ಕುರಿಗಾಹಿಗಳ ಮೇಲೆ ಜಮೀನು ಮಾಲೀಕರ ಅಟ್ಟಹಾಸ: ಕುರಿಗಳು ತೋಟಕ್ಕೆ ನುಗ್ಗಿದ್ದಕ್ಕೆ ಮನಸೋ ಇಚ್ಛೆ ಥಳಿತ – Kannada News | Shepherds Attacked by Landowners After sheep Entering Arecanut Farm

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕುರಿಗಾಹಿImage Credit source: tv9 kannada

ದಾವಣಗೆರೆ, ಏಪ್ರಿಲ್​ 25: ಕುರಿಗಳು ತೋಟಕ್ಕೆ ನುಗ್ಗಿದವು ಎಂಬ ಕ್ಷುಲ್ಲಕ ಕಾರಣಕ್ಕಾಗಿ ಜಮೀನು ಮಾಲೀಕರು ಕುರಿಗಾಹಿ ತಂದೆ-ಮಗನ ಮೇಲೆ ಮಾರಣಾಂತಿಕವಾಗಿ ಹಲ್ಲೆ (Assault) ಮಾಡಿದ ಘಟನೆ ದಾವಣಗೆರೆ (davanagere) ತಾಲೂಕಿನ ನಾಗರಸನಹಳ್ಳಿ ಬಳಿ ನಡೆದಿದೆ. ಹಲ್ಲೆಯ ತೀವ್ರತೆಗೆ ಯುವಕ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಹಲ್ಲೆ ಮಾಡಿದ್ದಲ್ಲದೆ ಜೆಸಿಬಿಯಿಂದ ಗುಂಡಿ ತೆಗೆದು ಹೂತು ಹಾಕುವುದಾಗಿ ಬೆದರಿಕೆ ಕೂಡ ಹಾಕಲಾಗಿದೆ. ನಾಗರಾಜ್(18) ಮತ್ತು ಬಾಳಪ್ಪ(40) ಹಲ್ಲೆಗೊಳಗಾದ ಕುರಿಗಾಹಿಗಳು. ಹದಡಿ ಪೊಲೀಸ್ ಠಾಣೆಗೆ ಗಾಯಾಳು ಬಾಳಪ್ಪರಿಂದ ದೂರು ನೀಡಲಾಗಿದೆ.

ದಾವಣಗೆರೆ ತಾಲೂಕಿನ ನಾಗರಸನಹಳ್ಳಿಯ ಅಡಕೆ ತೋಟದಲ್ಲಿ ಈ ಕೃತ್ಯ ನಡೆದಿದೆ. ಪಕ್ಕದ ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದಾಗ ಕೇವಲ 4 ಕುರಿಗಳು ಅಕ್ಕಪಕ್ಕದ ಅಡಕೆ ತೋಟಕ್ಕೆ ನುಗ್ಗಿದ್ದವು. ಇದರಿಂದ ಕೆರಳಿದ ತೋಟದ ಮಾಲೀಕರು ಅಮಾನವೀಯವಾಗಿ ವರ್ತಿಸಿದ್ದಾರೆ.

ಇದನ್ನೂ ಓದಿ: ಮದುವೆಗೆ ಹೆಣ್ಣು ಸಿಗುತ್ತಿಲ್ಲ ಎಂಬ ಜಿಗುಪ್ಸೆ: ತೆಂಗಿನ ಮರಕ್ಕೆ ನೇಣು ಬಿಗಿದುಕೊಂಡು ಕುರಿಗಾಹಿ ಯುವಕ ಆತ್ಮಹತ್ಯೆ!

ಕಾರಿಗನೂರು ಗ್ರಾಮದ ನಿವಾಸಿಗಳಾದ ಪ್ರಕಾಶ್ ಮತ್ತು ವೀರೇಶ್ ಎಂಬುವವರು ಮೊದಲು ನಾಗರಾಜ್ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿದ್ದಾರೆ. ಜಮೀನು ಮಾಲೀಕರು ಮನಸೋಇಚ್ಛೆ ಥಳಿಸಿದಕ್ಕೆ ನಾಗರಾಜ್ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಮಗನ ಸ್ಥಿತಿ ಕಂಡು ಗಾಬರಿಯಾಗಿ ಪ್ರಶ್ನಿಸಲು ಹೋದ ತಂದೆ ಬಾಳಪ್ಪ ಅವರ ಮೇಲೂ ಜಮೀನು ಮಾಲೀಕರು ಹಲ್ಲೆ ನಡೆಸಿ ಅಟ್ಟಹಾಸ ಮೆರೆದಿದ್ದಾರೆ.

ಜೆಸಿಬಿಯಿಂದ ಹೂತು ಹಾಕುವ ಬೆದರಿಕೆ

ಇನ್ನೊಮ್ಮೆ ಕುರಿಗಳು ಅಡಕೆ ತೋಟಕ್ಕೆ ನುಗ್ಗಿದರೆ ನಿಮ್ಮನ್ನು ಬಿಡುವುದಿಲ್ಲ. ಜೆಸಿಬಿಯಿಂದ ಗುಂಡಿ ತೆಗೆದು ಇಲ್ಲೇ ಹೂತು ಹಾಕಿಬಿಡುತ್ತೇವೆ ಎಂದು ಜಮೀನು ಮಾಲೀಕರು ಕುರಿಗಾಹಿಗಳಿಗೆ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಸದ್ಯ ಗಂಭೀರವಾಗಿ ಗಾಯಗೊಂಡಿರುವ ನಾಗರಾಜ್ ನಗರದ ಎಸ್.ಎಸ್. ಹೈಟೆಕ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಕುರಿ ಮೈತೊಳೆಯಲು ಕೆರೆಗೆ ಹೋಗಿದ್ದ ಸಹೋದರರು ನೀರುಪಾಲು: ಬದುಕು ದುರಂತ ಅಂತ್ಯ

ಇನ್ನು ತಮ್ಮ ಮೇಲೆ ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿರುವ ಪ್ರಕಾಶ್ ಮತ್ತು ವೀರೇಶ್ ವಿರುದ್ಧ ಗಾಯಾಳು ಬಾಳಪ್ಪ ಅವರು ಹದಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಹರಿದ ಪ್ಯಾಂಟ್​, 2 ರೂ. ಪೆನ್ ಬಳಸುತ್ತಿದ್ದ ಕೇಜ್ರಿವಾಲ್ ಸಿಎಂ ಆದಮೇಲೆ 100 ಕೋಟಿ ಬಂಗಲೆ ಕಟ್ಟಿದರು; ಸ್ವಾತಿ ಮಲಿವಾಲ್ ಟೀಕೆ – Kannada News | Wore torn pants earlier built Rs 100 crore house after become CM Swati Maliwal targets Arvind Kejriwal

ನವದೆಹಲಿ, ಏಪ್ರಿಲ್ 25: ಅರವಿಂದ್ ಕೇಜ್ರಿವಾಲ್ (Arvind Kejriwal) ನೇತೃತ್ವದ ಆಮ್ ಆದ್ಮಿ ಪಾರ್ಟಿ ತೊರೆದು ಬಿಜೆಪಿ ಸೇರಿದ ಒಂದು ದಿನದ ನಂತರ, ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ದೆಹಲಿಯ ಮಾಜಿ ಮುಖ್ಯಮಂತ್ರಿಯನ್ನು ಟೀಕಿಸಿ ಪ್ರಧಾನಿ ನರೇಂದ್ರ ಮೋದಿಯವರನ್ನು (PM Narendra Modi) ಹೊಗಳಿದ್ದಾರೆ. “ಅರವಿಂದ್ ಕೇಜ್ರಿವಾಲ್ ಮೊದಲೆಲ್ಲ ಹರಿದ ಪ್ಯಾಂಟ್ ಧರಿಸುತ್ತಿದ್ದರು, 2 ರೂ. ಪೆನ್ ಬಳಸುತ್ತಿದ್ದರು, ಸಿಕ್ಕ ಚಪ್ಪಲಿ ಹಾಕಿಕೊಂಡು ತೀರಾ ಸಾಮಾನ್ಯ ಜೀವನ ನಡೆಸುತ್ತಿದ್ದರು. ಅವರು ಆಮ್ ಆದ್ಮಿ ಪಕ್ಷ ಕಟ್ಟಿದಾಗ ನಮ್ಮ ದೇಶದ ರಾಜಕೀಯದಲ್ಲಿ ಏನಾದರೂ ಬದಲಾವಣೆಯಾಗಬಹುದು ಎಂಬ ನಿರೀಕ್ಷೆ ನಮಗಿತ್ತು. ಹೀಗಾಗಿಯೇ ಆ ಪಕ್ಷ ಸೇರಿದೆವು. ಆದರೆ, ಅವರು ದೆಹಲಿಯ ಸಿಎಂ ಆದನಂತರ 100 ಕೋಟಿ ರೂ. ಬೆಲೆಯ ಬಂಗಲೆ ಕಟ್ಟಿದರು, ಐಷಾರಾಮಿ ಜೀವನ ನಡೆಸತೊಡಗಿದರು” ಎಂದು ಸ್ವಾತಿ ಮಲಿವಾಲ್ ಟೀಕಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RR vs SRH: 36 ಎಸೆತ, 12 ಸಿಕ್ಸರ್..! ವೇಗದ ಶತಕ ಸಿಡಿಸಿ ದಾಖಲೆ ಬರೆದ ವೈಭವ್ – Kannada News | IPL 2026: Vaibhav Suryavanshi Smashes Record 36 Ball Century for RR, Claims Orange Cap!

ಐಪಿಎಲ್ 2026 (IPL 2026) ರ 36 ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (RR) ತಂಡದ ಸ್ಫೋಟಕ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ (Vaibhav Sooryavanshi) ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 36 ಎಸೆತಗಳಲ್ಲಿ ತಮ್ಮ ಐಪಿಎಲ್ ವೃತ್ತಿಜೀವನದ ಎರಡನೇ ಶತಕವನ್ನು ಸಿಡಿಸಿದರು. ತಮ್ಮ ಈ ಶತಕದ ಇನ್ನಿಂಗ್ಸ್​ನಲ್ಲಿ 5 ಬೌಂಡರಿ ಹಾಗೂ 12 ಭರ್ಜರಿ ಸಿಕ್ಸರ್​ಗಳನ್ನು ಬಾರಿಸಿದ ವೈಭವ್ ಕೇವಲ ಬೌಂಡರಿಗಳಿಂದಲೇ 92 ರನ್ ಕಲೆಹಾಕಿದರು. ಅಂದರೆ ವೈಭವ್ ಕೇವಲ 17 ಎಸೆತಗಳಲ್ಲಿ ಬರೋಬ್ಬರಿ 92 ರನ್ ಚಚ್ಚಿದರು.

ವೈಭವ್​ಗೆ ಆರೆಂಜ್ ಕ್ಯಾಪ್

ಈ ಪಂದ್ಯದಲ್ಲಿ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ವೈಭವ್, 37 ಎಸೆತಗಳಲ್ಲಿ 103 ರನ್ ಬಾರಿಸಿ ಔಟಾದರು. 36ನೇ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ವೈಭವ್ ಶತಕ ಪೂರೈಸಿದ್ದು ವಿಶೇಷವಾಗಿತ್ತು. ಇದು ವೈಭವ್ ಅವರ ಎರಡನೇ ಐಪಿಎಲ್ ಸೀಸನ್ ಆಗಿದ್ದು, ಮೊದಲನೇ ಸೀಸನ್​ನಲ್ಲಿ ಶತಕ ಬಾರಿಸಿದ್ದ ಅವರು ಇದೀಗ ಎರಡನೇ ಸೀಸನ್​ನಲ್ಲೂ ಶತಕದ ಇನ್ನಿಂಗ್ಸ್ ಆಡಿದ್ದಾರೆ. ಈ ಶತಕದೊಂದಿಗೆ ಈ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ವೈಭವ್ ಅಗ್ರಸ್ಥಾನಕ್ಕೇರಿದ್ದು, ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ.

2 ಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್

ಐಪಿಎಲ್‌ನಲ್ಲಿ ಅತಿ ಕಡಿಮೆ ಎಸೆತಗಳಲ್ಲಿ ಶತಕ ಬಾರಿಸಿದ ಭಾರತೀಯರ ಪಟ್ಟಿಯಲ್ಲಿ ವೈಭವ್ ಸೂರ್ಯವಂಶಿ ಅಗ್ರಸ್ಥಾನದಲ್ಲಿದ್ದಾರೆ. ಕಳೆದ ವರ್ಷದ ಐಪಿಎಲ್​ನಲ್ಲಿ ಕೇವಲ 35 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ವೈಭವ್ ಈ ದಾಖಲೆ ನಿರ್ಮಿಸಿದ್ದರು. ಇದೀಗ ಈ ಆವೃತ್ತಿಯಲ್ಲಿ 36 ಎಸೆತಗಳಲ್ಲಿ ಎರಡನೇ ಶತಕ ಬಾರಿಸುವ ಮೂಲಕ ವೈಭವ್, ಐಪಿಎಲ್ ಇತಿಹಾಸದಲ್ಲಿ 36 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಎರಡು ಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆಗೆ ಕೊರಳೊಡ್ಡಿದ್ದಾರೆ.

ಐಪಿಎಲ್‌ನಲ್ಲಿ ಅತಿ ವೇಗದ ಶತಕ

  • 30 ಎಸೆತಗಳು – ಕ್ರಿಸ್ ಗೇಲ್ (2013- ಪುಣೆ ವಾರಿಯರ್ಸ್​)
  • 35 ಎಸೆತಗಳು – ವೈಭವ್ ಸೂರ್ಯವಂಶಿ (2025- ಗುಜರಾತ್ ಟೈಟಾನ್ಸ್)
  • 36 ಎಸೆತಗಳು – ವೈಭವ್ ಸೂರ್ಯವಂಶಿ (2026- ಸನ್​ರೈಸರ್ಸ್​ ಹೈದರಾಬಾದ್)
  • 37 ಎಸೆತಗಳು – ಯೂಸುಫ್ ಪಠಾಣ್ (2010- ಮುಂಬೈ ಇಂಡಿಯನ್ಸ್)
  • 37 ಎಸೆತಗಳು – ಹೆನ್ರಿಚ್ ಕ್ಲಾಸೆನ್ (2025- ಕೆಕೆಆರ್)

ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳು

ಈ ಇನ್ನಿಂಗ್ಸ್‌ನಲ್ಲಿ ವೈಭವ್ ಸೂರ್ಯವಂಶಿ 12 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಮತ್ತೊಂದು ಪ್ರಮುಖ ದಾಖಲೆಯನ್ನು ನಿರ್ಮಿಸಿದರು. ಈ 12 ಸಿಕ್ಸರ್​ಗಳ ಸಹಾಯದಿಂದ ಐಪಿಎಲ್ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆಯೂ ವೈಭವ್ ಪಾಲಾಗಿದೆ. ಈ ಹಿಂದೆ, ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ 11 ಸಿಕ್ಸರ್‌ಗಳನ್ನು ಬಾರಿಸಿದ್ದ ಮುರಳಿ ವಿಜಯ್ ಈ ದಾಖಲೆಯನ್ನು ಹೊಂದಿದ್ದರು.

RR vs SRH: 6,6,6,6..ಮೊದಲ ಓವರ್​ನಲ್ಲೇ ಸಿಕ್ಸರ್​ಗಳ ಮಳೆ; ದಾಖಲೆ ಬರೆದ ವೈಭವ್

ಐಪಿಎಲ್ ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಭಾರತೀಯ

  • 12- ವೈಭವ್ ಸೂರ್ಯವಂಶಿ vs ಸನ್‌ರೈಸರ್ಸ್
  • 11- ಮುರಳಿ ವಿಜಯ್ vs ಆರ್‌ಆರ್
  • 11- ವೈಭವ್ ಸೂರ್ಯವಂಶಿ vs ಜಿಟಿ
  • 10- ಸಂಜು ಸ್ಯಾಮ್ಸನ್ vs ಆರ್‌ಸಿಬಿ
  • 10- ಶ್ರೇಯಸ್ ಅಯ್ಯರ್ vs ಕೆಕೆಆರ್

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವ್ಯಾಪಾರಕ್ಕೆಂದು ಬಂದು ಮಹಿಳೆಯ ಸಹವಾಸ ಮಾಡಿ ಬರ್ಬರ ಹತ್ಯೆಯಾದ ಈರುಳ್ಳಿ ವ್ಯಾಪಾರಿ! – Kannada News | A Man Kills Tamil nadu onion merchant Who illicit relationship with her Lover at Bengaluru

ರಾಮಚಂದ್ರ ರೆಡ್ಡಿ(ಕೊಲೆಯಾದವ), ಹರೀಶ್(ಹಂತಕ)

ಬೆಂಗಳೂರು, (ಏಪ್ರಿಲ್ 25): ಮಹಿಳೆಯೊಬ್ಬರ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಈರುಳ್ಳಿ ವ್ಯಾಪಾರಿ (onion merchant) ಬರ್ಬರವಾಗಿ ಹತ್ಯೆಯಾಗಿದ್ದಾನೆ. ಬೆಂಗಳೂರಿನ (Bengaluru) ಕಾಡುಗೋಡಿ ಠಾಣೆ ವ್ಯಾಪ್ತಿಯಲ್ಲಿ ಈ ಕೊಲೆ ನಡೆದಿದ್ದು, ರಾಮಚಂದ್ರ ರೆಡ್ಡಿ ಕೊಲೆಯಾದ ವ್ಯಕ್ತಿ. ತಮಿಳುನಾಡು ಮೂಲದ ರಾಮಚಂದ್ರ ರೆಡ್ಡಿ ಈರುಳ್ಳಿ ವ್ಯಾಪಾರಿಯಾಗಿದ್ದು (Tamil nadu onion merchant), ವ್ಯಾಪಾರಕ್ಕೆಂದು ಬೆಂಗಳೂರಿಗೆ  ಮಹಿಳೆಯೊಬ್ಬರ ಪರಿಚಯವಾಗಿ ಅದು ಅನೈತಿಕ ಸಂಬಂಧಕ್ಕೆ ತಿರುಗಿತ್ತು.  ಬಳಿಕ ಬೆಂಗಳೂರಿಗೆ ಬಂದಾಗೆಲ್ಲಾ ಮಹಿಳೆಯ ಮನೆಗೆ ಹೋಗಿ ಬರ್ತಿದ್ದ. ಅದರಂತೆ ನಿನ್ನೆ(ಏಪ್ರಿಲ್ 25) ಸಹ ಮಹಿಳೆಯ ಮನೆಗೆ ತೆರಳಿದ್ದ ವೇಳೆ ಬರ್ಬರವಾಗಿ ಹತ್ಯೆಯಾಗಿದ್ದಾನೆ.  ಮಹಿಳೆಯ ಹೊಸ ಪ್ರಿಯಕರ ಹರೀಶ್ , ಎನ್ನುವಾತನೇ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಈರುಳ್ಳಿ ವ್ಯಾಪಾರಿಯಾಗಿದ್ದ ತಮಿಳುನಾಡು ಮೂಲದ ರಾಮಚಂದ್ರ ರೆಡ್ಡಿ, ವ್ಯಾಪಾರಕ್ಕೆಂದು ಬೆಂಗಳೂರಿಗೆ ಬರುತ್ತಿದ್ದ. ಆ ಸಂದರ್ಭದಲ್ಲಿ ರಾಮಚಂದ್ರ ರೆಡ್ಡಿಗೆ ಮಹಿಳೆಯೊಬ್ಬರ ಪರಿಚಯವಾಗಿದ್ದು, ಬಳಿಕ ಇಬ್ಬರ ಸ್ನೇಹ ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಹೀಗಾಗಿ ಬೆಂಗಳೂರಿಗೆ ಬಂದಾಗೆಲ್ಲ ಮಹಿಳೆಯ ಮನೆಗೆ ಹೋಗಿ ಬರುತ್ತಿದ್ದ. ಈ ನಡುವೆ ಮಹಿಳೆಗೆ ಹರೀಶ್ ಎಂಬಾತನ ಪರಿಚಯವಾಗಿದ್ದು, ಇಬ್ಬರ ಮಧ್ಯೆ ಪ್ರೀತಿ ಕೂಡ ಶುರು ಆಗಿದೆ. ಆದ್ರೆ ಇತ್ತೀಚೆಗೆ ರಾಮಚಂದ್ರ ರೆಡ್ಡಿ ಬಂದು ಹೋಗುವುದು ಹರೀಶ್ ಗೆ ಗೊತ್ತಾಗಿದ್ದು, ಪ್ರೇಯಸಿಯ ಸಂಬಂಧವನ್ನ ಸಹಿಸದೆ ಆಕ್ರೋಶಗೊಂಡಿದ್ದ. ಅಲ್ಲದೇ ಇದಕ್ಕೆ ಅಂತ್ಯಹಾಡಬೇಕೆಂದು ಪ್ಲ್ಯಾನ್ ಮಾಡಿದ್ದ.

ಇದನ್ನೂ ಓದಿ: ಮೈಸೂರು: ಕುಡಿತದ ಚಟಕ್ಕೆ ದಾಸನಾದ ಮಗ, ಕಾಟ ತಾಳಲಾರದೇ ಕೊಂದೇ ಬಿಟ್ಲು ಹೆತ್ತಮ್ಮ

ಈ ಸಂದರ್ಭದಲ್ಲಿ ರಾಮಚಂದ್ರ ರೆಡ್ಡಿ  ಸಹ ನಿನ್ನೆ (ಏಪ್ರಿಲ್ 25) ಮಹಿಳೆಯ ಮನೆಗೆ ಬಂದಿದ್ದು,  ಬಳಿಕ ಅಲ್ಲೇ ಇದ್ದ ದೇವಸ್ಥಾನವೊಂದರ ಬಳಿ ಮಲಗಿದ್ದ. ಇದೇ ಸಮಯಕ್ಕೆ ಮಹಿಳೆಯ ಪ್ರಿಯಕರ ಹರೀಶ್ ಬಂದು ರಾಮಚಂದ್ರ ರೆಡ್ಡಿ ಮೇಲೆ ಕಲ್ಲು ಎತ್ತಿ ಹಾಕಿ ಕೊಂದಿದ್ದಾನೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕಾಡುಗೋಡಿ ಪೊಲೀಸರು, ಹಂತಕ ಹರೀಶ್​​ನನ್ನು ಬಂಧಿಸಿದ್ದಾರೆ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕೆಳಹೊಟ್ಟೆಯ ನೋವನ್ನು ನಿರ್ಲಕ್ಷಿಸಬೇಡಿ; ಇದು ಗಂಭೀರ ಕಾಯಿಲೆಗಳ ಸೂಚನೆಯಾಗಿರಬಹುದು – Kannada News | Persistent Lower Abdominal Pain in Women: When to See a Doctor

ಮಹಿಳೆಯರಲ್ಲಿ ಕೆಲವೊಮ್ಮೆ ಕೆಳ ಹೊಟ್ಟೆ ಭಾಗದಲ್ಲಿ ನೋವು (Lower Stomach Pain) ಕಾಣಿಸಿಕೊಳ್ಳುವುದು ಸಾಮಾನ್ಯ. ವಿಶೇಷವಾಗಿ ಮಾಸಿಕ ಚಕ್ರದ (Periods) ಸಮಯದಲ್ಲಿ ಈ ನೋವು ಕಾಣಿಸಿಕೊಳ್ಳಬಹುದು. ಆದರೆ ಪೀರಿಯಡ್ಸ್‌ ಇಲ್ಲದ ಸಮಯದಲ್ಲೂ ನಿರಂತರವಾಗಿ ನೋವು ಕಾಣಿಸಿದರೆ ಅದನ್ನು ಲಘುವಾಗಿ ತೆಗೆದುಕೊಳ್ಳುವುದು ಅಪಾಯಕಾರಿ ಎಂದು ತಜ್ಞರು ಎಚ್ಚರಿಸುತ್ತಾರೆ. ಹೌದು ಹೊಟ್ಟೆಯ ಕೆಳಭಾಗದಲ್ಲಿ ನೋವು ಕಂಡುಬರುವುದು ಗಂಭೀರ ಕಾಯಿಲೆ ಬರುವ ಲಕ್ಷಣವಾಗಿರಬಹುದು. ಹಾಗಾಗಿ ಬಹಳ ಎಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ. ಹಾಗಾದರೆ ಈ ರೀತಿಯಾಗುವುದು ಯಾವ ಕಾಯಿಲೆ ಬರುವ ಮುನ್ಸೂಚನೆ, ಈ ಆರೋಗ್ಯ ಸಮಸ್ಯೆ ತಡೆಯಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಯಾವ ಕಾಯಿಲೆಗಳ ಸೂಚನೆ ಇರಬಹುದು?

  • ತಜ್ಞರ ಪ್ರಕಾರ, ಕೆಳ ಹೊಟ್ಟೆ ನೋವು ಹಲವು ಆರೋಗ್ಯ ಸಮಸ್ಯೆಗಳ ಸೂಚನೆಯಾಗಿರಬಹುದು. ಪ್ರಮುಖವಾಗಿ ಪೆಲ್ವಿಕ್ ಇನ್ಫ್ಲಮೇಟರಿ ಡಿಸೀಸ್ (PID) ಎನ್ನುವ ಸೋಂಕಿನಿಂದ ಕೆಳ ಹೊಟ್ಟೆ ಮತ್ತು ನಾಭಿಯ ಸುತ್ತ ನೋವು ಕಾಣಿಸಬಹುದು. ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಈ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
  • ಇದೇ ರೀತಿ, ಒವೆರಿಯನ್ ಸಿಸ್ಟ್ ಸಮಸ್ಯೆಯೂ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ವಿಶೇಷವಾಗಿ PCOD ಮತ್ತು PCOS ಇರುವವರಲ್ಲಿ ಈ ಸಮಸ್ಯೆ ಸಾಮಾನ್ಯ. ಇದರ ಪರಿಣಾಮವಾಗಿ ಕೆಳ ಹೊಟ್ಟೆ ಭಾಗದಲ್ಲಿ ನಿರಂತರ ನೋವು ಕಾಣಿಸಬಹುದು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ ಇದು ಗಂಭೀರವಾಗಬಹುದು.
  • ಮತ್ತೊಂದು ಗಂಭೀರ ಸಮಸ್ಯೆ ಎಂಡೋಮೆಟ್ರಿಯೊಸಿಸ್. ಈ ಸ್ಥಿತಿಯಲ್ಲಿ ಗರ್ಭಾಶಯದ ಒಳಗಿನ ಪದರ ಹೊರಭಾಗದಲ್ಲೂ ಬೆಳೆಯಲು ಪ್ರಾರಂಭಿಸುತ್ತದೆ. ಇದರಿಂದ ಪೀರಿಯಡ್ಸ್ ಸಮಯದಲ್ಲಿ ತೀವ್ರ ನೋವು ಮತ್ತು ಕೆಳ ಹೊಟ್ಟೆಯಲ್ಲಿ ನಿರಂತರ ಅಸ್ವಸ್ಥತೆ ಉಂಟಾಗಬಹುದು. ಚಿಕಿತ್ಸೆ ವಿಳಂಬವಾದರೆ ಸಂತಾನಹೀನತೆಯ ಅಪಾಯವೂ ಹೆಚ್ಚುತ್ತದೆ.
  • ಉರಿಯೂತ, ಪದೇಪದೇ ಮೂತ್ರ ವಿಸರ್ಜನೆ ಮತ್ತು ಕೆಳ ಹೊಟ್ಟೆ ನೋವು ಯೂರಿನ್ ಇನ್ಫೆಕ್ಷನ್ ಲಕ್ಷಣಗಳಾಗಿರಬಹುದು. ವೈಯಕ್ತಿಕ ಸ್ವಚ್ಛತೆ ಕೊರತೆಯಿಂದ ಈ ಸಮಸ್ಯೆ ಉಂಟಾಗುತ್ತದೆ.

ಇದನ್ನೂ ಓದಿ: ಋತುಚಕ್ರದ ಸಮಯದಲ್ಲಿ ಈ ಆಹಾರಗಳನ್ನು ಕಡ್ಡಾಯವಾಗಿ ಸೇವಿಸಬೇಕು!

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

ಕೆಳ ಹೊಟ್ಟೆ ನೋವು ಹಲವು ದಿನಗಳವರೆಗೆ ಮುಂದುವರಿದರೆ, ನೋವು ತೀವ್ರವಾಗಿದ್ರೆ ಅಥವಾ ಜೊತೆಗೆ ಬೇರೆ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ. ಸ್ವಯಂ ಚಿಕಿತ್ಸೆ ಮಾಡುವುದನ್ನು ತಪ್ಪಿಸಬೇಕು.

ತಡೆಗಟ್ಟುವ ಕ್ರಮಗಳು:

  • ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಿ
  • ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ
  • ಯಾವುದೇ ನೋವನ್ನು ನಿರ್ಲಕ್ಷಿಸಬೇಡಿ

ತಜ್ಞರ ಅಭಿಪ್ರಾಯದಂತೆ, ಸಮಯಕ್ಕೆ ಸರಿಯಾದ ಪರೀಕ್ಷೆ ಮತ್ತು ಚಿಕಿತ್ಸೆ ಪಡೆಯುವುದರಿಂದ ಗಂಭೀರ ಸಮಸ್ಯೆಗಳನ್ನು ತಪ್ಪಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೈಸೂರು: ಕುಡಿತದ ಚಟಕ್ಕೆ ದಾಸನಾದ ಮಗ, ಕಾಟ ತಾಳಲಾರದೇ ಕೊಂದೇ ಬಿಟ್ಲು ಹೆತ್ತಮ್ಮ – Kannada News | Mother Kills Alcoholic Son: Chamundi Hill Tragedy Over Daily Abuse

ಮೈಸೂರು, ಏಪ್ರಿಲ್​ 25: ಮಗ ಅಂದರೆ ಹೆತ್ತ ತಾಯಿಗೆ ಪ್ರಾಣಕ್ಕಿಂತ ಮಿಗಿಲು. ಆದರೆ ಅದೇ ಮಗ ಕುಡಿತದ ಚಟಕ್ಕೆ ಬಿದ್ದು, ದಿನನಿತ್ಯ ಹೆತ್ತವಳಿಗೆ ನರಕಯಾತನೆ ನೀಡಿದರೆ ಏನಾಗಬಹುದು ಎಂಬುದಕ್ಕೆ ಮೈಸೂರಿನಲ್ಲಿ ನಡೆದ ಈ ಭೀಕರ ಘಟನೆಯೇ ಸಾಕ್ಷಿ. ಕುಡಿಯಲು ಹಣಕ್ಕಾಗಿ ಪೀಡಿಸುತ್ತಿದ್ದ ಮಗನನ್ನು ತಾಯಿಯೇ (Mother) ಕಲ್ಲಿನಿಂದ ಹೊಡೆದು ಕೊಲೆ (kill) ಮಾಡಿದ ಘಟನೆ ಸಾಂಸ್ಕೃತಿಕ ನಗರಿಯನ್ನು ಬೆಚ್ಚಿಬೀಳಿಸಿದೆ.

ಮೈಸೂರಿನ ಎನ್.ಆರ್. ಮೊಹಲ್ಲಾ ನಿವಾಸಿ ಮಂಜುಳಾ ಎಂಬುವವರ ಮಗ ರಮೇಶ (43) ಕೊಲೆಯಾದ ವ್ಯಕ್ತಿ. ಈತನನ್ನು ಕೊಲೆ ಮಾಡಿದ್ದು, ಹೆತ್ತ ತಾಯಿ ಮಂಜುಳಾ. ಬೇರೆಯವರ ಮನೆಯಲ್ಲಿ ಮಂಜುಳಾ ಕೆಲಸ ಮಾಡಿಕೊಂಡಿದ್ದರು. ಮಗ ರಮೇಶನಿಗೆ ಕುಡಿತದ ಚಟವಿತ್ತು. ಈತ ಕೆಲಸಕ್ಕೂ ಹೋಗದೆ ದಿನನಿತ್ಯ ಕುಡಿಯಲು ಹಣ ನೀಡುವಂತೆ ತಾಯಿಗೆ ಕಿರುಕುಳ ನೀಡುತ್ತಿದ್ದ.

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕೊಲೆ

ಪ್ರತಿದಿನ ಮಗ ನೀಡುತ್ತಿದ್ದ ಮಾನಸಿಕ ಮತ್ತು ದೈಹಿಕ ಹಿಂಸೆ ಮಂಜುಳಾ ಅವರಿಗೆ ಅಸಹನೀಯವಾಗಿತ್ತು. ಕೊನೆಗೆ ಈ ಹಿಂಸೆಯಿಂದ ಮುಕ್ತಿ ಪಡೆಯಲು ತಾಯಿ ಒಂದು ಭೀಕರ ಪ್ಲ್ಯಾನ್​ ಮಾಡಿದ್ದರು. ಚಾಮುಂಡಿ ಬೆಟ್ಟದ ತಪ್ಪಲಿಗೆ ಮಗನನ್ನು ಕರೆದುಕೊಂಡು ಹೋಗಿದ್ದ ಮಂಜುಳಾ, ಅಲ್ಲಿ ಮಗನ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ಗಲಾಟೆ ವಿಕೋಪಕ್ಕೆ ಹೋದಾಗ, ಅಲ್ಲೇ ಇದ್ದ ಕಲ್ಲನ್ನು ಎತ್ತಿ ಮಗನ ತಲೆಗೆ ಹೊಡೆದಿದ್ದಾರೆ. ತೀವ್ರ ರಕ್ತಸ್ರಾವದಿಂದ ರಮೇಶ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಪೊಲೀಸ್​ ವಿಚಾರಣೆಯಲ್ಲಿ ಸತ್ಯ ಬಾಯಿಬಿಟ್ಟ ತಾಯಿ

ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ನಜರ್‌ಬಾದ್ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಮೊದಲು ಕೊಲೆಯ ಬಗ್ಗೆ ಚಿಕ್ಕ ಸುಳಿವು ಸಿಕ್ಕಿರಲಿಲ್ಲ. ನಂತರ ಪೊಲೀಸರು ಸಿಸಿ ಕ್ಯಾಮೆರಾ ಮೊರೆ‌ ಹೋಗಿದ್ದಾರೆ. ಈ ವೇಳೆ ತಾಯಿ, ಮಗನನ್ನು ಚಾಮುಂಡಿಬೆಟ್ಟಕ್ಕೆ ಕರೆದುಕೊಂಡು ಹೋದ ದೃಶ್ಯ ಸೆರೆಯಾಗಿತ್ತು. ಈ ನಿಟ್ಟಿನಲ್ಲಿ ತನಿಖೆ ನಡೆಸಿದ ಪೊಲೀಸರು ತಾಯಿಯ ವಿಚಾರಣೆ ಮಾಡಿದ್ದು, ಆಗ ತಾಯಿ ಸತ್ಯ ಬಾಯಿ ಬಿಟ್ಟಿದ್ದಾರೆ‌.

ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಪರಲೋಕಕ್ಕೆ ಕಳುಹಿಸಿದ ಪತ್ನಿ!: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಕೊಲೆ?

ಸದ್ಯ ತಾಯಿ ಮಂಜುಳಾರನ್ನು ಬಂಧಿಸಿರುವ ಪೊಲೀಸರು ಜೈಲಿಗಟ್ಟಿದ್ದಾರೆ. ಕುಡಿತದ ಚಟ ಒಂದು ಸುಂದರ ಕುಟುಂಬವನ್ನು ಹೇಗೆ ಬೀದಿಗೆ ತರುತ್ತದೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ ಎನ್ನಬಹುದು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಧುರಂಧರ್’ ನಿರ್ದೇಶಕನ 20 ಕೋಟಿ ಮೌಲ್ಯದ ಮನೆಯಲ್ಲಿ ಏನೇನಿದೆ? – Kannada News | Aditya Dhar and Yami Gautham Luxurious yet simple looking house

ಧುರಂಧರ್’ (Dhurandhar) ಮತ್ತು ‘ಧುರಂಧರ್ 2’ ಸಿನಿಮಾದ ಬಳಿಕ ಆದಿತ್ಯ ಧರ್ ಭಾರತದ ಸ್ಟಾರ್ ಸಿನಿಮಾ ನಿರ್ದೇಶಕ ಎನಿಸಿಕೊಂಡಿದ್ದಾರೆ. ಈ ಎರಡೂ ಸಿನಿಮಾಗಳನ್ನು ನಿರ್ದೇಶನ ಮಾಡಿರುವುದು ಮಾತ್ರವೇ ಅಲ್ಲದೆ ನಿರ್ಮಾಣವನ್ನೂ ಮಾಡಿದ್ದಾರೆ ಆದಿತ್ಯ ಧರ್. ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್​​ನಲ್ಲಿ ಈ ವರೆಗೆ ಮೂರು ಸಾವಿರ ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದು, ಆದಿತ್ಯ ಧರ್ ಬಹುಷಃ ಬಾಲಿವುಡ್​ನ ಶ್ರೀಮಂತ ನಿರ್ದೇಶಕರಲ್ಲಿ ಒಬ್ಬರಾಗಿಬಿಟ್ಟಿದ್ದಾರೆ. ಅಂದಹಾಗೆ ಆದಿತ್ಯ ಧರ್ ಮತ್ತು ಯಾಮಿ ಗೌತಮ್ ಮುಂಬೈನಲ್ಲಿ 20 ಕೋಟಿ ರೂಪಾಯಿ ಮೌಲ್ಯದ ಐಶಾರಾಮಿ ಮನೆಯಲ್ಲಿ ವಾಸವಿರುತ್ತಾರೆ. ಈ ಮನೆ ಆಧುನಿಕ ಲಕ್ಷುರಿಗಳ ಜೊತೆಗೆ ನೈಸರ್ಗಿಕ ಅಂಶಗಳನ್ನು ಸಹ ಒಳಗೊಂಡಿದೆ.

ಯಾಮಿ ಗೌತಮ್ ಹಾಗೂ ಆದಿತ್ಯ ಧರ್ 2021 ರಲ್ಲಿ ಸರಳವಾಗಿ ವಿವಾಹವಾದರು. ಅದಕ್ಕೆ ಮುನ್ನ ಆದಿತ್ಯ ಧರ್ ನಿರ್ದೇಶನದ ‘ಉರಿ’ ಸಿನಿಮಾನಲ್ಲಿ ಯಾಮಿ ನಟಿಸಿದ್ದರು. ಅಲ್ಲಿಂದಲೇ ಈ ಇಬ್ಬರ ನಡುವೆ ಪ್ರೀತಿ ಶುರುವಾಯ್ತು. ಯಾಮಿಯನ್ನು ಮದುವೆಯಾದ ಬಳಿಕ ಆದಿತ್ಯ ಅವರ ಅದೃಷ್ಟವೇ ಬದಲಾಯ್ತು. ಒಂದರ ಹಿಂದೊಂದು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಅವರು ನೀಡಿದ್ದಾರೆ.

ಯಾಮಿ ಗೌತಮ್ ಮತ್ತು ಆದಿತ್ಯ ಧರ್ ಅವರು ಮುಂಬೈನ ಬಾಂದ್ರಾನಲ್ಲಿ ಹಲವು ಪ್ರತಿಷ್ಠಿತ ಸಿನಿಮಾ ಸೆಲೆಬ್ರಿಟಿಗಳು ವಾಸವಿರುವ ಅಪಾರ್ಟ್​​ಮೆಂಟ್​​ನಲ್ಲಿ ಫ್ಲ್ಯಾಟ್ ಅನ್ನು ಹೊಂದಿದ್ದು, ಅಲ್ಲಿಯೇ ವಾಸ ಮಾಡುತ್ತಾರೆ. ಅವರ ಮನೆಯ ಮೌಲ್ಯ ಸುಮಾರು 15 ರಿಂದ 20 ಕೋಟಿ ರೂಪಾಯಿಗಳಂತೆ. ಅವರ ಮನೆ ಸರಳವಾಗಿ, ಕಂಫರ್ಟ್ ಆಗಿ ಮತ್ತು ನೈಸರ್ಗಿಕ ಅಂಶಗಳನ್ನು ಒಳಗೊಂಡಿದೆ. ಸರಳವಾದ ಇಂಟೀರಿಯರ್ ಜೊತೆಗೆ ಹಲವು ಒಳಗಾಂಣದಲ್ಲಿ ಹಲವು ಗಿಡಗಳು, ಬಳ್ಳಿಗಳನ್ನು ಯಾಮಿ ಮತ್ತು ಆದಿತ್ಯ ಹೊಂದಿದ್ದಾರೆ.

ಮನೆಯ ಒಳಭಾಗದಲ್ಲಿ, ಬೆಳಕು-ನೆರಳಿನ ಕಾಂಬಿನೇಷನ್​​ಗಳು ಮತ್ತು ಮರದ ರೀತಿಯ ವಿನ್ಯಾಸಗಳು ಹೆಚ್ಚಿಗಿವೆ. ತಿಳಿ ಬಣ್ಣವನ್ನು ಒಳಾಂಗಣದಲ್ಲಿ ಹೆಚ್ಚು ಬಳಕೆ ಮಾಡಲಾಗಿದ್ದು, ಇದು ಶಾಂತ ಅನುಭವವನ್ನು ನೀಡುತ್ತದೆಯಂತೆ. ಬಹುತೇಕ ಒಳಾಂಗಣ ವಿನ್ಯಾಸವನ್ನು ನಟಿ ಯಾಮಿ ಗೌತಮ್ ಅವರೇ ಮಾಡಿದ್ದಾರೆ. ಆದಿತ್ಯ ಧರ್ ಅವರು ನಿಸರ್ಗ ಪ್ರೇಮಿಯಾಗಿದ್ದು, ಮನೆಯಲ್ಲಿ ಗಿಡಗಳು ಅವರದ್ದೇ ಐಡಿಯಾ ಅಂತೆ. ಆದಿತ್ಯ ಧರ್ ಮತ್ತು ಯಾಮಿ ಗೌತಮ್ ಸರಳತೆಗೆ ಹೆಚ್ಚು ಪ್ರಾಧಾನ್ಯತೆ ನೀಡುವ ಕಾರಣ, ಮನೆಯ ಒಳಾಂಗಣವನ್ನು ಸಹ ಸರಳವಾಗಿ ಮತ್ತು ಸುಂದರವಾಗಿರುವಂತೆ ವಿನ್ಯಾಸ ಮಾಡಿಸಿಕೊಂಡಿದ್ದಾರೆ.

ಆದಿತ್ಯ ಧರ್, ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳ ಯಶಸ್ಸಿನ ಬಳಿಕ ಅಶ್ವತ್ಥಾಮ ಕುರಿತಾದ ಕತೆಯನ್ನು ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ನಟಿ ಯಾಮಿ ಗೌತಮ್ ಅವರು ಪ್ರಸ್ತುತ ‘ನಯಿ ನವೇಲಿ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅವರು ‘ಧುರಂಧರ್ 2’ ಸಿನಿಮಾದ ಅತಿಥಿ ಪಾತ್ರವೊಂದರಲ್ಲಿ ನಟಿಸಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 8:40 pm, Sat, 25 April 26

Source link

ಅಮೆರಿಕ-ಇರಾನ್ ನಡುವೆ ಶಾಂತಿ ಮಾತುಕತೆಯ ಪಾಕ್ ಪ್ರಯತ್ನ ವಿಫಲ; ಯುಎಸ್​ ನಿಯೋಗದ ಭೇಟಿಗೆ ಒಪ್ಪದ ಟೆಹ್ರಾನ್ – Kannada News | Big setback for US Iran peace talks in islamabad Tehran Refuses to meet American delegation

ಇಸ್ಲಮಾಬಾದ್, ಏಪ್ರಿಲ್ 25: ಪಾಕಿಸ್ತಾನದಲ್ಲಿ ಇರಾನ್ ಮತ್ತು ಅಮೆರಿಕದ ನಡುವಿನ ಶಾಂತಿ ಮಾತುಕತೆಗಳ ಸುತ್ತಲಿನ ಪ್ರಮುಖ ಬೆಳವಣಿಗೆಯಲ್ಲಿ ಇರಾನ್ (Iran) ನಿಯೋಗವು ಅಮೆರಿಕದ ನಿಯೋಗವನ್ನು ಭೇಟಿ ಮಾಡಲು ಸಿದ್ಧವಾಗಿಲ್ಲ ಎಂದು ಇಸ್ಲಮಾಬಾದ್​ನ ಸುದ್ದಿ ಸಂಸ್ಥೆ ಹೇಳಿದೆ. ಪಾಕಿಸ್ತಾನದ (Pakistan) ಇಸ್ಲಮಾಬಾದ್‌ನಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಯನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳು ವಿಫಲವಾಗುವಂತೆ ಕಂಡುಬರುತ್ತಿದೆ. ಟೆಹ್ರಾನ್ ಇನ್ನೂ ಪಾಕಿಸ್ತಾನಕ್ಕೆ ಭೇಟಿ ನೀಡುವ ಅಮೆರಿಕದ ನಿಯೋಗವನ್ನು ಭೇಟಿ ಮಾಡಲು ಸಿದ್ಧವಾಗಿಲ್ಲ ಎಂದು ಹೇಳಿದೆ ಎನ್ನಲಾಗಿದೆ.

ಪಾಕಿಸ್ತಾನ ಮೂಲದ ಮಾಧ್ಯಮ ಸಂಸ್ಥೆ ARY ನ್ಯೂಸ್‌ನ ಅಧ್ಯಕ್ಷ ಕಮ್ರಾನ್ ಖಾನ್ ನೀಡಿರುವ ಮಾಹಿತಿ ಪ್ರಕಾರ, ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ನಿಗದಿತ ಸಭೆಯ ಸುತ್ತ ಅನಿಶ್ಚಿತತೆ ತೀವ್ರಗೊಂಡಿದೆ. ಎಕ್ಸ್​ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ, ಎರಡನೇ ಸುತ್ತಿನ ಚರ್ಚೆಗಳ ನಿರೀಕ್ಷೆಗಳು ಮಂಕಾಗಿವೆ ಎಂದು ಮೂಲಗಳು ಬಹಿರಂಗಪಡಿಸಿವೆ. ಇಸ್ಲಮಾಬಾದ್‌ನಲ್ಲಿ ಇಂದು ಎರಡನೇ ಸುತ್ತಿನ ಯುಎಸ್-ಇರಾನ್ ಮಾತುಕತೆಗಳ ಪುನರಾರಂಭದ ನಿರೀಕ್ಷೆಗಳು ಮಸುಕಾಗುತ್ತಿವೆ. ಇರಾನ್ ಇನ್ನೂ ಅಮೆರಿಕದ ನಿಯೋಗವನ್ನು ಭೇಟಿ ಮಾಡಲು ಸಿದ್ಧವಾಗಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಭಾರತ ಅಮೆರಿಕದ ಉತ್ತಮ ಸ್ನೇಹಿತ; ವಿವಾದದ ಬಳಿಕ ತೇಪೆ ಹಚ್ಚಿದ ಟ್ರಂಪ್

ಟೆಹ್ರಾನ್ ಇನ್ನೂ ವಾಷಿಂಗ್ಟನ್‌ನಿಂದ ತಡರಾತ್ರಿ ಆಗಮಿಸುವ ನಿರೀಕ್ಷೆಯಿದ್ದ ಯುಎಸ್ ನಿಯೋಗವನ್ನು ಭೇಟಿ ಮಾಡಲು ಸಿದ್ಧವಾಗಿಲ್ಲ. ಎರಡನೇ ಸುತ್ತಿನ ಮಾತುಕತೆಗಳನ್ನು ತೆರೆಯಲು ಪೂರ್ವಭಾವಿ ಷರತ್ತಾಗಿ ಅಮೆರಿಕನ್ನರು ಹಾರ್ಮುಜ್ ಜಲಸಂಧಿಯ ದಿಗ್ಬಂಧನವನ್ನು ಕೊನೆಗೊಳಿಸಬೇಕೆಂದು ಇರಾನ್ ಒತ್ತಾಯಿಸುತ್ತಲೇ ಇದೆ ಎಂದು ಪಾಕಿಸ್ತಾನ ಮೂಲದ ಸುದ್ದಿ ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: ಇರಾನ್, ಅಮೆರಿಕ ನಡುವೆ ಬಿಲ್ಡಪ್ ಕೊಡಲು ಹೋಗಿ ಮುಖಭಂಗ ಅನುಭವಿಸಿದ ಪಾಕಿಸ್ತಾನ

ಪಾಕಿಸ್ತಾನದ ಪಿಎಂಒ ಎಕ್ಸ್‌ನಲ್ಲಿ ಇರಾನ್ ವಿದೇಶಾಂಗ ಸಚಿವರು ಮತ್ತು ಅವರ ನಿಯೋಗವು ನಿನ್ನೆ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರನ್ನು ಭೇಟಿಯಾಗುವುದನ್ನು ತೋರಿಸುವ ಒಂದು ಸಣ್ಣ ವೀಡಿಯೊವನ್ನು ಪೋಸ್ಟ್ ಮಾಡಿದೆ. ಈ ಸಭೆಯಲ್ಲಿ ಉಪ ಪ್ರಧಾನ ಮಂತ್ರಿ ಮತ್ತು ವಿದೇಶಾಂಗ ಸಚಿವ ಮುಹಮ್ಮದ್ ಇಶಾಕ್ ದಾರ್ ಮತ್ತು ಸೇನಾ ಮುಖ್ಯಸ್ಥ ಸೈಯದ್ ಅಸಿಮ್ ಮುನೀರ್ ಕೂಡ ಭಾಗವಹಿಸಿದ್ದರು. ಈ ಸಭೆಯ ಕುರಿತು ಹೆಚ್ಚಿನ ವಿವರಗಳನ್ನು ಪಾಕಿಸ್ತಾನ ಸರ್ಕಾರ ಹಂಚಿಕೊಂಡಿಲ್ಲ. ಆದರೆ, ಈ ಬಾರಿ ಯುಎಸ್-ಇರಾನ್ ನಡುವೆ ನೇರ ಮಾತುಕತೆ ಇರುವುದಿಲ್ಲ ಎಂದು ಇರಾನ್‌ನ ಉನ್ನತ ಅಧಿಕಾರಿಯೊಬ್ಬರು ದೃಢಪಡಿಸಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಟಿವಿ9 ಇಂಪ್ಯಾಕ್ಟ್: ತುಂಗಭದ್ರಾದಿಂದ ಕದ್ದುಮುಚ್ಚಿ ಕಾರ್ಖಾನೆಗಳಿಗೆ ಹರಿಸಲಾಗುತ್ತಿದ್ದ ನೀರು ಬಂದ್ – Kannada News | Tv9 Impact: Officers Stops tungabhadra reservoir Water To factory at Koppal

ಕೊಪ್ಪಳ, (ಏಪ್ರಿಲ್ 25): ತುಂಗಭದ್ರಾ ಜಲಾಶಯದಿಂದ ಕದ್ದಮುಚ್ಚಿ ಹಲವು ಕಾರ್ಖಾನೆಗಳಿಗೆ ನೀರು ಹರಿಸಲಾಗುತ್ತಿದೆ ಎನ್ನುವ ಆರೋಪಗಳು ಕೇಳಿಬಂದಿದ್ದವು. ಕುಡಿಯಲು ಕಾಲುವೆಗಳಿಗೆ ನೀರು ಬಿಡದ ಅಧಿಕಾರಿಗಳು, ಫ್ಯಾಕ್ಟರಿಗಳಿಗೆ ನೀರು ಹರಿಸುತ್ತಿದ್ದರು ಎಂಬ ದೂರುಗಳು ಕೇಳಿಬಂದಿದ್ದು, ಈ ಸಂಬಂಧ ಟಿವಿ9 ವರದಿ ಮಾಡಿತ್ತು. ಈ ವರದಿ ಬೆನ್ನಲ್ಲೇ ಇದೀಗ ಕದ್ದಮುಚ್ಚಿ ಕಾರ್ಖಾನೆಗಳಿಗೆ ಹರಿಸಲಾಗುತ್ತಿದ್ದ ನೀರು ಸ್ಥಗಿತಗೊಳಿಸಲಾಗಿದೆ.

ಹೌದು…ಟಿವಿ9ನಲ್ಲಿ ವರದಿ ಬಳಿಕ ತುಂಗಭದ್ರಾ ಜಲಾಶಯದಿಂದ ಜಿಂದಾಲ್ ವಿಜಯನಗರ ಸ್ಟೀಲ್ ಲಿಮಿಟೆಡ್ ತೋರಣಗಲ್ಲು ಘಟಕ ಹಾಗೂ ಜೆಎಸ್​ಡಬ್ಲ್ಯು ಸೇರಿ ಕೆಲ ಕಾರ್ಖಾನೆಗಳಿಗೆ ಹೋಗುತ್ತಿದ್ದ ನೀರನ್ನು ಅಧಿಕಾರಿಗಳು ಬಂದ್ ಮಾಡಿದ್ದಾರೆ. ಕಾರ್ಖಾನೆಗಳು ಮೋಟರ್ ಗಳ ಮೂಲಕ ಅನಧಿಕೃತವಾಗಿ ನೀರು ತಗೆದುಕೊಳ್ಳುತ್ತಿದ್ದವು. ಈ ಸಂಬಂಧ ಕಳೆದ ಎರಡು ದಿನಗಳ ಹಿಂದೆ ಟಿವಿ9 ವಿಸ್ತ್ರತ ವರದಿ ಬಿತ್ತರಿಸಿತ್ತು. ಇದರ ಬೆನ್ನಲ್ಲೇ ನೀರಾವರಿ ಇಲಾಖೆ ಅಧಿಕಾರಿಗಳು, ಕಾರ್ಖಾನೆಗಳಿಗೆ ಹರಿಯುತ್ತಿದ್ದ ನೀರನ್ನು ಸ್ಥಗಿತಗೊಳಿಸಿದ್ದಾರೆ.

Source link

RR vs SRH: 6,6,6,6..ಮೊದಲ ಓವರ್​ನಲ್ಲೇ ಸಿಕ್ಸರ್​ಗಳ ಮಳೆ; ದಾಖಲೆ ಬರೆದ ವೈಭವ್ – Kannada News | IPL 2026: Vaibhav Suryavanshi Smashes Record Breaking 4 Sixes in 1st Over vs SRH

ಐಪಿಎಲ್ 2026 ರ 36 ನೇ ಪಂದ್ಯದಲ್ಲಿ, ರಾಜಸ್ಥಾನ್ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಪರಸ್ಪರ ಮುಖಾಮುಖಿಯಾಗಿದ್ದವು. ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್ ಪರ ವೈಭವ್ ಸೂರ್ಯವಂಶಿ ಮೊದಲ ಓವರ್​ನಲ್ಲೇ ಸಿಕ್ಸರ್​ಗಳ ಮಳೆ ಹರಿಸಿದರು. ಸನ್‌ರೈಸರ್ಸ್ ವೇಗಿ ಪ್ರಫುಲ್ ಹಿಂಗೆ ವಿರುದ್ಧ ಸತತ 4 ಸಿಕ್ಸರ್​ಗಳನ್ನು ಬಾರಿಸಿ ತನ್ನ ಹಳೆಯ ಸೇಡನ್ನು ತೀರಿಸಿಕೊಂಡರು.

ವಾಸ್ತವವಾಗಿ, ಈ ಆವೃತ್ತಿಯ 21 ನೇ ಪಂದ್ಯದಲ್ಲಿ ಇದೇ ಎರಡು ತಂಡಗಳು ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಇದೇ ಪ್ರಫುಲ್ ಹಿಂಗೆ ತಮ್ಮ ಚೊಚ್ಚಲ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ವೈಭವ್ ಸೂರ್ಯವಂಶಿಯನ್ನು ಗೋಲ್ಡನ್ ಡಕ್‌ಗೆ ಔಟ್ ಮಾಡಿದ್ದರು. ಆ ಪಂದ್ಯದಲ್ಲಿ, ಹಿಂಗೆ ಅದ್ಭುತವಾಗಿ ಬೌಲಿಂಗ್ ಮಾಡಿ 4 ವಿಕೆಟ್‌ಗಳನ್ನು ಕಬಳಿಸಿದ್ದರು. ಆದರೆ ಇಂದು 36 ನೇ ಪಂದ್ಯದಲ್ಲಿ, ಸೂರ್ಯವಂಶಿ ಆ ವಿಕೆಟ್‌ಗೆ ಸಂಪೂರ್ಣ ಸೇಡು ತೀರಿಸಿಕೊಂಡರು.

ಪ್ರಫುಲ್ ಹಿಂಗೆ ಬೌಲ್ ಮಾಡಿದ ಪಂದ್ಯದ ಮೊದಲ ಓವರ್​ನ ಮೊದಲ ಎಸೆತದಲ್ಲಿ ಯಶಸ್ವಿ ಜೈಸ್ವಾಲ್ ಸಿಂಗಲ್ ಪಡೆದರು. ಎರಡನೇ ಎಸೆತದಲ್ಲಿ ವೈಭವ್ ಸೂರ್ಯವಂಶಿ ಡಾಟ್ ಬಾಲ್ ಆಡಿದರು. ಆದರೆ ಆ ನಂತರ ಆಡಿದ ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದರು. ಹಿಂದಿನ ಪಂದ್ಯದಲ್ಲಿ ವೈಭವ್ ಅವರನ್ನು ಔಟ್ ಮಾಡುವ ಮೂಲಕ ಸುದ್ದಿ ಮಾಡಿದ್ದ ಪ್ರಫುಲ್ ಹಿಂಗೆ, ಈ ಬಾರಿ ಯುವ ಬ್ಯಾಟ್ಸ್‌ಮನ್ ವಿರುದ್ಧ ಸಾಕಷ್ಟು ದುಬಾರಿಯಾಗಿ ಪರಿಣಮಿಸಿದರು. ವೈಭವ್ ಸೂರ್ಯವಂಶಿ ಕೇವಲ ಐದು ಎಸೆತಗಳಲ್ಲಿ 24 ರನ್ ಚಚ್ಚಿದರು.

ಈ ಸ್ಫೋಟಕ ಆರಂಭದೊಂದಿಗೆ, ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ಪ್ರಮುಖ ದಾಖಲೆಯನ್ನು ಸಹ ಸ್ಥಾಪಿಸಿದರು. ಐಪಿಎಲ್ ಇತಿಹಾಸದಲ್ಲಿ ಒಬ್ಬ ಬ್ಯಾಟ್ಸ್‌ಮನ್ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದ್ದು ಇದೇ ಮೊದಲು. ವೈಭವ್ ಸೂರ್ಯವಂಶಿಗಿಂತ ಮೊದಲು ಯಾವುದೇ ಬ್ಯಾಟ್ಸ್‌ಮನ್ ಈ ಸಾಧನೆ ಮಾಡಿರಲಿಲ್ಲ. ಇದಕ್ಕೂ ಮೊದಲು, 2009 ರಲ್ಲಿ, ನಮನ್ ಓಜಾ ಕೆಕೆಆರ್ ವಿರುದ್ಧದ ಮೊದಲ ಓವರ್‌ನಲ್ಲಿ ಮೂರು ಸಿಕ್ಸರ್‌ಗಳನ್ನು ಬಾರಿಸಿದ್ದು ಈವರೆಗಿನ ದಾಖಲೆಯಾಗಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version