All posts by nagaraj11081993

Tomato price down: ಟೊಮ್ಯೊಟೋ ಮಾರ್ಕೆಟ್​ನಲ್ಲಿ ಬೆಲೆ ತೀವ್ರ ಕುಸಿತ! ರೈತರು ಕಂಗಾಲು

Tomato price down: ಟೊಮ್ಯೊಟೋ ಮಾರ್ಕೆಟ್​ನಲ್ಲಿ ಬೆಲೆ ತೀವ್ರ ಕುಸಿತ! ರೈತರು ಕಂಗಾಲು

ಚಿಕ್ಕಬಳ್ಳಾಪುರ, ಮಾರ್ಚ್​ 07: ಕೋಲಾರ–ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳು ಅತ್ಯುತ್ತಮ ಗುಣಮಟ್ಟದ ಟೊಮ್ಯಾಟೊ ಬೆಳೆಗೆ ಖ್ಯಾತಿಯಾಗಿದ್ದರೂ, ಇದೀಗ ಕೇಂಪು ಸುಂದರಿ ಟೊಮ್ಯಾಟೊ ಬೆಲೆ ತೀವ್ರ ಕುಸಿತ ಕಂಡಿದೆ. ಚಿಕ್ಕಬಳ್ಳಾಪುರ ಎಪಿಎಂಸಿ ಮಾರುಕಟ್ಟೆಯಲ್ಲಿ 15 ಕೆ.ಜಿ ಟೊಮ್ಯಾಟೊ ಬಾಕ್ಸ್ ಕೇವಲ 110 ರೂಪಾಯಿಗೆ ಮಾರಾಟವಾಗುತ್ತಿದ್ದು ರೈತರು ಕಂಗಾಲಾಗಿದ್ದಾರೆ. ಅಂತರ್ ರಾಜ್ಯಗಳಲ್ಲಿ ಬೇಡಿಕೆ ಕಡಿಮೆಯಾದ ಹಿನ್ನೆಲೆ ಬೆಲೆ ಇಳಿಕೆ ಕಂಡಿದ್ದು, ಮತ್ತೊಂದೆಡೆ ಚಿಲ್ಲರೆ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು 5 ಕೆ.ಜಿ ಟೊಮ್ಯಾಟೊವನ್ನು 100 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಗ್ರಾಹಕರಿಗೆ ಸಿಹಿಯಾಗಿರುವ ಬೆಲೆ ಕುಸಿತ ರೈತರಿಗೆ ಮಾತ್ರ ಕಹಿಯಾಗಿದೆ. ರೈತರು ಟೊಮ್ಯಾಟೊಗೂ ಬೆಂಬಲ ಬೆಲೆ ನೀಡುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು; 200ಕ್ಕೂ ಹೆಚ್ಚು ವಿದೇಶಿ ಪ್ರಜೆಗಳಿಗೆ ಗೇಟ್​​​ಪಾಸ್!

ಬೆಂಗಳೂರು, ಮಾರ್ಚ್​ 07: ಬೆಂಗಳೂರು ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ (Illegal Immigrants) ವಿರುದ್ಧ ಪೊಲೀಸರು ವ್ಯಾಪಕ ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ವಿಶೇಷ ಕಾರ್ಯಾಚರಣೆಯಲ್ಲಿ ಸಿಸಿಬಿ ಅಧಿಕಾರಿಗಳು ಹಾಗೂ ನಗರದ 11 ಡಿಸಿಪಿ ವ್ಯಾಪ್ತಿಯ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದಾರೆ. ಕಳೆದ ಒಂದು ವಾರದಿಂದ ನಿರಂತರವಾಗಿ ನಡೆಯುತ್ತಿರುವ ಈ ಕಾರ್ಯಾಚರಣೆಯಲ್ಲಿ ನಗರದ ವಿವಿಧ ಪ್ರದೇಶಗಳಲ್ಲಿ ತಪಾಸಣೆ ನಡೆಸಿ ಅಕ್ರಮವಾಗಿ ವಾಸಿಸುತ್ತಿದ್ದ ವಿದೇಶಿ ಪ್ರಜೆಗಳನ್ನು ಪತ್ತೆಹಚ್ಚಲಾಗುತ್ತಿದೆ.

ಒಂದೇ ದಿನದಲ್ಲಿ ನೂರಾರು ವಿದೇಶಿ ಪ್ರಜೆಗಳ ಪತ್ತೆ

ಪೊಲೀಸರು ಹೇಳುವಂತೆ ನಗರದಲ್ಲಿ ಒಟ್ಟು 200ಕ್ಕೂ ಅಧಿಕ ಅಕ್ರಮ ವಲಸಿಗರನ್ನು ಗುರುತಿಸಲಾಗಿದ್ದು, ನಿನ್ನೆ ಒಂದೇ ದಿನದಲ್ಲಿ 100ಕ್ಕೂ ಹೆಚ್ಚು ವಿದೇಶಿ ಪ್ರಜೆಗಳನ್ನು ಪತ್ತೆಹಚ್ಚಲಾಗಿದೆ. ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ತಂಗಿದ್ದ ಈ ವಲಸಿಗರು ಅಗತ್ಯ ದಾಖಲೆಗಳಿಲ್ಲದೆ ಅಕ್ರಮವಾಗಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ. ಇವರಲ್ಲಿ ಹೆಚ್ಚಿನವರು ಬಾಂಗ್ಲಾದೇಶ ಮೂಲದವರಾಗಿದ್ದು, ಆಫ್ರಿಕಾ ಸೇರಿದಂತೆ ಇನ್ನೂ ಕೆಲವು ದೇಶಗಳಿಂದ ಬಂದವರೂ ಪತ್ತೆಯಾಗಿದ್ದಾರೆ.

ಪತ್ತೆಯಾದ ಅಕ್ರಮ ವಲಸಿಗರನ್ನು ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿ (FRRO) ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಕಾರ್ಯಾಚರಣೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ FRRO ಅಧಿಕಾರಿಗಳು ಪೊಲೀಸರಿಗೆ ಸಹಕಾರ ನೀಡುತ್ತಿದ್ದಾರೆ.

