ಕಾರ್ಪೋರೇಟ್ ಹಾಗೂ ಖಾಸಗಿ ಕಂಪನಿಯಲ್ಲಿ (private company) ಕೆಲಸಮಾಡೋ ಉದ್ಯೋಗಿಗಳನ್ನು ಯಾವಾಗ ಬೇಕಾದ್ರೂ ವಜಾಗೊಳಿಸಬಹುದು. ಹೀಗಾದಾಗ ಕೆಲಸ ಕಳೆದುಕೊಂಡ ನೋವಿನ ನಡುವೆ ಮುಂದೇನು ಎನ್ನುವ ಪ್ರಶ್ನೆಯೊಂದು ಕಾಡುವುದು ಸಹಜ. ಆದರೆ ಇಲ್ಲೊಬ್ಬ ಮೈಕ್ ಸಾಫ್ಟ್ ಉದ್ಯೋಗಿಯನ್ನು ಕೆಲಸದಿಂದ ತೆಗೆದುಹಾಕಿದ್ದು ಸ್ವಲ್ಪ ಕೂಡ ಬೇಜಾರ್ ಇಲ್ಲ. ಹೌದು, ಮೈಕ್ರೋಸಾಫ್ಟ್ ಉದ್ಯೋಗಿಯೊಬ್ಬರು ತಾವು ಕೆಲಸದಿಂದ ತೆಗೆದುಹಾಕಲ್ಪಡುವ ನಿರೀಕ್ಷೆಯಿತ್ತು. ಅದರಿಂದ ನಿಜವಾಗಿಯೂ ನಿರಾಳರಾಗಿದ್ದೆ. ಕೆಲಸ ಹೋಗಿದ್ದಕ್ಕೆ ನನಗೆ ಸಂತೋಷವಾಗಿದೆ ಎಂದು ಪೋಸ್ಟ್‌ನಲ್ಲಿ ಹೇಳಿದ್ದಾರೆ. ಈ ಪೋಸ್ಟ್ ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ.
ವೃತ್ತಿಪರ ಸಮುದಾಯ ಬ್ಲೈಂಡ್‌ನಲ್ಲಿ(Tech Industry) ಹಂಚಿಕೊಂಡ ಪೋಸ್ಟ್‌ಗೆ ಮೈಕ್ರೋಸಾಫ್ಟ್‌ನಿಂದ ನನ್ನನ್ನು ವಜಾಗೊಳಿಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದು ಶೀರ್ಷಿಕೆ ನೀಡಲಾಗಿದೆ. ಮೈಕ್ರೋಸಾಫ್ಟ್ ಉದ್ಯೋಗಿಯೊಬ್ಬರು ತಾವು ಕೆಲಸದಿಂದ ತೆಗೆದುಹಾಕಲ್ಪಡುವ ನಿರೀಕ್ಷೆಯಿತ್ತು, ಹೀಗಾಗಿ ಯಾವುದೇ ಟೆನ್ಶನ್ ಇಲ್ಲದೆ ನಿರಾಳವಾಗಿದ್ದೇ. ಈ ಉದ್ಯೋಗ ಕಡಿತಕ್ಕೆ ಮುಂಚಿತವಾಗಿ ಸ್ವಾಭಾವಿಕವಾಗಿ ಉಂಟಾಗುವ ಆತಂಕ ಹಾಗೂ ಚಿಂತೆಯಿಂದ ಮುಕ್ತಿ ಪಡೆದಿದ್ದಕ್ಕೆ ಸಂತೋಷವಾಗಿದೆ ಎಂದು ಉಲ್ಲೇಖಿಸಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ
</>
ಕೆಲಸದಲ್ಲಿ ತನ್ನನ್ನು ಬದಿಗಿಡಲಾಗುತ್ತಿದೆ ಎಂಬ ಲಕ್ಷಣಗಳು ಕಾಣುತ್ತಿದ್ದಂತೆ ಈ ಪ್ರಾಜೆಕ್ಟ್‌ಗಳಿಂದ ಸದ್ದಿಲ್ಲದೆ ದೂರ ಸರಿಸಲಾಗುತ್ತಿರುವುದು ಹಾಗೂ ತನ್ನ ವ್ಯವಸ್ಥಾಪಕರಿಂದ ಕಡಿಮೆ ಪ್ರತಿಕ್ರಿಯೆಯನ್ನು ಪಡೆಯುತ್ತಿರುವುದು ಸೇರಿದಂತೆ, ಆ ಉದ್ಯೋಗಿ ಈ ಸುದ್ದಿಯನ್ನು ನಿರೀಕ್ಷಿಸುತ್ತಿದ್ದೆ. ಕೆಲಸ ಕಳೆದುಕೊಳ್ಳುವುದು ಸೂಕ್ತ ಸನ್ನಿವೇಶವಲ್ಲ ಎಂದು ಒಪ್ಪಿಕೊಂಡೆ. ಕೆಲಸದಿಂದ ತೆಗೆದು ಹಾಕಲಾಗುತ್ತದೆ ಎನ್ನುವ ದೀರ್ಘಕಾಲದ ಆತಂಕವು ಹೆಚ್ಚು ಬಳಲಿಕೆ ಉಂಟು ಮಾಡುತ್ತದೆ ಎಂದು ಹೇಳಿದ್ದಾರೆ.
ಕೆಲವು ಕಾರಣಗಳೆಂದರೆ, ನನ್ನನ್ನು ನನ್ನ ಪ್ರಾಜೆಕ್ಟ್ ಗೆ ಸದ್ದಿಲ್ಲದೆ ಮರು ನಿಯೋಜಿಸಲಾಗಿದೆ. ಸಹೋದ್ಯೋಗಿಯೊಬ್ಬರು ಸಹಾಯಕ್ಕಾಗಿ ಬಂದರು. ಆದರೆ ಇದರ ಹಿಂದಿನ ಕಾರಣ ಏನೆಂದು ಅವರಿಗೂ ತಿಳಿಯುತ್ತಿಲ್ಲ. ನನ್ನ ಮ್ಯಾನೇಜರ್ ನನಗೆ ಕಡಿಮೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ನನಗೆ ನಿರಾಳವೆನಿಸುತ್ತದೆ, ಕೆಲಸ ಕಳೆದುಕೊಳ್ಳುವುದು ಖುಷಿ ಕೊಡುತ್ತದೆ ಎಂಬ ಕಾರಣಕ್ಕಲ್ಲ. ಮಾರುಕಟ್ಟೆ ಚೆನ್ನಾಗಿದೆ ಎಂಬ ಕಾರಣಕ್ಕಲ್ಲ. ನಾನು ಎಲ್ಲವನ್ನೂ ಅರ್ಥಮಾಡಿಕೊಂಡಿದ್ದೇನೆ ಎಂಬ ಕಾರಣಕ್ಕಲ್ಲ. ಅನಿಶ್ಚಿತತೆ ಕೊನೆಗೊಳ್ಳುತ್ತಿರುವುದರಿಂದ ನನಗೆ ನಿರಾಳತೆ ಉಂಟಾಗಿದೆ. ಕೆಲಸ ಹೋಗುತ್ತದೆ ಎಂಬ ಭಯ, ಅನಿಶ್ಚಿತತೆಯಿಂದ ತುಂಬಿದ ಪಾತ್ರದಲ್ಲಿ ಉಳಿಯುವುದಕ್ಕಿಂತ ಕಡಿಮೆ ಭಯಾನಕವೆನಿಸುತ್ತದೆ. ಆದರೆ ಇದೀಗ ಮತ್ತೆ ಹೊಸ ವೃತ್ತಿ ಜೀವನ ಪ್ರಾರಂಭಿಸಲು ಒಂದು ಅವಕಾಶ ಇದಾಗಿದೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಕೈ ತುಂಬಾ ಸಂಪಾದನೆಯಿದ್ರೂ ಕೆಲಸದಲ್ಲಿ ಖುಷಿಯಿಲ್ಲ; ಭ್ರಮನಿರಸ ಅನುಭವ ಬಿಚ್ಚಿಟ್ಟ ವ್ಯಕ್ತಿ
ಈ ಪೋಸ್ಟ್ ವೀಕ್ಷಣೆಗಳನ್ನು ಪಡೆದುಕೊಳ್ಳುತ್ತಿದ್ದಂತೆ ಒಬ್ಬ ಬಳಕೆದಾರ, ಎಲ್ಲವನ್ನು ಸ್ವೀಕರಿಸುವ ರೀತಿಯಿಂದ ನೀವು ಬೆಳೆಯುತ್ತೀರಿ ಎಂದಿದ್ದಾರೆ. ಇನ್ನೊಬ್ಬರು, ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಬೇರೆ ಉದ್ಯೋಗ ಹುಡುಕುವತ್ತ ಗಮನ ಕೊಡಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಖಾಸಗಿ ಕಂಪನಿಗಳಲ್ಲಿ ವಜಾಗೊಳಿಸುವಿಕೆ ಸಾಮಾನ್ಯ, ಎಲ್ಲವನ್ನು ಸಮಾನ ಮನಸ್ಸಿನಿಂದ ಸ್ವೀಕರಿಸಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
