ಅಜ್ಜ ಅಜ್ಜಿಯಂದಿರು (grandparents) ಪಿಜ್ಜಾ, ಬರ್ಗರ್ ಹಾಗೂ ಫಾಸ್ಟ್ ಫುಡ್ ಕೊಟ್ಟರೆ ಇಷ್ಟ ಪಟ್ಟು ತಿನ್ನುವುದು ಕಡಿಮೆಯೇ. ಆದರೆ 92 ವರ್ಷದ ಈ ಅಜ್ಜಿ ಮಾತ್ರ ಪಿಜ್ಜಾ ಪ್ರಿಯೆ. ಹೀಗಾಗಿ ಮೊಮ್ಮಗಳು ಅಜ್ಜಿಗಾಗಿ ಪಿಜ್ಜಾ ಆರ್ಡರ್ ಮಾಡಿ ಸರ್ಪ್ರೈಸ್ (surprise) ನೀಡಿದ್ದಾಳೆ. ಮನೆ ಬಾಗಿಲಿಗೆ ಡೆಲಿವರಿ ಬಾಯ್ ಪಿಜ್ಜಾ ತಂದು ಕೊಡುತ್ತಿದ್ದಂತೆ ಅಜ್ಜಿ ಫುಲ್ ಖುಷ್ ಆಗಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ವ್ಯೂಸ್ ಅಂಡ್ ಬ್ರೇವ್ಸ್ ಬೈ ಹರ್ಷದ (ViewsandBrews by Harshada) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಅಜ್ಜಿಯೊಬ್ಬರು ಮನೆಬಾಗಿಲಿಗೆ ಬಂದ ಡೆಲಿವರಿಯನ್ನು ತೆಗೆದುಕೊಂಡಿದ್ದಾರೆ. ಡೆಲಿವರಿ ಬಾಯ್ ಪಿಜ್ಜಾ ಕೈಗೆ ಕೊಡುತ್ತಿದ್ದಂತೆ ಅಜ್ಜಿಯ ಮೊಗದಲ್ಲಿ ನಗು ಮೂಡಿದೆ. ಮೊಮ್ಮಗಳು ಪಿಜ್ಜಾ ಆರ್ಡರ್ ಮಾಡಿ ಸರ್ಪ್ರೈಸ್ ಕೊಟ್ಟಿರುವುದಕ್ಕೆ ಅಜ್ಜಿ ಖುಷಿಯಾಗಿದ್ದಾರೆ. ಈ ಬಾಕ್ಸ್ ಓಪನ್ ಮಾಡಿ ಬಾಯಿ ಚಪ್ಪರಿಸಿಕೊಂಡು ಈ ವೃದ್ಧ ಮಹಿಳೆ ಪಿಜ್ಜಾ ತಿನ್ನೋದನ್ನು ನೀವು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ
ಇದನ್ನೂ ಓದಿ: Video: ಮಗಳ ಹುಟ್ಟುಹಬ್ಬಕ್ಕೆ ಟ್ರಕ್ ಒಳಗೆ ಅಲಂಕರಿಸಿ ಸರ್ಪ್ರೈಸ್ ನೀಡಿದ ತಂದೆ
ಈ ವಿಡಿಯೋ ಇದುವರೆಗೆ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಅಜ್ಜಿ ತುಂಬಾ ಕ್ಯೂಟ್ ಆಗಿದ್ದಾರೆ ಎಂದಿದ್ದಾರೆ. ಮತ್ತೊಬ್ಬರು, ಅಜ್ಜಿಯ ನಗು ನನ್ನ ಹೃದಯವನ್ನೇ ಕರಗಿಸಿತು ಎಂದು ಹೇಳಿದ್ದಾರೆ. ಇನ್ನೊಬ್ಬರು, ಅಜ್ಜಿ ಎಂಜಾಯ್ ಮಾಡಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