ಇದನ್ನೂ ಓದಿ ಅಕ್ರಮ ವಲಸಿಗರ ವಿರುದ್ಧ ಪೊಲೀಸರ ಭರ್ಜರಿ ಬೇಟೆ, ಒಂದೇ ದಿನ 2000ಕ್ಕೂ ಹೆಚ್ಚು ಮಂದಿಯ ವಿಚಾರಣೆ

ತನಿಖೆ ವೇಳೆ ಸಿಕ್ತು ದಾಖಲೆ

ಪೊಲೀಸರು ನಡೆಸಿದ ಪರಿಶೀಲನೆ ವೇಳೆ ಕೆಲವರ ಬಳಿ ಆಧಾರ್ ಕಾರ್ಡ್ ಸೇರಿದಂತೆ ಸ್ಥಳೀಯ ದಾಖಲೆಗಳು ಕೂಡ ಪತ್ತೆಯಾಗಿವೆ. ಅವುಗಳ ನೈಜತೆ ಕುರಿತು ಪರಿಶೀಲನೆ ನಡೆಯುತ್ತಿದೆ. ಪತ್ತೆಯಾದ ವಿದೇಶಿ ಪ್ರಜೆಗಳ ವಿವರಗಳನ್ನು ಸಂಬಂಧಿತ ದೇಶಗಳ ಅಧಿಕಾರಿಗಳಿಗೆ ರವಾನಿಸಲಾಗುತ್ತಿದ್ದು, ಅವರ ಗುರುತು ಮತ್ತು ದಾಖಲೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಈ ಹಿಂದೆ ಪೊಲೀಸ್ ಆಯುಕ್ತರ ಸೂಚನೆಯಂತೆ ವಿವಿಧ ವಿಭಾಗಗಳ ಪೊಲೀಸರು ಅನುಮಾನಾಸ್ಪದ ಪ್ರದೇಶಗಳಲ್ಲಿ ತಲಾಶ್ ನಡೆಸಿ ದಾಖಲೆಗಳ ಪರಿಶೀಲನೆ ವೇಳೆ ಫೆಬ್ರವರಿ 26ರ ಒಂದೇ ದಿನ ಸುಮಾರು 2,000ಕ್ಕೂ ಹೆಚ್ಚು ವಿದೇಶಿಗರು ಪತ್ತೆಯಾಗಿದ್ದರು. ಇದರಲ್ಲಿ ಬಹುತೇಕರು ಸರಿಯಾದ ದಾಖಲೆಗಳಿಲ್ಲದೆ ಅಥವಾ ವೀಸಾ ಅವಧಿ ಮೀರಿಸಿ ನಗರದಲ್ಲಿ ವಾಸಿಸುತ್ತಿರುವುದು ಎಂದು ತಿಳಿದು ಬಂದಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಎಲ್​ಪಿಜಿ ಸಿಲಿಂಡರ್ ಬೆಲೆ ಏರಿಕೆಯಿಂದ ಹೋಟೆಲ್​ ಮಾಲೀಕರಲ್ಲಿ ಆತಂಕ, ಗ್ರಾಹಕರಿಗೆ ತಿಂಡಿಗಳ ಬೆಲೆ ಏರಿಕೆ ಟೆನ್ಶನ್

ಮೈಸೂರು, ಮಾರ್ಚ್ 7: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಪ್ರತಿಕೂಲ ಪರಿಣಾಮ ಭಾರತದ ಮೇಲೆ ಬೀರಲು ಪ್ರಾರಂಭವಾಗಿದೆ. ಎಲ್​ಪಿಜಿ ಸಿಲಿಂಡರ್ ದರ ಏರಿಕೆಯಾಗಿದ್ದು, ವಿಶೇಷವಾಗಿ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಬೆಲೆ 115 ರೂಪಾಯಿ ಹೆಚ್ಚಳವಾಗಿದೆ. ಈ ಬೆಲೆ ಏರಿಕೆ ಮತ್ತು ಸಿಲಿಂಡರ್ ಪೂರೈಕೆಯಲ್ಲಿನ ವ್ಯತ್ಯಯ ಮೈಸೂರಿನ ಹೋಟೆಲ್ ಉದ್ಯಮಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ವಾಣಿಜ್ಯ ಸಿಲಿಂಡರ್‌ಗಳ ಬೆಲೆ ದಿಢೀರ್ ಹೆಚ್ಚಳವಾಗಿದ್ದು, ಜೊತೆಗೆ ಅಗತ್ಯಕ್ಕೆ ತಕ್ಕಂತೆ ಪೂರೈಕೆ ಸಹ ಆಗುತ್ತಿಲ್ಲ ಎಂದು ಹೋಟೆಲ್ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ. ಹಿಂದೆ ಹೇಳಿದ ತಕ್ಷಣ ಸಿಗುತ್ತಿದ್ದ ಸಿಲಿಂಡರ್‌ಗಳು ಈಗ ವಿಳಂಬವಾಗಿ ತಲುಪುತ್ತಿವೆ. ಯುದ್ಧದ ಪರಿಸ್ಥಿತಿ ಮತ್ತು ಪೂರೈಕೆ ಕೊರತೆಯನ್ನೇ ಇದಕ್ಕೆ ಕಾರಣವಾಗಿ ನೀಡಲಾಗುತ್ತಿದೆ. ಮೈಸೂರಿನಂತಹ ನಗರದಲ್ಲಿ ಹೋಟೆಲ್ ಉದ್ಯಮಕ್ಕೆ ದಿನಕ್ಕೆ 20-25 ಸಾವಿರ ಸಿಲಿಂಡರ್‌ಗಳು ಬೇಕಾಗುತ್ತವೆ. ಗ್ಯಾಸ್ ಪೂರೈಕೆಯಲ್ಲಿನ ವ್ಯತ್ಯಾಸದಿಂದ ಉದ್ಯಮದ ಮೇಲೆ ಅವಲಂಬಿತವಾಗಿರುವ ಲಕ್ಷಾಂತರ ಜನರ ಬದುಕು ಅನಿಶ್ಚಿತತೆಗೆ ಒಳಗಾಗಿದೆ.

ಮತ್ತೊಂದೆಡೆ, ಪದೇಪದೆ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ಹೋಟೆಲ್​ಗಳಲ್ಲಿ ತಿಂಡಿಗಳ ಬೆಲೆ ಏರಿಕೆಯಾಗುವ ಆತಂಕವೂ ಎದುರಾಗಿದೆ. ಒಂದು ವೇಳೆ ಹೀಗಾದರೆ ಗ್ರಾಹಕರ ಜೇಬಿಗೂ ಹೊರೆಯಾಗಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಾಮರಾಜನಗರ ಅಣ್ಣೂರುಕೇರಿಯಲ್ಲಿ ಮಾರಿ ಹಬ್ಬದ ವೇಳೆ 100ಕ್ಕೂ ಹೆಚ್ಚು ಕುರಿಗಳ ಬಲಿ: ರಕ್ತ ಹೀರಿದ ಅರ್ಚಕ, ಭಯಾನಕ ವಿಡಿಯೋ ವೈರಲ್

ಚಾಮರಾಜನಗರ, ಮಾರ್ಚ್ 7: ಚಾಮರಾಜನಗರ (Chamarajanagar) ಜಿಲ್ಲೆಯ ಗುಂಡ್ಲುಪೇಟೆ (Gundlupet) ತಾಲೂಕಿನ ಅಣ್ಣೂರುಕೇರಿ ಗ್ರಾಮದಲ್ಲಿ ಮಾರಿ ಹಬ್ಬದ ವೇಳೆ ವಿಚಿತ್ರ ಹಾಗೂ ಭಯಾನಕ ಆಚರಣೆ ನಡೆದಿರುವುದು ಬೆಳಕಿಗೆ ಬಂದಿದೆ. ದೇವಿಯ ಜಾತ್ರೆ ಸಂದರ್ಭದಲ್ಲಿ ಗ್ರಾಮಸ್ಥರು ಹರಕೆ ತೀರಿಸುವ ಸಲುವಾಗಿ 100ಕ್ಕೂ ಹೆಚ್ಚು ಕುರಿಗಳನ್ನು ಬಲಿ ನೀಡಿದ್ದಾರೆ. ಗ್ರಾಮದಲ್ಲಿರುವ ದೊಡ್ಡಮ್ಮ ತಾಯಿ ದೇವಿಯ ಮಾರಿ ಹಬ್ಬದ ಅಂಗವಾಗಿ ಈ ಆಚರಣೆ ನಡೆಯುತ್ತದೆ ಎಂದು ತಿಳಿದುಬಂದಿದೆ. ಹಬ್ಬದ ಸಂದರ್ಭದಲ್ಲಿ ಹರಕೆ ಹೊತ್ತಿರುವ ಗ್ರಾಮಸ್ಥರು ತಮ್ಮ ಕುರಿಗಳನ್ನು ಬಲಿಯಾಗಿ ಅರ್ಪಿಸುತ್ತಾರೆ. ಕುರಿಗಳ ಕತ್ತು ಸೀಳಿ ಹರಿಯುವ ರಕ್ತವನ್ನು ಅರ್ಚಕ ಕುಡಿಯುವ ದೃಶ್ಯಗಳು ಕೂಡ ಕಂಡುಬಂದಿವೆ.

ಕುರಿಗಳ ಕತ್ತು ಸೀಳಿ ಹೊರಬರುವ ರಕ್ತವನ್ನು ಅರ್ಚಕ ಮಾದಶೆಟ್ಟಿ ಎನ್ನುವವರು ನೇರವಾಗಿ ಹೀರಿಕೊಳ್ಳುತ್ತಿರುವ ದೃಶ್ಯ ಮೊಬೈಲ್ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಪ್ರತಿವರ್ಷ ಮಾರಿ ಹಬ್ಬದ ಸಂದರ್ಭದಲ್ಲಿ ಇದೇ ರೀತಿಯ ಆಚರಣೆ ನಡೆಯುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನೆಯ ಭಯಾನಕ ವಿಡಿಯೋ ತುಣುಕಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಗ್ರಾಮದಲ್ಲಿ ಪೀಳಿಗೆಯಿಂದಲೂ ನಡೆಯುತ್ತಿರುವ ಈ ಆಚರಣೆ ಬಗ್ಗೆ ಕೆಲವರು ಆಶ್ಚರ್ಯ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಇದನ್ನು ದೇವಿಯ ಆರಾಧನೆಯ ಭಾಗವೆಂದು ಸಮರ್ಥಿಸಿಕೊಂಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜಗನ್ನಾಥನ ದರ್ಶನ ಪಡೆದ ನಾಗ ಚೈತನ್ಯ-ಶೋಭಿತಾ ದಂಪತಿ

ಅಕ್ಕಿನೇನಿ ನಾಗ ಚೈತನ್ಯ (Naga Chaitanya) ಹಾಗೂ ಅವರ ಪತ್ನಿ ಸಿನಿಮಾ ರಂಗದಲ್ಲಿ ತೊಡಗಿಕೊಂಡಿದ್ದಾರೆ. ನಾಗ ಚೈತನ್ಯ ಅವರು ‘ಯೆ ಮಾಯ ಚೇಸಾವೆ’ ಚಿತ್ರದ ಮೂಲಕ ಸೂಪರ್ ಹಿಟ್ ಆದರು. ಇದಾದ ಬಳಿಕ ಹಲವು ಸಿನಿಮಾಗಳಲ್ಲಿ ನಟಿಸಿ ಮೆಚ್ಚುಗೆ ಪಡೆದಿದ್ದಾರೆ. ಈಗ ಅವರು ‘ವೃಷಕರ್ಮ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಈ ಚಿತ್ರದ ಗ್ಲಿಂಪ್ಸ್ ಚಿತ್ರದ ಮೇಲಿನ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಕಾರ್ತಿಕ್ ದಂಡು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಚೈತನ್ಯಗೆ ನಾಯಕಿಯಾಗಿ ಮೀನಾಕ್ಷಿ ಚೌಧರಿ ನಟಿಸುತ್ತಿದ್ದಾರೆ. ಈ ಸಿನಿಮಾದ ಗ್ಲಿಂಪ್ಸ್ ರಿಲೀಸ್ ಆದ ಬಳಿಕ ನಾಗ ಚೈತನ್ಯ ಅವರು ದೇವರ ದರ್ಶನ ಪಡೆದಿದ್ದಾರೆ.

ಇತ್ತೀಚೆಗೆ, ನಾಗ ಚೈತನ್ಯ ಮತ್ತು ಶೋಭಿತಾ ಧುಲಿಪಾಲ ಅವರು ಒಡಿಶಾದ ಪುರಿಯಲ್ಲಿರುವ ಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ದಂಪತಿ ಭಗವಂತನ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ, ಅವರಿಬ್ಬರೂ ಸಾಂಪ್ರದಾಯಿಕ ಉಡುಗೆಯಲ್ಲಿ ಗಮನ ಸೆಳೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ನಾಗ ಚೈತನ್ಯ ಹಾಗೂ ಶೋಭಿತಾ 2024ರಲ್ಲಿ ವಿವಾಹ ಆದರು. ಸಮಂತಾ ಜೊತೆ ಬೇರೆ ಆದ ಬಳಿಕ ನಾಗ ಚೈತನ್ಯ ಅವರು ಒಂಟಿಯಾಗಿದ್ದರು. ಆಗ ಅವರಿಗೆ ಶೋಭಿತಾ ಪರಿಚಯ ಆಯಿತು. ಇಬ್ಬರ ಮಧ್ಯೆ ಪ್ರೀತಿ ಮೂಡಿ, ವಿವಾಹ ಆದರು. ಅತ್ತ ಸಮಂತಾ ಕೂಡ ನಿರ್ದೇಶಕ ರಾಜ್ ಜೊತೆ ಹಸೆಮಣೆ ಏರಿದರು.

ಇದನ್ನೂ ಓದಿ: ಅಯ್ಯಯ್ಯೋ.. ಕುರ್ಚಿಯಿಂದ ಜಾರಿ ಬಿದ್ದ ನಾಗ ಚೈತನ್ಯ; ಪೆಟ್ಟಾಯ್ತಾ?

ಇತ್ತೀಚೆಗೆ ಬಿಡುಗಡೆಯಾದ ‘ವೃಷಕರ್ಮ’ ಗ್ಲಿಂಪ್ಸಸ್ ವಿಷಯಕ್ಕೆ ಬಂದರೆ, ‘ಅಲೌಕಿಕ ಶಕ್ತಿ ಜಾಗೃತವಾದಾಗ, ಸೃಷ್ಟಿ ನಿಯಮ ಉಲ್ಲಂಘಿಸಿದಾಗ, ವಿಧಿ ವೃಷಕರ್ಮನನ್ನು ಆಯ್ಕೆ ಮಾಡಿದಾಗ’ ಎಂಬ ಡೈಲಾಗ್ ಗಮನ ಸೆಳೆದಿದೆ. ನಾಗ ಚೈತನ್ಯ ಅವರು ಸಿನಿಮಾ ಮೂಲಕ ಆ್ಯಕ್ಷನ್ ಮೆರೆಯಲು ರೆಡಿ ಆಗಿದ್ದಾರೆ. ಈ ಚಿತ್ರದ ಕಾರ್ಯಕ್ರಮದ ವೇಳೆ ನಾಗ ಚೈತನ್ಯ ಅವರು ಚೇರ್​​ನಿಂದ ಬಿದ್ದು ಸುದ್ದಿ ಆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ಟಿವಿ9 ಎಕ್ಸ್​​ಪೋದಲ್ಲಿ ‘ಹಯಗ್ರೀವ’ ಯಶಸ್ಸಿನ ಬಗ್ಗೆ ಮಾತನಾಡಿದ ಧನ್ವೀರ್​-ಸಂಜನಾ

ಟಿವಿ9 ಎಕ್ಸ್​​ಪೋ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ನಡೆಯುತ್ತಿದೆ. ಮಾರ್ಚ್ 6, 7, 8 ಮೂರು ದಿನ ಇದು ಇರಲಿದೆ. ಆಟೋಮೊಬೈಲ್, ಲೈಫ್​ಸ್ಟೈಲ್​, ಫರ್ನಿಚರ್​ಗಳ ಮಾರಾಟ ನಡೆಯಲಿದ್ದು, ಒಂದೇ ಸೂರಿನಡಿ ನೂರಾರು ಮಳಿಗೆಗಳ ಸಂಗಮ ಆಗಿದೆ. ಇದಕ್ಕೆ ನಟ ಧನ್ವೀರ್ ಹಾಗೂ ಸಂಜನಾ ಆಗಮಿಸಿದರು. ಈ ವೇಳೆ ಅವರುಗಳು ಟಿವಿ9 ಎಕ್ಸ್​​ಪೋ ಬಗ್ಗೆ ಹಾಗೂ ಹಯಗ್ರೀವ ಸಿನಿಮಾ ಯಶಸ್ಸಿನ ಬಗ್ಗೆ ಮಾತನಾಡಿದರು. ಚಿತ್ರಕ್ಕೆ ಸಿಗುತ್ತಿರುವ ಅದ್ಭುತ ಪ್ರತಿಕ್ರಿಯೆಗೆ ಅವರು ಖುಷಿಯಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಒಂದೇ ಚಿತ್ರದಲ್ಲಿ ಶಿವಣ್ಣ, ಶಾರುಖ್, ರಜನಿ ಮೋಹನ್​​ಲಾಲ್

ಶಾರುಖ್ ಖಾನ್ ಕಮಲ್ ಹಾಸನ್ ಅವರ ದೊಡ್ಡ ಅಭಿಮಾನಿ. ಅವರಿಗೆ ರಜನಿಕಾಂತ್ ಬಗ್ಗೆ ಅಷ್ಟೇ ಗೌರವ ಇದೆ. ಕಮಲ್ ಹಾಸನ್ ನಿರ್ದೇಶನದ ‘ಹೇ ರಾಮ್’ ಚಿತ್ರದಲ್ಲಿ ಶಾರುಖ್ ಒಂದು ರೂಪಾಯಿ ಸಂಭಾವನೆ ಪಡೆಯದೆ ನಟಿಸಿದರು. ಅದಾದ ನಂತರ, ಕಿಂಗ್ ಖಾನ್ ನಿರ್ಮಿಸಿ ನಟಿಸಿದ ‘ರಾ ಒನ್’ ಚಿತ್ರದಲ್ಲಿ ರಜನಿಕಾಂತ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಈಗ ಕಿಂಗ್ ಖಾನ್ ಆ ಸಾಲವನ್ನು ತೀರಿಸಿದ್ದಾರೆ.

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ನಾಯಕನಾಗಿ ಮತ್ತು ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ‘ಜೈಲರ್’ ಭಾರಿ ಯಶಸ್ಸನ್ನು ಕಂಡಿತು. ಶಿವಣ್ಣ, ಮೋಹನ್ ಲಾಲ್, ಜಾಕಿ ಶ್ರಾಫ್ ಮತ್ತು ಇತರ ಕೆಲವು ತಾರೆಯರು ಆ ಚಿತ್ರದಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ, ‘ಜೈಲರ್ 2’ ಚಿತ್ರೀಕರಣ ನಡೆಯುತ್ತಿದೆ, ಈ ಬಾರಿ ಶಾರುಖ್ ಖಾನ್ ‘ಜೈಲರ್ 2’ನಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. 15 ವರ್ಷಗಳ ನಂತರ, ಶಾರುಖ್ ಖಾನ್ ರಜನಿಕಾಂತ್ ಅವರ ಋಣವನ್ನು ತೀರಿಸಿದ್ದಾರೆ. ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರ ವೈಯಕ್ತಿಕ ಸ್ಟೈಲಿಸ್ಟ್ ಜಿಶಾದ್ ಶಂಶುದ್ದೀನ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಶಾರುಖ್ ಖಾನ್ ಕಾರು ಚಾಲನೆ ಮಾಡುತ್ತಿರುವಾಗ ಮೋಹನ್ ಲಾಲ್ ಅವರ ಪಕ್ಕದಲ್ಲಿ ಮತ್ತು ರಜನಿಕಾಂತ್ ಮತ್ತು ಶಿವರಾಜ್ ಕುಮಾರ್ ಹಿಂದಿನ ಸೀಟಿನಲ್ಲಿ ಕುಳಿತಿರುವ ಎಐ ಫೋಟೋವನ್ನು ಜಿಶಾದ್ ಹಂಚಿಕೊಂಡಿದ್ದಾರೆ. ‘ಇದು ಖಂಡಿತವಾಗಿಯೂ ನಡೆಯಲಿದೆ’ ಎಂದು ಅವರು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ಜನಪ್ರಿಯ ನಟ ಮಿಥುನ್ ಚಕ್ರವರ್ತಿ ಕೂಡ ಈ ಬಗ್ಗೆ ಮಾತನಾಡಿದ್ದು, ‘ಜೈಲರ್ 2’ ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸುವುದಾಗಿ ಮತ್ತು ರಜನಿಕಾಂತ್, ಮೋಹನ್ ಲಾಲ್, ಶಾರುಖ್ ಖಾನ್, ಶಿವರಾಜ್‌ಕುಮಾರ್ ಮತ್ತು ರಮ್ಯಾ ಕೃಷ್ಣ ಅವರ ವಿರುದ್ಧ ತೊಡೆ ತಟ್ಟೋದಾಗಿ ಹೇಳಿದ್ದರು.

ಇದನ್ನೂ ಓದಿ: ರಜನಿಕಾಂತ್ ಫೋಟೋಗೆ ಹಾಲಿನ ಅಭಿಷೇಕ ಮಾಡಿ ಶಿವರಾತ್ರಿ ಆಚರಿಸಿದ ಅಭಿಮಾನಿ

ರಜನಿಕಾಂತ್ ನಟಿಸಿದ ‘ಕೂಲಿ’ ಚಿತ್ರದಲ್ಲಿ ಆಮಿರ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಆ ಚಿತ್ರದಲ್ಲಿ ಆಮಿರ್ ಖಾನ್ ಜೊತೆ ಉಪೇಂದ್ರ ಕೂಡ ಕೆಲವು ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಜನಿಕಾಂತ್ ಅವರ ಚಿತ್ರದಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 2023 ರಲ್ಲಿ ಬಿಡುಗಡೆಯಾದ ‘ಜೈಲರ್’ ಚಿತ್ರದ ಮೊದಲ ಭಾಗದಲ್ಲಿ ಶಿವಣ್ಣ ಅವರ ಅತಿಥಿ ಪಾತ್ರ ಚೆನ್ನಾಗಿ ಕೆಲಸ ಮಾಡಿತು. ಆ ಚಿತ್ರದಲ್ಲಿ ಮುಖ್ಯ ಪಾತ್ರ ಎಷ್ಟು ಜನಪ್ರಿಯವಾಯಿತೋ, ನರಸಿಂಹ ಪಾತ್ರವೂ ಅಷ್ಟೇ ಜನಪ್ರಿಯವಾಯಿತು. ‘ಜೈಲರ್ 2’ ನಲ್ಲಿ ಶಿವಣ್ಣ ನರಸಿಂಹನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಮತ್ತು ಈ ಬಾರಿ ಅವರ ಪಾತ್ರ ಅಷ್ಟೇ ಶಕ್ತಿಶಾಲಿಯಾಗಿರುತ್ತದೆ ಎಂದು ಹೇಳಲಾಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ರಷ್ಯಾದಿಂದ ಕಚ್ಚಾ ತೈಲ ಖರೀದಿಸಲು ಭಾರತಕ್ಕೆ ಹೇಳಿದ್ದೇಕೆ ಅಮೆರಿಕ? ಅಸಲಿ ಕಾರಣ ಬಯಲು

ವಾಷಿಂಗ್ಟನ್, ಮಾರ್ಚ್ 7: ಭಾರತವು (India) ರಷ್ಯಾದ ಕಚ್ಚಾ ತೈಲವನ್ನು (Crude Oil) ಖರೀದಿಸಲು ಅನುಮತಿ ನೀಡಿರುವುದರ ಕಾರಣ ಏನೆಂಬುದನ್ನು ಅಮೆರಿಕದ ಇಂಧನ ಸಚಿವ ಕ್ರಿಸ್ ರೈಟ್ (Chris Wright) ಬಹಿರಂಗಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಇರಾನ್‌ನೊಂದಿಗಿನ ಸಂಘರ್ಷದಿಂದಾಗಿ ಜಾಗತಿಕ ಕಚ್ಚಾ ಮಾರುಕಟ್ಟೆಯ ಮೇಲೆ ಒತ್ತಡದ ಸನ್ನಿವೇಶ ಸೃಷ್ಟಿಯಾಗಿದೆ. ತೈಲ ಮಾರುಕಟ್ಟೆಯ ಮೇಲಿನ ಈ ಒತ್ತಡವನ್ನು ಕಡಿಮೆ ಮಾಡುವ ದೃಷ್ಟಿಯಿಂದ ರಷ್ಯಾದ ತೈಲ ಖರೀದಿಸುವಂತೆ ಭಾರತಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ಭಾರತವು ರಷ್ಯಾದಿಂದ ಸಂಗ್ರಹಿತ ತೈಲವನ್ನು ಖರೀದಿಸಿ ತನ್ನ ರಿಫೈನರಿಗಳಲ್ಲಿ ಬಳಸಿದರೆ ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಇರುವ ಒತ್ತಡ ಕಡಿಮೆಯಾಗುತ್ತದೆ. ಇದರಿಂದ ಇತರ ದೇಶಗಳ ರಿಫೈನರಿಗಳ ಮೇಲಿನ ಒತ್ತಡವೂ ತಗ್ಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲದ ಬೆಲೆ ಸ್ಥಿರವಾಗಲು ಸಹಾಯವಾಗಬಹುದು ಎಂದು ಕ್ರಿಸ್ ರೈಟ್ ಹೇಳಿದ್ದಾರೆ.

ಅಮೆರಿಕದ ಪ್ರಕಾರ, ಭಾರತ ಹೆಚ್ಚು ಪ್ರಮಾಣದಲ್ಲಿ ರಷ್ಯಾ ತೈಲವನ್ನು ಖರೀದಿಸಿದರೆ ಅದು ಭಾರತೀಯ ರಿಫೈನರಿಗಳಲ್ಲಿ ಸಂಸ್ಕರಣೆಗೆ ಹೋಗುತ್ತದೆ. ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಇತರ ರಿಫೈನರಿಗಳಿಗೆ ಲಭ್ಯವಾಗುವ ತೈಲದ ಒತ್ತಡ ಕಡಿಮೆಯಾಗುತ್ತದೆ ಮತ್ತು ಬೆಲೆ ಏರಿಕೆಯನ್ನು ನಿಯಂತ್ರಿಸಲು ಸಹಾಯವಾಗುತ್ತದೆ. ಹೀಗಾಗಿ ನಮ್ಮ ಸ್ನೇಹಿತ ರಾಷ್ಟ್ರವಾದ ಭಾರತದ ಬಳಿ ರಷ್ಯಾದ ತೈಲ ಖರೀದಿಸುವಂತೆ ಕೇಳಿಕೊಂಡಿದ್ದೇವೆ ಎಂದು ಅಮೆರಿಕ ಹೇಳಿದೆ.

ಅಮೆರಿಕ ಇಂಧನ ಸಚಿವ ಕ್ರಿಸ್ ರೈಟ್ ಮಾತಿನ ವಿಡಿಯೋ

ರಷ್ಯಾದ ತೈಲ ಖರೀದಿಸಲು 30 ದಿನಗಳ ಕಾಲ ಭಾರತಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಅಮೆರಿಕ ಮಾರ್ಚ್ 6 ರಂದು ತಿಳಿಸಿತ್ತು. ಆದಾಗ್ಯೂ, ಅಮೆರಿಕ ಅಧಿಕೃತ ಹೇಳಿಕೆ ನೀಡುವುದಕ್ಕೂ ಮುನ್ನವೇ ರಷ್ಯಾದಿಂದ ಕಚ್ಚಾ ತೈಲ ಖರೀದಿ ಬಗ್ಗೆ ಭಾರತ ನಿರ್ಧಾರ ಪ್ರಕಟಿಸಿತ್ತೆಂಬುದು ಗಮನಾರ್ಹ. ಮಧ್ಯಪ್ರಾಚ್ಯ ಬಿಕ್ಕಟ್ಟು ಹಾಗೂ ಹಾರ್ಮುಜ್ ಜಲಸಂಧಿ ಬಂದ್‌ ಬೆನ್ನಲ್ಲೇ ಭಾರತಕ್ಕೆ ರಷ್ಯಾ ಹೆಚ್ಚುವರಿ 9.5 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲ ಪೂರೈಸಲು ಸಿದ್ಧವಾಗಿದೆ ಎಂದು ಮಾರ್ಚ್ 4 ರಂದು ವರದಿಯಾಗಿತ್ತು. 9.5 ಮಿಲಿಯನ್ ಬ್ಯಾರೆಲ್ ರಷ್ಯನ್ ಕಚ್ಚಾ ತೈಲ ಈಗಾಗಲೇ ಭಾರತೀಯ ಸಮುದ್ರ ಗಡಿಯ ಸಮೀಪದಲ್ಲಿರುವ ಹಡಗುಗಳಲ್ಲಿ ಲಭ್ಯವಿದ್ದು, ಇದು ಕೆಲವು ವಾರಗಳಲ್ಲಿ ಭಾರತಕ್ಕೆ ತಲುಪುವ ಸಾಧ್ಯತೆ ಇದೆ ಎಂದೂ ವರದಿಯಾಗಿತ್ತು.

ಇದನ್ನೂ ಓದಿ: ಇರಾನ್ ಹಾರ್ಮುಜ್ ಜಲಸಂಧಿ ಬಂದ್: ತೈಲ ಕೊರತೆ ಆತಂಕದಲ್ಲಿದ್ದ ಭಾರತಕ್ಕೆ ರಷ್ಯಾ ಮತ್ತೆ ಆಪತ್ಭಾಂಧವ!

ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಮಾರ್ಚ್ 6 ರಂದು, ಭಾರತಕ್ಕೆ ರಷ್ಯಾದ ಕಚ್ಚಾ ತೈಲ ಖರೀದಿಗೆ ಅನುಮತಿ ನೀಡಿರುವುದಾಗಿ ಅಮೆರಿಕ ಹೇಳಿತ್ತು. ಇದು ಭಾರತದಲ್ಲಿ ತೀವ್ರ ರಾಜಕೀಯ ಚರ್ಚೆಗೂ ಗ್ರಾಸವಾಗಿತ್ತು. ಅಮೆರಿಕವು ಭಾರತವನ್ನು ತನಗೆ ಬೇಕಾದಂತೆ ನಡೆಸಿಕೊಳ್ಳುತ್ತಿದೆ ಎಂಬ ಟೀಕೆಗಳೂ ವ್ಯಕ್ತವಾಗಿದ್ದವು. ಆದರೀಗ, ರಷ್ಯಾ ತೈಲ ಖರೀದಿಸುವಂತೆ ಸ್ನೇಹಿತ ರಾಷ್ಟ್ರವಾದ ಭಾರತಕ್ಕೆ ಮನವಿ ಮಾಡಿದ್ದೇವೆ ಎಂದು ಅಮೆರಿಕದ ಇಂಧನ ಸಚಿವ ಕ್ರಿಸ್ ರೈಟ್ ಹೇಳಿದ್ದಾರೆ. ಅಲ್ಲದೆ, ಈ ಮನವಿಯ ಹಿಂದಿನ ಕಾರಣವನ್ನೂ ಬಿಚ್ಚಿಟ್ಟಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಹೊಸ ಉದ್ಯಮ ಆರಂಭಿಸಿದ ಗೌತಮ್; ಹೊಸ ಅಧ್ಯಾಯಕ್ಕೆ ನಾಂದಿ

‘ಅಮೃತಧಾರೆ’ ಧಾರಾವಾಹಿಯು ಕಳೆದ ಕೆಲವು ಸಮಯದಿಂದ ನಿಧಾನಗತಿಯಲ್ಲಿ ಸಾಗುತ್ತಿತ್ತು ಎಂದರೂ ತಪ್ಪಾಗಲಾರದು. ಆದರೆ, ಈಗ ಧಾರಾವಾಹಿಯಲ್ಲಿ ಮಹತ್ವದ ಬದಲಾವಣೆ ಮಾಡುವ ಸಮಯ ಬಂದಿದೆ. ಈ ಧಾರಾವಾಹಿಯಲ್ಲಿ ಇಷ್ಟು ದಿನ ಗೌತಮ್ ಉದ್ಯಮ ಮಾಡೋದಾಗಿ ಹೇಳುತ್ತಿದ್ದನು ಮತ್ತು ಅದನ್ನು ಆರಂಭಿಸಿರಲಿಲ್ಲ. ಆದರೆ, ಈಗ ಉದ್ಯಮ ಮಾಡಲು ಆತನು ಸಿದ್ಧನಾಗಿದ್ದಾನೆ. ಎದುರಾಳಿ ಜೊತೆಯೇ ಕೈ ಜೋಡಿಸಿದ್ದಾನೆ.

ಕುಟುಂಬದವರೇ ಮಾಡಿದ ಮೋಸದ ಕಾರಣದಿಂದ ಗೌತಮ್ ಸಾಕಷ್ಟು ಬೇಸರ ಮಾಡಿಕೊಂಡಿದ್ದ. ಆತ ಆಸ್ತಿಯನ್ನು ಮಲ ತಮ್ಮನಿಗೆ ಬರೆದುಕೊಟ್ಟಿದ್ದ. ಆದರೂ ಆತನ ದಾಹ ತೀರಿರಲಿಲ್ಲ. ಕೊನೆಯದಾಗಿ ಗೌತಮ್ ಉಳಿಸಿಕೊಂಡಿದ್ದ ತಂದೆಯ ಸಮಾಧಿಯನ್ನು ಕೂಡ ಮೋಸದಿಂದ ಪಡೆದುಕೊಂಡ. ಇದು ಧಾರಾವಾಹಿಗೆ ಮಹತ್ವದ ತಿರುವು ನೀಡಿದೆ ಎಂದೇ ಹೇಳಬಹುದು.

ಈ ಮೊದಲಿನಿಂದಲೂ ಉದ್ಯಮ ಮಾಡುವುದಾಗಿ ಗೌತಮ್ ಹೇಳುತ್ತಲೇ ಬರುತ್ತಿದ್ದನು ಮತ್ತು ಉದ್ಯಮ ಆರಂಭಿಸಿರಲಿಲ್ಲ. ಆದರೆ, ಇದೇ ಮೊದಲ ಬಾರಿಗೆ ಆತ ಬಿಸ್ನೆಸ್ ಶುರು ಮಾಡಿದ್ದಾನೆ. ಬ್ರೋಕರ್ ಆ್ಯಪ್ ಒಂದನ್ನು ಆರಂಭಿಸಿದ್ದಾನೆ. ಇದು ಸದ್ಯ ಸ್ಟಾರ್ಟ್​​ಅಪ್. ಆದರೆ, ಇದನ್ನು ದೊಡ್ಡದಾಗಿ ಬೆಳೆಸುವ ಆಲೋಚನೆ ಆತನಿಗೆ ಇದೆ.

ಹೇಳಿಕೇಳಿ ಗೌತಮ್ ದೊಡ್ಡ ಉದ್ಯಮಿ. ಉದ್ಯಮ ಮಾಡೋದು ಅವನ ರಕ್ತದಲ್ಲೇ ಇದೆ. ಈ ಕಾರಣದಿಂದ ಯಾವುದೇ ಅಂಜಿಕೆ ಇಲ್ಲದೆ ಉದ್ಯಮ ಆರಂಭಿಸಿದ್ದಾರೆ. ದೀವಾನ್ ಗ್ರೂಪ್​​ನ ಎದುರಾಳಿ ಎನಿಸಿಕೊಂಡಿರುವ ಸಂಸ್ಥೆ ಜೊತೆ ಗೌತಮ್ ಕೈ ಜೋಡಿಸಿರುವುದು ವಿಶೇಷ.

ಇದನ್ನೂ ಓದಿ: ‘ಅಮೃತಧಾರೆ’:ಕಳೆದುಕೊಂಡಿದ್ದಕ್ಕಿಂತ 10 ಪಟ್ಟು ಹೆಚ್ಚು ಗಳಿಸ್ತೀನಿ; ಗೌತಮ್ ಚಾಲೆಂಜ್

ಈ ಎಲ್ಲಾ ಬೆಳವಣಿಗೆಯಿಂದ ಜಯದೇವ್​​​ಗೆ ಭಯ ಶುರುವಾಗಿದೆ. ಇದು ಸ್ಟಾರ್ಟ್​ ಮಾತ್ರವೇ ಆಗಿದೆ ಎಂದು ಆತ ಭಯ ಬಿದ್ದಿದ್ದ. ಆದರೆ, ಗೌತಮ್ ಏನೇ ಮಾಡಿದರೂ ಅದರಲ್ಲಿ ಯಶಸ್ಸು ಕಾಣುತ್ತಾನೆ ಎಂಬುದನ್ನು ಆತ ಸರಿಯಾಗಿ ಬಲ್ಲನು. ಹೀಗಾಗಿ, ಈಗಲೇ ಆತನಿಗೆ ಭಯ ಶುರುವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಶ್ರೀಕೃಷ್ಣನಿಗೆ 16 ಸಾವಿರ ಪತ್ನಿಯರು ಇದ್ದಿದ್ದು ನಿಜವೇ? ಅಸಲಿಯತ್ತು ಇಲ್ಲಿದೆ ನೋಡಿ

ಸಾಮಾನ್ಯವಾಗಿ ಶ್ರೀ ಕೃಷ್ಣ ಪರಮಾತ್ಮನಿಗೆ 16,000 ಗೋಪಿಕಾ ಸ್ತ್ರೀಯರು ಇದ್ದರು ಎಂಬ ಮಾತು ಕೇಳಿಬರುತ್ತದೆ. ಈ ಬಗ್ಗೆ ಟಿವಿ9 ನಿತ್ಯಭಕ್ತ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಕೃಷ್ಣನಿಗೆ 16000 ಪತ್ನಿಯರಿದ್ದರು ಎಂಬ ವಿಚಾರ ನಿಜವೇ ಎಂಬ ಪ್ರಶ್ನೆಗೆ ಧರ್ಮಶಾಸ್ತ್ರಗಳು ಸ್ಪಷ್ಟ ಉತ್ತರ ನೀಡುತ್ತವೆ ಎಂದು ಅವರು ಹೇಳಿದ್ದಾರೆ. ಶ್ರೀಕೃಷ್ಣನು ನರಕಾಸುರನನ್ನು ಸಂಹಾರ ಮಾಡಿದಾಗ, ಆತನ ಸೆರೆಯಲ್ಲಿದ್ದ 16,000 ಸ್ತ್ರೀಯರು ಬಂಧಮುಕ್ತರಾದರು. ಈ ಮಹಿಳೆಯರು ವಿವಿಧ ದೇಶಗಳ ಮೂಲೆಗಳಿಂದ ಸೆರೆಹಿಡಿಯಲ್ಪಟ್ಟವರಾಗಿದ್ದರು. ನರಕಾಸುರನ ಬಂಧನದಿಂದ ಮುಕ್ತರಾದಾಗ, ಸಮಾಜದಲ್ಲಿ ತಮ್ಮ ರಕ್ಷಣೆ ಮತ್ತು ಗೌರವದ ಕುರಿತು ಆತಂಕಗೊಂಡರು. ಶ್ರೀ ಕೃಷ್ಣನು ಅವರ ಜವಾಬ್ದಾರಿಯನ್ನು ಹೊತ್ತುಕೊಂಡನು. ಸಮಾಜದಲ್ಲಿ ಅಪಮಾನದಿಂದ ಅವರನ್ನು ರಕ್ಷಿಸಲು, ಶ್ರೀ ಕೃಷ್ಣನು ‘ನೀವು ನನ್ನ ಹೆಸರು ಹೇಳಿಕೊಳ್ಳಿ’ ಎಂದು ಅವರಿಗೆ ಧೈರ್ಯ ತುಂಬಿದನು. ಇದರರ್ಥ, ಭಗವಾನ್ ಕೃಷ್ಣನು ಅವರಿಗೆ ರಾಜನಂತೆ ಆಶ್ರಯ, ರಕ್ಷಣೆ ಮತ್ತು ಗೌರವ ನೀಡಿದನೇ ಹೊರತು, ಅವರನ್ನು ವಿವಾಹವಾಗಿದ್ದಕ್ಕೆ ಯಾವುದೇ ಪುರಾವೆಗಳಿಲ್ಲ. ಕೃಷ್ಣ ಅವರನ್ನು ಪ್ರಜೆಯಂತೆ ನೋಡಿಕೊಂಡನು, ಅವರಿಗೆ ಜೀವನಕ್ಕೆ ಅನುಕೂಲ ಮಾಡಿಕೊಟ್ಟನು ಮತ್ತು ಅನಾಥ ರಕ್ಷಕನಾಗಿ, ದೀನಬಂಧುವಾಗಿ ನಿಂತನು ಎದು ಗುರೂಜಿ ಹೇಳಿದ್ದಾರೆ. ಈ ಮೂಲಕ ಈ ವಿಷಯದಲ್ಲಿರುವ ಗೊಂದಲವನ್ನು ದೂರ ಮಾಡುವುದು ಸೂಕ್ತ ಎಂದು ಅವರು ಹೇಳಿದ್ದಾರೆ.

Source link