ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ಟಿಕೆಟ್ ದರ ಕೇಳಿದ್ರೆ ದಂಗಾಗುವುದು ಗ್ಯಾರೆಂಟಿ! – Kannada News | FIFA World Cup 2026 Final Tickets Spark Price Records

ಜಾಗತಿಕ ಕ್ರೀಡಾ ಇತಿಹಾಸದಲ್ಲೇ ಹಿಂದೆಂದೂ ಕಾಣದ ರೀತಿಯಲ್ಲಿ 2026ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ಟಿಕೆಟ್ ದರಗಳು ಗಗನಕ್ಕೇರಿವೆ. ಅಮೆರಿಕದ ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ಭಾನುವಾರ (ಜುಲೈ 19) ನಡೆಯಲಿರುವ ಅರ್ಜೆಂಟೀನಾ ಮತ್ತು ಸ್ಪೇನ್ ನಡುವಿನ ಈ ಮಹಾಸಮರ ಕ್ರೀಡಾ ಲೋಕದ ಅತ್ಯಂತ ದುಬಾರಿ ಈವೆಂಟ್ ಆಗಿ ಹೊರಹೊಮ್ಮಿದೆ. ಲಿಯೋನೆಲ್ ಮೆಸ್ಸಿ ಮತ್ತು ಸ್ಪೇನ್‌ನ ಉದಯೋನ್ಮುಖ ತಾರೆ ಲಾಮಿನ್ ಯಮಾಲ್ ನಡುವಿನ ಈ ಪಂದ್ಯವನ್ನು ಕಣ್ಣುಂಬಿಕೊಳ್ಳಲು ಅಭಿಮಾನಿಗಳು ಕೋಟಿ ಕೋಟಿ ಖರ್ಚು ಮಾಡಲು ಸಿದ್ಧರಾಗಿದ್ದಾರೆ.

ಫಿಫಾ ಟಿಕೆಟ್​ಗಳ ಮಾರಾಟ ವಿವರ:

  • ಅತ್ಯಂತ ಕನಿಷ್ಠ ದರ: ಕ್ರೀಡಾಂಗಣದ ಅತ್ಯಂತ ಮೇಲಿನ ಸ್ಟ್ಯಾಂಡ್‌ನ (300 ಲೆವೆಲ್) ಒಂದು ಸೀಟಿನ ಬೆಲೆ $6,943 ರಿಂದ $7,600 ಕ್ಕೆ (ಸುಮಾರು ₹5.8 ಲಕ್ಷದಿಂದ ₹6.3 ಲಕ್ಷ) ಮಾರಾಟವಾಗಿದೆ.
  • ಸರಾಸರಿ ಟಿಕೆಟ್ ಬೆಲೆ: ಅಭಿಮಾನಿಗಳು ಪಂದ್ಯ ವೀಕ್ಷಿಸಲು ಖರೀದಿಸಿರುವ ಸರಾಸರಿ ಟಿಕೆಟ್ ಬೆಲೆ ಬರೋಬ್ಬರಿ $11,327 (ಸುಮಾರು ₹9.4 ಲಕ್ಷ) ಆಗಿದೆ. ಇದು ವಿಶ್ವಕಪ್ ಇತಿಹಾಸದಲ್ಲೇ ಗರಿಷ್ಠ ಸರಾಸರಿಯಾಗಿದೆ.
  • ಪ್ರೀಮಿಯಂ/ವಿಐಪಿ ಟಿಕೆಟ್: ಮೈದಾನಕ್ಕೆ ಅತ್ಯಂತ ಹತ್ತಿರವಿರುವ ಫ್ರಂಟ್ ಸೆಕ್ಷನ್‌ನ (115A) ಒಂದು ಟಿಕೆಟ್ $28,479 (ಸುಮಾರು ₹23.7 ಲಕ್ಷ) ಗೆ ಮಾರಾಟವಾಗಿದೆ. ಕೆಲವು ವಿಐಪಿ ಟ್ರೋಫಿ ಲಾಂಜ್ ಪ್ಯಾಕೇಜ್‌ಗಳ ಬೆಲೆ ₹30 ಲಕ್ಷದ ಗಡಿ ದಾಟಿದೆ.

ಬ್ಲ್ಯಾಕ್ ಮಾರ್ಕೆಟ್ ಹಾಗೂ ಅಧಿಕೃತ ರಿಸೇಲ್ ವೆಬ್‌ಸೈಟ್‌ಗಳಲ್ಲಿ (ಉದಾಹರಣೆಗೆ TickPick) ಟಿಕೆಟ್ ಬೆಲೆಗಳು ಸೃಷ್ಟಿಸಿರುವ ಹೊಸ ದಾಖಲೆಯ ವಿವರಗಳು ಹೀಗಿವೆ.

ಟಿಕೆಟ್ ವಿಭಾಗ USD INR
ಅಧಿಕೃತ ಆರಂಭಿಕ ಹಂತದ ಟಿಕೆಟ್ $2,030 – $7,600 ₹1.95 ಲಕ್ಷ – ₹6.3 ಲಕ್ಷ
ಸ್ಟ್ಯಾಂಡರ್ಡ್ ಟಾಪ್-ಟೈರ್ $10,990 ₹10.58 ಲಕ್ಷ
ಸರಾಸರಿ ಮರುಮಾರಾಟ ಖರೀದಿ ಬೆಲೆ $11,327 ₹10.90 ಲಕ್ಷ
 ಆನ್-ಫೀಲ್ಡ್ ಹಾಸ್ಪಿಟಾಲಿಟಿ (12 ಜನರ ಖಾಸಗಿ ಬಾಕ್ಸ್) $1,000,000+ ₹9.62 ಕೋಟಿ+
ಗರಿಷ್ಠ ಮರುಮಾರಾಟ ಮಾರುಕಟ್ಟೆ ದರ $2,300,000 ₹22.14 ಕೋಟಿ

22 ಕೋಟಿ ರೂ.!

ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನ ಲೋವರ್ ಡೆಕ್‌ನ ಬ್ಲಾಕ್ 124, ರೋ 45 ರಲ್ಲಿರುವ (Block 124, Row 45) ನಾಲ್ಕು ಪ್ರೀಮಿಯಂ ಟಿಕೆಟ್‌ಗಳನ್ನು ತಲಾ $2.3 ಮಿಲಿಯನ್ ಅಂದರೆ ಸುಮಾರು ₹21.68 ಕೋಟಿಯಿಂದ ₹22.14 ಕೋಟಿ ಬೆಲೆಗೆ ಫಿಫಾ ರಿಸೇಲ್ ಮಾರುಕಟ್ಟೆಯಲ್ಲಿ ಲಿಸ್ಟ್ ಮಾಡಲಾಗಿದೆ.

ಫಿಫಾ ರಿಸೇಲ್ ಮಾರುಕಟ್ಟೆಯಲ್ಲಿ ಬರೋಬ್ಬರಿ ₹22.14 ಕೋಟಿಗೆ (ಸುಮಾರು $2.3 ಮಿಲಿಯನ್) ಲಿಸ್ಟ್ ಆಗಿರುವ ಆ ಪ್ರೀಮಿಯಂ ಟಿಕೆಟ್‌ಗಳ ಅಸಲಿ ಮೂಲ ಬೆಲೆ ಕೇವಲ ₹5.36 ಲಕ್ಷದಿಂದ ₹10.18 ಲಕ್ಷ ($5,785 ರಿಂದ $10,990) ಆಗಿತ್ತು.

ಇದೀಗ ಸ್ಟೇಡಿಯಂನ ಲೋವರ್ ಡೆಕ್‌ನ ಬ್ಲಾಕ್ 124, ರೋ 45 ರಲ್ಲಿರುವ (Block 124, Row 45) ಇಂತಹ ನಾಲ್ಕು ಪ್ರೀಮಿಯಂ ಟಿಕೆಟ್‌ಗಳನ್ನು ಒಟ್ಟಾರೆಯಾಗಿ ಬರೋಬ್ಬರಿ ₹88 ಕೋಟಿ ರೂಪಾಯಿಗೆ ಮರುಮಾರಾಟಕ್ಕಿಡಲಾಗಿದೆ.

ಟಿಕೆಟ್ ದುಬಾರಿಯಾಗಲು ಕಾರಣವೇನು?

39 ವರ್ಷದ ಲಿಯೋನೆಲ್ ಮೆಸ್ಸಿ ಅವರ ವೃತ್ತಿಜೀವನದ ಕೊನೆಯ ಅಂತರರಾಷ್ಟ್ರೀಯ ಪಂದ್ಯ ಇದಾಗುವ ಸಾಧ್ಯತೆ ಇರುವುದರಿಂದ, ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಜಗತ್ತಿನಾದ್ಯಂತ ಜನರು ಮುಗಿಬಿದ್ದಿದ್ದಾರೆ.

ಹಾಗೆಯೇ ಫುಟ್‌ಬಾಲ್ ಲೋಕದ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಮೆಸ್ಸಿ ಒಂದು ಕಡೆಯಿದ್ದರೆ, ಮತ್ತೊಂದು ಕಡೆ ಸ್ಪೇನ್‌ನ 19 ವರ್ಷದ ಹೊಸ ಸೆನ್ಸೇಷನ್ ಲಾಮಿನ್ ಯಮಾಲ್ ಇದ್ದಾರೆ. ಇದು ‘ಸೌತ್ ಅಮೆರಿಕ vs ಯುರೋಪ್’ ಕದನ ಮಾತ್ರವಲ್ಲದೆ, ಇಬ್ಬರು ತಲೆಮಾರುಗಳ ಶ್ರೇಷ್ಠ ಆಟಗಾರರ ನಡುವಿನ ಹೋರಾಟವಾಗಿ ಮಾರ್ಪಟ್ಟಿದೆ.

ಮತ್ತೊಂದೆಡೆ, ಬೇಡಿಕೆಗೆ ಅನುಗುಣವಾಗಿ ಟಿಕೆಟ್ ದರಗಳನ್ನು ಹೆಚ್ಚಿಸುವ ಫಿಫಾದ ಹೊಸ ತಂತ್ರಜ್ಞಾನ ವ್ಯವಸ್ಥೆಯಿಂದಾಗಿ ರಿಸೇಲ್ ಮಾರುಕಟ್ಟೆಯಲ್ಲಿ ಬೆಲೆಗಳು ರಾಕೆಟ್ ವೇಗದಲ್ಲಿ ಜಿಗಿದಿವೆ.

ಇದನ್ನೂ ಓದಿ: T20 World Cup 2028: ಟಿ20 ವಿಶ್ವಕಪ್​ಗೆ 12 ತಂಡಗಳು ನೇರ ಆಯ್ಕೆ

ಫೈನಲ್ ಪಂದ್ಯ ಯಾವಾಗ?

ಫಿಫಾ ವಿಶ್ವಕಪ್​ನ ಫೈನಲ್​ ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ, ಜುಲೈ 20ರ ಮಧ್ಯರಾತ್ರಿ 12:30ಕ್ಕೆ ಆರಂಭವಾಗಲಿದೆ. ಅರ್ಜೆಂಟೀನಾ ಸತತ ಎರಡನೇ ಬಾರಿಗೆ ಟ್ರೋಫಿ ಗೆಲ್ಲಲು ಸಜ್ಜಾಗಿದ್ದರೆ, ಸ್ಪೇನ್ 16 ವರ್ಷಗಳ ನಂತರ ಚಾಂಪಿಯನ್ ಪಟ್ಟಕ್ಕೇರಲು ಕಾಯುತ್ತಿದೆ. ಹೀಗಾಗಿ ಈ ಪಂದ್ಯದಲ್ಲಿ ರಣರೋಚಕ ಹೋರಾಟವನ್ನು ನಿರೀಕ್ಷಿಸಬಹುದು.

Source link

Leave a Reply

Your email address will not be published. Required fields are marked *