ಮಂಗಳೂರು, ಜುಲೈ 06: ಅಪರಾಧ ಕೃತ್ಯ ಮರುಕಳಿಸಿದರೆ ಕೈ, ಕಾಲಿಗೆ ಗುಂಡು ಹೊಡೆಯಿರಿ ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಸೂಚನೆ ನೀಡಿದ್ದಾರೆ. ಹಿಂದಿನ ಆಯುಕ್ತ ಸಂದೀಪ್ ಪಾಟೀಲ್ ಸುಮಾರು ಗುಂಡು ಹೊಡೆದಿದ್ದರು. ಹೀಗಾಗಿ ಆಗ ಕ್ರಿಮಿನಲ್ಸ್, ರೌಡಿಶೀಟರ್ಗಳು ಕ್ರೈಂ ಮಾಡಲು ಹೆದರುತ್ತಿದ್ದರು. ಹಾಗೆ ಮಾಡಲು ಕಾನೂನು ಅಡ್ಡಿ ಬರುತ್ತೆ, ಆದ್ರೆ ಕ್ರೈಂ ಕಂಟ್ರೋಲ್ ಆಗುತ್ತೆ ಎಂದು ಮಂಗಳೂರಿನಲ್ಲಿ ನಿನ್ನೆ ನಡೆದ ಸಭೆಯಲ್ಲಿ ಸಚಿವ ಖಾದರ್ ಸೂಚಿಸಿದ್ದರು. ಸಚಿವರ ಈ ಹೇಳಿಕೆಯೀಗ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
