All posts by nagaraj11081993

Vande Bharat Sleeper: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿನ ವಿಶೇಷತೆ, ಟಿಕೆಟ್ ದರ ಏನು? – Kannada News | India’s first Vande Bharat sleeper train premium facilities Price and Feautures

ನವದೆಹಲಿ, ಜನವರಿ 17 ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ (Vande Bharat Sleeper Train) ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ್ದಾರೆ. ಪ್ರಯಾಣಿಕರಿಗೆ ಐಷಾರಾಮಿ ಪ್ರಯಾಣವನ್ನು ನೀಡಲು ವಿನ್ಯಾಸಗೊಳಿಸಲಾದ ಹೊಸ ವಂದೇ ಭಾರತ್ ರೈಲಲ್ಲಿ ವಿಮಾನದ ರೀತಿಯ ವಿನ್ಯಾಸ, ವಿಶೇಷತೆಗಳಿವೆ. ಆದರೆ, ಇದು ವಿಮಾನಕ್ಕಿಂತ ಕಡಿಮೆ ದರದಲ್ಲಿ ವಿಮಾನದ ರೀತಿಯದ್ದೇ ಸೇವೆ ನೀಡಲಿದೆ. ಇದು ತನ್ನ ಪ್ರಯಾಣಿಕರಿಗೆ ದೀರ್ಘ ಪ್ರಯಾಣವನ್ನು ಸುಲಭಗೊಳಿಸುವ ಪ್ರಮುಖ ಸೌಲಭ್ಯಗಳನ್ನು ಒಳಗೊಂಡಿದೆ.

ಈ ರೈಲು ಹೌರಾ-ಗುವಾಹಟಿ (ಕಾಮಾಕ್ಯ) ಮಾರ್ಗದಲ್ಲಿ ಸುಮಾರು ಎರಡೂವರೆ ಗಂಟೆಗಳ ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಈ ರೈಲು ಧಾರ್ಮಿಕ ಪ್ರಯಾಣ ಮತ್ತು ಪ್ರವಾಸೋದ್ಯಮಕ್ಕೂ ಪ್ರಮುಖ ಉತ್ತೇಜನ ನೀಡುತ್ತದೆ. ರಾತ್ರಿಯ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾದ ಬರ್ತ್‌ಗಳು, ಸುರಕ್ಷಿತ ಮತ್ತು ಸುಲಭವಾದ ಮೇಲಿನ ಬರ್ತ್ ಪ್ರವೇಶಕ್ಕಾಗಿ ಪ್ರಯಾಣಿಕ ಸ್ನೇಹಿ ಏಣಿಗಳು, ಆಧುನಿಕ ವಿನ್ಯಾಸದ ಶೌಚಾಲಯಗಳು ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ಕೇಂದ್ರೀಕೃತ ಮೇಲ್ವಿಚಾರಣೆ ಮತ್ತು ಸಿಸಿಟಿವಿಗಳು ಇರದಲ್ಲಿ ಇರಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಹೌರಾ ಮತ್ತು ಗುವಾಹಟಿ (ಕಾಮಾಕ್ಯ) ನಡುವೆ ಸಂಚರಿಸುವ ಈಶಾನ್ಯ ಗಡಿನಾಡು ರೈಲ್ವೆ (NFR) ವಲಯದಿಂದ ನಿರ್ವಹಿಸಲ್ಪಡುವ ಹೊಸ ಪ್ರೀಮಿಯಂ ರೈಲಿಗೆ ಹಸಿರು ನಿಶಾನೆ ತೋರಿಸಿದ್ದಾರೆ. ಈ ರೈಲಿನ ಮಾರ್ಗ, ಪ್ರಮುಖ ವೈಶಿಷ್ಟ್ಯಗಳು, ಟಿಕೆಟ್ ಬೆಲೆ, ಇತರ ವಿವರಗಳ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:Vande Bharat Sleeper Train: ಬಂಗಾಳದ ಮಾಲ್ಡಾದಲ್ಲಿ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

ಭಾರತದಲ್ಲಿ ವಿನ್ಯಾಸಗೊಳಿಸಿ ತಯಾರಿಸಲಾದ ವಂದೇ ಭಾರತ್ ಸ್ಲೀಪರ್ ರೈಲು 16 ಬೋಗಿಗಳನ್ನು ಹೊಂದಿದೆ. ಇದು 823 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿದೆ. ಈ ಪ್ರೀಮಿಯಂ ರೈಲು 11 ಮೂರು ಹಂತದ AC ಕೋಚ್‌ಗಳು, 4 ಎರಡು ಹಂತದ AC ಕೋಚ್‌ಗಳು ಮತ್ತು 1ನೇ ದರ್ಜೆಯ AC ಕೋಚ್ ಅನ್ನು ಒಳಗೊಂಡಿದೆ.

ರೈಲಿನ ಟಿಕೆಟ್ ಬೆಲೆ:

ಹೌರಾ ಮತ್ತು ಕಾಮಾಕ್ಯ ನಡುವಿನ ವಂದೇ ಭಾರತ್ ಸ್ಲೀಪರ್ ರೈಲಿನ 3ನೇ ಎಸಿ ಟಿಕೆಟ್‌ನ ಬೆಲೆ ಸುಮಾರು 2,300 ರೂ. ಆಗಿರುತ್ತದೆ. 2ನೇ ಎಸಿ ಟಿಕೆಟ್ ದರ ಸುಮಾರು 3,000 ರೂ. ಮತ್ತು 1ನೇ ಎಸಿ ಟಿಕೆಟ್‌ನ ಬೆಲೆ ಸುಮಾರು 3,600 ರೂ. ಇರಲಿದೆ. ಈ ರೈಲು ಗಂಟೆಗೆ 180 ಕಿ.ಮೀ. ವೇಗವನ್ನು ತಲುಪಲು ನಿರ್ಮಿಸಲಾಗಿದ್ದರೂ, ಇದು ಗಂಟೆಗೆ ಗರಿಷ್ಠ 120-130 ಕಿ.ಮೀ. ವೇಗದಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ: Vande Bharat Sleeper Train: ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ ವಿಡಿಯೋ

ಮೆಟ್ರೋ ರೈಲುಗಳಂತೆಯೇ ಪ್ರಯಾಣದ ಉದ್ದಕ್ಕೂ ಸ್ವಯಂಚಾಲಿತ ಸ್ಲೈಡಿಂಗ್ ಬಾಗಿಲುಗಳು ಮುಚ್ಚಲ್ಪಟ್ಟಿರುವಂತೆ ಪ್ರೋಗ್ರಾಮ್ ಮಾಡಲಾಗಿದೆ. ರೈಲು ನಿಲ್ದಾಣಕ್ಕೆ ಬಂದಾಗ ಮಾತ್ರ ಬಾಗಿಲು ತೆರೆಯುತ್ತದೆ. ಈ ರೈಲುಗಳು ಸಂಪೂರ್ಣ ಎಸಿ (ಹವಾನಿಯಂತ್ರಿತ)ಯನ್ನು ಒಳಗೊಂಡಿರುತ್ತದೆ.

ವೇಗ, ನೈರ್ಮಲ್ಯ ಮತ್ತು ಸುರಕ್ಷತೆಯ ಜೊತೆಗೆ, ಈ ರೈಲು ತನ್ನ ಪ್ರಯಾಣಿಕರಿಗೆ ಪ್ರೀಮಿಯಂ ವಿಮಾನಯಾನ ಸೇವೆಗಳಂತೆಯೇ ಸ್ಥಳೀಯ ಆಹಾರವನ್ನು ನೀಡುತ್ತದೆ. ಟಿಕೆಟ್ ಬೆಲೆಯಲ್ಲಿ ಆಹಾರವನ್ನು ಕೂಡ ಸೇರಿಸಲಾಗಿರುತ್ತದೆ. ಸ್ಥಳೀಯ ಆಹಾರವನ್ನು ಪ್ರಯಾಣಿಕರಿಗೆ ನೀಡುವ ಉದ್ದೇಶದಿಂದ ಕಾಮಾಕ್ಯದಿಂದ ಹೌರಾಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಅಸ್ಸಾಮಿ ಆಹಾರವನ್ನು ನೀಡಲಾಗುತ್ತದೆ. ಹೌರಾದಿಂದ ಕಾಮಾಕ್ಯಕ್ಕೆ ಹಿಂದಿರುಗುವ ಪ್ರಯಾಣದಲ್ಲಿರುವವರು ಬಂಗಾಳಿ ಆಹಾರವನ್ನು ಸವಿಯಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

25 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಕೈಗೆ ರೆಡ್ ಹ್ಯಾಂಡ್ ಸಿಕ್ಕಿದ್ದ ಅಬಕಾರಿ ಉಪ ಆಯುಕ್ತ – Kannada News | Lokayukta Raid: Bengaluru Excise Deputy Commissioner Arrested for Liquor License Bribe

ಬೆಂಗಳೂರು, ಜ.17: ಲೋಕಾಯುಕ್ತ ಪೊಲೀಸರು ಬೆಂಗಳೂರಿನಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿ ಅಬಕಾರಿ ಉಪ ಆಯುಕ್ತ (ಡಿಸಿ) ಜಗದೀಶ್ ನಾಯಕ್ ಅವರನ್ನು ಬಂಧಿಸಿದ್ದಾರೆ. ಮೈಕ್ರೋ ಬ್ರಿವರಿ ಮತ್ತು ಸಿಎಲ್ 7 ಪರವಾನಗಿಗಳಿಗಾಗಿ 75 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಅವರ ಮೇಲಿತ್ತು. ಮೊದಲ ಕಂತಿನ 25 ಲಕ್ಷ ರೂಪಾಯಿ ಲಂಚವನ್ನು ಸ್ವೀಕರಿಸುತ್ತಿದ್ದಾಗ ಬ್ಯಾಟರಾಯನಪುರದ ಅಬಕಾರಿ ಕಚೇರಿಯಲ್ಲಿ ಜಗದೀಶ್ ನಾಯಕ್ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲಾಗಿದೆ. ಈ ಪ್ರಕರಣದಲ್ಲಿ ಜಗದೀಶ್ ನಾಯಕ್ ಜೊತೆಗೆ ಅಧೀಕ್ಷಕ ತಮ್ಮಣ್ಣ ಮತ್ತು ಅಬಕಾರಿ ಇಲಾಖೆಯ ಕಾನ್ಸ್ಟೇಬಲ್ ಲಕ್ಕಪ್ಪ ಅವರನ್ನೂ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ದೂರುದಾರರು ಲಕ್ಷ್ಮೀನಾರಾಯಣ ನೀಡಿದ ಮಾಹಿತಿ ಆಧರಿಸಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮೂವರನ್ನೂ ವಶಕ್ಕೆ ಪಡೆದಿದ್ದಾರೆ. ಲಂಚದ ಹಣದ ಸಮೇತ ಕಾನ್ಸ್ಟೇಬಲ್ ಲಕ್ಕಪ್ಪನನ್ನು ಕರೆದುಕೊಂಡು ಹೋಗಿದ್ದಾರೆ. ಲಕ್ಷ್ಮೀನಾರಾಯಣ ಅವರ ಪ್ರಕಾರ, ಮೈಕ್ರೋ ಬ್ರಿವರಿ ಮತ್ತು ಸಿಎಲ್ 7 ಪರವಾನಗಿಗಳಿಗಾಗಿ ಆರಂಭದಲ್ಲಿ 80 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಡಲಾಗಿತ್ತು. ನಂತರ ಈ ಮೊತ್ತವನ್ನು 2.25 ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗಿತ್ತು. ಕೊನೆಗೆ 50 ಲಕ್ಷ ರೂಪಾಯಿಗೆ ಬಂದು ನಿಂತಿದ್ದು, ಮೊದಲ ಕಂತಿನ 25 ಲಕ್ಷ ರೂಪಾಯಿ ಹಣವನ್ನು ನೀಡುವಂತೆ ಒತ್ತಾಯಿಸಲಾಗಿತ್ತು. ಈ ಹಣವನ್ನು ಹೊಂದಿಸಲು ತಾನು ಸ್ನೇಹಿತರಿಂದ ಸಾಲ ಪಡೆದಿದೆ ಎಂದು ಹೇಳಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಲಂಚ ನೀಡದೆ ಯಾವುದೇ ಕೆಲಸ ಆಗುವುದಿಲ್ಲ ಎಂದು ಅಧಿಕಾರಿಗಳು ನೇರವಾಗಿ ಹೇಳುತ್ತಿದ್ದರು ಎಂದು ದೂರುದಾರರು ಹೇಳಿದ್ದಾರೆ.

ವರದಿ: ಪ್ರದೀಪ್ 

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

U19 World Cup 2026: ಪಾಕ್ ಬಳಿಕ ಬಾಂಗ್ಲಾ ಜೊತೆಗೆ ಶೇಕ್ ಹ್ಯಾಂಡ್ ಮಾಡದ ಟೀಂ ಇಂಡಿಯಾ – Kannada News | India U19 vs Bangladesh: Ayush Mhatre Handshake Row Ignites New Cricket Controversy

ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಐಸಿಸಿ ಅಂಡರ್-19 ವಿಶ್ವಕಪ್ 2026 ರ ತನ್ನ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶವನ್ನು ಎದುರಿಸಿತು. ಮಳೆ ಪೀಡಿತ ಈ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್‌ ಮಾಡಿತು. ಆದಾಗ್ಯೂ ಟಾಸ್ ಸಮಯದಲ್ಲಿ ನಡೆದ ಅಚ್ಚರಿಯ ಘಟನೆ ಇದೀಗ ಕ್ರಿಕೆಟ್ ಲೋಕದಲ್ಲಿ ಮತ್ತೊಂದು ವಿವಾದವನ್ನು ಹುಟ್ಟುಹಾಕಿದೆ. ನಡೆದಿದ್ದೇನೆಂದರೆ ಟಾಸ್ ಮುಗಿದ ಎರಡೂ ತಂಡಗಳ ನಾಯಕರು ಹ್ಯಾಂಡ್‌ಶೇಕ್ ಮಾಡಲಿಲ್ಲ. ಬಾಂಗ್ಲಾದೇಶ ನಾಯಕ ಕೈಕುಲುಕಲು ತಮ್ಮ ಕೈಯನ್ನು ಜೇಬಿನಿಂದ ಹೊರತೆಗೆದರಾದರೂ, ಟೀಂ ಇಂಡಿಯಾ ನಾಯಕ ಆಯುಷ್ ಮ್ಹಾತ್ರೆ ಮಾತ್ರ ಕೈಕುಲುಕಲದೆ ಹಿಂದೆ ಸರಿದರು. ಇದೀಗ ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದೆ.

ವಾಸ್ತವವಾಗಿ ಕಳೆದ ವರ್ಷ ಅಂದರೆ 2025 ರ ಏಷ್ಯಾಕಪ್ ಸಮಯದಲ್ಲಿ ಭಾರತೀಯ ನಾಯಕ ಸೂರ್ಯಕುಮಾರ್ ಯಾದವ್ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಆಘಾ ಅವರೊಂದಿಗೆ ಹ್ಯಾಂಡ್‌ಶೇಕ್ ಮಾಡಲು ನಿರಾಕರಿಸಿದ್ದರು. ಈ ಘಟನೆ ವಿವಾದ ಹುಟ್ಟಿಕೊಳ್ಳಲು ಕಾರಣವಾಗಿತ್ತು. ಇದೀಗ ಆ ಪ್ರವೃತ್ತಿ ಬಾಂಗ್ಲಾದೇಶಕ್ಕೂ ಹರಡುತ್ತಿರುವಂತೆ ತೋರುತ್ತಿದೆ.

ಈ ಘಟನೆಯು ಬಿಸಿಸಿಐ ಮತ್ತು ಬಿಸಿಬಿ ನಡುವೆ ಇತ್ತೀಚೆಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ಪರಿಣಾಮವಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಕೋಲ್ಕತ್ತಾ ನೈಟ್ ರೈಡರ್ಸ್ ಇತ್ತೀಚೆಗೆ ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್​ನಿಂದ ಹೊರಹಾಕಿತ್ತು. ಇದರಿಂದ ಕೆರಳಿದ ಬಾಂಗ್ಲಾ ಕ್ರಿಕೆಟ್ ಮಂಡಳಿ ಭದ್ರತೆ ಮತ್ತು ಇತರ ಕಳವಳಗಳನ್ನು ಉಲ್ಲೇಖಿಸಿ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ಗೆ ತನ್ನ ತಂಡವನ್ನು ಕಳುಹಿಸಲು ಹಿಂದೇಟು ಹಾಕಿ ತನ್ನ ತಂಡದ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಬೇಕೆಂದು ವಿನಂತಿಸಿತ್ತು. ಈ ವಿವಾದದ ನಡುವೆ ಇದೀಗ ಮತ್ತೊಂದು ವಿವಾದ ಹುಟ್ಟಿಕೊಂಡಿದ್ದು ಮುಂದಿನ ದಿನಗಳಲ್ಲಿ ಇದು ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಹೇಶ್ ಬಾಬು ಚಿತ್ರಮಂದಿರದಲ್ಲಿ ದರ್ಶನ್​​ಗಿಲ್ಲ ಜಾಗ – Kannada News | No Darshan photo in Mahesh Babu’s AMB Cinemas Bengaluru

ಮಹೇಶ್ ಬಾಬು (Mahesh Babu) ಭಾರತೀಯ ಚಿತ್ರರಂಗದ ಸ್ಟಾರ್ ನಟರುಗಳಲ್ಲಿ ಒಬ್ಬರು. ಸ್ಟಾರ್ ನಟರಾಗಿರುವ ಜೊತೆಗೆ ಮಹೇಶ್ ಬಾಬು ಒಳ್ಳೆಯ ಉದ್ಯಮಿಯೂ ಹೌದು. ಹಲವು ಉದ್ಯಮಗಳಲ್ಲಿ ಹಣ ಹೂಡಿಕೆ ಮಾಡಿದ್ದಾರೆ ಮಹೇಶ್ ಬಾಬು. ಅವುಗಳಲ್ಲಿ ಚಿತ್ರಮಂದಿರ ಪ್ರದರ್ಶನವೂ ಹೌದು. ಮಹೇಶ್ ಬಾಬು ಅವರು ಎಎಂಬಿ ಹೆಸರಿನಲ್ಲಿ ಮಲ್ಟಿಪ್ಲೆಕ್ಸ್​ ಚಿತ್ರಮಂದಿರಗಳನ್ನು ನಡೆಸುತ್ತಾರೆ. ಈಗಾಗಲೇ ಹೈದರಾಬಾದ್​​ನಲ್ಲಿ ಹಾಗೂ ಇನ್ನೂ ಕೆಲವೆಡೆ ಐಶಾರಾಮಿ ಮಲ್ಟಿಪ್ಲೆಕ್ಸ್​ಗಳನ್ನು ಮಹೇಶ್ ಬಾಬು ಹೊಂದಿದ್ದು, ಇದೀಗ ಬೆಂಗಳೂರಿನಲ್ಲೂ ಎಎಂಬಿಯನ್ನು ಪ್ರಾರಂಭಿಸಿದ್ದಾರೆ.

