ಬೆಂಗಳೂರು, (ಏಪ್ರಿಲ್ 22): ಹಲವು ಗೊಂದಲಗಳ ನಡುವೆಯೂ ಎಸ್ಎಸ್ಎಲ್ಸಿ (10ನೇ ತರಗತಿ) ಫಲಿತಾಂಶ (SSLC Result 2026) ಪ್ರಕಟಕ್ಕೆ ಮುಹೂರ್ತ ನಿಗದಿಯಾಗಿದೆ. ನಾಳೆ (ಏಪ್ರಿಲ್ 23) 12 ಗಂಟೆಗೆ SSLC ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ. ಈ ಬಗ್ಗೆ ಸ್ವತಃ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಘೋಷಣೆ ಮಾಡಿದ್ದಾರೆ.
