Shani Jayanti 2026: ಶನಿ ದೋಷ, ಸಾಡೆಸಾತಿಯಿಂದ ಮುಕ್ತಿ ಪಡೆಯಲು ಇಂದು ತಪ್ಪದೇ ಈ ಕೆಲಸ ಮಾಡಿ – Kannada News | Shani jayanti 2026 effective remedies for saturn dosha and malefic effects

ಶನಿ ಜಯಂತಿಯು ಶನಿದೇವನ ಜನ್ಮದಿನವಾಗಿ ಆಚರಿಸಲ್ಪಡುವ ಪ್ರಮುಖ ಹಬ್ಬವಾಗಿದೆ. ಜೇಷ್ಠ ಮಾಸದಲ್ಲಿ ಶನಿವಾರ ಬರುವ ಅಮಾವಾಸ್ಯೆಯನ್ನು ಶನಿ ಜಯಂತಿ ಎಂದು ಆಚರಿಸಲಾಗುತ್ತದೆ. ಉದಾಹರಣೆಗೆ, 2026ರ ಮೇ 16ರಂದು ಬಂದ ಈ ಜೇಷ್ಠ ಅಮಾವಾಸ್ಯೆ, ಅಂದರೆ ಬಾದಾಮಿ ಅಮಾವಾಸ್ಯೆ, ಶನಿ ದೋಷ ನಿವಾರಣೆಗೆ ಅತ್ಯಂತ ಪ್ರಶಸ್ತವಾಗಿದೆ. ಅಮಾವಾಸ್ಯೆಯು ಬೆಳಗ್ಗೆ 5:11ಕ್ಕೆ ಪ್ರಾರಂಭವಾಗಿ, ಮರುದಿನ ಬೆಳಗ್ಗೆ 1:30ಕ್ಕೆ ಕೊನೆಗೊಳ್ಳುತ್ತದೆ. ಈ ದಿನದ ಮಹತ್ವದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ಶನಿ ಭಗವಾನನನ್ನು ನ್ಯಾಯಕಾರಕ ಹಾಗೂ ಕರ್ಮಫಲದಾತ ಎಂದು ಪರಿಗಣಿಸಲಾಗಿದೆ. ನಮ್ಮ ಜನ್ಮ ಕುಂಡಲಿಯಲ್ಲಿ ಸಾಡೆ ಸಾತಿ, ಅರ್ಧಾಷ್ಟಮ ಶನಿ, ಅಷ್ಟಮ ಶನಿ, ಪಂಚಮ ಶನಿ ಅಥವಾ ಶನಿ ದೃಷ್ಟಿ ಇರುವವರು ಆಗಾಗ ಎದುರಿಸುವ ಸ್ಪೀಡ್ ಬ್ರೇಕರ್‌ಗಳಂತಹ ಅಡೆತಡೆಗಳಿಂದ ಮುಕ್ತಿ ಪಡೆಯಲು ಈ ಶನಿ ಜಯಂತಿ ಅತ್ಯಂತ ಪವಿತ್ರ ದಿನ.

ಶನಿದೋಷ ನಿವಾರಣೆಗಾಗಿ ಹಲವು ವಿಧಿ ವಿಧಾನಗಳನ್ನು ಅನುಸರಿಸಬಹುದು. ಉಪವಾಸ, ಧ್ಯಾನ, ಪೂಜೆ, ಹಾಗೂ ದಾನ ಕಾರ್ಯಗಳನ್ನು ಮಾಡುವುದು ಶುಭ. ಸಾಸಿವೆ ಎಣ್ಣೆ, ಎಳ್ಳೆಣ್ಣೆ, ಎಳ್ಳಿನ ಬತ್ತಿ ದೀಪಗಳನ್ನು ಶನಿ ದೇವಸ್ಥಾನದಲ್ಲಿ ಹಚ್ಚುವುದು, ಶನಿ ಅಷ್ಟೋತ್ತರ ಸ್ಮರಣೆ ಮಾಡುವುದು, ಶನಿಗೆ ವಸ್ತ್ರ ಮತ್ತು ನೈವೇದ್ಯ ಅರ್ಪಿಸುವುದು ಗ್ರಹಕಾಟಗಳನ್ನು ಕಡಿಮೆ ಮಾಡುತ್ತದೆ. ಈ ದಿನ, ಹನುಮಾನ್ ಮತ್ತು ವೆಂಕಟೇಶ್ವರ ಸ್ವಾಮಿ ದರ್ಶನ ಮಾಡುವುದೂ ಸಹ ಶನಿ ದೇವರ ಪ್ರೀತಿಗೆ ಪಾತ್ರರಾಗಲು ಸಹಕಾರಿ. ಸಾಡೆಸಾತಿ, ಆರೋಗ್ಯ ಸಮಸ್ಯೆ ಅಥವಾ ಶಸ್ತ್ರಚಿಕಿತ್ಸೆಯಲ್ಲಿ ಅಡೆತಡೆಗಳಿರುವವರು ತಮ್ಮ ಹೆಸರಿನಲ್ಲಿ ಅರ್ಚನೆ ಮಾಡಿಸುವುದೂ ಫಲಪ್ರದ.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ

ಶನಿ ದೋಷ ನಿವಾರಣೆಗೆ ಒಂದು ವಿಶಿಷ್ಟ ತಂತ್ರವನ್ನು ವಿವರಿಸಲಾಗಿದೆ. ಒಂದು ಬಿಡಿಸಿದ ತೆಂಗಿನಕಾಯಿಯನ್ನು ತೆಗೆದುಕೊಂಡು ಅದನ್ನು ಪೂರ್ಣವಾಗಿ ಕಪ್ಪು ಹತ್ತಿ ಬಟ್ಟೆಯಿಂದ ಸುತ್ತಿ. ನಂತರ ಮೂರು ಎಳೆಯ ದಾರಗಳನ್ನು (ಕಪ್ಪು, ಬಿಳಿ, ಕೆಂಪು) ಆ ತೆಂಗಿನಕಾಯಿಗೆ ಸುತ್ತಿ. ಈ ತೆಂಗಿನಕಾಯಿಯನ್ನು ಎರಡೂ ಕೈಗಳಿಂದ ಹಿಡಿದು, ಪೂರ್ವಕ್ಕೆ ಅಭಿಮುಖವಾಗಿ ನಿಂತು, ನಿಮ್ಮ ತಲೆಯ ಸುತ್ತ ಎಂಟು ಬಾರಿ ಅಪ್ರದಕ್ಷಿಣಾಕಾರವಾಗಿ ತಿರುಗಿಸಿ. ನಂತರ, ಇದನ್ನು ಶನಿ ದೇವಸ್ಥಾನಕ್ಕೆ ಕೊಂಡೊಯ್ದು, ದೇವಸ್ಥಾನದ ಪ್ರಾಕಾರವನ್ನು ಎಂಟು ಬಾರಿ ಪ್ರದಕ್ಷಿಣೆ ಹಾಕಿ. ದೇವಸ್ಥಾನದ ಹೊರಗೆ ಆ ತೆಂಗಿನಕಾಯಿಯನ್ನು ಒಡೆದು, ಅದರ ಮೇಲಿದ್ದ ಬಟ್ಟೆಯನ್ನು (ಎಳ್ಳೆಣ್ಣೆಯಲ್ಲಿ ಅದ್ದಿದ್ದರೆ ಉತ್ತಮ) ಅಲ್ಲಿ ಉರಿಯುತ್ತಿರುವ ದೀಪಕ್ಕೆ ಹಾಕಿ. ಸ್ವಲ್ಪ ಸಮಯ ಅಲ್ಲೇ ಕುಳಿತುಕೊಂಡು, ಓಂ ಶಂ ಶನೇಶ್ಚರಾಯ ನಮಃ ಮಂತ್ರವನ್ನು 17 ಅಥವಾ 26 ಬಾರಿ ಜಪಿಸಿ, ನೇರವಾಗಿ ಮನೆಗೆ ಹಿಂದಿರುಗಿ. ಈ ವಿಧಾನದಿಂದ ಶನಿ ಕಾಟ ಕಡಿಮೆಯಾಗುತ್ತದೆ.

ಇದಲ್ಲದೆ, ಸಾಸಿವೆ ಎಣ್ಣೆ, ಎಳ್ಳೆಣ್ಣೆ ಅಥವಾ ಎಳ್ಳಿನ ಉಂಡೆಗಳನ್ನು ನೈವೇದ್ಯವಾಗಿ ಇಡಬಹುದು. ಸಣ್ಣ ಕಪ್ಪು ಬಟ್ಟೆಯನ್ನು ಜೋಬಿನಲ್ಲಿ ಇಟ್ಟುಕೊಂಡು, ಸಂಧ್ಯಾಕಾಲದಲ್ಲಿ ಅದನ್ನು ಎಲ್ಲಾದರೂ ಬಿಸಾಡುವುದರಿಂದಲೂ ಶುಭವಾಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *