SIR ಪ್ರಕ್ರಿಯಲ್ಲಿ ಸಾಲುಸಾಲು ಎಡವಟ್ಟು:ಶಾಲಾ ಮಕ್ಕಳನ್ನು ಬಳಸಿಕೊಂಡ BLOಗಳು

ಬೆಳಗಾವಿ, (ಜುಲೈ 07): ಕರ್ನಾಟಕದಲ್ಲಿ ಎಸ್​​ಐಆರ್ ಪ್ರಕ್ರಿಯೆ ನಡೆಯುತ್ತಿದ್ದು, ಹಲವೆಡೆ ಕೆಲ ಎಡವಟ್ಟುಗಳು ಆಗುತ್ತಿವೆ. ಚುನಾವಣೆ ಆಯೋಗವು ಬಿಎಲ್​​​ಒಗಳಿಗೆ ಮತದಾರರ ಮನೆ ಮನೆಗೆ ತೆರಳಿ ಎಸ್​​​ಐಆರ್ ಮಾಡುವಂತೆ ಹೇಳಿದೆ. ಆದ್ರೆ, ಕೆಲ ಬಿಎಲ್​​​ಒಗಳು ದೇವಸ್ಥಾನ, ಮಸೀದಿ, ಊರಿನ ಕಟ್ಟೆಗಳಲ್ಲಿ ಕುಳಿತು ಎಸ್​​ಐಆರ್ ಪ್ರಕ್ರಿಯೆ ಮಾಡುತ್ತಿರುವುದು ಕಂಡುಬಂದಿದೆ. ಇದರ ಮಧ್ಯೆ ಇದೀಗ ಬೆಳಗಾವಿಯಲ್ಲಿ ಎಸ್​​ಐಆರ್​​​ಗೆ ಶಾಲಾ ಮಕ್ಕಳನ್ನು ಬಳಕೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮರಡಿಮಠದ ಗ್ರಾಮಸ್ಥರನ್ನು ಬಿಎಲ್​​​ಒಗಳು ಶಾಲೆಗೆ ಕರೆಸಿ ಎಸ್ಐಆರ್ ಮಾಡುತ್ತಿದ್ದು,ಫೋಟೋ ಅಂಟಿಸಲು ಮತ್ತು ಫಾರಂ ತುಂಬಲು ವಿದ್ಯಾರ್ಥಿಗಳನ್ನು ಬಳಕೆ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *