ಜಪಾನ್, ಜುಲೈ 09: ಈಗಿನ ಕಾಲದಲ್ಲಿ ನಮ್ಮವರನ್ನೇ ನಮ್ಗೆ ನಂಬೋದು ಕಷ್ಟ. ಹೀಗಾಗಿ ಮನೆ, ಅಂಗಡಿಗಳ (shops) ಭದ್ರತೆಗಾಗಿ ಸಿಸಿಟಿವಿಗಳನ್ನು ಅಳವಡಿಸಿರುತ್ತಾರೆ. ಆದರೆ ಜಪಾನಿನ (Japan) ಹಳ್ಳಿಗಳಲ್ಲಿ ಮಾತ್ರ ವ್ಯಾಪಾರ ತುಂಬಾನೇ ವಿಭಿನ್ನ. ನಂಬಿಕೆ ಹಾಗೂ ಪ್ರಾಮಾಣಿಕತೆಯ ಮೇಲೆ ಇಲ್ಲಿ ವ್ಯಾಪಾರ ನಡೆಯುತ್ತದೆ. ಅಂಗಡಿಗಳಲ್ಲಿ ಓನರ್ ಇರಲ್ಲ. ಹೀಗಾಗಿ ಇಲ್ಲಿ ಖರೀದಿದಾರರು ತಮಗೆ ಬೇಕಾದ ತಾವೇ ವಸ್ತುಗಳನ್ನು ತೆಗೆದುಕೊಳ್ಳುತ್ತಾರೆ. ವಸ್ತುವಿನ ನಿಗದಿತ ಬೆಲೆಯನ್ನು ಅಲ್ಲೇ ಇಟ್ಟಿರುವ ಡಬ್ಬಿಯಲ್ಲಿ ಹಾಕುತ್ತಾರೆ, ಇಲ್ಲವಾದರೆ ಡಿಜಿಟಲ್ ಪಾವತಿ ಮಾಡುತ್ತಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ.
ಜಪಾನ್ ಫ್ಯಾಕ್ಟ್ ಇನ್ ಕನ್ನಡ (japanfacts_in_kannada) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಡಿಜಿಟಲ್ ಕ್ರಿಯೇಟರ್ ಪಲ್ಲವಿ ಎಸ್ ಜಪಾನಿನ ಹಳ್ಳಿಗಳಲ್ಲಿನ ಪ್ರಾಮಾಣಿಕ ವ್ಯಾಪಾರ ಪದ್ಧತಿಯ ಬಗ್ಗೆ ವಿವರಿಸಿದ್ದಾರೆ. ಇಲ್ಲಿ ಅಂಗಡಿಗಳಿಗೆ ಓನರ್ ಇರಲ್ಲ. ಆದರೆ ರೈತರು ತಾವು ಬೆಳೆದ ತರಕಾರಿಗಳನ್ನು ಪುಟ್ಟದಾದ ಸ್ಟಾಲ್ನಂತೆ ಇರುವ ಅಂಗಡಿಯನ್ನು ಕಾಣಬಹುದು. ಅಲ್ಲೇ ತರಕಾರಿ ಸೇರಿದಂತೆ ವಸ್ತುವಿನ ಬೆಲೆ ಬರೆದಿರುತ್ತಾರೆ. ಖರೀದಿದಾರರು ಇಂತಿಷ್ಟು ಹಣವನ್ನು ಡಬ್ಬಿಗೆ ಹಾಕುವುದು ಅಥವಾ ಡಿಜಿಟಲ್ ಪಾವತಿ ಮಾಡುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ
ಇದನ್ನೂ ಓದಿ: ಪ್ರೀತಿ ಕುರುಡು ಅನ್ನೋದು ಇದಕ್ಕೇನಾ? 72 ವರ್ಷದ ವೃದ್ಧೆ- 22ರ ಯುವಕನ ಲವ್ ಸ್ಟೋರಿ ಇದು!
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಸ್ಮಾರ್ಟ್ ಸಿಸ್ಟಮ್, ಇಂತಹ ಜನರಿಂದ ನಂಬಿಕೆ, ಪ್ರಾಮಾಣಿಕತೆ ಉಳಿದಿದೆ ಎಂದಿದ್ದಾರೆ. ಇನ್ನೊಬ್ಬರು, ಇದೆಲ್ಲಾ ಯಾವತ್ತೂ ನಮ್ಮ ದೇಶದಲ್ಲಿ ಸಾಧ್ಯವಿಲ್ಲ ಎಂದೆನಿಸುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಭಾರತದಲ್ಲಿ ಎತ್ಕೊಂಡು ಹೋಗ್ತಾರೆ, ದುಡ್ಡು ಮಾತ್ರ ಕೊಡಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