಾಹಸ:

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ದೆಹಲಿ ಸಂಚಾರಿ ಪೊಲೀಸರು, ಕ್ರೀಡಾಂಗಣದಿಂದ ಬಿಎಲ್‌ಕೆ-ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯವರೆಗೆ ‘ಗ್ರೀನ್ ಕಾರಿಡಾರ್’ ನಿರ್ಮಿಸಿದ್ದರು. ಇದರಿಂದಾಗಿ ದಟ್ಟಣೆಯ ಸಮಯದಲ್ಲೂ ಕೇವಲ 11 ನಿಮಿಷಗಳಲ್ಲಿ ಅಂಬ್ಯುಲೆನ್ಸ್ ಆಸ್ಪತ್ರೆಯನ್ನು ತಲುಪಲು ಸಾಧ್ಯವಾಯಿತು.

ಆರೋಗ್ಯ ಸ್ಥಿತಿ:

ಆಸ್ಪತ್ರೆಯಲ್ಲಿ  ಲುಂಗಿ ಎನ್​ಗಿಡಿ ಅವರಿಗೆ ಸಿಟಿ ಸ್ಕ್ಯಾನ್ (CT Scan) ಸೇರಿದಂತೆ ಹಲವು ಪರೀಕ್ಷೆಗಳನ್ನು ನಡೆಸಲಾಗಿದ್ದು, ಅದೃಷ್ಟವಶಾತ್, ಅವರ ಬೆನ್ನುಮೂಳೆ ಅಥವಾ ಮೆದುಳಿಗೆ ಯಾವುದೇ ಗಂಭೀರ ಹಾನಿಯಾಗಿಲ್ಲ ಎಂದು ವೈದ್ಯರು ಖಚಿತಪಡಿಸಿದ್ದಾರೆ.

ನ್ಯೂರೋ ಸರ್ಜನ್ ಮೇಲ್ವಿಚಾರಣೆಯಲ್ಲಿ ಕೆಲವು ಗಂಟೆಗಳ ಕಾಲ ನಿಗಾದಲ್ಲಿ ಇರಿಸಿದ ನಂತರ, ಅವರ ಆರೋಗ್ಯ ಸ್ಥಿರವಾಗಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ವೈದ್ಯರು ಡಿಸ್ಚಾರ್ಚ್​ಗೆ ಸೂಚಿಸಿದ್ದಾರೆ. ಅದರಂತೆ ಇದೀಗ ಲುಂಗಿ ಎನ್​ಗಿಡಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೋಟೆಲ್​ಗೆ ಮರಳಿದ್ದಾರೆ. ಇದಾಗ್ಯೂ ಅವರಿಗೆ ವೈದ್ಯರು ಹೆಚ್ಚಿನ ವಿಶ್ರಾಂತಿ ಸೂಚಿಸಿದ್ದಾರೆ.

ಇದನ್ನೂ ಓದಿ: IPL 2026: ಒಂದೇ ದಿನ ಬರೋಬ್ಬರಿ 16 ಕ್ಯಾಚ್​ಗಳು ಡ್ರಾಪ್..!

ಇತ್ತ ವೈದ್ಯರು ವಿಶ್ರಾಂತಿ ಸೂಚಿಸಿರುವ ಕಾರಣ ಲುಂಗಿ ಎನ್​ಗಿಡಿ ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿಲ್ಲ. ಅವರ ಬದಲಿಗೆ ಡೆಲ್ಲಿ ಕ್ಯಾಪಿಟಲ್ಸ್​ ಪರ ಮಿಚೆಲ್ ಸ್ಟಾರ್ಕ್​ ಕಣಕ್ಕಿಳಿಯಲಿದ್ದಾರೆ. ಸ್ಟಾರ್ಕ್​ ಐಪಿಎಲ್​ನ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಇದೀಗ ಸಂಪೂರ್ಣ ಫಿಟ್​ನೆಸ್​ನೊಂದಿಗೆ ಮರಳಿರುವ ಸ್ಟಾರ್ಕ್​ ಮುಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಪರ ಕಣಕ್ಕಿಳಿಯುವುದು ಖಚಿತ ಎಂದೇ ಹೇಳಬಹುದು.

Published On – 9:06 am, Sun, 26 April 26

Source link

ಮಹಿಳೆಗೆ ಹಠಾತ್ತನೆ ಕಾಣಿಸಿಕೊಂಡ ಹೆರಿಗೆ ನೋವು, ರಸ್ತೆಯಲ್ಲೇ ಹೆರಿಗೆ ಮಾಡಿಸಿದ ವೈದ್ಯೆ – Kannada News | Humanity on Streets: Strangers Help Deliver Baby Safely in Pune

ಪುಣೆ, ಏಪ್ರಿಲ್ 26: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಗರ್ಭಿಣಿಯೊಬ್ಬರಿಗೆ ಹಠಾತ್ತನೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಸ್ಥಳೀಯರ ಸಹಾಯದಿಂದ ವೈದ್ಯರು ರಸ್ತೆಯಲ್ಲೇ ಹೆರಿಗೆ ಮಾಡಿಸಿರುವ ಘಟನೆ ಪುಣೆಯಲ್ಲಿ ನಡೆದಿದೆ. ಮಹಿಳೆ ನೋವಿನಿಂದ ನರಳುತ್ತಿದ್ದರು, ಸುತ್ತಮುತ್ತಲಿನ ಪರಿಸ್ಥಿತಿ ಒಂದು ಕ್ಷಣ ಸ್ತಬ್ಧವಾಯಿತು.ಮಹಿಳೆಯರು ಸುತ್ತುವರೆದು ತಮ್ಮ ಸೀರೆ ಹಾಗೂ ದುಪಟ್ಟಾವನ್ನೇ ಪರದೆಯಂತೆ ಹಿಡಿದು ಸಹಾಯ ಮಾಡಿದರು. ಪುರುಷರು ವಾಹನಗಳ ಸಂಚಾರವನ್ನು ತಡೆದು ರಸ್ತೆಯಲ್ಲಿ ದಾರಿ ಮಾಡಿಕೊಟ್ಟರು. ಅಲ್ಲಿ ಯಾರು ಯಾರಿಗೆ ಸಂಬಂಧಿಕರಲ್ಲದಿದ್ದರೂ, ಎಲ್ಲರ ಉದ್ದೇಶ ಆ ತಾಯಿ ಮತ್ತು ಮಗುವನ್ನು ರಕ್ಷಿಸುವುದೊಂದೇ ಆಗಿತ್ತು.

ಅದೃಷ್ಟವಶಾತ್, ಹತ್ತಿರದಲ್ಲೇ ಇದ್ದ ವೈದ್ಯರೊಬ್ಬರು ವಿಷಯ ತಿಳಿದು ಸ್ಥಳಕ್ಕೆ ಓಡಿ ಬಂದಿದ್ದರು. ಸುಸಜ್ಜಿತ ವೈದ್ಯಕೀಯ ಉಪಕರಣಗಳಿಲ್ಲದಿದ್ದರೂ, ಲಭ್ಯವಿದ್ದ ಸಂಪನ್ಮೂಲಗಳನ್ನು ಬಳಸಿಕೊಂಡು ಅತ್ಯಂತ ಜಾಗರೂಕತೆಯಿಂದ ರಸ್ತೆಯ ಮೇಲೆಯೇ ಹೆರಿಗೆ ಮಾಡಿಸಿದರು. ಸ್ವಲ್ಪ ಸಮಯದ ನಂತರ, ಆ ರಸ್ತೆಯ ಸದ್ದನ್ನೆಲ್ಲಾ ಮೀರಿಸಿ ಪುಟ್ಟ ಮಗುವಿನ ಅಳು ಕೇಳಿಸಿತ್ತು. ವೈದ್ಯರ ಸಮಯಪ್ರಜ್ಞೆ ಮತ್ತು ಜನರ ಸಹಕಾರದಿಂದ ತಾಯಿ ಮತ್ತು ಮಗು ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿ ಸುರಕ್ಷಿತವಾಗಿದ್ದಾರೆ. ನಂತರ ಬಂದ ಆಂಬ್ಯುಲೆನ್ಸ್ ಮೂಲಕ ಅವರನ್ನು ಆಸ್ಪತ್ರೆಗೆ ಕಳುಹಿಸಲಾಯಿತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Horoscope Today 26 April : ಇಂದು ಈ ರಾಶಿಯವರಿಗೆ ಪರೋಕ್ಷವಾಗಿ ಅನೇಕ ರೀತಿಯಲ್ಲಿ ಲಾಭವಾಗಲಿದ್ದು, ಹೇಳಿಕೊಳ್ಳಲಾರರು

ಇಂದಿನ ಪಂಚಾಂಗ

ಶಾಲಿವಾಹನ ಶಕೆ 1949ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಅಶ್ವಿನೀ, ವಾರ : ಭಾನು, ಪಕ್ಷ : ಶುಕ್ಲ, ತಿಥಿ : ನವಮೀ, ನಿತ್ಯನಕ್ಷತ್ರ : ಪೂರ್ವಾಫಲ್ಗುಣೀ, ಯೋಗ : ಧೃತಿ, ಕರಣ : ಬವ, ಸೂರ್ಯೋದಯ – 06 – 05 am, ಸೂರ್ಯಾಸ್ತ – 06 – 38 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 17:05 – 18:39, ಯಮಗಂಡ ಕಾಲ 12:22 – 13:56, ಗುಳಿಕ ಕಾಲ 15:30 – 17:05

ಮೇಷ ರಾಶಿ :

ಯೋಜಿಸಲಾದ ಕೆಲಸಗಳು ನಿಧಾನವಾಗಿ ಪೂರ್ಣಗೊಳ್ಳುತ್ತವೆ. ಆದಾಯ ಗಳಿಕೆಯ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಉದ್ಯೋಗ ಬದಲಾವಣೆಯ ಪ್ರಯತ್ನಗಳಿಗೆ ಸಕಾರಾತ್ಮಕ ಪ್ರತಿಕ್ರಿಯೆ ಸಿಗುತ್ತದೆ. ಜಗಳದಲ್ಲಿ ಮಧ್ಯಪ್ರವೇಶಿಸಿ ಸಮಾಧಾನ ಮಾಡುವಿರಿ. ಆಪ್ತರಿಗೆ ಉಡುಗೊರೆ ಕೊಡಲಿದ್ದೀರಿ. ಅಕಾರಣವಾಗಿ ಬರುವ ಕೋಪವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವಿರಿ. ಸಣ್ಣ ವಿಚಾರಕ್ಕೆ ಸುಮ್ಮನೇ ಗದ್ದಲ ಮಾಡಿಕೊಳ್ಳುವಿರಿ. ಯಾವುದೋ ಗಹನವಾದ ಆಲೋಚನೆಯಲ್ಲಿ ನೀವು ಮುಳುಗಿರುವಿರಿ.

ವೃಷಭ ರಾಶಿ :

ವ್ಯಾಪಾರದಲ್ಲಿ ನಷ್ಟಕ್ಕೆ ಪಾಲುದಾರರನ್ನು ತೋರಿಸುವುದು ಬೇಡ. ಅದನ್ನು ಗಣನೆಗೆ ತೆಗೆದುಕೊಳ್ಳದೇ ಮುಂದುವರಿಯುವಿರಿ. ಆರ್ಥಿಕ ಪರಿಸ್ಥಿತಿ ಸ್ಥಿರವಾಗಿರುತ್ತದೆ. ಹೊಸ ಉದ್ಯೋಗ ಪ್ರಯತ್ನಗಳು ಸಕಾರಾತ್ಮಕವಾಗಿರುತ್ತವೆ. ವಿವಾಹ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಬಹಳ ದಿನಗಳಿಂದ ಅಡಗಿದ್ದ ದುಃಖವು ಇಂದು ಪ್ರಕಟವಾದೀತು. ಅತಿಯಾದ ಸಂತೋಷದ ಕ್ಷಣವು ನಿಮ್ಮ ಪಾಲಿಗೆ ಇರಲಿದೆ. ದೀರ್ಘಕಾಲದ ಸ್ನೇಹವು ಹೊಸದಾಗಿ ಆರಂಭವಾಗಲಿದೆ.

ಮಿಥುನ ರಾಶಿ :

ಮನೆಯ ವಸ್ತುಗಳನ್ನು ಇನ್ನೊಬ್ಬರಿಗೆ ಕೊಡಲು ಇಚ್ಛಿಸುವುದಿಲ್ಲ. ವೈಯಕ್ತಿಕ ಸಮಸ್ಯೆಗಳಿಂದ ಪರಿಹಾರ ಪಡೆಯುತ್ತೀರಿ. ವೃತ್ತಿ ಮತ್ತು ಉದ್ಯೋಗಗಳಲ್ಲಿ ಪ್ರಾಮುಖ್ಯತೆ ಹೆಚ್ಚಾಗುತ್ತದೆ. ವ್ಯವಹಾರದಲ್ಲಿ ಸಣ್ಣ ಲಾಭಗಳ ಸಾಧ್ಯತೆ ಇದೆ. ನಟರಿಗೆ ಅವಕಾಶವು ಸಿಕ್ಕೂ ಸಿಗದಂತೆ ಆಗಬಹುದು. ಎಲ್ಲ ಸನ್ನಿವೇಶಕ್ಕೂ ಒಂದೇ ಪರಿಹಾರವು ಇರದು. ಮನೋರಥವನ್ನು ಈಡೇರಿಸಿಕೊಳ್ಳುವುದು ನಿಮಗೆ ಕಷ್ಟವಾಗುವುದು.

ಕರ್ಕಾಟಕ ರಾಶಿ :

ಪಾಲುದಾರಿಕೆಯನ್ನು ಪಡೆಯುವ ಮೊದಲು ಸಾಧ್ಯಾಸಾಧ್ಯತೆಗಳ ಬಗ್ಗೆ ಗಮನವಿರಲಿ. ವ್ಯವಹಾರಗಳು ತೃಪ್ತಿಕರವಾಗಿ ಮುಂದುವರಿಯುತ್ತದೆ. ಆದಾಯ ಗಮನಾರ್ಹವಾಗಿ ಹೆಚ್ಚಾಗುವ ಸಾಧ್ಯತೆಯಿದೆ. ನಿಮ್ಮ ಉದ್ಯೋಗಕ್ಕೆ ಯಾರಿಂದಲಾದರೂ ಹೂಡಿಕೆಯನ್ನು ಮಾಡಿಸಿಕೊಳ್ಳುವಿರಿ. ಪ್ರಭಾವೀ ವ್ಯಕ್ತಿಗಳಿಂದ ನಿಮಗೆ ವಂಚನೆಯಾಗಿದೆ ಎಂದನಿಸಬಹುದು. ರಸ್ತೆಯಲ್ಲಿ ಸಂಚರಿಸುವಾಗ ಎಚ್ಚರ.

ಸಿಂಹ ರಾಶಿ :

ಕಛೇರಿಯ ಕೆಲಸಗಳ ಕಡೆ ವೈಯಕ್ತಿಕ ವಿಚಾರದ ಕಡೆ ಗಮನ ನೀಡಿಲಾಗದು. ಜೀವನವು ಸುಗಮವಾಗಿ ಸಾಗುತ್ತದೆ. ಹಣಕಾಸಿನ ವ್ಯವಹಾರಗಳು ಯಶಸ್ವಿಯಾಗಿ ಮತ್ತು ತೃಪ್ತಿಕರವಾಗಿ ಪೂರ್ಣಗೊಳ್ಳುತ್ತವೆ. ನಿರುದ್ಯೋಗಿಗಳ ಪ್ರಯತ್ನಗಳಿಗೆ ಸಕಾರಾತ್ಮಕ ಪ್ರತಿಕ್ರಿಯೆ ಸಿಗುತ್ತದೆ. ಕೆಲವು ವಿಚಾರಗಳಿಗೆ ಮತ್ತೆ ಮತ್ತೆ ಹೇಳಿಸಿಕೊಳ್ಳಬೇಕಾದೀತು. ಕಛೇರಿಯ ಕಾರ್ಯವನ್ನು ಮನೆಯಲ್ಲಿ ಇದ್ದು ಮಾಡಬೇಕಾಗಬಹುದು.

ಕನ್ಯಾ ರಾಶಿ :

ಆರ್ಥಿಕವಾಗಿ ನಿಮ್ಮ ನಡೆಯು ಅರ್ಥವಾಗದೇ ಇರುವುದು. ಹಿರಿಯರಿಗೆ ಎದುರು ಮಾತನಾಡಿ ಅನಂತರ ಪಶ್ಚಾತ್ತಾಪಪಡುವಿರಿ. ಆದಾಯ ನಿರೀಕ್ಷೆಯಂತೆ ಹೆಚ್ಚಾಗುವ ಸಾಧ್ಯತೆಯಿದೆ. ನೀವು ಕೆಲಸದಲ್ಲಿ ಅಧಿಕಾರವನ್ನು ಪಡೆಯುತ್ತೀರಿ. ಆರೋಗ್ಯ ಸ್ಥಿರವಾಗಿರುತ್ತದೆ. ಯಾರನ್ನಾದರೂ ದೂಷಿಸಿ ಅವರ ವಿರೋಧವನ್ನು ಕಟ್ಟಿಕೊಳ್ಳುವಿರಿ. ಮಾತುಗಾರರು ಎಂದಿನ ವಾಚಾಳಿತನವನ್ನು ಕಡಿಮೆಮಾಡುವರು. ಸಿಟ್ಟಿನ‌ ಸ್ವಭಾವವನ್ನು ಬದಲಿಸಿಕೊಳ್ಳುವುದು ಸೂಕ್ತ.

ತುಲಾ ರಾಶಿ :

ಪ್ರಭಾವಿ ಜನರ ಭೇಟಿಯಿಂದ ಉದ್ಯೋಗದ ಬದಲಾವಣೆ ಸಾಧ್ಯವಾಗುವುದು. ಭೂಮಿಯ ಲಾಭಕ್ಕಾಗಿ ಹೆಚ್ಚು ಓಡಾಟ ಮಾಡಬೇಕಾಗುವುದು. ಇಡೀ ದಿನ ತೃಪ್ತಿಕರವಾಗಿ ಕಳೆಯುತ್ತದೆ. ಆದರೆ ನಿಮ್ಮ ವೃತ್ತಿ ಮತ್ತು ಉದ್ಯೋಗದಲ್ಲಿ ಸ್ವಲ್ಪ ಕೆಲಸದ ಒತ್ತಡ ಇರುತ್ತದೆ. ವ್ಯವಹಾರಗಳು ನಿರೀಕ್ಷಿತ ಲಾಭವನ್ನು ಗಳಿಸುತ್ತವೆ. ಸ್ನೇಹತರ ಜೊತೆ ಮೋಜಿನಲ್ಲಿ ದಿನವನ್ನು ಮುಗಿಸುವಿರಿ. ಎಲ್ಲವನ್ನೂ ಒಮ್ಮೆಲೇ ಪಡೆಯಬೇಕು ಎಂಬ ಮನೋಭಾವವು ಸದ್ಯಕ್ಕೆ ಬೇಡ. ಅಪರಿಚಿತರ ಜೊತೆ ವಿವಾದ ಬೇಡ.

ವೃಶ್ಚಿಕ ರಾಶಿ :

ಇಂದು ಅನಿರೀಕ್ಷಿತವಾಗಿ ಆದಾಯ ಸ್ವಲ್ಪ ಹೆಚ್ಚಾಗುವ ಸಾಧ್ಯತೆ ಇದೆ. ಆರೋಗ್ಯಕ್ಕೆ ಯಾವುದೇ ಕೊರತೆ ಇಲ್ಲ. ವಿದೇಶಿ ಉದ್ಯೋಗಗಳಿಗೆ ಅವಕಾಶಗಳಿವೆ. ನಿಮ್ಮ ವಿವಾಹ ಪ್ರಯತ್ನಗಳಲ್ಲಿ ಶುಭಸುದ್ದಿ ಸಿಗುತ್ತದೆ. ಮಕ್ಕಳು ತಮ್ಮ ಅಧ್ಯಯನದಲ್ಲಿ ಪ್ರಗತಿ ಸಾಧಿಸುತ್ತಾರೆ. ಮನಃಶಾಂತಿಯು ಇರುವ ಕಾರಣ ಯಾವುದೇ ಉದ್ವೇಗಕ್ಕೆ ಒಳಗಾಗುವುದಿಲ್ಲ. ಔದಾಸೀನ್ಯದಿಂದ ವ್ಯಾಪಾರದಲ್ಲಿ ನಷ್ಟವಾಗಲಿದೆ. ಮಿತ್ರರಿಂದ ಸಿಗಬೇಕಾದ ಹಣಕ್ಕೆ ಕತ್ತರಿ ಬೀಳುವ ಸಾಧ್ಯತೆ ಇದೆ.

ಧನು ರಾಶಿ :

ನಿಮಗೆ ಆಪ್ತರ ಕಷ್ಟಗಳಗೆ ಸ್ಪಂದಿಸಲು ಆಗದೇ ಇರಬಹುದು. ವಿವಾಹ ಯೋಗವನ್ನು ನೀವು ಒಪ್ಪಿಕೊಳ್ಳವುದು ಅನಿವಾರ್ಯ. ಯಾರಿಂದಲೂ ಧನಸಹಾಯವನ್ನು ಪಡೆಯಬಾರದು ಎಂಬ ಸಂಕಲ್ಪ ನಿಮ್ಮದಾಗಿರುವುದು. ಕೆಲಸದ ಜೀವನವು ಹೊಸ ಎತ್ತರವನ್ನು ಪಡೆಯುತ್ತದೆ. ಆದಾಯ ಗಮನಾರ್ಹವಾಗಿ ಹೆಚ್ಚಾಗುವ ಸಾಧ್ಯತೆಯಿದೆ. ಉದ್ಯಮದ ಕಾರಣ ಇರುವ ಸ್ಥಳದಿಂದ ದೂರ ಹೋಗಬೇಕಾಗುವದು. ಸುಳ್ಳಯ ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳುವಿರಿ.

ಮಕರ ರಾಶಿ :

ವೃತ್ತಿಕ್ಷೇತ್ರದಲ್ಲಿ ಸಹೋದ್ಯೋಗಿಗಳಿಂದ ತೊಂದರೆ ಬರಬಹುದು. ಸಲ್ಲದ ಅಪವಾದವನ್ನು ಒಪ್ಪಿಕೊಳ್ಳಲಾರಿರಿ. ನೀವು ಕೈಗೊಳ್ಳುವ ಯಾವುದೇ ಪ್ರಯತ್ನವು ಖಂಡಿತವಾಗಿಯೂ ಯಶಸ್ವಿಯಾಗುತ್ತದೆ. ಆದಾಯ ಹೆಚ್ಚಾಗಲಿದೆ. ವ್ಯರ್ಥ ಖರ್ಚು ಹೆಚ್ಚಾಗುವ ಸಾಧ್ಯತೆಯೂ ಇದೆ. ನಿರುದ್ಯೋಗಿಗಳಿಗೆ ವಿದೇಶದಿಂದ ಅಪೇಕ್ಷಿತ ಮಾಹಿತಿ ಸಿಗಲಿದೆ. ಸಹೋದ್ಯೋಗಿಗಳ ಜೊತೆ ನಿಮ್ಮ ಮಾತು ಅಸಹವಾಗಿರುವುದು. ವಿವಾದದಲ್ಲಿರುವ ಆಸ್ತಿಯಿಂದ ಮಾರಾಟವು ನಿಧಾನವಾಗುವುದು.

ಕುಂಭ ರಾಶಿ :

ಹಿತಶತ್ರುಗಳಿಂದ ನಿಮಗೆ ಹಿನ್ನಡೆಯಾಗಲಿದೆ. ನಿಮ್ಮ ವಸ್ತುಗಳ ಕಳ್ಳತನ ಆಗಬಹುದು. ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಹರಿಸುವುದು ಅಗತ್ಯ. ಕೆಲಸದ ಜೀವನವು ಸಕಾರಾತ್ಮಕವಾಗಿರುತ್ತದೆ. ವೃತ್ತಿಪರ ಜೀವನ ತೃಪ್ತಿಕರವಾಗಿ ಮುಂದುವರಿಯುತ್ತದೆ. ನಿಮ್ಮನ್ನು ಪ್ರೀತಿಸುವವರಿಗೆ ಸಮಯವನ್ನು ಕೊಡಿ. ಹಣವನ್ನು ಅನ್ಯ ಕಾರ್ಯಕ್ಕೆ ಬಳಸುವಿರಿ. ಕಲಾವಿದರು ಅವಕಾಶದಿಂದ ವಂಚಿತರಾಗಬೇಕಾಗುವುದು. ಇಂದು ನಿಮಗೆ ಸಾಮಾಜಿಕ ಕಾರ್ಯಗಳಿಗೆ ಪ್ರೇರಣೆ ಸಿಗಬಹುದು.

ಮೀನ ರಾಶಿ :

ಇಂದು ವಿಶೇಷ ದ್ರವ್ಯ ಲಾಭದಿಂದ ಸಂತಸವು ಇರಲಿದೆ. ಗೊಂದಲಗಳಿಂದ ನಿಮ್ಮ‌ ಕಾರ್ಯವು ವೇಗವನ್ನು ಕಳೆದುಕೊಳ್ಳುವುದು. ಉದ್ಯೋಗದಲ್ಲಿ ಒಂದು ಹೆಜ್ಜೆ ಮೇಲಕ್ಕೆ ಸಾಗುವ ಅವಕಾಶ ಸಿಗುತ್ತದೆ. ವೃತ್ತಿ ಮತ್ತು ವ್ಯವಹಾರಗಳು ಲಾಭದಾಯಕವಾಗಿ ಮುಂದುವರಿಯುತ್ತವೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಪ್ರದರ್ಶನವನ್ನು ನೀಡುವರು. ಬಂಧುಗಳ ವಿವಾಹದ ಕಾರ್ಯಕ್ಕೆ ಓಡಾಟ ಮಾಡಬೇಕಾದೀತು. ಇಂದು ಒಂದಿಷ್ಟು ಆಯಾಸ ಬಿಟ್ಟರೆ, ಮತ್ತೇನೂ ಆಗದು.

-ಲೋಹಿತ ಹೆಬ್ಬಾರ್ – 8762924271 (what’s app only)

Source link

ಡಿಜಿಟಲ್​​ ಅರೆಸ್ಟ್​​ ಹೆಸರಲ್ಲಿ 61 ವರ್ಷದ ವ್ಯಕ್ತಿಯಿಂದ 2.07 ಕೋಟಿ ರೂ. ಸುಲಿಗೆ – Kannada News | Cyber Fraud: 61 Yr Old Duped of 2.07 Crore in Digital Arrest Scam

ಬೆಂಗಳೂರು, ಏಪ್ರಿಲ್​​ 26: ಪೊಲೀಸರಿಂದ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳ ನಡುವೆಯೂ ಡಿಜಿಟಲ್​​ ಅರೆಸ್ಟ್​​ ಹೆಸರಲ್ಲಿ ವಂಚಕರು ಬೀಸುವ ಬಲೆಗೆ ಸಿಲುಕಿ ಹಣ ಕಳೆದುಕೊಳ್ಳುವ ಪ್ರಕರಣಗಳ ಸರಣಿ ರಾಜ್ಯದಲ್ಲಿ ಮುಂದುವರಿದಿದೆ. ಇದೇ ಡಿಜಿಟಲ್​​ ಅರೆಸ್ಟ್​​ ಹೆಸರಲ್ಲಿ 61 ವರ್ಷದ ವ್ಯಕ್ತಿಯೋರ್ವರಿಂದ ಆರೋಪಿಗಳು ಕೋಟ್ಯಾಂತರ ಹಣ ಪೀಕಿರುವ ಘಟನೆ ರಾಜ್ಯದಲ್ಲಿ ನಡೆದಿದೆ. ನಿಮ್ಮನ್ನು ಡಿಜಿಟಲ್​​ ಅರೆಸ್ಟ್​​ ಮಾಡಿದ್ದೇವೆ ಎಂದು ಸಂತ್ರಸ್ತ ವ್ಯಕ್ತಿಯನ್ನು ನಂಬಿಸಿದ್ದ ಆರೋಪಿಗಳು, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳಂತೆ ನಟನೆ ಮಾಡಿ 2 ಕೋಟಿ ರೂಪಾಯಿಗೂ ಅಧಿಕ ಹಣ ಸುಲಿಗೆ ಮಾಡಿದ್ದಾರೆ ಎನ್ನಲಾಗಿದೆ.

ಪೊಲೀಸರ ಪ್ರಕಾರ, ಮಾರ್ಚ್‌ನಲ್ಲಿ ‘ನ್ಯಾಷನಲ್ ಡೇಟಾ ಪ್ರೊಟೆಕ್ಷನ್ ಸೆಂಟರ್’ ಅಧಿಕಾರಿಯೆಂದು ಹೇಳಿಕೊಂಡ ವ್ಯಕ್ತಿಯಿಂದ ಕರೆ ಬಂದಿದೆ. ಮುಂಬೈ ಮೂಲದ ವ್ಯಕ್ತಿಯೊಬ್ಬರು ಸಿಮ್ ಕಾರ್ಡ್ ಪಡೆಯಲು ನಿಮ್ಮ ಗುರುತಿನ ದಾಖಲೆಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಆ ಸಿಮ್​​ನ ಬೆದರಿಕೆ ಕರೆಗಳು, ಅಸಭ್ಯ ಫೋಟೋ-ವೀಡಿಯೋಗಳ ಕಳುಹಿಸುವಿಕೆ ಹಾಗೂ ಡ್ರಗ್ ಟ್ರಾಫಿಕಿಂಗ್‌ಗೆ ಬಳಸಲಾಗಿದೆ. ಈ ಸಂಬಂಧ ಮುಂಬೈನ ಕೋಲಾಬಾ ಪೊಲೀಸ್ ಠಾಣೆಯಲ್ಲಿ 30-50 ಎಫ್‌ಐಆರ್‌ಗಳು ದಾಖಲಾಗಿವೆ. NIA ಮತ್ತು ED ತನಿಖೆ ನಡೆಸಲಿವೆ ಎಂದು ಹೇಳಿ ಸಂತ್ರಸ್ತನನ್ನು ಬೆದರಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿನ ವ್ಯಕ್ತಿಗೆ 14 ದಿನ ಡಿಜಿಟಲ್ ಅರೆಸ್ಟ್, ₹1.62 ಕೋಟಿ ವಂಚನೆ

ನಂತರ NIA ಮತ್ತು ED ಅಧಿಕಾರಿಗಳಂತೆ ನಟಿಸಿದವರು ಕರೆ ಮಾಡಿ, ಸಂತ್ರಸ್ತ ವ್ಯಕ್ತಿಯ ವೈಯಕ್ತಿಕ ಮಾಹಿತಿ ಸಂಗ್ರಹಿಸಿ, ವಿಲಾಸ್ ರಾವ್ ಪಟೇಲ್ ಎಂಬ ಹೆಸರಿನ ED ಅಧಿಕಾರಿ ಎಂದು ಹೇಳಿಕೊಂಡ ವ್ಯಕ್ತಿಯೊಂದಿಗೆ ಮಾತನಾಡಲು ಸೂಚಿಸಿದ್ದಾರೆ. ವಂಚಕರು ವ್ಯಕ್ತಿಯನ್ನು ಭಯಭೀತಗೊಳಿಸಿ, ಆತಂಕಕಾರಿ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆಂದು ಆರೋಪಿಸಿ ಪರಿಶೀಲನೆ ಮತ್ತು ಪ್ರಕರಣ ಕ್ಲಿಯರೆನ್ಸ್ ಹೆಸರಿನಲ್ಲಿ ಹಣ ವರ್ಗಾಯಿಸಲು ಒತ್ತಾಯಿಸಿದ್ದಾರೆ. ಅದರಂತೆ ಏಪ್ರಿಲ್ 7ರಿಂದ ಏಪ್ರಿಲ್ 18ರವರೆಗೆ, 61 ವರ್ಷದ ಸಂತ್ರಸ್ತ ವ್ಯಕ್ತಿ RTGS ಮೂಲಕ ಆರೋಪಿಗಳು ಸೂಚಿಸಿರುವ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 2,07,04,600 ವರ್ಗಾಯಿಸಿದ್ದಾರೆ ಎಂಬುದು ಗೊತ್ತಾಗಿರೋದಾಗಿ ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಶಾಲೆಗಳಲ್ಲಿ ಕನ್ನಡ ದಿನಪತ್ರಿಕೆ ಓದುವುದು ಇನ್ನು ಕಡ್ಡಾಯ! ಸರ್ಕಾರದ ಮಹತ್ವದ ಆದೇಶ – Kannada News | Mandatory Kannada Newspaper Reading in Karnataka Schools

ಶಾಲೆಗಳಲ್ಲಿ ಕನ್ನಡ ದಿನಪತ್ರಿಕೆ ಓದುವುದು ಇನ್ನು ಕಡ್ಡಾಯ!Image Credit source: google Gemini

ಬೆಂಗಳೂರು, ಏಪ್ರಿಲ್ 26: ರಾಜ್ಯದಾದ್ಯಂತ ಇರುವ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ವಿದ್ಯಾರ್ಥಿಗಳು ಪ್ರತಿದಿನ ಕನಿಷ್ಠ 10 ನಿಮಿಷಗಳ ಕಾಲ ಕನ್ನಡ ದಿನಪತ್ರಿಕೆಗಳನ್ನು (Kannada Newspaper) ಓದುವುದನ್ನು ಶಿಕ್ಷಣ ಇಲಾಖೆ ಕಡ್ಡಾಯಗೊಳಿಸಿದೆ. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಶಿಫಾರಸಿನ ಮೇರೆಗೆ ಈ ಆದೇಶ ಹೊರಡಿಸಲಾಗಿದೆ. ಪ್ರತಿದಿನ ಬೆಳಗಿನ ಪ್ರಾರ್ಥನೆಯ ನಂತರ ವಿದ್ಯಾರ್ಥಿಗಳು ಪತ್ರಿಕೆ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಇಲಾಖೆ ಸೂಚಿಸಿದೆ.

ಆದೇಶದ ಹಿಂದಿನ ಉದ್ದೇಶಗಳು

  • ಮೊಬೈಲ್ ಚಟಕ್ಕೆ ಬ್ರೇಕ್: ಇತ್ತೀಚಿನ ದಿನಗಳಲ್ಲಿ ಮಕ್ಕಳು ಇಂಟರ್ನೆಟ್ ಮತ್ತು ಸಾಮಾಜಿಕ ಜಾಲತಾಣಗಳಿಗೆ ದಾಸರಾಗುತ್ತಿದ್ದು, ಇದರಿಂದ ಅವರ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಉಂಟಾಗುತ್ತಿದೆ. ಇದನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ.
  • ಆರೋಗ್ಯ ರಕ್ಷಣೆ: ಅತಿಯಾದ ಮೊಬೈಲ್ ಬಳಕೆಯಿಂದ ಉಂಟಾಗುತ್ತಿರುವ ದೃಷ್ಟಿ ದೋಷ, ಸ್ಮರಣಶಕ್ತಿ ಕುಂಠಿತ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದು ಇದರ ಗುರಿ.
  • ಕೌಶಲ್ಯ ವೃದ್ಧಿ: ದಿನಪತ್ರಿಕೆ ಓದುವುದರಿಂದ ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನ ಹೆಚ್ಚುವುದಲ್ಲದೆ, ಕನ್ನಡ ಭಾಷಾ ಪ್ರೌಢಿಮೆ, ಶಬ್ದಕೋಶ ಮತ್ತು ಬರವಣಿಗೆಯ ಕೌಶಲ್ಯಗಳು ಉತ್ತಮಗೊಳ್ಳಲಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಷೇಧಿಸುವ ಬಗ್ಗೆ ಬಜೆಟ್‌ನಲ್ಲಿ ಘೋಷಿಸಿದ್ದು, ಅದರ ಮುಂದಿನ ಭಾಗವಾಗಿ ಈ ಶೈಕ್ಷಣಿಕ ಸುಧಾರಣೆ ಜಾರಿಗೆ ಬಂದಿದೆ. ಈ ನೂತನ ನಿಯಮವು ಮಕ್ಕಳನ್ನು ಬಾಹ್ಯ ಜಗತ್ತಿನ ವಿದ್ಯಮಾನಗಳೊಂದಿಗೆ ಸಂಪರ್ಕಿಸಲು ಮತ್ತು ಅವರಲ್ಲಿ ಓದುವ ಆಸಕ್ತಿ ಮೂಡಿಸಲು ಸಹಕಾರಿಯಾಗಲಿದೆ ಎಂದು ಇಲಾಖೆ ವಿಶ್ವಾಸ ವ್ಯಕ್ತಪಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಬಿಸಿಲಿನಿಂದ ರಕ್ಷಿಸಿಕೊಳ್ಳಲು ಹಾಲಿನ ಕ್ಯಾನ್ ತಲೆಗೆ ಹಾಕಿಕೊಂಡು ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿ – Kannada News | Milk Can Mishap: Man in Rajasthan Gets Head Stuck Inside Container

ಅಲ್ವಾರ್, ಏಪ್ರಿಲ್ 26: ಬೇಸಿಗೆಯ ಸುಡುವ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಜನರು ತರಹೇವಾರಿ ಹರಸಾಹಸ ಮಾಡುವುದು ಸಾಮಾನ್ಯ. ಆದರೆ, ಅಲ್ವಾರ್‌ನ ಮಾಧೋಗಢ ಗ್ರಾಮದ ಕಲೂರಾಮ್ ರೆಬಾರಿ ಎಂಬ ವ್ಯಕ್ತಿ ಮಾಡಿದ ಉಪಾಯ ಮಾತ್ರ ಆತನನ್ನೇ ಸಂಕಷ್ಟಕ್ಕೆ ದೂಡಿತ್ತು. ತಲೆಯ ಮೇಲೆ ಸಿಲುಕಿಕೊಂಡ ಹಾಲಿನ ಕ್ಯಾನ್‌ನಿಂದಾಗಿ ಎರಡು ಗಂಟೆಗಳ ಕಾಲ ಪರದಾಡಿದ ಘಟನೆ ಈಗ ಬೆಳಕಿಗೆ ಬಂದಿದೆ.

ಏಪ್ರಿಲ್ 24ರಂದು ಕಲೂರಾಮ್ ರೆಬಾರಿ ಗೋಧಿ ವಿತರಿಸಲು ಹೋಗುತ್ತಿದ್ದರು. ಅಂದು ಬಿಸಿಲು ವಿಪರೀತವಾಗಿದ್ದರಿಂದ, ತಲೆಗೆ ಬಿಸಿ ತಗುಲಬಾರದೆಂದು ತಮಾಷೆಗಾಗಿ ಅಥವಾ ರಕ್ಷಣೆಗಾಗಿ ಪಕ್ಕದಲ್ಲಿದ್ದ 15 ಲೀಟರ್ ಹಾಲಿನ ಸ್ಟೀಲ್ ಕ್ಯಾನ್ ಅನ್ನು ತಮ್ಮ ತಲೆಯ ಮೇಲೆ ಹಾಕಿಕೊಂಡರು. ಆದರೆ, ಕ್ಯಾನ್ ಒಳಗೆ ಹೋದ ತಲೆ ಹೊರಗೆ ಬರಲೇ ಇಲ್ಲ.

ಕೂಡಲೇ ಗ್ರಾಮಸ್ಥರು ಜಮಾಯಿಸಿ ಕ್ಯಾನ್ ತೆಗೆಯಲು ಹರಸಾಹಸ ಪಟ್ಟರು. ಎಣ್ಣೆ ಹಚ್ಚುವುದು, ಸೋಪು ಹಚ್ಚಿ ಎಳೆಯುವುದು ಸೇರಿದಂತೆ ಹಲವು ದೇಸಿ ತಂತ್ರಗಳನ್ನು ಬಳಸಿದರೂ ಕ್ಯಾನ್ ಮಾತ್ರ ಇಂಚೂ ಕದಲಲಿಲ್ಲ. ವಿದ್ಯುತ್ ಚಾಲಿತ ಗ್ರೈಂಡರ್ ಯಂತ್ರವನ್ನು ಬಳಸಿ ಅತ್ಯಂತ ನಾಜೂಕಿನಿಂದ ಕ್ಯಾನ್ ಅನ್ನು ಕತ್ತರಿಸಲು ನಿರ್ಧರಿಸಲಾಯಿತು. ಸ್ವಲ್ಪವೇ ಹೆಚ್ಚುಕಡಿಮೆಯಾದರೂ ವ್ಯಕ್ತಿ ಮುಖಕ್ಕೆ ಗಾಯವಾಗುವ ಅಪಾಯವಿತ್ತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

IPL 2026: ಒಂದೇ ದಿನ ಬರೋಬ್ಬರಿ 16 ಕ್ಯಾಚ್​ಗಳು ಡ್ರಾಪ್..! – Kannada News | IPL 2026: A Comedy of Errors on the Field

ಕ್ರಿಕೆಟ್‌ನಲ್ಲಿ “ಕ್ಯಾಚಸ್ ವಿನ್ ಮ್ಯಾಚಸ್” (Catches win matches) ಎಂಬ ಮಾತಿದೆ. ಈ ಮಾತನ್ನು ಏಪ್ರಿಲ್ 25 ರಂದು ನಡೆದ ಎರಡು ಪಂದ್ಯಗಳು ಅಕ್ಷರಶಃ ನಿಜವಾಗಿಸಿದ್ದಾರೆ. ಈ ಎರಡೂ ಮ್ಯಾಚ್​ಗಳಲ್ಲಿ ಫೀಲ್ಡರ್‌ಗಳು ಮಾಡಿದ ಎಡವಟ್ಟುಗಳಿಂದ ಪಂದ್ಯದ ಫಲಿತಾಂಶ ಬದಲಾಗಿದೆ. ಹೀಗೆ ಇಡೀ ಪಂದ್ಯದ ಗತಿಯನ್ನೇ ಬದಲಿಸಿದ ಆ “ಕೈಚೆಲ್ಲಿದ ಕ್ಯಾಚ್​ಗಳ” ಸಂಪೂರ್ಣ ವಿವರ ಇಲ್ಲಿದೆ.

ಡೆಲ್ಲಿ ಕ್ಯಾಪಿಟಲ್ಸ್ (DC) ಮತ್ತು ಪಂಜಾಬ್ ಕಿಂಗ್ಸ್ (PBKS) ಪಂದ್ಯ:

ಈ ಪಂದ್ಯದಲ್ಲಿ ಪಂಜಾಬ್ ತಂಡ 265 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿ ವಿಶ್ವ ದಾಖಲೆ ನಿರ್ಮಿಸಿತು. ಇದಕ್ಕೆ ಪಂಜಾಬ್ ಬ್ಯಾಟರ್‌ಗಳಿಗೆ ಸಿಕ್ಕ ಜೀವದಾನಗಳೇ ಮುಖ್ಯ ಕಾರಣ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬೃಹತ್ ಮೊತ್ತ ಪೇರಿಸಲು ಪಂಜಾಬ್ ಕಿಂಗ್ಸ್ ಆಟಗಾರರು ಕೈಚೆಲ್ಲಿದ ಕ್ಯಾಚ್​ಗಳು ಕೂಡ ಕಾರಣ ಎಂಬುದು ಇಲ್ಲಿ ಉಲ್ಲೇಖಾರ್ಹ. ಆ ಕ್ಯಾಚ್​ಗಳೆಂದರೆ…

  • KL ರಾಹುಲ್ ಅವರ ಕ್ಯಾಚ್‌ಗಳು: ಕೆ.ಎಲ್. ರಾಹುಲ್ 12 ರನ್ ಗಳಿಸಿದ್ದಾಗ ಶಶಾಂಕ್ ಸಿಂಗ್ (2.2 ಓವರ್) ಮತ್ತು ನಂತರ ವಿಜಯಕುಮಾರ್ ವೈಶಾಕ್ (9.2 ಓವರ್) ಕ್ಯಾಚ್ ಕೈಬಿಟ್ಟಿದ್ದರು. ಇದರ ಲಾಭ ಪಡೆದ ರಾಹುಲ್ ಅಜೇಯ 152 ರನ್* ಸಿಡಿಸಿದರು.
  • ಶ್ರೇಯಸ್ ಅಯ್ಯರ್ ಜೀವದಾನ: ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಅವರಿಗೆ ಕರುಣ್ ನಾಯರ್ ಮೂರು ಎಸೆತಗಳ ಅಂತರದಲ್ಲಿ ಎರಡು ಬಾರಿ (14.6 ಮತ್ತು 15.2 ಓವರ್) ಜೀವದಾನ ನೀಡಿದರು.
  • ಬೌಂಡರಿ ಲೈನ್ ಎಡವಟ್ಟು: ಮಾರ್ಕಸ್ ಸ್ಟೋಯಿನಿಸ್ (16.6 ಓವರ್) ಮತ್ತು ಮುಕೇಶ್ ಕುಮಾರ್ (8.1 ಓವರ್) ಇಬ್ಬರೂ ಕ್ಯಾಚ್ ಹಿಡಿದರೂ, ನಿಯಂತ್ರಣ ತಪ್ಪಿ ಬೌಂಡರಿ ಕುಶನ್ ಮುಟ್ಟಿದ್ದರಿಂದ ಅವು ಸಿಕ್ಸರ್ ಆಗಿ ಪರಿವರ್ತನೆಯಾದವು.
  • ಇತರ ಮಿಸ್‌ಗಳು: ಆಖಿಬ್ ನಬಿ ಮತ್ತು ಲುಂಗಿ ಎನ್ಗಿಡಿ ಕೂಡ ಕ್ಯಾಚ್​ಗಳನ್ನು ಹಿಡಿಯುವಲ್ಲಿ ವಿಫಲರಾಗಿದ್ದರು.

ರಾಜಸ್ಥಾನ್ ರಾಯಲ್ಸ್ (RR) ಮತ್ತು ಸನ್ ರೈಸರ್ಸ್ ಹೈದರಾಬಾದ್ (SRH) ಪಂದ್ಯ:

ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಕಳಪೆ ಫೀಲ್ಡಿಂಗ್ ಪ್ರದರ್ಶಿಸಿದರೆ, ದ್ವಿತೀಯ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಕಳಪೆ ಫೀಲ್ಡಿಂಗ್​ಗೆ ಭಾರೀ ಬೆಲೆ ತೆರಬೇಕಾಯಿತು.

  • ಅಭಿಷೇಕ್ ಶರ್ಮಾ ಕ್ಯಾಚ್: ರವೀಂದ್ರ ಜಡೇಜಾ ಮತ್ತು ಶಿಮ್ರಾನ್ ಹೆಟ್ಮೆಯರ್ ಇಬ್ಬರೂ ಅಭಿಷೇಕ್ ಶರ್ಮಾ ಅವರ ಕ್ಯಾಚ್ ಪಡೆಯುವಲ್ಲಿ ವಿಫಲರಾಗಿದ್ದರು.
  •  ಧ್ರುವ್ ಜುರೆಲ್ ಕ್ಯಾಚ್: ಸಾಕಿಬ್ ಹುಸೇನ್ ಅವರು ಧ್ರುವ್ ಜುರೆಲ್ ಅವರು ನೀಡಿ ಕ್ಯಾಚ್ ಅನ್ನು ಎರಡು ಬಾರಿ (5.6 ಮತ್ತು 8.5 ಓವರ್) ಕೈಬಿಟ್ಟಿದ್ದರು.
  • ಇತರೆ ಮಿಸ್​ಗಳು: ಟ್ರಾವಿಸ್ ಹೆಡ್, ರಿಯಾನ್ ಪರಾಗ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರಿಗೂ ಎದುರಾಳಿ ತಂಡದ ಫೀಲ್ಡಿಂಗ್ ಮಿಸ್‌ಗಳಿಂದಾಗಿ ಹೊಸ ಜೀವದಾನಗಳು ಸಿಕ್ಕವು.

ಇದನ್ನೂ ಓದಿ: ಬರೋಬ್ಬರಿ 986 ರನ್​ಗಳು… ಐಪಿಎಲ್​ನಲ್ಲಿ ಹೊಸ ಇತಿಹಾಸ

ಒಟ್ಟಾರೆಯಾಗಿ, ಈ ದಿನವನ್ನು “ಕೈಚೆಲ್ಲಿದ ಅವಕಾಶಗಳ ದಿನ” (A Day of Missed Chances) ಎಂದು ಕರೆಯಲಾಗಿದೆ, ಏಕೆಂದರೆ ಈ ತಪ್ಪುಗಳೇ ಪಂದ್ಯದ ಫಲಿತಾಂಶವನ್ನು ಬದಲಿಸಿದವು.

ಕೈಚೆಲ್ಲಿದ ಕ್ಯಾಚ್​ಗಳ ಸಂಕ್ಷಿಪ್ತ ವಿವರಗಳು:

  • 2.2 ಓವರ್​– ಶಶಾಂಕ್ ಸಿಂಗ್ ಕೈಯಿಂದ ಕೆ.ಎಲ್. ರಾಹುಲ್ ಅವರ ಕ್ಯಾಚ್ ಮಿಸ್.
  • 9.2 ಓವರ್– ವಿಜಯಕುಮಾರ್ ವೈಶಾಕ್ ಕೈಯಿಂದ ಕೆ.ಎಲ್. ರಾಹುಲ್ ಅವರ ಕ್ಯಾಚ್ ಮಿಸ್.
  • 16.6 ಓವರ್​– ಮಾರ್ಕಸ್ ಸ್ಟೊಯಿನಿಸ್ ಕ್ಯಾಚ್ ಹಿಡಿದರೂ, ಬೌಂಡರಿ ಲೈನ್ ಟಚ್ ಆಗಿ ಅದು ಸಿಕ್ಸ್​ ಆಯಿತು.
  • 1.3  ಓವರ್​– ಆಖಿಬ್ ನಬಿ ಕೈಯಿಂದ ಪ್ರಭ್‌ಸಿಮ್ರಾನ್ ಸಿಂಗ್ ಅವರ ಕ್ಯಾಚ್ ಮಿಸ್.
  • 2.3 ಓವರ್​– ಲುಂಗಿ ಎನ್ಗಿಡಿ ಕ್ಯಾಚ್ ಹಿಡಿಯುವಲ್ಲಿ ವಿಫಲರಾದರು.
  • 8.1 ಓವರ್​– ಮುಕೇಶ್ ಕುಮಾರ್ ಕ್ಯಾಚ್ ಹಿಡಿದರೂ, ಬೌಂಡರಿ ಕುಶನ್ ಅನ್ನು ಮುಟ್ಟಿದರು.
  • 14.6 ಓವರ್​– ಕರುಣ್ ನಾಯರ್ ಕೈಯಿಂದ ಶ್ರೇಯಸ್ ಅಯ್ಯರ್ ಅವರ ಕ್ಯಾಚ್ ಮಿಸ್.
  • 15.2 ಓವರ್​– ಕರುಣ್ ನಾಯರ್ ಕೈಯಿಂದ ಶ್ರೇಯಸ್ ಅಯ್ಯರ್ ಅವರ ಕ್ಯಾಚ್ ಮಿಸ್.
  • 4.1 ಓವರ್​– ಅನಿಖೇತ್ ವರ್ಮಾ ಕೈಯಿಂದ ವೈಭವ್ ಸೂರ್ಯವಂಶಿ ಅವರ ಕ್ಯಾಚ್ ಮಿಸ್.
  • 5.6  ಓವರ್​– ಸಾಕಿಬ್ ಹುಸೇನ್ ಕೈಯಿಂದ ಧ್ರುವ್ ಜುರೆಲ್ ಅವರ ಕ್ಯಾಚ್ ಮಿಸ್.
  • 8.5  ಓವರ್​– ಸಾಕಿಬ್ ಹುಸೇನ್ ಕೈಯಿಂದ ಧ್ರುವ್ ಜುರೆಲ್ ಅವರ ಕ್ಯಾಚ್ ಮಿಸ್.
  • 15.2 ಓವರ್​– ಪ್ರಫುಲ್ ಹಿಂಗೆ ಕೈಯಿಂದ ರಿಯಾನ್ ಪರಾಗ್ ಅವರ ಕ್ಯಾಚ್ ಮಿಸ್.
  • 0.1  ಓವರ್​– ಧ್ರುವ್ ಜುರೆಲ್ ಕೈಯಿಂದ ಟ್ರಾವಿಸ್ ಹೆಡ್ ಅವರ ಕ್ಯಾಚ್ ಮಿಸ್.
  • 3.2 ಓವರ್​– ಅಭಿಷೇಕ್ ಶರ್ಮಾ ಅವರ ಕ್ಯಾಚ್ ಪಡೆಯುವಲ್ಲಿ ಶಿಮ್ರಾನ್ ಹೆಟ್ಮೆಯರ್ ವಿಫಲರಾದರು.
  • 4.6  ಓವರ್– ರವೀಂದ್ರ ಜಡೇಜಾ ಕೈಯಿಂದ ಅಭಿಷೇಕ್ ಶರ್ಮಾ ಅವರ ಕ್ಯಾಚ್ ಮಿಸ್.
  • 14.1 ಓವರ್​– ಬ್ರಿಜೇಶ್ ಶರ್ಮಾ ಕೈಯಿಂದ ನಿತೀಶ್ ಕುಮಾರ್ ರೆಡ್ಡಿ ಅವರ ಕ್ಯಾಚ್ ಮಿಸ್.

Source link

‘ಟಾಕ್ಸಿಕ್’ ಟೀಸರ್​ನಲ್ಲಿ ಅಂಥ ದೃಶ್ಯ ಇದೆ ಎಂದು ಟೀಕಿಸಿದವರಿಗೆ ಉತ್ತರ ನೀಡಿದ ಯಶ್ – Kannada News | Yash talks about bold scenes in Toxic teaser and Geethu Mohandas in CinemaCon

ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದ ಪ್ರಚಾರ ಜೋರಾಗಿ ನಡೆಯುತ್ತಿದೆ. ಯಶ್ ಅವರು ವಿದೇಶದಲ್ಲಿ ಸಂದರ್ಶನ ನೀಡಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ‘ಟಾಕ್ಸಿಕ್’ (Toxic) ಚಿತ್ರದ ಟೀಸರ್​ನಲ್ಲಿ ಇರುವ ಕೆಲವು ಬೋಲ್ಡ್ ದೃಶ್ಯಗಳ ಬಗ್ಗೆ ಜನರಿಂದ ವ್ಯಕ್ತವಾದ ಟೀಕೆಗಳಿಗೆ ಯಶ್ ಈಗ ಉತ್ತರ ನೀಡಿದ್ದಾರೆ. ಆ ಮೂಲಕ ಅವರು ಸಿನಿಮಾ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.

ಅಮೆರಿಕದಲ್ಲಿ ನಡೆದ ‘ಸಿನಿಮಾಕಾನ್’ ಈವೆಂಟ್​ನಲ್ಲಿ ಪಾಲ್ಗೊಂಡಿದ್ದ ಯಶ್ ಅವರು ಸಂದರ್ಶನ ನೀಡಿದ್ದಾರೆ. ಈ ವೇಳೆ ‘ಟಾಕ್ಸಿಕ್’ ಚಿತ್ರದ ನಿರ್ದೇಶಕಿ ಗೀತು ಮೋಹನ್‌ದಾಸ್ ಬಗ್ಗೆ ಮಾತನಾಡಿದ ಅವರು, ‘ಭಾರತದಲ್ಲಿ ಆ್ಯಕ್ಷನ್ ಸಿನಿಮಾಗಳನ್ನು ಸಾಮಾನ್ಯವಾಗಿ ಪುರುಷ ನಿರ್ದೇಶಕರೇ ನಿರ್ದೇಶಿಸುತ್ತಾರೆ ಎಂಬ ಇತಿಹಾಸವಿದೆ. ಆದರೆ, ಒಬ್ಬ ಮಹಿಳಾ ನಿರ್ದೇಶಕಿ ಗ್ಯಾಂಗ್‌ಸ್ಟರ್ ಸಿನಿಮಾವನ್ನು ತನ್ನದೇ ಆದ ಹೆಣ್ಣಿನ ದೃಷ್ಟಿಕೋನದಿಂದ ತೆರೆಯ ಮೇಲೆ ತರುತ್ತಿರುವುದು ತುಂಬಾ ಹೊಸತನದಿಂದ ಕೂಡಿದೆ’ ಎಂದಿದ್ದಾರೆ.

ಚಿತ್ರದಲ್ಲಿನ ಬೋಲ್ಡ್ ದೃಶ್ಯಗಳ ಬಗ್ಗೆ ಮಾತನಾಡಿದ ಅವರು, ‘ಗೀತು ಅವರು ಕಥೆಯನ್ನು ಬರೆಯುವ ರೀತಿ ಮತ್ತು ಅದರಲ್ಲಿ ಪ್ರಣಯ ತೋರಿಸುವ ವಿಧಾನವೇ ಬೇರೆ. ಒಬ್ಬ ಮಹಿಳೆ ಬಯಕೆ ಅಥವಾ ಭಾವನೆಗಳನ್ನು ಎಷ್ಟು ಆಳವಾಗಿ ಮತ್ತು ವಿಭಿನ್ನವಾಗಿ ತೋರಿಸಬಲ್ಲರು ಎಂಬುದು ಈ ಚಿತ್ರದ ಜರ್ನಿಯಲ್ಲಿ ನನಗೆ ಅರಿವಾಯಿತು. ಇದು ಈವರೆಗಿನ ಆ್ಯಕ್ಷನ್ ಸಿನಿಮಾಗಳಿಗಿಂತ ಬಹಳ ವಿಭಿನ್ನವಾಗಿರಲಿದೆ’ ಎಂದು ಯಶ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.

2025ರ ಜನವರಿಯಲ್ಲಿ ಬಿಡುಗಡೆಯಾದ ಬರ್ತ್‌ಡೇ ಟೀಸರ್​​ನಲ್ಲಿ ಯಶ್ ಅವರು ಕ್ಯಾಸಿನೋವೊಂದಕ್ಕೆ ಎಂಟ್ರಿ ಕೊಡುವ ದೃಶ್ಯವಿತ್ತು. ಇತ್ತೀಚೆಗೆ ಬಿಡುಗಡೆಯಾದ ‘ಇಂಟ್ರಡ್ಯೂಸಿಂಗ್ ರಾಯಾ’ ವಿಡಿಯೋದಲ್ಲಿನ ಕೆಲವು ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿವೆ. ವಿಶೇಷವಾಗಿ ಸ್ಮಶಾನ, ಕಾರ್ ಮತ್ತು ಬಾಂಬ್ ಒಳಗೊಂಡ ಆ ದೃಶ್ಯವು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ರಾಷ್ಟ್ರೀಯ ಕ್ರಿಶ್ಚಿಯನ್ ಫೆಡರೇಷನ್ ದೂರನ್ನು ದಾಖಲಿಸಿತ್ತು.

ಇದನ್ನೂ ಓದಿ: ‘ಟಾಕ್ಸಿಕ್’ ಕಥೆ ಏನು ಎಂಬುದನ್ನು ಓಪನ್ ಆಗಿ ಹೇಳಿದ ಯಶ್; ವಿಡಿಯೋ ವೈರಲ್

ಮಿಶ್ರ ಪ್ರತಿಕ್ರಿಯೆ ಮತ್ತು ಸಣ್ಣಪುಟ್ಟ ವಿರೋಧಗಳ ನಡುವೆಯೂ, ‘ಟಾಕ್ಸಿಕ್’ ಚಿತ್ರವು ತನ್ನ ವಿಭಿನ್ನ ಮೇಕಿಂಗ್ ಮತ್ತು ಯಶ್ ಅವರ ಸ್ಟೈಲಿಶ್ ಲುಕ್‌ನಿಂದಾಗಿ ಜಾಗತಿಕ ಮಟ್ಟದಲ್ಲಿ ಕುತೂಹಲ ಮೂಡಿಸಿರುವುದಂತೂ ನಿಜ. ಮಾರ್ಚ್ 19ರಂದು ಬಿಡುಗಡೆ ಆಗಬೇಕಿದ್ದ ಈ ಸಿನಿಮಾ ಕಾರಣಾಂತರಗಳಿಂದ ಮುಂದೂಡಿಕೆ ಆಯಿತು. ಜೂನ್ 4ಕ್ಕೆ ವಿಶ್ವಾದ್ಯಂತ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version