ಮಥುರಾ, ಮಾರ್ಚ್ 03: ದೇಶಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹೋಳಿ ಆಚರಣೆ ಸಂದರ್ಭದಲ್ಲಿ ಹೊತ್ತಿಸಿದ್ದ ಬೃಹತ್ ಬೆಂಕಿಯ ಗೋಪುರದ ಮೇಲೆ ವ್ಯಕ್ತಿಯೊಬ್ಬ ನಡೆದಿದ್ದಾರೆ. ಅದು ಅಲ್ಲಿಯ ಸಂಪ್ರದಾಯ, ಪ್ರತಿ ವರ್ಷ ಹೋಳಿ ಹಬ್ಬದ ಮುನ್ನಾದಿನ ಈ ಆಚರಣೆ ನಡೆಯುತ್ತದೆ. ಪ್ರಹ್ಲಾದನ ಪಾತ್ರಧಾರಿ ಈ ಬೆಂಕಿಯಲ್ಲಿ ನಡೆದುಕೊಂಡು ಹೋಗಿದ್ದಾರೆ. ಅವರು ಕಳೆದ 45 ದಿನಗಳಿಂದ ಕಠಿಣ ವ್ರತವನ್ನು ಆಚರಿಸುವುದು ಮಾತ್ರವಲ್ಲದೆ, 45 ದಿನಗಳಿಂದ ಉಪವಾಸವಿದ್ದಾರೆ. ಮನೆ ಹಾಗೂ ಕುಟುಂಬದಿಂದ ಬೇರ್ಪಟ್ಟಿರುತ್ತಾರೆ.
ನಮ್ಮ ಸನಾತನ ಸಂಸ್ಕೃತಿಯಲ್ಲಿ ಗ್ರಹಣಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಇಂದು (ಮಾ.03) ಗ್ರಸ್ತೋದಯ ಪಾಕ್ಷಿಕ ಕೇತುಗ್ರಸ್ತ ಚಂದ್ರಗ್ರಹಣ ಸಂಭವಿಸಲಿದೆ. ಇದು ಭಾರತದಲ್ಲಿ ಗೋಚರವಾಗುತ್ತದೆ. ಗ್ರಸ್ತೋದಯ ಎಂದರೆ ಸೂರ್ಯ ಅಸ್ತಮಿಸುವಾಗ ಮತ್ತು ಚಂದ್ರ ಉದಯಿಸುವಾಗ ಗ್ರಹಣ ಸಂಭವಿಸುವುದು. ಈ ಗ್ರಹಣದ ವಿಶೇಷಗಳು, ಆಚರಣೆಗಳು, ವಿಧಿವಿಧಾನಗಳು ಮತ್ತು ರಾಶಿಗಳ ಮೇಲಿನ ಪ್ರಭಾವಗಳ ಕುರಿತು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ತಿಳಿಸಿರುವ ಮಾಹಿತಿ ಇಲ್ಲಿದೆ.
ಈ ಚಂದ್ರಗ್ರಹಣವು ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಕಾರ್ತಿಕ ಮಾಸದ ಶುಕ್ಲ ಹುಣ್ಣಿಮೆಯಂದು ಸಂಭವಿಸುತ್ತಿದೆ. ಹುಣ್ಣಿಮೆಯು ನೆನ್ನೆ ಸಂಜೆ 5 ಗಂಟೆ 55 ನಿಮಿಷಕ್ಕೆ ಪ್ರಾರಂಭವಾಗಿ, ಇಂದು ಸಂಜೆ 4 ಗಂಟೆ 24 ನಿಮಿಷಕ್ಕೆ ಮುಕ್ತಾಯಗೊಳ್ಳುತ್ತದೆ. ಈ ಗ್ರಹಣವು ಭಾರತದಲ್ಲಿ ಗೋಚರಿಸುವುದರಿಂದ ಸೂತಕ ಮತ್ತು ಆಚಾರ-ವಿಚಾರಗಳು ಅನ್ವಯಿಸುತ್ತವೆ.
ಗ್ರಹಣದ ಪ್ರಮುಖ ಸಮಯಗಳು:
ಸ್ಪರ್ಶ ಕಾಲ: ಮಧ್ಯಾಹ್ನ 2 ಗಂಟೆ 39 ನಿಮಿಷಕ್ಕೆ. ಈ ಗ್ರಹಣವು ಭರಣಿ ನಕ್ಷತ್ರದ ಎರಡನೆಯ ಪಾದದಲ್ಲಿ ಸಂಭವಿಸುತ್ತದೆ. ಆದರೆ ಭಾರತದಲ್ಲಿ ಗ್ರಹಣ ಸ್ಪರ್ಶ ಕಾಲದಲ್ಲಿ ಚಂದ್ರ ಗೋಚರ ಇರುವುದಿಲ್ಲ.
ಮಧ್ಯಮ ಕಾಲ: ಸಂಜೆ 4 ಗಂಟೆ 29 ನಿಮಿಷ
ಮೋಕ್ಷ ಕಾಲ: ಸಂಜೆ 6 ಗಂಟೆ 19 ನಿಮಿಷಕ್ಕೆ
ಗ್ರಹಣದ ಸಮಯದಲ್ಲಿ ಪಾಲಿಸಬೇಕಾದ ವಿಧಿವಿಧಾನಗಳು:
ಗ್ರಹಣದ ಅವಧಿಯಲ್ಲಿ ದೇವಾಲಯಗಳನ್ನು ಮುಚ್ಚಲಾಗುತ್ತದೆ. ಈ ಸಮಯದಲ್ಲಿ ಅನಗತ್ಯ ಪ್ರಯಾಣ ಮಾಡುವುದು ಅಷ್ಟು ಶುಭಕರವಲ್ಲ. ಗ್ರಹಣ ಪ್ರಾರಂಭವಾಗುವ ಮೊದಲೇ ಆಹಾರ ಸೇವಿಸಬೇಕು. ಕೆಲವರು ಗ್ರಹಣಕ್ಕೂ ಮೊದಲು ಸ್ನಾನ ಮಾಡುತ್ತಾರೆ, ಆದರೆ ಗ್ರಹಣ ನಂತರ ಎಲ್ಲರೂ ಕಡ್ಡಾಯವಾಗಿ ಸ್ನಾನ ಮಾಡಬೇಕು. ಗ್ರಹಣದ ಮೊದಲು ದರ್ಬೆ ಮತ್ತು ತುಳಸಿ ಎಲೆಗಳನ್ನು ಆಹಾರ ಪದಾರ್ಥಗಳ ಮೇಲೆ ಇಡುವುದು ಸಾಂಪ್ರದಾಯಿಕ ಪದ್ಧತಿ. ವೃದ್ಧರು, ಅಶಕ್ತರು, ರೋಗಿಗಳು, ಪುಟ್ಟ ಮಕ್ಕಳು ಮತ್ತು ಗರ್ಭಿಣಿಯರು ಗ್ರಹಣ ಕಾಲದಲ್ಲಿ ಮನೆಯಿಂದ ಹೊರಗೆ ಸಂಚಾರ ಮಾಡದಿರುವುದು ಒಳ್ಳೆಯದು. ಗ್ರಹಣ ಕಾಲದಲ್ಲಿ ಮಂತ್ರ-ಜಪಗಳನ್ನು ಮಾಡುವುದು ಅತ್ಯಂತ ಶುಭಕರ ಎಂದು ನಂಬಲಾಗಿದೆ.
ಗ್ರಹಣ ಸ್ಪರ್ಶ ಕಾಲದಲ್ಲಿ ಬಾಳೆ ಎಲೆ ಅಥವಾ ವೀಳ್ಯದೆಲೆಯ ಮೇಲೆ ಒಂದು ಚಮಚ ಮೊಸರನ್ನ ಅಥವಾ ಹಾಲು ಮಿಶ್ರಿತ ಅನ್ನವನ್ನು ಇಟ್ಟು, ಮನೆಯ ಮುಂಬಾಗಿಲಿನ ಮುಂದೆ ನೆಲವನ್ನು ಶುದ್ಧಿ ಮಾಡಿ, ಆ ಎಲೆಯನ್ನು ಅಲ್ಲಿ ಇರಿಸಿ, ಅದರ ಮೇಲೆ ಒಂದು ಮುಚ್ಚಳವನ್ನು ಮುಚ್ಚಿ ಬಾಗಿಲನ್ನು ಮುಚ್ಚಿದರೆ, ಆ ಮನೆಗೆ ಗ್ರಹಣದ ಯಾವುದೇ ಕಂಟಕಗಳು ಅಥವಾ ದೋಷಗಳು ಬರುವುದಿಲ್ಲ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಾಮ್ ಚರಣ್ ಅವರು ‘ಪೆದ್ದಿ’ ಸಿನಿಮಾದಲ್ಲಿ (Peddi Movie) ನಟಿಸುತ್ತಿದ್ದಾರೆ. ಈ ಚಿತ್ರದ ‘ಹೋಯ್ ಹೋಯ್ ವೀರ’ ಹಾಡು ರಿಲೀಸ್ ಆಗಿದೆ. ಈ ಮೊದಲು ಬಿಡುಗಡೆ ಆಗಿದ್ದ ‘ಚಿಕಿರಿ ಚಿಕಿರಿ’ ಹಾಡು ಸೂಪರ್ ಹಿಟ್ ಆಯಿತು. ರಾಮ್ ಚರಣ್ ಡ್ಯಾನ್ಸ್ಗೆ ಎಲ್ಲರೂ ಫಿದಾ ಆದರು. ಈಗ ರಿಲೀಸ್ ಆಗಿರುವ ಹಾಡು ಕೂಡ ಗಮನ ಸೆಳೆಯುವ ರೀತಿಯಲ್ಲಿ ಇದೆ.
ಈ ಮೊದಲು ರಿಲೀಸ್ ಆಗಿದ್ದ ‘ಪೆದ್ದಿ’ ಸಿನಿಮಾದ ‘ಚಿಕಿರಿ ಚಿಕಿರಿ’ ಹಾಡು ಕೋಟಿ ಕೋಟಿ ವೀಕ್ಷಣೆ ಪಡೆದಿದೆ. ಇದರಲ್ಲಿ ರಾಮ್ ಚರಣ್ ಅವರ ಸ್ಟೆಪ್ಸ್ ಸಾಕಷ್ಟು ಗಮನ ಸೆಳೆದಿತ್ತು. ಈಗ ರಿಲೀಸ್ ಆಗಿರುವ ‘ಹೋಯ್ ಹೋಯ್ ವೀರ’ದಲ್ಲಿಯೂ ಅವರು ಹೆಜ್ಜೆ ಹಾಕಿದ ರೀತಿ ಗಮನ ಸೆಳೆದಿದೆ.
‘ಪೆದ್ದಿ’ ಸಿನಿಮಾದ ಮತ್ತೊಂದು ಹೈಲೈಟ್ ಎಂದರೆ ಅದು ಎಆರ್ ರೆಹಮಾನ್ ಮ್ಯೂಸಿಕ್. ಆಸ್ಕರ್ ಪ್ರಶಸ್ತಿ ವಿಜೇತರಾದ ಅವರು ಈ ಸಿನಿಮಾಗೆ ಮ್ಯೂಸಿಕ್ ಮಾಡುತ್ತಾರೆ ಎಂದಾಗ ಕುತೂಹಲ ಮೂಡಿತು. ಈಗ ಅವರ ಬತ್ತಳಿಕೆಯಿಂದ ಉತ್ತಮ ಹಾಡುಗಳು ಹೊರ ಬರುತ್ತಿವೆ. ಈ ಹಾಡುಗಳು ಗಮನ ಸೆಳೆಯುವ ರೀತಿಯಲ್ಲಿ ಇವೆ.
When grit finds its voice 🔥
When grace finds its moves 🤩#Peddi second single #RaiRaiRaaRaa (Telugu) out now❤️🔥
‘ಪೆದ್ದಿ’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಸೃಷ್ಟಿ ಆಗಿದೆ. ಈ ಸಿನಿಮಾ ಏಪ್ರಿಲ್ 30ರಂದು ತೆರೆಗೆ ಬರುತ್ತಿದೆ. ಇತ್ತೀಚೆಗೆ ರಾಮ್ ಚರಣ್ ಅವರು ಸಿನಿಮಾದ ಡಬ್ಬಿಂಗ್ ಕೆಲಸದಲ್ಲಿ ತೊಡಗಿಕೊಂಡಿದ್ದ ವಿಡಿಯೋ ವೈರಲ್ ಆಗಿತ್ತು. ಈಗ ಹಾಡುಗಳನ್ನು ರಿಲೀಸ್ ಮಾಡುವ ಮೂಲಕ ಗಮನ ಸೆಳೆಯಲಾಗುತ್ತಿದೆ.
ವಸಂತ ಕಾಲದ ಆಗಮನ ಮತ್ತು ಕೆಟ್ಟದರ ವಿರುದ್ಧ ಒಳ್ಳೆಯದರ ವಿಜಯದ ಸಂಕೇತವನ್ನು ಸೂಚಿಸುವ ಬಣ್ಣಗಳ ಹಬ್ಬ ಹೋಳಿಯನ್ನು (Holi) ದೇಶಾದ್ಯಂತ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಫಾಲ್ಗುಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುವ ಈ ಬಣ್ಣಗಳ ಹಬ್ಬ ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಬಲು ಇಷ್ಟ. ಈ ಶುಭ ದಿನದಂದು ಜನ ಪರಸ್ಪರ ಬಣ್ಣ ಹಚ್ಚಿ, ಸಿಹಿ ಹಂಚುವ ಮೂಲಕ ತಮ್ಮ ಪ್ರೀತಿಪಾತ್ರರೊಂದಿಗಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತಾರೆ. ಇದು ಬಣ್ಣಗಳೊಂದಿಗೆ ಆಟವಾಡುವ ಹಬ್ಬವಷ್ಟೇ ಅಲ್ಲ, ಪ್ರೀತಿ, ವಾತ್ಸಲ್ಯ, ಸಕಾರಾತ್ಮಕತೆ ಮತ್ತು ಸಹೋದರತ್ವವನ್ನು ಹಂಚಿಕೊಳ್ಳುವ ಸುಸಂದರ್ಭವೂ ಆಗಿದೆ. ಈ ಹಬ್ಬವನ್ನು ಮತ್ತಷ್ಟು ವಿಶೇಷವಾಗಿಸಲು, ಹಬ್ಬದ ಪ್ರೀತಿಪೂರ್ವಕ ಶುಭಾಶಯಗಳನ್ನು ತಿಳಿಸಲು ನಿಮಗಾಗಿ ಇಲ್ಲಿದೆ ಅರ್ಥಪೂರ್ಣ ಸಂದೇಶಗಳು.
