ಟಿವಿ9 ಇಂಪ್ಯಾಕ್ಟ್: ತುಂಗಭದ್ರಾದಿಂದ ಕದ್ದುಮುಚ್ಚಿ ಕಾರ್ಖಾನೆಗಳಿಗೆ ಹರಿಸಲಾಗುತ್ತಿದ್ದ ನೀರು ಬಂದ್ – Kannada News | Tv9 Impact: Officers Stops tungabhadra reservoir Water To factory at Koppal

ಕೊಪ್ಪಳ, (ಏಪ್ರಿಲ್ 25): ತುಂಗಭದ್ರಾ ಜಲಾಶಯದಿಂದ ಕದ್ದಮುಚ್ಚಿ ಹಲವು ಕಾರ್ಖಾನೆಗಳಿಗೆ ನೀರು ಹರಿಸಲಾಗುತ್ತಿದೆ ಎನ್ನುವ ಆರೋಪಗಳು ಕೇಳಿಬಂದಿದ್ದವು. ಕುಡಿಯಲು ಕಾಲುವೆಗಳಿಗೆ ನೀರು ಬಿಡದ ಅಧಿಕಾರಿಗಳು, ಫ್ಯಾಕ್ಟರಿಗಳಿಗೆ ನೀರು ಹರಿಸುತ್ತಿದ್ದರು ಎಂಬ ದೂರುಗಳು ಕೇಳಿಬಂದಿದ್ದು, ಈ ಸಂಬಂಧ ಟಿವಿ9 ವರದಿ ಮಾಡಿತ್ತು. ಈ ವರದಿ ಬೆನ್ನಲ್ಲೇ ಇದೀಗ ಕದ್ದಮುಚ್ಚಿ ಕಾರ್ಖಾನೆಗಳಿಗೆ ಹರಿಸಲಾಗುತ್ತಿದ್ದ ನೀರು ಸ್ಥಗಿತಗೊಳಿಸಲಾಗಿದೆ.

ಹೌದು…ಟಿವಿ9ನಲ್ಲಿ ವರದಿ ಬಳಿಕ ತುಂಗಭದ್ರಾ ಜಲಾಶಯದಿಂದ ಜಿಂದಾಲ್ ವಿಜಯನಗರ ಸ್ಟೀಲ್ ಲಿಮಿಟೆಡ್ ತೋರಣಗಲ್ಲು ಘಟಕ ಹಾಗೂ ಜೆಎಸ್​ಡಬ್ಲ್ಯು ಸೇರಿ ಕೆಲ ಕಾರ್ಖಾನೆಗಳಿಗೆ ಹೋಗುತ್ತಿದ್ದ ನೀರನ್ನು ಅಧಿಕಾರಿಗಳು ಬಂದ್ ಮಾಡಿದ್ದಾರೆ. ಕಾರ್ಖಾನೆಗಳು ಮೋಟರ್ ಗಳ ಮೂಲಕ ಅನಧಿಕೃತವಾಗಿ ನೀರು ತಗೆದುಕೊಳ್ಳುತ್ತಿದ್ದವು. ಈ ಸಂಬಂಧ ಕಳೆದ ಎರಡು ದಿನಗಳ ಹಿಂದೆ ಟಿವಿ9 ವಿಸ್ತ್ರತ ವರದಿ ಬಿತ್ತರಿಸಿತ್ತು. ಇದರ ಬೆನ್ನಲ್ಲೇ ನೀರಾವರಿ ಇಲಾಖೆ ಅಧಿಕಾರಿಗಳು, ಕಾರ್ಖಾನೆಗಳಿಗೆ ಹರಿಯುತ್ತಿದ್ದ ನೀರನ್ನು ಸ್ಥಗಿತಗೊಳಿಸಿದ್ದಾರೆ.

Source link

RR vs SRH: 6,6,6,6..ಮೊದಲ ಓವರ್​ನಲ್ಲೇ ಸಿಕ್ಸರ್​ಗಳ ಮಳೆ; ದಾಖಲೆ ಬರೆದ ವೈಭವ್ – Kannada News | IPL 2026: Vaibhav Suryavanshi Smashes Record Breaking 4 Sixes in 1st Over vs SRH

ಐಪಿಎಲ್ 2026 ರ 36 ನೇ ಪಂದ್ಯದಲ್ಲಿ, ರಾಜಸ್ಥಾನ್ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಪರಸ್ಪರ ಮುಖಾಮುಖಿಯಾಗಿದ್ದವು. ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್ ಪರ ವೈಭವ್ ಸೂರ್ಯವಂಶಿ ಮೊದಲ ಓವರ್​ನಲ್ಲೇ ಸಿಕ್ಸರ್​ಗಳ ಮಳೆ ಹರಿಸಿದರು. ಸನ್‌ರೈಸರ್ಸ್ ವೇಗಿ ಪ್ರಫುಲ್ ಹಿಂಗೆ ವಿರುದ್ಧ ಸತತ 4 ಸಿಕ್ಸರ್​ಗಳನ್ನು ಬಾರಿಸಿ ತನ್ನ ಹಳೆಯ ಸೇಡನ್ನು ತೀರಿಸಿಕೊಂಡರು.

ವಾಸ್ತವವಾಗಿ, ಈ ಆವೃತ್ತಿಯ 21 ನೇ ಪಂದ್ಯದಲ್ಲಿ ಇದೇ ಎರಡು ತಂಡಗಳು ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಇದೇ ಪ್ರಫುಲ್ ಹಿಂಗೆ ತಮ್ಮ ಚೊಚ್ಚಲ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ವೈಭವ್ ಸೂರ್ಯವಂಶಿಯನ್ನು ಗೋಲ್ಡನ್ ಡಕ್‌ಗೆ ಔಟ್ ಮಾಡಿದ್ದರು. ಆ ಪಂದ್ಯದಲ್ಲಿ, ಹಿಂಗೆ ಅದ್ಭುತವಾಗಿ ಬೌಲಿಂಗ್ ಮಾಡಿ 4 ವಿಕೆಟ್‌ಗಳನ್ನು ಕಬಳಿಸಿದ್ದರು. ಆದರೆ ಇಂದು 36 ನೇ ಪಂದ್ಯದಲ್ಲಿ, ಸೂರ್ಯವಂಶಿ ಆ ವಿಕೆಟ್‌ಗೆ ಸಂಪೂರ್ಣ ಸೇಡು ತೀರಿಸಿಕೊಂಡರು.

ಪ್ರಫುಲ್ ಹಿಂಗೆ ಬೌಲ್ ಮಾಡಿದ ಪಂದ್ಯದ ಮೊದಲ ಓವರ್​ನ ಮೊದಲ ಎಸೆತದಲ್ಲಿ ಯಶಸ್ವಿ ಜೈಸ್ವಾಲ್ ಸಿಂಗಲ್ ಪಡೆದರು. ಎರಡನೇ ಎಸೆತದಲ್ಲಿ ವೈಭವ್ ಸೂರ್ಯವಂಶಿ ಡಾಟ್ ಬಾಲ್ ಆಡಿದರು. ಆದರೆ ಆ ನಂತರ ಆಡಿದ ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದರು. ಹಿಂದಿನ ಪಂದ್ಯದಲ್ಲಿ ವೈಭವ್ ಅವರನ್ನು ಔಟ್ ಮಾಡುವ ಮೂಲಕ ಸುದ್ದಿ ಮಾಡಿದ್ದ ಪ್ರಫುಲ್ ಹಿಂಗೆ, ಈ ಬಾರಿ ಯುವ ಬ್ಯಾಟ್ಸ್‌ಮನ್ ವಿರುದ್ಧ ಸಾಕಷ್ಟು ದುಬಾರಿಯಾಗಿ ಪರಿಣಮಿಸಿದರು. ವೈಭವ್ ಸೂರ್ಯವಂಶಿ ಕೇವಲ ಐದು ಎಸೆತಗಳಲ್ಲಿ 24 ರನ್ ಚಚ್ಚಿದರು.

ಈ ಸ್ಫೋಟಕ ಆರಂಭದೊಂದಿಗೆ, ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ಪ್ರಮುಖ ದಾಖಲೆಯನ್ನು ಸಹ ಸ್ಥಾಪಿಸಿದರು. ಐಪಿಎಲ್ ಇತಿಹಾಸದಲ್ಲಿ ಒಬ್ಬ ಬ್ಯಾಟ್ಸ್‌ಮನ್ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದ್ದು ಇದೇ ಮೊದಲು. ವೈಭವ್ ಸೂರ್ಯವಂಶಿಗಿಂತ ಮೊದಲು ಯಾವುದೇ ಬ್ಯಾಟ್ಸ್‌ಮನ್ ಈ ಸಾಧನೆ ಮಾಡಿರಲಿಲ್ಲ. ಇದಕ್ಕೂ ಮೊದಲು, 2009 ರಲ್ಲಿ, ನಮನ್ ಓಜಾ ಕೆಕೆಆರ್ ವಿರುದ್ಧದ ಮೊದಲ ಓವರ್‌ನಲ್ಲಿ ಮೂರು ಸಿಕ್ಸರ್‌ಗಳನ್ನು ಬಾರಿಸಿದ್ದು ಈವರೆಗಿನ ದಾಖಲೆಯಾಗಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

DC vs PBKS: ರಾಹುಲ್ ಹೋರಾಟ ವ್ಯರ್ಥ; ಕ್ಯಾಚ್ ಬಿಟ್ಟು ಮ್ಯಾಚ್ ಸೋತ ಡೆಲ್ಲಿ – Kannada News | Punjab Kings Create IPL History: Record Chase of 265 Runs Against Delhi Capitals

ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ (DC vs PBKS) ನಡುವೆ ನಡೆದ ಐಪಿಎಲ್ 2026 (IPL 2026) ರ 35 ನೇ ಪಂದ್ಯ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಐಪಿಎಲ್‌ನಲ್ಲಿ ಇದುವರೆಗೆ ಯಾವ ತಂಡಕ್ಕೂ ಸಾಧ್ಯವಾಗದ ದಾಖಲೆಯೊಂದು ಪಂಜಾಬ್ ಕಿಂಗ್ಸ್ ತಂಡದ ಪಾಲಾಯಿತು. ಉಭಯ ತಂಡಗಳಿಂದ ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆಯೇ ಹರಿದ ಈ ಪಂದ್ಯವನ್ನು ಅಂತಿಮವಾಗಿ ಗೆದ್ದುಕೊಳ್ಳುವಲ್ಲಿ ಪಂಜಾಬ್ ಯಶಸ್ವಿಯಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ 265 ರನ್‌ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಪಂಜಾಬ್ ಇನ್ನು 7 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು.

ಡೆಲ್ಲಿ ಪಾಲಿಗೆ ವಿಲನ್ ಆದ ಕರುಣ್

ಈ ಮೂಲಕ ಪಂಜಾಬ್ ಐಪಿಎಲ್ ಇತಿಹಾಸದಲ್ಲಿ ಇಷ್ಟು ದೊಡ್ಡ ಮೊತ್ತವನ್ನು ಬೆನ್ನಟ್ಟಿದ ತಂಡವೆಂಬ ದಾಖಲೆ ಬರೆಯಿತು. ಈ ದಾಖಲೆಯ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಪವರ್‌ಪ್ಲೇನಲ್ಲಿಯೇ ಅರ್ಧದಷ್ಟು ಪಂದ್ಯವನ್ನು ಗೆದ್ದುಕೊಂಡಿತು. ಉಳಿದಂತೆ ಕರುಣ್ ನಾಯರ್ ಕೈಚೆಲ್ಲಿದ ಎರಡು ಸುಲಭ ಕ್ಯಾಚ್​ಗಳಿಂದ ಪಂಜಾಬ್ ಕಿಂಗ್ಸ್‌ ಗೆಲುವು ದಾಖಲಿಸಿತು. ವಾಸ್ತವವಾಗಿ ನಿರ್ಣಾಯಕ ಹಂತದಲ್ಲಿ ಕರುಣ್ ನಾಯರ್, ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಅವರ ಎರಡು ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲಿದರು. ಈ ಜೀವದಾನಗಳ ಲಾಭ ಪಡೆದ ಅಯ್ಯರ್ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ರಾಹುಲ್ ದಾಖಲೆಯ ಶತಕ

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಡೆಲ್ಲಿ ಕ್ಯಾಪಿಟಲ್ಸ್ ಕೇವಲ 28 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಪಾಥುಮ್ ನಿಸ್ಸಂಕ 11 ರನ್‌ಗಳಿಗೆ ಔಟಾದರು. ಆ ನಂತರ, ಎರಡನೇ ವಿಕೆಟ್‌ಗೆ ಪಂಜಾಬ್ ಬರೋಬ್ಬರಿ 220 ರನ್‌ಗಳವರೆಗೆ ಕಾಯಬೇಕಾಯಿತು. ಏಕೆಂದರೆ ಕೆಎಲ್ ರಾಹುಲ್ ಮತ್ತು ನಿತೀಶ್ ರಾಣಾ ಪಂಜಾಬ್ ಕಿಂಗ್ಸ್ ಬೌಲರ್‌ಗಳ ವಿರುದ್ಧ ಅಬ್ಬರಿಸಿ ದಾಖಲೆಯ ಜೊತೆಯಾಟ ನಡೆಸಿದರು. ನಿತೀಶ್ ರಾಣಾ 44 ಎಸೆತಗಳಲ್ಲಿ 11 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ 91 ರನ್ ಗಳಿಸಿ ಔಟಾದರೆ, ಕೆಎಲ್ ರಾಹುಲ್ 67 ಎಸೆತಗಳಲ್ಲಿ 16 ಬೌಂಡರಿ ಮತ್ತು 9 ಸಿಕ್ಸರ್‌ಗಳೊಂದಿಗೆ ಅಜೇಯ 152 ರನ್ ಗಳಿಸಿದರು. ಇವರಿಬ್ಬರ ಆಟದಿಂದಾಗಿ ಡೆಲ್ಲಿ ದಾಖಲೆಯ ಮೊತ್ತ ಪೇರಿಸಿತು.

ಪಂಜಾಬ್​ಗೆ ದಾಖಲೆಯ ಜಯ

265 ರನ್‌ಗಳನ್ನು ಬೆನ್ನಟ್ಟಿದ ಪಂಜಾಬ್​ಗೆ ಪ್ರಿಯಾಂಶ್ ಆರ್ಯ ಮತ್ತು ಪ್ರಭ್‌ಸಿಮ್ರಾನ್ ಸಿಂಗ್ ಸ್ಫೋಟಕ ಆರಂಭ ಒದಗಿಸಿದರು. ಪವರ್‌ಪ್ಲೇನಲ್ಲಿಯೇ ಈ ಜೋಡಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪಂದ್ಯದಿಂದ ಹೊರಹಾಕಿದರು. ಮೊದಲ 6 ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ ಈ ಜೋಡಿ 116 ರನ್ ಕಲೆಹಾಕಿತು. ಐಪಿಎಲ್ ಟೂರ್ನಿಯಲ್ಲಿ ಪವರ್‌ಪ್ಲೇನಲ್ಲಿ ಇದು ಎರಡನೇ ಅತ್ಯಧಿಕ ಸ್ಕೋರ್ ಆಗಿತ್ತು. ತಂಡ 126 ರನ್‌ಗಳಾಗಿದ್ದಾಗ, ಪ್ರಿಯಾಂಶ್ ಆರ್ಯ ರೂಪದಲ್ಲಿ ಮೊದಲ ಹೊಡೆತ ಬಿದ್ದಿತು.

DC vs PBKS: ದಾಖಲೆಯ 152 ರನ್..! ಕನ್ನಡಿಗ ರಾಹುಲ್ ಅಬ್ಬರಕ್ಕೆ ಹಳೆಯ ದಾಖಲೆಗಳೆಲ್ಲ ಧ್ವಂಸ

ಪ್ರಿಯಾಂಶ್ ಆರ್ಯ 43 ರನ್‌ಗಳಿಗೆ ಔಟಾದರು. ನಂತರ ಪ್ರಭಾಂಶ್ ಸಿಂಗ್ 76 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕೂಪರ್ ಕೊನೊಲಿ ಕೂಡ 17 ರನ್‌ಗಳಿಗೆ ಔಟಾದರೆ, ನೆಹಲ್ ವದೇರಾ ಇನ್ನಿಂಗ್ಸ್ ಕೂಡ 15 ಎಸೆತಗಳಲ್ಲಿ 25 ರನ್‌ಗಳಿಗೆ ಅಂತ್ಯವಾಯಿತು. ಈ ವಿಕೆಟ್‌ನಿಂದ ಪಂದ್ಯವು ದೆಹಲಿಯ ಪರವಾಗಿ ವಾಲಲು ಪ್ರಾರಂಭಿಸಿತು. ಆದರೆ ಕರುಣ್ ನಾಯರ್ ಶ್ರೇಯಸ್ ಅಯ್ಯರ್ ಅವರ ಎರಡು ಸುಲಭ ಕ್ಯಾಚ್‌ಗಳನ್ನು ಕೈಬಿಟ್ಟಿದ್ದು, ಪಂದ್ಯಕ್ಕೆ ತಿರುವು ನೀಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:21 pm, Sat, 25 April 26

Source link

ಈ ವಾರ ಒಟಿಟಿಗೆ ಬಂದ ಸಿನಿಮಾಗಳಿವು, ‘ಜೆರಾಕ್ಸ್’ ಮಿಸ್ ಮಾಡ್ಬೇಡಿ – Kannada News | OTT Release this week from April 20 to April 25

ನಾಗಭೂಷಣ್, ಓಂ ಪ್ರಕಾಶ್ ರಾವ್ ಇನ್ನೂ ಹಲವು ಪ್ರತಿಭಾವಂತ ಕಲಾವಿದರು ನಟಿಸಿರುವ ‘ಜೆರಾಕ್ಸ್’ ಹೆಸರಿನ ಕನ್ನಡ ವೆಬ್ ಸರಣಿ ಈ ವಾರ ಒಟಿಟಿಗೆ ಬಂದಿದೆ. ಮನುಷ್ಯರನ್ನು ಝೆರಾಕ್ಸ್ ಮಾಡುವ ಭಿನ್ನ ರೀತಿಯ ಕಾನ್ಸೆಪ್ಟ್ ಅನ್ನು ಈ ವೆಬ್ ಸರಣಿ ಒಳಗೊಂಡಿದೆ. ವೆಬ್ ಸರಣಿಯನ್ನು ಜೀ5ನಲ್ಲಿ ವೀಕ್ಷಿಸಬಹುದಾಗಿದೆ.

Source link

ಮೇ 5ರ ನಂತರ ಹೆಣ್ಣುಮಕ್ಕಳು ಭಯವಿಲ್ಲದೆ ಮಧ್ಯರಾತ್ರಿ 1 ಗಂಟೆಗೂ ಹೊರಗೆ ಓಡಾಡಬಹುದು; ಅಮಿತ್ ಶಾ ಭರವಸೆ – Kannada News | Girls can go out fearlessly in Mid night after May 5 Amit Shah slams Mamata Banerjee

ಕೊಲ್ಕತ್ತಾ, ಏಪ್ರಿಲ್ 25: ಪಶ್ಚಿಮ ಬಂಗಾಳದಲ್ಲಿ ನಡೆಯುವ 2ನೇ ಹಂತದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಜಮಾಲ್ಪುರದಲ್ಲಿ ಚುನಾವಣಾ ರ್ಯಾಲಿಯನ್ನು ನಡೆಸಿದರು. ಈ ವೇಳೆ ಮಾತನಾಡಿದ ಅವರು, “ಕಳೆದ 15 ವರ್ಷಗಳಲ್ಲಿ ಮಮತಾ ಬ್ಯಾನರ್ಜಿ ಅವರ ಆಳ್ವಿಕೆಯಲ್ಲಿ ಮಹಿಳೆಯರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಆರ್‌ಜಿ ಕರ್, ಸಂದೇಶಖಾಲಿ, ಕೊಲ್ಕತ್ತಾ ಕಾನೂನು ಕಾಲೇಜು ಮತ್ತು ದುರ್ಗಾಪುರ ಕಾಲೇಜಿನಂತಹ ಘಟನೆಗಳು ಮಹಿಳೆಯರ ವಿರುದ್ಧದ ದೌರ್ಜನ್ಯಗಳು ಎಲ್ಲೆಡೆ ನಡೆದಿವೆ ಎಂದು ಸಾಬೀತುಪಡಿಸುತ್ತಿವೆ. ಈಗ ‘ದೀದಿ’ ಮಹಿಳೆಯರು ಸಂಜೆ 7 ಗಂಟೆಯ ನಂತರ ತಮ್ಮ ಮನೆಗಳಿಂದ ಹೊರಗೆ ಹೆಜ್ಜೆ ಹಾಕಬಾರದು ಎಂದು ಹೇಳಿದ್ದಾರೆ. ಮೇ 5 ನೇ ತಾರೀಖಿನ ನಂತರ ಚಿಕ್ಕ ಹುಡುಗಿಯರಿಂದ ವಯಸ್ಸಾದ ಮಹಿಳೆಯರವರೆಗೆ ಎಲ್ಲರೂ ಮಧ್ಯರಾತ್ರಿ 1 ಗಂಟೆ ನಂತರವೂ ಭಯವಿಲ್ಲದೆ ಹೊರಗೆ ಓಡಾಡಬಹುದು. ಯಾವುದೇ ಗೂಂಡಾ ಅವಳನ್ನು ನೋಡಲು ಧೈರ್ಯ ಮಾಡುವುದಿಲ್ಲ” ಎಂದು ರ್ಯಾಲಿಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಅಮಿತ್ ಶಾ ಭರವಸೆ ನೀಡಿದ್ದಾರೆ.

