ಗುರುಕುಲದಲ್ಲಿ 11 ವರ್ಷದ ವಿದ್ಯಾರ್ಥಿಯ ಬರ್ಬರ ಹತ್ಯೆ; ಮೈಮೇಲಿತ್ತು 42 ಗಾಯ – Kannada News | Lucknow Gurukul student beaten to death body found with 42 injuries and cigarette burns
ಲಕ್ನೋ, ಏಪ್ರಿಲ್ 24: ಲಕ್ನೋದ (Lucknow) ಗುರುಕುಲವೊಂದರಲ್ಲಿ ವಿದ್ಯಾರ್ಥಿಯಾಗಿದ್ದ 11 ವರ್ಷದ ಬಾಲಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುಕುಲಕ್ಕೆ ಸೇರಿಸಿ 7 ದಿನಗಳಲ್ಲೇ ಆತ ಶವವಾಗಿ ಪತ್ತೆಯಾಗಿದ್ದಾನೆ. ಮನೆಗೆ ತರುವಾಗ ಆತನ ದೇಹದಲ್ಲಿ ಹಲವಾರು ಗಾಯದ ಗುರುತುಗಳಿತ್ತು ಎಂದು ಆತನ ಕುಟುಂಬ ಆರೋಪಿಸಿದೆ. 11 ವರ್ಷದ ದಿವ್ಯಾಂಶ್ ಅವರನ್ನು ಏಪ್ರಿಲ್ 15ರಂದು ಲಕ್ನೋದ ರಾಮಾನುಜ್ ಭಾಗವತ್ ವೇದ ವಿದ್ಯಾಪೀಠ ಗುರುಕುಲಕ್ಕೆ ದಾಖಲಿಸಲಾಗಿತ್ತು. ಏಪ್ರಿಲ್ 22ರಂದು ಆತನ ಕುಟುಂಬಕ್ಕೆ ಆತನ ಸಾವಿನ…