All posts by nagaraj11081993

Tarriff Refund: ಸುಂಕ ಮರುಪಾವತಿ ವಿಳಂಬ, ಟ್ರಂಪ್ ಲೆಕ್ಕಾಚಾರ ತಲೆಕೆಳಗು ಮಾಡಿದ ಫೆಡರಲ್ ನ್ಯಾಯಾಲಯ – Kannada News | US Court Rejects Trump’s Tariff Refund Delay: Billions in Illegal Import Duties to be Repaid

ಡೊನಾಲ್ಡ್​ ಟ್ರಂಪ್Image Credit source: The Financial Express

ವಾಷಿಂಗ್ಟನ್, ಮಾರ್ಚ್​ 03: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರ ಸುಂಕ ನೀತಿಯು ವಿಶ್ವಾದ್ಯಂತ ಚರ್ಚೆಯ ವಿಷಯವಾಗಿದೆ. ಟ್ರಂಪ್ ಈಗ ತಮ್ಮ ಸುಂಕಗಳಿಗೆ ಸಂಬಂಧಿಸಿದಂತೆ ಎರಡು ಪಟ್ಟು ಹೊಡೆತವನ್ನು ಅನುಭವಿಸಿದ್ದಾರೆ. ಒಂದೆಡೆ, ಅಮೆರಿಕದ ಸುಪ್ರೀಂ ಕೋರ್ಟ್ ಅಮೆರಿಕದ ಸುಂಕಗಳನ್ನು ಕಾನೂನುಬಾಹಿರವೆಂದು ಘೋಷಿಸಿ ಅವುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲು ತೀರ್ಪು ನೀಡಿದೆ. ಮತ್ತೊಂದೆಡೆ, ಕಳೆದ ತಿಂಗಳು ಅಮೆರಿಕದ ಸುಪ್ರೀಂ ಕೋರ್ಟ್ ಕಾನೂನುಬಾಹಿರವೆಂದು ಘೋಷಿಸಿದ ಸುಂಕಗಳನ್ನು ಮರುಪಾವತಿಸುವ ಪ್ರಕ್ರಿಯೆಯನ್ನು ನಿಧಾನಗೊಳಿಸಬೇಕೆಂಬ ಟ್ರಂಪ್ ಆಡಳಿತದ ವಿನಂತಿಯನ್ನು ಅಮೆರಿಕದ ಫೆಡರಲ್ ನ್ಯಾಯಾಲಯವೂ ತಿರಸ್ಕರಿಸಿದೆ.

ಅಮೆರಿಕದ ಫೆಡರಲ್ ಅಮೆರಿಕ ಸರ್ಕಾರದ ಸುಂಕ ಮರುಪಾವತಿ ವಿಳಂಬ ತಂತ್ರವನ್ನು ತಿರಸ್ಕರಿಸಿದೆ. ಮರುಪಾವತಿ ವಿಚಾರಣೆ ಹಾಗೂ ವಿಚಾರಣೆಗೆ ಬರುವ ಮೊದಲು ನಾಲ್ಕು ತಿಂಗಳವರೆಗೆ ವಿಳಂಬ ಮಾಡಬೇಕೆಂದು ಟ್ರಂಪ್ ಆಡಳಿತ ವಾದಿಸಿತ್ತು.ಸುಂಕ ಮರುಪಾವತಿಗೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳನ್ನು ವಿಳಂಬಗೊಳಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒತ್ತಾಯವನ್ನು ಅಮೆರಿಕದ ಫೆಡರಲ್ ಮೇಲ್ಮನವಿ ನ್ಯಾಯಾಲಯ ಸೋಮವಾರ ತಿರಸ್ಕರಿಸಿದ್ದು, ಕೆಳ ನ್ಯಾಯಾಲಯದಲ್ಲಿ ಹೋರಾಟ ಮುಂದುವರಿಯಲು ಅವಕಾಶ ಮಾಡಿಕೊಟ್ಟಿದೆ.

ಫೆಡರಲ್ ಸರ್ಕ್ಯೂಟ್ ಕೋರ್ಟ್ ಆಫ್ ಅಪೀಲ್ಸ್ ಈಗ ಮರುಪಾವತಿ ಪ್ರಕ್ರಿಯೆಯನ್ನು ಮುಂದಿನ ಹಂತಕ್ಕೆ ವರ್ಗಾಯಿಸಿದ್ದು, ಮರುಪಾವತಿಯನ್ನು ಹೇಗೆ ವಿತರಿಸಬೇಕೆಂದು ನಿರ್ಧರಿಸುವ ಕೆಳ ನ್ಯಾಯಾಲಯಕ್ಕೆ ಹಸ್ತಾಂತರಿಸಿದೆ. ಟ್ರಂಪ್ ಆಡಳಿತವು ಶುಕ್ರವಾರ ಈ ಪ್ರಕ್ರಿಯೆಯನ್ನು 90 ದಿನಗಳವರೆಗೆ ನಿಲ್ಲಿಸುವಂತೆ ನ್ಯಾಯಾಲಯವನ್ನು ಕೋರಿತ್ತು, ಆದರೆ ನ್ಯಾಯಾಧೀಶರು ಅದನ್ನು ನಿರಾಕರಿಸಿದರು.

ಟ್ರಂಪ್ ಆಡಳಿತವು ಹೆಚ್ಚಿನ ದೇಶಗಳ ಮೇಲೆ ವಿಧಿಸಿರುವ ವ್ಯಾಪಕ ಸುಂಕಗಳು ಕಾನೂನುಬಾಹಿರವೆಂದು ಯುಎಸ್ ಸುಪ್ರೀಂ ಕೋರ್ಟ್ ಈ ಹಿಂದೆ ಫೆಬ್ರವರಿ 20 ರಂದು ತೀರ್ಪು ನೀಡಿತ್ತು. 2025 ರ ಅಂತ್ಯದ ವೇಳೆಗೆ, ಕಾನೂನುಬಾಹಿರವೆಂದು ಘೋಷಿಸಲಾದ ಸುಂಕಗಳು ಅಮೆರಿಕ ಸರ್ಕಾರಕ್ಕೆ 130 ಶತಕೋಟಿ ಡಾಲರ್​ಗೂ ಹೆಚ್ಚು ಆದಾಯವನ್ನು ಗಳಿಸಿವೆ. ಆದರೆ ಫೆಡರಲ್ ಸರ್ಕ್ಯೂಟ್‌ಗಾಗಿ ಅಮೆರಿಕದ ಮೇಲ್ಮನವಿ ನ್ಯಾಯಾಲಯದ ಆದೇಶದಲ್ಲಿ ಸೋಮವಾರ ಈ ಬೇಡಿಕೆಯನ್ನು ನಿರಾಕರಿಸಲಾಗಿದೆ.

ಮತ್ತಷ್ಟು ಓದಿ: ನಮ್ಮನ್ನು ಕಿತ್ತು ತಿನ್ನುತ್ತಿದ್ದವರು ಇವತ್ತು ಟ್ಯಾರಿಫ್ ಕಟ್ತಿದಾರೆ, ಅವರೂ ಖುಷ್, ನಾವೂ ಖುಷ್: ಡೊನಾಲ್ಡ್ ಟ್ರಂಪ್

ಕೆಲವು ವಿಶ್ಲೇಷಕರು ಅಂದಾಜಿನ ಪ್ರಕಾರ 1,000 ಕ್ಕೂ ಹೆಚ್ಚು ಕಾರ್ಪೊರೇಟ್ ಸಂಸ್ಥೆಗಳು ಈಗಾಗಲೇ ಮರುಪಾವತಿ ಹೋರಾಟದಲ್ಲಿ ತೊಡಗಿಕೊಂಡಿವೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಫೆಡರಲ್ ಸರ್ಕ್ಯೂಟ್‌ಗಾಗಿ ಯುಎಸ್ ಕೋರ್ಟ್ ಆಫ್ ಅಪೀಲ್ಸ್, ಟ್ರಂಪ್ ಅವರ ಹಲವು ಸುಂಕಗಳು ಕಾನೂನುಬಾಹಿರವೆಂದು ತೀರ್ಪು ನೀಡಿತ್ತು. ಹೈಕೋರ್ಟ್ ತನ್ನ ದೇಶ-ನಿರ್ದಿಷ್ಟ ಸುಂಕಗಳನ್ನು ರದ್ದುಗೊಳಿಸಿದ ನಂತರ, ಟ್ರಂಪ್ ಆಮದುಗಳ ಮೇಲೆ ಹೊಸ 10 ಪ್ರತಿಶತ ಸುಂಕವನ್ನು ವಿಧಿಸಲು ಬೇರೆ ಕಾನೂನನ್ನು ಬಳಸಿಕೊಂಡರು. ಅವರು ಮಟ್ಟವನ್ನು 15 ಪ್ರತಿಶತಕ್ಕೆ ಹೆಚ್ಚಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಕೆಲ ದಿನಗಳ ಹಿಂದೆ ಅಮೆರಿಕದ ಸುಪ್ರೀ ಕೋರ್ಟ್ ಒಂದು ಮಹತ್ವದ ತೀರ್ಪನ್ನ ನೀಡಿತ್ತು, ಜಗತ್ತಿನ ವಿವಿಧ ರಾಷ್ಟ್ರಗಳ ಮೇಲೆ ಡೊನಾಲ್ಡ್ ಟ್ರಂಪ್ ವಿಧಿಸಿದ್ದ, ಹೆಚ್ಚುವರಿ ಸುಂಕವನ್ನು ರದ್ದುಗೊಳಿಸಬೇಕು ಎನ್ನುವುದಾಗಿತ್ತು. ಈಗ ಈ ತೀರ್ಪಿನ ಹಿನ್ನೆಲೆಯಲ್ಲಿ, ಸುಮಾರು 175 ಬಿಲಿಯನ್ ಡಾಲರ್‍‌ಗಳ ಸುಂಕ ಆದಾಯವನ್ನು ಮರುಪಾವತಿಸಬೇಕಾಗಿದೆ. ಈಗ ಈ ವಿಚಾರ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಯಾಗುತ್ತಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ವಿಧಿಸಿದ್ದ, ಕೆಲವು ಸುಂಕ ಆದೇಶಗಳು ಕಾನೂನುಬಾಹಿರ ಎಂದು ಅಮೆರಿಕ ನ್ಯಾಯಾಲಯ ಹೇಳಿತ್ತು. ಇದಾದ ಬೆನ್ನಲ್ಲೇ ಸಂಗ್ರಹವಾದ ಸುಂಕದ ಹಣವನ್ನು ಆಯಾ ದೇಶಗಳಿಗೆ ವಾಪಸ್ ಕೊಡಬೇಕು ಎನ್ನುವ ಒತ್ತಾಯ ಶುರುವಾಗಿದೆ. ಈ ಹಿನ್ನೆಲೆ ಒರೆಗಾನ್ ಸೆನೆಟರ್ ರಾನ್ ವೈಡೆನ್, ಮ್ಯಾಸಚೂಸೆಟ್ಸ್‌ನ ಎಡ್ ಮಾರ್ಕಿ ಮತ್ತು ನ್ಯೂ ಹ್ಯಾಂಪ್‌ಶೈರ್‌ನ ಜೀನ್ ಶಾಹೀನ್ ಮರುಪಾವತಿ ಪ್ರಕ್ರಿಯೆಯನ್ನು ಆರಂಭಿಸುವಂತೆ ಒತ್ತಾಯಿಸುವ ಮಸೂದೆಯನ್ನು ಮಂಡಿಸಿದ್ದಾರೆ.

ಪ್ರಸ್ತಾಪಿತ ಮಸೂದೆಯ ಪ್ರಕಾರ ಅಮೆರಿಕ ಕಸ್ಟಮ್ಸ್ ಮತ್ತು ಗಡಿ ರಕ್ಷಣಾ ಇಲಾಖೆ 180 ದಿನಗಳ ಒಳಗೆ ಸುಂಕದ ಹಣವನ್ನು ಮರುಪಾವತಿ ಪ್ರಕ್ರಿಯೆಯನ್ನ ಪೂರ್ಣಗೊಳಿಸಬೇಕು. ಅಷ್ಟೇ ಅಲ್ಲ ಆ ಹಣಕ್ಕೆ ಬಡ್ಡಿಯನ್ನೂ ಕೂಡ ಪಾವತಿ ಮಾಡಬೇಕಾಗಿದೆ. ಈ ಕ್ರಮದಲ್ಲಿ ಸಣ್ಣ ಉದ್ಯಮಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ದುಬೈನಲ್ಲಿ ಎಂಜಾಯ್ ಮಾಡ್ತಿರುವಾಗ್ಲೇ ದಾಳಿ ಆಯ್ತು: ಯುದ್ಧದ ಭಯಾನಕತೆ ಬಿಚ್ಚಿಟ್ಟ ಕನ್ನಡಿಗ – Kannada News | Kannadiga Recalls Horror During Israel Iran Conflict in Dubai; Praises UAE Security Measures

ಬೆಂಗಳೂರು, ಮಾರ್ಚ್ 3: ಇರಾನ್-ಇಸ್ರೇಲ್ ಯುದ್ಧದಿಂದ ದುಬೈಯಲ್ಲಿ ಸಿಲುಕಿದ್ದ ಹಲವು ಮಂದಿ ಕನ್ನಡಿಗರು ಬೆಂಗಳೂರಿಗೆ ವಾಪಸಾಗಿದ್ದಾರೆ. ಇದೀಗ, ಕನ್ನಡಿಗ ಗೌತಮ್ ದುಬೈನಲ್ಲಿದ್ದಾಗ ಇಸ್ರೇಲ್-ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ದಾಳಿ ನಡೆಯುತ್ತಿದ್ದಾಗ ಅನುಭವಿಸಿದ ಭಯಾನಕ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ದಾಳಿಗಳು ನಡೆಯುತ್ತಿದ್ದಾಗ ತೀವ್ರ ಭಯಗೊಂಡಿದ್ದೆವು. ಆ ಸಂದರ್ಭದಲ್ಲಿ ಭಾರತೀಯ ರಾಯಭಾರ ಕಚೇರಿಯಿಂದ ಯಾವುದೇ ಸಂಪರ್ಕ ಅಥವಾ ಸಹಾಯ ದೊರೆಯದಿರುವುದು ತಮಗೆ ಬೇಸರ ತಂದಿದೆ ಎಂದು ಗೌತಮ್ ತಿಳಿಸಿದರು. ಹಲವಾರು ಸ್ನೇಹಿತರು ಇನ್ನೂ ದುಬೈನಲ್ಲೇ ಸಿಲುಕಿಕೊಂಡಿದ್ದು, ವಿಮಾನಗಳು ಸಂಪೂರ್ಣವಾಗಿ ಭರ್ತಿಯಾಗಿರುವುದರಿಂದ ಅವರಿಗೆ ವಾಪಸ್ ಬರಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಐದು-ಆರು ದಿನಗಳಿಂದ ಅವರ ಸ್ನೇಹಿತರು ದುಬೈನಲ್ಲಿಯೇ ಉಳಿದುಕೊಂಡಿದ್ದಾರೆ.

ದಾಳಿಯ ಸಂದರ್ಭದಲ್ಲಿ ಬಾಂಬ್ ಸ್ಫೋಟಗಳನ್ನು ಕಣ್ಣಾರೆ ಕಂಡಿಲ್ಲವಾದರೂ, ದಾಳಿ ನಡೆಯುವುದನ್ನು ನೋಡಿದ್ದಾಗಿ ಗೌತಮ್ ಹೇಳಿದ್ದಾರೆ. ದುಬೈ ಸರ್ಕಾರ ಪರಿಸ್ಥಿತಿಯನ್ನು ಅತ್ಯುತ್ತಮವಾಗಿ ನಿಭಾಯಿಸಿದ್ದು, ಸುರಕ್ಷತೆಗೆ ಉತ್ತಮ ವ್ಯವಸ್ಥೆ ಕಲ್ಪಿಸಿತ್ತು ಎಂದು ಅವರು ಶ್ಲಾಘಿಸಿದರು. ದುಬೈ ಸರ್ಕಾರ ಸೂಪರ್, ಅತ್ಯುತ್ತಮವಾಗಿತ್ತು. ಸುರಕ್ಷತೆ ತುಂಬಾ ಚೆನ್ನಾಗಿತ್ತು. ನಾನು ದುಬೈ ಸರ್ಕಾರದ ಬಗ್ಗೆ ಚಿಂತಿತನಾಗಿರಲಿಲ್ಲ, ಕೇವಲ ಭಾರತಕ್ಕೆ ಮರಳಬೇಕಿತ್ತು ಅಷ್ಟೆ ಎಂದು ಗೌತಮ್ ತಿಳಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಜಯ್​​ನ ನೋಡಿ ರಶ್ಮಿಕಾ ನಕ್ಕ ರೀತಿಯೇ ಸೂಪರ್; ಫ್ಯಾನ್ಸ್​​ಗೆ ಇಷ್ಟ ಆಯ್ತು ವೈರಲ್ ವಿಡಿಯೋ – Kannada News | Vijay Deverakonda and Rashmika Mandanna’s Wedding: Udaipur Ceremony, Viral Vratam and Fan Feast

ಟಾಲಿವುಡ್‌ನ ಪ್ರೀತಿಯ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹಳ ದಿನಗಳಿಂದ ಪ್ರೀತಿಸುತ್ತಿದ್ದ ಈ ಇಬ್ಬರು ಮದುವೆ ಆಗಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದ ಐಟಿಸಿ ಹೋಟೆಲ್‌ನಲ್ಲಿ ಅವರ ವಿವಾಹ ಅದ್ಧೂರಿಯಾಗಿ ನಡೆದಿದೆ. ಕೆಲವು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಅವರ ವಿವಾಹ ನಡೆಯಿತು. ಈ ಸಮಾರಂಭದ ನಂತರ, ವಿಜಯ್ ಮತ್ತು ರಶ್ಮಿಕಾ ಹೈದರಾಬಾದ್ ತಲುಪಿದರು. ಈಗ, ವಿಜಯ್ ಅವರ ಹುಟ್ಟೂರು ನಗರ್ಕರ್ನೂಲ್ ಜಿಲ್ಲೆಯ ಬಲ್ಮೂರ್ ಮಂಡಲದ ತುಮ್ಮನ್‌ಪೇಟೆ ಗ್ರಾಮಕ್ಕೆ ತೆರಳಿ ಹೊಸದಾಗಿ ನಿರ್ಮಿಸಲಾದ ಫಾರ್ಮ್‌ಹೌಸ್‌ನಲ್ಲಿ ಸತ್ಯನಾರಾಯಣ ಸ್ವಾಮಿ ವ್ರತದಲ್ಲಿ ಭಾಗವಹಿಸಿದರು. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ಊರಿಗೆ ಮರಳಿದ ವಿಜಯ್ ಅವರ ಕುಟುಂಬ ಸದಸ್ಯರಿಗೆ ಗ್ರಾಮಸ್ಥರು ಮತ್ತು ಅಭಿಮಾನಿಗಳು ಜಾನಪದ ನೃತ್ಯ ಮತ್ತು ಡ್ರಮ್ಸ್‌ಗಳೊಂದಿಗೆ ಭವ್ಯ ಸ್ವಾಗತ ಕೋರಿದರು. ಇದಕ್ಕೆ ಸಂಬಂಧಿಸಿದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಸತ್ಯನಾರಾಯಣ ವ್ರತದ ಸಮಯದಲ್ಲಿ ವಿಜಯ್ ಅವರನ್ನು ನೋಡಿ ರಶ್ಮಿಕಾ ನಕ್ಕಿರುವ ವಿಡಯೋನ ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ. ಈ ವಿಡಿಯೋ ಸಾಕಷ್ಟು ಗಮನ ಸೆಳೆದಿದೆ.

ಇದನ್ನೂ ಓದಿ: ಮದುವೆ ಬಳಿಕ ಊರಿಗೆ ಬಂದ ವಿಜಯ್ ದೇವರಕೊಂಡ, ರಶ್ಮಿಕಾಗೆ ಭರ್ಜರಿ ಸ್ವಾಗತ

ರಶ್ಮಿಕಾ ಮಂದಣ್ಣ ಅವರ ನಗು ಎಲ್ಲರಿಗೂ ಇಷ್ಟ ಆಗುವ ರೀತಿಯಲ್ಲಿ ಇದೆ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು, ಈ ಜೋಡಿ ಮೇಡ್ ಫಾರ್ ಈಚ್ ಅದರ್ ಎಂದು ಹೇಳಿದ್ದಾರೆ. ವಿಜಯ್ ತಮ್ಮ ಊರಿನಲ್ಲಿ ತುಮ್ಮನ್‌ಪೇಟೆಯ ಎಲ್ಲಾ ಗ್ರಾಮಸ್ಥರಿಗೆ ಭವ್ಯ ಔತಣಕೂಟವನ್ನು ಸಹ ಏರ್ಪಡಿಸಿದ್ದರು. 3 ಸಾವಿರಕ್ಕೂ ಹೆಚ್ಚು ಜನರಿಗೆ ಔತಣಕೂಟಕ್ಕೆ ವ್ಯವಸ್ಥೆ ಮಾಡಲಾಗಿತ್ತು ಎಂದು ಹೇಳಲಾಗಿದೆ.

