Video: ವೆಡ್ಡಿಂಗ್ ಆನಿವರ್ಸರಿ ದಿನ ಬೈಕ್ ಗಿಫ್ಟ್ ಕೊಟ್ಟ ಮಡದಿ, ಸರ್ಪ್ರೈಸ್‌ಗೆ ಪತಿ ಭಾವುಕ – Kannada News | Husband moved to tears by the surprise gift his wife gave for their wedding anniversary.

ಗಂಡ ಹೆಂಡತಿ (husband and wife) ನಡುವೆ ಅನ್ಯೋನತೆ ಬಹಳ ಮುಖ್ಯ. ಹೌದು, ಗಂಡ ಹೆಂಡತಿಗೆ ಬೆಂಬಲವಾಗಿ ನಿಂತರೆ ಅದಕ್ಕಿಂತ ಅದೃಷ್ಟ ಬೇರೊಂದಿಲ್ಲ. ಇತ್ತ ಪತ್ನಿಯೂ ಆತನ ಸಣ್ಣ ಪುಟ್ಟ ಕನಸುಗಳನ್ನು ನೆರವೇರಿಸುತ್ತಾಳೆ. ಆತನ ಜವಾಬ್ದಾರಿಗಳಿಗೆ ತಾನು ಹೆಗಲು ಕೊಡುತ್ತಾಳೆ. ಇದೀಗ ಮದುವೆ ವಾರ್ಷಿಕೋತ್ಸವದ ದಿನವೇ ಪತ್ನಿಯೂ ಪತಿಯ ಮೊಗದಲ್ಲಿ ನಗು ಮೂಡಿಸಿದ್ದಾಳೆ. ವಿಶೇಷ ದಿನದಂದು ಪತಿಗೆ ಬೈಕನ್ನು ಸರ್ಪ್ರೈಸ್ ಗಿಫ್ಟ್ ಆಗಿ ನೀಡಿದ್ದಾಳೆ. ಶೋರೂಮ್‌ನಲ್ಲಿ ಬೈಕ್ ಖರೀದಿ ಮಾಡುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ ಖುಷಿಯ ಕ್ಷಣವನ್ನು ಕಣ್ತುಂಬಿಸಿಕೊಂಡಿದ್ದಾರೆ.

ಹಿಂದೂ ಪ್ಲಸ್‌ (Hindupluse) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ಮದುವೆ ವಾರ್ಷಿಕೋತ್ಸವದ ದಿನ ಪತ್ನಿಯೂ ಪತಿಗೆ ಸರ್ಪ್ರೈಸ್ ನೀಡಿರುವುದನ್ನು ಕಾಣಬಹುದು. ಪತಿಯನ್ನು ಶೋ ರೂಮ್‌ಗೆ ಕರೆದುಕೊಂಡು ಬಂದಿದ್ದಾಳೆ. ಈ ದಂಪತಿಯ ಜತೆಗೆ ಆತ್ಮೀಯರು ಕೂಡ ಬಂದಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಇದೇ ವೇಳೆ ಸಿಬ್ಬಂದಿಯೊಬ್ಬರು ಈ ವ್ಯಕ್ತಿಗೆ ಬೈಕ್ ಕೀಯನ್ನು ಕೈಗೆ ನೀಡುತ್ತಿದ್ದಂತೆ ಹಿಂದೇಟು ಹಾಕಿದ್ದಾನೆ. ಕೊನೆಗೆ ಪತ್ನಿಯೇ ಬೈಕ್ ಕೀ ಹಿಡಿದುಕೊಳ್ಳುವಂತೆ ಹೇಳಿ ಸರ್ಪ್ರೈಸ್ ನೀಡಿದ್ದಾಳೆ. ಈ ಸರ್ಪ್ರೈಸ್ ಗಿಫ್ಟ್‌ ನೋಡಿ ಪತಿಯೂ ಭಾವುಕನಾಗಿರುವುದನ್ನು ಕಾಣಬಹುದು.

ಇದನ್ನೂ ಓದಿ: ಈ ಯುವಕನನ್ನು ವರಿಸಲು ಅಂದ ಚಂದ ಇದ್ರೆ ಸಾಲಲ್ಲ, ಹುಡ್ಗಿಯಲ್ಲಿ ಈ ಗುಣಗಳಿರಲೇ ಬೇಕು

ಈ ವಿಡಿಯೋ 22 ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಪತಿಯ ನೈಜ ಪ್ರೀತಿ ಆತನ ಕಣ್ಣಲ್ಲಿ ನೀರು ತರಿಸಿದೆ ಎಂದಿದ್ದಾರೆ. ಇನ್ನೊಬ್ಬರು, ಇಂತಹ ಪತ್ನಿ ಸಿಕ್ಕರೆ ಜೀವನದಲ್ಲಿ ಗೆದ್ದಂತೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಡೌನ್ ಪೇಮೆಂಟ್ ಆಗಿದೆ, ಇಎಂಐ ಕಟ್ಟೋರು ಯಾರು ಎಂದು ತಮಾಷೆ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *