ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸೆಬಿ ನೊಂದಣಿ ಇಲ್ಲದೇ ಎನ್​ಆರ್​ಐಗಳಿಗೆ ಹೂಡಿಕೆ ಮಿತಿ ಹೆಚ್ಚಳ – Kannada News

ನವದೆಹಲಿ, ಜೂನ್ 5: ಎನ್‌ಆರ್‌ಐಗಳು (ಅನಿವಾಸಿ ಭಾರತೀಯರು) ಮತ್ತು ಒಸಿಐಗಳು (OCI – ಸಾಗರೋತ್ತರ ಭಾರತೀಯ ನಾಗರಿಕರು) ಸೆಬಿ (SEBI) ಬಳಿ ಪ್ರತ್ಯೇಕವಾಗಿ ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲದೇ, ಭಾರತೀಯ ಷೇರು ಮಾರುಕಟ್ಟೆಯಲ್ಲಿ (stock market) ನೇರವಾಗಿ ಹೂಡಿಕೆ ಮಾಡಲು ಇರುವ ಹಣದ ಮಿತಿಯನ್ನು ಸರ್ಕಾರ ಹೆಚ್ಚಿಸುತ್ತಿದೆ. ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಎಂಪಿಸಿ ಸಭೆ ನಂತರದ ಸುದ್ದಿಗೋಷ್ಠಿಯಲ್ಲಿ ಈ ವಿಚಾರವನ್ನು ಹೊರಗೆಡವಿದ್ದಾರೆ.

ಈವರೆಗೆ ಇಂತಹ ಹೂಡಿಕೆಗೆ ಕಟ್ಟುನಿಟ್ಟಾದ ಮಿತಿಗಳಿದ್ದವು. ಆ ಮಿತಿಗಳನ್ನು ಸಡಿಲಗೊಳಿಸುವುದರಿಂದ, ಅನಿವಾಸಿ ಭಾರತೀಯರಿಗೆ ಭಾರತದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಈಗ ಹಿಂದೆಂದಿಗಿಂತಲೂ ಹೆಚ್ಚು ಸುಲಭವಾಗಲಿದೆ.

ಈ ಕ್ರಮದಿಂದ ಆಗುವ ಲಾಭಗಳೇನು?

  • ಎನ್‌ಆರ್‌ಐ ಮತ್ತು ಒಸಿಐ ಸಮುದಾಯದಿಂದ ಭಾರತದ ಬಂಡವಾಳ ಮಾರುಕಟ್ಟೆಗೆ ಹೆಚ್ಚಿನ ಹಣ ಹರಿಯಲು ಇದು ದಾರಿ ಮಾಡಿಕೊಡುತ್ತದೆ.
  • ಸೆಬಿ ನೋಂದಣಿಯ ಜಟಿಲ ಪ್ರಕ್ರಿಯೆಗಳನ್ನು ತಪ್ಪಿಸುವುದರಿಂದ, ಸಣ್ಣ ಪ್ರಮಾಣದ ಹೂಡಿಕೆದಾರರು ಕೂಡ ಸುಲಭವಾಗಿ ಭಾರತೀಯ ಷೇರುಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ.
  • ಅನಿವಾಸಿ ಭಾರತೀಯರ ಹಣವು ದೇಶೀಯ ಮಾರುಕಟ್ಟೆಗೆ ಬಂದಾಗ, ಅದು ಷೇರು ಮಾರುಕಟ್ಟೆಯ ಚಟುವಟಿಕೆಯನ್ನು ಹೆಚ್ಚಿಸುತ್ತದೆ ಮತ್ತು ಆರ್ಥಿಕತೆಗೆ ಪೂರಕವಾಗುತ್ತದೆ.
  • ತಮ್ಮ ತಾಯ್ನಾಡಿನ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಯಸುವ ಲಕ್ಷಾಂತರ ಅನಿವಾಸಿ ಭಾರತೀಯರಿಗೆ ಇದು ಉತ್ತಮ ಅವಕಾಶವಾಗಿದೆ.

ಇದನ್ನೂ ಓದಿ: ಬಾಂಡ್ ಮಾರುಕಟ್ಟೆಯಲ್ಲಿ ವಿದೇಶೀ ಹೂಡಿಕೆದಾರರಿಗೆ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಹೊರೆ ಇಲ್ಲ

ಆರ್‌ಬಿಐ ಗವರ್ನರ್‌ಗಳ ಈ ಕ್ರಮವು, ಹೂಡಿಕೆ ಪ್ರಕ್ರಿಯೆಯನ್ನು ಸರಳಗೊಳಿಸುವ ಮತ್ತು ಜಾಗತಿಕವಾಗಿರುವ ಭಾರತೀಯರ ಬಂಡವಾಳವನ್ನು ಭಾರತದ ಅಭಿವೃದ್ಧಿಗೆ ಬಳಸಿಕೊಳ್ಳುವ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ. ಇದು ಭಾರತೀಯ ಷೇರು ಮಾರುಕಟ್ಟೆಯ ವಿಸ್ತರಣೆಗೆ ಸಹಕಾರಿಯಾಗುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *