Tv9 Kannada News Live: ಇಂದಿನಿಂದ ರಾಜ್ಯಾದ್ಯಂತ 4 ದಿನ ಭಾರಿ ಮಳೆ: ವಚನಾನಂದ ಸ್ವಾಮೀಜಿಗೆ ಜೈಲಾ? ಬೇಲಾ? ಇಲ್ಲಿವೆ ಈ ಹೊತ್ತಿನ ಟಾಪ್​​ ಸುದ್ದಿಗಳು – Kannada News | Today’s Top Karnataka Headlines: Rain Warning, Vachananda Case and Kusuma’s SSLC Success

ಬೆಂಗಳೂರು, ಮೇ.21: ಇಂದಿನಿಂದ ಮುಂದಿನ 4 ದಿನಗಳ ಕಾಲ ಕರ್ನಾಟಕದಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ಸೇರಿದಂತೆ 8 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಪೋಕ್ಸೊ ಪ್ರಕರಣದ ಆರೋಪಿ ವಚನಾನಂದ ಸ್ವಾಮೀಜಿ ಜಾಮೀನು ರದ್ದತಿ ಅರ್ಜಿಯ ವಿಚಾರಣೆ ಮೇ 29 ರಂದು ದಾವಣಗೆರೆ ಕೋರ್ಟ್‌ನಲ್ಲಿ ನಡೆಯಲಿದೆ. ಬೆಳಗಾವಿಯ ನಿಪ್ಪಾಣಿಯ ಪಟ್ಟಣಕುಡಿಯಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ನೇತೃತ್ವದ ಆಶ್ರಯ ಮನೆ ಹಂಚಿಕೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಕಾರ್ಯಕರ್ತರು ನುಗ್ಗಿ ಗಲಾಟೆ ನಡೆದಿದೆ. ರಸ್ತೆ ಅಪಘಾತದಲ್ಲಿ ಕಾಲು ಕಳೆದುಕೊಂಡರೂ ಧೃತಿಗೆಡದೆ ಸ್ಟ್ರೇಚರ್ ಮೇಲೆಯೇ ಮಲಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಪ್ರಥಮ ದರ್ಜೆಯಲ್ಲಿ ಪಾಸಾದ ಕೋಲಾರದ ಕುಸುಮಾಳ ಸ್ಪೂರ್ತಿದಾಯಕ ಯಶೋಗಾಥೆ ಇಲ್ಲಿದೆ ನೋಡಿ.

ಇಂದಿನಿಂದ ರಾಜ್ಯಾದ್ಯಂತ 4 ದಿನ ಭಾರಿ ಮಳೆ:

ರಾಜ್ಯದ ಜನತೆಗೆ ಹವಾಮಾನ ಇಲಾಖೆ ಪ್ರಮುಖ ಮುನ್ಸೂಚನೆಯೊಂದನ್ನು ನೀಡಿದ್ದು, ಇಂದಿನಿಂದ (ಮೇ 21) ಮುಂದಿನ 4 ದಿನಗಳ ಕಾಲ ರಾಜ್ಯಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ವಿಜಯಪುರ, ಬಾಗಲಕೋಟೆ, ಕೊಪ್ಪಳ ಮತ್ತು ಗದಗದಂತಹ ಕೆಲವು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

ವಚನಾನಂದ ಸ್ವಾಮೀಜಿಗೆ ಜೈಲಾ? ಬೇಲಾ? ಮೇ 29ಕ್ಕೆ ನಿರ್ಧಾರ:

ಪೋಕ್ಸೊ (POCSO) ಪ್ರಕರಣದ ಆರೋಪ ಎದುರಿಸುತ್ತಿರುವ ಹರಿಹರದ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಅವರ ಕಾನೂನು ಹೋರಾಟ ತೀವ್ರಗೊಂಡಿದೆ. ಪ್ರಕರಣ ದಾಖಲಾಗುವ ಮುನ್ನವೇ ನಿರೀಕ್ಷಣಾ ಜಾಮೀನು ಪಡೆದಿದ್ದ ಸ್ವಾಮೀಜಿಯ ಜಾಮೀನನ್ನು ರದ್ದುಗೊಳಿಸುವಂತೆ ಪೊಲೀಸರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ದಾವಣಗೆರೆಯ ವಿಶೇಷ ಪೋಕ್ಸೊ ನ್ಯಾಯಾಲಯವು ಇದೇ ಮೇ 29 ರಂದು ಕೈಗೆತ್ತಿಕೊಳ್ಳಲಿದೆ.

