ಟಿವಿ9 ಇಂಪ್ಯಾಕ್ಟ್: ತುಂಗಭದ್ರಾದಿಂದ ಕದ್ದುಮುಚ್ಚಿ ಕಾರ್ಖಾನೆಗಳಿಗೆ ಹರಿಸಲಾಗುತ್ತಿದ್ದ ನೀರು ಬಂದ್ – Kannada News | Tv9 Impact: Officers Stops tungabhadra reservoir Water To factory at Koppal
ಕೊಪ್ಪಳ, (ಏಪ್ರಿಲ್ 25): ತುಂಗಭದ್ರಾ ಜಲಾಶಯದಿಂದ ಕದ್ದಮುಚ್ಚಿ ಹಲವು ಕಾರ್ಖಾನೆಗಳಿಗೆ ನೀರು ಹರಿಸಲಾಗುತ್ತಿದೆ ಎನ್ನುವ ಆರೋಪಗಳು ಕೇಳಿಬಂದಿದ್ದವು. ಕುಡಿಯಲು ಕಾಲುವೆಗಳಿಗೆ ನೀರು ಬಿಡದ ಅಧಿಕಾರಿಗಳು, ಫ್ಯಾಕ್ಟರಿಗಳಿಗೆ ನೀರು ಹರಿಸುತ್ತಿದ್ದರು ಎಂಬ ದೂರುಗಳು ಕೇಳಿಬಂದಿದ್ದು, ಈ ಸಂಬಂಧ ಟಿವಿ9 ವರದಿ ಮಾಡಿತ್ತು. ಈ ವರದಿ ಬೆನ್ನಲ್ಲೇ ಇದೀಗ ಕದ್ದಮುಚ್ಚಿ ಕಾರ್ಖಾನೆಗಳಿಗೆ ಹರಿಸಲಾಗುತ್ತಿದ್ದ ನೀರು ಸ್ಥಗಿತಗೊಳಿಸಲಾಗಿದೆ. ಹೌದು…ಟಿವಿ9ನಲ್ಲಿ ವರದಿ ಬಳಿಕ ತುಂಗಭದ್ರಾ ಜಲಾಶಯದಿಂದ ಜಿಂದಾಲ್ ವಿಜಯನಗರ ಸ್ಟೀಲ್ ಲಿಮಿಟೆಡ್ ತೋರಣಗಲ್ಲು ಘಟಕ ಹಾಗೂ ಜೆಎಸ್ಡಬ್ಲ್ಯು ಸೇರಿ ಕೆಲ ಕಾರ್ಖಾನೆಗಳಿಗೆ ಹೋಗುತ್ತಿದ್ದ…