“ಯಾವುದೇ ಬಿಜೆಪಿ ಮುಖ್ಯಮಂತ್ರಿಗಳು ಮಹಿಳೆಯರಿಗೆ ಸಂಜೆ 7 ಗಂಟೆಯ ನಂತರ ಹೊರಗೆ ಹೋಗಬೇಡಿ ಎಂದು ಹೇಳುವುದಿಲ್ಲ” ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. “ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಮಮತಾ ಬ್ಯಾನರ್ಜಿ ವಿಫಲರಾಗಿದ್ದಾರೆ. ಬಿಜೆಪಿ ಅಧಿಕಾರದಲ್ಲಿರುವ ದೇಶಾದ್ಯಂತ ಯಾವುದೇ ರಾಜ್ಯಗಳಲ್ಲಿಯೂ ಮುಖ್ಯಮಂತ್ರಿಗಳು ಸಂಜೆ 7 ಗಂಟೆಯ ನಂತರ ಮಹಿಳೆಯರು ತಮ್ಮ ಮನೆಗಳಿಂದ ಹೊರಗೆ ಹೋಗಬಾರದು ಎಂದು ಹೇಳಿಲ್ಲ. ಮಮತಾ ದೀದಿ, ನೀವು ನಾಚಿಕೆಪಡಬೇಕು. ನೀವು ಮಹಿಳಾ ಮುಖ್ಯಮಂತ್ರಿ. ಆದರೆ ನೀವು ಮಹಿಳೆಯರಿಗೆ ಸುರಕ್ಷತೆಯನ್ನು ಒದಗಿಸಲು ವಿಫಲರಾಗಿದ್ದೀರಿ. ಯಾವುದೇ ಗೂಂಡಾಗಳು ತಾಯಂದಿರು ಮತ್ತು ಸಹೋದರಿಯರನ್ನು ಕೆಟ್ಟ ಉದ್ದೇಶದಿಂದ ನೋಡಲು ಧೈರ್ಯ ಮಾಡಿದರೆ ಅವರನ್ನು ಜೈಲಿನಲ್ಲಿ ಹಾಕಲಾಗುವುದು ಎಂದು ಬಿಜೆಪಿ ಬಂಗಾಳದ ಜನರಿಗೆ ಭರವಸೆ ನೀಡುತ್ತದೆ” ಎಂದು ಅಮಿತ್ ಶಾ ಹೇಳಿದ್ದಾರೆ.

ಇದನ್ನೂ ಓದಿ: ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ ಪ್ರತಿಕ್ರಿಯೆ

152 ಕ್ಷೇತ್ರಗಳಲ್ಲಿ ಮತದಾನ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಬಿಜೆಪಿ 110ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುತ್ತದೆ ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಂಗಾಳ ರಾಜ್ಯದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ, ಗೃಹ ಸಚಿವ ಅಮಿತ್ ಶಾ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ತ್ವರಿತವಾಗಿ ಜಾರಿಗೆ ತರುವುದಾಗಿ ಪ್ರತಿಜ್ಞೆ ಮಾಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಎಂಟಿಸಿ ಬಸ್‌ಗೆ ಮತ್ತೊಂದು ಬಲಿ: ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಕನಸು ನುಚ್ಚುನೂರು – Kannada News | Bengaluru BMTC bus accident: Engineering student death

ಬಿಎಂಟಿಸಿ ಬಸ್ ಅಪಘಾತImage Credit source: tv9 kannada

ಬೆಂಗಳೂರು, ಏಪ್ರಿಲ್​ 25: ಸಿಲಿಕಾನ್ ಸಿಟಿಯಲ್ಲಿ ಬಿಎಂಟಿಸಿ ಬಸ್‌ಗೆ (BMTC Bus) ಮತ್ತೊಂದು ಬಲಿಯಾಗಿದೆ (death). ನಗರದ ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿ ಇಂದು ನಡೆದ ಭೀಕರ ಅಪಘಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಬಿಎಂಟಿಸಿ ಬಸ್ ಚಕ್ರದಡಿ ಸಿಲುಕಿ ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಘಟನೆ ನಡೆದಿದೆ. ಶಿರೀಷಾ(21) ಮೃತ ಇಂಜಿನಿಯರಿಂಗ್‌ ವಿದ್ಯಾರ್ಥಿನಿ. ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ಶಿರೀಷಾ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ, ಉತ್ತರಹಳ್ಳಿ ಮುಖ್ಯರಸ್ತೆಯ ಶ್ರೀನಿವಾಸಪುರ ಕ್ರಾಸ್ ಬಳಿ ಈ ದುರ್ಘಟನೆ ಸಂಭವಿಸಿದೆ. ಒಂದೇ ದಿಕ್ಕಿನಲ್ಲಿ ಚಲಿಸುತ್ತಿದ್ದ ಬಿಎಂಟಿಸಿ ಬಸ್ ಮತ್ತು ಬೈಕ್ ನಡುವೆ ಅಂತರ ಕಡಿಮೆಯಾದ ಕಾರಣ, ಬೈಕ್‌ನ ಹ್ಯಾಂಡಲ್ ಬಸ್‌ಗೆ ತಗುಲಿದೆ. ಪರಿಣಾಮ ಶಿರೀಷಾ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ವೇಗವಾಗಿ ಬಂದ ಬಸ್ ಯುವತಿಯ ಮೇಲೆ ಹರಿದಿದ್ದು, ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಬಿಎಂಟಿಸಿ ಬಸ್ ಚಾಲಕ ವಶಕ್ಕೆ

ಅಪಘಾತದ ಬಳಿಕ ಸ್ಥಳಕ್ಕೆ ಧಾವಿಸಿದ ಕೆಂಗೇರಿ ಸಂಚಾರಿ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆರ್.ಆರ್. ಮೆಡಿಕಲ್ ಕಾಲೇಜು ಆಸ್ಪತ್ರೆಗೆ ರವಾನಿಸಿದ್ದಾರೆ. ಅಪಘಾತಕ್ಕೆ ಕಾರಣವಾದ ಬಿಎಂಟಿಸಿ ಬಸ್ ಚಾಲಕ ಚಂದ್ರು ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಸಿದ್ದಾರೆ.

ಪ್ರತ್ಯಕ್ಷದರ್ಶಿ ಶಂಕರ್ ಪಾಟಿಲ್​ ಹೇಳಿದ್ದಿಷ್ಟು 

ಇನ್ನು ಘಟನೆ ಬಗ್ಗೆ ಪ್ರತ್ಯಕ್ಷದರ್ಶಿ ಶಂಕರ್ ಪಾಟಿಲ್​ ಎಂಬುವವರು ಮಾಧ್ಯಮದವರೊಂದಿಗೆ ಮಾತನಾಡಿದ್ದು, ಮಧ್ಯಾಹ್ನ 2:15ಕ್ಕೆ ಘಟನೆ ನಡೆದಿದೆ. ಆಕೆ ಆರ್​​ಎನ್​​ಎಸ್​ ಕಾಲೇಜು ವಿದ್ಯಾರ್ಥಿನಿ. ತಲೆ ಮೇಲೆ ಬಸ್​ನ‌ ಹಿಂದಿನ ಚಕ್ರ ಹತ್ತಿದ್ದರಿಂದ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದರು.

ಇದನ್ನೂ ಓದಿ: ನೆಲಮಂಗಲ ಬಳಿ ಭೀಕರ ಅಪಘಾತ: ಮಗನ ಆಸ್ಪತ್ರೆಗೆ ಕರೆದೊಯ್ದಿದ್ದ ಮಹಿಳೆಯ ಬಲಿ ಪಡೆದ ಬಿಎಂಟಿಸಿ ಬಸ್​

ಈ ರಸ್ತೆಯಲ್ಲಿ ಒಂದು ಕಡೆಯು ಹಂಪ್ಸ್ ಇಲ್ಲ. ಅತೀ ವೇಗವಾಗಿ ಬಸ್​ಗಳು ಸಂಚರಿಸುತ್ತವೆ. ಪೊಲೀಸರಿಗೆ ಹಲವು ಬಾರಿ ಹೇಳಿದರೂ ಹಂಪ್ಸ್ ಹಾಕಿಸಿಲ್ಲ. ಹೀಗಾಗಿ ತಿಂಗಳಿಗೆ ಮೂರ್ನಾಲ್ಕು ಅಪಘಾತ ಇಲ್ಲಿ ಆಗುತ್ತಲ್ಲೇ ಇರುತ್ತವೆ ಎಂದಿದ್ದಾರೆ.

ವರದಿ: ವಿಕಾಸ್, ಟಿವಿ9 ಕ್ರೈಂ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರಾಜ್​ಕುಮಾರ್ ಅಭಿಮಾನಿಗಳ ಆಕ್ರೋಶಕ್ಕೆ ಮಣಿದ ಚೇತನ್ ಅಹಿಂಸ, ಕ್ಷಮೆ ಯಾಚನೆ – Kannada News | Chetan Ahimsa asks apology after Dr Rajkumar fans express anger

ಡಾ ರಾಜ್​ಕುಮಾರ್ (Rajkumar) ಅವರ ಸಮಾಧಿಗೆ 2.50 ಎಕರೆ ಸ್ಥಳ ನೀಡಿರುವ ಸರ್ಕಾರದ ನಿರ್ಧಾರವನ್ನು ಟೀಕೆ ಮಾಡಿ ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸ ನಿನ್ನೆ ಹಾಕಿದ್ದ ಪೋಸ್ಟ್​​ಗೆ ರಾಜ್​ಕುಮಾರ್ ಅಭಿಮಾನಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇಂದು (ಏಪ್ರಿಲ್ 25) ಹಲವಾರು ಕಡೆ ರಾಜ್​ಕುಮಾರ್ ಅಭಿಮಾನಿಗಳು ನಟ ಚೇತನ್ ಅಹಿಂಸ ವಿರುದ್ಧ ದೂರುಗಳನ್ನು ದಾಖಲಿಸಿದ್ದರು. ಸಾರಾ ಗೋವಿಂದು ಸೇರಿದಂತೆ ಇನ್ನೂ ಕೆಲವು ಹಿರಿಯರು ಚೇತನ್ ಅಹಿಂಸ ವಿರುದ್ಧ ಕಟು ವಾಗ್ದಾಳಿ ಮಾಡಿದ್ದರ ಜೊತೆಗೆ ಚೇತನ್ ಅವರ ಗಡಿಪಾರಿಗೆ ಒತ್ತಾಯಿಸಿದ್ದರು. ಕೊನೆಗೆ ಅಣ್ಣಾವ್ರ ಅಭಿಮಾನಿಗಳ ಆಕ್ರೋಶಕ್ಕೆ ಮಣಿದು ನಟ ಚೇತನ್ ಅಹಿಂಸ ಕ್ಷಮಾಪಣೆ ಕೇಳಿದ್ದಾರೆ.

ಇಂದು ಸಂಜೆ ವೇಳೆಗೆ ಸಾರಾ ಗೋವಿಂದು, ಕರವೇ ಕಾರ್ಯಕರ್ತರು, ಇನ್ನೂ ಕೆಲವು ಕನ್ನಡ ಪರ ಸಂಘಟನೆ ಕಾರ್ಯಕರ್ತರು, ರಾಜ್​ಕುಮಾರ್ ಅಭಿಮಾನಿ ಸಂಘದ ಸದಸ್ಯರು ರಾಜ್​ಕುಮಾರ್ ಅಭಿಮಾನಿಗಳು ಚೇತನ್ ಅಹಿಂಸ ಮನೆಗೆ ಮುತ್ತಿಗೆ ಹಾಕಿದರು. ಚೇತನ್ ಅಹಿಂಸ ಮನೆ ಎದುರು ಘೋಷಣೆಗಳನ್ನು ಕೂಗಿದರು. ಕೊನೆಗೆ ಚೇತನ್ ಅಹಿಂಸ ಜೊತೆಗೆ ಹಲವು ಸಂಘಟನೆಗಳ ಮುಖಂಡರು ಮಾತನಾಡಿ, ತಮ್ಮ ಆಕ್ರೋಶ, ಅಸಾಮಾಧಾನವನ್ನು ವ್ಯಕ್ತಪಡಿಸಿದರು. ಅಭಿಮಾನಿಗಳ ಆಕ್ರೋಶಕ್ಕೆ ಮಣಿದ ಚೇತನ್ ಅಹಿಂಸ ಬೇಷರತ್ ಕ್ಷಮೆ ಕೇಳಿದ್ದಾರೆ.

‘ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ವಿಷಾಧ ವ್ಯಕ್ತಪಡಿಸುತ್ತೇನೆ, ಕ್ಷಮೆ ಯಾಚನೆಯನ್ನೂ ಮಾಡುತ್ತೇನೆ. ಯಾರ ಮನಸ್ಸನ್ನೂ ನೋಯಿಸುವುದು ನನ್ನ ಉದ್ದೇಶ ಅಲ್ಲ. ನಾನೂ ಸಹ ರಾಜ್​ಕುಮಾರ್ ಅವರ ಅಭಿಮಾನಿ. ಸಮಾಜದ ಜಾಗೃತಿ ಆಗಬೇಕು, ಒಂದು ಉತ್ತಮ ಪ್ರಜಾಪ್ರಭುತ್ವ ಕಟ್ಟಬೇಕು. ರಾಜ್​​ಕುಮಾರ್ ಅವರ ಕನಸಿನ ಚಿತ್ರರಂಗವನ್ನು ಕಟ್ಟಬೇಕು ಎಂಬುದು ನನ್ನ ಉದ್ದೇಶ ಕೂಡ’ ಎಂದಿದ್ದಾರೆ.

