ಶಿವಮೊಗ್ಗದಲ್ಲಿ ನಡೆದ ಟಿವಿ9 ಎಜುಕೇಷನ್ ಎಕ್ಸ್ಪೋ , ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಉನ್ನತ ಶಿಕ್ಷಣದ ಕುರಿತು ಮಹತ್ವದ ಮಾಹಿತಿ ಒದಗಿಸಿದೆ. ಶಿವಮೊಗ್ಗದ ಪೊಲೀಸ್ ಭವನದಲ್ಲಿ ನಡೆದ ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ರಾಜ್ಯದ ಹಾಗೂ ನೆರೆಯ ಚೆನ್ನೈನ 24 ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಭಾಗವಹಿಸಿದ್ದವು.
ಈ ಮೇಳವು ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯದ ಶೈಕ್ಷಣಿಕ ಆಯ್ಕೆಗಳನ್ನು ಒಂದೇ ಸ್ಥಳದಲ್ಲಿ ಅನ್ವೇಷಿಸಲು ಅನುವಾಗಿದೆ. ದೂರದ ಬೆಂಗಳೂರಿಗೆ ಪ್ರಯಾಣಿಸಿ ವಿವಿಧ ಸಂಸ್ಥೆಗಳನ್ನು ಸಂದರ್ಶಿಸುವ ಶ್ರಮವನ್ನು ತಪ್ಪಿಸಿದೆ. ಭಾಗವಹಿಸಿದ ಸಂಸ್ಥೆಗಳು ಶುಲ್ಕ ರಚನೆ, ಹಾಸ್ಟೆಲ್ ಸೌಲಭ್ಯಗಳು ಮತ್ತು ಸಾರಿಗೆ ವ್ಯವಸ್ಥೆಗಳ ಕುರಿತು ಸಮಗ್ರ ಮಾಹಿತಿಯನ್ನು ಉಚಿತವಾಗಿ ಒದಗಿಸಿದವು. ಶಿಕ್ಷಣದ ಜೊತೆಗೆ, ಟಿವಿ9 ಈ ಹಿಂದೆ ಆಯೋಜಿಸಿದ್ದ ವಸತಿ, ಸಾಲ, ಮತ್ತು ಕಾರು ಎಕ್ಸ್ಪೋಗಳಂತಹ ಸಾಮಾಜಿಕ ಕಾರ್ಯಕ್ರಮಗಳನ್ನು ಹೋಲಿಸಿ, ಶಿಕ್ಷಣ ಮೇಳವು ಇನ್ನೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
