ಏಕಾಏಕಿ ಕುಸಿದ ಹೋಟೆಲ್ ಲಿಫ್ಟ್: ಶ್ರೀನಗರದಲ್ಲಿ ಬೆಂಗಳೂರಿನ ಪ್ರವಾಸಿಗರು ಬದುಕಿದ್ದೇ ಪವಾಡ! – Kannada News | 6 Bengaluru Tourists Injured in Srinagar Hotel Lift Mishap
ಬೆಂಗಳೂರು, ಏಪ್ರಿಲ್ 24: ಜಮ್ಮು-ಕಾಶ್ಮೀರದ ಶ್ರೀನಗರದ ಹೈದರ್ಪೋರ ಪ್ರದೇಶದಲ್ಲಿರುವ ಹೊಸದಾಗಿ ನಿರ್ಮಿತ ಹೋಟೆಲ್‌ನಲ್ಲಿ ಲಿಫ್ಟ್ ಕುಸಿದು ಬಿದ್ದ ಪರಿಣಾಮ ಬೆಂಗಳೂರಿನ ಆರು ಮಂದಿ ಪ್ರವಾಸಿಗರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರವಾಸಿಗರು ವಾಸ್ತವ್ಯ ಹೂಡಿದ್ದ ಹೋಟೆಲ್ ಅರಿಸನ್ ಲಕ್ಷುರಿಯಲ್ಲಿ ಘಟನೆ ನಡೆದಿದ್ದು, ಲಿಫ್ಟ್ ಕುಸಿದ ತಕ್ಷಣ ಗಾಯಾಳುಗಳನ್ನು ಬರ್ಜುಲ್ಲಾದ ಬೋನ್ ಆ್ಯಂಡ್ ಜಾಯಿಂಟ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂಬ ಮಾಹಿತಿ ಇದೆ. ಗಾಯಗೊಂಡವರನ್ನು ವೆಂಕಟೇಶ್ (65), ಡಿ. ಮಂಗಲಾ (54), ಕುಶಲ್ಲಾ (18), ಪಂಕಜಾ (16),…