ನಿನ್ನೆ (ಏಪ್ರಿಲ್ 24) ಪೋಸ್ಟ್ ಹಂಚಿಕೊಂಡಿದ್ದ ನಟ ಚೇತನ್ ಅಹಿಂಸ, ‘ನಾವು ರಾಜಕುಮಾರ್ ಅವರನ್ನು ಒಬ್ಬ ಮಹಾನ್ ಕಲಾವಿದರಾಗಿ ಗೌರವಿಸುತ್ತೇವೆ. ಆದರೆ, ಬೆಂಗಳೂರು ನಗರ ಮಧ್ಯದಲ್ಲಿ 2006ರಲ್ಲಿ ಒಬ್ಬ ನಟನ “ಸಮಾಧಿ ಕಾಂಪ್ಲೆಕ್ಸ್”ಕ್ಕಾಗಿ 2.5 ಎಕರೆ ಭೂಮಿಯನ್ನು ನೀಡುವುದು ತಿಳುವಳಿಕೆಯ ನಿರ್ಧಾರವಾಗಿತ್ತೇ ಎಂಬುದನ್ನು ಪ್ರಶ್ನಿಸಬೇಕಾಗಿದೆ. 21ನೇ ಶತಮಾನದ ಭಾರತದಲ್ಲಿ ಪ್ರಮುಖ ಹೋರಾಟವೇ ಭೂಮಿ. ಸರ್ಕಾರವು ಅದನ್ನು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹಾಗೂ ಸಾರ್ವಜನಿಕ ಉಪಯೋಗಕ್ಕೆ ತಕ್ಕಂತೆ ಹಂಚಬೇಕು; ಮತಗಳ ಲಾಭದ ಅವಕಾಶವಾದಿ ಉದ್ದೇಶದಿಂದ ಅಲ್ಲ’ ಎಂದಿದ್ದರು. ಅವರ ಈ ಪೋಸ್ಟ್​​ಗೆ ಭಾರಿ ವಿರೋಧ ವ್ಯಕ್ತವಾಗಿತ್ತು.

ಇದನ್ನೂ ಓದಿ:ರಾಜ್​ಕುಮಾರ್ ಸಮಾಧಿ ಜಾಗ: ಚೇತನ್ ಪ್ರಶ್ನೆಗೆ ಅಭಿಮಾನಿಗಳ ಆಕ್ರೋಶ

ಕನ್ನಡಪರ ಸಂಘಟನೆಗಳವರು, ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿ, ‘ಕರ್ನಾಟಕ ಸಾಂಸ್ಕೃತಿಕ ರಾಯಭಾರಿಗೆ, ಕಲಾ ಚೇತನ ರಾಜ್​ಕುಮಾರ್ ಅವರಿಗೆ ಸರ್ಕಾರ ಗೌರವ ನೀಡುವ ಉದ್ದೇಶದಿಂದ ಸ್ಮಾರಕಕ್ಕಾಗಿ ಜಾಗ ನೀಡಿದೆ. ಅದನ್ನು ರಾಜ್​ಕುಮಾರ್ ಆಗಲಿ, ಅವರ ಕುಟುಂಬದವರಾಗಲಿ ಕೇಳಿ ಪಡೆದಿದ್ದಲ್ಲ. ಅಲ್ಲದೆ, ಈ ಘಟನೆಗಳು ನಡೆದು 20 ವರ್ಷಗಳಾಗಿವೆ. ಆದರೆ ಈಗ ಕೇವಲ ಪ್ರಚಾರಕ್ಕಾಗಿ ಚೇತನ್, ರಾಜ್​ಕುಮಾರ್ ಅವರ ಸ್ಮಾರಕದ ವಿಷಯ ಎತ್ತಿದ್ದಾರೆ’ ಎಂದು ಆರೋಪಿಸಿದ್ದರು.

ಚೇತನ್ ಅವರ ಗಡಿಪಾರು ಮಾಡುವ ಬಗ್ಗೆ, ಚೇತನ್ ವಿರುದ್ಧ ಶಾಂತಿ ಕದಡುವ ಯತ್ನ ಆರೋಪದಡಿಯಲ್ಲಿ ಪ್ರಕರಣ ದಾಖಲಿಸುವ ಬಗ್ಗೆ ಒತ್ತಾಯಗಳು ಕೇಳಿ ಬಂದಿದ್ದವು. ಸಾರಾ ಗೋವಿಂದು ಹಾಗು ಕೆಲವರು ಚೇತನ್ ಈ ಬಾರಿ ಅಭಿಮಾನಿಗಳಿಂದ ಒದೆ ತಿನ್ನಲಿದ್ದಾನೆ ಎಂದು ಕಟುವಾಗಿ ಬೆದರಿಕೆ ಸಹ ಹಾಕಿದ್ದರು. ಆದರೆ ಕೊನೆಗೆ ಚೇತನ್ ಕ್ಷಮೆ ಕೇಳುವ ಮೂಲಕ ಪ್ರಕರಣವನ್ನು ಅಂತ್ಯಗೊಳಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಆಟೋ ಸೈಡ್‌ಗೆ ಹಾಕಿ ಎಂದ ಅಣ್ತಾಮ್ಮಾಸ್ ಮೇಲೆ ಸೈಯದ್ ಜಮೀರ್ ಸಹೋದರರಿಂದ ಮಾರಣಾಂತಿಕ ಹಲ್ಲೆ – Kannada News | A Muslim Brothers brutal assaults On Hindu family In bhimalli village at Kalaburagi

ಕಲಬುರಗಿ, (ಏಪ್ರಿಲ್ 25): ಸಹೋದರಿಬ್ಬರು ತಮ್ಮ ಸಹೋದರಿಯನ್ನ ಬಿಡಲು ಆಕೆಯ ಗಂಡನ ಊರಿಗೆ ಹೋಗಿದ್ದು, ಈ ವೇಳೆ ರಸ್ತೆ ಮೇಲೆ ನಿಲ್ಲಿಸಲಾಗಿದ್ದ ಆಟೋಗಳನ್ನು ಸ್ವಲ್ಪ ಸೈಡಿಗೆ ಸರಿಸಿ ಎಂದು ಹೇಳಿದ್ದಕ್ಕೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಕಲಬುರಗಿ (Kalaburagi) ತಾಲೂಕಿನ ಭೀಮಳ್ಳಿ ಗ್ರಾಮದಲ್ಲಿ ನಡೆದಿದೆ. ತೋಟೆಂದ್ರ ಮತ್ತು ಸುನಿಲ್ ಸಹೋದರ ಮೇಲೆ ಆಟೋ ಮಾಲೀಕ ಸೈಯದ್ ಜಮೀರ್ ಹಾಗೂ ಆತನ ಸಹೋದರರಾದ ಸೈಫಾಬ್ ಒಂಟಿ, ಆರಿಫ್, ಆಸಿಫ್, ಇಮ್ರಾನ್ ಸೇರಿಕೊಂಡು ಕಟ್ಟಿಗೆಯಿಂದ ಮನಸ್ಸೋ ಇಚ್ಛೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಸ್ತೆಯಲ್ಲಿ ನಿಲ್ಲಿಸಲಾಗಿದ್ದ ಆಟೋಗಳನ್ನು ಸ್ವಲ್ಪ ಸೈಡಿಗೆ ಹಾಕಿ ಎಂದಿದ್ದಾರೆ. ಇಷ್ಟು ಹೇಳಿದ್ದೇ ತಡ ರಣರಂಗವಾಗಿದೆ.

ಆಟೋ ಸೈಡಿಗೆ ಹಾಕಿ ಅಂದಿಕ್ಕೆ ಹಲ್ಲೆ

ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದ ತೋಟೆಂದ್ರ ಮತ್ತು ಸುನಿಲ್ ಸಹೋದರರು ತಮ್ಮ ಸಹೋದರಿಯನ್ನ ಬಿಡಲು ಗಂಡನ ಮನೆ ಕಲಬುರಗಿ ತಾಲೂಕಿನ ಭೀಮಳ್ಳಿ ಗ್ರಾಮಕ್ಕೆ ಕಾರಿನಲ್ಲಿ ಬಂದಿದ್ದಾರೆ.. ಕಾರಿನಲ್ಲಿ ಸಹೋದರಿಯನ್ನ ಬಿಟ್ಟು ವಾಪಸು ಹೋಗೋವಾಗ, ಗ್ರಾಮದ ರಸ್ತೆ ಮೇಲೆಯೇ ಆಟೋ ನಿಲ್ಲಿಸಲಾಗಿತ್ತು. ಆಟೋ ಸೈಡಗೆ ಹಾಕಿ ನಮ್ಮ ಕಾರು ಹೋಗೊಕೆ ಸಾಧ್ಯವಾಗ್ತಿಲ್ಲ ಎಂದು ಮನವಿ ಮಾಡಿದ್ದಾರೆ. ಇಷ್ಟೇ ಅಂದಿದ್ದೇ ತಡ ಆಟೋ ಮಾಲೀಕ ಸೈಯದ್ ಜಮೀರ್ ಹಾಗೂ ಆತನ ಸಹೋದರರಾದ ಸೈಫಾಬ್ ಒಂಟಿ, ಆರಿಫ್, ಆಸಿಫ್, ಇಮ್ರಾನ್ ಸೇರಿಕೊಂಡು ಇಬ್ಬರು ಸಹೋದರರ ಮೇಲೆ ಮುಗಿಬಿದ್ದು, ಕಟ್ಟಿಗೆಯಿಂದ ಹೊಡೆದಿದ್ದಾರೆ. ಈ ಸಂಬಂಧ ಹಲ್ಲೆಗೊಳಗಾದ ತೋಟೆಂದ್ರ ಮತ್ತು ಸುನಿಲ್ ಕುಟುಂಬಸ್ಥರುಗ್ಗೆ ಕಲಬುರಗಿ ಸಬ್ ಅರ್ಬನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಲಾಡ್ಲೆ ಮಶಾಕ್ ದರ್ಗಾ ಕೇಸ್​​ ಮತ್ತೆ ಮುನ್ನೆಲೆಗೆ: ಯುಟಿ ಖಾದರ್​​ ಪತ್ರಕ್ಕೆ ಹಿಂದೂ ಸಂಘಟನೆಗಳು ಸಿಡಿದಿದ್ದೇಕೆ?

ಹಲ್ಲೊಗೊಳಗಾದವರು ನೀಡಿದ ದೂರಿನಲ್ಲೇನಿದೆ?

ಆಳಂದ ತಾಲೂಕಿನ ಗೋಳಾ ಗ್ರಾಮದಲ್ಲಿನ ಲಕ್ಕಮ್ಮದೇವಿ ದೇವಸ್ಥಾನದಲ್ಲಿ ದೇವರ ಕಾರ್ಯ ಏರ್ಪಡಿಸಲಾಗಿತ್ತು.. ಕಾರ್ಯವನ್ನ ಮುಗಿದ ಬಳಿಕ ತಮ್ಮ ಸಹೋದರಿಯನ್ನ ಗೋಳಾ ಗ್ರಾಮದಿಂದ ಭೀಮಳ್ಳಿ ಗ್ರಾಮಕ್ಕೆ ಕರೆತಂದು ಬಿಡಲು ಬಂದಿದ್ದು, ವಾಪಾಸ್ ಹೋಗೋವಾಗ ಸಹೋದರಿ ಮನೆ ಬಳಿ ರಸ್ತೆ ಮೇಲೆ ನಿಲ್ಲಿಸಲಾಗಿದ್ದ ಎರಡು ಆಟೋಗಳನ್ನ ಸೈಡ್‌ಗೆ ಹಾಕಿ ಅಂದಿದ್ದಕ್ಕೆ ಹಲ್ಲೆ ಮಾಡಿದ್ದಾರೆ. ಇನ್ನು ಗಲಾಟೆ ಬಿಡಿಸಲು ಬಂದಂತ ತಾಯಿ ಮತ್ತು ಸಹೋದರಿ ಮಕ್ಕಳ ಮೇಲೆಯೋ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ್ದಲ್ಲದೇ ಬಾಯಿಗೆ ಬಂದಹಾಗೇ ಬೈಯ್ದು ನಿಮ್ಮನ್ನ ಈ ಊರಿನಿಂದ ಆಚೆ ಹೋಗೊಕೆ ಬಿಡೋದಿಲ್ಲ ಅಂತಾ ಧಮ್ಕಿ ಹಾಕಿದ್ದು, ತಮಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಹಲ್ಲೆಗೊಳಗಾದ ತೋಟೆಂದ್ರ ಮತ್ತು ಸುನೀಲ್ ಕುಟುಂಬಸ್ಥರು ಪೊಲೀಸರಿಗೆ ಮನವಿ ಮಾಡಿದ್ದಾರೆ.

ಈ ಸಂಬಂಧ ಹಲ್ಲೆ ಮಾಡಿದ ಆಟೋ ಮಾಲೀಕ ಸೈಯದ್ ಜಮೀರ್ ಹಾಗೂ ಆತನ ಸಹೋದರರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಮುದ್ರ ಇದ್ರೂ ಮಂಗಳೂರಿನಲ್ಲಿ ನೀರಿಗೆ ಬರ: ವಾಹನಗಳನ್ನ ತೊಳೆಯದಂತೆ ಸೂಚನೆ – Kannada News | Water Crisis: Thumbay Dam Levels Drop, Bi Daily Supply From May 1st

ಮಂಗಳೂರು, ತುಂಬೆ ವೆಂಟೆಡ್ ಡ್ಯಾಂImage Credit source: tv9 kannada

ಮಂಗಳೂರು, ಏಪ್ರಿಲ್​ 25: ರಾಜ್ಯದಲ್ಲಿ ಕುಡಿಯುವ ನೀರಿಗೆ (drinking water) ಬರ ಎದುರಾಗಿದೆ. ಕಡಲನಗರಿ ಮಂಗಳೂರಿನಲ್ಲೂ (mangaluru) ನೀರಿನ ಕೊರತೆ ಕಂಡುಬಂದಿದೆ. ನಗರಕ್ಕೆ ನೀರು ಪೊರೈಕೆ ಮಾಡುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಕುಸಿತವಾಗುತ್ತಿದೆ. ಹೀಗಾಗಿ ಜಿಲ್ಲಾಡಳಿತ ಎರಡು ದಿನಕ್ಕೊಮ್ಮೆ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ನಿರ್ಧಾರ ಮಾಡಿದೆ.

ಕರಾವಳಿಯಲ್ಲಿ ಸದ್ಯ ಬಿಸಿಲ ಝಳ ಹೆಚ್ಚುತ್ತಿದೆ. ಬೇಸಿಗೆಯ ಬೇಗೆಯಿಂದ ಜನ ಮನೆಯಿಂದ ಹೊರ ಬರುವುದಕ್ಕೂ ಹೆದರುವ ಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದೆಡೆ ತಾಪಮಾನ ಏರಿಕೆಯಿಂದಾಗಿ ಬಾವಿ, ನದಿಗಳಲ್ಲೂ ನೀರು ಬತ್ತಿ ಹೋಗಿದೆ. ಅದರಲ್ಲೂ ಕರಾವಳಿಯ ಜೀವನದಿ ನೇತ್ರಾವತಿಯ ಒಡಲಲ್ಲಿ ನೀರಿನ ಮಟ್ಟ ಸಾಕಷ್ಟು ಕುಸಿದಿದೆ. ಹೀಗಾಗಿ ಮಂಗಳೂರು ನಗರಕ್ಕೆ ನೀರು ಪೂರೈಸುತ್ತಿರುವ ತುಂಬೆ ವೆಂಟೆಡ್ ಡ್ಯಾಮ್‌ನಲ್ಲೂ ನೀರಿಗೆ ಬರಬಂದಿದೆ.

ಮೇ 1ರಿಂದ ಎರಡು ದಿನಕ್ಕೊಮ್ಮೆ ನೀರು

ಡ್ಯಾಮ್‌‌‌ನಲ್ಲಿ ನೀರಿನ ಮಟ್ಟ 4.53 ಮೀಟರ್‌ಗೆ ಇಳಿಕೆಯಾಗಿದ್ದು, ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರು ನಗರಕ್ಕೆ ಮೇ 1ರಿಂದ ಎರಡು ದಿನಕ್ಕೊಮ್ಮೆ ನೀರಿನ ಸರಬರಾಜು ಮಾಡುವ ನಿರ್ಧಾರ ಕೈಗೊಂಡಿದೆ.

ಇದನ್ನೂ ಓದಿ: ಮೀನುಗಾರಿಕೆಗೆ ತಟ್ಟಿದ ತಾಪಮಾನ ಬಿಸಿ: ಮತ್ಸ್ಯಕ್ಷಾಮ, ಮೀನುಗಾರಿಕೆ ಸ್ಥಗಿತಗೊಳಿಸಿ ದಡ ಸೇರಿದ ಸಾವಿರಾರು ಬೋಟ್‌ಗಳು!

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು ಐದೂವರೆ ಲಕ್ಷಕ್ಕೂ ಅಧಿಕ ಮಂದಿ ವಾಸಿಸುತ್ತಿದ್ದಾರೆ. ತುಂಬೆ ಡ್ಯಾಂ‌ನಿಂದ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಂಗಳೂರು ನಗರಕ್ಕೆ ಪ್ರತಿ ದಿನ ಸುಮಾರು 160 ಎಂಎಲ್​​ಡಿ ನೀರನ್ನು ಪಂಪಿಂಗ್ ಮಾಡಲಾಗುತ್ತೆ. ಸದ್ಯ ಎರಡು ದಿನಕ್ಕೊಮ್ಮೆ ನೀರಿನ ರೇಷನಿಂಗ್ ಮಾಡುವುದರಿಂದ ನಿತ್ಯ ಸುಮಾರು 40ರಿಂದ 50 ಎಂಎಲ್​ಡಿ ನೀರು ಉಳಿಕೆಯಾಗಲಿದೆ.

ಗಾರ್ಡನಿಂಗ್‌, ವಾಹನ ತೊಳೆಯುವುದಕ್ಕೆ ನೀರು ಬಳಸುವಂತ್ತಿಲ್ಲ  

ಸದ್ಯ ಎಎಂಆರ್​ ಮತ್ತು ಬಿಳಿಯೂರು ಡ್ಯಾಂನಲ್ಲಿರುವ ನೀರಿನ ಸಂಗ್ರಹದ ಲೆಕ್ಕಚಾರದಂತೆ ಜೂನ್ ಮೊದಲ ವಾರದವರೆಗೆ ಕುಡಿಯುವ ನೀರಿನ ಪೂರೈಕೆಯನ್ನು ಮ್ಯಾನೇಜ್ ಮಾಡಬಹುದಾಗಿದೆ. ಇದರ ಜೊತೆ ತುಂಬೆ ವೆಂಟೆಡ್ ಡ್ಯಾಂನ ಕೆಳಭಾಗದಲ್ಲಿರುವ ನೀರನ್ನು ಸಹ ಡ್ಯಾಂಗೆ ಮತ್ತೆ ಪಂಪಿಂಗ್ ಮಾಡಬಹುದಾಗಿದೆ. ಹೀಗಾಗಿ ನೀರನ್ನು ಗಾರ್ಡನಿಂಗ್‌ಗೆ, ವಾಹನ ತೊಳೆಯುವುದಕ್ಕೆ ಬಳಸದಂತೆ ಪಾಲಿಕೆ ಸೂಚನೆ ನೀಡಿದೆ.

ಇದನ್ನೂ ಓದಿ: ದೈವದ ಭಂಡಾರ ಮೆರವಣಿಗೆ ವೇಳೆ ಕುಸಿದ ಕಿರು ಸೇತುವೆ: ಪಲ್ಲಕ್ಕಿ ಉರುಳಿಬಿದ್ದು ಅವಘಡ, ವಿಡಿಯೋ ವೈರಲ್

ಜೂನ್ ಮೊದಲ ವಾರದೊಳಗೆ ಮುಂಗಾರು ಬಂದರೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ. ಹೀಗಾಗಿ ಶೀಘ್ರ ವರುಣ ದೇವ ಕೃಪೆ ತೋರಲಿ ಎಂಬ ಪ್ರಾರ್ಥನೆ ಎಲ್ಲರದ್ದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರಾಹುಲ್ ಗಾಂಧಿಯ ಪ್ರತಿಕೃತಿ ದಹನದ ವೇಳೆ ಬಿಜೆಪಿ ಶಾಸಕಿಗೆ ಗಾಯ – Kannada News | BJP MLA Anupama Jaiswal injured in Bahraich during effigy burning watch video

ನವದೆಹಲಿ, ಏಪ್ರಿಲ್ 25: ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು (Women’s Reservation Bill) ಬೆಂಬಲಿಸಿ ನಡೆದ ಬಿಜೆಪಿ ರ್ಯಾಲಿಯಲ್ಲಿ ಪ್ರತಿಕೃತಿ ದಹನ ಮಾಡುವಾಗ ಸದರ್ ಶಾಸಕಿ ಅನುಪಮಾ ಜೈಸ್ವಾಲ್ ಅವರ ಮೈಗೆ ಸ್ವಲ್ಪ ಬೆಂಕಿ ತಾಗಿದೆ. ಅವರಿಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿದ್ದು, ಗಂಭೀರ ಹಾನಿಯಿಂದ ಪಾರಾಗಿದ್ದಾರೆ. ನಾರಿ ವಂದನ್ ಕಾಯ್ದೆ ಅಭಿಯಾನದಡಿ ಈ ರ್ಯಾಲಿಯನ್ನು ಆಯೋಜಿಸಲಾಗಿತ್ತು. ಹೆಚ್ಚಿನ ಸಂಖ್ಯೆಯ ಮಹಿಳೆಯರು ಭಾಗವಹಿಸಿ ವಿರೋಧ ಪಕ್ಷಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯ ಸಮಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಪ್ರತಿಕೃತಿಗಳಿಗೆ ಬೆಂಕಿ ಹಚ್ಚಲಾಯಿತು. ಈ ವೇಳೆ ಪ್ರತಿಕೃತಿಯ ಜ್ವಾಲೆಗಳು ಅನಿರೀಕ್ಷಿತವಾಗಿ ತೀವ್ರಗೊಂಡು ಅನುಪಮಾ ಜೈಸ್ವಾಲ್ ಅವರಿಗೂ ಬೆಂಕಿ ತಾಗಿತು. ಅವರಿಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿದ್ದು, ಮುನ್ನೆಚ್ಚರಿಕೆಯಾಗಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಯಾವುದೇ ಗಂಭೀರ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version