ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಅಮೆರಿಕ ನಡುವಿನ 2026 ರ ಟಿ20 ವಿಶ್ವಕಪ್ ಮೂರನೇ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ಸುಲಭ ಜಯ ದಾಖಲಿಸಿತು. ಇದರೊಂದಿಗೆ ಹಾಲಿ ಚಾಂಪಿಯನ್ ಆಗಿ ಪಂದ್ಯಾವಳಿಗಿಳಿದಿರುವ ಭಾರತ ಗೆಲುವಿನ ಶುಭಾರಂಭ ಮಾಡಿದೆ. ಇತ್ತ ಭಾರತದ ವಿರುದ್ಧ ಸೋತರೂ ಅನಾನುಭವಿ ಅಮೆರಿಕ ತಂಡ ದಿಟ್ಟ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ಹೊಂದಿರುವ ಟೀಂ ಇಂಡಿಯಾವನ್ನು ಕೇವಲ 161 ರನ್ಗಳಿಗೆ ಕಟ್ಟಿಹಾಕುವಲ್ಲಿ ಅಮೆರಿಕ ಬೌಲರ್ಗಳು ಯಶಸ್ವಿಯಾದರು. ಆದಾಗ್ಯೂ ಈ ಗುರಿ ಬೆನ್ನಟ್ಟಿದ ಅಮೆರಿಕ ತಂಡದ ಬ್ಯಾಟಿಂಗ್ ವಿಭಾಗದ ಭಾರತದ ಬೌಲಿಂಗ್ ದಾಳಿಯ ಮುಂದೆ ತತ್ತರಿಸಿ 20 ಓವರ್ಗಳಲ್ಲಿ 132 ರನ್ಗಳನಷ್ಟೇ ಕಲೆಹಾಕಲು ಶಕ್ತವಾಗಿ 30 ರನ್ಗಳಿಂದ ಸೋಲೊಪ್ಪಿಕೊಂಡಿತು.
