ಕೋತಿಗಳು (monkey) ಚೇಷ್ಟೆ ಮಾಡುವುದರಲ್ಲಿ ಎತ್ತಿದ ಕೈ. ಸೋಶಿಯಲ್ ಮೀಡಿಯಾದಲ್ಲಿ ಈ ಕೋತಿಗಳ ಕಪಿ ಚೇಷ್ಟೆಯ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಇದೀಗ ಕೋತಿಗಳು ಜಾರುಬಂಡಿ ಆಟ ಆಡುತ್ತಿವೆ. ಆದರೆ ನಾನು ಮೊದಲು ಎಂಬಂತೆ ಕೋತಿಗಳೆಲ್ಲವು ಪೈಪೋಟಿಗೆ ಇಳಿದಿರುವ ದೃಶ್ಯವು ನೆಟ್ಟಿಗರ ಗಮನ ಸೆಳೆದಿದೆ. ಈ ಕ್ಲಿಪಿಂಗ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹ್ಯೂಮರ್ ಅನಿಮಲ್ (humor animal) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಕ್ಲಿಪ್ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಪಾರ್ಕ್ ನಂತಿರುವ ಪ್ರದೇಶದಲ್ಲಿ ಕೋತಿಗಳು ಜಾರು ಬಂಡಿ ಆಟ ಆಡುತ್ತಿದೆ. ಈ ಜಾರಬಂಡಿಯಲ್ಲಿ ನೇತಾಡುತ್ತಾ ಪೈಪೋಟಿಗೆ ಇಳಿದಿರುವ ದೃಶ್ಯವನ್ನು ನೀವು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ
ಇದನ್ನೂ ಓದಿ: ಮರಿ ಕೋತಿಯ ಬಾಯಲ್ಲಿದ್ದ ಆಹಾರವನ್ನು ಕಸಿದು ತಿಂದ ಕೋತಿ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಕ್ಯೂಟ್ ಎಂದಿದ್ದಾರೆ. ಇನ್ನೊಬ್ಬರು, ಇದು ಕೋತಿಗಳು ಸಾರ್ ಕೋತಿಗಳು ಎಂದು ಹೇಳಿದ್ದಾರೆ. ಮತ್ತೊಬ್ಬರು, ಆಟದಲ್ಲಿ ಪುಟಾಣಿಗಳನ್ನೇ ಮೀರಿಸುವಂತಿದೆ ಈ ಕೋತಿಗಳು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