ರಶ್ಮಿಕಾ ಹಾಗೂ ವಿಜಯ್ ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಪ್ರೋಮೋ ಸಾಂಗ್ ಇತ್ತೀಚೆಗೆ ವೈರಲ್ ಆಗಿ ಗಮನ ಸೆಳೆದಿದೆ. ಇವರನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾಯುತ್ತಾ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರ್ನಾಟಕ ಹವಾಮಾನ ವರದಿ: ರಾಜ್ಯದೆಲ್ಲೆಡೆ ಇಂದು ಶುಷ್ಕ ಹವೆ; ಬೆಂಗಳೂರಿನಲ್ಲಿ ತಾಪಮಾನ ಹೆಚ್ಚಳ – Kannada News | Bengaluru temperature: clear sky in Bengaluru, Heat wave alert in Bengaluru

ರಾಜ್ಯದೆಲ್ಲೆಡೆ ಇಂದು ಶುಷ್ಕ ಹವೆ; ಬೆಂಗಳೂರಿನಲ್ಲಿ ತಾಪಮಾನ ಹೆಚ್ಚಳ

ಬೆಂಗಳೂರು, ಮಾರ್ಚ್​ 03: ರಾಜ್ಯದಲ್ಲಿ ಹಲವು ದಿನಗಳಿಂದ ತಾಪಮಾನ (Weather Forecast) ಹೆಚ್ಚಿದ್ದು, ಕೆಲ ದಿನಗಳಿಂದ ಒಣ ಹವೆಯ ವಾತಾವರಣವೇ ಕಂಡುಬಂದಿದೆ. ಆದರೆ ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರಿನಲ್ಲಿ ಸ್ಪಷ್ಟ ಆಕಾಶವಿರಲಿದ್ದು, ತಾಪಮಾನದಲ್ಲಿ ಕೊಂಚ ಏರಿಕೆಯಾಗಬಹುದು ಎಂದು ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ ಒಣ ಹವೆ?

ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇಂದಿನಿಂದ ಕೆಲ ದಿನ ರಾಜ್ಯದಲ್ಲಿ ಶುಷ್ಕ ವಾತಾವರಣವೇ ಇರಲಿದೆ ಎಂದು ಇಲಾಖೆ ತಿಳಿಸಿದ್ದು, ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಮಾರ್ಚ್​ ಎರಡನೇ ವಾರದಲ್ಲಿ ತಾಪಮಾನ ಹೆಚ್ಚಳ

ನಗರದಲ್ಲಿ ಮಾರ್ಚ್ ಎರಡನೇ ವಾರದ ಬಳಿಕ ಬಿಸಿಲಿನ ತೀವ್ರತೆ ಇನ್ನಷ್ಟು ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕೂಡ ಅಲರ್ಟ್ ಆಗಿದೆ. ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಅನಗತ್ಯವಾಗಿ ಹೊರಗೆ ಹೋಗದಂತೆ ಸೂಚನೆ ನೀಡಲಾಗಿದೆ. ಹೀಟ್ ಸ್ಟ್ರೋಕ್ ಹಾಗೂ ಡಿಹೈಡ್ರೇಶನ್ ಅಪಾಯ ಇರುವುದರಿಂದ ವೃದ್ಧರು, ಗರ್ಭಿಣಿಯರು, ಮಕ್ಕಳು ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವವರು ವಿಶೇಷ ಎಚ್ಚರಿಕೆ ವಹಿಸಬೇಕು.

ಹೆಚ್ಚಾಗಿ ನೀರು, ತಂಪು ಪಾನೀಯಗಳು ಹಾಗೂ ಹಣ್ಣುಗಳನ್ನು ಸೇವಿಸಿ ದೇಹದ ತಾಪಮಾನ ನಿಯಂತ್ರಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ, ಈ ವರ್ಷವೂ ಬೆಂಗಳೂರು ಮಂದಿಗೆ ಕಠಿಣ ಬೇಸಿಗೆ ಎದುರಾಗುವ ಸೂಚನೆಗಳಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಮುಖಕ್ಕಿಂತ ಹೆಚ್ಚು ಹೊಕ್ಕಳು ತೋರಿಸಿದ್ರು, ಅದಕ್ಕಾಗೇ ನನ್ನನ್ನು ಆಯ್ಕೆ ಮಾಡಿದ್ರಾ ಗೊತ್ತಿಲ್ಲ’; ರಾಗಿಣಿ ದ್ವಿವೇದಿ – Kannada News | Ragini Dwivedi Slams ‘Veera Madakari’ Navel Portrayal; Sparks Fan Backlash

ನಟಿ ರಾಗಿಣಿ ದ್ವಿವೇದಿ ಅವರು ಬಣ್ಣದ ಲೋಕದಲ್ಲಿ ಸಾಕಷ್ಟು ಏರಿಳಿತ ಕಂಡಿದ್ದಾರೆ. ಅವರು ಡ್ರಗ್ ಕೇಸ್​ ಅಲ್ಲಿ ಜೈಲು ಸೇರಬೇಕಾಯಿತು. ಈಗ ಅವರು ಬಣ್ಣದ ಲೋಕದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ವಿವಿಧ ರೀತಿಯ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಗಮನ ಸೆಳೆಯುತ್ತಾ ಇರುತ್ತಾರೆ. ಈಗ ಅವರು ನೀಡಿದ ಸಂದರ್ಶನ ಒಂದು ಚರ್ಚೆಗೆ ಕಾರಣ ಆಗಿದೆ. ಸುದೀಪ್ ನಟಿಸಿ, ನಿರ್ದೇಶಿಸಿದ ಸಿನಿಮಾ ಬಗ್ಗೆ ರಾಗಿಣಿ ಮಾತನಾಡಿದ್ದಾರೆ. ಅವರು ಹಾಗೆ ಮಾತನಾಡಬಾರದಿತ್ತು ಎಂದು ಕೆಲವರು ಹೇಳಿದ್ದಾರೆ.

ರಾಗಿಣಿ ಮಾತನಾಡಿದ್ದು, ‘ವೀರ ಮದಕರಿ’ ಚಿತ್ರದ ಬಗ್ಗೆ. ಇದು ಅವರ ಮೊದಲ ಸಿನಿಮಾ. ಈ ಚಿತ್ರದಲ್ಲಿ ರಾಗಿಣಿ ಸೊಂಟ ಕಂಡಾಗಲೆಲ್ಲ ಸುದೀಪ್ ಕೈ ಸೊಂಟದ ಬಳಿ ಹೋಗುವ ರೀತಿಯಲ್ಲಿ ತೋರಿಸಲಾಗಿದೆ. ಈ ಬಗ್ಗೆ ಆರ್​​ಜೆ ತುಹಿನ್ ಅವರ ಸಂದರ್ಶನದಲ್ಲಿ ರಾಗಿಣಿಗೆ ಪ್ರಶ್ನೆ ಮಾಡಿದ್ದಾರೆ. ‘ನಿಮ್ಮ ಮೊದಲ ಚಿತ್ರ ವೀರ ಮದಕರಿಯಲ್ಲಿ ನೇವಲ್​ನ (ಹೊಕ್ಕಳು) ಅಷ್ಟು ತೋರಿಸಲಾಗಿದೆ. ನಿರ್ದೇಶಕರು ನೇವಲ್ ಆಫೀಸರ್ ಆಗಿದ್ರಾ? ’ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ರಾಗಿಣಿ ಉತ್ತರಿಸಿದ್ದಾರೆ.

ಇದನ್ನೂ ಓದಿ: ಮಾತೇ ಆಡದೆ ಸ್ಪೂರ್ತಿ ತುಂಬಿದ ಕಿಚ್ಚ ಸುದೀಪ್: ವಿಡಿಯೋ ನೋಡಿ

‘ಈ ಐಡಿಯಾ ಹಿಂದೆ ಯಾವ ಉದ್ದೇಶ ಇತ್ತು ಅನ್ನೋದು ಗೊತ್ತಿಲ್ಲ. ಮಹಿಳೆಯಲ್ಲಿ ಅತ್ಯಂತ ಮಾದಕ ಭಾಗಗಳಲ್ಲಿ ಅವಳ ಹೊಟ್ಟೆ ಕೂಡ ಒಂದು. ಹೀರೋಗೆ ಹೊಕ್ಕಳ ವೀಕ್​​ನೆಸ್ ಇತ್ತು ಎಂದು ತೋರಿಸುವ ಪ್ರಯತ್ನ ಇರಬಹುದು’ ಎಂದಿದ್ದಾರೆ ರಾಗಿಣಿ. ‘ಹೊಕ್ಕಳು ತೋರಿಸೋದಕ್ಕೆ ಮಾತ್ರ ನನ್ನನ್ನು ಆಯ್ಕೆ ಮಾಡಿದರೇ ಎಂದು ನನಗೆ ಈಗ ಅನಿಸುತ್ತಿದೆ. ಆ ಸಿನಿಮಾದಲ್ಲಿ ನನ್ನ ಮುಖಕ್ಕಿಂತ ಹೆಚ್ಚಾಗಿ ನನ್ನ ಹೊಕ್ಕಳು ತೋರಿಸಲಾಗಿದೆ’ ಎಂದು ರಾಗಿಣಿ ಹೇಳಿದ್ದಾರೆ.

ಈ ವಿಷಯವನ್ನು ಸುದೀಪ್ ಅಭಿಮಾನಿಗಳು ಖಂಡಿಸಿದ್ದಾರೆ. ಇದು ರಾಜಮೌಳಿಯ ‘ವಿಕ್ರಮಾರ್ಕುಡು’ ಚಿತ್ರದ ರಿಮೇಕ್. ಮೂಲ ಚಿತ್ರದಲ್ಲಿ ಏನಿದೆಯೋ ಅದನ್ನೇ ಇಲ್ಲಿಯೂ ತೋರಿಸಲಾಗಿದೆ. ಹೀಗಾಗಿ, ಏಕೆ ಆ ರೀತಿ ತೋರಿಸಿದಿರಿ ಎಂದು ರಾಜಮೌಳಿಯನ್ನು ಪ್ರಶ್ನೆ ಮಾಡಬೇಕು ಎಂದು ಅನೇಕರು ಹೇಳಿದ್ದಾರೆ. ಇನ್ನೂ ಕೆಲವರು, ‘ಮೊದಲ ಅವಕಾಶ ಕೊಟ್ಟವರಿಗೆ ಹೀಗೆ ಹೇಳೋದು ಎಷ್ಟು ಸರಿ’ ಎಂದು ರಾಗಿಣಿಯನ್ನು ಪ್ರಶ್ನೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ನಮ್ಮ ಉದ್ದೇಶ ಈಡೇರುವವರೆಗೆ ಇರಾನ್ ವಿರುದ್ಧದ ಕಾರ್ಯಾಚರಣೆ ನಿಲ್ಲುವುದಿಲ್ಲ: ಟ್ರಂಪ್ – Kannada News | Trump Vows Continued Military Action Against Iran Until Objectives Are Achieved

ವಾಷಿಂಗ್ಟನ್, ಮಾರ್ಚ್​ 03: ನಮ್ಮ ಉದ್ದೇಶ ಈಡೇರುವವರೆಗೆ ಇರಾನ್ ವಿರುದ್ಧದ ಕಾರ್ಯಾಚರಣೆ ನಿಲ್ಲುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಹೇಳಿದ್ದಾರೆ. ಈ ಪ್ರಕ್ರಿಯೆಯಲ್ಲಿ ಹೆಚ್ಚಿನ ಅಮೆರಿಕ ಸೈನಿಕರು ಪ್ರಾಣ ಕಳೆದುಕೊಳ್ಳುವ ಸಾಧ್ಯತೆಯೂ ಇದೆ ಎಂದು ಎಚ್ಚರಿಸಿದ್ದಾರೆ. ಟ್ರೂತ್ ಸೋಷಿಯಲ್​ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಟ್ರಂಪ್ ಅವರು ಅಸ್ತಿತ್ವವಾದದ ಬೆದರಿಕೆ ಎಂದು ಕರೆದಿದ್ದಕ್ಕೆ ಪ್ರತಿಕ್ರಿಯೆಯಾಗಿ ಯುದ್ಧವನ್ನು ವಿವರಿಸಿದ್ದಾರೆ.

ಕ್ಷಿಪಣಿಗಳು ಮತ್ತು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಇರಾನಿನ ಆಡಳಿತವು ಪ್ರತಿಯೊಬ್ಬ ಅಮೆರಿಕನ್ನರಿಗೂ ಭೀಕರ ಬೆದರಿಕೆಯಾಗಿದೆ ಎಂದರು. ಅಯತೊಲ್ಲ ಖಮೇನಿ ಸಾವನ್ನು ದೃಢಪಡಿಸಿರುವ ಅವರು, ಆತ ಅನೇಕ ಅಮೆರಿಕನ್ನರು, ಮುಗ್ಧ ಜನರ ಸಾವಿಗೆ ಕಾರಣವಾದ ನೀಚ ವ್ಯಕ್ತಿ ಎಂದು ಕರೆದಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

Horoscope Today 3rd​ March​: ಇಂದು ಈ ರಾಶಿಯವರು ಅನುಮಾನಗಳಿಗೆ ಆಸ್ಪದ ನೀಡಬೇಡಿ

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್​ 3, ಮಂಗಳವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ,ಉತ್ತರಾಯಣ, ಫಾಲ್ಗುಣ ಮಾಸದ ಶುಕ್ಲಪಕ್ಷ ಹುಣ್ಣಿಮೆಯ ಈ ದಿನ, ಮಖಾ ನಕ್ಷತ್ರ, ಸುಕರ್ಮ ಯೋಗ ಮತ್ತು ಭವಕರಣ ಇರಲಿದೆ. ಈ ದಿನವು ಹೋಳಿ ಹುಣ್ಣಿಮೆಯ ಜೊತೆಗೆ ಗ್ರಸ್ತೋದಯ ಪಾಕ್ಷಿಕ ಕೇತುಗ್ರಸ್ತ ಚಂದ್ರಗ್ರಹಣ ಸಂಭವಿಸುತ್ತಿರುವುದು ವಿಶೇಷ. ಇದು 2026ರ ಸಂಖ್ಯಾ ವರ್ಷದ ಕೊನೆಯ ಗ್ರಹಣವಾಗಿದ್ದು, ಭಾರತದಲ್ಲಿ ಗೋಚರಿಸಲಿದೆ. ಮಧ್ಯಾಹ್ನ 3:13ಕ್ಕೆ ಸ್ಪರ್ಶ ಕಾಲ, ಸಂಜೆ 5:00ಕ್ಕೆ ಮಧ್ಯಮ ಕಾಲ ಮತ್ತು 6:47ಕ್ಕೆ ಮೋಕ್ಷ ಕಾಲವಿರುತ್ತದೆ. ಈ ಗ್ರಹಣವು ದ್ವಾದಶ ರಾಶಿಗಳ ಹಾಗೂ ಪ್ರಪಂಚದ ಮೇಲೆ ಪ್ರಭಾವ ಬೀರಲಿದೆ ಎಂದು ಡಾ.ಬಸವರಾಜ ಗುರೂಜಿ ಹೇಳಿದ್ದಾರೆ.

 

 

Source link

Daily Devotional: ಇಂದು ಕೇತುಗ್ರಸ್ತ ಚಂದ್ರಗ್ರಹಣ ಏನೇನು ಮಾಡಬೇಕು ಗೊತ್ತಾ? – Kannada News | Lunar Eclipse March 03: What to do in Chandra Grahana and Zodiac effects

ಬೆಂಗಳೂರು, ಮಾರ್ಚ್​​ 03: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಇಂದು ಕೇತುಗ್ರಸ್ತ ಚಂದ್ರಗ್ರಹಣ ಏನೇನು ಮಾಡಬೇಕು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಈ ಗ್ರಹಣ ಕಾರ್ತಿಕ ಮಾಸದ ಶುಕ್ಲ ಹುಣ್ಣಿಮೆಯಂದು ವಿಶ್ವಾವಸು ನಾಮ ಸಂವತ್ಸರದಲ್ಲಿ ನಡೆಯುತ್ತಿದೆ. ಗ್ರಹಣದ ಸ್ಪರ್ಶ ಕಾಲವು ಮಧ್ಯಾಹ್ನ 2 ಗಂಟೆ 39 ನಿಮಿಷಕ್ಕೆ, ಮಧ್ಯಮ ಕಾಲವು ಸಂಜೆ 4 ಗಂಟೆ 29 ನಿಮಿಷಕ್ಕೆ ಮತ್ತು ಮೋಕ್ಷ ಕಾಲವು ಸಂಜೆ 6 ಗಂಟೆ 19 ನಿಮಿಷಕ್ಕೆ ಆಗಿರುತ್ತದೆ. ಈ ಸಮಯದಲ್ಲಿ ದೇವಾಲಯಗಳನ್ನು ಮುಚ್ಚಲಾಗುವುದು ಮತ್ತು ಹೆಚ್ಚು ಪ್ರಯಾಣಿಸುವುದು ಶುಭಕರವಲ್ಲ ಎಂದು ಗುರೂಜಿ ಹೇಳಿದ್ದಾರೆ.

ಗ್ರಹಣದ ಮೊದಲು ಆಹಾರ ಸೇವಿಸುವುದು, ಸ್ನಾನ ಮಾಡುವುದು ಮತ್ತು ಗ್ರಹಣದ ನಂತರ ಸ್ನಾನ ಮಾಡಿ ಪಂಚಗವ್ಯಗಳಿಂದ ಮನೆಯನ್ನು ಶುದ್ಧೀಕರಿಸುವುದು ಸಾಂಪ್ರದಾಯಿಕ ಪದ್ಧತಿ. ದರ್ಬೆ ಮತ್ತು ತುಳಸಿ ಇಡುವುದು ರೂಢಿ. ಮಂತ್ರ ಜಪಗಳನ್ನು ಗ್ರಹಣ ಕಾಲದಲ್ಲಿ ಮಾಡುವುದು ಉತ್ತಮ. ಗರ್ಭಿಣಿಯರು, ವೃದ್ಧರು, ರೋಗಿಗಳು ಈ ಅವಧಿಯಲ್ಲಿ ಸಂಚಾರ ಮಾಡದಿರುವುದು ಒಳ್ಳೆಯದು. ದ್ವಾದಶ ರಾಶಿಗಳ ಮೇಲೆ ಈ ಗ್ರಹಣ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ. ಮೇಷ, ಕರ್ಕಾಟಕ, ಸಿಂಹ, ಕನ್ಯಾ, ಧನುಸ್ಸು, ಮಕರ ರಾಶಿಗಳಿಗೆ ಜಾಗರೂಕತೆ ಅಗತ್ಯವಾಗಿದ್ದು, ವೃಷಭ, ಮಿಥುನ, ತುಲಾ, ವೃಶ್ಚಿಕ, ಕುಂಭ, ಮೀನ ರಾಶಿಗಳಿಗೆ ಶುಭ ಫಲಗಳು ದೊರೆಯುವ ಸಾಧ್ಯತೆ ಇದೆ. ಗ್ರಹಣ ದೋಷಗಳಿದ್ದರೆ, ಒಂದು ವಾರದೊಳಗೆ ಶಾಂತಿ ಕರ್ಮಗಳನ್ನು ಮಾಡಿಸುವುದು ಶ್ರೇಯಸ್ಕರ ಎಂದು ಡಾ.ಬಸವರಾಜ ಗುರೂಜಿ ಹೇಳಿದ್ದಾರೆ.

Source link

ದುಬೈಯಲ್ಲಿ ಸಿಲುಕಿದ್ದ ಕನ್ನಡಿಗರು ವಾಪಸ್​​: MLC ಭೋಜೇಗೌಡ, ಬ್ಯಾಡಿಂಟ್ಮನ್ ತಾರೆ​​​ ಪಿವಿ ಸಿಂಧು ಸೇರಿ ಹಲವರು ಬೆಂಗಳೂರಿಗೆ – Kannada News | Kannadigas Stranded in Dubai Return to Bengaluru Amid Israel Iran Conflict; MLC Bhojegowda, PV Sindhu Arrive Safely

ದುಬೈನಲ್ಲಿ ಸಿಲುಕಿದ ಕನ್ನಡಿಗರು ದುಬೈನಿಂದ ಬೆಂಗಳೂರಿಗೆ ವಾಪಸ್Image Credit source: tv9

ಬೆಂಗಳೂರು, ಮಾರ್ಚ್ 3: ಇರಾನ್-ಇಸ್ರೇಲ್ ಯುದ್ಧದ (Israel-Iran War) ಕಾರಣ ವಿಮಾನಗಳು ರದ್ದಾಗಿದ್ದರಿಂದ ದುಬೈಯಿಂದ ವಾಪಸ್ ಬರಲಾಗದೆ ಸಿಕ್ಕಿಹಾಕಿಕೊಂಡಿದ್ದ ಭಾರತೀಯರು, ಅದರಲ್ಲೂ ಕನ್ನಡಿಗರು ಇದೀಗ ನಿರಾಳರಾಗಿದ್ದಾರೆ. ದುಬೈನಿಂದ (Dubai)  ಸೋಮವಾರ ರಾತ್ರಿ ಹೊರಟ ವಿಮಾನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIAB) ಸುರಕ್ಷಿತವಾಗಿ ಬಂದಿಳಿಯಿತು. MLC ಭೋಜೇಗೌಡ, ಬ್ಯಾಡಿಂಟ್ಮನ್ ತಾರೆ​​​ ಪಿವಿ ಸಿಂಧು ಸೇರಿ ಅನೇಕರು ಬೆಂಗಳೂರಿಗೆ ಆಗಮಿಸಿದರು.

ಈ ವೇಳೆ ಎಂಎಲ್‌ಸಿ ಭೋಜೇಗೌಡ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ‘ನಾನು ದಕ್ಷಿಣ ಆಫ್ರಿಕಾಕ್ಕೆ ಹೋಗಿದ್ದೆ. ಅಲ್ಲಿಂದ ದುಬೈ ಮೂಲಕ ಬೆಂಗಳೂರಿಗೆ ಬರುತ್ತಿದ್ದೆ. ಆದರೆ ದುಬೈನಲ್ಲಿ ಸಮಸ್ಯೆ ಉಂಟಾಗಿದೆ ಎಂಬುದು ಅಲ್ಲಿ ತಲುಪಿದ ಬಳಿಕವೇ ಗೊತ್ತಾಯಿತು. ಮೊದಲು ವಿಮಾನ ಹೊರಡುವುದರಲ್ಲಿ ವಿಳಂಬವಾಯಿತು. ಬಳಿಕ ವಿಮಾನ ರದ್ದುಪಡಿಸಲಾಗಿದೆ ಎಂಬ ಮಾಹಿತಿ ನೀಡಲಾಯಿತು. ದುಬೈ ವಿಮಾನ ನಿಲ್ದಾಣದಲ್ಲಿ ಜಾಗವೇ ಇಲ್ಲದಷ್ಟು ಜನಸಂದಣಿ ಇತ್ತು’ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ದೂರವಾಣಿ ಮೂಲಕ ಸಂಪರ್ಕಿಸಿ ಧೈರ್ಯ ನೀಡಿದರು. ನಮಗೆ ದುಬೈನಲ್ಲಿ ಹೋಟೆಲ್‌ನಲ್ಲಿ ವಾಸ್ತವ್ಯ ವ್ಯವಸ್ಥೆ ಮಾಡಿಕೊಟ್ಟರು. ಆದರೂ ಭದ್ರತೆಯ ಆತಂಕ ಕಾಡುತ್ತಲೇ ಇತ್ತು ಎಂದು ಭೋಜೇಗೌಡ ಹೇಳಿದರು.

ತಾಯ್ನಾಡಿಗೆ ಮರಳಿದವರು ಏನಂತಾರೆ? ವಿಡಿಯೋ ನೋಡಿ


ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಕರೆ ಮಾಡಿ ವಿಚಾರಿಸಿದರು. ಸಚಿವರಾದ ಕೃಷ್ಣ ಭೈರೇಗೌಡ ಮತ್ತು ಎಚ್.ಕೆ. ಪಾಟೀಲ್ ಕೂಡ ಸಂಪರ್ಕಿಸಿ ಪರಿಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡರು. ಕೃಷ್ಣ ಭೈರೇಗೌಡ ಜೊತೆ ಮಾತಾಡುವಾಗಲೇ ಬಾಂಬ್ ಸ್ಫೋಟದ ಶಬ್ದ ಕೇಳಿಬಂದಿತು ಎಂದು ಆತಂಕದ ಕ್ಷಣಗಳನ್ನು ಅವರು ನೆನಪಿಸಿಕೊಂಡರು.

ಬುರ್ಜ್ ಖಲೀಫಾ ಪಕ್ಕದಲ್ಲಿ ಬಾಂಬ್ ಬಿದ್ದಿದೆ ಎಂಬ ಮಾಹಿತಿ ಸಿಕ್ಕಿತು. ಆದರೆ ಅದು ಅಷ್ಟು ಪರಿಣಾಮಕಾರಿ ರೀತಿಯಲ್ಲಿ ಸ್ಫೋಟಗೊಂಡಿಲ್ಲ ಎಂದು ಬಳಿಕ ತಿಳಿದುಬಂತು ಎಂದು ಹೇಳಿದರು. ದುಬೈ ಸರ್ಕಾರ ನಮ್ಮ ನೆರವಿಗೆ ಬಂದು ಉತ್ತಮ ವ್ಯವಸ್ಥೆ ಮಾಡಿಕೊಟ್ಟಿತ್ತು. ದುಬೈ ಸೇರಿ ಹಲವೆಡೆ ಯುದ್ಧದ ವಾತಾವರಣ ಕಂಡುಬಂದಿತ್ತು. ನಾವು ಇಷ್ಟು ಬೇಗ ಸ್ವದೇಶಕ್ಕೆ ವಾಪಸ್ಸಾಗುತ್ತೇವೆಂದು ಊಹಿಸಿರಲಿಲ್ಲ ಎಂದು ಭೋಜೇಗೌಡ ಹೇಳಿದರು.

ಇದನ್ನೂ ಓದಿ: ದುಬೈನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ಸಿದ್ದರಾಮಯ್ಯ ಆಗ್ರಹ: ಪ್ರಧಾನಿ ಮೋದಿಗೆ ಬರೆದ 2 ಪುಟಗಳ ಪತ್ರದಲ್ಲಿರೋದೇನು?

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಕನ್ನಡಿಗರು, ಸುರಕ್ಷಿತವಾಗಿ ಮರಳಿದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ವ್ಯಾಪಾರ, ವೈಯಕ್ತಿಕ ಪ್ರವಾಸ ಅಥವಾ ಕೆಲಸದ ನಿಮಿತ್ತ ಅಬುಧಾಬಿಗೆ ತೆರಳಿದ್ದ ಹಲವರು ಅಲ್ಲಿ ಸಿಲುಕಿಕೊಂಡಿದ್ದರು. ದುಬೈ ಮತ್ತು ಅಬುಧಾಬಿಯಲ್ಲಿ ಯುದ್ಧದ ಭೀತಿಯು ಸಾಕಷ್ಟು ಜನರಲ್ಲಿ ಭಯ ಮೂಡಿಸಿತ್ತು.

ದುಬೈಗೆ ತೆರಳಿದ್ದ ವಿಮಾನ ವಾಪಸ್

ಸೋಮವಾರ ಮುಂಜಾನೆ 4.30ಕ್ಕೆ ದುಬೈಗೆ ತೆರಳಿದ್ದ‌‌ ವಿಮಾನ ಅರ್ಧದಿಂದಲೇ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದೆ. 113 ಪ್ರಯಾಣಿಕರನ್ನು ಹೊತ್ತು ತೆರಳಿದ್ದ ಎಮಿರೇಟ್ಸ್​ ವಿಮಾನ ಭಾರತದ ಗಡಿ ದಾಟುವಷ್ಟರಲ್ಲೇ ದುಬೈ ವಾಯುನೆಲೆ ಬಂದ್ ಮಾಡಲಾಗಿದೆ. ಹೀಗಾಗಿ ವಿಮಾನ ವಾಪಸ್ ಆಯಿತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:08 am, Tue, 3 March 26

Source link

ಬೆಂಗಳೂರಲ್ಲೇ ನಡೆಯಲಿದೆ ‘ಟಾಕ್ಸಿಕ್’ ಟ್ರೇಲರ್ ಲಾಂಚ್; ಆದರೆ, ಅಭಿಮಾನಿಗಳಿಗೆ ನಿರಾಸೆ – Kannada News | Toxic Trailer Launch: Yash Draws Global Media to Bengaluru, Fans Miss Out on Event

ರಾಕಿಂಗ್ ಸ್ಟಾರ್ ಯಶ್ (Yash) ಈಗ ಪ್ಯಾನ್ ಇಂಡಿಯಾ ಸ್ಟಾರ್. ಅವರು ‘ಟಾಕ್ಸಿಕ್’ ಆರಂಭಿಸುವಾಗಲೇ, ‘ನಾನು ಪರಭಾಷೆಗೆ ಹೋಗಲ್ಲ, ಅವರನ್ನೇ ಇಲ್ಲಿಗೆ ಕರೆಯುತ್ತೇನೆ’ ಎಂದು ಹೇಳಿದ್ದರು. ಈ ಮಾತನ್ನು ನಿಜ ಮಾಡಿದ್ದಾರೆ. ಈಗ ಟ್ರೇಲರ್ ಲಾಂಚ್ ಈವೆಂಟ್ ಬೆಂಗಳೂರಲ್ಲೇ ನಡೆಯುತ್ತಿದ್ದು, ದೇಶ-ವಿದೇಶದ ಪತ್ರಕರ್ತರು ಆಗಮಿಸುವ ನಿರೀಕ್ಷೆ ಇದೆ. ಆದರೆ, ಈ ವಿಷಯದಲ್ಲಿ ಅಭಿಮಾನಿಗಳಿಗೆ ನಿರಾಸೆ ಕಾದಿದೆ.

ರಾಕಿಂಗ್ ಸ್ಟಾರ್ ಯಶ್ ಅವರು ‘ಕೆಜಿಎಫ್ 2’ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮಿದರು.ಆ ಬಳಿಕ ಅವರು ಕೈಗೆತ್ತಿಕೊಂಡ ಚಿತ್ರ ಎಂದರೆ ‘ಟಾಕ್ಸಿಕ್’. ಈ ಚಿತ್ರಕ್ಕಾಗಿ ಫ್ಯಾನ್ಸ್ ಬರೋಬ್ಬರಿ ನಾಲ್ಕು ವರ್ಷ ಕಾದಿದ್ದಾರೆ. ಈ ಚಿತ್ರಕ್ಕೆ ಸರಿಯಾಗಿ ಪ್ರಚಾರ ಕೊಡಲಾಗುತ್ತಿಲ್ಲ ಎಂಬ ಬಗ್ಗೆ ಅಭಿಮಾನಿಗಳಿಗೆ ಬೇಸರ ಇದೆ. ಈಗ ಟ್ರೇಲರ್ ಲಾಂಚ್ ಮೂಲಕ ಜನರನ್ನು ಸೆಳೆದುಕೊಳ್ಳಲು ಯಶ್ ರೆಡಿ ಆಗಿದ್ದಾರೆ.

ಯಶ್ ಪ್ಲ್ಯಾನ್ ಪ್ರಕಾರ ಭಾನುವಾರ (ಫೆಬ್ರವರಿ 8) ಟ್ರೇಲರ್ ಲಾಂಚ್ ಈವೆಂಟ್ ಬೆಂಗಳೂರಲ್ಲೇ ನಡೆಯಲಿದೆ. ಕರ್ನಾಟಕದ ಪತ್ರಕರ್ತರ ಜೊತೆ ಬೇರೆ ಬೇರೆ ಭಾಷೆಯ ಪತ್ರಕರ್ತರು ಇದಕ್ಕೆ ಹಾಜರಿ ಹಾಕುವ ನಿರೀಕ್ಷೆ ಇದೆ. ಆದರೆ, ಈ ಈವೆಂಟ್ ಮಲ್ಟಿಪ್ಲೆಕ್ಸ್ ಒಂದರಲ್ಲಿ ನಡೆಯುತ್ತಿರುವುದರಿಂದ ಅಭಿಮಾನಿಗಳ ಪ್ರವೇಶಕ್ಕೆ ಅವಕಾಶ ಇಲ್ಲ. ಇದು ಫ್ಯಾನ್ಸ್ ಬೇಸರಕ್ಕೆ ಕಾರಣ ಆಗಿದೆ.

ಪರಭಾಷೆಯಲ್ಲಿ ಪ್ರೀ ರಿಲೀಸ್ ಈವೆಂಟ್ ಅನ್ನು ಓಪನ್ ಗ್ರೌಂಡ್ ಅಲ್ಲಿ ಮಾಡಲಾಗುತ್ತದೆ. ‘ಟಾಕ್ಸಿಕ್’ ಕೂಡ ಅದೇ ರೀತಿ ಮಾಡಬೇಕಿತ್ತು ಎಂಬುದು ಅಭಿಮಾಗಳ ಕೋರಿಕೆ. ಆದರೆ, ಬೆಂಗಳೂರಲ್ಲಿ ನಡೆದ ಆರ್​​ಸಿಬಿ ಈವೆಂಟ್ ಕಾಲ್ತುಳಿತದ ಬಳಿಕ ಯಾರೊಬ್ಬರೂ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸುವ ರಿಸ್ಕ್ ತೆಗೆದುಕೊಳ್ಳುತ್ತಿಲ್ಲ. ಒಂದೊಮ್ಮೆ ಈವೆಂಟ್ ಮಾಡಿ ಏನಾದರೂ ತೊಂದರೆ ಆದರೆ, ಆ ರಿಸ್ಕ್​​ನ ಇವರೇ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹೀಗಾಗಿ, ರಿಸ್ಕ್ ಬೇಡ ಎಂಬ ನಿರ್ಧಾರಕ್ಕೆ ಯಶ್ ಬಂದಂತೆ ಇದೆ.

ಇದನ್ನೂ ಓದಿ: ‘ಟಾಕ್ಸಿಕ್’ಗೆ ತಿರುಗೇಟು ಕೊಡಲು ಸರ್​​​ಪ್ರೈಸ್ ಶಾಕ್ ರೆಡಿ ಮಾಡಿದ ‘ಧುರಂಧರ್ 2’

ಗೀತು ಮೋಹನ್​ದಾಸ್ ಅವರು ‘ಟಾಕ್ಸಿಕ್’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಕೆವಿಎನ್ ಹಾಗೂ ಯಶ್ ಒಟ್ಟಾಗಿ ಸಿನಿಮಾ ನಿರ್ಮಿಸಿದ್ದಾರೆ. ಮಾರ್ಚ್ 19ರಂದು ಚಿತ್ರ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link