ತಂದೆ ತಾಯಿ ತಮ್ಮ ಮಕ್ಕಳ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತಾರೆ. ಹೀಗಿರುವಾಗ ಮಕ್ಕಳು ತಮ್ಮ ವಿಶೇಷ ದಿನಗಳಲ್ಲಿ ಮರೆಯಲಾಗದ ಉಡುಗೊರೆ (gift) ನೀಡಿದ್ರೆ ಆ ಕ್ಷಣ ಹೇಗಿರಬಹುದು ಎಂದು ಒಮ್ಮೆ ಊಹಿಸಿ. ಇದಕ್ಕೆ ಸಾಕ್ಷಿಯಾಗಿದೆ ಈ ವಿಡಿಯೋ. ಮಗಳೊಬ್ಬಳು ತನ್ನ ತಂದೆಗೆ ಹುಟ್ಟುಹಬ್ಬಕ್ಕೆ (father birthday) ಸರ್ಪ್ರೈಸ್ ನೀಡಿದ್ದಾಳೆ. ಮನೆಗೆ ತನ್ನ ಅಪ್ಪನ ಬಾಲ್ಯದ ಸ್ನೇಹಿತರನ್ನು ಆಹ್ವಾನಿಸಿ ಖುಷಿ ಪಡಿಸಿದ್ದಾಳೆ. ಈ ಹೃದಯ ಸ್ಪರ್ಶಿ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ.
ಹುಟ್ಟುಹಬ್ಬಕ್ಕೆ ತಂದೆಗೆ ಸರ್ಪ್ರೈಸ್ ನೀಡಿದ ಮಗಳು
ಮೇಘಾ ಎಂ ರಾವ್ (Megha m rao) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ಮಗಳೊಬ್ಬಳು ತನ್ನ ತಂದೆಯ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ನೀಡಿರುವುದನ್ನು ಕಾಣಬಹುದು. ಈ ಸ್ಪೆಷಲ್ ದಿನದಂದು ಮನೆಗೆ ತಂದೆಯ ಬಾಲ್ಯದ ಸ್ನೇಹಿತರನ್ನು ಆಹ್ವಾನಿಸಿದ್ದಾಳೆ. ಒಬ್ಬೊಬ್ಬರು ಮನೆಗೆ ಬರುತ್ತಿದ್ದಂತೆ ತಂದೆ ಖುಷಿಗೆ ಪಾರಾವೇ ಇಲ್ಲದಂತಾಗಿದೆ. ಎಲ್ಲರೂ ಜತೆಗೆ ಸೇರಿ ಬರ್ತ್ಡೇ ಸೆಲೆಬ್ರೇಶನ್ ಮಾಡಿರುವುದನ್ನು ನೀವು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ
ಇದನ್ನೂ ಓದಿ: ತನ್ನ ತಾಯಿ ಕೆಲಸ ಮಾಡುತ್ತಿದ್ದ ಮನೆಯನ್ನೇ ಖರೀದಿಸಿ ಸರ್ಪ್ರೈಸ್ ಕೊಟ್ಟ ಮಗ
ಈ ವಿಡಿಯೋ ಇದುವರೆಗೆ ಆರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಿಮ್ಮ ತಂದೆಯ ಪ್ರತಿಕ್ರಿಯೆ ಅದ್ಭುತ ಎಂದಿದ್ದಾರೆ. ಇನ್ನೊಬ್ಬರು, ಈ ದಿನದ ಬೆಸ್ಟ್ ರೀಲ್ಸ್ ಎಂದು ಹೇಳಿದ್ದಾರೆ. ಮತ್ತೊಬ್ಬರು, ನೋಡಿ ಖುಷಿ ಆಯ್ತು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