ಶಾಸಕಿ ಶಶಿಕಲಾ ಜೊಲ್ಲೆ ಕಾರ್ಯಕ್ರಮಕ್ಕೆ ನುಗ್ಗಿ ಕಾಂಗ್ರೆಸ್ ಕಾರ್ಯಕರ್ತರ ಗಲಾಟೆ

ಜಿಲ್ಲೆಯ ನಿಪ್ಪಾಣಿ ಮತಕ್ಷೇತ್ರದಲ್ಲಿ ಆಶ್ರಯ ಯೋಜನೆಯ ಮನೆ ಹಂಚಿಕೆ ಕಾರ್ಯಕ್ರಮದ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಭಾರಿ ಕಿತ್ತಾಟ ನಡೆದಿರುವ ಆಘಾತಕಾರಿ ಘಟನೆ ವರದಿಯಾಗಿದೆ. ನಿಪ್ಪಾಣಿ ತಾಲೂಕಿನ ಪಟ್ಟಣಕುಡಿ ಗ್ರಾಮದಲ್ಲಿ ಆಶ್ರಯ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಲಾಟರಿ ಮೂಲಕ 950 ಮನೆಗಳನ್ನು ಹಂಚಿಕೆ ಮಾಡುವ ಅಧಿಕೃತ ಕಾರ್ಯಕ್ರಮವನ್ನು ಶಾಸಕಿ ಶಶಿಕಲಾ ಜೊಲ್ಲೆ ಹಮ್ಮಿಕೊಂಡಿದ್ದರು.

ಇದನ್ನೂ ಓದಿ: ‘ಸುಪ್ರೀಂ’ನಲ್ಲಿ ಇಂದು ನಿರ್ಧಾರವಾಗುತ್ತಾ ಶೃಂಗೇರಿ ಮರು ಮತ ಎಣಿಕೆ ಭವಿಷ್ಯ?: ಇಲ್ಲಿವೆ ಈ ಹೊತ್ತಿನ ಟಾಪ್​​ ಸುದ್ದಿಗಳು

ಕುಸುಮಾಗೆ ಶಾಸಕಿ ರೂಪಕಲಾ ಬಂಪರ್ ಗಿಫ್ಟ್!

ಕೋಲಾರದ ಕುಸುಮಾ ದೃಢ ಸಂಕಲ್ಪದಿಂದ ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಥಮ ದರ್ಜೆ ಗಳಿಸಿದ್ದಾರೆ. ಆಸ್ಪತ್ರೆಯಿಂದಲೇ ಪರೀಕ್ಷೆಗೆ ಬಂದ ಈಕೆಯ ಸಾಧನೆಗೆ ಶಾಸಕಿ ರೂಪಕಲಾ ಶಶಿಧರ್ ಸ್ಪಂದಿಸಿದ್ದಾರೆ. ಅವರಿಗೆ ವೈದ್ಯಕೀಯ ಹಾಗೂ ‘ಲೈಫ್ ಸೇವರ್’ ಸಹಯೋಗದೊಂದಿಗೆ ರೋಬೋಟಿಕ್ ಕೃತಕ ಕಾಲುಗಳನ್ನು ಜೋಡಿಸಲು ವ್ಯವಸ್ಥೆ ಮಾಡಿದ್ದಾರೆ. ಕುಸುಮಾಳ ಛಲ ಮತ್ತು ಶಾಸಕಿಯ ಮಾನವೀಯ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 10:57 am, Thu, 21 May 26

Source link

Leave a Reply

Your email address will not be published. Required fields are marked *