ಇಲ್ಲಿವೆ ನಿಮಗಾಗಿ ಹೋಳಿ ಹಬ್ಬದ ಶುಭ ಸಂದೇಶಗಳು:
ಬಣ್ಣಗಳ ಹಬ್ಬ ಹೋಳಿ ನಿಮಗೆ ಸುಖ ಶಾಂತಿ, ಸಮೃದ್ಧಿ ತರಲಿ, ನಿಮ್ಮ ಬಣ್ಣ ಬಣ್ಣದ ಕನಸುಗಳೆಲ್ಲಾ ನನಸಾಗಲಿ.
ನಿಮ್ಮ ಇಷ್ಟಾರ್ಥಗಳೆಲ್ಲಾ ನೆರವೇರಲಿ, ಹೋಳಿ ಹಬ್ಬ ಖುಷಿ, ಸಂತೋಷವನ್ನೆಲ್ಲಾ ನಿಮಗೆ ಕರುಣಿಸಲಿ, ಹೋಳಿ ಹಬ್ಬದ ಶುಭಾಶಯಗಳು.
ಬದುಕಿನಲ್ಲಿರುವ ಕಷ್ಟ, ನೋವುಗಳೆಲ್ಲಾ ಸುಟ್ಟು ಬೂದಿಯಾಗಲಿ, ಆನಂದದ ಬಣ್ಣ ಎಲ್ಲೆಲ್ಲೂ ತುಂಬಲಿ, ಅನುದಿನವೂ ಅನುಕ್ಷಣವೂ ನೆಮ್ಮದಿ ನಿಮ್ಮ ಬಾಳಲ್ಲಿ ನೆಲೆಗೊಳ್ಳಲ್ಲಿ, ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.
ಹಿಂದಿನ ಕಷ್ಟಗಳನ್ನೆಲ್ಲಾ ಮರೆಯೋಣ, ಮುಂದಿನ ಖುಷಿಯ ಜೀವನದ ವಿಶ್ವಾಸದಲ್ಲಿ ಹೆಜ್ಜೆ ಇಡೋಣ, ಸವಾಲುಗಳನ್ನು ಮೆಟ್ಟಿ ನಿಂತಿ ಜಯಿಸೋಣ, ಸರ್ವರಿಗೂ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.
ಬಣ್ಣಗಳ ಹಬ್ಬ ನಿಮ್ಮ ಬದುಕಿನಲ್ಲಿ ಖುಷಿಯ ಚಿತ್ತಾರವನ್ನು ಮೂಡಿಸಲಿ. ಕಷ್ಟಗಳೆಲ್ಲಾ ಮಂಜಿನಂತೆ ಕರಗಿ, ಸುಖ, ಶಾಂತಿ ನಿಮ್ಮ ಬಾಳಲ್ಲಿ ಶಾಶ್ವತವಾಗಿ ನೆಲೆಸಲಿ. ಹೋಳಿ ಹಬ್ಬದ ಶುಭಾಶಯಗಳು.
ಬಣ್ಣಗಳ ಹಬ್ಬದ ಈ ಶುಭ ದಿನ ನಿಮ್ಮ ಇಷ್ಟಾರ್ಥಗಳೆಲ್ಲಾ ನೆರವೇರಲಿ, ಹೋಳಿ ಹಬ್ಬ ಖುಷಿ, ಸಂತೋಷವನ್ನು ನಿಮಗೆ ಕರುಣಿಸಲಿ. ಹ್ಯಾಪಿ ಹೋಳಿ.
ರಂಗು ರಂಗಿನ ಹೋಳಿ ನಿಮ್ಮ ಬಾಳಲ್ಲಿ ಹರುಷ ತರಲಿ, ಬಣ್ಣಗಳ ಹಬ್ಬ ಹೋಳಿಯ ಶುಭಾಶಯಗಳು.
ನಿಮ್ಮ ಬದುಕಿನ ಕಹಿಗಳೆಲ್ಲಾ ಮಾಯವಾಗಿ, ಜೀವನ ಸಂತೋಷ, ಶಾಂತಿ, ನೆಮ್ಮದಿ, ಯಶಸ್ಸಿನ ಬಣ್ಣಗಳಿಂದ ತುಂಬಿರಲಿ. ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.
ಬಣ್ಣಗಳು, ಸಂತೋಷ, ಸಕಾರಾತ್ಮಕತೆಯ ಈ ಹಬ್ಬವನ್ನು ನಾವೆಲ್ಲರೂ ಒಟ್ಟಾಗಿ ಖುಷಿಯಿಂದ ಆಚರಿಸೋಣ. ನಿಮಗೂ ನಿಮ್ಮ ಕುಟುಂಬಕ್ಕೂ ಹೋಳಿ ಹಬ್ಬದ ಶುಭಾಶಯಗಳು.
ಹೋಳಿಯ ಈ ಶುಭ ದಿನದ ಸಂದರ್ಭದಲ್ಲಿ ದೇವರು ನಿಮಗೆ ಉತ್ತಮ ಆರೋಗ್ಯ, ಸಂಪತ್ತು ಧೀರ್ಗಾಯುಷ್ಯ, ಶಾಂತಿ, ನೆಮ್ಮದಿ ಮತ್ತು ಸಂತೋಷವನ್ನು ಕರುಣಿಸಲಿ.
ಹೋಳಿ ಹಬ್ಬದಲ್ಲಿ ಹಚ್ಚುವ ಬಣ್ಣಗಳಂತೆ ನಿಮ್ಮ ಬದುಕು ಕಲರ್‌ಫುಲ್ ಆಗಿರಲಿ ಎಂದು ನಾನು ಆರೈಸುತ್ತೇನೆ, ಹ್ಯಾಪಿ ಹೋಳಿ.
ಹೋಳಿ ಹಬ್ಬ ನಿಮ್ಮ ಹಾಗೂ ನಿಮ್ಮ ಕುಟುಂಬದವರ ಬದುಕಿನಲ್ಲಿ ಖುಷಿಯೆಂಬ ರಂಗನ್ನು ತುಂಬಲಿ, ಹೋಳಿ ಹಬ್ಬದ ಶುಭಾಶಯಗಳು. ಹೋಳಿಯ ಶುಭ ಸಂದರ್ಭದಲ್ಲಿ ದೇವರು ನಿಮಗೆ ಉತ್ತಮ ಆರೋಗ್ಯ, ಸಂಪತ್ತು, ದೀರ್ಘಾಯುಷ್ಯವನ್ನು ಕರುಣಿಸಲಿ, ಶಾಂತಿ, ನೆಮ್ಮದಿ, ಸಂತೋಷವನ್ನು ಆಶಿರ್ವದಿಸಲಿ. ನಿಮಗೂ ನಿಮ್ಮ ಕುಟುಂಬಕ್ಕೂ ಹೋಳಿ ಹಬ್ಬದ ಶುಭಾಶಯಗಳು.
ಬಣ್ಣಗಳ ರಂಗಿನಂತೆ ನಿಮ್ಮ ಲೈಫ್ ಕೂಡ ಕಲರ್‌ಫುಲ್ ಆಗಿರಲಿ, ಹ್ಯಾಪಿ ಹೋಳಿ.
ಬಣ್ಣಗಳ ಜೊತೆಗೆ ಬಾಂಧವ್ಯವನ್ನು ಬೆಸೆಯುವ ಹೋಳಿ ಹಬ್ಬ, ನಮ್ಮ ಸಂಬಂಧ, ಬಾಂಧವ್ಯವವನ್ನು ಮತ್ತಷ್ಟು ಬಲಪಡಿಸಲಿ, ಹೋಳಿ ಹಬ್ಬದ ಶುಭಾಶಯಗಳು.
ಕಲರ್‌ಫುಲ್ ಹೋಳಿ ನಿಮ್ಮ ಜೀವನದಲ್ಲಿ ಸಂತೋಷ, ಸುಖ, ಶಾಂತಿ, ನೆಮ್ಮದಿಯನ್ನು ತರಲಿ. ಹೋಳಿ ಹಬ್ಬದ ಶುಭಾಶಯಗಳು
ನಿಮ್ಮ ಜೀವನದ ಪ್ರತಿ ಹೆಜ್ಜೆಯಲ್ಲೂ ಸಂತೋಷವು ತುಂಬಿರಲಿ, ಹೋಳಿ ಹಬ್ಬದ ಶುಭಾಶಯಗಳು.
ಟೆಹ್ರಾನ್, ಮಾರ್ಚ್ 03: ಅಮೆರಿಕ ಹಾಗೂ ಇಸ್ರೇಲ್(Israel) ಜಂಟಿಯಾಗಿ ಇರಾನ್ ಮೇಲೆ ಸಮರ ಸಾರುತ್ತಿವೆ. ಕಳೆದ ಮೂರು ದಿನಗಳಿಂದ ದಾಳಿ, ಪ್ರತಿದಾಳಿಗಳು ನಡೆಯುತ್ತಿವೆ. ಅಮೆರಿಕ ಹಾಗೂ ಇಸ್ರೇಲ್ ಸೇನೆಯು ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲ ಅಲಿ ಖಮೇನಿಯನ್ನು ಹತ್ಯೆ ಮಾಡಿದೆ.
ಹಾಗಾದರೆ ಖಮೇನಿ ಇದ್ದ ಜಾಗ ಅಮೆರಿಕ ಹಾಗೂ ಇಸ್ರೇಲ್ ಪಡೆಗಳಿಗೆ ಅಷ್ಟು ನಿಖರವಾಗಿ ಹೇಗೆ ತಿಳಿಯಿತು ಎನ್ನುವುದಕ್ಕೆ ಉತ್ತರ ಇಲ್ಲಿದೆ. ಇಸ್ರೇಲ್ ಸುಪ್ರೀಂ ನಾಯಕ ಅಲಿ ಖಮೇನಿ ಮತ್ತು ಅವರ ಭದ್ರತಾ ಸಿಬ್ಬಂದಿಯ ಚಲನವಲನಗಳನ್ನು ಮೇಲ್ವಿಚಾರಣೆ ಮಾಡಲು ಇರಾನ್‌ನ ಟ್ರಾಫಿಕ್ ಕ್ಯಾಮೆರಾ ನೆಟ್‌ವರ್ಕ್ ಅನ್ನು ಹ್ಯಾಕ್ ಮಾಡಿ ಮೊಬೈಲ್ ಫೋನ್ ಸಿಗ್ನಲ್ ಕೂಡ ಟ್ರ್ಯಾಕ್ ಮಾಡಿತ್ತು. ಇದಕ್ಕೆ ವರ್ಷಗಳ ಕಾಲ ಸಮಯ ತೆಗೆದುಕೊಂಡಿತ್ತು ಎಂದು ಫಿನಾನ್ಶಿಯಲ್ ಟೈಮ್ಸ್ ವರದಿ ಮಾಡಿದೆ.
ಟೆಹ್ರಾನ್‌ನಲ್ಲಿರುವ ಬಹುತೇಕ ಎಲ್ಲಾ ಟ್ರಾಫಿಕ್ ಕ್ಯಾಮೆರಾಗಳನ್ನು ಹೈಜಾಕ್ ಮಾಡಿ, ವರ್ಷಗಳಿಂದ ಮಾಹಿತಿ ಕದಿಯಲಾಗುತ್ತಿತ್ತು. ದೃಶ್ಯಗಳನ್ನು ಎನ್‌ಕ್ರಿಪ್ಟ್ ಮಾಡಿ ಟೆಲ್ ಅವಿವ್ ಮತ್ತು ದಕ್ಷಿಣ ಇಸ್ರೇಲ್‌ನಲ್ಲಿರುವ ಸರ್ವರ್‌ಗಳಿಗೆ ರವಾನಿಸಲಾಗಿದೆ.
ಅಮೆರಿಕ ಹಾಗೂ ಇಸ್ರೇಲಿ ಗುಪ್ತಚರ ಅಧಿಕಾರಿಗಳು ಖಮೇನಿ ದಿನಚರಿಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದ್ದರು. ಅವರು ಇರುವುದೆಲ್ಲಿ, ಯಾರ್ಯಾರನ್ನು ಭೇಟಿಯಾಗುತ್ತಾರೆ, ಹೇಗೆ ಮಾತನಾಡುತ್ತಾರೆ, ಏನು ಮಾತನಾಡುತ್ತಾರೆ, ಅವರನ್ನು ಕೊಲ್ಲುವುದು ಹೇಗೆ ಎಂಬುದರ ಕುರಿತು ಸಾಕಷ್ಟು ಅಧ್ಯಯನ ಮಾಡಿದ್ದರು.
ಖಮೇನಿ ಸೇರಿದಂತೆ ಇರಾನಿನ ಉನ್ನತ ಅಧಿಕಾರಿಗಳು ಶನಿವಾರ ಬೆಳಗ್ಗೆ ಟೆಹ್ರಾನ್ನ ಸರ್ವೋಚ್ಚ ನಾಯಕನ ಮನೆಯಲ್ಲಿ ಸಭೆ ಸೇರಲು ನಿರ್ಧರಿಸಿದ್ದರು.
ಸ್ಥಳೀಯ ಸಮಯ ಬೆಳಿಗ್ಗೆ 6 ಗಂಟೆ ಸುಮಾರಿಗೆ ಇರಾನ್ ಮೇಲೆ ಇಸ್ರೇಲ್ ದಾಳಿ ಆರಂಭಿಸಿತ್ತು. ವೈಮಾನಿಕ ದಾಳಿಗಳು 60 ಸೆಕೆಂಡುಗಳ ಒಳಗೆ ಮೂರು ಗುರಿಗಳನ್ನು ಹೊಡೆಯಲಾಗಿತ್ತು. ಇರಾನ್‌ನ ಸರ್ವೋಚ್ಚ ನಾಯಕ ಮತ್ತು ಕ್ರಾಂತಿಕಾರಿ ಗಾರ್ಡ್‌ನ ಮುಖ್ಯಸ್ಥರು ಸೇರಿದಂತೆ ಸುಮಾರು 40 ಹಿರಿಯ ಅಧಿಕಾರಿಗಳು ಸಾವನ್ನಪ್ಪಿದ್ದರು.
ಇರಾನ್ ತನ್ನ ಸರ್ವೋಚ್ಚ ನಾಯಕನ ಮರಣದ ಆಘಾತದಿಂದ ಚೇತರಿಸಿಕೊಳ್ಳುವ ಮೊದಲೇ ಮತ್ತೊಂದು ಕೆಟ್ಟ ಸುದ್ದಿ ಬಂದಿತ್ತು.
ಇಸ್ರೇಲ್ ಮಾಜಿ ಇರಾನ್ ಅಧ್ಯಕ್ಷ ಮಹಮೂದ್ ಅಹ್ಮದಿನೆಜಾದ್ ಅವರನ್ನು ಸಹ ದಾಳಿಯಲ್ಲಿ ಕೊಂದಿದೆ ಎಂದು ಮೂಲಗಳು ಹೇಳಿವೆ. ಅಯತೊಲ್ಲಾ ಖಮೇನಿಯವರ ಸಾವು ಇರಾನ್ ಬೆಂಬಲಿಗರಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಅಪರಾಧಕ್ಕೆ ಶಿಕ್ಷೆಯಾಗದೆ ಬಿಡುವುದಿಲ್ಲ ಎಂದು ಇರಾನ್‌ನ ಹೊಸ ನಾಯಕ ಪ್ರತಿಜ್ಞೆ ಮಾಡಿದ್ದಾರೆ, ಸೇಡು ತೀರಿಸಿಕೊಳ್ಳುವುದಾಗಿ ಟೆಹ್ರಾನ್ ಸ್ಪಷ್ಟಪಡಿಸಿದೆ.
T20 World Cup 2026: ಟಿ20 ವಿಶ್ವಕಪ್ನ ಸೆಮಿಫೈನಲ್ಗೆ ವೇದಿಕೆ ಸಿದ್ಧವಾಗಿದೆ. ಈ ಸೆಮಿಫೈನಲ್ ಸುತ್ತಿಗೂ ಮುನ್ನ ಸೂಪರ್-8 ಲೀಗ್ನ ಕೊನೆಯ ಪಂದ್ಯದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಿದ್ದವು. ಸೆಮಿಫೈನಲ್ಗೇರಲು ಉಭಯ ತಂಡಗಳ ಪಾಲಿಗೆ ನಿರ್ಣಾಯಕವಾಗಿದ್ದ ಈ ಪಂದ್ಯಕ್ಕೂ ಮುನ್ನ ಪಾಕಿಸ್ತಾನ್ ಕ್ರಿಕೆಟಿಗರಾದ ಅಹ್ಮದ್ ಶೆಹಝಾದ್ ಹಾಗೂ ಮೊಹಮ್ಮದ್ ಅಮೀರ್ ಬಹಿರಂಗವಾಗಿಯೇ ಪಂಥ ಕಟ್ಟಿದ್ದರು. ಅದು ಸಹ ಶೋ ತ್ಯಜಿಸುತ್ತೇನೆ ಎನ್ನುವ ಮೂಲಕ ಎಂಬುದು ವಿಶೇಷ.
ಪಾಕಿಸ್ತಾನದ ಜಿಯೋ ಚಾನೆಲ್ನಲ್ಲಿ ಪ್ರಸಾರವಾಗುವ ಹಸ್ನಾ ಮನಾ ಹೈ ಕ್ರಿಕೆಟ್ ಕಾರ್ಯಕ್ರಮದಲ್ಲಿ ಮಾಜಿ ಕ್ರಿಕೆಟಿಗರಾದ ಮೊಹಮ್ಮದ್ ಅಮೀರ್, ಅಹ್ಮದ್ ಶೆಹಝಾದ್ ಹಾಗೂ ರಶೀದ್ ಲತೀಫ್ ವಿಶ್ಲೇಷಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ನಿರ್ಣಾಯಕ ಪಂದ್ಯದ ವಿಶ್ಲೇಷಣೆ ವೇಳೆ ಮೊಹಮ್ಮದ್ ಅಮೀರ್ ಟೀಮ್ ಇಂಡಿಯಾ ಸೆಮಿಫೈನಲ್ಗೇರಲ್ಲ ಎಂದಿದ್ದರು.
ಇದೇ ವೇಳೆ ಅಹ್ಮದ್ ಶೆಹಝಾದ್ ಭಾರತ ತಂಡ ಸೆಮಿಫೈನಲ್ನಲ್ಲಿ ಸ್ಥಾನ ಪಡೆಯುವುದು ಖಚಿತ ತಿರುಗೇಟು ನೀಡಿದ್ದರು. ಆದರೆ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಗೆಲ್ಲುವ ಸಾಧ್ಯತೆಯೇ ಇಲ್ಲ. ಟೀಮ್ ಇಂಡಿಯಾ ಸೋಲಲಿದೆ ಎಂದು ಅಮೀರ್ ಪುನರುಚ್ಚರಿಸಿದರು.
ಈ ವೇಳೆ “ಭಾರತ ಸೋತರೆ ನಾನು ಶೋ ಬಿಡುತ್ತೇನೆ” ಎಂದು ಅಹ್ಮದ್ ಶೆಹಝಾದ್ ಸವಾಲು ಹಾಕಿದ್ದಾರೆ. ಈ ಪಂಥಹ್ವಾನವನ್ನು ಮೊಹಮ್ಮದ್ ಅಮೀರ್ ಸ್ವೀಕರಿಸಿದ್ದಾರೆ.
ಇದೀಗ ವೆಸ್ಟ್ ಇಂಡೀಸ್ ತಂಡವನ್ನು ಬಗ್ಗು ಬಡಿದು ಟೀಮ್ ಇಂಡಿಯಾ ಸೆಮಿಫೈನಲ್ಗೇರಿದೆ. ಭಾರತ ತಂಡದ ಈ ಗೆಲುವಿನೊಂದಿಗೆ ಅಹ್ಮದ್ ಶೆಹಝಾದ್ ಅಮೀರ್ ಜೊತೆಗಿನ ಪಂಥಹ್ವಾನದಲ್ಲಿ ಗೆದ್ದಿದ್ದಾರೆ. ಹೀಗಾಗಿ ಅವರು ಶೋ ಬಿಡುವ ಅಗತ್ಯವಿಲ್ಲ.
ಅತ್ತ ಮೊದಲಿಂದಲೂ ಭಾರತ ತಂಡ ಈ ಬಾರಿ ಸೆಮಿಫೈನಲ್ಗೆ ತಲುಪಲ್ಲ ಎಂದೇಳುತ್ತಾ ಬಂದಿರುವ ಮೊಹಮ್ಮದ್ ಅಮೀರ್ ಇದೀಗ ಮುಖಭಂಗ ಅನುಭವಿಸಿದ್ದಾರೆ. ಅದರಲ್ಲೂ ಶೆಹಝಾದ್ ಜೊತೆ ಪಂಥ ಕಟ್ಟಿ ಇದೀಗ ಸೋತಿದ್ದಾರೆ. ಹೀಗಾಗಿಯೇ ಭಾರತೀಯ ಕ್ರಿಕೆಟ್ ಪ್ರೇಮಿಗಳು ಮೊಹಮ್ಮದ್ ಅಮೀರ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.
ಸದ್ಯ ವೆಸ್ಟ್ ಇಂಡೀಸ್ ವಿರುದ್ಧ ಗೆದ್ದು ಸೆಮಿಫೈನಲ್ಗೆ ಪ್ರವೇಶಿಸಿರುವ ಟೀಮ್ ಇಂಡಿಯಾ ತನ್ನ ಮುಂದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಮಾರ್ಚ್ 5 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಫೈನಲ್ಗೇರಲಿದೆ.
ಮನುಷ್ಯನಂತೆಯೇ ಸಕಲ ಜೀವರಾಶಿಗಳಿಗೂ ಭೂಮಿಯ ಮೇಲೆ ಬದುಕುವ ಸ್ವಾತಂತ್ರ್ಯವಿದೆ. ವಿಪರ್ಯಾಸ ಏನೆಂದರೆ ಇಂದು ಮನುಷ್ಯನ ಸ್ವಾರ್ಥದ ಕಾರಣದಿಂದಾಗಿ ಅದೆಷ್ಟೋ ಜಾತಿಯ ಪ್ರಾಣಿ, ಪಕ್ಷಿಗಳು, ಮರಗಿಡಗಳು ಅಳಿದುಹೋಗಿದೆ. ಇನ್ನೂ ಅದೆಷ್ಟೋ ಜೀವಿಗಳು ಅಳಿವಿನಂಚಿನಲ್ಲಿವೆ. ಹೌದು ಒಂದೆಡೆ ಆಧುನೀಕರಣ, ನಗರೀಕರಣ ಅಂತೆಲ್ಲಾ ಜಗತ್ತು ಅಭಿವೃದ್ಧಿ ಹೊಂದುತ್ತಿದ್ದರೆ ಇನ್ನೊಂದೆಡೆ ಕಾಡುಗಳ ನಾಶ, ಅಕ್ರಮ ಬೇಟೆ ಇತ್ಯಾದಿ ಕಾರಣಗಳಿಂದ ಅರಣ್ಯ, ವನ್ಯಜೀವಿಗಳು ವಿನಾಶದ ಅಂಚಿಗೆ ತಲುಪಿವೆ. ವಿಶ್ವಸಂಸ್ಥೆಯ ಪ್ರಕಾರ, ಹೆಚ್ಚುತ್ತಿರುವ ಪರಿಸರ ಸವಾಲುಗಳಿಂದಾಗಿ ಒಂದು ದಶಲಕ್ಷಕ್ಕೂ ಹೆಚ್ಚು ವನ್ಯಜೀವಿ ಪ್ರಭೇದಗಳು ಅಳಿವಿನ ಅಪಾಯದಲ್ಲಿವೆ. ಈ ನಿಟ್ಟಿನಲ್ಲಿ ವನ್ಯ ಜೀವಿಗಳು, ಅರಣ್ಯ ಸಂಪತ್ತಿನ ರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಮಾರ್ಚ್ 03 ರಂದು ವಿಶ್ವ ವನ್ಯ ಜೀವಿ ದಿನವನ್ನು (World Wildlife Day) ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಸಂಪೂರ್ಣ ಮಾಹಿತಿ ಇಲ್ಲಿದೆ.
ವಿಶ್ವ ವನ್ಯಜೀವಿ ದಿನದ ಇತಿಹಾಸವೇನು?
ವನ್ಯಜೀವಿಗಳು ಮತ್ತು ಸಸ್ಯ ಸಂಪತ್ತಿನ ಸ್ಥಿತಿಗತಿಗಳನ್ನು ಗಮನದಲ್ಲಿಟ್ಟುಕೊಂಡು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಡಿಸೆಂಬರ್ 20, 2013 ರಂದು ತನ್ನ 68 ನೇ ಅಧಿವೇಶನದಲ್ಲಿ ಮಾರ್ಚ್ 3 ತಾರೀಕನ್ನು ವಿಶ್ವ ವನ್ಯಜೀವಿ ದಿನವನ್ನಾಗಿ ಅಳವಡಿಸಿಕೊಳ್ಳುವುದಾಗಿ ಘೋಷಿಸಿತು. ಅಳಿವಿನಂಚಿನಲ್ಲಿರುವ ವನ್ಯಜೀವಿ ಪ್ರಭೇದಗಳ ರಕ್ಷಣೆಗಾಗಿ 1973 ರಲ್ಲಿ CITES ಸಮಾವೇಶಕ್ಕೆ ಸಹಿ ಹಾಕಲಾಯಿತು. ಇದರ ನೆನಪಿಗಾಗಿ ಮಾರ್ಚ್ 03 ರಂದು ವಿಶ್ವ ವನ್ಯ ಜೀವಿ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ಮೊದಲ ವಿಶ್ವ ವನ್ಯಜೀವಿ ದಿನವನ್ನು ಮಾರ್ಚ್ 3, 2014 ರಂದು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ವನ್ಯಜೀವಿಗಳನ್ನು ಸಂರಕ್ಷಿಸುವ ಮತ್ತು ಅದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಈ ವಿಶೇಷ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ವಿಶ್ವ ವನ್ಯಜೀವಿ ದಿನವನ್ನು ಏಕೆ ಆಚರಿಸಲಾಗುತ್ತದೆ?
ವಿಶ್ವ ವನ್ಯಜೀವಿ ದಿನವನ್ನು ಆಚರಿಸುವ ಪ್ರಾಥಮಿಕ ಉದ್ದೇಶವೆಂದರೆ ವಿಶ್ವಾದ್ಯಂತ ವನ್ಯಜೀವಿಗಳು ಮತ್ತು ಅಳಿವಿನಂಚಿನಲ್ಲಿರುವ ಸಸ್ಯ ಪ್ರಭೇದಗಳ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದು.
ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳುವುದು, ವನ್ಯಜೀವಿಗಳ ಸುರಕ್ಷತೆಯನ್ನು ಖಚಿತಪಡಿಸುವುದು ಮತ್ತು ಅವುಗಳ ಸಂರಕ್ಷಣೆಗಾಗಿ ಜಾಗತಿಕ ಪ್ರಯತ್ನಗಳನ್ನು ಉತ್ತೇಜಿಸುವುದು ಈ ದಿನದ ಉದ್ದೇಶವಾಗಿದೆ.
ವಿಶ್ವ ವನ್ಯಜೀವಿ ದಿನವು ವನ್ಯಜೀವಿಗಳು ಕೇವಲ ಪ್ರಕೃತಿಯ ಒಂದು ಭಾಗವಲ್ಲ, ನಮ್ಮ ಜೀವನಕ್ಕೂ ಅಮೂಲ್ಯವಾಗಿದೆ ಎಂದು ನಮಗೆ ನೆನಪಿಸುತ್ತದೆ.
ಪರಿಸರಕ್ಕೆ ಪ್ರಾಣಿಗಳು ಮತ್ತು ಸಸ್ಯಗಳ ಕೊಡುಗೆಗಳನ್ನು ಮತ್ತು ಮಹತ್ವವನ್ನು ಗುರುತಿಸಿ, ಪ್ರತಿ ವರ್ಷ ವಿಶ್ವ ವನ್ಯಜೀವಿ ದಿನವನ್ನು ಆಚರಿಸಲಾಗುತ್ತದೆ.
ಭೂಮಿಯ ಮೇಲಿನ ಜೀವವೈವಿಧ್ಯತೆಯನ್ನು ಕಾಪಾಡಿಕೊಳ್ಳಲು ಭೂಮಿಯ ಪರಿಸರದ ಸಮತೋಲನವನ್ನು ಕಾಯ್ದುಕೊಳ್ಳಲು ಸಸ್ಯಗಳು ಮತ್ತು ವನ್ಯಜೀವಿಗಳ ಉಪಸ್ಥಿತಿ ಅತ್ಯಗತ್ಯ ಎಂಬುದನ್ನು ಜನರಿಗೆ ಅರ್ಥೈಸುವುದು ಈ ದಿನದ ಉದ್ದೇಶವಾಗಿದೆ.
T20 World Cup 2026: ಟಿ20 ವಿಶ್ವಕಪ್ನ ಸೆಮಿಫೈನಲ್ ಪಂದ್ಯವು ಬುಧವಾರದಿಂದ (ಮಾ.4) ಶುರುವಾಗಲಿದೆ. ಮಾರ್ಚ್ 4 ರಂದು ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಹಾಗೂ ನ್ಯೂಝಿಲೆಂಡ್ ತಂಡಗಳು ಮುಕಾಮುಖಿಯಾಗಲಿದೆ. ಇನ್ನು ಮಾರ್ಚ್ 5 ರಂದು ನಡೆಯಲಿರುವ ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಭಾರತ ಸೆಣಸಲಿದೆ. ಈ ಪಂದ್ಯಗಳಿಗಾಗಿ 10 ಓವರ್‌ಗಳ ನಿಯಮವನ್ನು ಪರಿಚಯಿಸಲಾಗಿದೆ.
ಅಂದರೆ ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡಿದರೆ ಅಥವಾ ಕಾರಣಾಂತರಗಳಿಂದ 20 ಓವರ್‌ಗಳನ್ನು ಆಡಲು ಸಾಧ್ಯವಾಗದೇ ಇದ್ದರೆ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶ ನಿರ್ಧರಿಸಲು ಕನಿಷ್ಠ 10 ಓವರ್‌ಗಳನ್ನು ಆಡಲೇಬೇಕು.
ಇದಕ್ಕೂ ಮುನ್ನ ಸೂಪರ್-8 ಸುತ್ತಿನಲ್ಲಿ 5 ಓವರ್‌ಗಳನ್ನು ನಿಗದಿ ಮಾಡಲಾಗಿತ್ತು. ಅಂದರೆ ಕಾರಣಾಂತರಗಳಿಂದ ಪಂದ್ಯಕ್ಕೆ ಸ್ಥಗಿತಗೊಂಡರೆ ಅಥವಾ ರದ್ದಾದರೆ ಉಭಯ ತಂಡಗಳು ಕನಿಷ್ಠ 5 ಓವರ್‌ಗಳನ್ನು ಆಡಿದ್ದರೆ ಮಾತ್ರ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶ ನಿರ್ಧರಿಸಲಾಗುತ್ತದೆ ಎಂದು ಐಸಿಸಿ ತಿಳಿಸಿತ್ತು. ಇದೀಗ ಸೆಮಿಫೈನಲ್ ಪಂದ್ಯಗಳಿಗೆ ಈ ನಿಯಮವನ್ನು 10 ಓವರ್ಗೆ ಏರಿಸಲಾಗಿದೆ.
ಸೆಮಿಫೈನಲ್ ನಿಯಮಗಳ ವಿವರಗಳು:
ಕನಿಷ್ಠ ಓವರ್‌ಗಳು: ಮಳೆಯಿಂದಾಗಿ ಪಂದ್ಯಕ್ಕೆ ಅಡಚಣೆಯಾದರೆ ಅಥವಾ ಇನ್ನಿತರೆ ಕಾರಣಗಳಿಂದ ಪಂದ್ಯ ಅರ್ಧದಲ್ಲೇ ಸ್ಥಗಿತಗೊಂಡರೆ ಡಕ್ವರ್ತ್-ಲೂಯಿಸ್ (DLS) ನಿಯಮದಡಿ ಫಲಿತಾಂಶ ನಿರ್ಧರಿಸಲು ಎರಡೂ ತಂಡಗಳು ತಲಾ 10 ಓವರ್‌ಗಳನ್ನು ಆಡಿರಲೇಬೇಕು.
ಮೊದಲ ಇನಿಂಗ್ಸ್ 10 ಓವರ್: ಮೊದಲು ಬ್ಯಾಟ್ ಮಾಡುವ ತಂಡವು 10 ಓವರ್ ಪೂರ್ಣಗೊಳಿಸದೇ, ಎರಡನೇ ತಂಡಕ್ಕೆ ಬ್ಯಾಟಿಂಗ್ಗೆ ಅವಕಾಶ ಇರುವುದಿಲ್ಲ. ಅಂದರೆ 10 ಕ್ಕಿಂತ ಕಡಿಮೆ ಓವರ್ನ ಪಂದ್ಯವನ್ನು ಆಯೋಜಿಸಲಾಗುವುದಿಲ್ಲ. ಎರಡೂ ತಂಡಗಳು ಕನಿಷ್ಠ 10 ಓವರ್‌ಗಳನ್ನು ಆಡಿದ್ರೆ ಮಾತ್ರ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶ ನಿರ್ಧರಿಸಲಾಗುತ್ತದೆ.
ಮೀಸಲು ದಿನ: ಎರಡೂ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಮೀಸಲು ದಿನದ ವ್ಯವಸ್ಥೆ ಇದೆ. ನಿಗದಿತ ದಿನದಂದು ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ, ಮೀಸಲು ದಿನದಂದು ಪಂದ್ಯವನ್ನು ಮುಂದುವರೆಸಲಾಗುತ್ತದೆ.
ಹೆಚ್ಚುವರಿ ಸಮಯ: ಪಂದ್ಯವನ್ನು ಪೂರ್ಣಗೊಳಿಸಲು ನಿಗದಿತ ದಿನದಂದು 90 ನಿಮಿಷಗಳನ್ನು ಹೆಚ್ಚುವರಿಯಾಗಿ ನೀಡಲಾಗುತ್ತದೆ. ಅಂದರೆ ಇಲ್ಲಿ ಮಳೆಯಿಂದಾಗಿ ಪಂದ್ಯ ವಿಳಂಬವಾದರೂ ತಕ್ಷಣವೇ ಓವರ್ ಕಡಿತವಾಗುವುದಿಲ್ಲ. ಬದಲಾಗಿ ಹೆಚ್ಚುವರಿ 90 ನಿಮಿಷಗಳ ಮೂಲಕ 20 ಓವರ್‌ಗಳನ್ನು ಆಡಿಸಲಿದ್ದಾರೆ.
ಪಂದ್ಯ ರದ್ದು: ಮೀಸಲು ದಿನದಂದು ಕೂಡ 10 ಓವರ್‌ಗಳ ಪಂದ್ಯ ನಡೆಸಲು ಸಾಧ್ಯವಾಗದೇ ಇದ್ದರೆ ಮಾತ್ರ ಪಂದ್ಯವನ್ನು ರದ್ದು ಮಾಡಲಾಗುತ್ತದೆ.
ಯಾರು ಫೈನಲ್‌ಗೆ: ಸೆಮಿಫೈನಲ್ ಪಂದ್ಯವು ರದ್ದಾದರೆ ಸೂಪರ್ 8 ಹಂತದ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡವು ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯುತ್ತದೆ.
ಓಂ ಪ್ರಕಾಶ್ ರಾವ್ ನಿರ್ದೇಶನದ ‘ಭೀಮಾತೀರದಲ್ಲಿ’ ಸಿನಿಮಾ ರೀ ರಿಲೀಸ್ ಆಗುತ್ತಿದೆ. ಮಾರ್ಚ್ 6ರಂದು ಚಿತ್ರ ತೆರೆಗೆ ಬರುತ್ತಿದೆ. ರವಿ ಬೆಳಗೆರೆ ಬರೆದ ‘ಭೀಮಾತೀರದ ಹಂತಕರು’ ಪುಸ್ತಕಕ್ಕೂ ಇದಕ್ಕೂ ಸಂಬಂಧ ಇದೆ ಎಂದು ಹೇಳಲಾಗಿತ್ತು. ಆದರೆ, ಇದನ್ನು ಓಂ ಪ್ರಕಾಶ್ ರಾವ್ ಅವರು ಮತ್ತೊಮ್ಮೆ ಅಲ್ಲಗಳೆದಿದ್ದಾರೆ. ‘ಭೀಮಾತೀರದಲ್ಲಿ’ ರೀ-ರಿಲೀಸ್ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.
T20 World Cup 2026: ಟಿ20 ವಿಶ್ವಕಪ್ನ ಸೆಮಿಫೈನಲ್ ಪಂದ್ಯಗಳಿಗೆ ವೇದಿಕೆ ಸಿದ್ಧವಾಗಿದೆ. ನಾಳೆ (ಮಾರ್ಚ್ 4) ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಗುರುವಾರ ಜರುಗಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವು ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
ಈ ಪಂದ್ಯಕ್ಕೆ ಮಳೆ ಅಡ್ಡಿಯಾಗಿ ಅಥವಾ ಕಾರಣಾಂತರಗಳಿಂದ ರದ್ದಾದರೆ ಯಾರು ಫೈನಲ್ಗೇರಲಿದ್ದಾರೆ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ…
ಮೀಸಲು ದಿನ: ಸೆಮಿಫೈನಲ್ ಪಂದ್ಯಕ್ಕೆ ನಿಗದಿಪಡಿಸಿದ ದಿನದಂದು ಆಟ ಸಾಧ್ಯವಾಗದಿದ್ದರೆ, ಮರುದಿನ (ರಿಸರ್ವ್ ಡೇ) ಪಂದ್ಯ ನಡೆಯುತ್ತದೆ. ಅಂದರೆ ಮಾರ್ಚ್ 4 ರ ಪಂದ್ಯಕ್ಕೆ ಮೀಸಲು ದಿನವಾಗಿ ಮಾರ್ಚ್ 5 ಅನ್ನು ನಿಗದಿ ಮಾಡಲಾಗಿದೆ. ಹಾಗೆಯೇ ಮಾರ್ಚ್ 5 ರ ಪಂದ್ಯದ ಮೀಸಲು ದಿನ ಮಾರ್ಚ್ 6 .
ಪಂದ್ಯ ರದ್ದು: ಮೀಸಲು ದಿನದಂದೂ ಪಂದ್ಯ ನಡೆಯದಿದ್ದರೆ ಮಾತ್ರ ಸೆಮಿಫೈನಲ್ ಪಂದ್ಯವನ್ನು ರದ್ದು ಮಾಡಲಾಗುತ್ತದೆ.
ಯಾರು ಫೈನಲ್‌ಗೆ: ಸೆಮಿಫೈನಲ್ ಪಂದ್ಯ ರದ್ದಾದರೆ ಸೂಪರ್ 8 ಹಂತದ ಅಂಕಪಟ್ಟಿಯಲ್ಲಿ ಮೇಲಿರುವ ತಂಡ ಫೈನಲ್‌ಗೆ ಹೋಗುತ್ತದೆ.
ಸೆಮಿಫೈನಲ್ ಸನ್ನಿವೇಶ:
ಸೆಮಿಫೈನಲ್ 1 (ಸೌತ್ ಆಫ್ರಿಕಾ vs ನ್ಯೂಝಿಲೆಂಡ್): ಈ ಪಂದ್ಯ ರದ್ದಾದರೆ ಸೌತ್ ಆಫ್ರಿಕಾ ಫೈನಲ್‌ಗೆ ಹೋಗುತ್ತದೆ. ಏಕೆಂದರೆ ಸೌತ್ ಆಫ್ರಿಕಾ ತಂಡವು ಗ್ರೂಪ್ 1 ರಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಸೆಮಿಫೈನಲ್ 2 (ಭಾರತ vs ಇಂಗ್ಲೆಂಡ್): ಈ ಪಂದ್ಯ ರದ್ದಾದರೆ ಇಂಗ್ಲೆಂಡ್ ಫೈನಲ್‌ಗೆ ಹೋಗುತ್ತದೆ. ಏಕೆಂದರೆ ಇಂಗ್ಲೆಂಡ್ ಗ್ರೂಪ್ 2 ರಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಭಾರತ ಗ್ರೂಪ್ 1 ರಲ್ಲಿ ಎರಡನೇ ಸ್ಥಾನದಲ್ಲಿದೆ.
ಅಂದರೆ ಸೆಮಿಫೈನಲ್ ಪಂದ್ಯವು ನಿಗದಿತ ದಿನದಂದು ಸ್ಥಗಿತಗೊಂಡರೆ ಮರುದಿನ ಪಂದ್ಯವನ್ನು ಆಯೋಜಿಸಲಾಗುತ್ತದೆ. ಮೀಸಲು ದಿನದಂದು ಕೂಡ ಮ್ಯಾಚ್ ಆಯೋಜಿಸಲು ಸಾಧ್ಯವಾಗದೇ ಇದ್ದರೆ ಮಾತ್ರ ಪಂದ್ಯವನ್ನು ರದ್ದು ಮಾಡಲಾಗುತ್ತದೆ. ಹೀಗೆ ರದ್ದಾದರೆ ಸೂಪರ್-8 ಸುತ್ತಿನ ಅಂಕಪಟ್ಟಿಯನ್ನು ಪರಿಗಣನೆಗೆ ತೆಗೆದುಕೊಳ್ಳಲಿದ್ದಾರೆ.
ಇಲ್ಲಿ ಸೂಪರ್-8 ಸುತ್ತಿನ ಗ್ರೂಪ್-1 ರ ಅಂಕಪಟ್ಟಿಯಲ್ಲಿ ಸೌತ್ ಆಫ್ರಿಕಾ ತಂಡವು ಅಗ್ರಸ್ಥಾನದಲ್ಲಿದ್ದು, ಭಾರತ ದ್ವಿತೀಯ ಸ್ಥಾನದಲ್ಲಿದೆ. ಇನ್ನು ಗ್ರೂಪ್-2 ರ ಅಂಕಪಟ್ಟಿಯಲ್ಲಿ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದ್ದರೆ, ನ್ಯೂಝಿಲೆಂಡ್ ದ್ವಿತೀಯ ಸ್ಥಾನದಲ್ಲಿದೆ.