Video: ಭಾರತ Vs ಕೆನಡಾ; ಕಾರ್ಪೊರೇಟ್ ಕೆಲಸದ ಸಂಸ್ಕೃತಿಯನ್ನು ಹೋಲಿಸಿದ ಭಾರತೀಯ ಮಹಿಳೆ – Kannada News | Indian woman admires work culture in Canada

ಕೈಯಲ್ಲೊಂದು ಉದ್ಯೋಗ (employment) ಇದ್ರೆ ಮಾತ್ರ ಗೌರವ. ಆದರೆ ಕಾರ್ಪೋರೇಟ್, ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಗ್ಯಾರಂಟಿ ಇರಲ್ಲ. ಯಾವಾಗ ಬೇಕಾದ್ರೂ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಬಹುದು. ಆದರೆ ಕೆನಾಡದಲ್ಲಿ (Canada) ನೆಲೆಸಿರುವ ಭಾರತೀಯ ಮಹಿಳೆಯೊಬ್ಬರು ಭಾರತ ಹಾಗೂ ಕೆನಡಾದ ಕಾರ್ಪೊರೇಟ್ ಕೆಲಸದ ಸಂಸ್ಕೃತಿಯನ್ನು ಹೋಲಿಸಿ ಮಾತನಾಡಿದ್ದಾರೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

@unfiltered.anshikaa ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಅನ್ಶಿಕಾರವರು ನಂಬಿಕೆ ಆಧಾರಿತ ಕಚೇರಿ ವಾತಾವರಣ ಇಲ್ಲಿದೆ. ಆದರೆ, ತಾನು ಭಾರತದಲ್ಲಿದ್ದಾಗ ಕಾರ್ಪೊರೇಟ್ ಕೆಲಸ ಮಾಡಲು ಇಷ್ಟಪಡುತ್ತಿರಲಿಲ್ಲ. ಕೆನಡಾಕ್ಕೆ ತೆರಳಿದ ನಂತರ ತನ್ನ ಅಭಿಪ್ರಾಯ ಬದಲಾಯಿತು. ಎಲ್ಲರೂ ಬೆಳಿಗ್ಗೆ 9 ಗಂಟೆಗೆ ಕಚೇರಿಗೆ ಬರುತ್ತಾರೆ. ನಾವೆಲ್ಲರೂ ಮಾಡುವ ಮೊದಲ ಕೆಲಸವೆಂದರೆ ಒಂದು ಕಪ್ ಕಾಫಿ ಕುಡಿಯುವುದು. ಸಮಯಕ್ಕೆ ಸರಿಯಾಗಿ ಪಂಚ್ ಮಾಡುವುದಿಲ್ಲ. ಆದ್ದರಿಂದ ನೀವು 10 ನಿಮಿಷ, 15 ನಿಮಿಷ ತಡವಾದರೂ, ಯಾರೂ ನಿಮ್ಮನ್ನು ಪ್ರಶ್ನಿಸುವುದಿಲ್ಲ. ತಡವಾದರೆ ನೆಪಗಳನ್ನು ನೀಡಬೇಕಾಗಿಲ್ಲ ಎಂದು ಹೇಳಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ದಿನನಿತ್ಯದ ಕೆಲಸಗಳನ್ನು ಚರ್ಚಿಸಲು ಟೀಮ್ ಗಳು ಬೆಳಿಗ್ಗೆ 10 ಗಂಟೆಗೆ ಸಭೆ ನಡೆಸುತ್ತವೆ. ಮನಸ್ಥಿತಿಯನ್ನು ಹಗುರಗೊಳಿಸಲು ರಸಪ್ರಶ್ನೆಗಳು ಮತ್ತು ಸಾಂದರ್ಭಿಕ ಸಂಭಾಷಣೆಗಳು ಇರುತ್ತದೆ. ಮ್ಯಾನೇಜರ್ ನಿಮ್ಮ್ ಡೆಸ್ಕ್ ಸುತ್ತಲೂ ಸುಳಿದಾಡುವುದಿಲ್ಲ ಅಥವಾ ಉದ್ಯೋಗಿಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವುದಿಲ್ಲ. ಅವರು ನಿಮ್ಮನ್ನು ನಂಬುತ್ತಾರೆ. ನೀವು ವಯಸ್ಕರೆಂದು ಅವರಿಗೆ ತಿಳಿದಿದೆ. ನಿಮಗೆ ಯಾವುದೇ ಕೆಲಸವನ್ನು ವಹಿಸಿಕೊಟ್ಟರೂ, ನೀವು ಅದನ್ನು ನಿರ್ದಿಷ್ಟ ಸಮಯದೊಳಗೆ ಪೂರ್ಣಗೊಳಿಸಬೇಕು. ಉದ್ಯೋಗಿಗಳ ಸಣ್ಣ ನಿದ್ರೆಯನ್ನು ಸಹ ಮಾಡಬಹುದು. ಇಲ್ಲಿನ ವಾತಾವರಣ ತುಂಬಾ ಹಗುರವಾಗಿದೆ. ಕಾರ್ಪೊರೇಟ್ ಎಲ್ಲೆಡೆ ವಿಷಕಾರಿಯಲ್ಲ ಎಂದು ನಾನು ಭಾವಿಸುತ್ತೇನೆ ಎಂದು ವಿವರಿಸಿರುವುದನ್ನು ನೋಡಬಹುದು.

ಇದನ್ನೂ ಓದಿ: 2.9 ಕೋಟಿ ರೂ ಸಂಬಳದ ಉದ್ಯೋಗ ತೊರೆದು ಅಮೆರಿಕದಿಂದ ಭಾರತಕ್ಕೆ ಬರಲು ನಿರ್ಧರಿಸಿದ ಅನಿವಾಸಿ ಭಾರತೀಯ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ದಯವಿಟ್ಟು ಒಂದೇ ಎಂದು ಭಾವಿಸಬೇಡಿ. ಅದು ಕಂಪನಿ ಹಾಗೂ ಅಲ್ಲಿನ ಮ್ಯಾನೇಜರ್ ರನ್ನು ಅವಲಂಬಿಸಿರುತ್ತದೆ ಎಂದಿದ್ದಾರೆ. ಇನ್ನೊಬ್ಬರು, ದೇಸಿ ಅಲ್ಲದ ಮ್ಯಾನೇಜರ್ ನಿಜವಾಗಿಯೂ ಒಳ್ಳೆಯವರಾಗಿರುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಕಳೆದ 10 ವರ್ಷಗಳಿಂದ ಕಾರ್ಪೊರೇಟ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ, ನಾನು ಇದನ್ನು ಬೆಂಬಲಿಸಬಲ್ಲೆ. ದೇಸಿ ಮ್ಯಾನೇಜರನ್ನು ಹೊಂದಿರುವ ಕಂಪನಿಗಳನ್ನು ಯಾವುದೇ ಬೆಲೆ ತೆತ್ತಾದರೂ ತಪ್ಪಿಸುವುದು ಮುಖ್ಯ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *