ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾImage Credit source: RBI Youtube
ನವದೆಹಲಿ, ಜೂನ್ 5: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ನಿರ್ಧರಿಸಿದೆ. ಮೊನ್ನೆಯಿಂದ ನಡೆದ ಎಂಪಿಸಿ ಸಭೆಯ ನಂತರ ಇವತ್ತು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ, ರೆಪೋ ದರವನ್ನು ಶೇ. 5.25ರಲ್ಲಿ ಮುಂದುವರಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಎಸ್ಟಿಎಫ್ ದರ ಶೇ. 5, ಎಂಎಸ್ಎಫ್ ಮತ್ತು ಬ್ಯಾಂಕ್ ರೇಟ್ ಶೇ. 5.5 ನಲ್ಲಿ ಮುಂದುವರಿಯಲಿವೆ. ಹಾಗೆಯೇ, ಆರ್ಬಿಐನ ಪಾಲಿಸಿ ತಟಸ್ಥ ನೀತಿಯಲ್ಲಿ ಮುಂದುವರಿಯಲಿದೆ. ಅಂದರೆ, ಅಗತ್ಯಬಿದ್ದಾಗ ರೆಪೋ ದರ ಏರಿಸಬಹುದು, ಅಥವಾ ಇಳಿಸಬಹುದು.
(ಇನ್ನಷ್ಟು ವಿವರಗಳನ್ನು ನಿರೀಕ್ಷಿಸಿ..)