ಬೆಂಗಳೂರಿನ ಐಕಾನಿಕ್ ಚಿತ್ರಮಂದಿರಗಳಲ್ಲಿ ಒಂದಾಗಿದ್ದ ಕಪಾಲಿ ಚಿತ್ರಮಂದಿರ ಇದ್ದ ಸ್ಥಳದಲ್ಲಿಯೇ ಇದೀಗ ಮಹೇಶ್ ಬಾಬು ಅವರ ಎಎಂಬಿ ಪ್ರಾರಂಭ ಆಗಿದೆ. ಅತ್ಯುತ್ತಮ ಸೀಟಿಂಗ್ ವ್ಯವಸ್ಥೆ, ಸೌಂಡ್, ಸ್ಕ್ರೀನ್, ಗುಣಮಟ್ಟದ ಆಹಾರ, ಶುಚಿತ್ವ ಎಲ್ಲವನ್ನೂ ಸಹ ಎಎಂಬಿ ಒಳಗೊಂಡಿದೆ. ಇವುಗಳ ಜೊತೆಗೆ ಅತ್ಯುತ್ತಮ ಇಂಟೀರಿಯರ್ ಡೆಕೊರೇಷನ್ ಅನ್ನು ಸಹ ಎಎಂಬಿ ಒಳಗೊಂಡಿದೆ. ಕನ್ನಡದ ಸ್ಟಾರ್ ನಟರುಗಳ ಚಿತ್ರಗಳನ್ನು ಸಹ ಇಲ್ಲಿ ಪ್ರದರ್ಶನ ಮಾಡಲಾಗಿದೆ. ಆದರೆ ದರ್ಶನ್ ಅವರ ಚಿತ್ರವನ್ನು ಪ್ರದರ್ಶಿಸಲಾಗಿಲ್ಲ.

ಕನ್ನಡದ ಪ್ರಸ್ತುತ ಜನಪ್ರಿಯ ನಟರುಗಳ ಚಿತ್ರಗಳನ್ನು ಎಎಂಬಿಯ ಆರ್ಟಿಸ್ಟ್ ಗ್ಯಾಲೆರಿಯಲ್ಲಿ ಪ್ರದರ್ಶಿಸಲಾಗಿದೆ. ಶಿವರಾಜ್ ಕುಮಾರ್, ಸುದೀಪ್, ಉಪೇಂದ್ರ, ಯಶ್, ಗಣೇಶ್, ರಿಷಬ್ ಶೆಟ್ಟಿ, ಧ್ರುವ ಸರ್ಜಾ, ಶ್ರೀಮುರಳಿ, ರಕ್ಷಿತ್ ಶೆಟ್ಟಿ ಅವರುಗಳ ಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಆದರೆ ಇಲ್ಲಿ ದರ್ಶನ್ ಚಿತ್ರವನ್ನು ಪ್ರದರ್ಶಿಸಲಾಗಿಲ್ಲ. ಇದು ಅವರ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ:‘ಅವತಾರ್ 3’ ಸಿನಿಮಾನಲ್ಲಿ ಮಹೇಶ್ ಬಾಬು? ಇದೆಂಥ ಅಚ್ಚರಿ

ಇತ್ತೀಚೆಗಷ್ಟೆ ನಿರ್ದೇಶಕ ರವಿ ಶ್ರೀವತ್ಸ ಅವರು ಎಎಂಬಿಗೆ ಭೇಟಿ ನೀಡಿದ್ದರು. ಅಲ್ಲಿ ಆರ್ಟಿಸ್ಟ್ ಗ್ಯಾಲೆರಿಯಲ್ಲಿ ನಟ ದರ್ಶನ್ ಚಿತ್ರ ಇಲ್ಲದೇ ಇರುವುದನ್ನು ಗಮನಿಸಿ ಚಿತ್ರವನ್ನು ಟ್ವೀಟ್​ ಮಾಡಿದ್ದಾರೆ. ‘ಮಹೇಶ್ ಬಾಬು ಅವರೇ ಬೆಂಗಳೂರಿಗೆ ಸ್ವಾಗತ, ಎಎಂಬಿ ಸ್ಕ್ರೀನ್ಸ್​​ಗೆ ಭೇಟಿ ನೀಡಿದ್ದೆ. ಅದ್ಭುತವಾಗಿದೆ. ಗುಣಮಟ್ಟದ ಮಲ್ಟಿಪ್ಲೆಕ್ಸ್ ನಿರ್ಮಿಸಿದ್ದಕ್ಕೆ ಧನ್ಯವಾದಗಳು, ಒಳ್ಳೆಯದಾಗಲಿ. ಆದರೆ ಆರ್ಟಿಸ್ಟ್ ಗ್ಯಾಲೆರಿಯಲ್ಲಿ ದರ್ಶನ್ ಅವರ ಫೋಟೊ ಮಿಸ್ ಆಗಿದೆ, ಇದು ನೋಡಿ ಬೇಸರವಾಯ್ತು’ ಎಂದಿದ್ದಾರೆ.

ನಟ ದರ್ಶನ್ ಪ್ರಸ್ತುತ ರೇಣುಕಾ ಸ್ವಾಮಿ ಕೊಲೆ ಕೇಸಿನ ಆರೋಪಿ ಆಗಿದ್ದು, ಕೊಲೆ ಕೇಸೊಂದರ ಆರೋಪಿಯ ಚಿತ್ರ ಕಲಾವಿದರ ಗ್ಯಾಲೆರಿಯಲ್ಲಿ ಹಾಕುವುದು ಬೇಡವೆಂದು ಎಎಂಬಿ ವ್ಯವಸ್ಥಾಪನ ಮಂಡಳಿ ನಿರ್ಣಯಿಸಿರುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

U19 World Cup 2026: ಅಚ್ಚರಿಯ ಫಲಿತಾಂಶ; ಅಫ್ಘಾನಿಸ್ತಾನ ವಿರುದ್ಧ ಸೋತ ದಕ್ಷಿಣ ಆಫ್ರಿಕಾ – Kannada News | U19 World Cup: Afghanistan Stuns South Africa by 28 Runs in Group D Upset

ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ 2026 ರ ಅಂಡರ್-19 ವಿಶ್ವಕಪ್ (U19 World Cup) ಪ್ರಾರಂಭವಾಗಿದೆ. ಅದರಂತೆ ಪಂದ್ಯಾವಳಿಯ 6ನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್ ದಕ್ಷಿಣ ಆಫ್ರಿಕಾ ಹೀನಾಯ ಸೋಲನ್ನು ಅನುಭವಿಸಿದೆ. ಗ್ರೂಪ್ ಡಿ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 28 ರನ್‌ಗಳಿಂದ ಸೋಲಿಸುವ ಮೂಲಕ ಅಫ್ಘಾನಿಸ್ತಾನ (Afghanistan vs South Africa) ಎಲ್ಲರನ್ನೂ ಅಚ್ಚರಿಗೊಳಿಸಿ ಗೆಲುವಿನ ಶುಭಾರಂಭ ಮಾಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 266 ರನ್‌ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವು 238 ರನ್​ಗಳಿಗೆ ಆಲೌಟ್ ಆಗುವ ಮೂಲಕ 28 ರನ್​ಗಳಿಂದ ಸೋಲೊಪ್ಪಿಕೊಂಡಿತು.

266 ರನ್​ ಕಲೆಹಾಕಿದ ಅಫ್ಘಾನಿಸ್ತಾನ

ವಿಶ್ವಕಪ್‌ನ ಈ ಆರನೇ ಪಂದ್ಯವು ನಮೀಬಿಯಾದ ವಿಂಡ್‌ಹೋಕ್‌ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 8 ವಿಕೆಟ್‌ಗೆ 266 ರನ್ ಗಳಿಸಿತು. ಮೊದಲ ವಿಕೆಟ್ ಬೇಗನೆ ಕಳೆದುಕೊಂಡ ನಂತರ, ಖಾಲಿದ್ ಅಹ್ಮದ್‌ಜೈ ಮತ್ತು ಫೈಸಲ್ ಶಿನೋಜಾಡಾ 152 ರನ್‌ಗಳ ಅದ್ಭುತ ಪಾಲುದಾರಿಕೆಯನ್ನು ನೀಡಿದರು. ಇಬ್ಬರೂ ಅರ್ಧಶತಕ ಬಾರಿಸಿದರಾದರೂ ಶತಕದ ಗಡಿ ತಲುಪುವ ಮೊದಲೇ ಔಟಾದರು. ಇಬ್ಬರೂ ಬ್ಯಾಟ್ಸ್‌ಮನ್‌ಗಳು ಕೇವಲ ನಾಲ್ಕು ಎಸೆತಗಳ ಅಂತರದಲ್ಲಿ ಔಟಾದರು. ನಂತರ ಉಜೈರುಲ್ಲಾ ನಿಯಾಜೈ 51 ಎಸೆತಗಳಲ್ಲಿ 51 ರನ್ ಗಳಿಸಿ ತಂಡವನ್ನು 266 ರನ್​ಗಳ ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದರು.

4 ಆಟಗಾರರು ರನೌಟ್​ಗೆ ಬಲಿ

ಮತ್ತೊಂದೆಡೆ ಕಳಪೆ ಆರಂಭ ಪಡೆದ ದಕ್ಷಿಣ ಆಫ್ರಿಕಾ ಕೇವಲ 49 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ತಂಡದ ಹತ್ತು ವಿಕೆಟ್‌ಗಳಲ್ಲಿ ನಾಲ್ಕು ವಿಕೆಟ್‌ಗಳು ರನ್ ಔಟ್‌ಗಳ ಮೂಲಕ ಬಿದ್ದಿದ್ದು ತಂಡಕ್ಕೆ ದೊಡ್ಡ ಹೊಡೆತ ನೀಡಿತು. ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಜೇಸನ್ ರೋಲ್ಯಾಂಡ್ಸ್ 98 ರನ್ ಬಾರಿಸಿ ರನೌಟ್​ಗೆ ಬಲಿಯಾದರು. ಉಳಿದಂತೆ ಯಾವ ಬ್ಯಾಟ್ಸ್​ಮನ್​ಗೂ 30 ರನ್​ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ. ಮೂವರು ಬ್ಯಾಟ್ಸ್​ಮನ್​ಗಳು 20 ರನ್​ಗಳ ಗಡಿ ದಾಟಿದರಾದರೂ ಅದನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಲಿಲ್ಲ. ಇದು ಮಾತ್ರವಲ್ಲದೆ ದಕ್ಷಿಣ ಆಫ್ರಿಕಾ ನಿಯಮಿತ ಅಂತರದಲ್ಲಿ ವಿಕೆಟ್​ ಕಳೆದುಕೊಂಡಿದ್ದರಿಂದ ಗೆಲುವು ಕಷ್ಟಕರವಾಯಿತು. ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡವು 47.4 ಓವರ್‌ಗಳಲ್ಲಿ 238 ರನ್‌ಗಳಿಗೆ ಆಲೌಟ್ ಆಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:59 pm, Sat, 17 January 26

Source link

ರಾಜ್ಯದಲ್ಲಿ ಮತ್ತೆ ವಿದ್ಯುತ್ ದರ ಏರಿಕೆ? ವದಂತಿ ಬಗ್ಗೆ ಬೆಸ್ಕಾಂ ಎಂಡಿ ಸ್ಪಷ್ಟನೆ – Kannada News | No New Power Tariff Hike Proposal to KERC: BESCOM MD Clarifie

ಬೆಂಗಳೂರು, ಜನವರಿ 17: ವಿದ್ಯುತ್ ದರ ಏರಿಕೆ ಮಾಡುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (KERC) ನಾವು ಪ್ರಸ್ತಾವನೆ ಸಲ್ಲಿಸಿಲ್ಲ ಎಂದು ಬೆಸ್ಕಾಂ ಎಂಡಿ ಶಿವಶಂಕರ್ ಸ್ಪಷ್ಟನೆ ನೀಡಿದ್ದಾರೆ. ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಮತ್ತೆ ವಿದ್ಯುತ್ ದರ ಏರಿಕೆ ವದಂತಿ ಬಗ್ಗೆ ಟಿವಿ9 ಜೊತೆಗೆ ಮಾತನಾಡಿದ ಅವರು, 2025-26, 2026-27, 2027-28ರ ದರ ನಿಗದಿ ಆಗಿ ಹೋಗಿದೆ. 2024-25ರಲ್ಲಿ ಬೆಸ್ಕಾಂಗೆ 2,800 ಕೋಟಿ ರೂ ಆದಾಯ ಕೊರತೆ ಉಂಟಾಗಿತ್ತು. ಆ ವರ್ಷದಲ್ಲಿ ಆದಾಯ ಕೊರತೆಯ ಬಗ್ಗೆ KERC ಗಮನಕ್ಕೆ ತಂದಿದ್ದೇವೆ. ನಷ್ಟ ಸರಿದೂಗಿಸಲು ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದ್ದೇವೆ. ಸದ್ಯ 2024-25ನೇ ಆರ್ಥಿಕ ವರ್ಷದ ವರದಿಯನ್ನು KERCಗೆ ಸಲ್ಲಿಕೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಈ ಯೋಜನೆಗೆ ನಮ್ಮ ಒಪ್ಪಿಗೆ ಇಲ್ಲ, ಏನ್‌ ಆಗುತ್ತೋ ಆಗಲಿ: ಶಾಸಕ ಬಾಲಕೃಷ್ಣ ಮುಂದೆ ಅಬ್ಬರಿಸಿದ ರೈತ ಮಹಿಳೆ – Kannada News | MLA Balakrishna Addresses Farmer Concerns Amidst Bidadi Township Project Meeting

ರಾಮನಗರ, ಜ.17: ಜಿಲ್ಲೆಯ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಬಿಡದಿ ಬಳಿಯ ಗ್ರೇಟರ್ ಬೆಂಗಳೂರು ಟೌನ್‌ಶಿಪ್ ಯೋಜನೆ ಕುರಿತು ನಡೆದ ಸಭೆಯಲ್ಲಿ ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ರೈತರೊಂದಿಗೆ ಮಾತುಕತೆ ನಡೆಸಿದರು. ಸಭೆಯು 9 ಕಂದಾಯ ಗ್ರಾಮಗಳ 26 ಹಳ್ಳಿಗಳ ರೈತರ ಅರ್ಜಿ ಸ್ವೀಕಾರಕ್ಕೂ ಅವಕಾಶ ನೀಡಿತ್ತು. ಸಭೆಯ ಆರಂಭದಲ್ಲಿ ಶಾಸಕ ಬಾಲಕೃಷ್ಣ ಅವರು, ಭೂಸ್ವಾಧೀನ ಪ್ರಕ್ರಿಯೆಯು 15-20 ವರ್ಷಗಳ ಹಿಂದೆ ಆಗಿದ್ದು, ಈಗ ದಾಖಲಾತಿಗಳನ್ನು ಸರಿಪಡಿಸುವ ಹಾಗೂ ಮಧ್ಯವರ್ತಿಗಳ ಹಾವಳಿಯನ್ನು ತಡೆಯುವ ಉದ್ದೇಶದಿಂದ ಸಭೆ ಕರೆಯಲಾಗಿದೆ ಎಂದು ಸ್ಪಷ್ಟಪಡಿಸಿದರು. ಸರಕಾರವು ಈ ದರವನ್ನು ನಿಗದಿಪಡಿಸಿಲ್ಲ. ಎಂದು ಹೇಳಿದ್ದಾರೆ. ಈ ವೇಳೆ ಸಭೆಯಲ್ಲಿದ್ದ ರೈತ ಮಹಿಳೆಯರು, ಭೂಸ್ವಾಧೀನ ಪ್ರಕ್ರಿಯೆ ಮತ್ತು ಸರಕಾರ ನಿಗದಿಪಡಿಸಿದ ಪರಿಹಾರ ದರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ನಾವು ನಮ್ಮ ಹಕ್ಕುಗಳನ್ನು ಬಿಟ್ಟುಕೊಡುವುದಿಲ್ಲ, ಈ ಯೋಜನೆಗೆ ನಮ್ಮ ಒಪ್ಪಿಗೆ ಇಲ್ಲ ಎಂದು ಹೇಳಿದರು. “ಸರ್ಕಾರಕ್ಕೆ ಧಿಕ್ಕಾರ”, “ನ್ಯಾಯ ಬೇಕು, ಇದು ನಮ್ಮ ಹಕ್ಕು”, “ರೈತರಿಗೆ ಜಯವಾಗಲಿ” ಎಂಬ ಘೋಷಣೆಗಳನ್ನು ಕೂಗಿದರು. ಭೂಮಿ ಸ್ವಾಧೀನಪಡಿಸಿಕೊಳ್ಳುವಿಕೆಯನ್ನು ಪ್ರಶ್ನಿಸಿ, ತಮ್ಮ ಅರ್ಜಿಯನ್ನು ಅಂಗೀಕರಿಸಬೇಕು ಮತ್ತು ತಮ್ಮ ಬೇಡಿಕೆಗಳನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

‘ಇಲ್ಲೇ ನಿನ್ನ ಹೆಣ ಬೀಳತ್ತೆ!’ ಸಿಎಂ ತವರಲ್ಲೇ ಮಹಿಳಾ ಅಧಿಕಾರಿಗೆ ಕೊಲೆ ಬೆದರಿಕೆ! – Kannada News | Mysuru: Female Officer Threatened During NIMHANS Land Survey in CM’s Home land

‘ಇಲ್ಲೇ ನಿನ್ನ ಹೆಣ ಬೀಳತ್ತೆ’ ಸಿಎಂ ತವರಲ್ಲೇ ಮಹಿಳಾ ಅಧಿಕಾರಿಗೆ ಕೊಲೆ ಬೆದರಿಕೆ!

ಮೈಸೂರು, ಜನವರಿ 17: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರದಲ್ಲೇ ಮಹಿಳಾ ಸರ್ಕಾರಿ ಅಧಿಕಾರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಮೈಸೂರಿನ (Mysore) ಗುಡಮಾದನಹಳ್ಳಿ ಗ್ರಾಮದಲ್ಲಿ ಡಿಸೆಂಬರ್ 31ರಂದು ನಡೆದ ಈ ಪ್ರಕರಣದ ವಿಡಿಯೋ ಇತ್ತೀಚೆಗೆ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಜಮೀನು ಪರಿಶೀಲನೆಗೆ ತೆರಳಿದ ಅಧಿಕಾರಿಗಳಿಗೆ ನಿಂದನೆ

ಗುಡಮಾದನಹಳ್ಳಿಯಲ್ಲಿ ನಿಮ್ಹಾನ್ಸ್ ಮಾದರಿಯ ಹೊಸ ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಸರ್ವೆ ನಂ. 8ರಲ್ಲಿ 5 ಎಕರೆ 5 ಗುಂಟೆ, ಸರ್ವೆ ನಂ. 60ರಲ್ಲಿ 6 ಎಕರೆ 10 ಗುಂಟೆ ಹಾಗೂ ಸರ್ವೆ ನಂ. 68ರಲ್ಲಿ 8 ಎಕರೆ 25 ಗುಂಟೆ ಸೇರಿ ಒಟ್ಟು 20 ಎಕರೆ ಭೂಮಿಯನ್ನು ಆಸ್ಪತ್ರೆಗಾಗಿ ಮೀಸಲಿಡಲಾಗಿದೆ. ಸಿಎಂ ಸಿದ್ದರಾಮಯ್ಯ ಕನಸಿನ ಯೋಜನೆಯಾಗಿರುವ ಆಸ್ಪತ್ರೆಯ ಜಾಗ ಗುರುತಿಸುವ ಮತ್ತು ಸ್ವಾಧೀನ ಪ್ರಕ್ರಿಯೆಯ ಹಿನ್ನೆಲೆಯಲ್ಲಿ, ಬಂಡೀಪಾಳ್ಯ ವೃತ್ತದ ಗ್ರಾಮ ಆಡಳಿತಾಧಿಕಾರಿ ಜಿ. ಭವ್ಯಾ ಮತ್ತು ಗ್ರಾಮ ಸಹಾಯಕ ನವೀನ್ ಕುಮಾರ್ ಸೇರಿ ಜಮೀನು ಪರಿಶೀಲನೆಗೆ ತೆರಳಿದ್ದರು.

ನಿಂದನೆಯ ದೃಶ್ಯ ಮೊಬೈಲ್​ನಲ್ಲಿ ಸೆರೆ

ಪರಿಶೀಲನೆ ವೇಳೆ ಅನಧಿಕೃತವಾಗಿ ಅಡಕೆ ತೋಟ ನಿರ್ಮಿಸಿಕೊಂಡಿದ್ದ ಜಿ.ಎಂ. ಪುಟ್ಟಸ್ವಾಮಿ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಯಾರನ್ನು ಕೇಳಿ ನಿಮ್ಹಾನ್ಸ್ ಆಸ್ಪತ್ರೆಗೆ ಜಮೀನು ಮಂಜೂರು ಮಾಡಿದ್ದೀರಿ? ಮೊದಲು ತಹಶೀಲ್ದಾರ್ ತಲೆ ತೆಗೆಯಬೇಕು ಎಂದು ಧಮ್ಕಿ ಹಾಕಿರುವ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿಯಲಾಗಿದೆ. ಬಳಿಕ ಪುಟ್ಟಸ್ವಾಮಿ ಮೊಬೈಲ್ ಕಿತ್ತುಕೊಂಡು ವಿಡಿಯೋ ಡಿಲೀಟ್ ಮಾಡಲು ಯತ್ನಿಸಿದ್ದಾನೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯ ನಿಂದನೆ ಹಾಗೂ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ನಿಂತಿದ್ದ ಪಿಕಪ್​​ ಟ್ರಕ್​​​ಗೆ ಶಾಲಾ ಮಕ್ಕಳಿದ್ದ ಓಮಿನಿ ಡಿಕ್ಕಿ: ನಡು ರಸ್ತೆಯಲ್ಲಿ ಒದ್ದಾಡಿದ ಮಕ್ಕಳು

ಕಾರವಾರ, ಜ.17: ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ಓಮಿನಿ ಬೊಲೆರೊ ವಾಹನಕ್ಕೆ ಡಿಕ್ಕಿ ಹೊಡೆದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಹಳೆ ಬಸ್ ನಿಲ್ಧಾಣದ ಬಳಿ ನಡೆದಿದೆ. ಅಪಘಾತದಲ್ಲಿ ಚಾಲಕ ಸೇರಿ ನಾಲ್ವರು ಮಕ್ಕಳಿಗೆ ಗಂಭೀರ ಗಾಯಗಳಾಗಿವೆ. ಕುಮಟಾದ ಡಾ.ಎ.ವಿ.ಬಾಳಿಗಾ ಆಂಗ್ಮ ಮಾಧ್ಯಮ ಶಾಲೆಯ ವಾಹನ ಎಂದು ಹೇಳಲಾಗಿದೆ. ತನಿಷ್ಕ (15), ಅದ್ವಿತ್ (12), ಅರ್ಜುನ್ (13), ಆಯಿರಾ (10) ಮಕ್ಕಳಿಗೆ ಗಂಭೀರ ಗಾಯಗಳಾಗಿವೆ. ಇದೀಗ ಗಾಯಾಳುಗಳಿಗೆ ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಕ್ಕಳನ್ನು ಶಾಲೆಯಿಂದ ಮನೆಗೆ ಕರೆದೊಯ್ಯುವ ವೇಳೆ ಈ ಘಟನೆ ನಡೆದಿದೆ. ಸ್ಥಳಕ್ಕೆ ಕುಮಟಾ ಪೊಲೀಸರಿಂದ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಬಗ್ಗೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Source link

ಮಗನ ದಾಖಲೆ ಮುರಿದ ಅಪ್ಪ: ‘RRR’ ಹಿಂದಿಕ್ಕಿದ ‘MSVPG’ – Kannada News | Megastar Chiranjeevi movie breaks RRR record in fifth day collection

ಸಂಕ್ರಾಂತಿಗೆ ತೆಲುಗಿನ ಹಲವು ಸಿನಿಮಾಗಳು ಬಿಡುಗಡೆ ಆಗಿವೆ. ಪ್ರಭಾಸ್ (Prabhas) ಸಿನಿಮಾ ಸೇರಿದಂತೆ, ಒಟ್ಟು ಐದು ದೊಡ್ಡ ಸಿನಿಮಾಗಳೇ ಬಿಡುಗಡೆ ಆಗಿವೆ. ಆದರೆ ಗೆದ್ದಿರುವುದು ಮೆಗಾಸ್ಟಾರ್ ಚಿರಂಜೀವಿ ಮಾತ್ರ. ಚಿರಂಜೀವಿ ನಟಿಸಿರುವ ‘ಮನ ಶಂಕರ ವರ ಪ್ರಸಾದ್ ಗಾರು’ (MSVPG) ಸಿನಿಮಾ ಇತರೆ ಸಿನಿಮಾಗಳನ್ನು ಬಾಕ್ಸ್ ಆಫೀಸ್​​ನಲ್ಲಿ ಹಿಂದಿಕ್ಕಿದೆ. ಅದು ಮಾತ್ರವೇ ಅಲ್ಲದೆ ಈ ಸಿನಿಮಾ ತೆಲುಗು ಚಿತ್ರರಂಗದ ಇತ್ತೀಚೆಗಿನ ಟಾಪ್ ಸಿನಿಮಾಗಳಲ್ಲಿ ಒಂದಾಗಿರುವ ‘ಆರ್​​ಆರ್​​ಆರ್’ ಸಿನಿಮಾದ ಒಂದು ದಾಖಲೆಯನ್ನೇ ಮುರಿದು ಹಾಕಿದೆ.

‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ಜನವರಿ 12 ರಂದು ಬಿಡುಗಡೆ ಆಗಿದ್ದು, ಬಿಡುಗಡೆ ಆದ ಮೊದಲ ದಿನ ಸುಮಾರು 84 ಕೋಟಿ ಹಣ ಗಳಿಸಿತ್ತು. ಅದಾದ ಬಳಿಕವೂ ಸಹ ಸಿನಿಮಾ ಕಲೆಕ್ಷನ್​​ನಲ್ಲಿ ಇಳಿಕೆ ಆಗಿಲ್ಲ. ಅದರಲ್ಲೂ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಕಲೆಕ್ಷನ್ ಗಮನಾರ್ಹ ಮಟ್ಟದಲ್ಲಿ ಸಮತೋಲನ ಕಾಯ್ದುಕೊಂಡಿದೆ. ಸಿನಿಮಾ ಬಿಡುಗಡೆ ಆಗಿ ವಾರವಾಗುತ್ತಾ ಬರುತ್ತಿದ್ದರೂ ಸಿನಿಮಾ ಈಗಲೂ ಡಬಲ್ ಡಿಜಿಟ್ ಗಳಿಕೆ ಮಾಡುತ್ತಿದೆ.

‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ಬಿಡುಗಡೆ ಆದ ಐದನೇ ದಿನ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ 14.50 ಕೋಟಿ ರೂಪಾಯಿ ಹಣ ಗಳಿಕೆ ಮಾಡಿದೆ. ಇದು ಕಡಿಮೆ ಮೊತ್ತವಲ್ಲ. ‘ಆರ್​​ಆರ್​​ಆರ್​ಆರ್’ ಸಿನಿಮಾ ಸಹ ಬಿಡುಗಡೆ ಆದ ಐದನೇ ದಿನ ಇಷ್ಟು ದೊಡ್ಡ ಮೊತ್ತದ ಗಳಿಕೆ ಮಾಡಿರಲಿಲ್ಲ. ‘ಆರ್​​ಆರ್​​ಆರ್’ ಸಿನಿಮಾ ಐದನೇ ದಿನ ಗಳಿಸಿದ್ದಿದ್ದು 13 ಕೋಟಿ ರೂಪಾಯಿಗಳು ಆದರೆ ‘ಶಂಕರ ವರ ಪ್ರಸಾದ್’ ಗಳಿಸಿರುವುದು 14.50 ಕೋಟಿ. ಆ ಮೂಲಕ ‘ಆರ್​​ಆರ್​​ಆರ್’ ಸಿನಿಮಾದ ದಾಖಲೆಯನ್ನೇ ಮುರಿದಿದೆ ಚಿರಂಜೀವಿ ಸಿನಿಮಾ. ಆ ಮೂಲಕ ತಮ್ಮ ಪುತ್ರ ರಾಮ್ ಚರಣ್ ಅವರ ದಾಖಲೆಯನ್ನೇ ಮುರಿದಂತಾಗಿದೆ ಚಿರಂಜೀವಿ.

ಇದನ್ನೂ ಓದಿ:ಒಂದೇ ದಿನ ರಚಿತಾ ರಾಮ್ ಎರಡು ಸಿನಿಮಾಗಳು ರಿಲೀಸ್; ಫ್ಯಾನ್ಸ್​​ಗೆ ಹಬ್ಬ

‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ಐದು ದಿನಗಳಲ್ಲಿ 200 ಕೋಟಿಗೂ ಹೆಚ್ಚು ಮೊತ್ತವನ್ನು ಬಾಕ್ಸ್ ಆಫೀಸ್​​ನಲ್ಲಿ ಗಳಿಕೆ ಮಾಡಿದೆ. ಚಿರಂಜೀವಿ ಅವರ ಸಿನಿಮಾ ಒಂದು ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟು ದೊಡ್ಡ ಮೊತ್ತ ಗಳಿಸಿರುವುದು ಇದೇ ಮೊದಲು. 2019 ರಲ್ಲಿ ಚಿತ್ರರಂಗಕ್ಕೆ ರೀ ಎಂಟ್ರಿ ಕೊಟ್ಟಾಗಿನಿಂದಲೂ ಸಹ ಚಿರಂಜೀವಿಗೆ ಇಷ್ಟು ದೊಡ್ಡ ಜಯ ಲಭಿಸಿರಲಿಲ್ಲ. ಚಿರಂಜೀವಿ ನಟಿಸಿದ ಸಿನಿಮಾಗಳು ಸತತವಾಗಿ ಬಾಕ್ಸ್ ಆಫೀಸ್​​ನಲ್ಲಿ ಸೋಲುತ್ತಲೇ ಇದ್ದವು. ಆದರೆ ಇದೀಗ ‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ಮೂಲಕ ಚಿರಂಜೀವಿಗೆ ಮತ್ತೆ ಗೆಲುವು ಲಭಿಸಿದೆ.

‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾವನ್ನು ಅನಿಲ್ ರವಿಪುಡಿ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ನಯನತಾರಾ ನಾಯಕಿ. ವಿಕ್ಟರಿ ವೆಂಕಟೇಶ್ ಸಹ ಸಿನಿಮಾನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಾಸ್ಯದ ಜೊತೆಗೆ ಸಖತ್ ಆಕ್ಷನ್ ಸಹ ಸಿನಿಮಾನಲ್ಲಿದೆ. ಈ ಸಿನಿಮಾನಲ್ಲಿ ವಿಂಟೇಜ್ ಚಿರಂಜೀವಿ ಕಾಣಿಸುತ್ತಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link